All posts by nagaraj11081993

ಕರ್ನಾಟಕದ ದೇವಾಲಯಗಳ ಆದಾಯದಲ್ಲಿ ಭಾರೀ ಏರಿಕೆ: ದಕ್ಷಿಣ ಕನ್ನಡದ ಈ ದೇಗುಲ ಫಸ್ಟ್​ – Kannada News | Kukke Subramanya: Karnataka’s Wealthiest Temple & Top Revenue Earners

ಮಂಗಳೂರು, ಡಿ.2: ಕರ್ನಾಟಕ ಎಲ್ಲದರಲ್ಲೂ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ. ಸಂಸ್ಕೃತಿ, ಪರಂಪರೆ, ಆದಾಯದಲ್ಲೂ ಕೂಡ ಶ್ರೀಮಂತ ರಾಜ್ಯ, (Karnataka richest temples) ಇದೀಗ ದೇವಾಲಯದಲ್ಲೂ ಕೂಡ ಕರ್ನಾಟಕ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ. ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯವಾಗಿ ಹೊರಹೊಮ್ಮಿದೆ. ಹಣಕಾಸು ದತ್ತಾಂಶದ ಪ್ರಕಾರ ಈ ವರದಿಯನ್ನು ನೀಡಲಾಗಿದೆ.

ಇನ್ನು ಈ ವರದಿ ಪ್ರಕಾರ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, 2024–25ರಲ್ಲಿ 155 ಕೋಟಿ ರೂ. ತಲುಪಿದೆ. 2023–24ರಲ್ಲಿ ದೇವಾಲಯದ ಆದಾಯ 146 ಕೋಟಿ ರೂ. ಮತ್ತು 2022–23ರಲ್ಲಿ 123 ಕೋಟಿ ರೂ. ಇತ್ತು. ಈ ಬೆಳವಣಿಗೆ ಕಾರಣ, ಹೆಚ್ಚು ಭಕ್ತ ಸಮೂಹ ಇಲ್ಲಿಗೆ ಬರುತ್ತಿರವುದು. ಹಾಗೂ ವಿಶೇಷ ಪೂಜೆಗಳನ್ನು ಮಾಡಿಸಿಕೊಳ್ಳುವುದು, ಜತೆಗೆ ಧಾರ್ಮಿಕ ಪ್ರವಾಸೋದ್ಯಮವಾಗಿ ಹೊಂದಿಕೊಂಡಿರುವುದು ಎಂದು ಹೇಳಲಾಗಿದೆ. ಇದರ ನಂತರದ ಸಾಲಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​​ ನೀಡಿದ ಕೇಂದ್ರ, ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಸಿದ್ಧ

ಒಟ್ಟಾರೆಯಾಗಿ ರಾಜ್ಯದಲ್ಲಿ ದೇವಾಲಯದ ಆದಾಯಗಳು ಗಣನೀಯವಾಗಿ ಏರಿಕೆ ಕಂಡಿದೆ. ದತ್ತಿ ಇಲಾಖೆಯ ಪ್ರಕಾರ, ಕರ್ನಾಟಕವು 34,000 ಕ್ಕೂ ಹೆಚ್ಚು ದೇವಾಲಯಗಳನ್ನು ಹೊಂದಿದ್ದು, ಈ ಮೂರು ದೇವಾಲಯಗಳು ಇತರ ದೇವಾಲಯಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಿದೆ. ಇನ್ನು ದೇವಾಲಯಗಳನ್ನು ಎ ವರ್ಗ ಹಾಗೂ ಬಿ ವರ್ಗ ಎಂದು ವಿಭಾಗ ಮಾಡಲಾಗಿದೆ. ಎ ವರ್ಗದಲ್ಲಿ ಒಟ್ಟು 205 ದೇವಾಲಯಗಳು ಬರುತ್ತದೆ. ಹಾಗೂ ಬಿ ವರ್ಗದಲ್ಲಿ 193 ದೇವಾಲಯಗಳು ಬರುತ್ತದೆ. ಆದಾಯ ಹಾಗೂ ಅಭಿವೃದ್ಧಿ ಆಧಾರದ ಮೇಲೆ ಇದನ್ನು ವರ್ಗೀಕರಣ ಮಾಡಲಾಗಿದೆ.

