All posts by nagaraj11081993

ಪರ್ಫ್ಯೂಮ್, ಸ್ಮಶಾನ ಮೌನ, ಅಸ್ಥಿಪಂಜರ, ಮಗಳ ಶವದೊಂದಿಗೆ ತಂದೆಯ ವಾಸ, ಸಾವು ಮರೆಮಾಚಿದ್ದು ಹೇಗೆ?

ಪರ್ಫ್ಯೂಮ್, ಸ್ಮಶಾನ ಮೌನ, ಅಸ್ಥಿಪಂಜರ, ಮಗಳ ಶವದೊಂದಿಗೆ ತಂದೆಯ ವಾಸ, ಸಾವು ಮರೆಮಾಚಿದ್ದು ಹೇಗೆ?

ಮೀರತ್, ಏಪ್ರಿಲ್ 13: ಮೀರತ್‌ನ ಬೀದಿಗಳಲ್ಲಿ ಒಂದು ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ತಿಂಗಳುಗಳಿಂದ ಬಾಗಿಲು ಹಾಕಿದ್ದ ಮನೆಯೊಳಗೆ ಮಗಳ ಹೆಣದೊಂದಿಗೆ ತಂದೆ(Father)ಯೊಬ್ಬರು ವಾಸವಿದ್ದರು ಎಂಬ ಸತ್ಯ ಬಯಲಾದಾಗ ಪೊಲೀಸರೇ ಬೆಚ್ಚಿಬಿದ್ದರು. 34 ವರ್ಷದ ಪ್ರಿಯಾಂಕಾ ಎಂಬಾಕೆಯ ದೇಹವು ಈಗ ಬಹುತೇಕ ಅಸ್ಥಿಪಂಜರವಾಗಿ ಮಾರ್ಪಟ್ಟಿದೆ.

ನಾಲ್ಕು ತಿಂಗಳ ಮೌನ ಮತ್ತು ಸುಳ್ಳಿನ ಕತೆ
ಪ್ರಿಯಾಂಕಾ ಮತ್ತು ಆಕೆಯ ತಂದೆ ಉದಯ್ ಭಾನ್ ಬಿಸ್ವಾಸ್ ಕಳೆದ ನಾಲ್ಕು ತಿಂಗಳಿನಿಂದ ಅಕ್ಕಪಕ್ಕದ ಮನೆಯವರಿಗೆ ಕಾಣಿಸಿಕೊಂಡಿರಲಿಲ್ಲ. ಮನೆಗೆ ಬೀಗ ಹಾಕಲಾಗಿತ್ತು. ಆತಂಕಗೊಂಡ ಸಂಬಂಧಿಕರು ಹುಡುಕಾಟ ನಡೆಸಿದಾಗ, ಉದಯ್ ಭಾನ್ ಬೇಗಂ ಬಾಗ್‌ನ ಚಹಾ ಅಂಗಡಿಯೊಂದರ ಬಳಿ ಸಿಕ್ಕಿದ್ದರು.

ಮಗಳ ಬಗ್ಗೆ ಕೇಳಿದಾಗ, ಆಕೆಗೆ ಹುಷಾರಿಲ್ಲ, ಡೆಹ್ರಾಡೂನ್‌ನ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಉದಯ್ ಭಾನ್ ಸಬೂಬು ನೀಡಿದ್ದರು. ಸಂಬಂಧಿಕರು ಬಿಡದೇ ವಿಚಾರಿಸಿದಾಗ, ಆಕೆ ಸತ್ತು ಹೋಗಿದ್ದಾಳೆ, ಅವಳ ದೇಹ ಮನೆಯೊಳಗೇ ಇದೆ ಎಂದು ಅವರು ಮೌನ ಮುರಿದಿದ್ದ.

ಪೊಲೀಸರು ಮನೆಯ ಬೀಗ ಒಡೆದು ಒಳಗೆ ಹೋದಾಗ ಕಂಡ ದೃಶ್ಯ ಅತ್ಯಂತ ಭಯಾನಕವಾಗಿತ್ತು. ಮನೆಯ ತುಂಬ ಹಳೆಯ ಕಾಗದಗಳು ಮತ್ತು ಕಸ ತುಂಬಿತ್ತು. ಅದರ ನಡುವೆ ಪ್ರಿಯಾಂಕಾ ಅವರ ಶವವು ಕೊಳೆತು ಅಸ್ಥಿಪಂಜರವಾಗಿ ಮಾರ್ಪಟ್ಟಿತ್ತು. ದೇಹ ಕೊಳೆಯುವಾಗ ವಾಸನೆ ಬರದಂತೆ ನಾನು ಮನೆಯ ತುಂಬೆಲ್ಲಾ ಸುಗಂಧ ದ್ರವ್ಯ (Perfume) ಸಿಂಪಡಿಸುತ್ತಿದ್ದೆ ಎಂದು ತಂದೆ ಹೇಳಿಕೆ ನೀಡಿರುವುದು ಕೇಳುಗರನ್ನು ನಡುಗಿಸುವಂತಿದೆ.

