All posts by nagaraj11081993

ಬಳ್ಳಾರಿಯಲ್ಲಿ ಬ್ಯಾನರ್​​ ಗಲಾಟೆ: ‘ಕೈ’ ಕಾರ್ಯಕರ್ತ ರಾಜಶೇಖರ್​ ಮೃತಪಟ್ಟಿದ್ದು ಯಾರ ಗುಂಡೇಟಿಗೆ? – Kannada News | Ballari Banner Dispute: Who Fired the Fatal Shot That Killed Rajasekhar?

ಬ್ಯಾನರ್​​ ಗಲಾಟೆವೇಳೆ ಗುಂಡೇಟಿಗೆ ಯುವಕ ಬಲಿ.

ಬಳ್ಳಾರಿ, ಜನವರಿ 02: ಬ್ಯಾನರ್​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಯುವಕ ಮೃತಪಟ್ಟಿರುವ ವಿಚಾರವೀಗ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಬಳ್ಳಾರಿ ಎಂಎಲ್​​ಎ ನಾರಾ ಭರತ್​​ ರೆಡ್ಡಿ ವಿರುದ್ಧ ಸಮರಕ್ಕೆ ಕಾರಣವಾಗಿದೆ. ಉಭಯ ನಾಯಕರು ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆಯನ್ನೇ ಗೈಯುತ್ತಿದ್ದಾರೆ. ಇದು ನನ್ನ ಕೊಲೆಗೆ ನಡೆದ ಸಂಚು ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದರೆ, ಅಕ್ರಮ ಗಣಿಗಾರಿಕೆ ವಿಷಯ ಡೈವರ್ಟ್​ ಮಾಡಲು ಇಂತಹ ನೀಜ ಕೃತ್ಯಕ್ಕೆ ಜನಾರ್ದನ ರೆಡ್ಡಿ ಇಳಿದಿದ್ದಾನೆ ಎಂದು ಏಕವಚನದಲ್ಲೇ ಭರತ್​​ ರೆಡ್ಡಿ ಕಿಡಿಕಾರಿದ್ದಾರೆ. ಇದೆಲ್ಲದರ ನಡುವೆ ಯುವಕ ರಾಜಶೇಖರ್​​ ಸಾವಿಗೆ ಕಾರಣವಾದ ಬುಲೆಟ್ ಫೈರ್​​ ಮಾಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಬ್ಯಾನರ್​​ ವಿಚಾರವಾಗಿ ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜೊತೆಗೆ ಶಾಸಕ ಭರತ್​​ ರೆಡ್ಡಿ ಆಪ್ತನ ಬಾಡಿಗಾರ್ಡ್​​ಗಳು ಕೂಡ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ​ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣ ಸಂಬಂಧ ಖಾಸಗಿ ಗನ್​ಮ್ಯಾನ್​​ಗಳ 3 ಗನ್​ ಸೀಜ್ ಮಾಡಿದ್ದಾರೆ. ಅವುಗಳನ್ನು ಪರಿಶೀಲನೆಗಾಗಿ FSLಗೆ ಕಳುಹಿಸಲಾಗಿದೆ. ಜನಾರ್ದನರೆಡ್ಡಿಗೆ ನೀಡಿದ್ದ ಗನ್​ಮ್ಯಾನ್​ಗಳ ಗನ್​ ಸಹ ಪರಿಶೀಲನೆ ನಡೆಸಲಾಗಿದ್ದು, ರೆಡ್ಡಿ ಗನ್​ಮ್ಯಾನ್​ಗಳ ಗನ್​ನಿಂದ ಬುಲೆಟ್​ ಬಳಕೆ ಆಗದಿರುವುದು ಪತ್ತೆಯಾಗಿದೆ ಎಂದು ಟಿವಿ9ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ನನ್ನನ್ನು ಮುಗಿಸಲೆಂದೇ ಫೈರಿಂಗ್ ಮಾಡಿದ್ದಾರೆ; ಜನಾರ್ದನ ರೆಡ್ಡಿ ಆರೋಪ

ಬಳ್ಳಾರಿ ಘರ್ಷಣೆ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ವಾಲ್ಮೀಕಿ ಬ್ಯಾನರ್ ಹಾಕಿದ ವಿಚಾರವಾಗಿ ಗಲಾಟೆಯಾಗಿದೆ. ಮನೆಯ ರಸ್ತೆಯಲ್ಲಿ ಬ್ಯಾನರ್ ಹಾಕಲು ಜನಾರ್ದನರೆಡ್ಡಿ ವಿರೋಧಿಸಿದ್ದಾರೆ ಎನ್ನಲಾಗಿದೆ. ಆ ವಿಚಾರಕ್ಕೆ ಗಲಾಟೆ ನಡೆದು, ಕಾಂಗ್ರೆಸ್​ನ ಓರ್ವ ಕಾರ್ಯಕರ್ತ ಮೃತಪಟ್ಟಿದ್ದಾನೆ. ಆ ವೇಳೆ ಯಾರು ಫೈರ್ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದೇನೆ. ಆ ಬಗ್ಗೆ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುನ್ನೆಚ್ಚರಿಕೆಯಾಗಿ ದಾವಣಗೆರೆ ಐಜಿ ಘಟನಾ ಸ್ಥಳಕ್ಕೆ ಹೋಗಿದ್ದು, ಖಾಸಗಿ ಗನ್ ಮ್ಯಾನ್​ಗಳ ರಿವಾಲ್ವಾರ್​ಗಳನ್ನು ಸೀಜ್ ಮಾಡಿದ್ದಾರೆ. ಸತೀಶ್ ರೆಡ್ಡಿ ಗನ್​ಮ್ಯಾನ್ ಫೈರ್ ಮಾಡಿದ್ದಾರೆ ಅಂತಾ ಹೇಳ್ತಿದ್ದಾರೆ. ಅದರ ಬಗ್ಗೆಯೂ ತನಿಖೆ ಆಗಬೇಕು. ಗಲಾಟೆ ಮಾಡಿದ ವಿಚಾರಕ್ಕೆ ಜನಾರ್ದನ ರೆಡ್ಡಿ ಸೇರಿ 11 ಜನರ ವಿರುದ್ಧ ಎಫ್​ಐಆರ್ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಉಂಡ ಮನೆಗೇ ದಂಪತಿಯಿಂದ ದ್ರೋಹ: ಉದ್ಯಮಿ ಮನೆಯಲ್ಲಿ ಕದ್ದಿದ್ದು 979 ಗ್ರಾಂ ಬಂಗಾರ! – Kannada News | Robbery at Bengaluru Entrepreneur’s House: 979 Grams of Gold Stolen by House Helpers

ಬೆಂಗಳೂರು, ಜನವರಿ 02: ಉದ್ಯಮಿಯೊಬ್ಬರ ಮನೆಯಲ್ಲಿ ಮನೆ ಕೆಲಸಗಾರರೇ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ ಕದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹೊಸ ವರ್ಷಾಚರಣೆಗೆಂದು ಕುಟುಂಬ ಬೇರೆ ರಾಜ್ಯಕ್ಕೆ ತೆರಳುವ ವೇಳೆ ಕೆಲಸಗಾರರ ಬಳಿ ಕೀ ಕೊಟ್ಟು ತೆರಳಿತ್ತು. ಇದನ್ನೇ ಬಂಡವಾಳ ಮಾಡಕೊಂಡು ಮನೆಯಲ್ಲಿ ಆರೋಪಿಗಳು ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.

