All posts by nagaraj11081993

ಅಶ್ಲೀಲ, ಕಾನೂನುಬಾಹಿರ ವಿಷಯಗಳನ್ನು ಡಿಲೀಟ್ ಮಾಡಿ; ಎಕ್ಸ್​​ನ ಗ್ರೋಕ್​ಗೆ ಕೇಂದ್ರ ಸರ್ಕಾರ ಎಚ್ಚರಿಕೆ – Kannada News | Modi Government directs Elon Musk led X to remove vulgar unlawful content from Grok AI platform

ನವದೆಹಲಿ, ಜನವರಿ 2: ಎಲಾನ್ ಮಸ್ಕ್ (Elon Musk) ನೇತೃತ್ವದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ಗೆ ಕೇಂದ್ರ ಸರ್ಕಾರ ಇಂದು ಖಡಕ್ ಎಚ್ಚರಿಕೆ ನೀಡಿದೆ. ಎಕ್ಸ್​ನ AI ಅಪ್ಲಿಕೇಶನ್ ಗ್ರೋಕ್‌ನಿಂದ (Grok AI) ಹಂಚಲ್ಪಡುತ್ತಿರುವ ಎಲ್ಲಾ ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯವನ್ನು ತಕ್ಷಣ ಡಿಲೀಟ್ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಒಂದುವೇಳೆ ಆ ವಿಷಯಗಳನ್ನು 72 ಗಂಟೆಯೊಳಗೆ ತೆಗೆದುಹಾಕದಿದ್ದರೆ ಕಾನೂನಿನಡಿಯಲ್ಲಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

2000ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ಅಡಿಯಲ್ಲಿ ಶಾಸನಬದ್ಧವಾದ ಬಾಧ್ಯತೆಗಳನ್ನು ಪಾಲಿಸಲು ವಿಫಲವಾದ ಕಾರಣದಿಂದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಎಕ್ಸ್‌ನ ಭಾರತದ ಕಾರ್ಯಾಚರಣೆಗಳ ಮುಖ್ಯ ಅಧಿಕಾರಿಗೆ ನೋಟಿಸ್ ನೀಡಿದೆ.

ಇದನ್ನೂ ಓದಿ: ಭಾರತದ ಕಾನೂನು ಅನುಸರಿಸಲೇಬೇಕು; ಎಲಾನ್ ಮಸ್ಕ್ ಒಡೆತನದ ಎಕ್ಸ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಮುಖಭಂಗ

‘ಗ್ರೋಕ್’ ನಂತಹ AI ಆಧಾರಿತ ಸೇವೆಗಳ ದುರುಪಯೋಗದ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಮತ್ತು ಲೈಂಗಿಕತೆಯುಳ್ಳ ವಿಷಯವನ್ನು ಹೋಸ್ಟ್ ಮಾಡುವುದು, ಸೃಷ್ಟಿಸುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು, ಹಂಚಿಕೊಳ್ಳುವುದು ಅಥವಾ ಅಪ್‌ಲೋಡ್ ಮಾಡುವುದನ್ನು ತಡೆಗಟ್ಟಲು ತಕ್ಷಣ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸಬೇಕೆಂದು ಸಚಿವಾಲಯ ಕೋರಿದೆ.

“ನೀವು ಅಭಿವೃದ್ಧಿಪಡಿಸಿದ ಮತ್ತು ಸಂಯೋಜಿಸಲ್ಪಟ್ಟ ಮತ್ತು ಎಕ್ಸ್ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾದ “Grok AI” ಎಂಬ ಸೇವೆಯನ್ನು ಬಳಕೆದಾರರು ಮಹಿಳೆಯರ ಅಶ್ಲೀಲ ಚಿತ್ರಗಳು ಅಥವಾ ವೀಡಿಯೊಗಳನ್ನು ಅವಹೇಳನಕಾರಿ ಅಥವಾ ಅಸಭ್ಯ ರೀತಿಯಲ್ಲಿ ಹೋಸ್ಟ್ ಮಾಡಲು, ರಚಿಸಲು, ಪ್ರಕಟಿಸಲು ಅಥವಾ ಹಂಚಿಕೊಳ್ಳಲು ನಕಲಿ ಖಾತೆಗಳನ್ನು ರಚಿಸಲು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಶೇಷವಾಗಿ ಗಮನಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸಿ” ಎಂದು ಪತ್ರದಲ್ಲಿ ಆದೇಶಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ashes: ಸಿಡ್ನಿ ಟೆಸ್ಟ್​ಗೆ ಆಡುವ ಹನ್ನೆರಡರ ಬಳಗ ಘೋಷಿಸಿದ ಇಂಗ್ಲೆಂಡ್‌ – Kannada News | Ashes Final Test: England Announce 12 Man Squad for Sydney Decider

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಿನ ನಡೆಯುತ್ತಿರುವ ಆಶಸ್ ( Ashes) ಸರಣಿಯು ಅಂತಿಮ ಹಂತವನ್ನು ತಲುಪಿದೆ. ಆತಿಥೇಯ ಆಸ್ಟ್ರೇಲಿಯಾ ಈಗಾಗಲೇ ಆಶಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇತ್ತ ಸರಣಿ ಕಳೆದುಕೊಂಡಿರುವ ಇಂಗ್ಲೆಂಡ್‌ ಮೆಲ್ಬೋರ್ನ್ ಟೆಸ್ಟ್‌ ಗೆದ್ದು ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗಿದೆ. ಇದೀಗ ಸರಣಿಯ ಕೊನೆಯ ಪಂದ್ಯವನ್ನು ಗೆದ್ದು 3-2 ಅಂತರದಿಂದ ಪ್ರವಾಸ ಅಂತ್ಯಗೊಳಿಸಲು ನೋಡುತ್ತಿದೆ. ಸರಣಿಯ ಕೊನೆಯ ಪಂದ್ಯ ಸಿಡ್ನಿ ಮೈದಾನದಲ್ಲಿ ಜನವರಿ 4 ರಿಂದ ಆರಂಭವಾಗಲಿದ್ದು, ಈ ಪಂದ್ಯಕ್ಕಾಗಿ ಇಂಗ್ಲೆಂಡ್‌ ತನ್ನ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್‌ ತಂಡದ ವಿಶೇಷತೆ ಏನೆಂದರೆ ಕೊನೆಯ ಟೆಸ್ಟ್​ಗೆ 11 ಆಟಗಾರರ ಬದಲು 12 ಆಟಗಾರರನ್ನು ಹೆಸರಿಸಿದೆ.

