ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಆರೋಪಿ ಮುಸ್ತಾಫಾಗೆ ಅಂತರಾಜ್ಯ ಮಟ್ಕಾ ಬುಕ್ಕಿಗಳ ಲಿಂಕ್

ಕೊಪ್ಪಳ ಲವ್ ಜಿಹಾದ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಆರೋಪಿ ಮುಸ್ತಾಫಾಗೆ ಅಂತರಾಜ್ಯ ಮಟ್ಕಾ ಬುಕ್ಕಿಗಳ ಲಿಂಕ್

ಕೊಪ್ಪಳ, ಏಪ್ರಿಲ್ 13: ಕೊಪ್ಪಳ ಜಿಲ್ಲೆಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಮುಸ್ತಾಫಾ ಖಾದ್ರಿ ವಿರುದ್ಧದ ಲವ್ ಜಿಹಾದ್ (Love Jihad Case) ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರೋಪಿ ಮುಸ್ತಾಫಾಗೆ ಗೋವಾ ಮತ್ತು ಮುಂಬೈನ ಮಟ್ಕಾ ಬುಕ್ಕಿಗಳೊಂದಿಗೆ ಸಂಪರ್ಕವಿದ್ದು, ಅವರಿಂದಲೇ ಹಣದ ನೆರವು ಸಿಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆಯೂ ಇದೀಗ ವಿಶ್ವ ಹಿಂದೂ ಪರಿಷತ್ (VHP) ಪೊಲೀಸರಿಗೆ ದೂರು ನೀಡಿದೆ.

ಮಟ್ಕಾ ಬುಕ್ಕಿಗಳ ಹಣದಲ್ಲಿ ಹೈಫೈ ಜೀವನ

ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ನಿವಾಸಿಯಾಗಿರುವ ಮುಸ್ತಾಫಾ ಖಾದ್ರಿ, ಗೋವಾ ಮತ್ತು ಮುಂಬೈನ ಪ್ರಭಾವಿ ಮಟ್ಕಾ ಬುಕ್ಕಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಅವರಿಂದ ಬರುತ್ತಿದ್ದ ಹಣದ ಸಹಾಯದಿಂದಲೇ ಈತ ಕೊಪ್ಪಳದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಇದೇ ಹಣದ ಬಲದಿಂದ ಅಮಾಯಕ ಹುಡುಗಿಯರನ್ನು ಬಲೆಗೆ ಹಾಕಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರಕರಣದ ಹಿನ್ನೆಲೆ: ಅಸಲಿಗೆ ನಡೆದಿದ್ದೇನು?

ಕೊಪ್ಪಳದಲ್ಲಿ ಇತ್ತೀಚೆಗೆ ಮುಸ್ತಾಫಾ ಖಾದ್ರಿ ಎಂಬಾತ ಹಿಂದೂ ಹುಡುಗಿಯರನ್ನು ಪ್ರೀತಿಸುವ ನಾಟಕವಾಡಿ ವಂಚಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈತನ ಮೊಬೈಲ್‌ನಲ್ಲಿ ಅನೇಕ ಹುಡುಗಿಯರ ಜೊತೆಗಿನ ಅಶ್ಲೀಲ ವಿಡಿಯೋಗಳು ಮತ್ತು ಫೋಟೋಗಳು ಪತ್ತೆಯಾಗಿದ್ದವು. ಈ ವಿಡಿಯೋಗಳನ್ನು ಇಟ್ಟುಕೊಂಡು ಆತ ಹುಡುಗಿಯರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂಬ ಮಾತುಗಳು ಕೇಳಿಬಂದಿದ್ದವು. ಈ ವಿಚಾರ ತಿಳಿಯುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದವು. ಇದಾದ ಬೆನ್ನಲ್ಲೇ ಸಂತ್ರಸ್ತ ಯುವತಿಯೊಬ್ಬಳು ಧೈರ್ಯ ಮಾಡಿ ಮುಸ್ತಾಫಾ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾಳೆ.

ಇದನ್ನೂ ಓದಿ: ಕೊಪ್ಪಳದಲ್ಲೂ ಲವ್ ಜಿಹಾದ್: ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ; ಸಿಡಿದೆದ್ದ ಹಿಂದೂ ಯುವಕರು

ಅಶ್ಲೀಲ ವಿಡಿಯೋಗಳ ರವಾನೆ ಶಂಕೆ

ಆರೋಪಿಯ ಮೊಬೈಲ್‌ನಲ್ಲಿ ಪತ್ತೆಯಾಗಿರುವ ವಿಡಿಯೋಗಳನ್ನು ಆತ ಬೇರೆ ಯಾರಿಗಾದರೂ ರವಾನಿಸಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಟ್ಕಾ ಬುಕ್ಕಿಗಳ ಹಣದ ವ್ಯವಹಾರ ಮತ್ತು ಹುಡುಗಿಯರ ವಿಡಿಯೋಗಳ ನಡುವೆ ಏನಾದರೂ ಸಂಬಂಧವಿದೆಯೇ ಎಂಬ ಆಯಾಮದಲ್ಲೂ ತನಿಖೆ ಚುರುಕುಗೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *