All posts by nagaraj11081993

IND vs NZ: ರೋ-ಕೊ ಕ್ರೇಜ್.. 480 ಸೆಕೆಂಡ್​ಗಳಲ್ಲಿ ಎಲ್ಲಾ ಟಿಕೆಟ್ಸ್ ಸೋಲ್ಡ್ ಔಟ್ – Kannada News | IND vs NZ ODI Series: Kohli Rohit Fever Sells Out Baroda Tickets in Minutes!

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 11 ರಂದು ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಜನವರಿ 11 ರಂದು ಬರೋಡಾದಲ್ಲಿ ನಡೆಯಲಿದೆ. ಈ ಸರಣಿಗಾಗಿ ಇನ್ನು ಟೀಂ ಇಂಡಿಯಾವನ್ನು ಪ್ರಕಟಿಸಿಲ್ಲ. ಆದಾಗ್ಯೂ ಈ ತಂಡದಲ್ಲಿ ಯಾರೆಲ್ಲ ಇರಬಹುದು ಎಂಬುದು ಈಗಾಗಲೇ ಖಚಿತವಾಗಿದೆ. ಹಾಗೆಯೇ ತಂಡದಲ್ಲಿ ಏನೆಲ್ಲ ಬದಲಾವಣೆಗಳಾದರೂ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಆಡುವುದಂತೂ ಖಚಿತ. ಹೀಗಾಗಿ ಇವರಿಬ್ಬರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇದಕ್ಕೆ ಪೂರಕವಾಗಿ ಇವರಿಬ್ಬರು ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಹೀಗಾಗಿ ಬರೋಡಾದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ಟಿಕೆಟ್​ಗಳು ಕ್ಷಣ ಮಾತ್ರದಲ್ಲಿ ಸೋಲ್ಡ್ ಔಟ್ ಆಗಿವೆ.

8 ನಿಮಿಷಗಳಲ್ಲಿ ಮಾರಾಟ

ಬರೋಡಾದಲ್ಲಿ ಸರಣಿಯ ಮೊದಲ ಪಂದ್ಯದ ಟಿಕೆಟ್‌ಗಳು ಕೇವಲ 8 ನಿಮಿಷಗಳಲ್ಲಿ ಮಾರಾಟವಾಗಿವೆ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಇವರಿಬ್ಬರು ಟಿ20 ಹಾಗೂ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಕಾರಣ ಏಕದಿನದಲ್ಲಿ ಮಾತ್ರ ಆಡುತ್ತಿದ್ದಾರೆ. 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಇವರಿಬ್ಬರ ಪಾಲಿನ ಕೊನೆಯ ಟೂರ್ನಿ ಆಗಿದೆ. ಹೀಗಾಗಿ ಇವರಿಬ್ಬರನ್ನು ಕ್ರೀಡಾಂಗಣದಲ್ಲಿ ಕೊನೆಯ ಬಾರಿಗೆ ನೋಡುವ ಅವಕಾಶವನ್ನು ಅಭಿಮಾನಿಗಳು ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಆದ್ದರಿಂದ ಏಕದಿನ ಪಂದ್ಯದ ಟಿಕೆಟ್​ಗಳು ಮಾರಾಟ ಶುರುವಾದ ಕೆಲವೇ ನಿಮಿಷಗಳಲ್ಲಿ ಬಿಕರಿಯಾಗುತ್ತಿವೆ.

ಟಿಕೆಟ್​ಗಳು ಈ ರೀತಿಯಾಗಿ ಸೋಲ್ಡ್ ಆಗಿರುವುದು ಇದೇ ಮೊದಲಲ್ಲ. ಈ ಹಿಂದೆ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿಯೂ ಇದೇ ನಡೆದಿತ್ತು. ಈಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಅದೇ ಮುಂದುವರೆದಿದೆ. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಶತಕ ಮತ್ತು ಮೂರನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಇತ್ತ ರೋಹಿತ್ ಶರ್ಮಾ ಅವರ ಬ್ಯಾಟ್ ಕೂಡ ಅಬ್ಬರಿಸಿತ್ತು. ಹೀಗಾಗಿ ಫಾರ್ಮ್​ನಲ್ಲಿರುವ ಇವರಿಬ್ಬರ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

IND vs NZ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಯಾವಾಗ?

ಭಾರತ- ನ್ಯೂಜಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 11 ರಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಬರೋಡಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 14 ರಂದು ರಾಜ್‌ಕೋಟ್‌ನಲ್ಲಿ ಮತ್ತು ಮೂರನೇ ಪಂದ್ಯ ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ ನಡೆಯಲಿದೆ. ಈ ಟೂರ್ನಿಗೆ ಶುಭಮನ್ ಗಿಲ್ ನೇತೃತ್ವದ ತಂಡವನ್ನು ಇನ್ನೇರಡು ದಿನಗಳಲ್ಲಿ ಪ್ರಕಟಿಸಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ – Kannada News | Bellary violence: One More gun bullet Found In janardhan reddy House

ಬಳ್ಳಾರಿ, ಜನವರಿ 02): ಹಿಂದೊಮ್ಮೆ ಗಣಿ ದೂಳಿನಿಂದಲೇ ಸುದ್ದಿಯಾಗಿದ್ದ ಬಳ್ಳಾರಿ, ಸದ್ಯ ರಕ್ತ ರಾಜಕೀಯಕ್ಕೆ ಸಾಕ್ಷಿಯಾಗಿದೆ.ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್ ಸಲುವಾಗಿ ಶಾಸಕರಾದ ಜನಾರ್ದನ ರೆಡ್ಡಿ ಹಾಗೂ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಕಲ್ಲು ತೂರಾಟ, ಖಾರದ ಪುಡಿ ಎರೆಚಾಟ, ದೊಣ್ಣೆಯಿಂದ ಬಡಿದಾಟ ಇಷ್ಟೇ ಅಲ್ಲ, ಗಾಳಿಯಲ್ಲಿ 12ಕ್ಕೂ ಹೆಚ್ಚು ಸುತ್ತು ಫೈರಿಂಗ್ ಮಾಡಲಾಗಿದೆ. ನಿನ್ನೆ (ಜನವರಿ 01) ರಾತ್ರಿ ಬಳ್ಳಾರಿಯ ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಉದ್ವಿಗ್ನಗೊಂಡಿತ್ತು ಅನ್ನೋದಕ್ಕೆ ಕೆಲ ದೃಶ್ಯಗಳೇ ಸಾಕ್ಷಿಯಾಗಿವೆ. ಇನ್ನು ಇದೇ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಆರಂಭದಲ್ಲಿ ಒಂದು ಬುಲೆಟ್ ಪತ್ತೆಯಾಗಿದ್ದು, ಇದೀಗ ಜನಾರ್ದನ ರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಫೆಬ್ರುವರಿ 1, ಭಾನುವಾರ; ಅಂದೇ ಕೇಂದ್ರ ಬಜೆಟ್ ಮಂಡನೆ ಆಗುತ್ತಾ? – Kannada News | No problem with Sunday, Union Budget 2026 27 to be presented on February 1st

ನವದೆಹಲಿ, ಜನವರಿ 2: ಕೇಂದ್ರ ಬಜೆಟ್ (Union Budget) ಮಂಡನೆಯ ದಿನ ಸಮೀಪಿಸುತ್ತಿದೆ. ಕೆಲ ವರ್ಷಗಳಿಂದ ಫೆಬ್ರುವರಿ 1ರಂದು ಬಜೆಟ್ ಮಂಡಿಸುವ ಪರಿಪಾಟ ಬೆಳೆದಿದೆ. ಈ ಬಾರಿ ಫೆಬ್ರುವರಿ 1 ಭಾನುವಾರ ಇದೆ. ಹೀಗಾಗಿ, ಬಜೆಟ್ ಮಂಡನೆಯ ದಿನವನ್ನು ಒಂದು ದಿನ ಮುಂದೂಡುವುದೋ ಅಥವಾ ಹಿಂದೂಡುವುದೋ ಆಗಬಹುದಾ ಎನ್ನುವ ಪ್ರಶ್ನೆ ಇದೆ. ಆದರೆ, ವರದಿ ಪ್ರಕಾರ, ಫೆಬ್ರುವರಿ 1ರಂದೇ ಬಜೆಟ್ ಮಂಡನೆ ಆಗುವ ಸಾಧ್ಯತೆ ಹೆಚ್ಚು.

ನಿರ್ಮಲಾ ಸೀತಾರಾಮನ್ ಅವರಿಗೆ ಇದು 9ನೇ ಬಜೆಟ್

ಫೆಬ್ರುವರಿ 1ರಂದು ಮಂಡನೆ ಆಗಲಿರುವುದು 2026-27ರ ಸಾಲಿನ ಬಜೆಟ್. ಇದು ಸ್ವತಂತ್ರ ಭಾರತದ 80ನೇ ವಾರ್ಷಿಕ ಬಜೆಟ್ ಕೂಡ ಹೌದು. ನಿರ್ಮಲಾ ಸೀತಾರಾಮನ್ ಅವರಿಗೆ ಇದು 9ನೇ ಬಜೆಟ್ ಮಂಡನೆ. ಅದೂ ಸತತವಾದ ಬಜೆಟ್. ಸತತ ಎಂಟು ಬಜೆಟ್ ಮಂಡಿಸಿ ಬರೆದ ದಾಖಲೆಯನ್ನು ತಾವೇ ಅಳಿಸಿಹಾಕಲಿದ್ದಾರೆ. 2019ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ನಿಧನರಾದ ಬಳಿಕ ಆ ಸ್ಥಾನವನ್ನು ನಿರ್ಮಲಾ ಅವರು ಸತತವಾಗಿ ನಿಭಾಯಿಸಿದ್ದಾರೆ. ಪ್ರಧಾನಿ ಮೋದಿ ಅವರ ವಿಶ್ವಾಸ ಉಳಿಸಿಕೊಂಡು ಬರಲು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್​ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದು?