12 ಆಟಗಾರರ ಆಯ್ಕೆ

ಆಶಸ್ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಜನವರಿ 4 ರ ಭಾನುವಾರದಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. ಆಸ್ಟ್ರೇಲಿಯಾ ಈಗಾಗಲೇ ಸರಣಿಯನ್ನು 3-1 ಅಂತರದಿಂದ ಗೆದ್ದಿದೆ, ಆದರೆ ಇಂಗ್ಲೆಂಡ್ ಸೋಲಿನ ಅಂತರವನ್ನು ಕಡಿಮೆ ಮಾಡುವ ಅವಕಾಶವನ್ನು ಹೊಂದಿದೆ. ಆದಾಗ್ಯೂ, ಇಂಗ್ಲೆಂಡ್‌ ತಂಡದ ಬೌಲಿಂಗ್ ದಾಳಿ ದುರ್ಬಲಗೊಂಡಿರುವುದು ಪ್ರಮುಖ ಸವಾಲಾಗಿದೆ. ಸ್ಟಾರ್ ವೇಗದ ಬೌಲರ್ ಜೋಫ್ರಾ ಆರ್ಚರ್ ಈಗಾಗಲೇ ನಾಲ್ಕನೇ ಮತ್ತು ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರೆ, ಇದೀಗ ಗಸ್ ಅಟ್ಕಿನ್ಸನ್ ಕೂಡ ಗಾಯದಿಂದಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಈ ಸವಾಲಿನ ನಡುವೆ ಕೊನೆಯ ಟೆಸ್ಟ್ ಆಡಲು ಸಜ್ಜಾಗಿರುವ ಇಂಗ್ಲೆಂಡ್, ಟೆಸ್ಟ್ ಪಂದ್ಯ ಆರಂಭವಾಗುವ 2 ದಿನ ಮೊದಲೇ ತನ್ನ ತಂಡವನ್ನು ಪ್ರಕಟಿಸಿದೆ. ಒಂದೇ ವ್ಯತ್ಯಾಸವೆಂದರೆ ಈ ಬಾರಿ 11 ಆಟಗಾರರ ಬದಲಿಗೆ 12 ಆಟಗಾರರನ್ನು ಆಯ್ಕೆ ಮಾಡಿದೆ. ಇದರರ್ಥ ಯಾವ ಆಟಗಾರನನ್ನು ಹೊರಗಿಡಬೇಕು ಎಂಬುದನ್ನು ಪಂದ್ಯದ ದಿನದಂದು ಟಾಸ್ ಸಮಯದಲ್ಲಿ ನಿರ್ಧರಿಸಲಾಗುತ್ತದೆ. ಇಂಗ್ಲೆಂಡ್‌ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಸಿಡ್ನಿಯ ಹವಾಮಾನ ಮತ್ತು ಪಿಚ್ ಕಾರಣ ಎನ್ನಬಹುದು. ಸಾಮಾನ್ಯವಾಗಿ, ಸಿಡ್ನಿಯಲ್ಲಿ ಬಿಸಿಲಿನ ವಾತಾವರಣವಿರುತ್ತದೆ, ಆದರೆ ಈ ಬಾರಿ ಹವಾಮಾನ ಸ್ವಲ್ಪ ತಂಪಾಗಿರುತ್ತದೆ. ಬ್ಯಾಟ್ಸ್‌ಮನ್‌ಗಳು ಮತ್ತು ಸ್ಪಿನ್ನರ್‌ಗಳಿಗೆ ಯಾವಾಗಲೂ ಅನುಕೂಲಕರವಾಗಿರುವ SCG ಪಿಚ್‌ನಲ್ಲಿ ಹುಲ್ಲು ಹೆಚ್ಚಿರುವ ಕಾರಣ ಅದು ವೇಗದ ಬೌಲರ್‌ಗಳಿಗೆ ಪ್ರಯೋಜನವನ್ನು ನೀಡುತ್ತದೆ.

Ashes: ಪ್ರತಿಷ್ಠಿತ ಆಶಸ್ ಸರಣಿಯಿಂದ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ 90 ಕೋಟಿ ರೂ. ನಷ್ಟ

ಯಾವ ಇಬ್ಬರು ಆಟಗಾರರಿಗೆ ಅವಕಾಶ?

