All posts by nagaraj11081993

CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಕರ್ನಾಟಕದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!

CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಕರ್ನಾಟಕದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಕ-ಯುವತಿಯರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯು (CRPF) ಭರ್ಜರಿ ಸಿಹಿ ಸುದ್ದಿ ನೀಡಿದೆ. 2026ನೇ ಸಾಲಿನ ತಾಂತ್ರಿಕ ಮತ್ತು ಟ್ರೇಡ್ಸ್‌ಮನ್ ವಿಭಾಗದ ಒಟ್ಟು 9,175 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಹುದ್ದೆಗಳ ವಿವರ ಮತ್ತು ವೇತನ:

ಈ ಬೃಹತ್ ನೇಮಕಾತಿ ಪ್ರಕ್ರಿಯೆಯಲ್ಲಿ 9,096 ಪುರುಷ ಮತ್ತು 79 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪೇ-ಲೆವೆಲ್ 3ರ ಅಡಿಯಲ್ಲಿ 21,700 ರಿಂದ 69,100 ರೂ. ವರೆಗೆ ಮಾಸಿಕ ವೇತನ ಹಾಗೂ ಕೇಂದ್ರ ಸರ್ಕಾರದ ಇತರೆ ಭತ್ಯೆಗಳು ದೊರೆಯಲಿವೆ.

ಕರ್ನಾಟಕದಲ್ಲಿ 466 ಹುದ್ದೆಗಳು ಲಭ್ಯ:

ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಈ ಬಾರಿ ಉತ್ತಮ ಅವಕಾಶವಿದ್ದು, ಪುರುಷರ ವಿಭಾಗದಲ್ಲಿ ಮಾತ್ರ 466 ಹುದ್ದೆಗಳನ್ನು ಮೀಸಲಿಡಲಾಗಿದೆ. ಇದರಲ್ಲಿ ಡ್ರೈವರ್, ಕುಕ್, ವಾಟರ್ ಕ್ಯಾರಿಯರ್, ಸಫಾಯಿ ಕರ್ಮಚಾರಿ ಸೇರಿದಂತೆ ವಿವಿಧ ವೃತ್ತಿಪರ ಹುದ್ದೆಗಳು ಸೇರಿವೆ. ಅರ್ಜಿ ಸಲ್ಲಿಕೆ ಆರಂಭ ಏಪ್ರಿಲ್ 20 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 19 ಎಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಯಾವ ಯಾವ ಹುದ್ದೆಗಳಿವೆ? (Trades):

ನೇಮಕಾತಿಯಲ್ಲಿ ಚಾಲಕ (Driver) ಹುದ್ದೆಗೆ ಅತಿ ಹೆಚ್ಚು ಅಂದರೆ 3,176 ಸ್ಥಾನಗಳನ್ನು ನೀಡಲಾಗಿದೆ. ಉಳಿದಂತೆ ಅಡುಗೆಯವರು (Cook-1426), ಬಗ್ಲರ್ (1263), ಸಫಾಯಿ ಕರ್ಮಚಾರಿ (547), ವಾಟರ್ ಕ್ಯಾರಿಯರ್ (502) ಹಾಗೂ ಬಾರ್ಬರ್, ಟೈಲರ್, ಕಾರ್ಪೆಂಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತರು CRPF ನ ಅಧಿಕೃತ ನೇಮಕಾತಿ ಜಾಲತಾಣವಾದ www.rect.crpf.gov.in ಗೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 011-26160255 ಅನ್ನು ಸಂಪರ್ಕಿಸಲು ಕೋರಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಗ್ರಹಗಳ ಬದಲಾವಣೆಯಿಂದ ಆಗುವ ರಾಜಕೀಯ ಲಾಭ, ನಷ್ಟಗಳು

​ಪ್ರಸ್ತುತ ಆಕಾಶಮಂಡಲದಲ್ಲಿ ಗುರುವು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ಮತ್ತು ಶನಿಯು ಮೀನ ರಾಶಿಯಲ್ಲಿ ಇರುವುದು ರಾಜ್ಯದ ಆಡಳಿತಾರೂಢರಿಗೆ ಸವಾಲು ಮತ್ತು ಅವಕಾಶ ಎರಡನ್ನೂ ಒಟ್ಟಿಗೆ ತರುತ್ತಿದೆ. ಗುರುವಿನ ಪ್ರಭಾವದಿಂದಾಗಿ ಹೊಸ ಯೋಜನೆಗಳ ಘೋಷಣೆಯಾಗಬಹುದು, ಆದರೆ ಶನಿಯ ಪ್ರಭಾವದಿಂದಾಗಿ ಆ ಯೋಜನೆಗಳ ಅನುಷ್ಠಾನದಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಲಿದೆ.

​ಗೆಲುವು ಪಡೆಯುವ ರಾಶಿಗಳು:

​ಮೇಷ :

ಸೂರ್ಯನು ನಿಮ್ಮ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವುದರಿಂದ, ಈ ರಾಶಿಯ ನಾಯಕರಿಗೆ ಸಿಂಹ ಬಲ ಬರಲಿದೆ. ಅನಿರೀಕ್ಷಿತವಾಗಿ ದೊಡ್ಡ ಜವಾಬ್ದಾರಿಗಳು ಹುಡುಕಿಕೊಂಡು ಬರಬಹುದು. ಸರ್ಕಾರಿ ಮಟ್ಟದ ಮಾತುಕತೆಗಳಲ್ಲಿ ನಿಮ್ಮದೇ ಮೇಲುಗೈ ಆಗಲಿದೆ.

​ಕುಂಭ:

ನಿಮ್ಮ ರಾಶ್ಯಾಧಿಪತಿ ಶನಿಯು ಎರಡನೇ ಮನೆಯಲ್ಲಿರುವುದರಿಂದ ಆರ್ಥಿಕ ಮತ್ತು ಸಂಪನ್ಮೂಲ ಕ್ರೋಢೀಕರಣದಲ್ಲಿ ಯಶಸ್ಸು ಸಿಗಲಿದೆ. ಗುಪ್ತವಾಗಿ ನಡೆಸುವ ರಾಜಕೀಯ ತಂತ್ರಗಳು ಫಲಪ್ರದವಾಗಲಿವೆ.

