nagaraj11081993

ಹಿಂದಿಗೆ ರೀಮೇಕ್ ಆಗುತ್ತಿದೆ ವಿಜಯ್-ರಶ್ಮಿಕಾ ಸಿನಿಮಾ: ನಟರು ಯಾರು? – Kannada News | Vijay Rashmika’s Dear comrade movie remake in Hindi

ಪ್ಯಾನ್ ಇಂಡಿಯಾ (Pan India) ಸಿನಿಮಾಗಳು ಬಂದ ಮೇಲೆ ರೀಮೇಕ್ ಸಂಸ್ಕೃತಿ ಬಹಳ ಕಡಿಮೆ ಆಗಿದೆ. ಮೊದಲೆಲ್ಲ ದಕ್ಷಿಣದಲ್ಲಿ ಹಿಟ್ ಆದ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ ಕೋಟಿಗಳಲ್ಲಿ ಬಾಚಿಕೊಳ್ಳುತ್ತಿದ್ದರು ಅಲ್ಲಿಯ ನಿರ್ದೇಶಕರು. ಹಿಂದಿಯಲ್ಲಿ ಹಿಟ್ ಆದ ಸಿನಿಮಾಗಳು ದಕ್ಷಿಣದ ಭಾಷೆಗೂ ಬರುತ್ತಿದ್ದವು. ಈಗದು ಕಡಿಮೆ ಆಗಿದೆ. ಆದರೆ ಈಗ ತುಸು ಹಳೆಯ ದಕ್ಷಿಣದ ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಅದರಲ್ಲೂ ನಿರ್ಮಾಪಕ ಕರಣ್ ಜೋಹರ್ ಒಂದರ ಹಿಂದೊಂದು ಇಂಥಹಾ ಸಾಹಸ ಮಾಡುತ್ತಿದ್ದಾರೆ. ಇದೀಗ…

Read More

Iran Protests: ‘ಮುಲ್ಲಾಗಳೇ ದೇಶಬಿಟ್ಟು ತೊಲಗಿ’- ಇರಾನ್​ನಲ್ಲಿ ಜನಘೋಷ; ತೀವ್ರ ಪ್ರತಿಭಟನೆಯಲ್ಲಿ 7 ಬಲಿ – Kannada News | Iran sees massive protests across the country, people show anger on Mullahs

ಟೆಹರಾನ್, ಜನವರಿ 2: ಇರಾನ್ ದೇಶದಲ್ಲಿ ಸರ್ಕಾರದ ವಿರುದ್ಧ ಜನಾಕ್ರೋಶ (Iran people protest) ಹೆಚ್ಚುತ್ತಿದೆ. ಭಾನುವಾರ ಶುರುವಾದ ಪ್ರತಿಭಟನೆಗಳಲ್ಲಿ ಬಲಿಯಾದವರ ಸಂಖ್ಯೆ ಏಳು ದಾಟಿದೆ. ಆರ್ಥಿಕ ಸಂಕಷ್ಟ ಮತ್ತು ಹಣದುಬ್ಬರದಿಂದ ಜರ್ಝರಿತವಾಗಿರುವ ದೇಶದ ಈ ಹೀನಾಯ ಸ್ಥಿತಿಗೆ ಸರ್ಕಾರವನ್ನು ಹೊಣೆಯಾಗಿಸಿ, ಇರಾನ್​ನಲ್ಲಿ ಜನರು ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಹತ್ತಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಇರಾನ್​ನ ವರ್ತಕರು, ಅಂಗಡಿ ಮಾಲೀಕರೂ ಕೂಡ ಜೊತೆಯಾಗಿದ್ಧಾರೆ. ಅನೇಕ ನಗರಗಳಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಬಂದ್…

Read More

ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಮಾಜಿ ಸಚಿವ ಶ್ರೀರಾಮುಲು – Kannada News | Ballari Banner Dispute: Sriramulu Demands High Level Probe