ಇದನ್ನು ಗಮನದಲ್ಲಿಟ್ಟುಕೊಂಡು, ಇಂಗ್ಲೆಂಡ್ ತನ್ನ ಪ್ಲೇಯಿಂಗ್ 12 ರಲ್ಲಿ ಒಬ್ಬ ಸ್ಪಿನ್ನರ್ ಮತ್ತು ಮೂವರು ಪ್ರಮುಖ ವೇಗದ ಬೌಲರ್‌ಗಳನ್ನು ಸೇರಿಸಿಕೊಂಡಿದೆ. ಆದಾಗ್ಯೂ, ಈ 12 ಆಟಗಾರರಲ್ಲಿ 10 ಮಂದಿ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಭಾಗವಹಿಸಿದ ಆಟಗಾರರೇ ಆಗಿದ್ದಾರೆ. ಪ್ರಸ್ತುತ ಆಶಸ್‌ನಲ್ಲಿ ಕೇವಲ ಇಬ್ಬರು ಆಟಗಾರರಿಗೆ ಮಾತ್ರ ಮೊದಲ ಅವಕಾಶ ನೀಡಲಾಗುತ್ತಿದೆ. ಅವರಲ್ಲಿ ಒಬ್ಬರು ಡಿಸೆಂಬರ್ 2014 ರಿಂದ ಯಾವುದೇ ಟೆಸ್ಟ್ ಪಂದ್ಯವನ್ನು ಆಡದ ವೇಗದ ಬೌಲರ್ ಮ್ಯಾಥ್ಯೂ ಪಾಟ್ಸ್. ಇಂಗ್ಲೆಂಡ್‌ನ ಏಕೈಕ ಪ್ರಮುಖ ಸ್ಪಿನ್ನರ್ ಆಗಿ ಈ ಪ್ರವಾಸಕ್ಕೆ ಬಂದ ಆಫ್-ಬ್ರೇಕ್ ಬೌಲರ್ ಶೋಯೆಬ್ ಬಶೀರ್ ಅವರಿಗೆ ಈ ಬಾರಿ ಅವಕಾಶ ನೀಡಲಾಗಿದೆ. ಬಶೀರ್ ಲಾರ್ಡ್ಸ್‌ನಲ್ಲಿ ಭಾರತ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಜಾಕೋಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಗಸ್ ಅಟ್ಕಿನ್ಸನ್, ಜೋಶ್ ಟಂಗ್, ಮ್ಯಾಥ್ಯೂ ಪಾಟ್ಸ್ ಮತ್ತು ಶೋಯೆಬ್ ಬಶೀರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಣಸೂರು ಚಿನ್ನದಂಗಡಿ ಕಳ್ಳತನ: ಪೊಲೀಸ್ರು ಚಾಪೆ ಕೆಳಗೆ ನುಗ್ಗಿದ್ರೆ, ರಂಗೋಲಿ ಕೆಳಗಡೆ ತೂರಿದ ದರೋಡೆಕೋರರು – Kannada News | Mysuru: Hunsur Gold Shop Robbery; Robbers Yet to Be Traced Even After 6 Days

ಮೈಸೂರು, ಜನವರಿ 02: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹುಣಸೂರು (Hunsur) ಸ್ಕೈ ಗೋಲ್ಡ್ ಆ್ಯಂಡ್​ ಡೈಮಂಡ್ ಅಂಗಡಿ ದರೋಡೆ(Robbery) ನಡೆದು ಆರು ದಿನವಾದರೂ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ ಸರ್ಕಾರ ಎಸ್​​ಪಿಯನ್ನು ಬದಲಾಯಿಸಿರುವುದು ತನಿಖೆಗೆ ಹಿನ್ನೆಡೆ ಉಂಟಾಗುತ್ತಾ ಎನ್ನುವ ಚರ್ಚೆಗಳು ಕೂಡ ಕೇಳಿಬರುತ್ತಿವೆ. ಸದ್ಯ ದರೋಡೆ ಪ್ರಕರಣ ಮಾತ್ರ ಪೊಲೀಸರಿಗೆ ತಲೆ ನೋವಾಗಿದೆ.

ಡಿಸೆಂಬರ್ 27ರಂದು ನಡೆದ ಹುಣಸೂರು ಸ್ಕೈ ಗೋಲ್ಡ್ ಆ್ಯಂಡ್​ ಡೈಮಂಡ್ ಜ್ಯುವೆಲರಿ ಶಾಪ್​​ನಲ್ಲಿ ಸುಮಾರು 10 ಕೋಟಿ ರೂ ಮೌಲ್ಯದ 7 ಕೆಜಿ ಚಿನ್ನ, ವಜ್ರ ದರೋಡೆ ಮಾಡಲಾಗಿತ್ತು. ಗ್ರಾಹಕರಂತೆ ಅಂಗಡಿ ಪ್ರವೇಶ ಮಾಡಿದ ಖದೀಮರು, ಏಕಾಏಕಿ ಗನ್ ತೋರಿಸಿ, ಎಲ್ಲರನ್ನು ಬೆದರಿಸಿ ದರೋಡೆ ಮಾಡಿದ್ದರು. ಖದೀಮರು ಅಂಗಡಿ ಪ್ರವೇಶ ಮಾಡಿದಾಗ ಗ್ರಾಹಕರು ಕೂಡ ವ್ಯಾಪಾರ ಮಾಡುತ್ತಿದ್ದು, ಖದೀಮರು ಬಂದ ನಂತರವೂ ಗ್ರಾಹಕರು ಅಂಗಡಿ ಒಳಗೆ ಬಂದಿದ್ದಾರೆ. ಎಲ್ಲರನ್ನೂ ಗನ್ ತೋರಿಸಿ ಹೆದರಿಸಿ ಒಂದೆಡೆ ಸೇರಿಸಿದ ಖದೀಮರು, 5 ನಿಮಿಷದಲ್ಲಿ ಕೈಗೆ ಸಿಕ್ಕಷ್ಟು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಇದನ್ನೂ ಓದಿ: ಹುಣಸೂರು ಚಿನ್ನದಂಗಡಿ ದರೋಡೆ: ರಾಬರಿ ಆಗಿದ್ದು 7 ಕೆ.ಜಿ ಬಂಗಾರ; ಡೈಮಂಡ್​​ ಕೂಡ ಕಳವು

ಸ್ಕೈ ಗೋಲ್ಡ್ ಕಂಪನಿಯ ಒಟ್ಟು 10 ಅಂಗಡಿಗಳಿದ್ದು, ಕೇಂದ್ರ ಕಚೇರಿ ಕೇರಳದಲ್ಲಿದೆ. ಅಲ್ಲಿಂದಲೇ ಎಲ್ಲಾ ಹತ್ತು ಅಂಗಡಿಗಳ ಸಿಸಿ ಕ್ಯಾಮೆರಾಗಳನ್ನು ಮಾನಿಟರ್ ಮಾಡಲಾಗುತ್ತದೆ. ಅದೇ ರೀತಿ ಮಾನಿಟರ್ ಮಾಡಿ ಮ್ಯಾನೇಜರ್‌ಗೆ ಅಲರ್ಟ್ ಮಾಡುವಷ್ಟರಲ್ಲಿ ದರೋಡೆಕೋರರು ಸಿಕ್ಕಷ್ಟು ದೋಚಿ ಪರಾರಿಯಾಗಿದ್ದರು.

