ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದಾಗ್ಯೂ ಕೊಹ್ಲಿ ಅವರ ಇನ್ನಿಂಗ್ಸ್ನಲ್ಲಿ ಪವರ್ ಇರಲಿಲ್ಲ. ಅಂದರೆ ಈ ಅರ್ಧಶತಕ ಪೂರೈಸಲು ಕೊಹ್ಲಿ 38 ಎಸೆತಗಳಲ್ಲಿ 50 ರನ್ ಬಾರಿಸಿದರು.
ಈ ನಿಧಾನಗತಿಯ ಅರ್ಧಶತಕದ ಹೊರತಾಗಿಯೂ ಕೊಹ್ಲಿ, ಸಾಲ್ಟ್ ಹಾಗೂ ಪಾಟಿದರ್ ಅವರೊಂದಿಗೆ ಶತಕ ಮತ್ತು ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ತಂಡಕ್ಕೆ ನೆರವಾದರು. ಮಾತ್ರವಲ್ಲದೆ ತಮ್ಮ ಅರ್ಧಶತಕದ ಇನ್ನಿಂಗ್ಸ್ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ವಿಶೇಷ ದಾಖಲೆಯನ್ನು ಸೃಷ್ಟಿಸಿದರು.
ಈ ಪಂದ್ಯದಲ್ಲಿ 50 ರನ್ಗಳ ಇನ್ನಿಂಗ್ಸ್ ಆಡಿದ ಕೊಹ್ಲಿ, ಈ ಇನ್ನಿಂಗ್ಸ್ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ 1000 ರನ್ಗಳ ಗಡಿ ದಾಟಿದ ಸಾಧನೆಯನ್ನು ಮಾಡಿದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದರಲ್ಲಿ ಐಪಿಎಲ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಗಳಿಸಿದ ರನ್ಗಳು ಸೇರಿವೆ.
ಈ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದರು ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಅವರು 50 ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಅವರ ಒಟ್ಟು ಮೊತ್ತವನ್ನು 972 ಕ್ಕೆ ಏರಿಸಿದರು. ಈ ವಿಚಾರದಲ್ಲಿ ಕನ್ನಡಿಗ ಕೆಎಲ್ ರಾಹುಲ್, ಮುಂಬೈ ವಿರುದ್ಧ ಇದುವರೆಗೆ 977 ರನ್ ಬಾರಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಉತ್ತಮ ಆರಂಭವನ್ನು ನೀಡಿತು. ಅವರು ಮೊದಲ ವಿಕೆಟ್ಗೆ 65 ಎಸೆತಗಳಲ್ಲಿ 120 ರನ್ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಸಾಲ್ಟ್ ಮತ್ತು ಕೊಹ್ಲಿ ನಡುವಿನ 120 ರನ್ಗಳ ಪಾಲುದಾರಿಕೆ ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಆರ್ಸಿಬಿ ಪರ ಎರಡನೇ ಅತ್ಯಧಿಕ ಆರಂಭಿಕ ಪಾಲುದಾರಿಕೆಯಾಗಿದೆ.
ನಟಿ ಮೃಣಾಲ್ ಠಾಕೂರ್ (Mrunal Thakur) ಬಹು ಬೇಡಿಕೆಯ ಪ್ಯಾನ್ ಇಂಡಿಯಾ ನಟಿ. ಮೂಲ ಮರಾಠಿ ಆದರೂ ಸಹ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ. ಮರಾಠಿ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟಿಸುವ ಮೃಣಾಲ್ ಠಾಕೂರ್, ತೆಲುಗು ಪ್ರೇಕ್ಷಕರೊಟ್ಟಿಗೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ತೆಲುಗಿನಲ್ಲಿ ಕೆಲ ಅದ್ಭುತವಾದ ಪಾತ್ರಗಳು ಅವರಿಗೆ ಸಿಕ್ಕಿದ್ದು, ಹಾಗೆಯೇ ಅದ್ಭುತ ಪ್ರೀತಿ ಸಹ ತೆಲುಗು ಪ್ರೇಕ್ಷಕರಿಂದ ಸಿಕ್ಕಿದೆ. ಇದೀಗ ಮೃಣಾಲ್ ಠಾಕೂರ್ ನಟಿಸಿರುವ ‘ಡಕೈತ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಆಡಿರುವ ಮಾತಿಗೆ ನಾಚಿ ನೀರಾಗಿದ್ದಾರೆ ನಟಿ.
ಮೃಣಾಲ್ ಠಾಕೂರ್ ನಾಯಕಿಯಾಗಿ, ಅಡಿವಿ ಶೇಷ್ ನಾಯಕನಾಗಿ ನಟಿಸಿರುವ ‘ಡಕೈತ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಇದೇ ಕಾರಣಕ್ಕೆ ಸಿನಿಮಾದ ಸಕ್ಸಸ್ ಮೀಟ್ ಅನ್ನು ಚಿತ್ರತಂಡ ಇತ್ತೀಚೆಗೆ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರು ಅತಿಥಿಯಾಗಿ ಆಗಮಿಸಿದ್ದರು. ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ಅಲ್ಲು ಅರವಿಂದ್, ಮೃಣಾಲ್ ಠಾಕೂರ್ ಅವರಿಗೆ ಆಶೀರ್ವಾದ ಮಾಡಿದರು. ಅಲ್ಲು ಅರವಿಂದ್ ಅವರ ಆಶೀರ್ವಾದ ಕೇಳಿ ನಾಚಿ ನೀರಾದರು ಮೃಣಾಲ್.
ವೇದಿಕೆ ಮೇಲೆ ಮಾತನಾಡಿದ ಅಲ್ಲು ಅರವಿಂದ್, ಮೃಣಾಲ್ ಠಾಕೂರ್ ಅವರನ್ನುದ್ದೇಶಿಸಿ, ‘ನೀವು ಇಲ್ಲೇ (ಆಂಧ್ರ-ತೆಲಂಗಾಣ) ಒಬ್ಬ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಆಗಿ ಇಲ್ಲಿಯೇ ಸೆಟಲ್ ಆಗಬೇಕು, ಇದು ನನ್ನ ಹಾರೈಕೆ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ಹಿಂದೆ ಒಬ್ಬ ನಟಿಗೆ ಹೀಗೆಯೇ ಆಶೀರ್ವಾದ ಮಾಡಿದ್ದೆ. ಆ ನಟಿ ಈಗ ತೆಲುಗು ಸೊಸೆ ಆಗಿದ್ದಾರೆ’ ಎಂದರು.
ಉತ್ತರ ಭಾರತದ ನಟಿ ಲಾವಣ್ಯಾ ತ್ರಿಪಾಠಿ ಅವರಿಗೂ ಸಹ ಅಲ್ಲು ಅರವಿಂದ್ ಅವರು ಹೀಗೆಯೇ ಆಶೀರ್ವಾದ ಮಾಡಿದ್ದರು. ಬಳಿಕ ಲಾವಣ್ಯಾ ತ್ರಿಪಾಠಿ ಮೆಗಾ ಫ್ಯಾಮಿಲಿ ನಟ ವರುಣ್ ತೇಜ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದು, ಈಗ ಮೆಗಾಸ್ಟಾರ್ ಫ್ಯಾಮಿಲಿಯ ಸೊಸೆ ಆಗಿದ್ದಾರೆ. ಈಗ ಮೃಣಾಲ್ ಠಾಕೂರ್ ಅವರಿಗೂ ಅದೇ ಆಶೀರ್ವಾದ ಮಾಡಿದ್ದಾರೆ ಅಲ್ಲು ಅರವಿಂದ್. ‘ನಿಮ್ಮ ನಟನೆ, ನಿಮ್ಮ ಅಂದ ಎಲ್ಲವೂ ತೆಲುಗು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ. ನಮ್ಮ ಚಿತ್ರರಂಗಕ್ಕೆ ನೀವು ಬೇಕಿದೆ. ನೀವು ಇಲ್ಲಿಯೇ ಯಾರಾದರೂ ಒಳ್ಳೆಯ ವರನನ್ನು ನೋಡಿ ಮದುವೆ ಆದರೆ, ನಿಮ್ಮನ್ನು ಇಲ್ಲಿಯೇ ಕಟ್ಟಿ ಹಾಕಬಹುದು’ ಎಂದಿದ್ದಾರೆ ಅಲ್ಲು ಅರವಿಂದ್.
ನಿರ್ಮಾಪಕ ಅಲ್ಲು ಅರವಿಂದ್ ಅವರ ಮಾತು ಕೇಳಿ ನಟಿ ಮೃಣಾಲ್ ಠಾಕೂರ್ ನಾಚಿ ನೀರಾಗಿದ್ದಾರೆ. ಅಂದಹಾಗೆ ಕೆಲ ತಿಂಗಳುಗಳ ಹಿಂದಷ್ಟೆ ಧನುಶ್ ಹಾಗೂ ಮೃಣಾಲ್ ಠಾಕೂರ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳೆಂದು ಬಳಿಕ ಸ್ಪಷ್ಟನೆ ನೀಡಲಾಯ್ತು. ಸದ್ಯಕ್ಕೆ ಮೃಣಾಲ್ ಠಾಕೂರ್ ಹೆಸರು ಯಾರೊಟ್ಟಿಗೂ ಥಳುಕು ಹಾಕಿಕೊಂಡಿಲ್ಲ.
ಕೊಪ್ಪಳ, ಏಪ್ರಿಲ್ 12: ನಗರದಲ್ಲಿ ಲವ್ ಜಿಹಾದ್ ಪ್ರಕರಣ (Love Jihad Case) ಸಾಕಷ್ಟು ಸದ್ದು ಮಾಡುತ್ತಿದೆ. ನರ್ಸಿಂಗ್ ಓದುತ್ತಿದ್ದ ಹಿಂದೂ ವಿದ್ಯಾರ್ಥಿನಿಯನ್ನ ಪುಸಲಾಯಿಸಿದ ಹಿನ್ನೆಲೆ ಮುಸ್ತಫಾ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಆತನ ಮೂಬೈಲ್ನಲ್ಲಿ ಹಿಂದೂ ಹುಡುಗಿಯರ ಅನೇಕ ಅಶ್ಲೀಲ ಫೋಟೋ, ವಿಡಿಯೋಗಳು ಪತ್ತೆಯಾಗಿದ್ದವು. ಆತನ ವಿರುದ್ಧ ಹಿಂದೂ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 8-10 ಅಪರಿಚಿತ ಹುಡುಗರ ವಿರುದ್ಧ ಮುಸ್ತಫಾ ಪ್ರೀತಿಸುತ್ತಿದ್ದ ಯುವತಿ ಕೊಪ್ಪಳ ನಗರ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾಳೆ.
ದೂರಿನಲ್ಲಿ ಏನಿದೆ?
ಕೊಪ್ಪಳ ಲವ್ ಜಿಹಾದ್ ಪ್ರಕರಣ ಸದ್ಯ ದೊಡ್ಡ ತಿರುವು ಪಡೆದುಕೊಂಡಿದೆ. ಮುಸ್ತಫಾ ಪ್ರೀತಿಸುತ್ತಿದ್ದ ಯುವತಿಯಿಂದ ಕೊಪ್ಪಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, 8-10 ಅಪರಿಚಿತ ಹುಡುಗರು ಎಂದು ಉಲ್ಲೇಖಿಸಿದ್ದಾಳೆ. ಏಪ್ರಿಲ್ 9ರಂದು ನಾನು, ಮುಸ್ತಫಾ ನಮ್ಮ ಕಿಮ್ಸ್ ಮೆಡಿಕಲ್ ಕಾಲೇಜಿನ ಹಿಂದುಗಡೆ ಇರುವ ನೀರಿದ ಟ್ಯಾಂಕ್ ಬಳಿ ಊಟ ಮಾಡುತ್ತಾ ಕುಳಿತಿದ್ದೆವು. ಆಗ ಅಲ್ಲಿಗೆ ಸುಮಾರು 8-10 ಸ್ಥಳೀಯ ಹುಡುಗರು ಬಂದು ನಮ್ಮನ್ನು ವಿಚಾರಿಸಿದರು. ನಮ್ಮ ಹೆಸರು ಹಾಗೂ ವಿಳಾಸ ತಿಳಿದುಕೊಂಡು, ನೀವಿಬ್ಬರೂ ಬೇರೆ ಧರ್ಮದವರೆಂದು ಮುಸ್ತಫಾಗೆ ಬೈಯ್ದರು. ಎದ್ದು ಹೋಗುವಾಗ ನಮ್ಮನ್ನು ತಡೆದು ಹಲ್ಲೆ ನಡೆಸಿದರು.