ಬಳ್ಳಾರಿ, ಜನವರಿ 02: ಬ್ಯಾನರ್ ಅಳವಡಿಕೆ ವಿಚಾರವಾಗಿ ನಡೆದ ಘರ್ಷಣೆ ಸಂಬಂಧ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧ ಗೂಂಡಾಗಿರಿಯ ಆರೋಪಗಳನ್ನು ತಳ್ಳಿಹಾಕಿದ ಶ್ರೀರಾಮುಲು, ವಿರೋಧಿಗಳೇ ಪೂರ್ವನಿಯೋಜಿತವಾಗಿ ಪೆಟ್ರೋಲ್ ಬಾಂಬ್‌ಗಳನ್ನು ತಂದು, ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಗುಂಡಿನ ದಾಳಿಯೂ ಅವರ ಕಡೆಯಿಂದಲೇ ನಡೆದಿದೆ. ಸತೀಶ್ ರೆಡ್ಡಿ ಅವರ ಬೆಂಬಲಿಗರು ಮತ್ತು ಅಂಗರಕ್ಷಕರು ಗುಂಡು ಹಾರಿಸಿದ್ದಾರೆ. ಹೀಗಾಗಿ ಸಿಟ್ಟಿಂಗ್ ಹೈಕೋರ್ಟ್ ನ್ಯಾಯಾಧೀಶರಿಂದ ಅಥವಾ ಸಿಬಿಐನಿಂದ…

Read More

ಜನಾರ್ದನ ರೆಡ್ಡಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: ಕಾಂಗ್ರೆಸ್​​ ಶಾಸಕ ಹೇಳಿದ್ದೇ – Kannada News | Bharath Reddy Vows to Expose Janardhan Reddy Following Ballari Clash and Death

ಬಳ್ಳಾರಿ, ಜನವರಿ 02: ಬ್ಯಾನರ್​​ ವಿಚಾರಕ್ಕೆ ನಡೆದ ಗಲಾಟೆ ತೀವ್ರ ರೂಪಕ್ಕೆ ಹೋಗಿ ಓರ್ವ ಯುವಕ ಸಾವನ್ನಪ್ಪಿರುವ ಬಗ್ಗೆ ನಾರಾ ಭರತ್ ರೆಡ್ಡಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ತಮ್ಮ ವಿರೋಧಿಗಳ ಗುಂಪಿನಿಂದಲೇ ಗುಂಡು ಹಾರಿಸಲಾಗಿದೆ. ಯುವಕನ ಸಾವಿಗೆ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಮೃತಪಟ್ಟ ಯುವಕನ ತ್ಯಾಗವು ವಾಲ್ಮೀಕಿ ಅಜ್ಜನ ಉದ್ದೇಶಗಳಿಗಾಗಿ ಮತ್ತು ಜನಾರ್ದನ ರೆಡ್ಡಿ ರಾಜಕೀಯ ಅಂತ್ಯಕ್ಕಾಗಿ ಆಗಿದೆ. ಜನಾರ್ದನ ರೆಡ್ಡಿ ಎಂತಹ ಹೇಡಿ…

Read More

ಹಿಂಡಲಗಾ ಜೈಲಿನ ಒಳಗೆ ಮೊಬೈಲ್, ಡ್ರಗ್ಸ್! ಸಿಬ್ಬಂದಿಯೇ ಅಕ್ರಮದಲ್ಲಿ ಶಾಮೀಲು? – Kannada News | Belagavi Hindalga Jail: Mobiles, Drugs Smuggled; captured in CCTV, Security Flaws Exposed

ಹಿಂಡಲಗಾ ಜೈಲಿನ ಒಳಗೆ ಮೊಬೈಲ್, ಡ್ರಗ್ಸ್! ಸಿಬ್ಬಂದಿಯೇ ಅಕ್ರಮದಲ್ಲಿ ಶಾಮೀಲು? ಬೆಳಗಾವಿ, ಜನವರಿ 02: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಬಹಿರಂಗವಾಗಿದೆ. ಜೈಲಿನ ಹೊರಗಿನಿಂದ ಒಳಗೆ ಮೊಬೈಲ್ ಹಾಗೂ ಮಾದಕ ವಸ್ತುಗಳನ್ನು ಎಸೆಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜೈಲಿನೊಳಗಿನ ಭದ್ರತಾ ವ್ಯವಸ್ಥೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. ಸಾಕ್ಷಿ ಇದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಮುಸುಕು ಧರಿಸಿದ ಅಪರಿಚಿತ ವ್ಯಕ್ತಿಯೊಬ್ಬ ಜೈಲಿನೊಳಗೆ ಮೊಬೈಲ್ ಮತ್ತು ಡ್ರಗ್ಸ್ ಎಸೆಯುತ್ತಿರುವ ಮೂರು ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ….