ಮಗಳು ಸತ್ತ ನಂತರವೂ ಸುಮಾರು ನಾಲ್ಕು ದಿನಗಳ ಕಾಲ ಉದಯ್ ಭಾನ್ ಅದೇ ಹೆಣದ ಪಕ್ಕದಲ್ಲೇ ಮಲಗುತ್ತಿದ್ದರು ಎಂದು ತಿಳಿಸಿದ್ದಾರೆ. ಪ್ರಿಯಾಂಕಾ ಅವರ ಸೋದರಸಂಬಂಧಿ ಬಿಸ್ವಜಿತ್ ಬಿಸ್ವಾಸ್ ಅವರ ಪ್ರಕಾರ, ಈ ಕುಟುಂಬದ ದುರಂತಕ್ಕೆ ಹಳೆಯ ನೋವಿನ ಇತಿಹಾಸವಿದೆ.2013 ರಲ್ಲಿ ಪ್ರಿಯಾಂಕಾ ಅವರ ತಾಯಿ ಕೂಡ ಇದೇ  ರೀತಿಯಲ್ಲಿ ನಿಧನರಾಗಿದ್ದರು.

ಮತ್ತಷ್ಟು ಓದಿ: ಮಹಾರಾಷ್ಟ್ರ ಪೊಲೀಸ್ ಪಡೆಗೆ ಸೇರ್ಪಡೆಯಾದ ಖುಷಿ, ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು

ತಾಯಿಯ ಸಾವಿನ ನಂತರ ತಂದೆ ಮತ್ತು ಮಗಳು ಇಬ್ಬರೂ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಯಾರೊಂದಿಗೂ ಮಾತನಾಡದೆ ಏಕಾಂಗಿಯಾಗಿ ವಾಸಿಸುತ್ತಿದ್ದರು. ಪ್ರಿಯಾಂಕಾ ದೈಹಿಕ ಮತ್ತು ಮಾನಸಿಕವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರೂ, ತಂದೆ ಯಾರ ಸಹಾಯವನ್ನೂ ಪಡೆಯಲು ಇಷ್ಟಪಡುತ್ತಿರಲಿಲ್ಲ.

ಸದ್ಯ ಪ್ರಿಯಾಂಕಾ ಅವರ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆಯೇ ಅಥವಾ ಇದರ ಹಿಂದೆ ಬೇರೆ ಏನಾದರೂ ರಹಸ್ಯವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಗೆ ಸರಿಯಾದ ಚಿಕಿತ್ಸೆ ಕೊಡಿಸದ ತಂದೆಯ ಮೌನ ಮತ್ತು ನಾಲ್ಕು ತಿಂಗಳ ಕಾಲ ಸಾವನ್ನು ಮರೆಮಾಚಿದ್ದು ಈಗ ದೊಡ್ಡ ಪ್ರಶ್ನೆಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅನಿಲ್‌ನನ್ನು ‘ಅಕ್ಷತಾ’ ಮಾಡಿದ್ದ ಮಂಗಳಮುಖಿಯರು: ಮಂಗಳೂರು-ಕೇರಳದಲ್ಲಿ ಸೆಕ್ಸ್ ವರ್ಕ್​​ಗೆ ಬಳಕೆ, ಲಿಂಗ ಬದಲಾವಣೆಗೂ ಸ್ಕೆಚ್

ಮೈಸೂರು, ಏ.12: ಜಿಲ್ಲೆಯಲ್ಲಿ (Mysuru Crime) ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಇದೀಗ ಈ ಸುದ್ದಿ ಎಲ್ಲ ಕಡೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಬಸ್ಸಿಗಾಗಿ ಕಾಯುತ್ತಿದ್ದ ಯುವಕನೋರ್ವನನ್ನು ಅಪಹರಿಸಿ, ಆತನಿಗೆ ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ, ಹಣದ ದಂಧೆ ಹಾಗೂ ಸೆಕ್ಸ್ ವರ್ಕ್​​ಗೆ ಬಳಸಿಕೊಂಡಿರುವ ಆಘಾತಕಾರಿ ಆರೋಪವೊಂದು ಕೇಳಿ ಬಂದಿದೆ. ನಂಜನಗೂಡಿನ ತ್ಯಾಗರಾಜ ಕಾಲೋನಿಯ ಅನಿಲ್ ಕುಮಾರ್ ಈ ಕರಾಳ ದಂಧೆಯ ಬಲಿಪಶುವಾಗಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಪ್ರಕರಣ ಲಷ್ಕರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅನಿಲ್ ಕುಮಾರ್‌ಗೆ ಮಂಗಳಮುಖಿ ಅನಿತಾ ಮತ್ತು ತಂಡ ಪರಿಚಯವಾಗಿತ್ತು. ನಂತರ ಆತನನ್ನು ಬಲವಂತವಾಗಿ ಅಪಹರಿಸಿದ ತಂಡ ಮಂಗಳೂರಿಗೆ ಕರೆದೊಯ್ದಿತ್ತು. ಅಲ್ಲಿ ಆತನಿಗೆ ಬಲವಂತವಾಗಿ ಸೀರೆ, ನೈಟಿ ತೊಡಿಸಿ, ಕಿವಿ ಓಲೆ, ಮೂಗುಬಟ್ಟು ಹಾಕಿಸಿ ‘ಅಕ್ಷತಾ’ ಎಂದು ಹೆಸರಿಟ್ಟು ಮಂಗಳಮುಖಿಯಾಗಿ ವೇಷ ಬದಲಿಸಿದ್ದರು ಎಂದು ಆರೋಪಿಸಲಾಗಿದೆ.