ಮೊರಾರ್ಜಿ ದೇಸಾಯಿ 10 ಬಜೆಟ್ ಮಂಡನೆ

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಅತಿಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು 1959ರಿಂದ 1963ರವರೆಗೆ, ಹಾಗೂ 1967ರಿಂದ 1969ರವರೆಗೆ ಒಟ್ಟು ಹತ್ತು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಪಿ ಚಿದಂಬರಂ 9 ಬಜೆಟ್ ಮಂಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮುಂಬರುವ ಬಜೆಟ್ ಮಂಡಿಸಿದರೆ ಚಿದಂಬರಂ ಸಾಧನೆ ಸರಿಗಟ್ಟಲಿದ್ದಾರೆ. ಆದರೆ, ಮೊರಾರ್ಜಿ, ಪಿ ಚಿದಂಬರಂ ಸೇರಿ ಯಾರೂ ಕೂಡ ಸತತ ಎಂಟು ಬಾರಿ ಬಜೆಟ್ ಮಂಡಿಸಿದ್ದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:20 pm, Fri, 2 January 26

Source link

ರಾತ್ರಿ ಗಂಡನಿಲ್ಲದ ವೇಳೆ ಪ್ರೇಮಿಯನ್ನು ಮನೆಗೆ ಕರೆದು ಗುಪ್ತಾಂಗ ಕತ್ತರಿಸಿದ ಮಹಿಳೆ! – Kannada News | Married Woman Invites Lover Home On New Year Evening then She Cuts His Private Parts

ಮುಂಬೈ, ಜನವರಿ 2: ಹೊಸ ವರ್ಷದ ಹಿಂದಿನ ದಿನ ನ್ಯೂ ಇಯರ್ ಸೆಲಬ್ರೇಷನ್​​ಗೆ (New Year Celebration) ತನ್ನ ಪ್ರೇಮಿಯನ್ನು ಮನೆಗೆ ಆಹ್ವಾನಿಸಿದ ವಿವಾಹಿತ ಮಹಿಳೆ ಅವನ ಗುಪ್ತಾಂಗಗಳನ್ನು ಕತ್ತರಿಸಿದ್ದಾಳೆ. ಕೊಲೆಯ ಪ್ರಯತ್ನದ ಆರೋಪದ ಮೇಲೆ 25 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ತನ್ನ 45 ವರ್ಷದ ಪ್ರೇಮಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆತನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಆಕೆ ಆತನ ಗುಪ್ತಾಂಗವನ್ನು ಕಟ್ ಮಾಡಿದ್ದಾಳೆ.

ಸಾಂತಾಕ್ರೂಜ್ ಪೂರ್ವದ ಜಂಬ್ಲಿಪಾದದಲ್ಲಿರುವ ಆರೋಪಿಯ ನಿವಾಸದಲ್ಲಿ ನಿನ್ನೆ ಬೆಳಗಿನ ಜಾವ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಜೋಗಿಂದರ್ ಲಖನ್ ಮಹಾತೋ ​​ಎಂಬ ವ್ಯಕ್ತಿ ಕಾಂಚನ್ ರಾಕೇಶ್ ಮಹಾತೋ ​​ಎಂಬ ವಿವಾಹಿತ ಮಹಿಳೆಯ ಜೊತೆ ಸುಮಾರು 7 ವರ್ಷಗಳಿಂದ ಸಂಬಂಧದಲ್ಲಿದ್ದ. ಆಕೆ ಪದೇ ಪದೇ ತನ್ನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದರೂ ಜೋಗಿಂದರ್ ಅದಕ್ಕೆ ಒಪ್ಪಿರಲಿಲ್ಲ. ಆತನಿಗೂ ಮದುವೆಯಾಗಿ ಮಕ್ಕಳಿದ್ದರು. ಅವರಿಬ್ಬರಿಗೂ ಮಕ್ಕಳಿದ್ದರು. ಕಾಂಚನ್ ಜೋಗಿಂದರ್​​ಗೆ ಹೆಂಡತಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು.

ಇದನ್ನೂ ಓದಿ: ಮೈ ಮೇಲೆ ಕಕ್ಕ ಮಾಡಿದ್ದಕ್ಕೆ ತಾಯಿಯ ಪ್ರಿಯಕರನಿಂದ 3 ವರ್ಷದ ಮಗುವಿನ ಕೊಲೆ!

ಇದೇ ವಿಚಾರಕ್ಕೆ ಜಗಳವಾಗಿ ನವೆಂಬರ್ 2025ರಿಂದ ಆತ ಅವಳೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದ. ಆಕೆಯಿಂದ ದೂರವಾಗಲು ಆತ ತನ್ನ ಸ್ವಂತ ಊರಿಗೆ ಹೋಗಿದ್ದ. ಆದರೆ ಕಾಂಚನ್ ಅವನಿಗೆ ನಿರಂತರವಾಗಿ ಕರೆ ಮಾಡಿ ಮುಂಬೈಗೆ ವಾಪಾಸ್ ಬಂದು ತನ್ನನ್ನು ಮದುವೆಯಾಗುವಂತೆ ಬೆದರಿಕೆ ಹಾಕಿದ್ದಳು. ಇದರಿಂದ ಆತ ಡಿಸೆಂಬರ್ 19ರಂದು ಮುಂಬೈಗೆ ಹಿಂತಿರುಗಿದ್ದ. ಕೊನೆಗೆ ಆಕೆಯನ್ನು ಒಂದೆರಡು ಬಾರಿ ಭೇಟಿಯೂ ಆಗಿದ್ದ.

ಇದನ್ನೂ ಓದಿ: ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ: ಮರ್ಡರ್​​ ರಹಸ್ಯ ಬಿಚ್ಚಿಟ್ಟಿದ್ದು ಹೆತ್ತಮ್ಮ!

ಜನವರಿ 1ರಂದು ಬೆಳಗಿನ ಜಾವ 1.30ರ ಸುಮಾರಿಗೆ ಕಾಂಚನ್ ಆತನಿಗೆ ಫೋನ್ ಮಾಡಿ ಹೊಸ ವರ್ಷಕ್ಕೆ ಕೇಕ್, ಸ್ವೀಟ್ ತಂದಿರುವುದಾಗಿ ಹೇಳಿದ್ದಳು. ಅವನು ಬಂದಾಗ ಅವನ ಮೇಲೆ ಹರಿತವಾದ ಚಾಕುವಿನಿಂದ ಹಲ್ಲೆ ಮಾಡಿ ಕೋಪದಿಂದ ಅವನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆ 25 ವರ್ಷದ ಮಹಿಳೆಯನ್ನು ಜನವರಿ 1ರಂದು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಹಲ್ಲೆಗೆ ಒಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:28 pm, Fri, 2 January 26

Source link

Horoscope Today 03 January : ಇಂದು ಈ ರಾಶಿಗೆ ಆಕಸ್ಮಿಕವಾಗಿ ಸಿಕ್ಕ ಅವಕಾಶ ಸದುಪಯೋಗ ಮಾಡಿಕೊಳ್ಳುವ ಕಡೆಗೆ ಗಮನವಿರಲಿ – Kannada News | Horoscope Today in Kannada on 03 January Satursday; Dina Bhavishya Tithi Panchanga Details here

ಮೇಷ ರಾಶಿ:

ಕಲ್ಪನೆ ಮತ್ತು ವಾಸ್ತವದ ನಡುವೆ ಸಂಘರ್ಷ. ಸೃಜನಾತ್ಮಕ ಕೆಲಸದಲ್ಲಿ ಯಶಸ್ಸು. ಇಂದಿನ ನಿಮ್ಮ ವ್ಯವಹಾರವು ಹತ್ತಾರು ಗೊಂದಲಗಳಿಂದ ಇರಲಿದ್ದು ಮುಂದುವರಿದರೆ ನಷ್ಟವಾಗುವ ಭಯವೂ ಇರಲಿದೆ. ದ್ವಿಚಕ್ರ ಸವಾರರು ಬಹಳ ಎಚ್ಚರಿಕೆಯಿಂದ ಓಡಾಡಬೇಕು. ಅಧ್ಯಾತ್ಮದಲ್ಲಿ ಮನಸ್ಸನ್ನು ಇಡುವಿರಿ. ಇಂದು ನಿಮ್ಮ ಸಮಯವನ್ನು ಸ್ನೇಹಿತರ ಕಾರ್ಯಕ್ಕೆ ಕೊಡಬೇಕಾಗಿಬರಬಹುದು. ಅದ್ದರಿಂದ ನಿಮ್ಮ ಕೆಲಸವು ವಿಳಂಬವಾಗಬಹುದು. ಆಸೆಗಳನ್ನು ನೀವು ನಿಯಂತ್ರಣಕ್ಕೆ ತರಲು ಪ್ರಯತ್ನಿಸುವಿರಿ. ಸಂಗಾತಿಯ ನಡವಳಿಕೆಯನ್ನು ಊಹಿಸಲಾಗದು. ಕುಟುಂಬದ ಬೆಂಬಲದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಯಾರಿಂದಲೂ ಗೌರವ ಸಿಗಲಿಲ್ಲ ಎಂಬ ನೋವು ಕಾಣಿಸಿಕೊಳ್ಳುವುದು. ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಳ್ಳಲು ತಂತ್ರಗಳನ್ನು ಹೂಡಬಹುದು. ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ಸಿಗಲಿದೆ. ದೂರಪ್ರಯಾಣ ಮಾಡಲು ಇಂದು ಇಷ್ಟಪಡುವಿರಿ.