Read More

Video: ಮಗಳ ಕಾಳಜಿಯುತ ಮಾತು ಕೇಳಿ ಭಾವುಕನಾದ ತಂದೆ – Kannada News | A daughter gave a word of advice to her father who had left for a distant city

ಮಗಳ ಪಾಲಿಗೆ ಅಪ್ಪ (father) ಎಲ್ಲವೂ ಆಗಿರುತ್ತಾನೆ. ಹೀಗಾಗಿ ಅಪ್ಪ ಅಂದ್ರೆ ಮಗಳಿಗೆ ಬೆಸ್ಟ್ ಫ್ರೆಂಡ್, ಹೀರೋ ಎಲ್ಲವೂ ಕೂಡ. ಇತ್ತ ತಂದೆಯ ಪಾಲಿಗೆ ಮಗಳು ಎರಡನೇ ತಾಯಿಯಾಗಿರುತ್ತಾಳೆ. ತನ್ನ ಜೀವನದಲ್ಲಿ ತಂದೆಗೆ ವಿಶೇಷ ಸ್ಥಾನ ನೀಡಿರುತ್ತಾಳೆ. ಆ ಸ್ಥಾನವನ್ನು ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಂದಹಾಗೆ, ಪುಟ್ಟ ಮಕ್ಕಳಿಗೆ (little kids) ಬುದ್ಧಿ ಮಾತು ಹೇಳುವಂತೆ ಇಲ್ಲೊಬ್ಬಳು ಮಗಳು ತನ್ನ ತಂದೆಗೆ ಕಿವಿ ಮಾತು ಹೇಳಿದ್ದಾಳೆ. ಮಗಳ ಕಾಳಜಿಯುತ ಮಾತು ಕೇಳಿ ತಂದೆ ಭಾವುಕರಾಗಿರುವ ವಿಡಿಯೋ…

Read More

ಫ್ಲಾಫ್​​ಗಳ ಸರದಾರ ವಿಜಯ್ ದೇವರಕೊಂಡ, ಸಿನಿಮಾಕ್ಕೆ ಬ್ರೇಕ್ ಹಾಕಿದ ನಿರ್ಮಾಪಕ – Kannada News | Vijay Deverakonda starrer Kingdom movie sequel shelved

ವಿಜಯ್ ದೇವರಕೊಂಡ (Vijay Deverakonda) ತೆಲುಗು ಚಿತ್ರರಂಗದಲ್ಲಿ ಕೇವಲ ಒಂದೇ ದೊಡ್ಡ ಹಿಟ್ ಸಿನಿಮಾ ಮೂಲಕ ಸ್ಟಾರ್ ನಟ ಎನಿಸಿಕೊಂಡರು. ‘ಅರ್ಜುನ್ ರೆಡ್ಡಿ’ ಸಿನಿಮಾ ವಿಜಯ್ ದೇವರಕೊಂಡ ಜೀವನವನ್ನೇ ಬದಲಾಯಿಸಿತು. ಅದಕ್ಕೆ ಮುನ್ನ ಕೆಲವು ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದರಾದರೂ ಸ್ಟಾರ್ ಆಗಿದ್ದು ‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲಕ. ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ನಟಿಸಿದ ‘ಗೀತ ಗೋವಿಂದಂ’ ಸಹ ದೊಡ್ಡ ಹಿಟ್ ಆಯ್ತು. ಆದರೆ ಅದಾದ ಬಳಿಕ ವಿಜಯ್ ನಟನೆಯ ಯಾವೊಂದು ಸಿನಿಮಾ ಸಹ ಹಿಟ್ ಆಗಿದ್ದಿಲ್ಲ….

Read More

ಗಿಲ್ಲಿ ಬಳಿ ಕ್ಷಮೆ ಕೇಳಿದ ಧ್ರುವಂತ್; ಆ ಒಂದು ಘಟನೆ ಎಲ್ಲವನ್ನೂ ಬದಲಿಸಿತು? – Kannada News | Dhruvanth Apologizes to Gilli in Bigg Boss Kannada: A New Year Change