​ಮಿಶ್ರ ಫಲದ ರಾಶಿಗಳು:

​ಕರ್ಕಾಟಕ:

ಚಂದ್ರನ ಚಲನೆಯಿಂದಾಗಿ ವಾರದ ಆರಂಭದಲ್ಲಿ ಅಸ್ಥಿರತೆ ಇರಲಿದ್ದರೂ, ವಾರಾಂತ್ಯಕ್ಕೆ ಪರಿಸ್ಥಿತಿ ಸುಧಾರಿಸಲಿದೆ. ಸಾರ್ವಜನಿಕ ಭಾಷಣ ಮಾಡುವಾಗ ಎಚ್ಚರವಿರಲಿ; ಮಾತು ತಪ್ಪಾಗಿ ಅರ್ಥೈಸಲ್ಪಡಬಹುದು.

​ಮಕರ:

ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಆದರೆ ವಿರೋಧಿಗಳ ಕುತಂತ್ರದಿಂದಾಗಿ ಗೆಲುವು ಸ್ವಲ್ಪ ವಿಳಂಬವಾಗಬಹುದು. ತಾಳ್ಮೆಯೇ ನಿಮ್ಮ ಯಶಸ್ಸಿನ ಮಂತ್ರ.

​ಸೋಲುವ ರಾಶಿಗಳು:

​ಕನ್ಯಾ:

ಸಪ್ತಮ ಸ್ಥಾನದಲ್ಲಿ ರಾಹುವಿನ ಸಂಚಾರವಿರುವುದರಿಂದ ಮಿತ್ರ ಪಕ್ಷಗಳಿಂದ ಅಥವಾ ಆಪ್ತರಿಂದಲೇ ನಂಬಿಕೆ ದ್ರೋಹವಾಗುವ ಸಾಧ್ಯತೆಯಿದೆ. ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಎಚ್ಚರಿಕೆ ಅಗತ್ಯ.

​ಮಿಥುನ:

ಹತ್ತನೇ ಮನೆಯಲ್ಲಿ ರಾಹು-ಬುಧರ ಯುತಿಯಿಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ತಪ್ಪು ಮಾಹಿತಿಯ ಆಧಾರದ ಮೇಲೆ ನೀವು ಇಡುವ ಹೆಜ್ಜೆ ರಾಜಕೀಯವಾಗಿ ದೊಡ್ಡ ಬೆಲೆ ತೆರುವಂತೆ ಮಾಡಬಹುದು.

ವಿಶೇಷ ಸೂಚನೆ ಎಂದರೆ ಮಂಗಳನು ಶನಿಯೊಂದಿಗೆ ಯುತಿಯಲ್ಲಿರುವುದರಿಂದ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪದ ವಾಕ್ಸಮರ ಅಥವಾ ಆಂತರಿಕ ಬಂಡಾಯ ಏಳುವ ಸಾಧ್ಯತೆಯಿದೆ. ಹಳೆಯ ನಾಯಕರ ಪ್ರಭಾವ ಕಡಿಮೆಯಾಗಿ, ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ಸಿಗುವಂತಹ ಬೆಳವಣಿಗೆಗಳು ತೆರೆಮರೆಯಲ್ಲಿ ನಡೆಯಲಿವೆ. ಈ ಬದಲಾವಣೆಗಳು ವಿಶೇಷವಾಗಿ ಏಪ್ರಿಲ್ ೧೪ರ ಸೌರಮಾನ ಯುಗಾದಿ ಅನಂತರ ವೇಗ ಪಡೆಯಲಿವೆ.

– ಲೋಹಿತ ಹೆಬ್ಬಾರ್

Source link

ಆಶಾ ಭೋಸ್ಲೆ ಬಗ್ಗೆ ಹಲವರಿಗೆ ತಿಳಿಯದ ವಿಷಯಗಳು ಇಲ್ಲಿವೆ…

ಭಾರತ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ (Asha Bhosle) ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. ಆಶಾ ಭೋಸ್ಲೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಂದಿ, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಆಶಾ ಭೋಸ್ಲೆ ಹಾಡಿದ್ದರು. ಸುಮಾರು 80ಕ್ಕೂ ಹೆಚ್ಚು ವರ್ಷ ಅವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಇದೀಗ ಆಶಾ ಭೋಸ್ಲೆ ನಿಧನ ಹೊಂದಿದ್ದು, ಅವರ ಬಗ್ಗೆ ಹೆಚ್ಚು ಮಂದಿಗೆ ತಿಳಿಯದ ಕೆಲ ಅಪರೂಪದ ಸಂಗತಿಗಳು ಇಲ್ಲಿವೆ…