ದರೋಡೆ ಮಾಡಿದ ಅಷ್ಟು ಜನರ ಮುಖ ಚಹರೆ ಪೊಲೀಸರಿಗೆ ಸಿಕ್ಕಿತ್ತು. ಆದರೂ ಪೊಲೀಸರಿಗೆ ದರೋಡೆಕೋರರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ದರೋಡೆಕೋರರು ಎಷ್ಟು ವ್ಯವಸ್ಥಿತವಾಗಿ ದರೋಡೆ ಮಾಡಿದ್ದರೋ ಅಷ್ಟೇ ವ್ಯವಸ್ಥಿತವಾಗಿ ಎಸ್ಕೇಪ್ ಪ್ಲ್ಯಾನ್ ಸಹ ಮಾಡಿಕೊಂಡಿದ್ದರು‌.

ದರೋಡೆ ಮಾಡಿದ ಖದೀಮರು ಅಲ್ಲಿಂದ ಎರಡು ಪಲ್ಸರ್ ಬೈಕ್‌ಗಳಲ್ಲಿ ಪರಾರಿಯಾಗಿದ್ದರು. ಅವರು ಪರಾರಿಯಾದ ದೃಶ್ಯ ಹುಣಸೂರು ಕೆ.ಆರ್.ನಗರ ರಸ್ತೆಯ ಲಕ್ಷ್ಮಣತೀರ್ಥ ಫಾರ್ಮ್ ಹೌಸ್‌ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿತ್ತು. ಒಂದು ಬೈಕ್‌ನಲ್ಲಿ ಮೂವರು, ಮತ್ತೊಂದು ಬೈಕ್‌ನಲ್ಲಿ ಇಬ್ಬರು ವೇಗವಾಗಿ ತೆರಳಿದ್ದರು.

ಮೊಬೈಲ್ ಬಳಸದ ದರೋಡೆಕೋರರು: ಎಸ್​ಪಿ ಬದಲಾವಣೆ

ಇನ್ನು ಘಟನೆ ನಡೆದು 6ನೇ ದಿನವಾಗಿದೆ. ಸ್ಥಳದಲ್ಲಿ ಸಾಕಷ್ಟು ಸಾಕ್ಷಿ, ಆರೋಪಿಗಳ ಗುರುತು ಇದ್ದರೂ ಪೊಲೀಸರ ತನಿಖೆಗೆ ಅಂತಹ ಲೀಡ್ ಸಿಕ್ಕಿಲ್ಲ. ಪ್ರಮುಖವಾಗಿ ದರೋಡೆಕೋರರು ದರೋಡೆ ಮಾಡುವ ವೇಳೆ ಯಾವುದೇ ಮೊಬೈಲ್ ಬಳಸಿಲ್ಲ.‌ ಹೀಗಾಗಿ ಅವರ ಜಾಡು ಪತ್ತೆ ಹಚ್ಚುವುದು‌ ಪೊಲೀಸರಿಗೆ ತಲೆ ನೋವಾಗಿದೆ‌. ಈ ಮಧ್ಯೆ ಸರ್ಕಾರ ತನಿಖೆಯ ನೇತೃತ್ವ ವಹಿಸಿದ್ದ ಮೈಸೂರು ಎಸ್​​ಪಿಯನ್ನು ಬದಲಿಸಿದೆ. ಎಸ್​​ಪಿಯಾಗಿದ್ದ ವಿಷ್ಣುವರ್ಧನ್ ಅವರನ್ನು ಕೆಪಿಎಗೆ ವರ್ಗಾಯಿಸಿ ಮೈಸೂರು ಜಿಲ್ಲಾ ಎಸ್​ಪಿಯಾಗಿ ಮಂಡ್ಯ ಎಸ್ ಪಿಯಾಗಿದ್ದ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ನೇಮಿಸಿದೆ. ಇದು ತನಿಖೆ ಹಿನ್ನೆಡೆಗೆ ಕಾರಣವಾಗಿದೆ.

ಇದನ್ನೂ ಓದಿ: ಹುಣಸೂರಿನಲ್ಲಿ ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ

ಹೇಳಿಕೇಳಿ ದರೋಡೆಯಾಗಿರುವುದು ಸಿಎಂ ತವರು ಜಿಲ್ಲೆಯಲ್ಲಿ, ಅದರಲ್ಲೂ ಮಟಮಟ ಮಧ್ಯಾಹ್ನ ಎಲ್ಲರ ಮುಂದೆ. ಆದರೂ ಪೊಲೀಸರು ದರೋಡೆಕೋರರನ್ನು ಬಂಧಿಸುವಲ್ಲಿ ವಿಫಲರಾಗಿರುವುದು ಖಾಕಿ ಕಾರ್ಯವೈಖರಿಗೆ ಬಗ್ಗೆ ಹಲವು ಅನುಮಾನಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs SL: ಶ್ರೀಲಂಕಾದ ಸೈಕ್ಲೋನ್ ಸಂತ್ರಸ್ತರ ನೆರವಿಗೆ ನಿಲ್ಲಲು ಬಿಸಿಸಿಐ ಮಹತ್ವದ ನಿರ್ಧಾರ

Source link

ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ ಅಂತ ವಿಡಿಯೋ ಮೂಲಕ ತಿಳಿಸಿದ ಅನಿರುದ್ಧ್ – Kannada News | Anirudh Jatkar show the condition of Mysore ring road in his new video