‘ಬಿಗ್ ಬಾಸ್’ ಮನೆಯಲ್ಲಿ ಯಾರು ಯಾವಾಗ ಬದಲಾಗುತ್ತಾರೆ ಎಂದು ಊಹಿಸೋದು ಕಷ್ಟ. ಈಗ ಧ್ರುವಂತ್ ವಿಷಯದಲ್ಲೂ ಹೀಗೆಯೇ ಆಗಿದೆ. ಗಿಲ್ಲಿ (Gilli) ಜೊತೆ ಸದಾ ಕಿತ್ತಾಡುತ್ತಿದ್ದ ಅವರು ಏಕಾಏಕಿ ಬದಲಾಗಿದ್ದಾರೆ. ಈ ಹಿಂದೆ ಮಾಡಿದ ಬೇಸರಕ್ಕೆ ಗಿಲ್ಲಿ ಬಳಿ ಧ್ರುವಂತ್ ಕ್ಷಮೆ ಕೇಳಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ನಡೆದ ಈ ಬೆಳವಣಿಗೆ ಅಚ್ಚರಿ ತಂದಿದೆ. ಬಿಗ್ ಬಾಸ್ ಕನ್ನಡದಲ್ಲಿ ಧ್ರುವಂತ್ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಅವರು ಯಾವ ಕ್ಷಣದಲ್ಲಿ ಹೇಗಿರುತ್ತಾರೆ ಎಂಬುದನ್ನು ಊಹಿಸೋದು ಕಷ್ಟ. ಅವರು…

Read More

ಬಳ್ಳಾರಿಯಲ್ಲಿ ಬ್ಯಾನರ್​​ ಗಲಾಟೆ: ‘ಕೈ’ ಕಾರ್ಯಕರ್ತ ರಾಜಶೇಖರ್​ ಮೃತಪಟ್ಟಿದ್ದು ಯಾರ ಗುಂಡೇಟಿಗೆ? – Kannada News | Ballari Banner Dispute: Who Fired the Fatal Shot That Killed Rajasekhar?

ಬ್ಯಾನರ್​​ ಗಲಾಟೆವೇಳೆ ಗುಂಡೇಟಿಗೆ ಯುವಕ ಬಲಿ. ಬಳ್ಳಾರಿ, ಜನವರಿ 02: ಬ್ಯಾನರ್​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಯುವಕ ಮೃತಪಟ್ಟಿರುವ ವಿಚಾರವೀಗ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಬಳ್ಳಾರಿ ಎಂಎಲ್​​ಎ ನಾರಾ ಭರತ್​​ ರೆಡ್ಡಿ ವಿರುದ್ಧ ಸಮರಕ್ಕೆ ಕಾರಣವಾಗಿದೆ. ಉಭಯ ನಾಯಕರು ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆಯನ್ನೇ ಗೈಯುತ್ತಿದ್ದಾರೆ. ಇದು ನನ್ನ ಕೊಲೆಗೆ ನಡೆದ ಸಂಚು ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದರೆ, ಅಕ್ರಮ ಗಣಿಗಾರಿಕೆ ವಿಷಯ ಡೈವರ್ಟ್​ ಮಾಡಲು ಇಂತಹ ನೀಜ ಕೃತ್ಯಕ್ಕೆ ಜನಾರ್ದನ ರೆಡ್ಡಿ…

Read More

ಉಂಡ ಮನೆಗೇ ದಂಪತಿಯಿಂದ ದ್ರೋಹ: ಉದ್ಯಮಿ ಮನೆಯಲ್ಲಿ ಕದ್ದಿದ್ದು 979 ಗ್ರಾಂ ಬಂಗಾರ! – Kannada News | Robbery at Bengaluru Entrepreneur’s House: 979 Grams of Gold Stolen by House Helpers

ಬೆಂಗಳೂರು, ಜನವರಿ 02: ಉದ್ಯಮಿಯೊಬ್ಬರ ಮನೆಯಲ್ಲಿ ಮನೆ ಕೆಲಸಗಾರರೇ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ ಕದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹೊಸ ವರ್ಷಾಚರಣೆಗೆಂದು ಕುಟುಂಬ ಬೇರೆ ರಾಜ್ಯಕ್ಕೆ ತೆರಳುವ ವೇಳೆ ಕೆಲಸಗಾರರ ಬಳಿ ಕೀ ಕೊಟ್ಟು ತೆರಳಿತ್ತು. ಇದನ್ನೇ ಬಂಡವಾಳ ಮಾಡಕೊಂಡು ಮನೆಯಲ್ಲಿ ಆರೋಪಿಗಳು ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ. ಡಿ.30ರಂದು ಸದಾಶಿವ ನಗರದ ಉದ್ಯಮಿ ಅಭಿಷೇಕ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬರೋಬ್ಬರಿ 1.37 ಕೋಟಿ ರೂ. ಮೌಲ್ಯದ ಚಿನ್ನ, ವಾಚ್​​ಗಳನ್ನು ಕಳವು ಮಾಡಲಾಗಿದೆ. ಆ ಪೈಕಿ…

Read More