  • ಆಶಾ ಭೋಸ್ಲೆ ಅವರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಆಶಾ ಅವರು ರಷ್ಯಾ ಮತ್ತು ಮಲಯ ಭಾಷೆಯಲ್ಲಿಯೂ ಹಾಡು ಹಾಡಿರುವುದು ವಿಶೇಷ.
  • ಆಶಾ ಭೋಸ್ಲೆ ಅವರು ಬಹಳ ಕಡಿಮೆ ವಯಸ್ಸಿನಲ್ಲೇ ಹಾಡಲು ಆರಂಭಿಸಿದರು. ಅವರು ಕೇವಲ 3 ವರ್ಷದವರಿರುವಾಗಲೇ ಸಂಗೀತ ಅಭ್ಯಾಸ ಆರಂಭಿಸಿದ್ದರು. ಮೊದಲ ಹಾಡು ಹಾಡಿದಾಗ ಅವರಿಗೆ ಕೇವಲ 10 ವರ್ಷ.
  • ಆಶಾ ಭೋಸ್ಲೆ ಅವರಿಗೆ ಗೌರವಪೂರ್ವಕವಾಗಿ ಬ್ರಿಟೀಷ್​​ ಬ್ಯಾಂಡ್ ಒಂದು ಆಶಾ ಅವರಗಾಗಿಯೇ ಆಲ್ಬಂ ಒಂದನ್ನು ಹೊರತಂದಿದೆ. ‘ಬ್ರಿಮ್​​ಫುಲ್ ಆಫ್ ಆಶಾ’ ಹೆಸರಿನ ಈ ಆಲ್ಬಂ 1997 ರಲ್ಲಿ ಬಿಡುಗಡೆ ಆಗಿತ್ತು.
  • ಆಶಾ ಭೋಸ್ಲೆ 16ರ ವಯಸ್ಸಿನಲ್ಲೇ ಓಡಿ ಹೋಗಿ 31 ವರ್ಷದ ಗಣಪತ್ ರಾವ್ ಭೋಸ್ಲೆ ಎಂಬಾತನ ವಿವಾಹವಾದರು. ಆ ವಿವಾಹದಿಂದ ತೀವ್ರ ಕಷ್ಟಗಳನ್ನು ಅವರು ಅನುಭವಿಸಿದರು.
  • ಆಶಾ ಭೊಸ್ಲೆ ಅವರು ತಮ್ಮ 20ನೇ ವಯಸ್ಸಿನಲ್ಲಿ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಅವರು ನಾಲ್ಕು ತಿಂಗಳ ಗರ್ಭಿಣಿ.
  • ಒಂದು ಸಮಯದಲ್ಲಿ ಅಕ್ಕ ಲತಾ ಮಂಗೇಶ್ಕರ್ ಅವರಿಗಿಂತಲೂ ಹೆಚ್ಚು ಹಾಡುಗಳನ್ನು ಆಶಾ ಭೊಸ್ಲೆ ಹಾಡಿದ್ದರು. ಆದರೆ ‘ನನ್ನ ಅಕ್ಕ ನನಗಿಂತ ಹೆಚ್ಚು ಪ್ರತಿಭಾವಂತೆ’ ಎಂದಿದ್ದರು ಆಶಾ.
  • ಆಶಾ ಭೊಸ್ಲೆ ಮತ್ತು ಲತಾ ಮಂಗೇಶ್ಕರ್ ಹಲವು ವರ್ಷ ಪರಸ್ಪರ ಮಾತನಾಡಿರಲಿಲ್ಲ. ಪ್ರೀತಿಸಿದವನೊಟ್ಟಿಗೆ ಓಡಿ ಹೋಗಿದ್ದ ಆಶಾ ಮೇಲೆ ವಿಪರೀತ ಸಿಟ್ಟಿತ್ತು ಲತಾ ಅವರಿಗೆ. ವಯಸ್ಸಾದಂತೆ ಅದು ಕರಗಿತು.
  • ಪಾಪ್ ಮತ್ತು ಹಿಪ್ ಹಾಪ್ ರೀತಿಯ ಹಾಡುಗಳ ಟ್ರೆಂಡ್ ಆರಂಭಕ್ಕೂ ಮುಂಚೆಯೇ ಅವುಗಳನ್ನು ಹಾಡಿದ್ದರು ಆಶಾ ಭೋಸ್ಲೆ. ಭಾರತದ ಮೊದಲ ಪಾಪ್, ಹಿಪ್-ಹಾಪ್ ಹಾಡುಗಾರ್ತಿ ಆಶಾ ಭೋಸ್ಲೆ.
  • 2011 ರಲ್ಲಿ ಆಶಾ ಭೋಸ್ಲೆ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿಕೊಂಡಿತು. ಅತ್ಯಧಿಕ ಹಾಡುಗಳನ್ನು ರೆಕಾರ್ಡ್ ಮಾಡಿದ ದಾಖಲೆ ಅವರ ಹೆಸರಲ್ಲಿದೆ. ಆಗಲೇ ಅವರು 11 ಸಾವಿರಕ್ಕೂ ಹೆಚ್ಚು ಹಾಡುಗಳ ರೆಕಾರ್ಡ್ ಮಾಡಿದ್ದರು.
  • ಸಂಗೀತಕ್ಕೆ ನೀಡಲಾಗುವ ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದೆನಿಸಿಕೊಂಡಿರುವ ಗ್ರಾಮಿಗೆ ನಾಮಿನೇಟ್ ಆದ ಮೊದಲ ಭಾರತೀಯರು ಆಶಾ ಭೋಸ್ಲೆ. ಎರಡು ಬಾರಿ ಅವರು ನಾಮಿನೇಟ್ ಆಗಿದ್ದಾರೆ.
  • ಹಲವಾರು ವಿದೇಶಿ ಗಾಯಕರುಗಳೊಟ್ಟಿಗೆ ಆಶಾ ಭೋಸ್ಲೆ ಕೊಲ್ಯಾಬ್ ಆಗಿ ಕೆಲಸ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರೊಟ್ಟಿಗೆ ಸಹ ಒಂದು ಹಾಡು ಮಾಡಿದ್ದಾರೆ ಆಶಾ ಭೋಸ್ಲೆ.
  • ಆಶಾ ಭೋಸ್ಲೆ ಅದ್ಭುತವಾಗಿ ಅಡುಗೆ ಮಾಡುತ್ತಿದ್ದರು. ಕಪೂರ್ ಕುಟುಂಬಕ್ಕೆ ಆಶಾ ಭೋಸ್ಲೆ ಅವರ ಕೈಯಡುಗೆ ಬಹಳ ರುಚಿಸುತ್ತಿತ್ತು. ಇದೇ ಕಾರಣಕ್ಕೆ ಕಪೂರ್ ಕುಟುಂಬಕ್ಕೆ ಆಶಾ ಬಲು ಹತ್ತಿರವಾಗಿದ್ದರು.
  • ಆಶಾ ಭೋಸ್ಲೆ ಉದ್ಯಮಿ ಸಹ ಹೌದು. ‘ಆಶಾಸ್ ಕಿಚನ್’ ಹೆಸರಿನ ರೆಸ್ಟೊರೆಂಟ್ ಸಹ ಸ್ಥಾಪಿಸಿದರು. ದುಬೈ, ಕುವೈತ್, ಲಂಡನ್ ಹಲವೆಡೆ ಅವರ ರೆಸ್ಟೊರೆಂಟ್​​ಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂಟಿ ಕಾಲಿನ ಖದೀಮ, ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ದ ಕಿರಾತಕ: ನಟೋರಿಯಸ್ ಕಳ್ಳರ ಫ್ಲ್ಯಾಶ್​ ಬ್ಯಾಕೇ ಭಯಾನಕ