ಯುವಕ ಅನಿಲ್‌ನನ್ನು ಬೀದಿಗಳಲ್ಲಿ ಅಂಗಡಿಗಳ ಮುಂದೆ ನಿಲ್ಲಿಸಿ ಪ್ರತಿದಿನ 2 ರಿಂದ 3 ಸಾವಿರ ರೂಪಾಯಿ ಕಲೆಕ್ಷನ್ ಮಾಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಮಂಗಳೂರು ಮತ್ತು ಕೇರಳದ ವಿವಿಧ ಭಾಗಗಳಿಗೆ ಕಳುಹಿಸಿ ಸೆಕ್ಸ್ ವರ್ಕ್​​ಗೆ ಬಳಸಿಕೊಂಡಿದ್ದಾರೆ ಎಂದು ಅನಿಲ್ ದೂರಿನಲ್ಲಿ ಆರೋಪಿಸಿದ್ದಾರೆ. ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳಮುಖಿ ಎಂದು ಸರ್ಟಿಫಿಕೇಟ್ ಕೊಡಿಸಲಾಗಿದೆ. ಮುಂಬೈಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಲಿಂಗ ಬದಲಾವಣೆ ಮಾಡಲು ಈ ತಂಡ ಸ್ಕೆಚ್ ಹಾಕಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಆರೋಪಿ ಮುಸ್ತಾಫಾಗೆ ಅಂತರಾಜ್ಯ ಮಟ್ಕಾ ಬುಕ್ಕಿಗಳ ಲಿಂಕ್

ನಂತರ ಇದರಿಂದ ನೊಂದು ಇವರ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿದ ಅನಿಲ್, ತಾನು ದುಡಿದ 3 ಲಕ್ಷ ರೂಪಾಯಿ ಕೇಳಿದಾಗ ಅನಿತಾ ಉಲ್ಟಾ ಹೊಡೆದಿದ್ದಾಳೆ. ತನ್ನ ಮನೆಯಿಂದ 5 ಲಕ್ಷ ರೂಪಾಯಿ ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದಾನೆ ಎಂದು ಸುಳ್ಳು ಕೇಸ್ ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ನಂಜನಗೂಡು ಸೇರಿದರೆ, ಅಲ್ಲಿಗೂ ಮಂಗಳಮುಖಿಯರನ್ನು ಕಳಿಸಿ ದಂಧೆಗೆ ಬರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಅನಿಲ್ ಅಳಲು ತೋಡಿಕೊಂಡಿದ್ದಾರೆ. ಸುಮಾರು ಶೇ. 90ರಷ್ಟು ದೃಷ್ಟಿ ದೋಷ ಹೊಂದಿರುವ ಅನಿಲ್ ಕುಮಾರ್, ನಂಜನಗೂಡು ಪೊಲೀಸರು ಸ್ಪಂದಿಸದ ಹಿನ್ನೆಲೆಯಲ್ಲಿ ಮೈಸೂರಿನ ಲಷ್ಕರ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಇರಾನ್ ಮತ್ತೆ ಮಾತುಕತೆಗೆ ಬರಲಿ, ಬರ್ದೇ ಇರ್ಲಿ ಡೋಂಟ್ ಕೇರ್: ಡೊನಾಲ್ಡ್​ ಟ್ರಂಪ್

ವಾಷಿಂಗ್ಟನ್, ಏಪ್ರಿಲ್ 13: ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ ಅಮೆರಿಕ-ಇರಾನ್ ಶಾಂತಿ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೆ ಗುಡುಗಿದ್ದಾರೆ. ಇರಾನ್ ಮಾತುಕತೆಗೆ ಮರಳುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನನಗೆ ಕಿಂಚಿತ್ತೂ ಕಳವಳವಿಲ್ಲ ಎಂದು ಹೇಳಿದ್ದಾರೆ. ಫ್ಲೋರಿಡಾದಿಂದ ಹಿಂದಿರುಗಿದ ನಂತರ ಜಂಟಿ ಬೇಸ್ ಆಂಡ್ರ್ಯೂಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅಮೆರಿಕದ ಹಿತಾಸಕ್ತಿಯೇ ತಮಗೆ ಮುಖ್ಯ ಎಂದು ಸ್ಪಷ್ಟಪಡಿಸಿದರು.

ಇರಾನ್ ಮಾತುಕತೆಯ ಮೇಜಿಗೆ ಮರಳುತ್ತದೆಯೋ ಇಲ್ಲವೋ ಎಂಬುದು ನನಗೆ ಮುಖ್ಯವಲ್ಲ. ಅವರು ಬರದಿದ್ದರೆ ನನಗೇನು ನಷ್ಟವಿಲ್ಲ, ಏನೇ ಆದರೂ ಅಂತಿಮವಾಗಿ ನಾವೇ ಗೆಲ್ಲುತ್ತೇವೆ ಎಂದು ಅವರು ಪ್ರತಿಪಾದಿಸಿದರು.

ಇಸ್ಲಾಮಾಬಾದ್‌ನಲ್ಲಿ ನಡೆದ 21 ಗಂಟೆಗಳ ಮಾತುಕತೆಯಲ್ಲಿ ಇರಾನ್ ಇನ್ನೂ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಆಸಕ್ತಿ ಹೊಂದಿದೆ ಎಂಬುದು ಸಾಬೀತಾಗಿದೆ. ಆದರೆ, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಹೊಂದುವುದಿಲ್ಲ ಎಂದು ಟ್ರಂಪ್ ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದ ನಿಯೋಗವು ಮೊಹಮ್ಮದ್ ಬಘರ್ ಗಾಲಿಬಾಫ್ ನೇತೃತ್ವದ ಇರಾನಿನ ತಂಡದೊಂದಿಗೆ ನಡೆಸಿದ ಸುದೀರ್ಘ ಚರ್ಚೆಯ ವಿವರಗಳು ಈಗ ಹೊರಬರುತ್ತಿವೆ. ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಈಗಾಗಲೇ ಕದನ ವಿರಾಮದ ಮೇಲೆ ಭಾರಿ ಒತ್ತಡ ಹೇರಿವೆ.