ಡಿ.30ರಂದು ಸದಾಶಿವ ನಗರದ ಉದ್ಯಮಿ ಅಭಿಷೇಕ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬರೋಬ್ಬರಿ 1.37 ಕೋಟಿ ರೂ. ಮೌಲ್ಯದ ಚಿನ್ನ, ವಾಚ್​​ಗಳನ್ನು ಕಳವು ಮಾಡಲಾಗಿದೆ. ಆ ಪೈಕಿ ಚಿನ್ನ 1.27 ಕೋಟಿ ರೂ. ಮೌಲ್ಯದಾಗಿದ್ದರೆ, ವಾಚ್​​ಗಳು 10 ಲಕ್ಷ ಬೆಲೆಬಾಳುವಂತದ್ದು ಎಂದು ತಿಳಿದುಬಂದಿದೆ. ಆರೋಪಿಗಳಾದ ಹಾಜಿರ ಬೇಗಂ ಮತ್ತುಆಕೆಯಪತಿ ಶಾಹೀರ್​​ಗೆ ಖಾಕಿ ಬಲೆ ಬೀಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ; ರಾಡ್​​ನಿಂದ ಹೊಡೆದು ಕೊಲೆ

ಪಶ್ಚಿಮ ಬಂಗಾಳ ಮೂಲದ ಹಾಜಿರ ಬೇಗಂ ಮತ್ತು ಶಾಹೀರ್​​ ದಂಪತಿ ಈ ಹಿಂದೆ 2022ರಿಂದ 2024ರ ವರೆಗೆ ಅಭಿಷೇಕ್ ಮನೆಯಲ್ಲೇ ಕೆಲಸ ಮಾಡಿದ್ದರು. ಆ ಬಳಿಕ ಕೆಲಸ ಬಿಟ್ಟಿದ್ದ ಇವರು ಮತ್ತೆ ಮತ್ತೆ 2025 ಡಿ.27ರಂದು ಕೆಲಸಕ್ಕೆ ಸೇರಿದ್ದರು. ಡಿ. 30ರಂದು ಹೊಸ ವರ್ಷಾಚರಣೆ ಸಲುವಾಗಿ ಕೊಯಮತ್ತೂರಿಗೆ ಅಭಿಷೇಕ್ ಕುಟುಂಬ ತೆರಳಿದ್ದು, ತಮ್ಮ ಅತ್ತೆಗೆ ಕೊಡು ಎಂದು ಹಾಜಿರಾ ಬಳಿ ಒಂದು ಕೀಯನ್ನು ಕೊಟ್ಟು ಹೋಗಿದ್ದರು. ಆದರೆ ಸಂಜೆಯಾದರೂ ಮನೆಯ ಕೀಯನ್ನ ಅತ್ತೆಗೆ ಹಾಜಿರಾ ಕೊಟ್ಟಿಲ್ಲ. ಹೀಗಾಗಿ ವಿಚಾರಿಸಲು ದೂರವಾಣಿ ಕರೆ ಮಾಡಲಾಗಿದ್ದು, ಆ ವೇಳೆ ಹಾಜಿರಾ ದಂಪತಿ ಮೊಬೈಲ್​​ ಸ್ವಿಚ್​​ಆಫ್​​ ಆಗಿತ್ತು. ಬಳಿಕ ತಮ್ಮ ಕಾರಿನ ಡ್ರೈವರ್ ಮೂಲಕ ಮನೆ ಪರಿಶೀಲನೆ ನಡೆಸಿದಾಗ, ಮನೆಯ ಕಬೋರ್ಡ್​​ಗಳು ಓಪನ್ ಆಗಿರೋದು ಬೆಳಕಿಗೆ ಬಂದಿದೆ.  979 ಗ್ರಾಂ ಚಿನ್ನಾಭರಣ ಮತ್ತು ವಾಚ್​​ಗಳನ್ನು ಕೆಲಸದವರು ಕದ್ದು ಎಸ್ಕೇಪ್​​ ಆಗಿರೋದು ಕುಟುಂಬಕ್ಕೆ ಗೊತ್ತಾಗಿದೆ.

ವರದಿ: ಪ್ರದೀಪ್​​ ಚಿಕ್ಕಾಟಿ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:20 pm, Fri, 2 January 26

Source link

Grah Pravesh: ಗೃಹ ಪ್ರವೇಶ ಮಾಡುವುದರ ಹಿಂದಿನ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣ ತಿಳಿಯಿರಿ – Kannada News | Grah Pravesh: New Home Rituals, Vastu and Auspicious Timings Guide

ಹೊಸ ಮನೆ ಕಟ್ಟಿದಾಗ ಅದ್ಧೂರಿಯಾಗಿ ಗೃಹ ಪ್ರವೇಶ ಮಾಡುವುದು ಸಾಮಾನ್ಯ. ಆದರೆ ಈ ಸಡಗರ ಹಿಂದೆ ಧಾರ್ಮಿಕ ಕಾರಣಗಳಿವೆ. ಗೃಹ ಪ್ರವೇಶದ ಮುಖ್ಯ ಉದ್ದೇಶವೆಂದರೆ ಹೊಸ ಮನೆಯನ್ನು ಶುದ್ಧೀಕರಿಸುವುದು ಮತ್ತು ಅಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುವುದು. ನಿರ್ಮಾಣದ ಸಮಯದಲ್ಲಿ, ಉತ್ಖನನ ಮತ್ತು ಇತರ ಕೆಲಸಗಳ ಸಮಯದಲ್ಲಿ ಅನೇಕ ಸೂಕ್ಷ್ಮಜೀವಿಗಳು ಸಾಯುತ್ತವೆ ಎಂದು ನಂಬಲಾಗಿದೆ, ಇದರಿಂದಾಗಿ ವಿವಿಧ ವಾಸ್ತು ದೋಷಗಳು ಉಂಟಾಗುತ್ತವೆ . ಕುಟುಂಬವು ಅಲ್ಲಿ ಸಂತೋಷದಿಂದ ಮತ್ತು ಶಾಂತಿಯುತವಾಗಿ ವಾಸಿಸಲು ಸಾಧ್ಯವಾಗುವಂತೆ ಈ ದೋಷಗಳು ಮತ್ತು ನಕಾರಾತ್ಮಕತೆಯನ್ನು ತೆಗೆದುಹಾಕಲು ಗೃಹ ಪ್ರವೇಶದ ವೇಳೆ ಪೂಜೆಗಳ ಮೂಲಕ ದೇವತೆಗಳನ್ನು ಪ್ರಾರ್ಥಿಸಲಾಗುತ್ತದೆ.

ಪ್ರಮುಖ ನಿಯಮಗಳು:

  • ವಾಸ್ತು ಶಾಂತಿ: ಮನೆಯ ಈಶಾನ್ಯ ಮೂಲೆಯಲ್ಲಿ ಕಲಶ ಸ್ಥಾಪನೆ ಮತ್ತು ವಾಸ್ತು ದೇವರ ಪೂಜೆ ಅಗತ್ಯ.
  • ಶುಭ ಸಮಯ: ಗೃಹಪ್ರವೇಶವನ್ನು ಯಾವಾಗಲೂ ಶುಭ ತಿಥಿ, ನಕ್ಷತ್ರ ಮತ್ತು ಲಗ್ನವನ್ನು ಆಧರಿಸಿ ಮಾಡಬೇಕು. ಮಾಘ, ಫಾಲ್ಗುಣ, ವೈಶಾಖ ಮತ್ತು ಜ್ಯೇಷ್ಠ ತಿಂಗಳುಗಳು ಇದಕ್ಕೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
  • ಮುಕ್ತಾಯ: ಮನೆಯ ಮುಖ್ಯ ದ್ವಾರದಲ್ಲಿ ಬಾಗಿಲುಗಳನ್ನು ಅಳವಡಿಸಿ ಛಾವಣಿ ಪೂರ್ಣಗೊಳ್ಳುವವರೆಗೆ ಗೃಹಪ್ರವೇಶ ಮಾಡಬಾರದು ಎಂದು ಶಾಸ್ತ್ರಗಳು ಹೇಳುತ್ತವೆ.