ಆನೇಕಲ್​​, ಏಪ್ರಿಲ್​ 12: ಒಬ್ಬ ಒಂಟಿ ಕಾಲಿನಲ್ಲಿ ರಾಬರಿ ಮಾಡುವ ಖದೀಮ, ಮತ್ತೊಬ್ಬ ಶಾಸಕರ ಕಾರಿಗೆ ಬೆಂಕಿ ಹಚ್ಚಿದ್ದ ಕಿರಾತಕ. ಈ ಇಬ್ಬರು ಸೇರಿಕೊಂಡು ಸಿಕ್ಕ ಸಿಕ್ಕ ಕಡೆಗಳಲ್ಲಿ ದರೋಡೆ ಮಾಡುತ್ತಿದ್ದರು. ಆದರೆ ಇದೀಗ ಬೆಂಗಳೂರು ಹೊರವಲಯ ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸರು ನಟೋರಿಯಸ್ ದರೋಡೆಕೋರರನ್ನು (robbers) ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ. ಕೃಷ್ಣನಾಯಕ್​​ ಅಲಿಯಾಸ್​​ ಕುಂಟ ಕೃಷ್ಣ. ಇತನಿಗೆ ಹಾವಳಿ ಕೃಷ್ಣ ಅಂತ ಕೂಡ ಕರೆಯುತ್ತಾರೆ. ಇನ್ನೊಬ್ಬ ನವೀನ್​ ಅಲಿಯಾಸ್​​ ಕಾಳಪ್ಪ. ರಾಬರಿ ಕಾಳ ಅಂತ ಇನ್ನೊಂದು ಹೆಸರಿದೆ. ಸದ್ಯ ಪೊಲೀಸರು ಇವರಿಬ್ಬರ ಹೆಡೆಮುರಿ ಕಟ್ಟಿದ್ದಾರೆ.

ನಟೋರಿಯಸ್ ಕಳ್ಳರ ಫ್ಲ್ಯಾಶ್​ ಬ್ಯಾಕ್ ಭಯಾನಕ

ಇನ್ನು ಈ ಇಬ್ಬರು ನಟೋರಿಯಸ್ ಕಳ್ಳರ ಫ್ಲ್ಯಾಶ್​ ಬ್ಯಾಕ್ ಭಯಾನಕವಾಗಿದೆ. ಕೃಷ್ಣನಾಯರ್​​​ ಆಟೋ ಓಡಿಸಿಕೊಂಡಿದ್ದ. ಚಿಕ್ಕ ವಯಸ್ಸಿನಲ್ಲಿಯೇ ಕಳ್ಳತನ, ರಾಬರಿ ಮಾಡುತ್ತಿದ್ದ. ಆಟೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿ ರಾಬರಿ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಈತನ ಕಾಲಿಗೆ ಫೈರಿಂಗ್ ಮಾಡಿದ್ದರು. ಹೀಗಾಗಿ ಒಂದು ಕಾಲು ಕಳೆದುಕೊಂಡಿದ್ದ.

ಇದನ್ನೂ ಓದಿ: ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!

ಕಾಲು ಹೋಗಿದ್ದರು, ಅಷ್ಟೇ ಅಲ್ಲದೆ ಜೈಲಿಗೆ ಹೋಗಿ ಬಂದಿದ್ದರೂ ಬುದ್ಧಿ ಕಲಿಯದ ಕಿರಾತಕ, ಒಂದೇ ಕಾಲಿನಲ್ಲಿ ಆಟೋ ಓಡಿಸುತ್ತಾರೆ. ಅದೇ ಒಂಟಿ ಕಾಲಿನಲ್ಲಿ ಸಹಚರರ ಜೊತೆ ಅಮಾಯಕರ ಕಿಡ್ನ್ಯಾಪ್ ಮಾಡುತ್ತಾನೆ. ಹಣ ದೋಚಿ, ಹಲ್ಲೆ ನಡೆಸಿ ಬಿಟ್ಟು ಪರಾರಿಯಾಗುತ್ತಾನೆ. ಈವರೆಗೆ ಬರೋಬ್ಬರಿ 20ಕ್ಕೂ ಹೆಚ್ಚು ಕೇಸ್​ಗಳಲ್ಲಿ ಭಾಗಿಯಾಗಿದ್ದು, ಬನ್ನೇರುಘಟ್ಟ, ಸೂರ್ಯನಗರ, ಹೆಬ್ಬಗೋಡಿ, ಜಿಗಣಿ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ಶಾಸಕರ ಕಾರಿಗೆ ಬೆಂಕಿಯಿಟ್ಟಿದ್ದ ಭೂಪ

ಮತ್ತೊರ್ವ ಕಳ್ಳ ನವೀನ್​​ ಅಲಿಯಾಸ್​​ ರಾಬರಿ ಕಾಳ, 2021ರಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟಿದ್ದ. ಮನೆಯ ಬಳಿ ನಿಲ್ಲಿಸಿದ್ದ ಎರಡು ಕಾರುಗಳು ಬೆಂಕಿಗಾಹುತಿಯಾಗಿದ್ದವು. ಆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆದರೆ ಜೈಲಿನಿಂದ ಹೊರಬಂದು ಹಳೆ ಚಾಳಿ ಮುಂದುವರೆಸಿದ್ದ. ಈತ ಬೈಕ್ ಸೇರಿದಂತೆ ರಾಬರಿ ಮಾಡುತ್ತಿದ್ದ. ಬಳಿಕ ಹಾವಳಿ ಕೃಷ್ಣನ ಜೊತೆ ಸೇರಿದ ಕಾಳಪ್ಪ ಸಿಕ್ಕ ಸಿಕ್ಕ ಕಡೆಗಳಲ್ಲಿ ರಾಬರಿ ಮಾಡುತ್ತಿದ್ದ.