ಮುಸ್ತಫಾಗೆ ಜೀವ ಬೆದರಿಕೆ ಹಾಕಿ 2 ಮೊಬೈಲ್ ಪಡೆದಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಯುವತಿ ದೂರು ನೀಡಿದ್ದಾಳೆ. ಯುವತಿ ದೂರಿನನ್ವಯ ಬಿಎನ್‌ಎಸ್ ಸೆಕ್ಷನ್ 115(2), 126(2), 352, 351, 190ರಡಿ ಮೊಕದ್ದಮೆ ದಾಖಲು ಮಾಡಲಾಗಿದೆ.
ಮುಸ್ತಫಾ ಖಾದ್ರಿ ವಿರುದ್ಧವೂ ದೂರು
ಅತ್ತ ಅಪರಿಚಿತ ಹುಡುಗರ ವಿರುದ್ಧ ಯುವತಿ ದೂರು ನೀಡಿದರೆ, ಇತ್ತ ಮುಸ್ತಫಾ ಖಾದ್ರಿ ವಿರುದ್ಧವೂ ದೂರು ದಾಖಲಾಗಿದೆ. ವಿಹೆಚ್‌ಪಿ ಮುಖಂಡ ಸಂಗಮೇಶ ಹಿರೇಮಠ ದೂರಿನನ್ವಯ ಐಟಿ ಕಾಯ್ದೆ 66(E)67(a) ಅಡಿಯಲ್ಲಿ ಮುಸ್ತಫಾ ವಿರುದ್ಧ ಮೊಕದ್ದಮೆ ದಾಖಲಾಗಿದೆ.
ಅಸಭ್ಯವರ್ತನೆಯ ಸಾವಿರಾರು ಫೋಟೋ, ವಿಡಿಯೋಗಳು ಪತ್ತೆ
ಏ.9ರಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಯುವತಿ ಜೊತೆ ಅಸಭ್ಯವರ್ತನೆ ಮಾಡುತ್ತಿರುವ ಮಾಹಿತಿ ಬಂದಿತ್ತು. ಹೋಗಿ ಪರಿಶೀಲಿಸಿದಾಗ ಮುಸ್ತಫಾ ಯುವತಿಯನ್ನು ಪ್ರೀತಿಸುತ್ತೇನೆ ಅಂದಿದ್ದ. ಬಳಿಕ ಆತನ ಎರಡು ಮೊಬೈಲ್‌ಫೋನ್ ತೆಗೆದುಕೊಂಡು ನೋಡಿದ್ದೆವು. ಒಂದು ಮೊಬೈಲ್‌ನಲ್ಲಿ 3000 ಫೋಟೋ, 6000 ವಿಡಿಯೋಗಳಿದ್ದವು. ಮತ್ತೊಂದರಲ್ಲಿ 4000 ಸಾವಿರ ಫೋಟೋ, 3700 ವಿಡಿಯೋಗಳಿದ್ದವು.
16 ಹೆಣ್ಣುಮಕ್ಕಳ ಅಶ್ಲೀಲ, ಮಾನಸಿಕ ಹಿಂಸೆ ನೀಡಿರುವ ವಿಡಿಯೋಗಳಿವೆ. ಮುಸ್ತಫಾ ವಿಡಿಯೋಗಳನ್ನ ಇನ್ನೊಬ್ಬರಿಗೆ ರವಾನಿಸುವ ಸಾಧ್ಯತೆ ಇದೆ. ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು, (ಏಪ್ರಿಲ್ 12): ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಗೊಮ್ಮೆ ಇನ್ವೆನ್ಸಿಯಾ (Bengaluru Presidency University Invincia 2026) ಅನ್ನೋ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಿಕೊಂಡು ಬರ್ತಿದ್ದು, ಈ ಬಾರಿಯು ಸಹ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೀತು. ಬಾಲಿವುಡ್ ನಟಿ ಶ್ರೀಲೀಲಾ ಸಹ ಭಾಗಿಯಾಗಿ, ವಿವಿಯ 50 ನೇ ವರ್ಷದ ಲೋಗೋ ಲಾಂಚ್ ಮಾಡಿದ್ರು. ಹೌದು.. ಬೆಂಗಳೂರಿನ ಯಲಹಂಕದ ರಾಜಾನುಕುಂಟೆ ಬಳಿಯಿರುವ ಪ್ರೆಸಿಡೆನ್ಸಿ ವಿವಿಯಲ್ಲಿ ಎರಡು ವರ್ಷಗಳಿಗೊಮ್ಮೆ ಇನ್ವೆನ್ಸಿಯಾ ಅನ್ನೋ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತೆ. ಕಳೆದ ಎರಡು ದಿನಗಳಿಂದ ವಿವಿಯ ಕ್ಯಾಂಪಸ್ನಲ್ಲಿ ಕಲ್ಚರಲ್ ಫೆಸ್ಟ್ ಆಯೋಜಿಸಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ಫೆಸ್ಟ್ನಲ್ಲಿ ಭಾಗವಹಿಸಿದ್ರು.
ಬಹುಬಾಷಾ ನಟಿ, ಕನ್ನಡದವರೇ ಆದ ನಟಿ ಶ್ರೀಲೀಲಾ ಸಹ ವಿವಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮತ್ತಷ್ಟು ರಂಗು ತಂದಿರು. ಇನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ 50 ವರ್ಷ ಪೂರೈಸಿದೆ. ಹೀಗಾಗಿ ನಟಿ ಶ್ರೀಲೀಲಾ 50ನೇ ವರ್ಷದ ಲೋಗೋ ಲಾಂಚ್ ಮಾಡಿದ್ದು, ವಿವಿಯಲ್ಲಿ ಎರಡು ದಿನಗಳಿಂದ ವಿದ್ಯಾರ್ಥಿಗಳು ಸಂಗೀತ ನೃತ್ಯ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ಎಂಜಾಯ್ ಮಾಡಿದರು.