ವೃಷಭ ರಾಶಿ :

ಅನಿರೀಕ್ಷಿತ ಸಂಪರ್ಕದಿಂದ ಅವಕಾಶವೂ ಲಭ್ಯ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಸೂಚನೆ. ಆದರೆ ಭಾವನಾತ್ಮಕ ತೀರ್ಮಾನ ತಪ್ಪಿಸಿ. ವಿದ್ಯಾರ್ಥಿಗಳು ಸತತ ಶ್ರಮದಿಂದ ಇಂದು ಹಂತವನ್ನು ತಲುಪುವರು. ನಿಮ್ಮ ನೋವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಕೃಷಿಯಿಂದ ಲಾಭ ಗಳಿಸಲು ತಜ್ಞರ ಸಲಹೆ ಸಿಗಲಿದೆ. ಶತ್ರುಗಳ ಚಲನವಲನಗಳ‌ ಮೇಲೆ‌ ಕಣ್ಣಿಡುವಿರಿ. ಅಕಾಸ್ಮಾತ್ತಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ಕಡೆಗೆ ಗಮನವಿರಲಿ.‌ ಕುಟುಂಬದಲ್ಲಿ ನಿಮ್ಮಿಂದ ಸಂತೋಷವನ್ನು ಇರುವುದು. ಬಂಧುಗಳ ಪ್ರೀತಿಯೂ ಸಿಗುವುದು. ಅತಿಥಿ ಸತ್ಕಾರವನ್ನು ಮಾಡಲು ಉತ್ಸುಕತೆ ಇರುವುದು. ನಿಮ್ಮ ಚಿಂತೆಯನ್ನು ನೀವು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸುಮ್ಮನೇ ಸೃಷ್ಟಿಸಿಕೊಳ್ಳುವಿರಿ. ನಿಮ್ಮ ವಿರುದ್ಧ ಯಾರಾದರೂ ಅನಿರೀಕ್ಷಿತವಾಗಿ ಮಾತನಾಡಬಹುದು.

ಮಿಥುನ ರಾಶಿ :

ಶ್ರಮಕ್ಕೆ ಫಲ ಸಿಗುವ ದಿನ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಬಹುದು. ವಿದ್ಯಾರ್ಥಿಗಳಿಗೆ ಮಾನಸಿಕವಾದ ಭಯವನ್ನು ತೆಗೆದರೆ ಮುನ್ನಡೆಗೆ ಅವಕಾಶವಿದೆ. ವೃತ್ತಿಯಲ್ಲಿ ಹಿತಶತ್ರುಗಳ ಕಾಟದಿಂದ ಸಿಗಬೇಕಾದ ಸ್ಥಾನಕ್ಕೆ ತೊಂದರೆಯಾಗಬಹುದು. ಸರಳವಾದ ಕಾರ್ಯವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಒಟ್ಟಿಗೇ ಬರುವ ಕೆಲಸದಿಂದ ನೀವು ಉದ್ವೇಗಕ್ಕೆ ಬೀಳುವಿರಿ. ಔದಾರ್ಯ ಗುಣವು ದುರುಪಯೋಗವಾಗಬಹುದು. ಸಾಲದಿಂದ ಬಿಡುಗಡೆ ಸಿಕ್ಕಿ ಮನಸ್ಸು ನಿರಾಳವಾಗಲಿದೆ. ಹಿರಿಯರ ಶುಶ್ರೂಷೆಗೆ ಅವಕಾಶ ಸಿಗುವುದು. ಸಂಪೂರ್ಣ ಮಾಹಿತಿಯನ್ನು ಪಡೆದು ಮುಂದಡಿ ಇಡುವುದು ಸೂಕ್ತ. ಹೊಸ ಉದ್ಯೋಗವನ್ನು ಆರಂಭಿಸುವತ್ತ ನಿಮ್ಮ ಆಲೋಚನೆಯು ಗಾಢವಾಗಿ ಇರುವುದು. ಹಿರಿಯರ ಮಾರ್ಗದರ್ಶನ ಲಾಭಕರ. ದೈಹಿಕ ಆಯಾಸ ಸಾಧ್ಯ. ಮಕ್ಕಳಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತವು ಕಂಡು ಉದ್ವಿಗ್ನವಗಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ. ಆಲಸ್ಯದ ಕಾರಣ ಎಲ್ಲರಿಂದ ದೂರುಬರಬಹುದು. ವಿವಾದದಿಂದ ನೀವೇ ಹಿಂದಕ್ಕೆ ಸರಿಯುವಿರಿ.

ಕರ್ಕಾಟಕ ರಾಶಿ :

ಧಾರ್ಮಿಕ ಅಥವಾ ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವೆಚ್ಚದ ಮೇಲೆ ನಿಯಂತ್ರಣ ಇರಲಿ. ದಾಂಪತ್ಯದ ಮೇಲೆ‌ ದುಷ್ಟರ ದೃಷ್ಟಿಯು ಬೀಳಬಹುದು. ನಿಮ್ಮ ನಡೆ-ನುಡಿಗಳು ಆದಷ್ಟು ಸರಳವಾಗಿ ಇರಲಿ. ಮಿತಿಮೀರಿದ ಆಹಾರಸೇವನೆಯಿಂದ ನಿಮಗೆ ಕಷ್ಟವಾದೀತು. ಮಕ್ಕಳ ಬಗೆಗೆ ನಂಬಿಕೆ ಕಡಿಮೆಯಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಸಂಭ್ರಮದಲ್ಲಿ ಪಾಲ್ಗೊಳ್ಳುವಿರಿ. ಯಾರದೋ ಮಾತಿನಿಂದ ನಿಮಗೆ ಸಂಕಟವಾಗುವುದು. ಆಪ್ತರನ್ನು ಸತ್ಕಾರಕ್ಕಾಗಿ ಮನೆಗೆ ಆಹ್ವಾನಿಸುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಯಲ್ಲಿ‌ ಮಗ್ನರಾಗುವಿರಿ. ತುರ್ತು ಕಾರ್ಯಕ್ಕಾಗಿ ಅವಸರವಸರವಾಗಿ ಪ್ರಯಾಣ ಮಾಡಬೇಕಾಗಬಹುದು. ಹೊಸ ಕಲಿಕೆ, ಹೊಸ ಚಿಂತನೆಗಳಿಗೆ ದಿನ ಅನುಕೂಲ. ಮಾನಸಿಕವಾಗಿ ನೀವು ಬಲಗೊಳ್ಳುವ ಅವಶ್ಯಕತೆ ಇದೆ. ಕಲಾಕೌಶಲವನ್ನು ಮೆರೆಯಬಹುದು. ಸಂಗಾತಿಯ ಮಾತು ನಿಮಗೆ ತಾಳ್ಮೆಯನ್ನು ಕಡಿಮೆ‌ ಮಾಡೀತು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ‌ ಮಾಡಿ.

ಸಿಂಹ ರಾಶಿ :

ರಹಸ್ಯ ವಿಷಯಗಳು ಬಹಿರಂಗವಾಗುವ ಸಾಧ್ಯತೆ. ಶತ್ರುಗಳ ಚಟುವಟಿಕೆ ಅರಿವಿಗೆ ಬರುತ್ತದೆ. ನಿಮ್ಮ ಉದ್ಯೋಗವನ್ನು ಇನ್ನೊಬ್ಬರ ಜೊತೆ‌ ತುಲನೆ‌ ಮಾಡಿಕೊಳ್ಳು. ಅನಿರೀಕ್ಷಿತವಾಗಿ ಸಿಕ್ಕ ಬಂಧುಗಳನ್ನು ಮನೆಗೆ ಆಮಂತ್ರಿಸುವಿರಿ. ಪ್ರೀತಿಯಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿರುಪಯುಕ್ತ ವಸ್ತುಗಳನ್ನು ದಾನರೂಪವಾಗಿ ಕೊಡುವಿರಿ. ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಅಧಿಕಾರಿಗಳಿಂದ ಹೇಳಿಸಿಕೊಳ್ಳುವಿರಿ. ಇಂದು ಸ್ತ್ರೀಯರು ಅಲಂಕಾರಲ್ಲಿ ಹೆಚ್ಚು ತೊಡಗಿಕೊಳ್ಳುವರು. ಮಾಡಿದ ತಪ್ಪಿನಿಂದ ಪಶ್ಚಾತ್ತಾಪ ಪಡುವಿರಿ. ಎಷ್ಟೇ ಪ್ರಯತ್ನಿಸಿದರೂ ಕೊಟ್ಟ ಹಣವು ನಿಮಗೆ ಸಿಗದು. ಅದರ ಆಸೆಯನ್ನು ಬಿಡುವಿರಿ. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗುವುದು. ಮಕ್ಕಳ ವಿವಾಹಕ್ಕೆ ಅತಿಯಾದ ಪ್ರಯತ್ನದಿಂದ‌ ಫಲವನ್ನು ಕಾಣುವಿರಿ. ಧೈರ್ಯದಿಂದ ನಡೆದುಕೊಂಡರೆ ಜಯ ನಿಮ್ಮದು. ಉದ್ಯೋಗದ ಅನುಭವವನ್ನು ಸರಿಯಾಗಿ ಪಡೆಯಿರಿ. ನೀವು ಹಾಕಿಕೊಂಡ ಗುರಿಯನ್ನು ಯಾರಾದರೂ ತಪ್ಪಿಸಬಹುದು.