ಇದನ್ನೂ ಓದಿ: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳು:

ಗೃಹ ಪ್ರವೇಶವು ಕೇವಲ ಒಂದು ಆಚರಣೆಯಲ್ಲ, ಬದಲಾಗಿ ಒಂದು ರಕ್ಷಣಾತ್ಮಕ ಗುರಾಣಿಯಾಗಿದೆ. ಮಂತ್ರಗಳ ಪಠಣ ಮತ್ತು ಹವನದ ಹೊಗೆಯು ಮನೆಯ ವಾತಾವರಣದಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ನಕಾರಾತ್ಮಕ ಅಲೆಗಳನ್ನು ನಾಶಮಾಡುತ್ತದೆ. ಪೂಜೆಯ ಮೂಲಕ ಗಣೇಶ (ಅಡೆತಡೆಗಳನ್ನು ನಿವಾರಿಸುವವನು), ಲಕ್ಷ್ಮಿ ದೇವತೆ (ಸಂಪತ್ತಿನ ದೇವತೆ) ಮತ್ತು ವಾಸ್ತು ಪುರುಷನ ಆಶೀರ್ವಾದವನ್ನು ಪಡೆಯುವ ಉದ್ದೇಶ. ಇದಲ್ಲದೇ ಶುದ್ಧ ಮನಸ್ಸಿನಿಂದ ಮತ್ತು ಆಚರಣೆಗಳನ್ನು ಅನುಸರಿಸುತ್ತಾ ಪ್ರವೇಶಿಸಿದಾಗ, ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಮತ್ತು ಮಾನಸಿಕ ಸಂತೋಷ ಹೆಚ್ಚಾಗುತ್ತದೆ.

ಮನೆಯೊಳಗೆ ಪ್ರವೇಶಿಸುವಾಗ, ಮುಖ್ಯ ದ್ವಾರದಲ್ಲಿ ತೋರಣ (ಮಾವಿನ ಎಲೆಗಳ ತೋರಣ) ಇಡುವುದು ಮತ್ತು ಸ್ವಸ್ತಿಕವನ್ನು ಬರೆಯುವುದು ಕಡ್ಡಾಯವಾಗಿದೆ. ಮನೆಯ ಸ್ತ್ರೀ (ಲಕ್ಷ್ಮಿ) ಮೊದಲು ಬಲಗಾಲಿನಲ್ಲಿ ಮಂಗಳ ಕಲಶವನ್ನು ಇಟ್ಟುಕೊಂಡು ಒಳಗೆ ಬರಬೇಕು. ಒಳಗೆ ಪ್ರವೇಶಿಸುವಾಗ ಶಂಖವನ್ನು ಊದುವುದು ಶುಭವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅದು ದುಷ್ಟ ಶಕ್ತಿಗಳನ್ನು ದೂರವಿಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

21 ವರ್ಷದ ಬೆಂಗಳೂರು ಹುಡುಗ ಎಡ್ವರ್ಡ್​ಗೆ ಎರಡೂವರೆ ಕೋಟಿ ರೂ ಸಂಬಳ ಆಫರ್ – Kannada News | IIT Hyderabad student Edward Nathan Varghese gets Rs 2.5 crore package offer from The Netherlands firm

ಹೈದರಾಬಾದ್, ಜನವರಿ 2: ಇಲ್ಲಿಯ ಐಐಟಿಯಲ್ಲಿ ಕೊನೆಯ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 21 ವರ್ಷದ ಎಡ್ವರ್ಡ್ ನೇತನ್ ವರ್ಗೀಸ್​ಗೆ (Edward Nathan Varghese) ದಾಖಲೆ ಸಂಬಳದ ಕೆಲಸಕ್ಕೆ ಆಫರ್ ಸಿಕ್ಕಿದೆ. ವರದಿ ಪ್ರಕಾರ, ಐಐಟಿ ಹೈದರಾಬಾದ್​ನ ಎಡ್ವರ್ಡ್​ಗೆ 2.5 ಕೋಟಿ ರೂ ಸ್ಯಾಲರಿ ಪ್ಯಾಕೇಜ್ ಕೊಡಲಾಗುತ್ತಿದೆ. ನೆದರ್​ಲ್ಯಾಂಡ್ಸ್ ಮೂಲದ ಗ್ಲೋಬಲ್ ಟ್ರೇಡಿಂಗ್ ಸಂಸ್ಥೆಯಾದ ಆಪ್ಟಿವರ್ (Optiver) ಇಂತಹದ್ದೊಂದು ಭರ್ಜರಿ ಆಫರ್ ಅನ್ನು ಭಾರತೀಯ ವಿದ್ಯಾರ್ಥಿಗೆ ಕೊಟ್ಟಿದೆ.

ಇಂಟರ್ನ್​ಶಿಪ್​ನಲ್ಲಿ ಕಂಪನಿಯನ್ನು ಸೆಳೆದ ಎಡ್ವರ್ಡ್

ಎಡ್ವರ್ಡ್ ನೇತನ್ ವರ್ಗೀಸ್ ಹಾಗೂ ಐಐಟಿ ಹೈದರಾಬಾದ್​ನ ಮತ್ತೊಬ್ಬ ವಿದ್ಯಾರ್ಥಿ, ಈ ಇಬ್ಬರೂ ಆಪ್ಟೀವರ್​ನ ಎರಡು ತಿಂಗಳ ಇಂಟರ್ನ್​ಶಿಪ್​ಗೆ ಸೇರಿಕೊಂಡಿದ್ದರು. ಈ ವೇಳೆ, ಎಡ್ವರ್ಡ್ ಅವರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಆಪ್ಟೀವರ್ ನಿರ್ಧರಿಸಿದೆ. ಜುಲೈ ತಿಂಗಳಲ್ಲಿ ಎಡ್ವರ್ಡ್ ಅವರು ಸಾಫ್ಟ್​ವೇರ್ ಎಂಜಿನಿಯರ್ ಆಗಿ ಆಪ್ಟೀವರ್ ಅನ್ನು ಸೇರಲಿದ್ದಾರೆ.

21 ವರ್ಷದ ಎಡ್ವರ್ಡ್​ಗೆ ಆಪ್ಟೀವರ್ 2.5 ಕೋಟಿ ರೂ ಸಂಬಳ ಆಫರ್ ಮಾಡಿದೆ. 2008ರಲ್ಲಿ ಆರಂಭವಾದ ಐಐಟಿ ಹೈದರಾಬಾದ್​ನಲ್ಲಿ ಈವರೆಗೆ ಯಾವ ವಿದ್ಯಾರ್ಥಿ ಕೂಡ ಕ್ಯಾಂಪಸ್ ಪ್ಲೇಸ್ಮೆಂಟ್​ನಲ್ಲಿ ಇಷ್ಟೊಂದು ಸ್ಯಾಲರಿ ಆಫರ್ ಪಡೆದಿದ್ದಿಲ್ಲ. ಆ ಮಟ್ಟಿಗೆ ಎಡ್ವರ್ಡ್ ದಾಖಲೆ ಮಾಡಿದ್ದಾರೆ. ವಿಶೇಷ ಎಂದರೆ, ಕ್ಯಾಂಪಸ್ ಪ್ಲೇಸ್ಮೆಂಟ್​ನಲ್ಲಿ ಎಡ್ವರ್ಡ್ ಇಂಟರ್ವ್ಯೂ ಫೇಸ್ ಮಾಡಿದ ಏಕೈಕ ಕಂಪನಿಯೂ ಅದಾಗಿತ್ತು.