ಮತ್ತಷ್ಟು ಓದಿ: ಇರಾನ್ ಮುಗಿಸಲು ಒಂದೇ ಒಂದು ರಾತ್ರಿ ಸಾಕು, ಗಡುವು ಮುಗಿಯುವ ಮುನ್ನವೇ ಇರಾನ್​ಗೆ ಟ್ರಂಪ್ ಬೆದರಿಕೆ

ಮಾತುಕತೆಗಳ ಕುಸಿತವು ಕೇವಲ ರಾಜತಾಂತ್ರಿಕ ವೈಫಲ್ಯವಲ್ಲ,  ಇದು ಜಾಗತಿಕ ಆರ್ಥಿಕತೆಯ ಮೇಲೂ ಕರಾಳ ನೆರಳು ಬೀರಿದೆ. ಈ ಜಲಸಂಧಿಯನ್ನು ಮತ್ತೆ ತೆರೆಯುವ ಮೂಲಕ ತೈಲ ಬೆಲೆಗಳನ್ನು ಸ್ಥಿರಗೊಳಿಸಬಹುದು ಎಂಬ ಭರವಸೆ ಈಗ ಮಸುಕಾಗಿದೆ. ಅಮೆರಿಕವು ಇರಾನ್ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತೆ ಯಾವಾಗ ಆರಂಭಿಸಬಹುದು ಎಂಬ ಅನಿಶ್ಚಿತತೆ ಈಗ ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿದೆ.

ಇನ್ನೊಂದೆಡೆ, ಇರಾನ್ ಅಧ್ಯಕ್ಷರು ತಮ್ಮ ದೇಶವು ಸಮತೋಲಿತ ಮತ್ತು ನ್ಯಾಯಯುತ ಒಪ್ಪಂದಕ್ಕೆ ಮಾತ್ರ ಸಿದ್ಧವಾಗಿದೆ ಎಂದು ಹೇಳುವ ಮೂಲಕ ಅಮೆರಿಕದ ಷರತ್ತುಗಳನ್ನು ತಳ್ಳಿಹಾಕಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಮತ್ತು ಇರಾನ್‌ನ ಪಟ್ಟು ಸದ್ಯಕ್ಕೆ ಯಾವುದೇ ಶಾಂತಿಯ ಮುನ್ಸೂಚನೆ ಕೊಡುತ್ತಿಲ್ಲ, ಎರಡು ವಾರಗಳ ಈ ದುರ್ಬಲ ಕದನ ವಿರಾಮವು ಶೀಘ್ರದಲ್ಲೇ ದೊಡ್ಡ ಮಟ್ಟದ ಯುದ್ಧಕ್ಕೆ ದಾರಿ ಮಾಡಿಕೊಡುತ್ತದೆಯೇ ಎಂಬುದು ಈಗಿನ ದೊಡ್ಡ ಪ್ರಶ್ನೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Hardik Pandya: ನನಗೆ ಧೈರ್ಯ ಸಿಕ್ಕಿದೆ, ತಂಡದಲ್ಲಿ ಬದಲಾವಣೆ ಮಾಡ್ತೀನಿ ಅಷ್ಟೇ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ತಂಡ ಸೋಲನುಭವಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್​ಗಳಲ್ಲಿ 240 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 222 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಹಾರ್ದಿಕ್ ಪಾಂಡ್ಯ ಪಡೆ 18 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪಂದ್ಯದ ಆರಂಭಿಕ 6 ಓವರ್‌ಗಳಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿದೆ. ನಾವು ಪಂದ್ಯವನ್ನು ಮುನ್ನಡೆಸುವ ಬದಲು, ಎದುರಾಳಿ ನೀಡಿದ ಸವಾಲನ್ನು ಬೆನ್ನಟ್ಟುವ  ಪರಿಸ್ಥಿತಿಯಲ್ಲೇ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪವರ್‌ಪ್ಲೇನಲ್ಲಿ ಹೆಚ್ಚಿನ ವಿಕೆಟ್ ಕಳೆದುಕೊಳ್ಳುವುದು ಮತ್ತು ಬೌಲಿಂಗ್‌ನಲ್ಲಿ ರನ್ ಬಿಟ್ಟುಕೊಡುವುದು ತಂಡಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಇದು ಇಡೀ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಟಾಸ್ ಗೆದ್ದ ತಂಡಗಳು ಚೇಸಿಂಗ್ ಆಯ್ದುಕೊಳ್ಳುತ್ತವೆ. ಆದರೆ ಮುಂಬೈ ಇಂಡಿಯನ್ಸ್​ ವಿಷಯದಲ್ಲಿ ಈ ತಂತ್ರ ವರ್ಕ್​ ಆಗುತ್ತಿಲ್ಲ. ನಾವು ಕೆಲವು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದೇವೆ, ಆದರೆ ಫಲಿತಾಂಶ ನಮಗೆ ಪೂರಕವಾಗಿಲ್ಲ. ಹೀಗಾಗಿ ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆಯ ಬಗ್ಗೆ ನಾವು ಮರುಚಿಂತನೆ ಮಾಡಬೇಕಿದೆ ಎಂದು ಹಾರ್ದಿಕ್ ಹೇಳಿದ್ದಾರೆ.