ಕನ್ಯಾ ರಾಶಿ :

ಸಂಬಂಧಗಳಲ್ಲಿ ಸಮತೋಲನ ಅಗತ್ಯ. ಪ್ರೇಮ ಅಥವಾ ದಾಂಪತ್ಯದಲ್ಲಿ ಮಾತುಕತೆ ಮುಖ್ಯ. ಸಂಗಾತಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಇರುವಿರಿ. ಉದ್ಯೋಗದ ವಿಚಾರವನ್ನು ಬಹಳ ಗೌಪ್ಯವಾಗಿ ಇಡುವಿರಿ. ಸಾಮರ್ಥ್ಯದ ಪರೀಕ್ಷೆಯಲ್ಲಿ ಸಲ್ಲದ ಮಾತನ್ನು ಹಿರಿಯರಿಗೆ ಹೇಳುವಿರಿ. ಪ್ರೀತಿಯಿಂದ ಮನಸ್ಸು ಕುರುಡಾಗುವುದು. ಅಹಂಕಾರವು ನಿಮ್ಮನ್ನು ಕೆಳಗೆ ದೂಡಬಹುದು. ಸರಳತೆಯನ್ನು ರೂಢಿಸಿಕೊಳ್ಳುವ ಬಗ್ಗೆ ಆಲೋಚನೆ ಇರಲಿ. ಅನಗತ್ಯಗಳ ಅಪೇಕ್ಷೆಯಿಂದ ಸಂಗಾತಿಯ ಸಂಪತ್ತನ್ನು ಖಾಲಿ‌ಮಾಡುವಿರಿ. ನಿಮ್ಮ ಮನಸ್ಸು ಕಾರ್ಯದಲ್ಲಿ ಮಗ್ನವಾಗಿ ಇರದು. ಹಣದ ವಿಚಾರದಲ್ಲಿ ತೀರ್ಮಾನ ಮುಂದೂಡುವುದು ಒಳಿತು. ತಂದೆಯ ಮಾತು ನಿಮಗೆ ಕಿರಿಕಿರಿ ಎನಿಸಬಹುದು. ನಿಮ್ಮ ಆದಾಯದ ಮೂಲವಾದ ವ್ಯಾಪಾರದಲ್ಲಿ ಲಾಭವಿರುವುದು. ಬಹಳ ದಿಗಳಿಂದ ಅನುಭವಿಸುತ್ತಿರುವ ರೋಗಕ್ಕೆ ಔಷಧವು ಸಿಗುವುದು. ನಿಮ್ಮ ಎಲ್ಲ‌ ಕಾರ್ಯಕ್ಕೂ ಯಶಸ್ಸು ಬೇಕು ಎಂಬ ಹಂಬಲ ಬೇಡ.

ತುಲಾ ರಾಶಿ :

ಸೂಕ್ಷ್ಮ ವಿಚಾರಗಳಲ್ಲಿ ಜಯ. ಲೆಕ್ಕಾಚಾರ, ದಾಖಲೆ ಕೆಲಸಗಳಲ್ಲಿ ಯಶಸ್ಸು. ಮಿತ್ರರ ಸಹಾಯಕ್ಕೆ ಇಂದು ಕಿರು ಪ್ರಯಾಣ ಮಾಡುವಿರಿ. ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ವಂಚಿಸುವ ಸಾಧ್ಯತೆ ಇದೆ.‌ ನಿಮ್ಮ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಹಾಗೂ ಓದಿನ ಕಡೆ ಗಮನವು ಇಲ್ಲದಿರುವುದು ಪಾಲಕರಿಗೆ ಗೊತ್ತಾಗಿ ಬೇಸರವಾಗಬಹುದು. ಯಾವುದೇ ಉದ್ಯಮಕ್ಕೂ ಕಾನೂನಿನ ವಿಷಯದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆದು ಮುಂದುವರಿಯಿರಿ. ಪರದೇಶ ವಾಸದಿಂದ ಉದ್ಯಮಕ್ಕೆ ಪೆಟ್ಟು. ಸ್ಪರ್ಧೆಯಲ್ಲಿ ಸೋಲಾಗುವ ಸಾಧ್ಯತೆ ಇದೆ. ಮಹಿಳೆಯರು ಸ್ವ ಉದ್ಯಮದಿಂದ ಲಾಭವನ್ನು ಮಾಡಿಕೊಳ್ಳುವರು. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಸಣ್ಣ ಪ್ರಯಾಣದಿಂದ ಲಾಭ. ಆಪ್ತರ ಸಹಾಯದಿಂದ ನಿಮಗೆ ಉದ್ಯೋಗವು ಸಿಗಲಿದೆ. ಭವಿಷ್ಯದ ಯೋಜನೆಯನ್ನು ಸರಿಯಾಗಿ ತೀರ್ಮಾನಿಸಿಕೊಳ್ಳಲಾರಿರಿ. ಮಕ್ಕಳ ವಿವಾಹಕ್ಕಾಗಿ ಓಡಾಟ ಮಾಡಬೇಕಾಗುವುದು. ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳನ್ನು ಸರಿಯಾಗಿರಿಸಿ.

ವೃಶ್ಚಿಕ ರಾಶಿ :

ಇಂದು ಕೋಪ ನಿಯಂತ್ರಿಸಬೇಕು. ಗೌರವ ಹೆಚ್ಚಿದರೂ ಒಂಟಿತನದ ಭಾವನೆ ಬರಬಹುದು. ಸ್ವಾಭಿಮಾನ ಹಾಗೂ ನಾಯಕತ್ವ ಹೊರಹೊಮ್ಮುವ ದಿನ. ಕೆಲಸದಲ್ಲಿ ನಿಮ್ಮ ಮಾತಿಗೆ ಮೌಲ್ಯ. ಯಾವುದನ್ನೇ ಆದರೂ ಕೇಳಿ‌ ಪಡೆದುದ್ದಕ್ಕೆ ಮೌಲ್ಯ ಅಷ್ಟೇ. ಕೊಟ್ಟ ಗೌರವ ನಿಮಗೆ ಸಾಲದು. ಮಕ್ಕಳಿಗಾಗಿ ಪಟ್ಟಶ್ರಮವು ಇಂದು ಸಾರ್ಥಕ ಎನಿಸುವುದು. ಇಂದು ಹಣದ ಬಗ್ಗೆ ನಿಮಗೆ ಲೆಕ್ಕವೇ ಸಿಗದೇ ಖರ್ಚಾಗುವುದು. ಆಪ್ತರಿಗೆ ಕೊಟ್ಟ ಹಣವು ಮರಳಿ ಬಾರದೇ ಇರಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಹಣವನ್ನು ಹೊಂದಿಸುವಿರಿ. ನಿಮ್ಮ ಬಗ್ಗೆ ಮಾತನಾಡುವವರಿಗೆ ಈಗಲೇ ಉತ್ತರ ಕೊಡುವುದು ಬೇಡ. ನಿಮ್ಮ ಒರಟು ಸ್ವಭಾವವು ಇಷ್ಟವಾಗದೇ ಹೋಗಬಹುದು. ಸುಮ್ಮನೇ ಒಂಟಿಯಾಗಿ ಇದ್ದು ಹತ್ತಾರು ಯೋಚನೆಗಳು ಬರಬಹುದು. ಬಂಧುಗಳಿಂದ‌ ಉಡುಗೊರೆ ಸಿಗಲಿದೆ. ನಿಮ್ಮ ಮಾತಿನ‌ ಮೇಲೆ ನಂಬಿಕೆಯು ಕಷ್ಟವಾದೀತು. ಅಪಘಾತ ಭೀತಿಯು ಕಾಡಬಹುದು. ಕಲಾವಿದರು ಅವಕಾಶವನ್ನು ಹೆಚ್ಚು ಪಡೆಯಬಹುದು. ಹೊಸ ವಸ್ತುಗಳ ಬಗ್ಗೆ ಅಸೆ ಬರುವುದು. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.