ಕುಂಭಮೇಳ ಮೊನಲಿಸಾ (Monalisa) ಮದುವೆ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಲೇ ಸಾಗುತ್ತಿದೆ. ಇತ್ತೀಚೆಗಷ್ಟೆ ಮೊನಲಿಸಾ ಕೇರಳದಲ್ಲಿ ಫರ್ಮನ್ ಖಾನ್ ಜೊತೆ ಮದುವೆ ಆಗಿದ್ದರು. ಕೇರಳದ ಕೆಲ ರಾಜಕೀಯ ಮುಖಂಡರ ನೇತೃತ್ವದಲ್ಲಿ ಈ ಮದುವೆ ನಡೆದಿತ್ತು. ಇದು ಲವ್ ಜಿಹಾದ್ ಎಂದು ಅವರ ತಂದೆ ಹಾಗೂ ಕೆಲ ಸಂಬಂಧಿಗಳು ಆರೋಪಿಸಿದ್ದರು. ಆದರೆ ತಮ್ಮದು ಲವ್ ಜಿಹಾದ್ ಅಲ್ಲವೆಂದು ಮೊನಲಿಸಾ ಮತ್ತು ಅವರ ಪತಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದರು. ಬಳಿಕ ಮೊನಲಿಸಾರ ಅಧಿಕೃತ ಜನ್ಮ ದಿನಾಂಕದ ಪ್ರಕಾರ ಅವರು ಅಪ್ರಾಪ್ತೆಯೆಂದು ಫರ್ಮನ್ ಖಾನ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಯ್ತು. ಅದರ ಬೆನ್ನಲ್ಲೆ ಇದೀಗ ಮೊನಲಿಸಾ ನಾಪತ್ತೆ ಆಗಿದ್ದಾಳೆ!
ಮೊನಾಲಿಸಾ ಅವರ ಪತಿ ಫರ್ಮನ್ ಖಾನ್, ಮೊನಾಲಿಸಾ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದು, ಆಕೆಯನ್ನು ಆಕೆಯ ಕುಟುಂಬದವರು ಬಲವಂತವಾಗಿ ಕರೆದೊಯ್ದಿದ್ದಾರೆ ಅಥವಾ ಬಚ್ಚಿಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಆರೋಪವನ್ನು ಅಲ್ಲಗಳೆದಿರುವ ಮೊನಾಲಿಸಾರ ತಾಯಿ ಈ ಆರೋಪಗಳನ್ನು ಕೇವಲ ‘ಡ್ರಾಮಾ’ ಎಂದು ಕರೆದಿದ್ದಾರೆ. ‘ಫರ್ಮನ್ ಸುಳ್ಳು ಹೇಳುತ್ತಿದ್ದಾನೆ, ಆತ ನನ್ನ ಮಗಳನ್ನು ದಾರಿ ತಪ್ಪಿಸಿದ್ದಾನೆ’ ಎಂದು ಅವರು ದೂರಿದ್ದಾರೆ.
ದಾಖಲೆಗಳ ಪ್ರಕಾರ, ಮದುವೆಯ ಸಮಯದಲ್ಲಿ ಮೊನಾಲಿಸಾ ಅವರಿಗೆ ಕೇವಲ 16 ವರ್ಷ 2 ತಿಂಗಳು ವಯಸ್ಸಾಗಿತ್ತು (ಹುಟ್ಟಿದ ದಿನಾಂಕ: 30 ಡಿಸೆಂಬರ್ 2009). ಆಕೆ ಮದುವೆಯಾಗುವಾಗ ಇನ್ನೂ ಅಪ್ರಾಪ್ತೆಯಾಗಿದ್ದರು. ಮೊನಾಲಿಸಾ ಅಪ್ರಾಪ್ತೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ, ಮಧ್ಯಪ್ರದೇಶದ ಖಾರ್ಗೋನ್ ಪೊಲೀಸರು ಫರ್ಮನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ನಕಲಿ ದಾಖಲೆಗಳನ್ನು ನೀಡಿ ಮದುವೆಯಾಗಿದ್ದಾರೆ ಎಂಬ ಆರೋಪವೂ ಆತನ ಮೇಲಿದೆ.
ಸಾಮಾಜಿಕ ಜಾಲತಾಣದ ಖ್ಯಾತಿಯಿಂದ ಶುರುವಾದ ಈ ಪ್ರೇಮಕಥೆ ಈಗ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಒಂದು ಕಡೆ ಪತಿ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಗೋಳಾಡುತ್ತಿದ್ದರೆ, ಕಾನೂನಿನ ಪ್ರಕಾರ ಆತ ಅಪ್ರಾಪ್ತೆಯನ್ನು ಮದುವೆಯಾದ ಅಪರಾಧಕ್ಕಾಗಿ ಜೈಲು ಶಿಕ್ಷೆ ಎದುರಿಸುವಂತಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕೂಡ ಈ ಪ್ರಕರಣದ ಮೇಲೆ ಕಣ್ಣಿಟ್ಟಿದ್ದು, ತನಿಖೆ ತೀವ್ರಗೊಂಡಿದೆ.
ನವದೆಹಲಿ, ಏಪ್ರಿಲ್ 12: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಧಾನ ಮಾತುಕತೆಗಳು ಮುರಿದುಬಿದ್ದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿ (Hormuz Strait) ಮೇಲೆ ಕಣ್ಣು ಇರಿಸಿದ್ದಾರೆ. ಈ ಜಲಸಂಧಿಯನ್ನು ಪೂರ್ಣವಾಗಿ ತಡೆಯುವಂತೆ ಅಮೆರಿಕದ ನೌಕಾಪಡೆಗೆ ತಿಳಿಸಿದ್ದೇನೆ. ಈ ಕ್ಷಣದಿಂದಲೇ ಹಾರ್ಮುಜ್ ಜಲಸಂಧಿಯಿಂದ ಯಾವುದೇ ಹಡಗು ಹೊರಹೋಗದಂತೆ, ಹಾಗೂ ಹೊರಗಿನಿಂದ ಯಾವ ಹಡಗೂ ಒಳಗೆ ಹೋಗದಂತೆ ತಡೆಯುವ ಪ್ರಕ್ರಿಯೆ ನಡೆಯಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ನಡೆದ ಸಂಧಾನ ಮುರಿದುಬೀಳಲು ಹಲವು ಕಾರಣಗಳನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಎರಡು ಪ್ರಮುಖವಾದುವೆಂದರೆ, ಪರಮಾಣ ಶಸ್ತ್ರಾಸ್ತ್ರ ತಯಾರಿಕೆಯನ್ನು ನಿಲ್ಲಿಸಲು ಇರಾನ್ ಒಪ್ಪದೇ ಇದ್ದದ್ದು ಒಂದು. ಹಾಗೆಯೇ, ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿ ಬಿಡಲೂ ಇರಾನ್ ಒಪ್ಪದಿದ್ದುದು ಇನ್ನೊಂದು ಕಾರಣ.