ಇದನ್ನೂ ಓದಿ: ಪ್ಯಾಲೆಸ್ಟೀನ್ ಧ್ವಜದ ಸ್ಟಿಕರ್ ಅಂಟಿಸಿಕೊಂಡು ಆಡಿದ ಕಾಶ್ಮೀರೀ ಕ್ರಿಕೆಟಿಗ; ಪೊಲೀಸರಿಂದ ವಿಚಾರಣೆ

ಬೆಂಗಳೂರಿನಲ್ಲಿ ಹೈಸ್ಕೂಲ್ ಓದಿದ್ದ ಎಡ್ವರ್ಡ್

ಎಡ್ವರ್ಡ್ ನೇತನ್ ವರ್ಗೀಸ್ ಮೂಲತಃ ಹೈದರಾಬಾದ್​ನವರೇ. ಅಲ್ಲೇ ಹುಟ್ಟಿ ಬೆಳೆದಿದ್ದು. ಆದರೆ, ಏಳನೇ ತರಗತಿಯಿಂದ 12ನೇ ತರಗತಿಯವರೆಗೂ ಇವರು ಬೆಂಗಳೂರಿನಲ್ಲಿ ಓದಿದ್ದಾರೆ. 2022ರಲ್ಲಿ ಜೆಇಇ ಮೇನ್ ಪರೀಕ್ಷೆಯಲ್ಲಿ 1,100ನೇ ರ್ಯಾಂಕ್, ಜೆಇಇ ಅಡ್ವಾನ್ಸ್ಡ್​ನಲ್ಲಿ 558ನೇ ರ್ಯಾಂಕಿಂಗ್ ಪಡೆದಿದ್ದಾರೆ. 2025ರಲ್ಲಿ ನಡೆದ ಕ್ಯಾಟ್ ಪರೀಕ್ಷೆಯಲ್ಲಿ ಶೇ. 99.96 ಅಂಕಗಳೊಂದಿಗೆ 120ನೇ ರ್ಯಾಂಕ್ ಪಡೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇವಿಎಂ ಬಗ್ಗೆ ಕರ್ನಾಟಕದ ಬಹುಪಾಲು ಜನರಿಗಿದೆ ವಿಶ್ವಾಸ: ಸಿಂ ಸಿದ್ದರಾಮಯ್ಯ, ಖರ್ಗೆ ತವರಲ್ಲೇ ಹೆಚ್ಚು! – Kannada News | EVM Trust High in Karnataka: Survey Shows 83.61 percent Voter Confidence, Strongest Support in Siddaramaiah, Kharge Strongholds

ಬೆಂಗಳೂರು, ಜನವರಿ 2: ಕರ್ನಾಟಕದಲ್ಲಿ ಶೇಕಡ 83.61 ರಷ್ಟು ಮತದಾರರು ವಿದ್ಯುನ್ಮಾನ ಮತಯಂತ್ರಗಳ (EVM) ಬಗ್ಗೆ ವಿಶ್ವಾಸಾರ್ಹತೆ ಹೊಂದಿರುವುದಾಗಿ ತಿಳಿಸಿರುವುದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ವಿಶೇಷವೆಂದರೆ, ಇವಿಎಂ ಬಗ್ಗೆ ಸದಾ ತಕರಾರು ತೆಗೆಯುತ್ತಿರುವ ಕರ್ನಾಟಕದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತವರು ಜಿಲ್ಲೆ ಕಲಬುರಗಿಯಲ್ಲೇ (Kalaburagi) ಅತಿ ಹೆಚ್ಚು ಮತದಾರರು ಇವಿಎಂ ಬಗ್ಗೆ ವಿಶ್ವಾಸವಿದೆ ಎಂದಿದ್ದಾರೆ. ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಅಧೀನದಲ್ಲಿ ಕರ್ನಾಟಕ ಮಾನಿಟರಿಂಗ್ ಆ್ಯಂಡ್ ಎವ್ಯಾಲ್ಯೂಯೇಶನ್ ಅಥಾರಿಟಿ ವಿದ್ಯುನ್ಮಾನ ಮತ ಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಸಮೀಕ್ಷೆ ನಡೆಸಿದೆ.

ಕರ್ನಾಟಕದಲ್ಲಿ ಒಟ್ಟು ಶೇಕಡ 83.61 ರಷ್ಟು ಮತದಾರರು ಇವಿಎಂ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಕಲಬುರಗಿಯಲ್ಲಿ ಶೇಕಡ 94.8ರಷ್ಟು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಶೇಕಡ 88.59ರಷ್ಟು ಮತದಾರರು ಇವಿಎಂ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮತಯಂತ್ರಗಳನ್ನು ನಿಖರತೆಯ ಕುರಿತು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. 2025ರ ಆಗಸ್ಟ್‌ನಲ್ಲಿ ಸಮೀಕ್ಷಾ ವರದಿಯನ್ನು ಸಲ್ಲಿಸಲಾಗಿತ್ತು ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ಏನು?

ಇವಿಎಂ ಕುರಿತು ನಡೆಸಿದ ಸಮೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆಯೇ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಸಮೀಕ್ಷೆ ನಡೆಸಿದ ಏಜೆನ್ಸಿ ಬಗ್ಗೆ ಪ್ರಸ್ತಾಪ ಮಾಡಿರುವ ಮಾಡಿರುವ ಅವರು, ರಾಜ್ಯ ಸರ್ಕಾರವು ಅದನ್ನು ಆ ಸಮೀಕ್ಷೆಯನ್ನು ಅನುಮೋದಿಸಿಲ್ಲ ಎಂದಿದ್ದಾರೆ. ‘ಮೊದಲನೆಯದಾಗಿ ಅದು ರಾಜ್ಯ ಸರ್ಕಾರ ಮಾಡಿಸಿದ ಸಮೀಕ್ಷೆಯೇ ಅಲ್ಲ. ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಸಮೀಕ್ಷೆಗಾಗಿ ಬಾಲಕೃಷ್ಣನ್ ಅಥವಾ ಬಾಲಸುಬ್ರಮಣಿಯನ್ ನಡೆಸುತ್ತಿರುವ ಎನ್​ಜಿಒದ ಸಹಾಯವನ್ನು ಕೋರಲಾಗಿತ್ತು. ನನಗಿರುವ ಮಾಹಿತಿ ತಪ್ಪಲ್ಲವೆಂದಾದರೆ, ಬಾಲಕೃಷ್ಣನ್ ಅವರು ಪ್ರಧಾನ ಮಂತ್ರಿಯವರಿಗಾಗಿ ಬರೆದ ಪುಸ್ತಕದ ಲೇಖಕರಾಗಿದ್ದಾರೆ ಮತ್ತು ಪ್ರಧಾನ ಮಂತ್ರಿ ಕಚೇರಿಯೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡುತ್ತಾರೆ. ಅಂಥವರಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ವೋಟ್ ಚೋರಿ ಆರೋಪ ಮಾಡುತ್ತಿರುವ ಮತ್ತು ಸದಾ ಇವಿಎಂ ಬಗ್ಗೆ ಪ್ರಶ್ನಿಸುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಕರ್ನಾಟಕದಲ್ಲಿ ನಡೆಸಿದ ಸಮೀಕ್ಷಾ ವರದಿನ್ನು ಮುಂದಿಟ್ಟುಕೊಡು ಬಿಜೆಪಿ ತಿರುಗೇಟು ನೀಡಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಾಗ ಪ್ರತಿ ಬಾರಿ ರಾಹುಲ್ ಗಾಂಧಿ ಇವಿಎಂ ಅನ್ನು ಹಾಗೂ ಚುನಾವಣಾ ಆಯೋಗವನ್ನು ದೂಷಿಸುತ್ತಾರೆ. ಹಾಗೆ ಮಾಡಿದಾಗಲೆಲ್ಲ ಅವರ ಆರೋಪಗಳು ಸುಳ್ಳೆಂಬುದಕ್ಕೆ ಪುರಾವೆಗಳು ಸಿಗುತ್ತವೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಹೇಳಿದ್ದಾರೆ.

ಇದನ್ನೂ ಓದಿ: EVM ಬದಲಿಗೆ ಬ್ಯಾಲೆಟ್ ಪೇಪರ್: ಸರ್ಕಾರದ ನಡೆ ಬಗ್ಗೆ ರಾಜ್ಯ ಚುನಾವಣಾ ಆಯುಕ್ತರು ಹೇಳಿದ್ದೇನು?