ಧನು ರಾಶಿ:

ಮನಸ್ಸಿನಲ್ಲಿ ಗೊಂದಲ ಇದ್ದರೂ ದಿನಾಂತ್ಯಕ್ಕೆ ಸ್ಪಷ್ಟತೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಸಿಗುವ ನೆಮ್ಮದಿಯನ್ನು ಬಿಟ್ಟು ಮತ್ತೆಲ್ಲೋ ಹೋಗಿ ಹಣ ಸಮಯ ಎಲ್ಕವನ್ನೂ ಹಾಳುಮಾಡಿಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಬೆಂಬಲಿಗರನ್ನು ಕಳೆದುಕೊಳ್ಳಬಹುದು. ನೀವಾಡುವ ಸುಳ್ಳು ಎಲ್ಲರಿಗೂ ಗೊತ್ತಾದೀತು. ನಿದ್ರೆಯಿಂದ ಆಲಸ್ಯವು ಹೆಚ್ಚಾಗುವುದು. ಹಣಕಾಸಿನ ವ್ಯವಹಾರದಲ್ಲಿ ಮಿತ್ರರ ಜೊತೆ ಕಲಹವಾಗಬಹುದು. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವಿರಿ. ಸ್ತ್ರೀಯರಿಗೆ ಇಂದು ಸಂತೋಷದ ದಿನ. ಎಲ್ಲರೆದುರೂ ಸಿಟ್ಟಿನಿಂದ ಕೂಗಾಡುವುದು ಬೇಡ.‌ ಪೋಷಕರು ವಿದ್ಯಾಭ್ಯಾಸದ ಪ್ರಗತಿಯನ್ನು ಪರಿಶೀಲಿಸುವುದು ಅವಶ್ಯ. ಆಸ್ತಿ ಅಥವಾ ಮನೆ ಸಂಬಂಧಿತ ವಿಚಾರ ಚರ್ಚೆಗೆ ಬರಬಹುದು. ನಿಮ್ಮ ವಸ್ತುವಿನ ಮೇಲೆ‌ ವ್ಯಾಮೋಹವು ಅಧಿಕವಾಗಬಹುದು. ಚಿತ್ತವು ಚಾಂಚಲ್ಯದಿಂದ ಇರುವುದು. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ಆರ್ಥಿಕ ವ್ಯವಹಾರವನ್ನು ಬಿಟ್ಟುಕೊಡುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ದೊಡ್ಡ ಪ್ರಯತ್ನ ನಡೆಯುವುದು.

ಮಕರ ರಾಶಿ:

ಮಾತಿನ ಮೂಲಕ ಅವಕಾಶಗಳು ಸಿಗುವ ದಿನ. ಕೆಲಸದಲ್ಲಿ ಚುರುಕು ಹೆಚ್ಚುತ್ತದೆ. ಸಮಯವನ್ನು ಪ್ರೀತಿಗಾಗಿ ತ್ಯಾಗ‌ಮಾಡಬೇಕಾದೀತು. ದುರಸ್ತಿ ಕಾರ್ಯವನ್ನು ಮಾಡುವವರಿಗೆ ಈ ದಿನ ಒತ್ತಡವಿರುವುದು. ಕೆಲಸಗಳು ಪೂರ್ಣವಾಗದೇ ಇರುವುದು ನಿಮಗೆ ಆಂತಕವಾಗಬಹುದು. ವ್ಯಕ್ತಿಗತ ಅಭಿಪ್ರಾಯವನ್ನು ಒಪ್ಪಲಾರಿರಿ. ಜವಾಬ್ದಾರಿಯ ಕೆಲಸವನ್ನು ಜಾಗರೂಕತೆಯಿಂದ ಮಾಡಿ. ದಾಂಪತ್ಯದ ಕಲಹವು ಮುಕ್ತಾಯವಾಗುವುದು. ಹೊಸ ಕೆಲಸಗಳನ್ನು ನಿರ್ವಹಿಸಲು ಧೈರ್ಯ ಸಾಲದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ‌ಫಲಿತಾಂಶವನ್ನು ಪಡೆಯುವರು. ಆಕಸ್ಮಿಕ ಧನಲಾಭದಿಂದ ನಿಮಗೆ ಖುಷಿಯಾಗುವುದು. ಆದಾಯದ ಬಗ್ಗೆ ಒಳ್ಳೆಯ ಸುದ್ದಿ ಸಿಗಬಹುದು. ಆದರೆ ಅತಿಯಾದ ನಂಬಿಕೆ ಹಾನಿಕಾರಕ. ನಿಮ್ಮವರ ಧನ ಸಹಾಯವನ್ನು ಕೇಳಲು ಮುಜುಗರವಾದೀತು. ಅನ್ಯ ಚಿಂತೆಯಿಂದ ನಿದ್ರೆಗೆ ಭಂಗ. ಅನವಶ್ಯಕ ಮಾತುಗಳಿಂದ ವಿವಾದವಾಗುವುದು. ಮಕ್ಕಳ‌ ಪ್ರಗತಿಯಿಂದ ಸಂತಸ. ಉದ್ಯೋಗದಲ್ಲಿ ಅಧಿಕ ವೇತನದ ನಿರೀಕ್ಷೆ ಇರುವುದು.

ಕುಂಭ ರಾಶಿ:

ಹಳೆಯ ಸಮಸ್ಯೆಗೆ ಹೊಸ ಪರಿಹಾರ ಕಂಡುಬರುವುದು. ಸ್ನೇಹಿತರ ಸಹಕಾರ ಲಾಭಕರ. ಒತ್ತಾಯದ ಮೇರೆಗೆ ಇಂದು ಅನವಶ್ಯಕ‌ವಾದ ಪ್ರಯಾಣವಾಗುವುದು. ಇನ್ನೊಬ್ಬರಿಗೆ ಹೇಳುವಾಗ ನೀವು ಅದನ್ನು ಆಚರಿಸಬೇಕಾಗಬಹುದು. ಪುಣ್ಯಸ್ಥಳಗಳ ಭೇಟಿಯಿಂದ ಖುಷಿಯಾಗುವುದು. ಸಾಹಿತ್ಯ ಆಸಕ್ತರಿಗೆ ಉತ್ತಮ ಅವಕಾಶಗಳು ಸಿಗುವುದು. ಸ್ವಂತ ವಾಹನದ ದುರಸ್ತಿಯಿಂದ ಧನ ನಷ್ಟ. ನಿಮ್ಮ ಸಲಹೆಯನ್ನು ಕೇಳದಿರುವುದು ಇಷ್ಟವಾಗದು. ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದರೂ ಅವಶ್ಯಕ ವೆಚ್ಚವಾಗಿರುತ್ತದೆ. ಆರೋಗ್ಯದಲ್ಲಿ ಲಘು ಆಯಾಸ. ನೌಕರರು ನಿಮ್ಮ ಮೇಲೆ‌ ಸಿಟ್ಟಾಗಬಹುದು. ಸೌಕರ್ಯಕ್ಕೆ ತಕ್ಕ ಹಾಗೆ ದಿನಚರಿಯನ್ನು ಬದಲಿಸಿ. ಪ್ರಭಾವೀ ವ್ಯಕ್ತಿಗಳಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಇಂದು ನಿಮ್ಮ ಸಂಗಾತಿಯಿಂದ ಭವಿಷ್ಯಕ್ಕೆ ಸಲಹೆಯು ಸಿಗಬಹುದು.‌ ನಿಮ್ಮ ಮನೆ ನಿರ್ಮಾಣದ ಕೆಲಸವು ಅರ್ಧಕ್ಕೆ ನಿಲ್ಲಬಹುದು. ಸಾಮಾಜಿಕ ಕಾರ್ಯದಲ್ಲಿ ಉತ್ಸಾಹದಿಂದ ಇರುವಿರಿ. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು.

ಮೀನ ರಾಶಿ:

ಆತುರದ ನಿರ್ಧಾರದಿಂದ ತಪ್ಪು ಸಂಭವಿಸಬಹುದು. ಕೆಲಸದಲ್ಲಿ ಶ್ರಮ ಹೆಚ್ಚಾದರೂ ಫಲ ಸ್ವಲ್ಪ ತಡ. ಸ್ನೇಹಿತರ ಜೊತೆ ಪಾಲುದಾರಿಕೆಯಲ್ಲಿ ಸೇರಿಕೊಳ್ಳುವಿರಿ. ನಿಮ್ಮ ಕಾರ್ಯವನ್ನು ಮಿತ್ರರ ಮೂಲಕ ಮಾಡಿಕೊಳ್ಳುವಿರಿ. ನಿರ್ದಿಷ್ಟ ಸಮಯಕ್ಕೆ ಆಗುವ ಕೆಲಸವು ಸಮಯದ ಮಿತಿಯನ್ನು ಮೀರಬಹುದು. ಅಪರಿತ ಕರೆಗಳಿಂದ ನಿಮಗೆ ಸಂಕಟವಾಗಬಹುದು. ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಉತ್ಸಾಹವೇ ಇರದು. ಶತ್ರುಗಳ ಭಯವು ಕಾರ್ಯವನ್ನು ನಿಧಾನ ಮಾಡಿಸುವುದು. ನಿಮ್ಮ ಒತ್ತಡಗಳನ್ನು ಮರೆತು ನಿಶ್ಚಿಂತೆಯಿಂದ ದಿನವನ್ನು ಕಳೆಯುವಿರಿ. ಕುಟುಂಬದ ಮಾತುಗಳಿಗೆ ಮೌಲ್ಯ ಕೊಟ್ಟರೆ ಮನಃಶಾಂತಿ. ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ನಿಮ್ಮ ನೌಕರರಿಂದ ಇಂದಿನ‌ ಕೆಲವು ಜವಾಬ್ದಾರಿಯನ್ನು ಕೊಡುವಿರಿ. ಸಂಗಾತಿಯು ಕಡೆಗಣನೆಗೆ ನಿಮ್ಮ ಮೇಲೆ ಬೇಸರವಾಗಬಹುದು. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು. ವಿದ್ಯಾಭ್ಯಾಸದಲ್ಲಿ ಪ್ರಗತಿಯ ಕಷ್ಟವಾಗಬಹುದು.