ಈ  ಸೋಲಿನ ನಡುವೆಯೂ ಹಾರ್ದಿಕ್ ಪಾಂಡ್ಯ ಅವರಿಗೆ ಶರ್ಫೇನ್ ರದರ್‌ಫೋರ್ಡ್ ಅವರ ಬ್ಯಾಟಿಂಗ್ ಪ್ರದರ್ಶನ ಸಮಾಧಾನ ತಂದಿದೆ. ಅವರ ಸ್ಫೋಟಕ ಬ್ಯಾಟಿಂಗ್ ಶೈಲಿಯು ಮಧ್ಯಮ ಕ್ರಮಾಂಕಕ್ಕೆ ಆನೆಬಲ ನೀಡಿದೆ. ಇದು ಮುಂದಿನ ಪಂದ್ಯಗಳಲ್ಲಿ ತಂಡದ ಸಂಯೋಜನೆಯಲ್ಲಿ  ಧೈರ್ಯವಾಗಿ ಬದಲಾವಣೆ ಮಾಡಲು ನಾಯಕನಿಗೆ ಆತ್ಮವಿಶ್ವಾಸ ನೀಡಿದೆ.  ಈ ಮೂಲಕ ಮುಂದಿನ ಮ್ಯಾಚ್​ನಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಮಾಡ್ತೀನಿ ಎಂದು ಹಾರ್ದಿಕ್ ಪಾಂಡ್ಯ ಒತ್ತಿ ಹೇಳಿದ್ದಾರೆ.

ಸದ್ಯ ನಾಲ್ಕು ಮ್ಯಾಚ್​ಗಳಲ್ಲಿ ಮೂರು ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೆಲವು ದಿನಗಳ ಬಿಡುವು ಸಿಕ್ಕಿದೆ. ಈ ಸಮಯದಲ್ಲಿ ತಂಡವು ತನ್ನ ತಪ್ಪುಗಳನ್ನು ತಿದ್ದಿಕೊಂಡು, ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ. ನಾವು ಕೇವಲ ಕ್ರಿಕೆಟ್ ಆಡುವುದಷ್ಟೇ ಅಲ್ಲ, ಉತ್ತಮವಾಗಿ ಆಡಬೇಕಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಸ್ ಗೇಲ್​ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ

ಈ ಮೂಲಕ ಮುಂದಿನ ಮ್ಯಾಚ್​ನಲ್ಲಿ ಅತ್ಯುತ್ತಮ ಪ್ಲೇಯಿಂಗ್ ಇಲೆವೆನ್ ರೂಪಿಸಿ ಕಂಬ್ಯಾಕ್ ಮಾಡುವ ಭರವಸೆ ನೀಡಿದ್ದಾರೆ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್ ಪಾಂಡ್ಯ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪಡೆಯನ್ನು ಮಹತ್ವದ ಬದಲಾವಣೆ ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.

 

Source link

ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಆರೋಪಿ ಮುಸ್ತಾಫಾಗೆ ಅಂತರಾಜ್ಯ ಮಟ್ಕಾ ಬುಕ್ಕಿಗಳ ಲಿಂಕ್

ಕೊಪ್ಪಳ, ಏಪ್ರಿಲ್ 13: ಕೊಪ್ಪಳ ಜಿಲ್ಲೆಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಮುಸ್ತಾಫಾ ಖಾದ್ರಿ ವಿರುದ್ಧದ ಲವ್ ಜಿಹಾದ್ (Love Jihad Case) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರೋಪಿ ಮುಸ್ತಾಫಾಗೆ ಗೋವಾ ಮತ್ತು ಮುಂಬೈನ ಮಟ್ಕಾ ಬುಕ್ಕಿಗಳೊಂದಿಗೆ ಸಂಪರ್ಕವಿದ್ದು, ಅವರಿಂದಲೇ ಹಣದ ನೆರವು ಸಿಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆಯೂ ಇದೀಗ ವಿಶ್ವ ಹಿಂದೂ ಪರಿಷತ್ (VHP) ಪೊಲೀಸರಿಗೆ ದೂರು ನೀಡಿದೆ.

ಮಟ್ಕಾ ಬುಕ್ಕಿಗಳ ಹಣದಲ್ಲಿ ಹೈಫೈ ಜೀವನ

ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ನಿವಾಸಿಯಾಗಿರುವ ಮುಸ್ತಾಫಾ ಖಾದ್ರಿ, ಗೋವಾ ಮತ್ತು ಮುಂಬೈನ ಪ್ರಭಾವಿ ಮಟ್ಕಾ ಬುಕ್ಕಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಅವರಿಂದ ಬರುತ್ತಿದ್ದ ಹಣದ ಸಹಾಯದಿಂದಲೇ ಈತ ಕೊಪ್ಪಳದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಇದೇ ಹಣದ ಬಲದಿಂದ ಅಮಾಯಕ ಹುಡುಗಿಯರನ್ನು ಬಲೆಗೆ ಹಾಕಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರಕರಣದ ಹಿನ್ನೆಲೆ: ಅಸಲಿಗೆ ನಡೆದಿದ್ದೇನು?