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಎಲ್ಲಾ ಹಡಗುಗಳಿಂದಲೂ ಸುಂಕ ವಸೂಲಿ ಮಾಡುವ ವ್ಯವಸ್ಥೆ ನಿರ್ಮಿಸಿದೆ. ಹಾರ್ಮುಜ್ ಜಲಸಂಧಿಯನ್ನು ದಾಟಬೇಕಾದರೆ ಇರಾನ್ಗೆ ಟೋಲ್ ಕಟ್ಟಬೇಕು. ನಂತರ, ಇರಾನ್ನ ನೌಕಾಸೇನೆಯ ಬೆಂಗಾವಲಿನಲ್ಲಿ ಆ ಹಡಗು ಹಾರ್ಮುಜ್ ಜಲಸಂಧಿ ದಾಟಲು ಅವಕಾಶ ಕೊಡಲಾಗುತ್ತದೆ. ಇಂಥದ್ದೊಂದು ವ್ಯವಸ್ಥೆಯನ್ನು ಇರಾನ್ ಮಾಡಿದೆ. ಈಗ ಅಮೆರಿಕದ ಸೇನೆಯಿಂದ ಹಾರ್ಮುಜ್ ಜಲಸಂಧಿಯನ್ನು ಹಿಡಿತಕ್ಕೆ ತರಲು ಹೊರಟಿದೆ. ಇದು ಇನ್ನಷ್ಟು ಭೀಕರ ಯುದ್ಧಕ್ಕೆ ಎಡೆ ಮಾಡಿಕೊಡಬಹುದು.
ಸಂಧಾನಕ್ಕೆ ಮಧ್ಯಸ್ತಿಕೆ ವಹಿಸಲು ರಷ್ಯಾ ಸಿದ್ಧ
ಇದೇ ವೇಳೆ, ಅಮೆರಿಕ ಮತ್ತು ಇರಾನ್ ಮಧ್ಯೆ ಒಂದು ರಾಜಿ ಏರ್ಪಡಿಸಲು ಮಧ್ಯಸ್ತಿಕೆ ವಹಿಸಲು ತಾನು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರಿಗೆ ತಿಳಿಸಿದ್ದಾರೆ.
ಈ ಇಬ್ಬರು ನಾಯಕರು ಫೋನ್ ಮೂಲಕ ಮಾತನಾಡಿ, ಪ್ರಸಕ್ತ ವಿದ್ಯಮಾನಗಳನ್ನು ಚರ್ಚಿಸಿದ್ದಾರೆ. ಈ ಸಂಘರ್ಷ ಅಥವಾ ಬಿಕ್ಕಟ್ಟಿಗೆ ರಾಜಕೀಯವಾದ ಮತ್ತು ರಾಜತಾಂತ್ರಿಕವಾದ ಪರಿಹಾರಕ್ಕೆ ಪ್ರಯತ್ನಿಸಲು ತಾನು ಸಿದ್ಧ ಎಂದು ಈ ವೇಳೆ ಪುಟಿನ್ ಅವರು ಆಫರ್ ಮಾಡಿದರೆನ್ನಲಾಗಿದೆ.
ಇರಾನ್ ಮತ್ತು ಅಮೆರಿಕದ ನಡುವಿನ ಕದನವಿರಾಮ 15 ದಿನಗಳದ್ದಾಗಿದೆ. ಇನ್ನು 9-10 ದಿನಗಳು ಬಾಕಿ ಇವೆ. ಅಷ್ಟರೊಳಗೆ ರಾಜಿ ಏರ್ಪಟ್ಟರೆ ಯುದ್ಧ ನಿಲ್ಲಬಹುದು. ಇಲ್ಲದಿದ್ದರೆ ಇನ್ನೂ ಹೆಚ್ಚು ತೀವ್ರತೆಯಲ್ಲಿ ಸಮರ ಮುಂದುವರಿಯುವ ಸಾಧ್ಯತೆ ಇದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ ಪಂದ್ಯದಲ್ಲಿ ಆರ್ಸಿಬಿ ನಾಯಕ ರಜತ್ ಪಾಟಿದರ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕ ಫಿಲ್ ಸಾಲ್ಟ್ ಔಟಾದ ಬಳಿಕ ಬ್ಯಾಟಿಂಗ್ಗೆ ಬಂದ ರಜತ್, ಬಂದ ಕೂಡಲೇ ಪ್ರತಿಯೊಬ್ಬ ಮುಂಬೈ ಬೌಲರ್ಗಳ ವಿರುದ್ಧ ಬೌಂಡರಿಗಳ ಮಳೆಗರೆದರು. ಇದರ ಪರಿಣಾಮವಾಗಿ ರಜತ್ ಕೇವಲ 11 ಎಸೆತಗಳಲ್ಲಿ 44 ರನ್ ಕಲೆಹಾಕಿದರು. ರಜತ್ ತಮ್ಮ ಮುಂದಿನ ಎಸೆತದಲ್ಲಿ ಸಿಕ್ಸರ್ ಸಿಡಿಸಿ 50 ರನ್ಗಳ ಗಡಿ ದಾಟುತ್ತಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು. ಆದರೆ ಅದಕ್ಕೆ ಟ್ರೆಂಟ್ ಬೌಲ್ಟ್ ಅವಕಾಶ ಮಾಡಿಕೊಡಲಿಲ್ಲ.