ಕರ್ನಾಟಕದಲ್ಲಿ ಜನರು ಇವಿಎಂಗಳನ್ನು ಸುರಕ್ಷಿತವೆಂದು ಪರಿಗಣಿಸುತ್ತಾರೆ ಮತ್ತು ಅವುಗಳನ್ನು ನಂಬುತ್ತಾರೆ ಎಂದು ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ. ರಾಹುಲ್ ಗಾಂಧಿ ಪ್ರತಿ ಬಾರಿ ಇವಿಎಂಗಳನ್ನು ಅಥವಾ ವ್ಯವಸ್ಥೆಯನ್ನು ದೂಷಿಸಿದಾಗ ಅವರಿಗೆ ವಾಸ್ತವದ ಅರಿವು ಮೂಡಿಸುವಂಥ ವಿದ್ಯಮಾನಗಳು ನಡೆಯತ್ತವೆ ಎಂದು ಶೆಹಜಾದ್ ಪೂನವಾಲ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಲಕ್ಷ್ಮೀಗೆ ಅಶ್ಲೀಲ ಕಮೆಂಟ್ ಹಾಕಿದ ಇಬ್ಬರು ಅರೆಸ್ಟ್; ಬಂಧಿತರು ಯಾರು? – Kannada News | Vijayalakshmi’s Complaints lead to Leads to Two Arrests In Social Media Harassment case

ಸೋಶಿಯಲ್ ಮೀಡಿಯಾದಲ್ಲಿ ತಮಗೆ ಬರೋ ಅಶ್ಲೀಲ ಕಮೆಂಟ್​ಗಳು, ಮೆಸೇಜ್​​ಗಳನ್ನು ಸೆಲೆಬ್ರಿಟಿಗಳು ಮೊದಲು ಸಹಿಸಿಕೊಳ್ಳುತ್ತಿದ್ದರು. ಆದರೆ, ಈಗ ಇದರ ವಿರುದ್ಧ ಸಿಟ್ಟಿಗೇಳುತ್ತಿದ್ದಾರೆ. ಅನೇಕರು ಈ ವಿಷಯದಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಾರೆ. ರಮ್ಯಾ ಅವರು ಇದೇ ರೀತಿ ಮಾಡಿದ್ದರು. ಆ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi) ಕೂಡ ಅಶ್ಲೀಲ ಕಮೆಂಟ್ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಈಗ ಇಬ್ಬರನ್ನು ಬಂಧಿಸಲಾಗಿದೆ. ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯಲಕ್ಷ್ಮೀ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್​​ಗಳು ಬಂದಿದ್ದವು. ಇದರ ವಿರುದ್ಧ ಅವರು ಪೊಲೀಸರಿಗೆ ದೂರು ನೀಡಿದ್ದರು. ‘ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಆರೋಪಿಸಿದ್ದರು.ಈ ಬೆನ್ನಲ್ಲೇ ಇಬ್ಬರ ಬಂಧನ ನಡೆದಿದೆ.

ಬೆಂಗಳೂರಿನ ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಬಂಧಿತರು. ಇಬ್ಬರೂ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿದ್ದರು. ಇವರನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಕಮೆಂಟ್ ಹಾಕಿದವರಿಗೆ ಸಂಕಷ್ಟ; ದೂರು ದಾಖಲಿಸಿ, ದಾಖಲೆ ಕೊಟ್ಟ ವಿಜಯಲಕ್ಷ್ಮೀ

ತಪ್ಪಿಸಿಕೊಳ್ಳಲು ನಡೆದಿತ್ತು ಪ್ರಯತ್ನ

ಅಶ್ಲೀಲ ಪದಗಳಿಂದ ನಿಂದನೆ ನೋಡಿ ಸಹಿಸದ ವಿಜಯಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಇವರು, ಪೋಸ್ಟ್​​ಗಳನ್ನು ಡಿಲೀಟ್ ಮಾಡಿದ್ದರು. ಈ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಐಪಿ ಅಡ್ರೆಸ್ ಮೂಲಕ ಇವರ ಮೂಲ ಪತ್ತೆ ಹಚ್ಚಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಅರೆಸ್ಟ್ ಆಗುವ ಸಾಧ್ಯತೆ ಇದೆ. ಅಂದಹಾಗೆ ಇವರು ಯಾವ ನಟನ ಅಭಿಮಾನಿಗಳು ಎಂಬುದು ಇನ್ನೂ ತಿಳಿದಿಲ್ಲ.

(ವರದಿ: ಪ್ರಜ್ವಲ್ ಎನ್​ವೈ)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:20 pm, Fri, 2 January 26

Source link

Weekly Love Horoscope: ಜನವರಿ 04ರಿಂದ 10ರ ವರೆಗಿನ ವಾರದ ಪ್ರೇಮ – ಪ್ರೀತಿ ಭವಿಷ್ಯ ತಿಳಿಯಿರಿ – Kannada News | Weekly Love Horoscope Jan 4 10: Zodiac Predictions and Relationship Tips

ಜನವರಿ 04ರಿಂದ ಜನವರಿ 10ರ ವರೆಗೆ ಪ್ರೇಮಿಗಳಿಗೆ ಮಿಶ್ರವಾರ. ನಡತೆಗಳು ಪರಸ್ಪರ ವಿರೋಧ, ವೈಮನಸ್ಯಕ್ಕೆ ಕಾರಣವಾಗಲಿದೆ. ಸಾಂತ್ವನದಿಂದ ಮುಂದುವರಿಯಲೂ ಇದು ಸಕಾಲ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸತತ ಯತ್ನ ಬೇಕು. ಕೆಲವರಿಗೆ ಕಹಿ ಅನುಭವದಿಂದ ಹೊರಬರಲು ಆಗದು. ಯಾವುನ್ನೂ ಅತಿಯಾಗಿಸಿಕೊಳ್ಳದೇ ಸಮಚಿತ್ತದಿಂದ ಮುಂದುವರಿಯಬೇಕು ಹಾಗೂ ತಾಳ್ಮೆಯನ್ನು ಬಿಡದಿರಬೇಕು. ಶುಕ್ರದಶೆಯವರಿಗೆ ಶುಭಕಾಲ.

ಮೇಷ ರಾಶಿ:

ಹೊಸ ವರ್ಷದ ಮೊದಲನೇ ವಾರ ಮೊದಲನೇ ರಾಶಿಯವರಿಗೆ ಪ್ರೇಮದಲ್ಲಿ ಉತ್ಸಾಹ ಹೆಚ್ಚಾದರೂ ಒಳಗಿರುವ ಭಯ ಹಾಗೂ ಶಂಕೆಗಳು ಕಾಡುತ್ತವೆ. ಮಾತಿನ ತಪ್ಪಿನಿಂದ ನೋವು ಸಾಧ್ಯ. ಕ್ಷಣಿಕ ಅನ್ಯಾಸಕ್ತಿ ದೂರ ತರಬಹುದು. ಈ ವಾರ ದುರಭ್ಯಾಸಗಳಿಂದ ಜಾಗರೂಕತೆ ವಹಿಸಿಕೊಳ್ಳಬೇಕು. ಮೋಜಿನ ಪ್ರಯಾಣ ಅಥವಾ ಸ್ನೇಹಿತರ ಜೊತೆಗಿನ ಓಡಾಟ ಮನಸ್ಸಿಗೆ ಹಗುರತೆ ನೀಡಿ ಸಂಬಂಧಕ್ಕೆ ಹೊಸ ಚೈತನ್ಯ ತರುತ್ತದೆ.

ವೃಷಭ ರಾಶಿ:

ಎರಡನೇ ರಾಶಿಯವರಿಗೆ ಈ ವಾರ ಪ್ರೀತಿಯಲ್ಲಿ ಸ್ಥಿರತೆ ಇದ್ದರೂ ಶಂಕೆ ಮನಸ್ಸನ್ನು ಕಾಡಬಹುದು. ನಿರೀಕ್ಷೆ ಪೂರೈಸದಾಗ ನೋವು ಮತ್ತು ದುಃಖ. ಅನ್ಯರಲ್ಲಿ ಆಸಕ್ತಿ ಬಂದರೂ ಸಂಬಂಧ ಮುರಿಯದೇ ಇರಬಹುದು. ದುರಭ್ಯಾಸ ತಪ್ಪಿಸಿದರೆ ಸುಖ. ಈ ವಾರ ಸಂಗಾತಿಯ ಜೊತೆ ಮೋಜಿನ ಪ್ರಯಾಣ ಅಥವಾ ಸಣ್ಣ ಪ್ರವಾಸ ಪ್ರೇಮವನ್ನು ಮತ್ತೆ ಹತ್ತಿರವಾಗಿಸಬಹುದು.