ನಟ ಅನಿರುದ್ಧ್ ಜತ್ಕರ್ (Anirudh Jatkar) ಅವರು ಸಾಮಾಜಿಕ ಕಳಕಳಿ ಹೊಂದಿದ್ದಾರೆ. ಬೆಂಗಳೂರಿನ ಮಾಲಿನ್ಯದ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮೂಲಕ ಬೆಳಕು ಚೆಲ್ಲುತ್ತಾರೆ. ಅದೇ ರೀತಿ, ಮೈಸೂರಿನಲ್ಲಿ ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವರು ಈ ವಿಡಿಯೋ ಮೂಲಕ ತಿಳಿಸಿದ್ದಾರೆ. ‘ಆರ್ಕೋರ್ ಹೋಟೆಲ್ಸ್ ಎದುರು, ಮೈಸೂರು ರಿಂಗ್ ರಸ್ತೆ (Mysore Ring Road) ಇದು. ರಿಂಗ್ ರಸ್ತೆಯ ಸಂಪೂರ್ಣ ವಿಸ್ತಾರವೂ ಇದೇ ಸ್ಥಿತಿಯಲ್ಲಿದೆ. ಇದನ್ನು ಯಾವುದೇ ರೀತಿಯಲ್ಲೂ ಸರಿಯಾಗಿ ನಿರ್ವಹಿಸಲಾಗಿಲ್ಲ. ಅಧಿಕಾರಿಗಳು ಮತ್ತು ಪ್ರತಿನಿಧಿಗಳಿಗೆ ಕಳಕಳಿಯ ಮನವಿ’ ಎಂದು ಅನಿರುದ್ಧ್ ಜತ್ಕರ್ ಅವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೀದರ್​​ ರೈತನ ಕೈಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕೃಷಿ ಕ್ರಾಂತಿ – Kannada News | Bidar Farmer’s Lemon Farming Success: Ram Reddy Earns Lakhs Annually

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ರೈತ ಹತ್ತಾರು ವರ್ಷದಿಂದ ಸೋಯಾಬೀನ್, ತೊಗರಿ, ಉದ್ದು ಹೀಗೆ ಬೆಳೆ ಬೆಳೆದು ಹೈರಾಣಾಗಿದ್ದರು. ಆದರೆ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿ ತನ್ನ ಹೊಲದಲ್ಲಿ ನಿಂಬೆ ಬೆಳೆದು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ಆ ಮೂಲಕ ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತನ್ನು ಅಕ್ಷರಶಃ ಸತ್ಯ ಮಾಡಿದ್ದಾರೆ.

Source link

ರ‍್ಯಾಗಿಂಗ್, ಲೈಂಗಿಕ ಕಿರುಕುಳದಿಂದ ಹಿಮಾಚಲದ ವಿದ್ಯಾರ್ಥಿನಿ ಸಾವು; ಕಾಲೇಜು ಪ್ರಾಧ್ಯಾಪಕ, 3 ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲು – Kannada News | Himachal Pradesh student dies after physical assault ragging College professor 3 students booked

ಧರ್ಮಶಾಲಾ, ಜನವರಿ 2: ಹಿಮಾಚಲ ಪ್ರದೇಶದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಡಿಸೆಂಬರ್ 26ರಂದು ರ‍್ಯಾಗಿಂಗ್ (Ragging), ಲೈಂಗಿಕ ದೌರ್ಜನ್ಯ ನಡೆದಿದೆ. ಇದರಿಂದಾಗಿ ಆ ಯುವತಿ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಕಾಲೇಜು ಪ್ರಾಧ್ಯಾಪಕ ಮತ್ತು ಮೂವರು ವಿದ್ಯಾರ್ಥಿನಿಯರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಮೃತ ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಾಧ್ಯಾಪಕ ಮತ್ತು ಇತರ ಮೂವರ ವಿರುದ್ಧ ರ‍್ಯಾಗಿಂಗ್ ಮತ್ತು ಲೈಂಗಿಕ ಕಿರುಕುಳದ ಆರೋಪದ ಮೇಲೆ ಕೇಸ್ ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಮೃತ ಯುವತಿ ಕಾಲೇಜಿನಲ್ಲಿ ಎರಡನೇ ವರ್ಷದ ಡಿಗ್ರಿ ವಿದ್ಯಾರ್ಥಿನಿಯಾಗಿದ್ದಳು. ಸೆಪ್ಟೆಂಬರ್ 18ರಂದು ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಆಕೆಯನ್ನು ಥಳಿಸಿ ಬೆದರಿಕೆ ಹಾಕಿದ್ದರು. ಇದರಿಂದಾಗಿ ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು ಎಂದು ಆರೋಪಿಸಲಾಗಿದೆ. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡಿಸೆಂಬರ್ 26ರಂದು ಲುಧಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ರಾತ್ರಿ ಗಂಡನಿಲ್ಲದ ವೇಳೆ ಪ್ರೇಮಿಯನ್ನು ಮನೆಗೆ ಕರೆದು ಗುಪ್ತಾಂಗ ಕತ್ತರಿಸಿದ ಮಹಿಳೆ!

ಮೃತ ವಿದ್ಯಾರ್ಥಿನಿಯ ತಂದೆ ತಮ್ಮ ದೂರಿನಲ್ಲಿ ಮೂವರು ಹಿರಿಯ ವಿದ್ಯಾರ್ಥಿಗಳಾದ ಹರ್ಷಿತಾ, ಆಕೃತಿ ಮತ್ತು ಕೊಮೊಲಿಕಾ ಅವರು ಸೆಪ್ಟೆಂಬರ್ 18, 2025ರಂದು ತಮ್ಮ ಮಗಳನ್ನು ಥಳಿಸಿದ್ದರು. ಆ ಕಾಲೇಜು ಪ್ರಾಧ್ಯಾಪಕ ಅಶೋಕ್ ಕುಮಾರ್ ಅವರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಬಳಿಕ ಆ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಆಕೆ ಸಾವನ್ನಪ್ಪಿದರು.