ಈ ಎ, ಬಿ ವರ್ಗೀಕರಣದಲ್ಲೂ 10 ಟಾಪ್​​ ದೇವಾಲಯಗಳನ್ನು ಗುರುತಿಸಲಾಗುವುದು. ಈ ಹತ್ತು ಟಾಪ್​​ ದೇವಾಲಯಗಳನ್ನು ಆದಾಯದ ಮಾನದಂಡದ ಆಧಾರದ ಮೇಲೆ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ, ಉತ್ತಮ ಆಡಳಿತ ವ್ಯವಸ್ಥೆ ಹಾಗೂ ಯಾತ್ರಿಕರ ಸಂಖ್ಯೆಯ ಹೆಚ್ಚಳವೇ ಈ ಆದಾಯ ವೃದ್ಧಿಗೆ ಪ್ರಮುಖ ಕಾರಣಗಳಾಗಿವೆ ಎನ್ನಲಾಗಿದೆ.ಮುಂದಿನ ದಿನಗಳಲ್ಲಿ ದೇವಾಲಯಗಳ ನಿರ್ವಹಣೆ, ಪಾರಂಪರಿಕ ಸಂರಕ್ಷಣೆ, ಯಾತ್ರಿಕರ ಸೌಲಭ್ಯಗಳ ಅಭಿವೃದ್ಧಿ ಹಾಗೂ ಸಮುದಾಯಮುಖಿ ಯೋಜನೆಗಳಿಗೆ ಹೆಚ್ಚಿನ ಹೂಡಿಕೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 5:16 pm, Fri, 2 January 26

Source link

ಕೋಲಾರದಲ್ಲಿ ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು: ಎದ್ನೋ, ಬಿದ್ನೋ ಓಡಿದ ಜನ – Kannada News | Bhimaganahalli Bee Attack: Kolar Villagers, Children Injured, Viral Video

ಕೋಲಾರ,ಜ.2: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಭೀಮಗಾನಹಳ್ಳಿ ಗ್ರಾಮದ ಜನರ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಇದೀಗ ದಾಳಿ ಮಾಡಿರುವ ವಿಡಿಯೋ ವೈರಲ್​​ ಆಗಿದೆ. ಗ್ರಾಮದಲ್ಲಿ ಏಕಾಏಕಿ ಹೆಜ್ಜೇನು ದಾಳಿ ಮಾಡಿದ್ದು ಮೂರು ಜನರಿಗೆ ಗಾಯಗಾಗಿವೆ. ಇನ್ನು ಅಲ್ಲಿ ಇದ್ದ ಶಾಲೆಯ ಮಕ್ಕಳ ಮೇಲೆಯೂ ದಾಳಿ ಮಾಡಿದೆ. ಮಕ್ಕಳು ಶಾಲೆ ಒಳಗೆ ಕಿಟಿಕಿ ಬಾಗಿಲು ಹಾಕಿಕೊಂಡು ಕುಳಿತುಕೊಂಡಿದ್ದಾರೆ. ಶಾಲೆಯ ಬಳಿ ಹಲವು ವರ್ಷಗಳಿಂದ ಗೂಡುಕಟ್ಟಿಕೊಂಡಿದ್ದ ಹೆಜ್ಜೇನುಗಳನ್ನು ತೆರವು ಮಾಡುವಂತೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಗ್ರಾಮಸ್ಥರ ಮನವಿ ಮಾಡಿದ್ದಾರೆ. ಇನ್ನು ಗಾಯಾಳುಗಳು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?

ಬೀದರ್​, ಜನವರಿ 02: ಹೊಸ ವರ್ಷ ಹಿನ್ನೆಲೆ ಬೀದರ್ ತಾಲ್ಲೂಕಿನ ರಂಜೋಳಖೇಣಿ ಗ್ರಾಮದ ಸರ್ಕಾರ ಶಾಲಾ ಮಕ್ಕಳು ವಿಶೇಷ ಬಜ್ಜಿ ಮತ್ತು ಕಟಕ್ ರೊಟ್ಟಿ ಊಟ ಸವಿದರು. ಮುಖ್ಯೋಪಾಧ್ಯಾಯ ಮಂಜುನಾಥ್​,​ ಶಿಕ್ಷಕರಾದ ಚಂದ್ರಕಾಂತ್ ಹಿಂದೊಡ್ಡಿ, ವಿಷ್ಣು ಕಾಂತ್ ಠಾಕೂರ್​​ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಕಾರಹುಣ್ಣಿಮೆ‌ಯ ದಿನ ರೈತರು ಹೊಲಕ್ಕೆ ಹೋಗಿ ಭೂತಾಯಿಗೆ ಪೂಜೆ ಮಾಡಿ ಬಜ್ಜಿ ಊಟ ಸವಿಯುವುದು ಇಲ್ಲಿನ‌ ವಾಡಿಕೆ. ಹೀಗಾಗಿ ಈ ಹೊಸ ವರ್ಷದಂದು ಹೊಸತನದಿಂದ ಕೂಡಿರಲೆಂದು ಬಜ್ಜಿ ಊಟದ ವ್ಯವಸ್ಥೆ ಮಾಡಲಾಗಿದೆ. ಅವರೆಕಾಯಿ, ಕಡಲೆ, ತೊಗರೆ, ಶೇಂಗಾ ಹೀಗೆ ವಿವಿಧ ಬಗೆಯ ತರಕಾರಿ ಸೇರಿಸಿ ಬಜ್ಜಿ ತಯಾರಿಸಲಾಗಿದ್ದು, ಮಕ್ಕಳು ಚಪ್ಪರಿಸಿ ತಿಂದರು. ಶಿಕ್ಷಕರ ಈ ಕಾರ್ಯಕ್ಕೆ‌ ಮಕ್ಕಳು ‌ಫುಲ್ ಖುಷಿ ಪಟ್ಟರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮದ್ಯದ ನಶೆಯಲ್ಲಿ ಅಪ್ರಾಪ್ತೆ ಅಪಹರಣಕ್ಕೆ ಯತ್ನ: ಯೂಟ್ಯೂಬರ್​ ಸೇರಿ ಇಬ್ಬರು ಅರೆಸ್ಟ್​​, ಮತ್ತಿಬ್ಬರಿಗೆ ಧರ್ಮದೇಟು – Kannada News | YouTuber Arrested for Attempted Kidnapping of Minor and Misbehavior in Ramanagara