ಕೊಪ್ಪಳದಲ್ಲಿ ಇತ್ತೀಚೆಗೆ ಮುಸ್ತಾಫಾ ಖಾದ್ರಿ ಎಂಬಾತ ಹಿಂದೂ ಹುಡುಗಿಯರನ್ನು ಪ್ರೀತಿಸುವ ನಾಟಕವಾಡಿ ವಂಚಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈತನ ಮೊಬೈಲ್‌ನಲ್ಲಿ ಅನೇಕ ಹುಡುಗಿಯರ ಜೊತೆಗಿನ ಅಶ್ಲೀಲ ವಿಡಿಯೋಗಳು ಮತ್ತು ಫೋಟೋಗಳು ಪತ್ತೆಯಾಗಿದ್ದವು. ಈ ವಿಡಿಯೋಗಳನ್ನು ಇಟ್ಟುಕೊಂಡು ಆತ ಹುಡುಗಿಯರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂಬ ಮಾತುಗಳು ಕೇಳಿಬಂದಿದ್ದವು. ಈ ವಿಚಾರ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದವು. ಇದಾದ ಬೆನ್ನಲ್ಲೇ ಸಂತ್ರಸ್ತ ಯುವತಿಯೊಬ್ಬಳು ಧೈರ್ಯ ಮಾಡಿ ಮುಸ್ತಾಫಾ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ: ಕೊಪ್ಪಳದಲ್ಲೂ ಲವ್ ಜಿಹಾದ್: ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ; ಸಿಡಿದೆದ್ದ ಹಿಂದೂ ಯುವಕರು

ಅಶ್ಲೀಲ ವಿಡಿಯೋಗಳ ರವಾನೆ ಶಂಕೆ

ಆರೋಪಿಯ ಮೊಬೈಲ್‌ನಲ್ಲಿ ಪತ್ತೆಯಾಗಿರುವ ವಿಡಿಯೋಗಳನ್ನು ಆತ ಬೇರೆ ಯಾರಿಗಾದರೂ ರವಾನಿಸಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಟ್ಕಾ ಬುಕ್ಕಿಗಳ ಹಣದ ವ್ಯವಹಾರ ಮತ್ತು ಹುಡುಗಿಯರ ವಿಡಿಯೋಗಳ ನಡುವೆ ಏನಾದರೂ ಸಂಬಂಧವಿದೆಯೇ ಎಂಬ ಆಯಾಮದಲ್ಲೂ ತನಿಖೆ ಚುರುಕುಗೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ರಿಸ್ ಗೇಲ್​ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ

Source link

ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಾವಿನ ನಡುವಿನ ವಿಚಿತ್ರ ಕಾಕತಾಳೀಯ

ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ (Asha Bhosle) ಏಪ್ರಿಲ್ 12ರಂದು ಮುಂಬೈನಲ್ಲಿ ನಿಧನರಾದರು. ಅವರು ತಮ್ಮ 92 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅವರ ಪುತ್ರ ಆನಂದ್ ಭೋಸ್ಲೆ, ಮಹಾರಾಷ್ಟ್ರ ಸಂಸ್ಕೃತಿ ಸಚಿವ ಆಶಿಶ್ ಶೇಲಾರ್ ಮತ್ತು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತಿ ಸಮದಾನಿ ಅವರ ಸಾವಿನ ಬಗ್ಗೆ ಮಾಹಿತಿ ನೀಡಿದರು. ಈ ಸುದ್ದಿ ಚಲನಚಿತ್ರೋದ್ಯಮ ಹಾಗೂ ಅವರ ಅಭಿಮಾನಿಗಳಲ್ಲಿ ದುಃಖವನ್ನುಂಟು ಮಾಡಿದೆ. ಆಶಾ ಭೋಸ್ಲೆ ಮತ್ತು ಅವರ ಸಹೋದರಿ ಮತ್ತು ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸಾವಿನ ನಡುವೆ ಕಾಕತಾಳೀಯತೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಆಶಾ ಮತ್ತು ಲತಾ ಮಂಗೇಶ್ಕರ್ ಇಬ್ಬರು ಸಹೋದರಿಯರು. ಅವರು ಭಾರತೀಯ ಸಂಗೀತ ಉದ್ಯಮದ ದಂತಕಥೆಗಳು. ಲತಾ ಮಂಗೇಶ್ಕರ್ ಅವರನ್ನು ಭಾರತದ ಕೋಗಿಲೆ ಎಂದು ಕರೆಯಲಾಗುತ್ತಿತ್ತು. ಇಬ್ಬರೂ ಸಾವಿರಾರು ಬಾಲಿವುಡ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಫೆಬ್ರವರಿ 6, 2022 ರ ಭಾನುವಾರದಂದು, ಲತಾ ಮಂಗೇಶ್ಕರ್ ತಮ್ಮ 92 ನೇ ವಯಸ್ಸಿನಲ್ಲಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಅದೇ ರೀತಿ, ನಿಖರವಾಗಿ 4 ವರ್ಷಗಳ ನಂತರ, ಏಪ್ರಿಲ್ 22, 2026 ರ ಭಾನುವಾರದಂದು, ಆಶಾ ಭೋಸ್ಲೆ ಕೂಡ 92 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಮುಂಬೈನ ಅದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದು ಒಂದು ವಿಶಿಷ್ಟ ಕಾಕತಾಳೀಯ.

ಆಶಾ ಭೋಸ್ಲೆ ಅವರ ಆರೋಗ್ಯ ಸ್ವಲ್ಪ ಸಮಯದಿಂದ ಹದಗೆಡುತ್ತಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಹೊರಬಂದ ಅವರ ಮಗ ಆನಂದ್ ಸಾವಿನ ಬಗ್ಗೆ ಮಾಹಿತಿ ನೀಡಿದರು. ಆಶಾ ಭೋಸ್ಲೆ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು ಎಂದು ಡಾ. ಪ್ರತಿ ಸಂದಾನಿ ತಿಳಿಸಿದ್ದಾರೆ. ಈ ಮಧ್ಯೆ, ಸಂಸ್ಕೃತಿ ಸಚಿವ ಆಶಿಶ್ ಶೆಲಾರ್, ‘ಇಂದು ಇಡೀ ದೇಶ ದುಃಖದ ಸಾಗರದಲ್ಲಿ ಮುಳುಗಿದೆ. ಒಂದು ಯುಗ ಅಂತ್ಯಗೊಂಡಿದೆ’ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಆಶಾ ಭೋಸ್ಲೆ ಗಳಿಸಿದ ಆಸ್ತಿಗಳೇನು? ಅವರ ಹಾಡು, ಬ್ಯುಸಿನೆಸ್, ರಿಯಲ್ ಎಸ್ಟೇಟ್ ಆದಾಯ ಎಷ್ಟಿತ್ತು ಗೊತ್ತಾ?