ಆಟೋಗೆ ಹತ್ತಿಸಿಕೊಂಡು ವ್ಯಕ್ತಿಯ ರಾಬರಿ: ಕಿವಿ ಕಟ್ ಮಾಡಿ ಚಿತ್ರಹಿಂಸೆ

ಇನ್ನು ಈ ಇಬ್ಬರು ನಟೋರಿಯಸ್​​ ದರೋಡೆಕೋರರು ಇತ್ತೀಚೆಗೆ ಯಾರಂಡಹಳ್ಳಿ ಸಮೀಪ ರಾಬರಿ ಮಾಡಿದ್ದಾರೆ. ಸುಂದರ್ ರಾಜ್​ ಎಂಬುವವರನ್ನು ಹಾವಳಿ ಕೃಷ್ಣನ ಆಟೋಗೆ ಹತ್ತಿಸಿಕೊಂಡ ಖದೀಮರು, ಮೊದಲಿಗೆ ಜೇಬಿನಲ್ಲಿದ್ದ ಹಣ, ಮೊಬೈಲ್ ಕಿತ್ತುಕೊಂಡಿದ್ದಾರೆ. ಬಳಿಕ ಎಟಿಎಂ ಕಾರ್ಡ್ ಕೊಡುವಂತೆ ಆವಾಜ್​​ ಹಾಕಿದ್ದಾರೆ. ಕೊಡದಿದ್ದಾಗ ಕಿವಿ ಕಟ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ. ಬಳಿಕ ಎಟಿಎಂ ಕಿತ್ತುಕೊಂಡು 1 ಲಕ್ಷ ರೂ ಹಣ ಡ್ರಾ ಮಾಡಿದ್ದಾರೆ. ನಂತರ ಆತನನ್ನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ ಆಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಜಿಗಣಿ ಪೊಲೀಸರು, ಇನ್ಸ್​ಪೆಕ್ಟರ್​ ಮಂಜುನಾಥ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಂಗ್ರೆಸ್ ಯುವ ಮುಖಂಡನ ಹತ್ಯೆ: 24 ಗಂಟೆಯೊಳಗೇ ಹಂತಕರು ಅರೆಸ್ಟ್, ಕೊಲೆ ರಹಸ್ಯ ಬಯಲು

ಧಾರವಾಡ, (ಏಪ್ರಿಲ್ 12): ಮೊನ್ನೆ ಅಷ್ಟೇ ಧಾರವಾಡದ (Dharwad) ಮಾಳಾಪುರ ಬಡಾವಣೆಯ ಹಾಶ್ಮಿ ನಗರದಲ್ಲಿ ನಡೆದಿದ್ದ ಕಾಂಗ್ರೆಸ್ (Congress) ಯುವ ಮುಖಂಡ ಫೈರೋಜ್ ಪಠಾಣ್ (Fairoz Pathan Murder Case)  ಹಂತಕರನ್ನು ಪತ್ತೆ ಹಚ್ಚುವಲ್ಲಿ ಉಪ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ನಡೆದು 24 ಗಂಟೆಯೊಳಗೇ ಹಂತಕರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. 9 ಆರೋಪಿಗಳ ಪೈಕಿ 8 ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹಿಂದಿನ ಕೆಲ ವೈಷಮ್ಯಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರವೇ ಈ ಕೊಲೆಗೆ ಕಾರಣ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಕೊಲೆಗೆ ಅಸಲಿ ಕಾರಣ ಬಯಲಿಗೆ

ಕೊಲೆ ಮಾಡಲು ಮಹಮ್ಮದ್ ಶಾ ನೊಂದಿಗೆ ಬಂದಿದ್ದ ಸದ್ದಾಂ, ಗೌಸ್, ಪರ್ವೇಜ್ ಸಮೀರ್ ನನ್ನು ಬಂಧಿಸಲಾಗಿದೆ. ಇನ್ನು ಮತ್ತೊಬ್ಬ ಆರೋಪಿ ಕೈಫ್ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಅಷ್ಟಕ್ಕೂ ಈ ಕೊಲೆ ನಡೆದಿದ್ದು ಮಹಮ್ಮದ್ ಶಾ ಹಾಗೂ ಫೈರೋಜ್ ಪಠಾಣ್ ನಡುವಿನ ವೈಯಕ್ತಿಕ ದ್ವೇಷ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಅದರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರವೂ ಈ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಶಾ ಹಿಂದಿನ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಕೊಲೆ ಮಾಡಿದ್ಧಾನೆ. ಈತನೊಂದಿಗೆ ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಭೀಕರವಾಗಿ ಹತ್ಯೆತಾಗಿದ್ದ ರೌಡಿ ಶೀಟರ್ ಫ್ರೂಟ್ ಇರ್ಫಾನ್ ಮಗ ಅರ್ಬಾಜ್ ಹಂಚಿನಮನಿ ಮತ್ತು ರೌಡಿ ಶೀಟರ್ ಮುಕ್ತುಂ ಸೊಗಲದ್ ಕೂಡ ಕೈ ಜೋಡಿಸಿದ್ದು, ಇದೀಗ ಎಲ್ಲರನ್ನೂ ವಿಚಾರಣೆಗೊಳಪಡಿಸಲಾಗಿದೆ.

ಇದನ್ನೂ ಓದಿ: ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್​ ಬರ್ಬರ ಹತ್ಯೆ!

ಹಂತಕರ ಸಂಚು ಹೇಗಿತ್ತು?