ಹೊಡೆತ ಮತ್ತು ಕಿರುಕುಳದಿಂದಾಗಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಲ್ಲೆ, ಕಿರುಕುಳ, ಬೆದರಿಕೆಯ ನಂತರ ನಮ್ಮ ಮಗಳು ತೀವ್ರ ಮಾನಸಿಕ ಒತ್ತಡ ಮತ್ತು ಭಯಕ್ಕೆ ಒಳಗಾದಳು. ಇದರಿಂದಾಗಿ ಆಕೆಯ ಆರೋಗ್ಯವು ಶೀಘ್ರವಾಗಿ ಹದಗೆಟ್ಟಿತು ಎಂದು ಮೃತ ಯುವತಿಯ ತಂದೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ: ರಾಡ್​​ನಿಂದ ಹೊಡೆದು ಕೊಲೆ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತ ವಿದ್ಯಾರ್ಥಿನಿ 2024ರಲ್ಲಿ ಕಾಲೇಜಿಗೆ ದಾಖಲಾಗಿದ್ದಳು. ಆಕೆ ಕೆಲವು ವಿದ್ಯಾರ್ಥಿಗಳಿಂದ ರ‍್ಯಾಕಿಂಗ್‌ಗೆ ಒಳಗಾಗಿದ್ದಳು. ಆಕೆ ಬಿಎ ಮೊದಲ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು ಎಂದು ಬೆಳಕಿಗೆ ಬಂದಿದೆ. ಇದರಿಂದಾಗಿ ಆಗಸ್ಟ್ 21, 2025ರಂದು ಅವಳ ಹೆಸರನ್ನು ಕಾಲೇಜು ಲಿಸ್ಟ್​​ನಿಂದ ತೆಗೆದುಹಾಕಲಾಯಿತು. ಅವಳು ಸೆಪ್ಟೆಂಬರ್‌ನಲ್ಲಿ ಮತ್ತೆ ಪ್ರವೇಶ ಕೋರಿ ಕಾಲೇಜಿಗೆ ಭೇಟಿ ನೀಡಿದ್ದಳು. ಆಗ ಆಕೆ ಮರುಮೌಲ್ಯಮಾಪನದಲ್ಲಿ ಉತ್ತೀರ್ಣಳಾದರೆ ಮಾತ್ರ ಎರಡನೇ ವರ್ಷಕ್ಕೆ ಸೇರಿಸಿಕೊಳ್ಳಲಾಗುವುದು ಮತ್ತು ವಿಫಲವಾದರೆ ಅವಳು ಮೊದಲ ವರ್ಷಕ್ಕೆ ಮರು ದಾಖಲಾಗಬೇಕಾಗುತ್ತದೆ ಎಂದು ತಿಳಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಂ ಇಂಡಿಯಾಗೆ ನೂತನ ವಿದೇಶಿ ಕೋಚ್ ನೇಮಿಸಲು ಮುಂದಾದ ಬಿಸಿಸಿಐ – Kannada News | Indian Women’s Cricket Team Gets Nicolaas Lee as New Strength & Conditioning Coach

2025 ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದು ಬೀಗಿದ್ದ ಭಾರತ ಮಹಿಳಾ ತಂಡ (Indian Women’s Cricket Team) ಇದೀಗ 2026 ರಲ್ಲೂ ಮತ್ತೊಂದು ಐಸಿಸಿ ಟೂರ್ನಿಯ ಮೇಲೆ ಕಣ್ಣಿಟ್ಟಿದೆ. ವಾಸ್ತವವಾಗಿ ಈ ವರ್ಷ ಮಹಿಳೆಯರ ಟಿ20 ವಿಶ್ವಕಪ್ (T20 World Cup 2026) ಕೂಡ ನಡೆಯಲಿದೆ. ಈ ಟೂರ್ನಿಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಭಾರತ ಮಹಿಳಾ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಲುವಾಗಿ ಬಿಸಿಸಿಐ (BCCI), ತಂಡಕ್ಕೆ ನೂತನ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ನೇಮಿಸಲು ಮುಂದಾಗಿದೆ. 2026 ರ ಮಹಿಳಾ ಪ್ರೀಮಿಯರ್ ಲೀಗ್ ನಂತರ ಕೋಚ್ ನೇಮಕವಾಗಲಿದೆ ಎಂದು ವರದಿಯಾಗಿದೆ. ಅಷ್ಟಕ್ಕೂ ಈ ಹುದ್ದೆಗೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದು, ಸಧ್ಯದ ಮಾಹಿತಿಯ ಪ್ರಕಾರ, ಇಂಗ್ಲೆಂಡ್‌ ತಂಡದ ಮಾಜಿ ಅನುಭವಿ ಆಟಗಾರ್ತಿ ನಿಕೋಲಸ್ ಲೀ ಈ ಹೊಸ ಜವಾಬ್ದಾರಿಯನ್ನು ಹೊರಲಿದ್ದಾರೆ.

ಟೀಂ ಇಂಡಿಯಾಗೆ ಹೊಸ ಕೋಚ್

ಮೇಲೆ ಹೇಳಿದಂತೆ ಬಿಸಿಸಿಐ, ಇಂಗ್ಲೆಂಡ್‌ನ ನಿಕೋಲಸ್ ಲೀ ಅವರನ್ನು ತಂಡದ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ಆಗಿ ನೇಮಿಸಲು ನಿರ್ಧರಿಸಿದೆ. 2026 ರ ಮಹಿಳಾ ಪ್ರೀಮಿಯರ್ ಲೀಗ್ ಮುಗಿದ ನಂತರ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ವರ್ಷದ WPL ಜನವರಿ 9 ರಂದು ಪ್ರಾರಂಭವಾಗಿ ಫೆಬ್ರವರಿ 5 ರವರೆಗೆ ನಡೆಯಲಿದೆ. ಇದಾದ ತಕ್ಷಣ, ಭಾರತೀಯ ಮಹಿಳಾ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ, ಅಲ್ಲಿ ಫೆಬ್ರವರಿ 15 ರಿಂದ ಮಾರ್ಚ್ 9 ರವರೆಗೆ ವಿವಿಧ ಸ್ವರೂಪಗಳಲ್ಲಿ ಸರಣಿಗಳು ನಡೆಯಲಿವೆ. ಪಿಟಿಐ ವರದಿ ಮಾಡಿರುವ ಪ್ರಕಾರ, ‘WPL ನಂತರ, ಲೀ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹೊಸ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಾಕಷ್ಟು ಅನುಭವವಿರುವ ನಿಕೋಲಸ್ ಲೀ