ಮಿಥುನ ರಾಶಿ:

ಜನವರಿಯ ಮೊದಲ ವಾರ ವಿಚಿತ್ರ ಉತ್ಸಾಹ ಮತ್ತು ಗೊಂದಲ ಎರಡೂ ಜೊತೆಗಿರುತ್ತವೆ. ಶಂಕೆ ಮತ್ತು ಭಯದಿಂದ ವಿರಹದ ಭಾವನೆ ನಿಮ್ಮೊಳಗಾಗಲಿದೆ. ಮಾತಿನಲ್ಲಿ ಉಂಟಾದ ಅಸ್ಥಿರತೆಯಿಂದ ನೋವು ಬರಬಹುದು. ನಿಮ್ಮ ಅನ್ಯಾಸಕ್ತಿ ಕ್ಷಣಿಕ ಕಾಲ ಕೆಲಸಮಾಡುವುದು. ಒತ್ತಡದಿಂದ ಮಾಡಿಸುವ ದುರಭ್ಯಾಸದಿಂದ ದೂರವಿದ್ದರೆ ಉತ್ತಮ. ಮೋಜಿನ ಪ್ರಯಾಣ, ಹೊಸ ಅನುಭವಗಳು ಪ್ರೀತಿಯಲ್ಲಿ ನಾವೀನ್ಯತೆ ತರುತ್ತವೆ.

ಕರ್ಕಾಟಕ ರಾಶಿ:

ಚಂದ್ರನ‌ ಆಧಿಪತ್ಯದ ಈ ರಾಶಿಗೆ ಭಾವನಾತ್ಮಕವಾದ ಈ ಪ್ರೇಮದಲ್ಲಿ ಭಯ ಹೆಚ್ಚಾಗುತ್ತದೆ. ಶಂಕೆಯಿಂದ ಮನಸ್ಸು ನೋವಿನಲ್ಲಿ ಮುಳುಗಬಹುದು. ವಿರಹ ಹಾಗೂ ದುಃಖದ ಕ್ಷಣಗಳು ಸಾಧ್ಯ. ಅನ್ಯಾಸಕ್ತಿ ಸಂಬಂಧಕ್ಕೆ ಹಾನಿ. ದುರಭ್ಯಾಸ ತ್ಯಜಿಸುವೆನೆಂದರೂ ಸುಲಭಕ್ಕೆ ಸಾಧ್ಯವಾಗದು. ಸಂಗಾತಿಯೊಂದಿಗೆ ಪಯಣ ಹಳೆಯ ಸಂತೋಷ ಮರಳಿ ತರುತ್ತದೆ.

ಸಿಂಹ ರಾಶಿ:

ಈ ವಾರ ನಿಮಗೆ ಪ್ರೇಮದಲ್ಲಿ ಉತ್ಸಾಹ ಇದ್ದರೂ ಸ್ವಾಭಿಮಾನದಿಂದ ಯಾವುದನ್ನೂ ತೋರಿಸಿಕೊಳ್ಳಲಾರಿರಿ. ಮಾತಿನ ಘರ್ಷಣೆ ನೋವು ತರಬಹುದು. ಕ್ಷಣಿಕ ವಿರಹದಿಂದ ದುಃಖ‌ ಉಮ್ಮಳಿಸುವುದು. ಈ ವಾರ ನೀವು ಪ್ರಯತ್ನದಿಂದ ಅನ್ಯಾಸಕ್ತಿಯನ್ನು ತಪ್ಪಿಸಿ. ದುರಭ್ಯಾಸದಿಂದ ದೂರವಿರಿ. ದಿನದ ವಾತಾವರಣಕ್ಕಿಂತ ಹೊರಗಿನ ಸುತ್ತಾಟ ಪ್ರೀತಿಗೆ ತಾಜಾತನ ಬರಲು ಅವಕಾಶ ಕೊಡಲಿದೆ.

ಕನ್ಯಾ ರಾಶಿ:

ಬುಧನ ಆಧಿಪತ್ಯದ ಈ ರಾಶಿಗೆ ಪ್ರೀತಿಯಲ್ಲಿ ಹೆಚ್ಚು ಯೋಚನೆ ಉಂಟಾಗಲಿದೆ. ಹಳೆಯ ಪ್ರೆಮಿಯ ಆಗಮನದ ಶಂಕೆ ಮತ್ತು ಭಯದಿಂದ ಮನಸ್ಸಿಗೆ ನೋವು. ವಿರಹದ ಅನುಭವವನ್ನು ಹೇಳಿಕೊಳ್ಳದೇ ಇರಲು ಸಾಧ್ಯವಿಲ್ಲ. ಅನ್ಯಾಸಕ್ತಿಯು ಸಂಬಂಧವನ್ನು ತಣ್ಣಗಾಗಿಸಬಹುದು. ಶೊಕಿಗಾಗಿ ಬಂದ ದುರಭ್ಯಾಸ ಬಿಡುವುದು ಒಳಿತು. ಒಟ್ಟಿಗೆ ಸಮಯ ಕಳೆಯುವುದು ಪ್ರೇಮವನ್ನು ಮರುಜೀವಂತಗೊಳಿಸುತ್ತದೆ.

ತುಲಾ ರಾಶಿ:

ಏಳನೇ ರಾಶಿಯವರಿಗೆ ಪ್ರೀತಿಯಲ್ಲಿ ಉತ್ಸಾಹವೂ ಇದ್ದು ಅತಿಯಾದ ಆಕರ್ಷಣೆಯೂ ಬರಲಿದೆ. ಆದರೆ ಆಗಾಗ ಬರುವ ಶಂಕೆಯಿಂದ ಸಣ್ಣ ದುಃಖಕ್ಕೆ ಕಾರಣವೂ ಆಗುವುದು. ಮಾತುಕತೆ ಕೊರತೆಯಿಂದ ವಿರಹದ ಅನುಭವ. ಹಠವನ್ನು ಹಿಡಿದರೂ ದುರಭ್ಯಾಸವನ್ನು ತಪ್ಪಿಸಲಾಗದು. ಮೋಜಿನ ಪ್ರಯಾಣ ಮತ್ತು ಭೇಟಿಗಳು ಸಂಬಂಧಕ್ಕೆ ಸಮತೋಲನ ತರುತ್ತವೆ.

ವೃಶ್ಚಿಕ ರಾಶಿ:

ಈ ವಾರ ಇದ್ದಕ್ಕಿದ್ದಂತೆ ಬರುವ ತೀವ್ರವಾದ ಪ್ರೇಮದ ಜೊತೆಗೆ ಭಯ ಮತ್ತು ಶಂಕೆ ಜೊತೆಗೇ ಬರಲಿವೆ. ಅಸೂಯೆಯಿಂದ ನೋವು ಮತ್ತು ವಿರಹ. ದುಃಖದ ಕ್ಷಣಗಳನ್ನೂ ನೀವು ನಿರೀಕ್ಷಿಸಬಹುದು. ಅನ್ಯಾಸಕ್ತಿ ಹಾಗೂ ದುರಭ್ಯಾಸ ಸಂಬಂಧಕ್ಕೆ ಅಪಾಯ. ಆದರೆ ಗುಪ್ತ ಭೇಟಿಗಳು ಭಾವನೆಗಳನ್ನು ಮೃದುವಾಗಿಸುತ್ತವೆ.

ಧನು ರಾಶಿ:

ಈ ರಾಶಿಯವರಿಗೆ ಮೊದಲ ವಾರ ಪ್ರೇಮದಲ್ಲಿ ಉತ್ಸಾಹ ಇದ್ದರೂ ಬದ್ಧತೆಯಯನ್ನು ಉಳಿಸಿಕೊಳ್ಳುವ ಭಯ. ಅವಕಾಶಗಳು ಶಂಕೆಯಿಂದ ದೂರವಾಗಲಿದೆ. ಸಂಗಾತಿಯ ನಿರ್ಲಕ್ಷ್ಯ ನಿಮಗೆ ನೋವು ತರಿಸಬಹುದು. ಅನ್ಯರ ಮೇಲಿನ ಆಸಕ್ತಿ ತಾತ್ಕಾಲಿಕ. ಸಾಹಸಮಯ ಓಡಾಟ ಪ್ರೀತಿಗೆ ಹೊಸ ಚೈತನ್ಯ ನೀಡುತ್ತದೆ.