ಜನವರಿ 03,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ ನಿತ್ಯನಕ್ಷತ್ರ : ಮೃಹಶಿರಾ ಯೋಗ : ಪ್ರೀತಿ, ಕರಣ : ವಣಿಜ, ಸೂರ್ಯೋದಯ – 06 – 50 am, ಸೂರ್ಯಾಸ್ತ – 06 – 07 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09-40 – 11:04, ಯಮಗಂಡ ಕಾಲ 13:53 – 15:18, ಗುಳಿಕ ಕಾಲ 06:61 – 08:15

-ಲೋಹಿತ ಹೆಬ್ಬಾರ್ – 8762924271 (what’s app only)

Source link

T20 World Cup 2026: ಟಿ20 ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ – Kannada News | 2026 T20 World Cup: South Africa Squad Announced, Markram Captain, Key Players Dropped

ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡ: ಏಡೆನ್ ಮಾರ್ಕ್ರಾಮ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜಾರ್ಗಿ, ಡೊನೊವನ್ ಫೆರೇರಾ, ಮಾರ್ಕೊ ಯಾನ್ಸನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಕ್ವೆನಾ ಎಂಫಾಕಾ, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನೊಕಿಯಾ, ಕಗಿಸೊ ರಬಾಡ.

Source link

ಸುಸ್ತಾಗುತ್ತೆ ಎಂದು ಮಲ್ಟಿವಿಟಮಿನ್‌ ಸೇವನೆ ಮಾಡುತ್ತೀರಾ? ಹಾಗಿದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ

ಆರೋಗ್ಯದ ಹಾಳಾಗದಂತೆ ಕಾಳಜಿ ವಹಿಸುವುದು ಎಂದರೆ ಕೇವಲ ಔಷಧಿಗಳನ್ನು ತೆಗೆದುಕೊಳ್ಳುವುದು ಎಂದಲ್ಲ, ಬದಲಾಗಿ ನಮ್ಮ ದೇಹಕ್ಕೆ ಏನು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು. ಅದರಲ್ಲಿಯೂ ವಿಟಮಿನ್ ಮಾತ್ರೆಗಳ ಅತಿಯಾದ ಬಳಕೆ ಪ್ರಯೋಜನಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡಬಹುದು ಎಂದು ವೈದ್ಯರು ಹೇಳುತ್ತಾರೆ. ಅಷ್ಟೇ ಅಲ್ಲ, ಆಧುನಿಕ ಜೀವನಶೈಲಿಯಲ್ಲಿ ನಿದ್ರೆ (Sleep) ಮತ್ತು ದಂತದ ಆರೋಗ್ಯದ ಬಗ್ಗೆ ಹೆಚ್ಚಿನವರು ನಿರ್ಲಕ್ಷಿಸುತ್ತಾರೆ. ನಿದ್ರೆ ಸರಿಯಾಗಿ ಆಗದಿದ್ದರೆ ಆಯಾಸವಾಗುವುದು ಸಾಮಾನ್ಯ. ಅದರಲ್ಲಿಯೂ ವಿದ್ಯಾರ್ಥಿಗಳಲ್ಲಿ ಈ ರೀತಿ ಸಮಸ್ಯೆಯನ್ನು ಹೆಚ್ಚಾಗಿ ಕಂಡುಬರುತ್ತದೆ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು, ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಕೆಲವು ಸಿಂಪಲ್ ಸಲಹೆಗಳನ್ನು ಪಾಲಿಸುವುದು ಬಹಳ ಒಳ್ಳೆಯದು.

ಅನೇಕರು ಆಯಾಸವನ್ನು ಕಡಿಮೆ ಮಾಡಲು ಮಲ್ಟಿವಿಟಮಿನ್ ಮಾತ್ರೆಗಳ ಸೇವನೆ ಮಾಡುತ್ತಾರೆ. ಆದರೆ ಆಯಾಸ ರೋಗವಲ್ಲ; ಇದು ಕೇವಲ ಒಂದು ಲಕ್ಷಣ ಅಷ್ಟೇ ಎಂಬುದನ್ನು ನೆನೆಪಿನಲ್ಲಿಡಿ. ನಿದ್ರೆಯ ಕೊರತೆ, ಅಸಮರ್ಪಕ ವ್ಯಾಯಾಮ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು ಆಯಾಸಕ್ಕೆ ಕಾರಣವಾಗಬಹುದು. ದೇಹದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ, ಡಿ, ಇ ಮತ್ತು ಕೆ ಹಾನಿಕಾರಕವಾಗಬಹುದು. ಆರೋಗ್ಯವಂತ ವ್ಯಕ್ತಿಗಳು ಈ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಪ್ರಯೋಜನ ಸಿಗುವುದಿಲ್ಲ, ಜೀವಸತ್ವಗಳ ಕೊರತೆಯಿದ್ದು ವೈದ್ಯರ ಸಲಹೆಯಾನುಸಾರ ಮಾತ್ರ ವಿಟಮಿನ್‌ಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಹಗಲಿನಲ್ಲಿ ಮಲಗುವ ಅಭ್ಯಾಸ ನಿಮಗಿದ್ಯಾ? ಈ ಸಮಯಕ್ಕಿಂತ ಹೆಚ್ಚು ಮಲಗಿದ್ರೆ ಮಧುಮೇಹ ಬರಬಹುದು ಎಚ್ಚರ!

ಇನ್ನು ವಿದ್ಯಾರ್ಥಿಗಳಿಗೆ ನಿದ್ರೆ ಕಡಿಮೆಯಾಗಿ ಆಯಾಸವಾಗುತ್ತಿದ್ದರೆ ಅಂತವರು ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಇದನ್ನು ಸರಿಪಡಿಸಿಕೊಳ್ಳಬಹುದು. ಪರೀಕ್ಷೆಯ ಸಮಯದಲ್ಲಿ ನಿದ್ರೆಯ ಕೊರತೆಯಾಗಿ ಆಯಾಸ ಹೆಚ್ಚಾಗುತ್ತಿದ್ದರೆ ಮಲಗುವ ಹಾಸಿಗೆಯ ಮೇಲೆ ಕುಳಿತು ಓದುವುದನ್ನು ತಪ್ಪಿಸಿ. ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಎಚ್ಚರಗೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಮಲಗುವ ಮೊದಲು, ಚಹಾ, ಕಾಫಿ, ಮಸಾಲೆಯುಕ್ತ ಆಹಾರಗಳು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರಗಳಿಂದ ದೂರವಿರಿ. ಜೊತೆಗೆ ಮೊಬೈಲ್ ಫೋನ್ ಬಳಸುವುದನ್ನು ಮತ್ತು ಟಿವಿ ನೋಡುವುದನ್ನು ನಿಲ್ಲಿಸಿ ಇದರಿಂದ ನಿದ್ರೆ ಸರಿಯಾಗಿ ಬರುತ್ತದೆ ಅಷ್ಟೇ ಅಲ್ಲ, ಆಯಾಸವೂ ಕಡಿಮೆಯಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಗ್ನಿ ದುರಂತಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ KSRTC: ಬಸ್ಸಿನಲ್ಲಿ ಸೇಫ್ಟಿ ಅಳವಡಿಕೆ ಪ್ಲಾನ್ – Kannada News | KSRTC Bus Safety Upgrades: ADAS and Fire Systems for Passenger Protection

ಬೆಂಗಳೂರು, ಜನವರಿ 02: ಇತ್ತೀಚೆಗೆ ನೈಟ್ ಸರ್ವಿಸ್ ಖಾಸಗಿ ಬಸ್​ಗಳಲ್ಲಿ ಅಗ್ನಿ ದುರಂತಗಳು ಸಂಭವಿಸಿ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಫುಲ್ ಅಲರ್ಟ್ ಆಗಿರುವ ಕೆಎಸ್ಆರ್​​ಟಿಸಿ (KSRTC) ನಿಗಮ ಅತ್ಯಾಧುನಿಕ ಅಡಾಸ್ ಸಿಸ್ಟಮ್ ಅಳವಡಿಕೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಕೆಎಸ್ಆರ್​ಟಿಸಿ ಅಂಬಾರಿ ಉತ್ಸವ ಮತ್ತು ಅಂಬಾರಿ 2.0 ಬಸ್​ಗಳಲ್ಲಿ ಅತ್ಯಾಧುನಿಕ ಮುಂಜಾಗ್ರತಾ ಕ್ರಮಗಳನ್ನು (Safety) ತೆಗೆದುಕೊಳ್ಳಲು ಮುಂದಾಗಿದೆ.