ರಾಮನಗರ, ಜನವರಿ 02: ಕುಡಿದ ಮತ್ತಿನಲ್ಲಿ ಅಪ್ರಾಪ್ತೆಯ ಕಿಡ್ಯಾಪ್​​ಗೆ ಯತ್ನಿಸಿದ್ದಲ್ಲದೆ ಆಕೆಯ ಜೊತೆ ಅನುಚಿತ ವರ್ತನೆ ತೋರಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮಾಗಡಿ ಪೊಲೀಸರು ಯೂಟ್ಯೂಬರ್ ಸೇರಿ ಇಬ್ಬರನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಪೋಕ್ಸೋ ಕೇಸ್​​ ದಾಖಳಿಸಿದ್ದಾರೆ. ಸಂಬಂಧಿಕರ ಮನೆಯಲ್ಲಿ ಹೊಸ ವರ್ಷ ಆಚರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಅಪ್ರಾಪ್ತೆಯ ಅಪಹರಣಕ್ಕೆ ಆರೋಪಿಗಳು ಯತ್ನಿಸಿದ್ದು, ಈ ವೇಳೆ ಕುಟುಂಬಸ್ಥರೇ ಆಕೆಯ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ಘಟನೆ ಏನು?

ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ಪಟ್ಟಣದ ವೆಂಕಟೇಶ್ ಎಂಬಾತ ಫಾರ್ಮ್ ಹೌಸ್​​ನಲ್ಲಿ ನ್ಯೂ‌ಇಯರ್ ಪಾರ್ಟಿ ಆಯೋಜನೆ ಮಾಡಿದ್ದ. ಅನುಮತಿ ಇಲ್ಲದೆ ನಡೆದಿದ್ದ ಈ ಪಾರ್ಟಿಯಲ್ಲಿ ಪ್ರಖ್ಯಾತ ಯೂಟ್ಯೂಬರ್ಸ್ ಸೇರಿ ಹಲವರು ಭಾಗಿಯಾಗಿದ್ದರು. ಆ ಪೈಕಿ ತುಮಕೂರು ‌ಜಿಲ್ಲೆ ಶಿರಾ ಮೂಲದ ರವಿಚಂದ್ರ ಎಂಬ ಯೂಟ್ಯೂಬರ್, ಸಂಬಂಧಿಕರ ಮನೆಯಲ್ಲಿ ಹೊಸ ವರ್ಷಾಚರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಅಪ್ರಾಪ್ತೆಯನ್ನ ತಡೆದಿದ್ದಾನೆ. ಆಕೆಯನ್ನು ಕಾರಿಗೆ ಎಳೆದುಕೊಂಡು ಹೊರಟಿದ್ದಾನೆ. ಮಗಳು ಮನೆಗೆ ಬಾರದ ಹಿನ್ನೆಲೆ ಕಂಗಾಲಾದ ಪೋಷಕರು ಹುಡುಕಾಟ ನಡೆಸಿದ್ದು, ಈ ವೇಳೆ ಸಂತ್ರಸ್ತೆ ಸಹೋದರನಿಗೊಂದು ಕರೆ ಬಂದಿದೆ. ಅದನ್ನು ಆತ ಸ್ವೀಕರಿಸಿದಾಗ ವಿಷಯ ಬೆಳಕಿಗೆ ಬಂದಿದ್ದು, ರವಿಚಂದ್ರನ ಮೊಬೈಲ್​​ನಿಂದಲೇ ಕುಟುಂಬಸ್ಥರಿಗೆ ಅಪ್ರಾಪ್ತೆ ಕರೆ ಮಾಡಿದ್ದಳು ಎನ್ನಲಾಗಿದೆ. ಕೂಡಲೇ ಅಲರ್ಟ್​​ ಆದ ಕುಟುಂಬಸ್ಥರು ಮತ್ತು ಊರವರು ಕಾರನ್ನು ಪತ್ತೆ ಮಾಡಿ ಅಡ್ಡಹಾಕಿದ್ದಾರೆ. ಬಾಲಕಿಯ ರಕ್ಷಣೆ ಮಾಡಿದ್ದಲ್ಲದೆ, ಕಾರನ್ನು ಜಖಂಗೊಳಿಸಿದ್ದಾರೆ.