ಆದಾಗ್ಯೂ ರಜತ್ ಎದುರಿಸಿದ 11 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಬಾರಿಸಿದರು. ಅಂದರೆ ಎದುರಿಸಿದ 11 ಎಸೆತಗಳಲ್ಲಿ ಬರೋಬ್ಬರಿ 8 ಬೌಂಡರಿಗಳನ್ನು ರಜತ್ ಬಾರಿಸಿದರು. ಒಟ್ಟಾರೆ ಈ 8 ಎಸೆತಗಳಲ್ಲಿ ರಜತ್ 42 ರನ್ಗಳನ್ನು ಕಲೆಹಾಕಿದರು. ಅಂತಿಮವಾಗಿ ರಜತ್ 17 ಎಸೆತಗಳಲ್ಲಿ ತಮ್ಮ ಸತತ ಎರಡನೇ ಅರ್ಧಶತಕ ಬಾರಿಸಿದರು. ಸ್ಯಾಂಟ್ನರ್ ಅವರ ಎಸೆತವನ್ನು ಬೌಂಡರಿಗಟ್ಟುವ ಮೂಲಕ ರಜತ್ ತಮ್ಮ ಅರ್ಧಶತಕ ಪೂರೈಸಿದರು.
ಬೆಂಗಳೂರು, (ಏಪ್ರಿಲ್ 12): ಕರ್ನಾಟಕ ಕಾಂಗ್ರೆಸ್ನಲ್ಲಿ (Karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಶೀಘ್ರದಲ್ಲೇ ಸಚಿವ ಸಂಪುಟ ಪುನಾರಚನೆ (Cabinet reshuffle) ಆಗಬೇಕು, ಸಮಯ ಮೀರುತ್ತಿದೆ, ಸರ್ಕಾರ ರಚನೆಯಾಗಿ 3 ವರ್ಷ ಕಳೆಯುತ್ತಾ ಬಂದಿದೆ. ಇನ್ನೂ ವಿಳಂಬ ಆದ್ರೆ. ಸಚಿವ ಸ್ಥಾನ ಸಿಕ್ಕಿದ್ರೂ ಪ್ರಯೋಜನ ಏನು ಎಂದು ಸಚಿವಾಕಾಂಕ್ಷಿಗಳು ಪ್ರಶ್ನಿಸಿದ್ದು, ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ಗೆ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಈ ಸಂಬಂಧ ಇದೀಗ ಮೊದಲ ಹೆಜ್ಜೆಯಾಗಿ ಕಾಂಗ್ರೆಸ್‌ನ ಹಿರಿಯ ಶಾಸಕರ ದಂಡು ದೆಹಲಿ (New Delhi) ಯಾತ್ರೆ ಕೈಗೊಂಡಿದೆ. ಈ ಬಾರಿ ಅಶೋಕ್ ಪಟ್ಟಣ್, ಟಿ.ಬಿ.ಜಯಚಂದ್ರ ನೇತೃತ್ವ ವಹಿಸಿದ್ದು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲರನ್ನ ಭೇಟಿಯಾಗಿ ಸಚಿವ ಸ್ಥಾನಕ್ಕೆ ಡಿಮ್ಯಾಂಡ್ ಮಾಡಲಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಕಾಂಗ್ರೆಸ್‌ನ ಸುಮಾರು 25 ರಿಂದ 30 ಹಿರಿಯ ಶಾಸಕರ ದಂಡು ಭಾನುವಾರ ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಭೇಟಿಗೆ ತೆರಳುವ ಮುನ್ನವೇ ಈ ಶಾಸಕರ ಗುಂಪು ದೆಹಲಿಗೆ ತೆರಳಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕನಿಷ್ಠ ಮೂರಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಹಾಗೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಈ ಹಿರಿಯ ಶಾಸಕರು, ಎರಡ್ಮೂರು ದಿನಗಳ ಕಾಲ ದೆಹಲಿಯಲ್ಲಿಯೇ ಮೊಕ್ಕಾಂ ಹೂಡಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ತಮ್ಮ ಮನವಿ ಸಲ್ಲಿಸಲಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರ ಭೇಟಿಗೂ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಹೌದು…ಸಚಿವ ಪುನಾರಚನೆ ಸಂಬಂಧ ಬಣ ರಾಜಕೀಯ ಶುರುವಾದಂತಿದೆ. ಯಾಕಂದ್ರೆ, ಈಗಾಗಲೇ ಸಂಪುಟ ಪುನಾರಚನೆ ಮಾಡಬೇಕೆಂದು ದೆಹಲಿಗೆ ತೆರಳಿರುವ ಬಹುತೇಕ ಶಾಸಕರು ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವವರು. ಆದ್ರೆ, ಡಿಸಿಎಂ ಡಿಕೆ ಶಿವಕುಮಾರ್ ಬಣದ ಶಾಸಕರು ದೆಹಲಿ ತೆರಳು ಹಿಂದೇಟು ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ. ನಾಯಕತ್ವ ಬದಲಾವಣೆಗೆ ಧ್ವನಿ ಎತ್ತಿದ್ದ ಡಿಕೆಶಿ ಬಣದ ಶಾಸಕರು ಇದೀಗ ಸಂಪುಟ ಪುನಾರಚನೆ ಹಕ್ಕೊತ್ತಾಯದಿಂದ ದೂರ ಉಳಿದುಕೊಂಡಿರುವು ಹಲವು ಚರ್ಚೆಗೆ ಗ್ರಾಸವಾಗಿದೆ.
ನಾಯಕತ್ವ ಬದಲಾವಣೆ ಕೂಗಿಗೆ ಪ್ರತಿಯಾಗಿ ದಾಳ ಹೂಡಿದ್ರಾ ಸಿಎಂ?