ಆಶಾ ಭೋಸ್ಲೆ ಅವರ ಹೆಸರು ಭಾರತೀಯ ಸಂಗೀತ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಶಾಶ್ವತವಾಗಿ ಬರೆಯಲ್ಪಡುತ್ತದೆ. 8 ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ಅವರು ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರ ಧ್ವನಿಯು ವಿಭಿನ್ನವಾದ ಮಾಂತ್ರಿಕತೆ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

‘ನಾವು ಇರೋದು ಬೆಂಗಳೂರಲ್ಲೋ, ಕಸದೂರಲ್ಲೋ’: ಜಿಬಿಎ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಕಸ ಎತ್ತಿಸಿದ ಗುರಪ್ಪನಪಾಳ್ಯ ಜನ!

ಬೆಂಗಳೂರು, ಏಪ್ರಿಲ್ 13: ನಗರದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಜಿಬಿಎ (GBA) ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಬೇಸತ್ತಿರುವ ಘಟನೆ ಗುರಪ್ಪನಪಾಳ್ಯ ವಾರ್ಡ್‌ನಲ್ಲಿ ಬೆಳಕಿಗೆ ಬಂದಿದೆ. ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ನಂ.171ರಲ್ಲಿ ವಾರಗಳಷ್ಟೇ ಅಲ್ಲ, ತಿಂಗಳುಗಳಾದರೂ ಕಸ ತೆರವುಗೊಳಿಸಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ರಸ್ತೆಗಳ ಬದಿಯಲ್ಲಿ ಕಸದ ರಾಶಿ ತುಂಬಿಕೊಂಡು ದುರ್ವಾಸನೆ ಬೀರುತ್ತಿದ್ದು, ಸ್ಥಳೀಯರು ನರಕಯಾತನೆ ಅನುಭವಿಸುತ್ತಿದ್ದಾರೆ.

ಸಮಾಜಸೇವಕ ಮಾಸ್ತಿ ಜಾಕಿರ್ ಅಲಿಯಿಂದ ಸಹಾಯ

ಈ ಹಿನ್ನೆಲೆ ಸ್ಥಳೀಯ ನಿವಾಸಿಗಳು ಸ್ವತಃ ಮುಂದಾಗಿ ಜೆಸಿಬಿ ಮತ್ತು ಲಾರಿ ಕರೆಸಿ ಕಸವನ್ನು ತೆರವುಗೊಳಿಸಿದ ಘಟನೆ ನಡೆದಿದೆ. ಸಮಾಜಸೇವಕ ಮಾಸ್ತಿ ಜಾಕಿರ್ ಅಲಿ ತಮ್ಮ ಖರ್ಚಿನಲ್ಲಿ ಈ ಕಾರ್ಯ ಕೈಗೊಂಡು ಜನರಿಗೆ ಸಹಾಯ ಮಾಡಿದ್ದಾರೆ. ನಾವು ವಾಸಿಸುತ್ತಿರುವುದು ಬೆಂಗಳೂರಲ್ಲೋ ಅಥವಾ ಕಸದೂರಲ್ಲೋ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ

ಇದೇ ವೇಳೆ ಹಳೆ ಗುರಪ್ಪನಪಾಳ್ಯ ವೃತ್ತದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿ, ಜಿಬಿಎ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಕಸದ ಸಮಸ್ಯೆಯಿಂದ ಉಂಟಾಗಿರುವ ಆರೋಗ್ಯ ಹಾನಿ ಮತ್ತು ಅನಾನುಕೂಲಗಳನ್ನು ವಿವರಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಸವನ್ನು ತೆರವುಗೊಳಿಸಿ, ಇಲ್ಲವಾದರೆ ಶಾಶ್ವತ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮೂಲಭೂತ ಸಮಸ್ಯೆ ಪರಿಹಾರಕ್ಕಾಗಿ ಜನರೇ ಕಸ ಎತ್ತಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ದುಃಖಕರ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಧಿ ಮದುವೆ ಆಗಲು ‘ಕರ್ಣ’ ಧಾರವಾಹಿಗೆ ಎಂಟ್ರಿ ಕೊಟ್ಟ ಗಗನ್ ಚಿನ್ನಪ್ಪ

‘ಕರ್ಣ’ ಧಾರಾವಾಹಿಯಲ್ಲಿ (Karna Serial) ಸಾಕಷ್ಟು ತಿರುವುಗಳು ಎದುರಾಗಿವೆ. ಈ ಧಾರಾವಾಹಿಗೆ ಹೊಸ ಪಾತ್ರಧಾರಿಗಳು ಬಂದಿದ್ದು ಕಡಿಮೆ. ಈಗ ಧಾರಾವಾಹಿಗೆ ಹೊಸ ಪಾತ್ರಧಾರಿಯ ಎಂಟ್ರಿ ಆಗಿದೆ. ಅದುವೇ ಗಗನ್ ಚಿನ್ನಪ್ಪ. ಹೌದು. ಗಗನ್ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಈ ಧಾರಾವಾಹಿಯಲ್ಲಿ ನಿಧಿಯನ್ನು ಮದುವೆಯಾಗಲು ಗಗನ್ ಆಗಮನ ಆಗಿದೆ. ಅವರು ಪರ್ಮನೆಂಟ್ ಆಗಿ ಧಾರಾವಾಹಿಯಲ್ಲಿ ಇರೋದಿಲ್ಲ. ಅವರದ್ದು ಅತಿಥಿ ಪಾತ್ರ ಎನ್ನಲಾಗಿದೆ.