ನಿಕೋಲಸ್ ಲೀ ಕ್ರಿಕೆಟ್​ನಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ. ಅವರು ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದು, 13 ಪಂದ್ಯಗಳಲ್ಲಿ 490 ರನ್ ಗಳಿಸಿದ್ದಾರೆ. ಹಾಗೆಯೇ ಇತ್ತೀಚೆಗೆ ಯುಎಇಯ ಐಎಲ್‌ಟಿ 20 ಲೀಗ್‌ನಲ್ಲಿ ಗಲ್ಫ್ ಜೈಂಟ್ಸ್ ತಂಡದೊಂದಿಗೆ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು, ಅವರು ಜನವರಿ 2024 ರಿಂದ ಡಿಸೆಂಬರ್ 2025 ರವರೆಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ತರಬೇತುದಾರರಾಗಿ ಸೇವೆ ಸಲ್ಲಿಸಿದರು. ಹಾಗೆಯೇ ಮಾರ್ಚ್ 2020 ರಿಂದ ಜನವರಿ 2024 ರವರೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ನಂತರ ಅಕ್ಟೋಬರ್ 2016 ರಿಂದ ಮಾರ್ಚ್ 2020 ರವರೆಗೆ ಶ್ರೀಲಂಕಾ ಪುರುಷರ ತಂಡದೊಂದಿಗೂ ಕೆಲಸ ಮಾಡಿದ್ದರು.

U19 World Cup: ಅಂಡರ್-19 ವಿಶ್ವಕಪ್​ಗೆ 15 ಸದಸ್ಯರ ಭಾರತ ತಂಡ ಪ್ರಕಟ

ದೇಶೀಯ ಮಟ್ಟದಲ್ಲಿ, ಲೀ ಮಾರ್ಚ್ 2012 ರಿಂದ ಸೆಪ್ಟೆಂಬರ್ 2016 ರವರೆಗೆ ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್‌ನಲ್ಲಿ ಪ್ರಮುಖ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮೊದಲು, ಜನವರಿ 2010 ರಿಂದ ಮಾರ್ಚ್ 2012 ರವರೆಗೆ ಸಹಾಯಕ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಆಸ್ಟ್ರೇಲಿಯಾದ ಸವಾಲಿನ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಲೀ ಅವರ ನೇಮಕಾತಿ ಭಾರತೀಯ ಮಹಿಳಾ ತಂಡಕ್ಕೆ ಮಹತ್ವದ್ದಾಗಿದೆ. ಅವರ ಪರಿಣತಿಯು ತಂಡದ ಫಿಟ್‌ನೆಸ್ ಮತ್ತು ಪ್ರದರ್ಶನಕ್ಕೆ ಹೊಸ ಶಕ್ತಿಯನ್ನು ತುಂಬುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು – Kannada News | Kannada actor Vajramuni Life Story Death Reason and other details

ಕನ್ನಡ ಚಿತ್ರರಂಗದಲ್ಲಿ (Kannada Film Industry) ನಟ ವಜ್ರಮುನಿ ಅವರು ತಮ್ಮದೇ ಛಾಪು ಮೂಡಿಸಿದ್ದರು. ಬಹುಬೇಡಿಕೆಯ ನಟನಾಗಿ ಅವರು ಮಿಂಚಿದ್ದರು. ಹೀರೋಗಳಿಗಿಂತ ವಜ್ರಮನಿ ಅವರೇ ಹೈಲೈಟ್ ಆಗುತ್ತಿದ್ದ ದಿನಗಳು ಅವು. ಸಿನಿಮಾದಲ್ಲಿ ವಿಲನ್ ಆದರೂ ರಿಯಲ್ ಲೈಫ್​​ನಲ್ಲಿ ವಜ್ರಮುನಿ ಅವರು ಮೃದು ಸ್ವಭಾವದ ವ್ಯಕ್ತಿ ಆಗಿದ್ದರು. ನಟನಾಗಿ ಫೇಮಸ್ ಆದ ಅವರು ನಿರ್ಮಾಪಕನಾಗಿಯೂ ಅದೃಷ್ಟಪರೀಕ್ಷೆ ಮಾಡಿಕೊಂಡರು. ನಿರ್ಮಾಪಕನಾದ ಬಳಿಕ ಅವರು ಸಾಲದ ಸುಳಿಗೆ ಸಿಲುಕಿದರು. ನಂತರದ ದಿನಗಳಲ್ಲಿ ವಜ್ರಮುನಿ (Vajramuni) ಅವರಿಗೆ ಆರೋಗ್ಯ ಕೈಕೊಟ್ಟಿತು. ಅದರಿಂದಾಗಿ ಅವರ ಕೊನೆಯ ದಿನಗಳು ನರಕ ಸದೃಶ್ಯ ಆಗಿದ್ದವು. ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡವು. ಶುಗರ್ ಮತ್ತು ರಕ್ತಹೀನತೆಯಿಂದ ಕಣ್ಣು ಕಾಣದಂತಾಯಿತು. ಕಿವಿ ಕೇಳಿಸುತ್ತಿರಲಿಲ್ಲ. ಅನೇಕ ಕಾಯಿಲೆಗಳಿಂದ ಅವರು 2006ರ ಜನವರಿ 5ರಂದು ನಿಧನರಾದರು. ಅವರು ಇಹಲೋಕ ತ್ಯಜಿಸಿ 20 ವರ್ಷ ಕಳೆದಿದೆ. ವಜ್ರಮುನಿ ರೀತಿಯ ಮತ್ತೋರ್ವ ಖಳನಟ ಕನ್ನಡ ಚಿತ್ರರಂಗದಲ್ಲಿ ಬರಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಳ್ಳಾರಿ ಗಲಭೆಗೆ ಎಸ್ಪಿ ತಲೆದಂಡ: ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಪವನ್ ನೆಜ್ಜೂರು ಸಸ್ಪೆಂಡ್! – Kannada News | Newly appointed SP Pavan Nejjuru suspended In Bellary violence