ಬಸ್​​ಗಳಲ್ಲಿ ಏನೆಲ್ಲಾ ವ್ಯವಸ್ಥೆ ಇರಲಿದೆ

ಮೊದಲಿಗೆ ಅಂಬಾರಿ ಉತ್ಸವ ಎಸಿ ಸ್ಲೀಪರ್ ಬಸ್​ಗಳಲ್ಲಿ ಅಳವಡಿಸಿರುವ ಮುಂಜಾಗ್ರತಾ ಕ್ರಮಗಳನ್ನು ನೋಡುವುದಾದರೆ, ಡ್ರೈವರ್ ಸೀಟ್ ಬಳಿ ಡ್ಯಾಶ್ ಕ್ಯಾಮ್ ಅಳವಡಿಸಲಾಗಿದೆ. ಈ ಕ್ಯಾಮೆರಾದಿಂದ ಬಸ್ ಆಕ್ಸಿಡೆಂಟ್​ಗೆ ಕಾರಣ ಗೊತ್ತಾಗಲಿದೆ. ಏನಾದರೂ ಬಸ್​​ನಲ್ಲಿ ಅಗ್ನಿ ಅವಘಡಗಳು ಸಂಭವಿದರೆ, ಪ್ರಯಾಣಿಕರನ್ನು ಅಲರ್ಟ್ ಮಾಡಲು ಡ್ರೈವರ್ ಮುಂಭಾಗದಲ್ಲಿ ಅನೌಸ್ಸರ್ ಇಡಲಾಗಿದೆ. ಅಂದರೆ ಫೈರ್ ಡಿಟೆಕ್ಷನ್ ಆ್ಯಂಡ್​ ಸಪ್ರೇಷನ್ ಸಿಸ್ಟಮ್ (FDSS) ಇದು ಇಂಜಿನ್ ಕಂಪಾರ್ಟ್ಮೆಂಟ್​​ನಲ್ಲಿ ಏನಾದರೂ ಬೆಂಕಿ ಕಾಣಿಸಿಕೊಂಡರೇ ಇಂಜಿನ್​ ಕಂಪಾರ್ಟ್ಮೆಂಟ್​ನಲ್ಲಿ ಆಟೋಮ್ಯಾಟಿಕ್ ಆಗಿ 15 ನಾಜಲ್​ಗಳಿಂದ ಫೋಮ್ ಸ್ಪೈ ಆಗುತ್ತದೆ.

ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್: 6 ವರ್ಷದ ಬಳಿಕ ರಸ್ತೆ ಪುನರಾರಂಭ, ತಗ್ಗಲಿದೆ ಟ್ರಾಫಿಕ್‌

ಒಂದು ವೇಳೆ ಸ್ಪ್ರೈ ಆಗಲಿಲ್ಲ ಅಂದರೆ ಡ್ರೈವರ್ ಮುಂಭಾಗದ ಡಿಸ್ಪೈಯಲ್ಲಿರುವ ಬಟನ್ ಪ್ರೆಸ್ ಮಾಡಿದರೆ, ನಾಜಲ್​ಗಳ ಮೂಲಕ ಅಗ್ನಿ ಅವಘಡ ತಪ್ಪಲಿದೆ. ಇದಕ್ಕಾಗಿ ಬಸ್ ಹಿಂಭಾಗದಲ್ಲಿ 4 ಕೆಜಿಯ ಫೋಮ್ ಸಿಲಿಂಡರ್ ಅಳವಡಿಸಲಾಗಿದೆ. ಇತ್ತ ಬಸ್​ನಲ್ಲಿ ಏನಾದರೂ ಬೆಂಕಿ ಕಾಣಿಸಿಕೊಂಡರೇ ಫ್ರಂಟ್ ಗ್ಲಾಸ್ ಒಡೆದು ತಪ್ಪಿಸಿಕೊಳ್ಳಲು ಡ್ರೈವರ್ ಸೀಟ್ ಹಿಂಭಾಗದಲ್ಲಿ ದೊಡ್ಡದಾದ ಹ್ಯಾಮರ್ ಇಡಲಾಗಿದೆ. ಇತ್ತ ಏನಾದರೂ ಸಮಸ್ಯೆ ಎದುರಾದರೆ ತಪ್ಪಿಸಿಕೊಳ್ಳಲು ಪ್ರತಿ ಬರ್ತ್ ಸೀಟ್​ನಲ್ಲೂ ಕಿಟಕಿ ಗ್ಲಾಸ್ ಒಡೆಯಲು ಹ್ಯಾಮರ್ ಇಡಲಾಗಿದೆ. ಬಸ್​ನಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡಾಗ ಡ್ರೈವರ್ ಮುಂಭಾಗದಲ್ಲಿ ಪ್ಯಾನಿಕ್ ಬಟನ್ ಅನ್ನು ಕೂಡ ಅಳವಡಿಸಿದ್ದು, ಅದನ್ನು ಡ್ರೈವರ್ ಪ್ರೆಸ್ ಮಾಡಿದಾಗ ಇದರಿಂದ ಶಬ್ದ ಉಂಟಾಗಿ ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶ ರವಾನೆ ಆಗುತ್ತದೆ. ಬಸ್ ಒಳಗೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 4 ಕೆಜಿಯ ಎರಡು ಫೈರ್ ಎಸ್ಟಿಂಗ್ ವಿಷರ್ ಅಳವಡಿಸಲಾಗಿದೆ.

ಇನ್ನು ಎಮರ್ಜೆನ್ಸಿ ಎಕ್ಸಿಟ್ ಡೋರ್ ಅನ್ನ ವಾಹನದ ಬಲಭಾಗದ ಮೂರನೇ ಬರ್ತ್​​ನಲ್ಲಿ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಅಗ್ನಿ ಅವಘಡದ ವೇಳೆ ಪ್ರಯಾಣಿಕರು ಈ ಡೋರ್ ಮೂಲಕ ಎಕ್ಸಿಟ್ ಆಗಬಹುದು. ಈ ಬರ್ತ್ ಅನ್ನು ಯಾರಿಗೂ ಬುಕ್ ಮಾಡೋದಿಲ್ವಂತೆ. ಇದು ಯಾವಾಗಲೂ ಖಾಲಿಯಾಗಿರಲಿದೆ. ಬಸ್ ಒಳಭಾಗದಲ್ಲಿ ಎರಡು ಸೆಲೂನ್ ಕ್ಯಾಮೆರಾ ಅಳವಡಿಸಲಾಗಿದೆ.

ಕುಡಿದು ಬಂದರೆ ಬಸ್​​​ ಸ್ಟಾರ್ಟ್ ಆಗುವುದಿಲ್ಲ

ದೇಶದಲ್ಲಿ ಇದೆ ಮೊದಲ ಬಾರಿಗೆ ಕೆಎಸ್ಆರ್​​ಟಿಸಿ ನಿಗಮದ ಬಸ್​ಗಳಲ್ಲಿ ಅತ್ಯಾಧುನಿಕ ಅಡಾಸ್ ಸಿಸ್ಟಮ್ ಅನ್ನು ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಅಳವಡಿಸಲು ಮುಂದಾಗಿದ್ದು, ಈ ಅಡಾಸ್ ಸಿಸ್ಟಮ್ ಡ್ರೈವಿಂಗ್ ವೇಳೆ, ಫೋನ್ ಬಳಕೆ ಮಾಡಿದರೆ, ನಿದ್ರೆಗೆ ಜಾರಿದರೆ, ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡರೇ ಕೋಲಿಜಿಯನ್ ವಾರ್ನಿಂಗ್ ನೀಡಲಾಗುತ್ತದೆ. ಈ ವೇಳೆ ಮೊದಲಿಗೆ ಬೀಪ್ ಸೌಂಡ್ ನೀಡುತ್ತದೆ. ನಂತರ ಕ್ರಿಟಿಕಲ್ ವಾರ್ನಿಂಗ್ ನೀಡಿ, ವಾಹನದ ವೇಗ ಮಿತಿ ಕಡಿಮೆ ಮಾಡಿ ಆಕ್ಸಿಡೆಂಟ್ ತಡೆಗಟ್ಟಲು ಸಹಾಯ ಮಾಡುತ್ತದೆ. ಡ್ರೈವರ್ ಡ್ರೈವಿಂಗ್ ಮಾಡುವ ವೇಳೆ ಕುಡಿದು ಬಂದಿದರೆ ವಾಹನ ಸ್ಟಾರ್ಟ್ ಆಗುವುದಿಲ್ಲವಂತೆ.

ಇತ್ತ ಐರಾವತ ಬಸ್​ಗಳಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಅಂತ ನೋಡುವುದಾದರೆ, ಪ್ರಯಾಣಿಕರ ಸೀಟ್ ಬಳಿ 30 ಸ್ಪ್ರಿಂಕ್ಲರ್ ನಾಜಲ್ ಅಳವಡಿಸಿದ್ದು, ಅಗ್ನಿ ಅವಘಡ ಸಂಭವಿಸಿದರೆ ಸ್ವಯಂಚಾಲಿತವಾಗಿ ನೀರು ಸರಬರಾಜು ಆಗುತ್ತದೆ. ಇದಕ್ಕಾಗಿ ಬಸ್ ಲಗೇಜ್​​ ಕಂಪಾರ್ಟ್‌ಮೆಂಟ್ ಬಳಿ 170 ಲೀಟರ್ ಕೆಪಾಸಿಟಿಯ ಎರಡು ಸ್ಟೈನ್ಲೆಸ್ ಸ್ಟೀಲ್ ಟ್ಯಾಂಕರ್​ಗಳನ್ನು ಅಳವಡಿಸಲಾಗಿದೆ.

ಕೆಎಸ್​​ಆರ್​​ಟಿಸಿ ಡಿ.ಸಿ ನಾಗರಾಜ್ ಮೂರ್ತಿ ಹೇಳಿದ್ದಿಷ್ಟು

ಬಸ್ ಬಲಭಾಗದ ಹಿಂಬದಿಯಲ್ಲಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಸ್ಟೀಲ್ ಲ್ಯಾಡರ್ ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಸೇಫ್ ಆಗಿ ಬಸ್​ನಿಂದ ಕೆಳಗೆ ಇಳಿಯಬಹುದು ಎಂದು ಕೆಎಸ್​​ಆರ್​​ಟಿಸಿ ಡಿ.ಸಿ ನಾಗರಾಜ್ ಮೂರ್ತಿ ಹೇಳುತ್ತಾರೆ.