ಮಕರ ರಾಶಿ:

ಶನಿಯ ಆಧಿಪತ್ಯದ ಈ ರಾಶಿಯವರಿಗೆ ಭಾವನೆಗಳನ್ನು ಒಳಗಿಟ್ಟುಕೊಳ್ಳುವ ಸ್ವಭಾವದಿಂದ ವಿರಹ ಮತ್ತು ದುಃಖ ಹೆಚ್ಚಾಗಲಿದೆ. ಶಂಕೆ ಮನಸ್ಸಿಗೆ ಭಯ ತರುತ್ತದೆ. ಅನ್ಯಾಸಕ್ತಿ ಸಂಬಂಧ ತಣ್ಣಗಾಗಿಸಬಹುದು. ದುರಭ್ಯಾಸದಿಂದ ಸಂಗಾತಿಯು ನಿಮ್ಮನ್ನು ದೂರ ಮಾಡುವರು. ವಿರಾಮದ ಸುಖವನ್ನು ಎಲ್ಲರೊಂದಿಗೆ ಅನುಭವಿಸುವಿರಿ.

ಕುಂಭ ರಾಶಿ:

ಮೊದಲ ವಾರದಲ್ಲಿ ಈ ರಾಶಿಯವರಿಗೆ ಅನಿರೀಕ್ಷಿತ ಉತ್ಸಾಹದ ಜೊತೆಗೆ ಅಸ್ಥಿರತೆ. ಶಂಕೆದಿಂದ ಮನಸ್ಸಿಗೆ ಅತಿಯಾದ ಘಾಸಿ. ವಿರಹದ ಅನುಭವವನ್ನು ತಡೆದುಕೊಳ್ಳುವಿರಿ. ಅನ್ಯಾಸಕ್ತಿ ಹೆಚ್ಚಾದರೂ ದೀರ್ಘಕಾಲ ಉಳಿಯದು. ಸ್ನೇಹದ ಜೊತೆಗೆ ಪ್ರೀತಿಯೂ ಅರಳಲು ಆರಂಭಿಸುವುದು.

ಮೀನ ರಾಶಿ:

ಕೊನೆಯ ರಾಶಿಯವರಿಗೆ ಮೊದಲ ವಾರದಲ್ಲಿ ಸಮಾರಂಭದಲ್ಲಿ ಉತ್ಸಾಹದ ಜೊತೆ ಭಯವೂ ಕಾಡಬಹುದು. ಪ್ರೇಮದಲ್ಲಿ ಇರುವ ಅತಿಭಾವನೆ ನೋವು ಹಾಗೂ ದುಃಖ ತರಬಹುದು. ವಿರಹದ ಕ್ಷಣಗಳನ್ನು ಸಹಿಸಲು ಸಾಧ್ಯವಾಗದು. ಅನ್ಯಾಸಕ್ತಿಯಿಂದಾಗಿ ಸಂಬಂಧಕ್ಕೆ ಪರೀಕ್ಷೆ ವಾರ. ದುರಭ್ಯಾಸಸವನ್ನು ತೋರಿಸಿಕೊಳ್ಳಲಾರಿರಿ. ಆತ್ಮೀಯ ಕ್ಷಣಗಳು ಪ್ರೀತಿಗೆ ನೆಮ್ಮದಿ ನೀಡುತ್ತವೆ.

– ಲೋಹಿತ ಹೆಬ್ಬಾರ್ – 8762924271 (what’s app only)

Published On – 11:41 am, Fri, 2 January 26

Source link

ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ! ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ – Kannada News | Mobile Theft Gang Targets Roadside Phone Users in Nelamangala Dabaspet

ನೆಲಮಂಗಲ, ಜನವರಿ 02: ನೆಲಮಂಗಲ ಡಾಬಸ್ ಪೇಟೆಯಲ್ಲಿ ಮೊಬೈಲ್ ಕಳ್ಳತನ ಮಾಡುವ ಗ್ಯಾಂಗ್ ಸಕ್ರಿಯವಾಗಿದೆ. ಬೈಕ್‌ನಲ್ಲಿ ಬರುವ ಕಳ್ಳರು ಕ್ಷಣಾರ್ಧದಲ್ಲಿ ಪಾದಾಚಾರಿಗಳ ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಬಿಲ್ಲಿನಕೋಟೆ ಗ್ರಾಮದಲ್ಲಿ ನಡೆದ ಇಂತಹ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ಬದಿಯಲ್ಲಿ ಫೋನ್‌ನಲ್ಲಿ ಮಾತನಾಡುವಾಗ ಎಷ್ಟು ಎಚ್ಚರಿಕೆ ವಹಿಸಬೇಕೆಂದು ಈ ಪ್ರಕರಣದಿಂದ ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ಯಾಲೆಸ್ಟೀನ್ ಧ್ವಜದ ಸ್ಟಿಕರ್ ಅಂಟಿಸಿಕೊಂಡು ಆಡಿದ ಕಾಶ್ಮೀರೀ ಕ್ರಿಕೆಟಿಗ; ಪೊಲೀಸರಿಂದ ವಿಚಾರಣೆ – Kannada News | J&K rural police questions cricketer Furqan Bhat, who allegedly wears Palestine flag on helmet during match

ಶ್ರೀನಗರ್, ಜನವರಿ 2: ಜಮ್ಮು ಮತ್ತು ಕಾಶ್ಮೀರ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರನೊಬ್ಬ ಪ್ಯಾಲೆಸ್ಟೀನ್ ಧ್ವಜ ಹಾಕಿಕೊಂಡು ಆಡುವ ಮೂಲಕ ವಿವಾದ ಸೃಷ್ಟಿಸಿದ್ದಾನೆ. ಆ ಆಟಗಾರನ ಹೆಸರು ಫರ್ಖಾನ್ ಭಟ್ (Furqan Bhat). ಈತ ಜೆಕೆ11 ತಂಡದ ಆಟಗಾರ. ನಿನ್ನೆ ಗುರುವಾರ (ಜ. 1) ಜಮ್ಮು ಟ್ರೇಲ್​ಬ್ಲೇಜರ್ಸ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ಬ್ಯಾಟಿಂಗ್ ಮಾಡುವಾಗ ಪ್ಯಾಲೆಸ್ಟೀನ್ ಬಾವುಟದ (Palestine flag) ಸ್ಟಿಕರ್ ಅಂಟಿಸಲಾದ ಹೆಲ್ಮೆಟ್ ಧರಿಸಿದ್ದು ಬೆಳಕಿಗೆ ಬಂದಿದೆ.

ಪೂರ್ವಾನುಮತಿ ಇಲ್ಲದೇ ಇನ್ನೊಂದು ದೇಶದ ಬಾವುಟ ಧರಿಸುವುದು ನಿಯಮ ಬಾಹಿರ. ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಪೊಲೀಸರು ಫರ್ಖಾನ್ ಭಟ್​ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ದೇಶದ್ರೋಹ ಆರೋಪಿ ಉಮರ್ ಖಾಲೀದ್​ಗೆ ನ್ಯೂಯಾರ್ಕ್ ಮೇಯರ್ ಕಾಳಜಿ ಪತ್ರ; 8 ಅಮೆರಿಕನ್ ಜನಪ್ರತಿನಿಧಿಗಳಿಂದಲೂ ಬೆಂಬಲ

ಈ ಹಿಂದೆ ಭಾರತದ ಕೆಲವೆಡೆ ಜನರು ಪ್ಯಾಲೆಸ್ಟೀನ್​ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ, ಮೆರವಣಿಗೆ ಇತ್ಯಾದಿ ಮಾಡಿರುವುದುಂಟು. ಕ್ರಿಕೆಟಿಗ ಫರ್ಖಾನ್ ಭಟ್ ಅವರು ಪ್ಯಾಲೆಸ್ಟೀನ್ ಧ್ವಜವನ್ನು ಯಾವ ಕಾರಣಕ್ಕೆ ಹಾಕಿದ್ದರು ಎಂಬುದು ಗೊತ್ತಾಗಿಲ್ಲ. ಪ್ಯಾಲೆಸ್ಟೀನ್​ಗೆ ಬೆಂಬಲ ಸೂಚಕವಾಗಿ ಇದನ್ನು ಧರಿಸಿದ್ದರೋ, ಅಥವಾ ಇನ್ಯಾರದೋ ಒತ್ತಡಕ್ಕೆ ಇದನ್ನು ಧರಿಸಿದ್ದರೋ ಎಂಬ ವಿವರ ಗೊತ್ತಾಗಬೇಕಿದೆ.