ಬಳ್ಳಾರಿ, (ಜನವರಿ 02): ಹೊಸ ವರ್ಷ ದಿನದ ರಾತ್ರಿ ಬಳ್ಳಾರಿಯಲ್ಲಿ (Bellary) ನಡೆದ ಫೈರಿಂಗ್​ನಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿ ಆಗಿದ್ದಾನೆ. ಕಾಂಗ್ರೆಸ್​ ಶಾಸಕ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಬರೀ ಟ್ವೆಂಟಿ ಬೈ ಟ್ವೆಂಟಿ ಬ್ಯಾನರ್, ಇಡೀ ಜಿಲ್ಲೆಯಲ್ಲಿ ಸಂಘರ್ಷವನ್ನೇ ಸೃಷ್ಟಿಸಿದೆ. ಕಲ್ಲು ತೂರಾಟ, ಖಾರದು ಪುಡಿ ಎರೆಚಾಟ, ಬಡಿದಾಟ ನಡೆದಿದೆ. ಸಾಲದಕ್ಕೆ ಫೈರಿಂಗ್ ಸಹ ಮಾಡಲಾಗಿದೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದನ್ನು ರಾಜ್ಯ ಸರ್ಕಾರವೂ ಸಹ ಗಂಭೀರವಾಗಿ ಪರಿಗಣಿಸಿದೆ. ಇದರಿಂದ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನ ಅಮಾನತು ಮಾಡಲಾಗಿದೆ. ರಾಜಕೀಯ ಕಿತ್ತಾಟದಿಂದ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಘಟನೆಯನ್ನ ಸರಿಯಾಗಿ ನಿಭಾಯಿಸಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಎಂದು ಡಿಜಿ & ಐಜಿಪಿ ವರದಿ ನೀಡಿದೆ. ಹೀಗಾಗಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಈ ಕ್ರಮಕೈಗೊಂಡಿದೆ. ನಿನ್ನೆ(ಜ.1) ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ (Pavan Nejjuru) ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಈಗ ಈಗ ಬ್ಯಾನರ್‌ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಲಾಗಿದೆ.

ಇದನ್ನೂ ನೋಡಿ: ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?

ಒಂದೇ ದಿನದಲ್ಲಿ ಸಸ್ಪೆಂಡ್!

ವಾಲ್ಮೀಕಿ ಪುತ್ತಳಿ ಅನಾವರಣ ನಿಮಿತ್ತ ಬಳ್ಳಾರಿಯಲ್ಲಿ ಬ್ಯಾನರ್ ಹಾಕುವ ಸಂಬಂಧ ಶಾಸಕ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆಯಾಗಿದ್ದು, ಪೊಲೀಸರು ಅಶ್ರುವಾಯು ಮೂಲಕ ಗಲಾಟೆಯನ್ನು ಹತೋಟಿಗೆ ತಂದಿದ್ದಾರೆ. ಆದರೂ ದೊಡ್ಡ ಮಟ್ಟದ ಗಲಾಟೆಯಾಗಿದ್ದು, ಒಂದು ಹೆಣ ಬಿದ್ದಿದೆ. ಇದರಿಂದ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಸರ್ಕಾರಕ್ಕೆ ಅಮಾನತ್ತುಗೊಳಿಸುವಂತೆ ವರದಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ, ಬಳ್ಳಾರಿ ಎಸ್ಪಿ ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಆಗಿದ್ದ ಪವನ್ ನೆಜ್ಜೂರು ಅವರನ್ನು ಸರ್ಕಾರ ಬಳ್ಳಾರಿ ಎಸ್ಪಿಯಾಗಿ ವರ್ಗಾವಣೆ ಮಾಡಿತ್ತು. ಅದರಂತೆ ನಿನ್ನೆ ಅಷ್ಟೇ ಪವನ್ ನೆಜ್ಜೂರು ಅವರು ಅಧಿಕಾರ ವಹಿಸಿಕೊಂಡಿದ್ದರು. ಆದ್ರೆ, ದುರದೃಷ್ಟವಶಾತ್ ಅಂದೇ ಈ ಗಲಭೆ ನಡೆದಿದ್ದು, ಒಂದೇ ದಿನದಲ್ಲಿ ಪವನ್ ನೆಜ್ಜೂರು ಸಸ್ಪೆಂಡ್ ಆಗಿದ್ದಾರೆ.

ಸತ್ಯಶೋಧನೆಗೆ ನಿಯೋಗ ರಚನೆ

ಬಳ್ಳಾರಿ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಸಚಿವ ಸಂಪುಟದಲ್ಲೂ ಸಹ ಚರ್ಚೆಯಾಗಿದೆ. ಇದೀಗ ಸರ್ಕಾರ, ಪರಿಸ್ಥಿತಿ ಅವಲೋಕಿಸಲು ನಿಯೋಗ ಕಳುಹಿಸಲು ಮುಂದಾಗಿದ್ದು,ಸಂಬಂಧ ನಿಯೋಗ ನೇಮಕ ತೀರ್ಮಾನಿಸಿದೆ. ಇನ್ನೊಂದೆಡೆ ಪಕ್ಷದ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸತ್ಯಶೋಧನಾ ಸಮಿತಿ ರಚನೆ ಮಾಡಿದ್ದಾರೆ. H.M.ರೇವಣ್ಣ, ಜಯಪ್ರಕಾಶ್ ಹೆಗಡೆ, ಟಿ.ರಘುಮೂರ್ತಿ, ಕುಮಾರ್ ನಾಯಕ್, ಜಕ್ಕಪ್ಪನವರ್ ಬಸವನಗೌಡ ಬಾದರ್ಲಿ ಒಳಗೊಂಡ ಸಮಿತಿ ರಚನೆ ಮಾಡಿದ್ದು, ಸ್ಥಳಕ್ಕೆ ತೆರಳಿ ವಾಸ್ತವ ಸ್ಥಿತಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link