ಇದನ್ನೂ ಓದಿ: ಮೂರು ಮಕ್ಕಳ ತಾಯಿ ಜತೆ ಲವ್ವಿಡವ್ವಿ; ರಾತ್ರಿ ಭೇಟಿಗೆ ಹೋಗಿದ್ದಾಗ ನಡೀತು ಮಾರಣಾಂತಿಕ ಹಲ್ಲೆ

ಪ್ರಕರಣ ಸಂಬಂಧ ಫಾರ್ಮ್ ಹೌಸ್​​ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದ ವೆಂಕಟೇಶ್ ಹಾಗೂ ಯೂಟ್ಯೂಬರ್ ರವಿಚಂದ್ರನನ್ನ ಪೊಲೀಸರು ಬಂಧಿಸಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿ ಬಳಿಕ ನಾಪತ್ತೆಯಾಗಿದ್ದ ಮಂಡ್ಯ ಮೂಲದ ಯೂಟ್ಯೂಬರ್ಸ್ ಕೆಂಪ ಹಾಗೂ ಕಬ್ಜ ಶರಣ ಕೂಡ ಬಳಿಕ ಪೊಲೀಸ್ ಠಾಣೆ ಬಳಿ ಬಂದಿದ್ದು, ಮೊದಲೇ ಆಕ್ರೋಶಗೊಂಡಿದ್ದ ಸ್ಥಳೀಯರು ಇಬ್ಬರಿಗೂ ಧರ್ಮದೇಟು ನೀಡಿದ್ದಾರೆ. ಈ ಸಂಬಂಧ ಶಾಸಕ ಹೆಚ್​​.ಸಿ. ಬಾಲಕೃಷ್ಣ ಕೂಡ ಪೊಲೀಸ್​​ ಠಾಣೆಗೆ ಭೇಟಿ ನೀಡಿ, ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

3 ಮಕ್ಕಳ ತಾಯಿ ಜತೆ ಲವ್ವಿಡವ್ವಿ: ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು – Kannada News | Woman Family assaults On Youth Who illicit relationship with 3 Children Mother at Belagavi

ಬೆಳಗಾವಿ, (ಜನವರಿ 02): 3 ಮಕ್ಕಳ ತಾಯಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಮರಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಬಳಿ ನಡೆದಿದೆ. ಕಳೆದ 4 ವರ್ಷಗಳಿಂದ ಮೂವರು ಮಕ್ಕಳ ತಾಯಿ ಜೊತೆ ಅಕ್ಷಯ್ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ನಿನ್ನೆ (ಜನವರಿ 02) ರಾತ್ರಿ ಭೇಟಿಯಾಗಬೇಕು ಬಾ ಎಂದು ಮಹಿಳೆ, ಅಕ್ಷಯ್​ನನ್ನು ಕರೆದಿದ್ದಳು. ಅದರಂತೆ ಆಂಟಿ ಮನೆಗೆ ತೆರಳುತ್ತಿದ್ದ ಅಕ್ಷಯ್​ ನನ್ನು ಮಹಿಳೆಯ ಪತಿ ಹಾಗೂ ಸಹೋದರರು ಹಿಡಿದು ಮರಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಹಲ್ಲೆ ಹಿಗ್ಗಾಮುಗ್ಗಾ ಥಳಿಳಿಸಿದ್ದಾರೆ. ಸದ್ಯ ಹಲ್ಲೆಗೊಳಗಾದ ಅಕ್ಷಯ್​ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವರ್ಷಕ್ಕೆ 90 ದಿನ ಕೆಲಸ ಮಾಡಿದರೂ ಸಾಕು, ಅರೆಕಾಲಿಕ ಕಾರ್ಮಿಕರಿಗೆ ಅನುಕೂಲವಾಗಲಿರುವ ಸರ್ಕಾರದ ಹೊಸ ರೂಲ್ಸ್ – Kannada News | Min 90 days of working, centre drafts social security rules for gig workers