ಇನ್ನು ಕೆಲ ತಿಂಗಳ ಹಿಂದೆ ಫೈರೋಜ್ ಹಾಗೂ ಮಹಮ್ಮದ್ ಶಾ ನಡುವೆ ವೈಯಕ್ತಿಕ ವಿಚಾರವಾಗಿ ಜಗಳ ನಡೆದಿತ್ತು. ಆಗ ಫೈರೋಜ್ ಮಹಮ್ಮದ್ ಶಾ ಮನೆಗೆ ಕೆಲವರೊಂದಿಗೆ ಹೋಗಿ ಗಲಾಟೆ ಮಾಡಿ ಬಂದಿದ್ದ. ಅಲ್ಲದೇ ಅದನ್ನು ಪದೇ ಪದೇ ಬೇರೆಯವರ ಬಳಿ ಹೇಳಿ ತಮಾಷೆ ಮಾಡುತ್ತಿದ್ದ. ಇದು ಮಹಮ್ಮದ್ ಶಾನಿಗೆ ಸಿಟ್ಟು ತರಿಸಿತ್ತು. ಇದೇ ವೇಳೆ ರೌಡಿ ಶೀಟರ್ ಮುಕ್ತುಂ ಸೊಗಲದ್ ಹಾಗೂ ಫೈರೋಜ್ ನಡುವೆ ರಿಯಲ್ ಎಸ್ಟೇಟ್ ವಿಚಾರವಾಗಿ ಮನಸ್ತಾಪವಾಗಿತ್ತು. ಹೀಗೆ ಆತನಿಂದ ದೂರವಾದವರೆಲ್ಲ ಒಂದಾಗಿ ಈ ಕೊಲೆಯ ಸಂಚನ್ನು ರೂಪಿಸಿದ್ದರು. ಕೊಲೆ ಮಾಡೋ ದಿನ ಮಧ್ಯಾಹ್ನದವರೆಗೆ ಆರೋಪಿಗಳೆಲ್ಲರೂ ಸೇರಿ ಸಭೆ ನಡೆಸಿದ್ದು, ಏನೇ ಆಗಲಿ ಅವತ್ತೇ ಫೈರೋಜ್ ನನ್ನು ಮುಗಿಸಲೇಬೇಕು ಅಂದುಕೊಂಡಿದ್ದರು. ಅದಕ್ಕಾಗಿಯೇ ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಮಹಮ್ಮದ್ ಶಾ ಹಾಗೂ ಆತನ ಹುಡುಗರು, ಅದೇ ತಾನೇ ಮನೆಗೆ ಬಂದಿದ್ದ ಫೈರೋಜ್ ನ ಸುಳಿವನ್ನು ನೀಡಿದ್ದರು.

ಮನೆಗೆ ಹೊಕ್ಕು ಕೊಚ್ಚಿ ಕೊಂದರು

ಸಾಮಾನ್ಯವಾಗಿ ಫೈರೋಜ್ ತಡವಾಗಿ ಮನೆಗೆ ಬರುತ್ತಿದ್ದ. ಆದರೆ ಇದೇ ಏಪ್ರಿಲ್ 24 ಕ್ಕೆ ಮದುವೆ ನಿಶ್ಚಯವಾಗಿದ್ದರಿಂದ ಕೆಲ ದಿನಗಳಿಂದ ಮನೆಗೆ ಬೇಗ ಬರುತ್ತಿದ್ದ. ಅವತ್ತು ಕೂಡ ಅದೇ ಆಗಿದೆ. ಎಂದಿನಂತೆ ಸುಮಾರು 8 ಗಂಟೆ ಹೊತ್ತಿಗೆ ಮನೆಗೆ ಬಂದ ಫೈರೋಜ್ ಶೆಕೆ ಹೆಚ್ಚಾಗಿದೆ ಎಂದು ಹೊರಗಡೆ ಫೋನ್ ನಲ್ಲಿ ಮಾತಾಡುತ್ತಾ ಜೋಕಾಲಿಯಲ್ಲಿ ಕೂತಿದ್ದ. ಬಳಿಕ ಒಳಗಡೆ ಹೋಗುತ್ತಲೇ ಮನೆಗೆ ಬಂದ ಮಹಮ್ಮದ್ ಶಾ ಆತನನ್ನು ಕೂಗಿ ಕರೆದಿದ್ದು, ಬಳಿಕ ಗೇಟ್ ತೆರೆದು ಆತನ ಮನೆಯ ಮೆಟ್ಟಿಲುಗಳ ಮೇಲೆ ಕೂತಿದ್ದ. ಮತ್ತೆ ಫೋನ್ ನಲ್ಲಿ ಮಾತನಾಡುತ್ತಾ ಹೊರಗೆ ಬಂದ ಫೈರೋಜ್ ಗೇಟ್ ಬಳಿ ಬಂದು ನಿಂತಿದ್ದ. ಆಗ ಸ್ಥಳಕ್ಕೆ ಮತ್ತಿಬ್ಬರು ಯುವಕರು ಬಂದಿದ್ದರು. ಆದ್ರೆ, ಇತ್ತ ಏನೂ ಗೊತ್ತಿಲ್ಲದ ಫೈರೋಜ್ ಗೇಟ್ ಮುಂದೆ ಬಂದು ನಿಲ್ಲುತ್ತಿದ್ದಂತೆಯೇ ಮಹಮ್ಮದ್ ಶಾ, ಕಿಸೆಯಲ್ಲಿಟ್ಟುಕೊಂಡಿದ್ದ ಚಾಕುವನ್ನು ಹೊರ ತೆಗೆದು ಇರಿದಿದ್ದಾನೆ.ಆಗ ಎಚ್ಚೆತ್ತುಕೊಂಡ ಫೈರೋಜ್ ಒಳಗಡೆ ಓಡಿ ಹೋಗಿದ್ದ, ಆದರೂ ಬಿಡದ ಮಹಮ್ಮದ್ ಶಾ, ಹಿಂಬಾಲಿಸುತ್ತಿದ್ದಂತೆಯಾ ಹೊರಗಡೆ ನಿಂತಿದ್ದ ಮತ್ತೆ ಮೂವರು ಮನೆಯೊಳಗೆ ಹೋಗಿ ಫೈರೋಜ್ ನನ್ನು ಇರಿದು ಕೊಂದಿದ್ದದಾರೆ. ಬಳಿಕ ಫೈರೋಜ್ ನ ಮೊಬೈಲ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದರು.