ಇದನ್ನೂ ಓದಿ: ದೇವನಹಳ್ಳಿ: ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಒಟ್ಟನಿಲ್ಲಿ ಇತ್ತೀಚೆಗೆ ನೈಟ್ ಸರ್ವಿಸ್ ಖಾಸಗಿ ಬಸ್​ಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿ ನೂರಾರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಕೆಎಸ್ಆರ್​​ಟಿಸಿ ಫುಲ್ ಅಲರ್ಟ್ ಆಗಿರುವುದಂತು  ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:57 pm, Fri, 2 January 26

Source link

ಮೃತ IAS ಅಧಿಕಾರಿ ಮಹಾಂತೇಶ್‌ ಬೀಳಗಿ ಪುತ್ರಿಗೆ ಅನುಕಂಪದ ನೌಕರಿ ನೀಡಲು ಸಂಪುಟ ಒಪ್ಪಿಗೆ, ಯಾವ ಹುದ್ದೆ? – Kannada News | Karnataka Cabinet approves to Give C Group Job for demise IAS Officer mahantesh bilagi daughter

ಬೆಂಗಳೂರು, (ಜನವರಿ 02): ರಸ್ತೆ ಅಪಘಾತದಲ್ಲಿ  (Road Accident)ಮೃತಪಟ್ಟಿದ್ದ ಕರ್ನಾಟಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (mahantesh bilagi) ಅವರ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ಸಚಿವ ಸಂಪುಟ (Karnataka Cabinet) ಒಪ್ಪಿಗೆ ಸೂಚಿಸಿದೆ. ಇಂದು (ಜನವರಿ 02) ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ಅನುಕಂಪದ ಹುದ್ದೆ ನೀಡವ ಬಗ್ಗೆ ಚರ್ಚೆಯಾಗಿದ್ದು, ಅಂತಿಮವಾಗಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯ ಅವರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ಸಿ ಹುದ್ದೆ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಪ್ರೀತಿಯ ಮಾತು, ಪ್ರಮಾಣಿಕ ಕೆಲಸಗಳಿಂದ ಕರ್ನಾಟಕ ತುಂಬ ಗುರುತಿಸಿಕೊಂಡಿದ್ದ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ. ವಿದ್ಯಾರ್ಥಿಗಳು ಸಿಕ್ಕರೆ ಉತ್ಸಾಹ ತುಂಬಿಬರುವ ಮಾತುಗಳನ್ನು ಆಡದೆ ಮುಂದಕ್ಕೆ ಹೋಗ್ತಿರಲಿಲ್ಲ. ಜ್ಞಾನ ಬೆಳೆಸಿಕೊಳ್ಳಿ, ಬದುಕು ಬೆಳಗಿಸಿ ಅಂತ ಸ್ಟೂಡೆಂಟ್ಸ್‌ ಸಲಹೆ ಕೊಡೋದನ್ನು ಮರೀತಿರಲಿಲ್ಲ. ಸ್ವತಃ ಬಡತನದ ಬೇಗೆಯಲ್ಲಿ ಬೆಂದು, ಅಪಾರ ಅನುಭವಗಳನ್ನು ಬೆಳೆಸಿಕೊಂಡು ಉನ್ನತ ಸ್ಥಾನಕ್ಕೆ ಏರಿದ್ದ ಅಪರೂಪದ ವ್ಯಕ್ತಿ ಮಹಾಂತೇಶ್‌. ಈ ಜನಸ್ನೇಹಿ ಅಧಿಕಾರಿ ಇತ್ತೀಚೆಗೆ ಕಲಬುರಗಿ ಸಮೀಪ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಮೂವರು ಸಹೋದರರು ದುರಂತ ಸಾವು: IAS ಅಧಿಕಾರಿ ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ರೂ ಉಳಿಯಲಿಲ್ಲ ಜೀವಗಳು

2025ರ ನವೆಂಬರ್ 25ರಂದು ಜೇವರ್ಗಿ ಸಮೀಪ ಮಹಾಂತೇಶ್ ಬೀಳಗಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರ ತಪ್ಪಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಲೆ ಈ ದುರ್ಘಟನೆ ಸಂಭವಿಸಿತ್ತು. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರು ಚಿಕಿತ್ಸೆ ಫಲಕಾರಿಯಾಗದೇ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಮಹಾಂತೇಶ್ ಬೀಳಗಿ ಸಂಬಂಧಿ ಬಸವರಾಜ್ ಕಮರಟಗಿ ಎಂಬವರು ದೂರು ದಾಖಲಿಸಿದ್ದು, ಈ ದೂರಿನ ಅನ್ವಯ ಜೇವರ್ಗಿ ಠಾಣೆಯ ಪೊಲೀಸರು ಚಾಲಕ ಆರೋಕಿಯಾ ಆಂಥೋನಿ ರಾಜ ವಿರುದ್ದ 281 , 125(A)125(B)106 ಬಿಎನ್‌ಎಸ್‌ ಅಡಿ ಎಫ್ಐಆರ್ ದಾಖಲಾಗಿದೆ. ಚಾಲಕನ ಅತಿವೇಗ ಅಜಾರೋಗತೆಕತೆಯಿಂದ ಅಪಘಾತ ಸಂಭವಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ರಸ್ತೆ ಬದಿಯ ಬ್ರಿಡ್ಜ್ ಗೆ ಕಾರು ಡಿಕ್ಕಿಯಾಗಿ ನಾಲ್ಕೈದು ಬಾರಿ ಕಾರ್ ಪಲ್ಟಿಯಾಗಿದೆ. ಕಾರ್ ಪಲ್ಟಿಯಾದ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ರೆ, ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಾವನ್ನಪ್ಪಿದ್ದರು. ಕಾರ್ ಚಾಲಕ ಆಂಥೋನಿ ರಾಜ್ ಸಹ ಗಂಭೀರ ಗಾಯಗಳಾಗಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ – Kannada News | Devotees Witness Unique Thorn Bed Ritual At Tamil Nadu Muthumariamman Temple

ಚೆನ್ನೈ, ಜನವರಿ 2: ತಮಿಳುನಾಡಿನ ಶಿವಗಂಗೈ ಜಿಲ್ಲೆಯ ತಿರುಪ್ಪುವನಂ ಬಳಿಯ ಹಳ್ಳಿಯಲ್ಲಿ ಪೂಂಗವನಂ ಮುತ್ತುಮಾರಿಯಮ್ಮನ್ ದೇವಾಲಯವಿದೆ. 63 ವರ್ಷದ ನಾಗರಾಣಿ ಅಮ್ಮವರು ಈ ದೇವಾಲಯದ ಆಡಳಿತಾಧಿಕಾರಿ. ಪ್ರತಿ ಮಂಡಲ ಪೂಜೆಯ ಸಮಯದಲ್ಲಿ 48 ದಿನಗಳ ಕಾಲ ಉಪವಾಸ ಆಚರಿಸುವುದು ಮತ್ತು ಜನರಿಗೆ ದೈವಿಕ ಮಾತುಗಳನ್ನು ಹೇಳುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ವೇಲೆ 7 ಅಡಿ ಎತ್ತರದ ಮುಳ್ಳಿನ ಹಾಸಿಗೆಯನ್ನು ಉಡೈ ಮುಳ್ಳು ಮತ್ತು ಕರುವೇಲ ಮರದ ಮುಳ್ಳಿನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ. ನಾಗರಾಣಿ ಅಮ್ಮವರು ಭಕ್ತರನ್ನು ಆಶೀರ್ವದಿಸಲು ಆ ಮುಳ್ಳಿನ ಹಾಸಿಗೆಯ ಮೇಲೆ ಕುಳಿತು, ನಿಂತು, ನೃತ್ಯ ಮಾಡುತ್ತಾರೆ!

ಈ ವರ್ಷದ 49ನೇ ಮಂಡಲ ಪೂಜಾ ಉತ್ಸವದ ಅಂಗವಾಗಿ, ದೇವಿಗೆ ಶಂಖ ಅಭಿಷೇಕ ಮಾಡಲಾಯಿತು. ನಂತರ, ದೇವಿಗೆ ದೀಪ ಬೆಳಗಿಸಲಾಯಿತು. ಬಳಿಕ ಉಡೈ ಮುಳ್ಳು, ಇಳಂತೈ ಮುಳ್ಳು, ಮತ್ತು ಕತ್ತಲಿ ಮುಳ್ಳು ಮುಂತಾದ ವಿವಿಧ ರೀತಿಯ ಮುಳ್ಳುಗಳನ್ನು ಹೊಂದಿರುವ 7 ಅಡಿ ಎತ್ತರದ ಮುಳ್ಳಿನ ರಾಶಿಯನ್ನು ದೇವಾಲಯದ ಮುಂಭಾಗದ ನೆಲದಲ್ಲಿ ಜೋಡಿಸಿ ನಾಗರಾಣಿ ದೇವಿಯು ಮುಳ್ಳಿನ ಹಾಸಿಗೆಯ ಮೇಲೆ ಕುಳಿತು ಆಶೀರ್ವಾದ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link