ಇದೇ ವೇಳೆ, ಪೊಲೀಸರು ಜಮ್ಮು ಕಾಶ್ಮೀರ ಚಾಂಪಿಯನ್ಸ್ ಲೀಗ್ ಮೇಲೆ ನಿಗಾ ಇರಿಸಿದ್ದಾರೆ. ಟೂರ್ನಿಯ ಆಯೋಜಕ ಝಾಹಿದ್ ಭಟ್ ಅವರನ್ನೂ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಮೇಲೂ ದೃಷ್ಟಿ ಹಾಕಲಾಗಿದೆ. ಆದರೆ, ತನಗೂ ಈ ಟೂರ್ನಿಗೂ ಸಂಬಂಧ ಇಲ್ಲ. ಫರ್ಖಾನ್ ಭಟ್ ತಮ್ಮ ಅಸೋಸಿಯೇಶನ್​ನ ಸದಸ್ಯನೂ ಅಲ್ಲ ಎಂದು ಜೆಕೆಸಿಎ ಹೇಳಿದೆ.

ಇದನ್ನೂ ಓದಿ: ಶ್ರವಣಕುಮಾರನ ಸಾಹಸ… ಟೆಂಪೋ ಡ್ರೈವರ್ ಆಗಿದ್ದವ ನಾಲ್ಕೇ ವರ್ಷದಲ್ಲಿ ವಿಮಾನ ಸಂಸ್ಥೆ ಕಟ್ಟಿದ ಕಥೆ..!

ಪ್ಯಾಲೆಸ್ಟೀನ್ ವಿಚಾರ ಭಾರತದ ರಾಜತಾಂತ್ರಿಕ ಸ್ಥಿತಿಗೆ ಸೂಕ್ಷ್ಮವಾಗಿದೆ. ಹೀಗಾಗಿ, ಭಾರತದೊಳಗೆ ಪ್ಯಾಲೆಸ್ಟೀನ್ ಪರವಾಗಿಯಾಗಲೀ, ವಿರೋಧವಾಗಿಯಾಗಲೀ ನಡೆಯುವ ಪ್ರತಿಭಟನೆಗಳ ಮೇಲೆ ನಿಗಾ ಇರಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ನಾಲ್ಕು ತಿಂಗಳ ಬಳಿಕ ಮನೆಗೆ ಮರಳಿದ ಮಗನಿಗೆ ಅದ್ದೂರಿ ಸ್ವಾಗತ ಕೋರಿದ ತಾಯಿ – Kannada News | A mother’s lavish welcome as her son returns home after going to a distant town for studies

ಪ್ರತಿಯೊಬ್ಬ ತಂದೆ ತಾಯಂದಿರು (parents) ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಬಯಸುವುದು ಸಹಜ. ಹೀಗಾಗಿ ಓದಿಗಾಗಿ, ಉದ್ಯೋಗಕ್ಕಾಗಿ ದೂರದ ಊರುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿಕೊಡುತ್ತಾರೆ.  ಈ ವೇಳೆ ತಮ್ಮ ಮಕ್ಕಳು ಮನೆಗೆ ಬರುತ್ತಾರೆ ಎಂದರೆ ಹೆತ್ತವರಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಈ ವಿಡಿಯೋ ಇದೀಗ ತಾಯಿಯ (mother) ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಓದಲು ದೂರದ ಊರಿಗೆ ಹೋದ ಮಗನು, ನಾಲ್ಕು ತಿಂಗಳ ಬಳಿಕ ಮನೆಗೆ ಮರಳುತ್ತಿದ್ದಂತೆ ತಾಯಿಯೂ ಅದ್ದೂರಿ ಸ್ವಾಗತ ಕೋರಿದ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ. ತಾಯಿ ಮಗನ ಬಾಂಧವ್ಯ ಸಾರುವ ಈ ದೃಶ್ಯವನ್ನು ನೆಟ್ಟಿಗರು ಕಣ್ತುಂಬಿಸಿಕೊಂಡಿದ್ದಾರೆ.

ಶ್ರೀ ಸಾಯಿ ಶ್ವೇತ ಚೆನ್ನುಪತಿ (swetharahul003) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ತಾಯಿ- ಮಗನ ಭಾವನಾತ್ಮಕ ಪುನರ್ಮಿಲನದ ದೃಶ್ಯವನ್ನು ಕಾಣಬಹುದು. ಮಗನನ್ನು ಸ್ವಾಗತಿಸಲು ತಾಯಿಯೂ ಕಾತುರಳಾಗಿದ್ದಾಳೆ. ಮನೆಯನ್ನು  ಸುಂದರವಾಗಿ ಅಲಂಕರಿಸಿದ್ದು, ಪ್ರವೇಶದ್ವಾರದ ಬಳಿ ಆರ್ಕಷಕ ರಂಗೋಲಿ ಬಿಡಿಸಿದ್ದಾಳೆ. ಅಷ್ಟೇ ಅಲ್ಲದೆ, ಮುಚ್ಚಿದ ಬಾಗಿಲಿನ ಹಿಂದೆ ಕೈಯಲ್ಲಿ ಕಾನ್ಫೆಟ್ಟಿ ಸ್ಟ್ರೀಮರ್‌ಗಳನ್ನು ಹಿಡಿದು ನಿಂತು ಕೊಂಡಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಬಾಗಿಲು ತೆರೆಯುತ್ತಿದ್ದಂತೆ, ಮಗ ತನ್ನ ತಂದೆಯೊಂದಿಗೆ ಮನೆಯೊಳಗೆ ಪ್ರವೇಶಿಸಿದ್ದಾನೆ. ಮಗನ ಆಗಮನವನ್ನು ಸಂಭ್ರಮಿಸುತ್ತಾ ತಾಯಿಯು ತನ್ನ ಕೈಯಲ್ಲಿದ್ದ ಕಾನ್ಫೆಟ್ಟಿಯನ್ನು ಸಿಡಿಸಿ ಮಗುವಿನಂತೆ ಕುಣಿದಾಡಿದ್ದಾಳೆ. ತನ್ನ ತಾಯಿಯ ಅದ್ದೂರಿ ಸ್ವಾಗತಕ್ಕೆ ಕಂಡು ಮಗನಿಗೆ ಖೂಷಿಯಾಗಿದೆ. ಕೊನೆಗೆ, ಇಬ್ಬರೂ ಅಪ್ಪಿಕೊಂಡು ಆ ಕ್ಷಣವನ್ನು ಸಂಭ್ರಮಿಸಿದ್ದಾರೆ. ಅಲ್ಲೇ ಇದ್ದ ತಂದೆಯೂ, ತಾಯಿ ಹಾಗೂ ಮಗನ ಖುಷಿಯನ್ನು ಕಣ್ತುಂಬಿಸಿಕೊಳ್ಳುವುದನ್ನು ಕಾಣಬಹುದು.

ಇದನ್ನೂ ಓದಿ:ಹೆಣ್ಣು ಮಗು ಹುಟ್ಟಿತ್ತೆಂದು ಖುಷಿಯಿಂದ ಆಸ್ಪತ್ರೆಯಲ್ಲೇ ಕುಣಿದಾಡಿದ ತಂದೆ

ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ದೃಶ್ಯ ನೋಡಿ ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತಾಯಿ ಮತ್ತೆ ಮಗುವಾದರು ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ತಂದೆ ತಾಯಿಯಿಂದ ಅದ್ದೂರಿ ಸ್ವಾಗತಕ್ಕೆ ಇದುವೇ ನಿಜವಾದ ಸಂತೋಷ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:48 am, Fri, 2 January 26

Source link