ದಾವಣಗೆರೆ ದಕ್ಷಿಣ, ಬಾಗಲಕೋಟೆ ಬೈಎಲೆಕ್ಷನ್ ಮುಗಿಯುವವರೆಗೂ ಸೈಲೆಂಟ್ ಆಗಿದ್ದ ನಾಯಕತ್ವ ಬದಲಾವಣೆ ಕಿತ್ತಾಟ ಈಗ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆಗಳಿವೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಉಪಚುನಾವಣೆ ಮುಗಿಯುವವರೆಗೂ ಶಾಂತವಾಗಿದ್ದರು, ಯಾಕಂದ್ರೆ ಇವರ ಕಿತ್ತಾಟ ಚುನಾವಣೆ ಮೇಲೆ ಎಫೆಕ್ಟ್ ಆಗಬಾರದು ಎಂದು. ಆದ್ರೆ, ಈಗ ಮತದಾನ ಮುಗಿಯುತ್ತಿದ್ದಂತೆಯೇ ಡಿಕೆಶಿ ಬಣ ನಾಯಕತ್ವ ಬದಲಾವಣೆ ವಿಚಾರವನ್ನು ಕೈಗೆತ್ತಿಕೊಳ್ಳುತ್ತೆ ಎನ್ನುವಷ್ಟರಲ್ಲಿ ಸಿದ್ದರಾಮಯ್ಯ, ಸಂಪುಟ ಪುನಾರಚನೆ ಹೆಸರಲ್ಲಿ ಸಿಎಂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಒಂದು ಕಡೆ ಕಾದು ಕಾದು ಸುಸ್ತಾಗಿರುವ ಡಿಕೆಶಿ. ಇತ್ತ ಕುರ್ಚಿ ಬಿಟ್ಟು ಏಳದ ಸಿದ್ದರಾಮಯ್ಯ, ಒಂದು ಹೆಜ್ಜೆ ಮುಂದೆ ಹೋಗಿದ್ದು, ನಾಯಕತ್ವ ಬದಲಾವಣೆ ಕಿತ್ತಾಟ ಮುನ್ನಲೆಗೆ ಬರುವ ಮುನ್ನವೇ ಸಂಪುಟ ಪುನಾರಚನೆ ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ.
ಶಾಸಕರ ದೆಹಲಿಯಾತ್ರೆ ಹಿಂದೆ ಸಿದ್ದರಾಮಯ್ಯ?
ಹೀಗೊಂದು ಚರ್ಚೆ ನಡೆದಿವೆ. ಸಂಪುಟ ಪುನಾರಚನೆ ಮಾಡಬೇಕೆಂದು ಶಾಸಕರು ಕೈಗೊಂಡಿರುವ ದೆಹಲಿ ಯಾತ್ರೆಯಿಂದ ಸಿಎಂ ಸಿದ್ದರಾಮಯ್ಯನವರು ಇದ್ದಾರೆ. ಅವರೇ ದೆಹಲಿಗೆ ಹೋಗುವಂತೆ ಶಾಸಕರನ್ನು ಕಳುಹಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇದಕ್ಕೆ ಪೂರಕವೆಂಬಂತೆ ಶಾಸಕರು ದೆಹಲಿ ಹೋಗಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನಿಗೆ ಉತ್ತರಿಸಿರುವ ಸಿದ್ದರಾಮಯ್ಯ, ದೆಹಲಿಗೆ ಹೋದ್ರೆ ತಪ್ಪೇನು, ಬೇಡ ಅಂದೋರು ಯಾರು? ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆ ಮಾಡಬೇಕಿತ್ತು. ಪಂಚ ರಾಜ್ಯಗಳ ಚುನಾವಣೆ, ಬೈಎಲೆಕ್ಷನ್‌ನಿಂದ ವಿಳಂಬವಾಗಿದೆ ಎಂದಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರು ಪರೋಕ್ಷವಾಗಿ ಶಾಸಕರ ದೆಹಲಿ ಯಾತ್ರೆಗೆ ಬೆಂಬಲಿಸಿದ್ದಾರೆ.
ದೆಹಲಿಗೆ ಹೋದವರು ಯಾರ‍್ಯಾರು?
1.ಟಿಬಿ ಜಯಚಂದ್ರ – ಶಿರಾ ಕ್ಷೇತ್ರ
2.ಅಶೋಕ್ ಪಟ್ಟಣ್ – ರಾಮದುರ್ಗ ಕ್ಷೇತ್ರ
3.ಎಸ್.ಎನ್ ಸುಬ್ಬಾರೆಡ್ಡಿ – ಬಾಗೇಪಲ್ಲಿ ಕ್ಷೇತ್ರ
4.ಸಿ ಪುಟ್ಟರಂಗಶೆಟ್ಟಿ – ಚಾಮರಾಜನಗರ ಕ್ಷೇತ್ರ
5.ಹಂಪನಗೌಡ ಬಾದರ್ಲಿ – ಸಿಂಧನೂರು ಕ್ಷೇತ್ರ
6.ಡಿಜಿ ಶಾಂತನಗೌಡ – ಹೊನ್ನಾಳ್ಳಿ ಕ್ಷೇತ್ರ
7.ಬಸವರಾಜ್ ಶಿವಣ್ಣನವರ್ – ಬ್ಯಾಡಗಿ ಕ್ಷೇತ್ರ
8.ಎ.ಆರ್ ಕೃಷ್ಣಮೂರ್ತಿ – ಕೊಳ್ಳೇಗಾಲ ಕ್ಷೇತ್ರ
9.ಪ್ರಸಾದ್ ಅಬ್ಬಯ್ಯ – ಹು-ಧಾ ಪೂರ್ವ ಕ್ಷೇತ್ರ
10.ಯುಬಿ ಬಣಕರ್ – ಹಿರೇಕೆರೂರು ಕ್ಷೇತ್ರ
11.ಜಿ.ಎಸ್ ಪಾಟೀಲ್ – ರೋಣ ಕ್ಷೇತ್ರ
12.ಯಶವಂತರಾಯ ಗೌಡ ಪಾಟೀಲ್ – ಇಂಡಿ ಕ್ಷೇತ್ರ
13.ಷಡಕ್ಷರಿ – ತಿಪಟೂರು ಕ್ಷೇತ್ರ
14.ಎಸ್.ಎನ್ ನಾರಾಯಣಸ್ವಾಮಿ – ಬಂಗಾರಪೇಟೆ ಕ್ಷೇತ್ರ
15.ಲಕ್ಷ್ಮಣ ಸವದಿ – ಅಥಣಿ ಕ್ಷೇತ್ರ
16.ಅಪ್ಪಾಜಿ ನಾಡಗೌಡ – ಮುದ್ದೇಬಿಹಾಳ ಕ್ಷೇತ್ರ
17.ಪ್ರಿಯಕೃಷ್ಣ – ಗೋವಿಂದರಾಜನಗರ ಕ್ಷೇತ್ರ
19.ರಮೇಶ್ ಬಂಡಿ ಸಿದ್ದೇಗೌಡ – ಶ್ರೀರಂಗಪಟ್ಟಣ ಕ್ಷೇತ್ರ
20.ಬಿ. ಶಿವಣ್ಣ – ಆನೇಕಲ್ ಕ್ಷೇತ್ರ