ನವದೆಹಲಿ, ಜನವರಿ 2: ಓಲಾ, ಊಬರ್, ಸ್ವಿಗ್ಗಿ, ಜೊಮಾಟೊ, ಬ್ಲಿಂಕಿಟ್ ಇತ್ಯಾದಿ ಪ್ಲಾಟ್​ಫಾರ್ಮ್​ಗಳಲ್ಲಿ ಕೆಲಸ ಮಾಡುವ ಡ್ರೈವರ್​ಗಳು ಹಾಗೂ ಅರೆಕಾಲಿಕ ಕಾರ್ಮಿಕರಿಗೆ (Gig Workers) ಸಾಮಾಜಿಕ ಭದ್ರತಾ ಸಂಹಿತೆಯ ಸೌಲಭ್ಯ ಸಿಗುವ ಸಂಬಂಧ ಸರ್ಕಾರ ಹೊಸ ನಿಯಮಗಳನ್ನು ಪ್ರಸ್ತಾಪಿಸಿದೆ. ಸರ್ಕಾರ ರೂಪಿಸಿರುವ ಕರಡು ನಿಯಮಗಳ ಪ್ರಕಾರ, ಗಿಗ್ ಕಾರ್ಮಿಕರು ಒಂದು ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ಕೆಲಸ ಮಾಡಿದರೂ, ಅವರು ಸೋಷಿಯಲ್ ಸೆಕ್ಯೂರಿಟಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪ್ಲಾಟ್​ಫಾರ್ಮ್​​ಗಳಿಗೆ ಕೆಲಸ ಮಾಡುತ್ತಿದ್ದರೆ..?

ಈಗ ಒಬ್ಬ ಆಟೊಚಾಲಕ ಅಥವಾ ಕ್ಯಾಬ್ ಚಾಲಕರಾಗಿದ್ದರೆ ನಮ್ಮ ಯಾತ್ರಿ, ಓಲಾ, ಊಬರ್ ಪ್ಲಾಟ್​ಫಾರ್ಮ್​ಗಳಿಗೆ ಸಬ್​ಸ್ಕ್ರೈಬ್ ಆಗಿರುವುದುಂಟು. ಎಲ್ಲವನ್ನೂ ಆನ್​ನಲ್ಲಿಟ್ಟುಕೊಂಡು ಗ್ರಾಹಕರಿಗಾಗಿ ಕಾಯುವುದುಂಟು. ಹಾಗೆಯೇ, ಸ್ವಿಗ್ಗಿ, ಜೊಮಾಟೊ ಎರಡಕ್ಕೂ ಕೆಲಸ ಮಾಡುವ ಡೆಲಿವರಿ ಪಾರ್ಟ್ನರ್ಸ್ ಕಾರ್ಮಿಕರಿರುತ್ತಾರೆ. ಹೀಗೆ, ಒಂದಕ್ಕಿಂತ ಹೆಚ್ಚು ಪ್ಲಾಟ್​ಫಾರ್ಮ್​ಗಳಲ್ಲಿ ಸಕ್ರಿಯವಾಗಿರುವ ಕಾರ್ಮಿಕರು ಸೋಷಿಯಲ್ ಸೆಕ್ಯೂರಿಟಿ ಸೌಲಭ್ಯ ಪಡೆಯಲು 120 ದಿನಗಳ ಕೆಲಸದ ಮಾನದಂಡ ಮುಟ್ಟಬೇಕು.

ಇದನ್ನೂ ಓದಿ: 21 ವರ್ಷದ ಬೆಂಗಳೂರು ಹುಡುಗ ಎಡ್ವರ್ಡ್​ಗೆ ಎರಡೂವರೆ ಕೋಟಿ ರೂ ಸಂಬಳ ಆಫರ್

ಆದರೆ, ಇಲ್ಲೊಂದು ಅನುಕೂಲ ಇರುತ್ತದೆ. ಒಬ್ಬ ಕಾರ್ಮಿಕ ಒಂದು ದಿನದಲ್ಲಿ ಮೂರು ಪ್ಲಾಟ್​ಫಾರ್ಮ್​ಗಳಲ್ಲಿ ಲೈವ್ ಆಗಿದ್ದಾಗ, ಆತನ ಕೆಲಸದ ದಿನವನ್ನು ಒಂದು ಎಂದು ಪರಿಗಣಿಸದೆ ಮೂರು ಎಂದು ಪರಿಗಣಿಸಲಾಗುತ್ತದೆ. ಹೀಗೆ, ದಿನಕ್ಕೆ ಮೂರು ಪ್ಲಾಟ್​ಫಾರ್ಮ್​ಗಳಿಗೆ 40 ದಿನ ಕೆಲಸ ಮಾಡಿದರೂ ಸಾಕು, ಆತ ಸಾಮಾಜಿಕ ಭದ್ರತಾ ಸೌಲಭ್ಯ ಪಡೆಯಲು ಅರ್ಹನಾಗಿರುತ್ತಾನೆ. ಇಂಥದ್ದೊಂದು ಅವಕಾಶ ನೀಡುವ ಪ್ರಸ್ತಾವವನ್ನು ಸರ್ಕಾರ ಮಾಡಿದೆ.