ಹತ್ಯೆ ಬಳಿಕ ಕಾರಿನಲ್ಲಿ ಬೆಳಗಾವಿ ಜಿಲ್ಲೆ ಕಡೆಗೆ ಹೋಗುವಾಗ ಮೊಬೈಲ್ ನನ್ನು ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ಎಸೆದಿದ್ದಾರೆ. ಇನ್ನು ಫೈರೋಜ್ ಹಾಗೂ ಆತನ ಮಿತ್ರ ಅಬ್ದುಲ್ ದೇಸಾಯಿ ಕೆಲ ತಿಂಗಳ ಹಿಂದೆ ತಮಗೆ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಾಲಂಟರಿ ಪ್ರಾವಿಡೆಂಟ್ ಫಂಡ್; ನಿಮ್ಮ ಇಪಿಎಫ್ ಕಾರ್ಪಸ್ ಹೆಚ್ಚಿಸುವ ಒಂದು ಪ್ಲಾನ್

ಉದ್ಯೋಗಿಗಳ ನಿವೃತ್ತಿಗೆಂದು ರೂಪಿಸಲಾಗಿರುವ ಸ್ಕೀಮ್ ಇಪಿಎಫ್ (EPF) ಬಹಳ ಉತ್ತಮ ಬಡ್ಡಿ ಕೊಡಲಾಗುವ ಸ್ಕೀಮ್. ಫಿಕ್ಸೆಡ್ ಡೆಪಾಸಿಟ್​ಗಳಿಗಿಂತಲೂ ಹೆಚ್ಚಿನ ಬಡ್ಡಿ ಸಿಗುತ್ತದೆ. ಸದ್ಯ ಸರ್ಕಾರ ಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ವಾರ್ಷಿಕ ಶೇ. 8.2 ರಂತೆ ಬಡ್ಡಿ ತುಂಬುತ್ತದೆ. ನಿವೃತ್ತಿ ವಯಸ್ಸೆಂದು ಪರಿಗಣಿಸಲಾಗಿರುವ 58 ವರ್ಷ ವಯಸ್ಸು ಮುಟ್ಟಿದ ಬಳಿಕ ಇಪಿಎಫ್ ಹಣ ಲಂಪ್ಸಮ್ ಆಗಿ ದೊರಕುತ್ತದೆ.

ಉದ್ಯೋಗಿಯ ಮೂಲ ವೇತನ ಮತ್ತು ಭತ್ಯೆಯನ್ನು ಇಪಿಎಫ್ ಸ್ಯಾಲರಿ ಎಂದು ಪರಿಗಣಿಸಬಹುದು. ಇದರ ಶೇ. 12ರಷ್ಟನ್ನು ಸಂಬಳದಲ್ಲೇ ಮುರಿದುಕೊಳ್ಳಲಾಗುತ್ತದೆ. ಕಂಪನಿ ವತಿಯಿಂದ ಇಷ್ಟೇ ಕೊಡುಗೆ ನೀಡಲಾಗುತ್ತದೆ. ಆದರೆ, ಕಂಪನಿಯ ಶೇ. 12 ಕೊಡುಗೆಯಲ್ಲಿ ಇಪಿಎಫ್​ಗೆ ಶೇ. 3.67 ಮತ್ತು ಇಪಿಎಸ್​ಗೆ ಶೇ. 8.33 ಹಂಚಿಹೋಗುತ್ತದೆ. ಇಪಿಎಸ್ ಎಂಬುದು ಅಪ್ಪಟ ಪಿಂಚಣಿ ಸ್ಕೀಮ್. ಇದರಲ್ಲಿರುವ ಹಣವನ್ನು ವಿತ್​ಡ್ರಾ ಮಾಡಲು ಆಗುವುದಿಲ್ಲ. ಇದು ಪಿಂಚಣಿಗಾಗಿ ಮಾತ್ರ ಬಳಕೆ ಆಗುವುದು.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಒಂದು ಕೋಟಿ ರೂ ಹಣ ಪಡೆಯುವುದು ಹೇಗೆ? 61,000 ರೂ ಮಾಸಿಕ ಆದಾಯ ಪಡೆಯಲು ಹೀಗೆ ಮಾಡಿ

ಉದ್ಯೋಗಿಗಳ ಇಪಿಎಫ್ ಅಕೌಂಟ್​ಗೆ ಕಂಪನಿಗಳು ಇನ್ನೂ ಹೆಚ್ಚಿನ ಕೊಡುಗೆ ನೀಡಲು ಅವಕಾಶ ಇರುತ್ತದೆ. ಆದರೆ, ಹೆಚ್ಚಿನ ಕಂಪನಿಗಳು ತಮ್ಮ ಕೊಡುಗೆಯನ್ನು ಶೇ. 12ಕ್ಕೆ ಮಾತ್ರ ಸೀಮಿತಗೊಳಿಸುತ್ತವೆ. ಆದರೆ, ಇಪಿಎಫ್ ಮೊತ್ತ ಹೆಚ್ಚಿಸಲು ಉದ್ಯೋಗಿಗೆ ಇನ್ನೊಂದು ಮಾರ್ಗ ಇದೆ. ಅದು ವಿಪಿಎಫ್. ವಾಲಂಟರಿ ಪ್ರಾವಿಡೆಂಟ್ ಫಂಡ್.