ಕರ್ಣ ತನ್ನ ತಂದೆ ರಮೇಶ್ ಮಾಡಿದ ಕುತಂತ್ರಕ್ಕೆ ಬಲಿಯಾಗಿದ್ದಾನೆ. ಕರ್ಣ ತನಗೆ ಇಷ್ಟ ಇಲ್ಲದಿದ್ದರೂ ನಿತ್ಯಾಳ ಮದುವೆ ಆಗುವ ಪರಿಸ್ಥಿತಿ ಬಂತು. ನಂತರ ಆತ ಮದುವೆ ಆದ ಕೂಡ. ಆ ಬಳಿಕವೂ ರಮೇಶ್ ತೊಂದರೆ ಕೊಡೋದನ್ನು ಮುಂದುವರಿಸಿದ್ದಾರೆ. ಕರ್ಣನು ಲವ್ ಮಾಡಿದ್ದು ನಿಧಿಯನ್ನು. ಆಕೆಯನ್ನು ಮದುವೆ ಆಗೇ ಆಗುತ್ತೇನೆ ಎಂದು ಹೇಳಿದ್ದಾನೆ.

ಇದಕ್ಕೆ ಅವಕಾಶ ಕೊಡಬಾರದು ಎಂಬುದು ರಮೇಶನ ಆಲೋಚನೆ. ಈ ಕಾರಣಕ್ಕೆ ನಿಧಿಗೆ ಒಂದು ಹುಡಗನ ಕರೆತರಬೇಕು ಎಂದು ಆಲೋಚನೆ ಮಾಡಿದ್ದಾನೆ. ಅದಕ್ಕೆ ಸರಿಯಾಗಿ ಗಗನ್ ಚಿನ್ನಪ್ಪ ಅವರನ್ನು ಕರೆತಂದಿದ್ದಾನೆ. ನಿಧಿಯನ್ನು ಮದುವೆ ಆಗುವ ಹುಡಗನಾಗಿ ಗಗನ್ ಕಾಣಿಸಿಕೊಳ್ಳಲಿದ್ದಾರೆ.

ಗಗನ್ ಚಿನ್ನಪ್ಪ ಅವರ ಪಾತ್ರ ಈ ವಾರ ಪೂರ್ತಿ ಇರುವ ಸಾಧ್ಯತೆ ಇದೆ. ಅವರು ಬರೋದು ಹುಡುಗಿಯನ್ನು ನೋಡೋದು ಇದೆಲ್ಲವನ್ನೂ ಮಾಡಲು ಒಂದು ವಾರಗಳ ಎಪಿಸೋಡ್ಗಳು ಬೇಕಾಗಬಹುದು ಎನ್ನಲಾಗಿದೆ. ಅಲ್ಲಿಯವರೆಗೆ ಗಗನ್ ಚಿನ್ನಪ್ಪ ಅವರು ವೀಕ್ಷಕರಿಗೆ ಮನರಂಜನೆ ನೀಡಲಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: ‘ಕರ್ಣ’ ಧಾರಾವಾಹಿಯಲ್ಲಿ ಮಹಾ ತಿರುವು; ಕರ್ಣನ ತಂದೆ ರಿವೀಲ್

ಈಗಾಗಲೇ ರಮೇಶ್ ವಿರುದ್ಧ ಕರ್ಣ ತಿರುಗಿ ಬಿದ್ದಿದ್ದಾನೆ. ಆತ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಇನ್ನು, ನಿಧಿ ಕೂಡ ರಮೇಶ್ ಕೆಟ್ಟ ಬುದ್ದಿಯನ್ನು ಅರಿತುಕೊಂಡಿದ್ದಾಳೆ. ಆಕೆ ಕೂಡ ಅವನ ವಿರುದ್ಧ ತಿರುಗಿ ಬೀಳುವ ಕೆಲಸವನ್ನು ಮಾಡಿದ್ದಾಳೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today:ಇಂದು ಈ ರಾಶಿಯವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 13, ವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ದಶಮಿ ತಿಥಿಯಾಗಿದೆ. ಬೆಳಗ್ಗೆ 7:41 ರಿಂದ 9:14ರವರೆಗೆ ರಾಹುಕಾಲ ಇರುತ್ತದೆ. ಹಾಗೆಯೇ, 9:14 ರಿಂದ 10:47ರವರೆಗೆ ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲ ಇರುತ್ತದೆ. ಇಂದು ವರೂಧಿನಿ ಏಕಾದಶಿಯ ವಿಶೇಷ ದಿನವಾಗಿದ್ದು, ಭಗವಂತನ ಉಪವಾಸವು ಆರೋಗ್ಯ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಶುಭಕರವಾಗಿದೆ. ರವಿ ಮೀನ ರಾಶಿಯಲ್ಲಿದ್ದು, ಚಂದ್ರ ಕುಂಭ ರಾಶಿಯ ಧನಿಷ್ಠ ನಕ್ಷತ್ರದಲ್ಲಿ ಸಂಚಾರ ಮಾಡುತ್ತಾನೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link