ನೇರ ನೇಮಕಾತಿಯೇ ಆಗಬೇಕೆಂದಿಲ್ಲ…

ಅರೆಕಾಲಿಕ ಕಾರ್ಮಿಕ ಅಥವಾ ಗಿಗ್ ವರ್ಕರ್ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಯಾಗಲು ಕಂಪನಿಗೆ ನೇರವಾಗಿ ನೇಮಕಾತಿ ಆಗಿರಬೇಕೆಂದೇನಿಲ್ಲ. ಥರ್ಡ್ ಪಾರ್ಟಿ ಮೂಲಕ ಗುತ್ತಿಗೆ ಆಧಾರವಾಗಿ ಕೆಲಸ ಮಾಡುತ್ತಿದ್ದರೂ ಅವರಿಗೆ ಕವರೇಜ್ ಸಿಗಬೇಕು ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಭದ್ರತೆ ಸ್ಕೀಮ್ ಹೇಗಿರುತ್ತದೆ?

ಸರ್ಕಾರದ ಹೊಸ ಕಾರ್ಮಿಕ ಸಂಹಿತೆ ಪ್ರಕಾರ, ಅರೆಕಾಲಿಕ ಕಾರ್ಮಿಕರಿಗೆ ಹೆಲ್ತ್ ಇನ್ಷೂರೆನ್ಸ್, ಲೈಫ್ ಇನ್ಷೂರೆನ್ಸ್ ಮತ್ತು ಆಕ್ಸಿಡೆಂಟ್ ಇನ್ಷೂರೆನ್ಸ್ ಸೌಲಭ್ಯ ಕೊಡಬೇಕು. ಆಯುಷ್ಮಾನ್ ಭಾರತ್ ಸ್ಕೀಮ್ ಅಡಿಯಲ್ಲಿ ಅವರನ್ನು ಸೇರಿಸಬೇಕು ಎಂದಿದೆ.

ಇದನ್ನೂ ಓದಿ: ಪ್ಯಾಲೆಸ್ಟೀನ್ ಧ್ವಜದ ಸ್ಟಿಕರ್ ಅಂಟಿಸಿಕೊಂಡು ಆಡಿದ ಕಾಶ್ಮೀರೀ ಕ್ರಿಕೆಟಿಗ; ಪೊಲೀಸರಿಂದ ವಿಚಾರಣೆ

ಒಂದು ಅಂದಾಜು ಪ್ರಕಾರ, ಭಾರತದ ವಿವಿಧೆಡೆ ಒಟ್ಟು 1.27 ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಇಂಥ ಗಿಗ್ ವರ್ಕರ್ಸ್ ಇದ್ದಾರೆ ಎಂದು ಅಂದಾಜಿಸಲಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ (2029-30) ಇಂಥ ಕಾರ್ಮಿಕರ ಸಂಖ್ಯೆ 2.35 ಕೋಟಿ ದಾಟುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು: ಅದೇ ಬೆಂಕಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ರೈತ – Kannada News | Gadag: Miscreants Set Fire to Maize Worth 60 Lakh; Distressed Farmer Attempts Suicide by Jumping into Flames

ಗದಗ, ಜನವರಿ 02: ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಸುಮಾರು 60 ಲಕ್ಷ ಮೌಲ್ಯದ ಮೆಕ್ಕೆಜೋಳ ಬೆಂಕಿಗೆ ಆಹುತಿ ಆಗಿದೆ. ಗಣೇಶ ಹಾಗೂ ಗೋಪಿ ಚವ್ಹಾಣ ಸಹೋದರರು ಸುಮಾರು 100 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಡೀಸೆಲ್ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ನಾಲ್ಕು ಜನರಿಂದ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಸುಟ್ಟು ಹೋಗುತ್ತಿದ್ದ ಮೆಕ್ಕೆಜೋಳಕ್ಕೆ ಮಕ್ಕಳ‌ ಸಮೇತ ರೈತ ಕುಟುಂಬ ಜಿಗಿದು ಆತ್ಮಹತ್ಯೆಗೆ ಯತ್ನಿಸಿದೆ. ಸ್ಥಳದಲ್ಲಿದ್ದ ಗ್ರಾಮಸ್ಥರು ರೈತ ಕುಟುಂಬವನ್ನು ರಕ್ಷಣೆ ಮಾಡಿದ್ದಾರೆ. ಕಣ್ಮುಂದೆ ಸುಟ್ಟು ಕರಕಲಾದ ಮೆಕ್ಕೆಜೋಳವನ್ನು ನೋಡಿ ರೈತ ಕಣ್ಣೀರು ಹಾಕಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IND vs BAN: 6 ಪಂದ್ಯಗಳ ಸರಣಿಗಾಗಿ ಬಾಂಗ್ಲಾ ಪ್ರವಾಸ ಮಾಡಲಿದೆ ಭಾರತ; ವೇಳಾಪಟ್ಟಿ ಪ್ರಕಟ – Kannada News | India vs Bangladesh Cricket Tour Schedule Released: ODI and T20 Series Dates

ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್ (Mustafizur Rahman ) ಅವರನ್ನು ಐಪಿಎಲ್‌ನಲ್ಲಿ (IPL) ಆಡಲು ಅನುಮತಿ ನೀಡಿರುವುದಕ್ಕೆ ಭಾರತದಲ್ಲಿ ಅಸಾಮಾಧಾನ ಸ್ಫೋಟಗೊಂಡಿದೆ. ಬಾಂಗ್ಲಾ ಆಟಗಾರನನ್ನು 9 ಕೋಟಿ ರೂ,ಗೆ ಖರೀದಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಕ್ಕೂ ಜನ ಛೀಮಾರಿ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಬಿಸಿಸಿಐ (BCCI) ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದೆನೆಂದರೆ, ಏಕದಿನ ಹಾಗೂ ಟಿ20 ಸರಣಿಗಾಗಿ ಟೀಂ ಇಂಡಿಯಾ, ಬಾಂಗ್ಲಾದೇಶ ಪ್ರವಾಸವನ್ನು ಮಾಡಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ಇಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದೆ.

ವಾಸ್ತವವಾಗಿ ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರದಿಂದಾಗಿ ಬಿಸಿಸಿಐ, ಈ ಪ್ರವಾಸವನ್ನು ಮುಂದೂಡಿತ್ತು. ಇದೀಗ ಈ ಪ್ರವಾಸದ ಬಗ್ಗೆ ಖಚಿತ ಮಾಹಿತಿ ನೀಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಒಟ್ಟು 6 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅದರಂತೆ ಭಾರತದ ಬಾಂಗ್ಲಾದೇಶ ಪ್ರವಾಸ ಏಕದಿನ ಸರಣಿಯೊಂದಿಗೆ ಆರಂಭವಾಗಲಿದೆ. ಹಾಗೆಯೇ ಟಿ20 ಸರಣಿಯೊಂದಿಗೆ ಅಂತ್ಯವಾಗಲಿದೆ.

ಪ್ರವಾಸದ ವಿವರ ಹೀಗಿದೆ

ಆದಾಗ್ಯೂ ಟೀಂ ಇಂಡಿಯಾದ ಈ ಪ್ರವಾಸಕ್ಕೆ ಇನ್ನು ಸಾಕಷ್ಟು ಸಮಯ ಉಳಿದಿದೆ. ಉಭಯ ತಂಡಗಳು ಸೆಪ್ಟೆಂಬರ್ ತಿಂಗಳಲ್ಲಿ ಮುಖಾಮುಖಿಯಾಗಲಿವೆ. ವೇಳಾಪಟ್ಟಿಯ ಪ್ರಕಾರ ಎರಡು ತಂಡಗಳ ನಡುವೆ ಮೊದಲು ಏಕದಿನ ಸರಣಿ ನಡೆಯಲಿದ್ದು, ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 1 ರಂದು ನಡೆಯಲಿದೆ. ಆ ಬಳಿಕ ಎರಡನೇ ಪಂದ್ಯ ಸೆಪ್ಟೆಂಬರ್ 3 ಹಾಗೂ ಮೂರನೇ ಪಂದ್ಯ ಸೆಪ್ಟೆಂಬರ್ 6 ರಂದು ನಡೆಯಲಿದೆ. ಏಕದಿನ ಸರಣಿಯ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಪಂದ್ಯಗಳು ಸೆಪ್ಟೆಂಬರ್ 9, 12 ಮತ್ತು 13 ರಂದು ನಡೆಯಲಿವೆ.

ಸರಣಿ ಸೋತಿದ್ದ ಟೀಂ ಇಂಡಿಯಾ

ಭಾರತ ತಂಡವು ಕೊನೆಯ ಬಾರಿಗೆ 2022-23 ರಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಿತ್ತು, ಅಲ್ಲಿ ಏಕದಿನ ಸರಣಿಯನ್ನು ಸೋತಿತ್ತು. ಬಾಂಗ್ಲಾದೇಶ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಆದಾಗ್ಯೂ, ಬಾಂಗ್ಲಾದೇಶ ನೆಲದಲ್ಲಿ ಭಾರತ ಉತ್ತಮ ದಾಖಲೆಯನ್ನು ಹೊಂದಿದೆ. ಬಾಂಗ್ಲಾದೇಶದಲ್ಲಿ ಭಾರತ ಆಡಿರುವ 25 ಪಂದ್ಯಗಳಲ್ಲಿ 18 ರಲ್ಲಿ ಗೆದ್ದಿದ್ದು, 6 ರಲ್ಲಿ ಸೋತಿದೆ ಮತ್ತು ಒಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:03 pm, Fri, 2 January 26