21.ರಾಘವೇಂದ್ರ ಹಿಟ್ನಾಳ್ – ಕೊಪ್ಪಳ ಕ್ಷೇತ್ರ
22.ಬೇಳೂರು ಗೋಪಾಲಕೃಷ್ಣ- ಸಾಗರ ಕ್ಷೇತ್ರ
ಬಹುತೇಕ ಸಿಎಂ ಬಣದ ಶಾಸಕರು ಸಂಪುಟ ಪುನಾರಚನೆಯಾಗಲೇಬೇಕೆಂದು ಹೈಕಮಾಂಡ್ ಮುಂದೆ ಹಕ್ಕೋತ್ತಾಯ ಮಾಡಲು ದೆಹಲಿ ತೆರಳಿದ್ದು, ಇತ್ತ ಡಿಕೆ ಶಿವಕುಮಾರ್ ಹಾಗೂ ಅವರ ಬಣದ ಶಾಸಕರು ಸೈಲೆಂಟ್ ಇರುವುದು ತೀವ್ರ ಕುತೂಹಲ ಮೂಡಿಸಿದೆ. ಆದ್ರೆ, ಈ ಸಂಪುಟ ಪುನಾರಚನೆ ಒತ್ತಾಯಕ್ಕೆ ಹೈಕಮಾಂಡ್ ಸೊಪ್ಪು ಹಾಕುತ್ತಾ? ಅಥವಾ ಶಾಸಕರ ಒತ್ತಡಕ್ಕೆ ಮಣಿದ ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಕೊಡುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ಚಾಮರಾಜನಗರ, ಏಪ್ರಿಲ್ 12: ಪೊಲೀಸರ ಜೊತೆ ಅನುಚಿತ ವರ್ತನೆ ತೋರಿದ ಹಿನ್ನಲೆ ಚಾಮರಾಜನಗರ (Chamarajanagar) ಸತ್ರ ನ್ಯಾಯಾಲಯ ಆರೋಪಿ ಯುವಕನಿಗೆ ಠಾಣೆಯಲ್ಲಿ ಎರಡು ದಿನ ಸಮುದಾಯ ಸೇವೆ ಸಲ್ಲಿಸಲು ಸೂಚನೆ ನೀಡಿದೆ. ಆ ಮೂಲಕ ಮಾಡಿದ ತಪ್ಪಿಗೆ ವಿನೂತನ ಶಿಕ್ಷೆ ನೀಡುವುದರ ಜೊತೆಗೆ ಹೊಸ ತಹಬದಿಗೆ ನಾಂದಿ ಹಾಡಿದೆ.
ವಿನೂತನ ಶಿಕ್ಷೆಗೆ ಗುರಿಯಾದ ಯುವಕ
ಚಾಮರಾಜನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮ್ಯೂಲ್ ಖಾತೆ ನೈಜತೆ ಪರಿಶೀಲನೆ ಸಂಬಂಧ ಹಾಜರಾಗಿದ್ದ ವೇಳೆ ಯುವಕ ಆನಂದ್ ಅಸಂಬದ್ಧವಾಗಿ ಹಾಗೂ ಏರು ಧ್ವನಿಯಲ್ಲಿ ಮಾತನಾಡಿದ್ದಾನೆ. ಅಷ್ಟೇ ಅಲ್ಲದೆ ಖಾತೆಗೆ ಸಂಬಂಧಿಸಿದ ಸಮರ್ಪಕ ದಾಖಲಾತಿ ನೀಡಲು ಹಿಂಜರಿದಿದ್ದಾನೆ. ಹೀಗಾಗಿ ನಗರದ ಸಿ.ಜೆ.ಎಂ ನ್ಯಾಯಾಲಯವು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎರಡು ದಿನ ಸಮುದಾಯ ಸೇವೆಗಾಗಿ ಪೊಲೀಸರಿಗೆ ಸಹಾಯ ಮಾಡುವಂತೆ ವಿನೂತನ ಶಿಕ್ಷೆ ವಿಧಿಸಿದೆ.
ಮೂಲತಃ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ನಿವಾಸಿ ಆನಂದ್, ಪೊಲೀಸರ ಜೊತೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ 1965 ಲಘು ಪ್ರಕರಣ ಕಲಂ ಒ ಆ್ಯಂಡ್ ಕ್ಯೂ ಅಡಿ ದಾಖಲಿಸಲಾಗಿತ್ತು.
ಪೊಲೀಸ್ ಠಾಣೆಯಲ್ಲಿ ಕೆಲಸ
ಪ್ರಕರಣ ಸಂಬಂಧ ಸಿ.ಜೆ.ಎಂ ನ್ಯಾಯಾಲಯವು ಆನಂದ್‍ಗೆ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಠಾಣೆಗೆ ಬರುವವರನ್ನು ಬರ ಮಾಡಿಕೊಂಡು ಸೌಜನ್ಯಯುತವಾಗಿ ವ್ಯವಹರಿಸಿ, ಪೊಲೀಸರಿಗೆ ನೆರವಾಗುವ ಮೂಲಕ ಸಮುದಾಯ ಸೇವೆ ಸಲ್ಲಿಸುವಂತೆ ನ್ಯಾಯಾಲಯವು ಆದೇಶಿಸಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ 20ನೇ ಪಂದ್ಯದಲ್ಲಿ ಐದು ಬಾರಿಯ ಮುಂಬೈ ತಂಡವನ್ನು ಎದುರಿಸಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆರಂಭಿಕ ಫಿಲ್ ಸಾಲ್ಟ್ ಸಿಡಿಲಬ್ಬರದ ಅರ್ಧಶತಕ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಸಾಲ್ಟ್ ಸರಿಯಾದ ಸಂದರ್ಭದಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಮುಂಬೈನಂತಹ ಬಲಿಷ್ಠ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಸಾಲ್ಟ್ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದರು. ಇದರ ಪರಿಣಾಮವಾಗಿ ಕೇವಲ 25 ಎಸೆತಗಳಲ್ಲಿ ಈ ಆವೃತ್ತಿಯ ಮೊದಲ ಅರ್ಧಶತಕ ಬಾರಿಸಿದರು.