Source link

ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್, ವಿಡಿಯೋ ಸಾಕ್ಷಿ ಇಲ್ಲಿದೆ – Kannada News | Bellary violence: Satish Reddy Gunman Firing at janardhan reddy House, here Is EXCLUSIVE video

ಬಳ್ಳಾರಿ, ಜನವರಿ 02): ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಸತೀಶ್ ರೆಡ್ಡಿ ಗನ್​​ಮ್ಯಾನ್ ಜನಾರ್ದನ ರೆಡ್ಡಿ ಮನೆಯತ್ತಲೇ ಫೈರಿಂಗ್ ಮಾಡಿದ್ದು, ದಾಳಿ ನಡೆಸುವ ದೃಶ್ಯ ಟಿವಿ9ಗೆ ಲಭ್ಯ ಲಭ್ಯವಾಗಿದೆ. ಸತೀಶ್ ರೆಡ್ಡಿ ಗನ್​ಮ್ಯಾನ್​ ಒಂದು ಸುತ್ತು ಫೈರಿಂಗ್ ಮಾಡಿದ್ದು, ಇದರಿಂದ ಜನಾರ್ದನ ರೆಡ್ಡಿ ನಿವಾಸದ ಕಿಟಕಿ ಗಾಜು ಪೀಸ್ ಪೀಸ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್ – Kannada News | Muthalik Vows PIL Against Zameer Ahmeds Housing Promise to Bangladeshi Muslims.

ಬೆಂಗಳೂರು, ಜ.2: ಪ್ರಮೋದ್ ಮುತಾಲಿಕ್ ಅವರು ಕೋಗಿಲು ಲೇಔಟ್‌ನಲ್ಲಿ ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೋಹಿಂಗ್ಯಾ ವಾಸಸ್ಥಾನಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ಹಾಗೂ ಸಚಿವ ಜಮೀರ್ ಅಹಮದ್ ಅವರು ಈ ಸಮುದಾಯಗಳಿಗೆ ಮನೆಗಳನ್ನು ನೀಡುವ ಪ್ರಸ್ತಾಪವನ್ನು ಮುತಾಲಿಕ್ ತೀವ್ರವಾಗಿ ಖಂಡಿಸಿದ್ದಾರೆ. “ಕೋಗಿಲು ನಗರದಲ್ಲಿ ಶುದ್ಧ ಬಾಂಗ್ಲಾದೇಶಿ ಮುಸ್ಲಿಂರ ವಾಸಸ್ಥಾನವಿದೆ. ಅಲ್ಲಿ ರೋಹಿಂಗ್ಯಾಗಳಿದ್ದಾರೆ. ಕಾಂಗ್ರೆಸ್ ನಾಯಕರು ಅವರಿಗೆ ತಕ್ಷಣವೇ ಹೇಗೆ ಸ್ಪಂದಿಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ. ಜಮೀರ್ ಅಹಮದ್ ಅವರನ್ನು ಎರಡನೆಯ ಟಿಪ್ಪು ಸುಲ್ತಾನ್ ಎಂದು ಮುತಾಲಿಕ್, ಅವರು ಬಾಂಗ್ಲಾದೇಶಿ ಮುಸ್ಲಿಮರಿಗೆ ಮನೆ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಸ್ಥಳೀಯರು ಮನೆಗಳಿಲ್ಲದೆ ಏಳರಿಂದ ಎಂಟು ವರ್ಷಗಳಿಂದ ಚಪ್ಪರದಲ್ಲಿ ಟೆಂಟ್ ಹಾಕಿಕೊಂಡು, ಬಿಸಿಲು ಮಳೆ ಉಪವಾಸದಲ್ಲಿ ಕಳೆಯುತ್ತಿದ್ದಾರೆ. ಅವರಿಗೆ ಯಾವುದೇ ನೆರವು ಸಿಗುತ್ತಿಲ್ಲ ಎಂದು ಮುತಾಲಿಕ್ ಹೇಳಿದ್ದಾರೆ. ಬಾಂಗ್ಲಾದೇಶಿ ಮುಸ್ಲಿಮರಿಗೆ ಮನೆಗಳನ್ನು ನೀಡುವುದು ತಪ್ಪು ಎಂದು ಅವರು ಬಣ್ಣಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲು ತಮ್ಮ ಸಂಘಟನೆ ನಿರ್ಧರಿಸಿದೆ ಎಂದು ಮುತಾಲಿಕ್ ಘೋಷಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link