ಉದ್ಯೋಗಿಗಳು ತಮ್ಮ ವೇತನದ ಶೇ. 12ಕ್ಕಿಂತ ಹೆಚ್ಚಿನ ಹಣವನ್ನು ಇಪಿಎಫ್ ಅಕೌಂಟ್​ಗೆ ನೀಡಲು ಬಯಸಿದರೆ ವಿಪಿಎಫ್ ಅನ್ನು ಬಳಸಬಹುದು. ಕಂಪನಿ ಅವಕಾಶ ಕೊಟ್ಟರೆ ಇದು ಸಾಧ್ಯ. ಇಪಿಎಫ್ ಅಕೌಂಟ್​ಗೆ ಸಿಗುವಷ್ಟೇ ಬಡ್ಡಿ ವಿಪಿಎಫ್​ಗೂ ಸಿಗುತ್ತದೆ. ಹೀಗಾಗಿ, ಉದ್ಯೋಗಿಗಳಿಗೆ ಇದೊಂದು ಉತ್ತಮ ಹೂಡಿಕೆ ಉಪಾಯವೆನಿಸುತ್ತದೆ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಒಂದು ಕೋಟಿ ರೂಗೂ ಅಧಿಕ ಇಪಿಎಫ್ ಕಾರ್ಪಸ್ ಸೃಷ್ಟಿಸಬೇಕಾ?

ನೀವು ನಿವೃತ್ತರಾದಾಗ ಇಪಿಎಫ್​ನ ಹಣ ಒಂದು ಕೋಟಿ ರೂ ದಾಟಬೇಕೆಂದಿದ್ದರೆ ಹೆಚ್ಚಿನ ವಿಪಿಎಫ್ ಕೊಡುಗೆ ಇರಬೇಕು. ತಿಂಗಳಿಗೆ 12,500 ರೂಗಳಷ್ಟು ವಿಪಿಎಫ್ ಕೊಡುಗೆ ಇದ್ದರೆ 23 ವರ್ಷದಲ್ಲಿ ಒಂದು ಕೋಟಿ ರೂ ಕಾರ್ಪಸ್ ನಿರ್ಮಾಣ ಆಗುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

LSG vs GT IPL 2026 Live Score: ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ – Kannada News | Lucknow Super Giants vs Gujarat Titans IPL 2026 Live Cricket Score LSG vs GT Match on 12th April latest news in Kannada

  • 12 Apr 2026 03:16 PM (IST)

    LSG vs GT IPL 2026: ಗುಜರಾತ್ ತಂಡ

    ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ, ಪ್ರಸಿದ್ಧ್ ಕೃಷ್ಣ

  • 12 Apr 2026 03:16 PM (IST)

    LSG vs GT IPL 2026: ಲಕ್ನೋ ತಂಡ

    ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಅವೇಶ್ ಖಾನ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್

  • 12 Apr 2026 03:13 PM (IST)

    LSG vs GT IPL 2026: ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

    ಐಪಿಎಲ್ 2026 ರ 19 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು.

  • Source link

    ಬುಡಕಟ್ಟು ವಿರೋಧಿ, ಮಹಿಳಾ ವಿರೋಧಿ, ಯುವ ವಿರೋಧಿ ಪಕ್ಷ: ಟಿಎಂಸಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಕೋಲ್ಕತ್ತಾ, ಏಪ್ರಿಲ್ 12: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಬುಡಕಟ್ಟು ವಿರೋಧಿ, ಮಹಿಳಾ ವಿರೋಧಿ, ಯುವ ವಿರೋಧಿ ಪಕ್ಷ ಎಂದು ಕರೆದಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ ಭಾಗದ ಸಿಲಿಗುರಿಯ ಕವಾಖಾಲಿ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಟಿಎಂಸಿ ತನ್ನ 15 ವರ್ಷಗಳ ಅವಧಿಯಲ್ಲಿ ಪಶ್ಚಿಮ ಬಂಗಾಳವನ್ನು ನಾಶಮಾಡಿದೆ ಎಂದು ಪ್ರತಿಪಾದಿಸಿದರು ಮತ್ತು ಮದರಸಾಗಳಿಗೆ 6,000 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಕ್ಕಾಗಿ ಪಕ್ಷವನ್ನು ಟೀಕಿಸಿದರು. ಆದರೆ ಇಡೀ ಉತ್ತರ ಬಂಗಾಳಕ್ಕೆ ಸಾಕಷ್ಟು ಹಣವಿಲ್ಲ. ಟಿಎಂಸಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನವನ್ನು ನಿಲ್ಲಿಸಿದೆ, ಶೇಕಡಾ 25 ಕ್ಕಿಂತ ಕಡಿಮೆ ಕೆಲಸ ಪೂರ್ಣಗೊಂಡಿದೆ ಎಂದು ಮೋದಿ ಹೇಳಿದರು.

    ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ, ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೆ ಬಂಗಾಳವು ಎರಡು ಪಟ್ಟು ವೇಗದಲ್ಲಿ ಅಭಿವೃದ್ಧಿಯನ್ನು ಕಾಣಲಿದೆ ಎಂದು ಮೋದಿ ಹೇಳಿದರು. ಬಂಗಾಳದ ಜನರಲ್ಲಿ ತಾನು ನೋಡುತ್ತಿರುವ ಶಕ್ತಿಯು ಮುಂಬರುವ ಚುನಾವಣೆಯಲ್ಲಿ ಟಿಎಂಸಿಯ ಸೋಲು ಖಚಿತ ಎಂದು ಮನವರಿಕೆ ಮಾಡಿಕೊಟ್ಟಿದೆ ಎಂದು ಮೋದಿ ಹೇಳಿದರು.

     

    ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

    Source link

    ಪತ್ನಿಯನ್ನ ನೋಡಿ ಬೊಗಳಿದ್ದಕ್ಕೆ ಸ್ಕೂಬಿ ಮೇಲೆ ಕ್ರೌರ್ಯ ಮೆರೆದ ಪತಿ: ಪೊಲೀಸ್ ಮೆಟ್ಟಿಲೇರಿದ ನಾಯಿ ಗಲಾಟೆ

    ಬೆಂಗಳೂರು, (ಏಪ್ರಿಲ್ 12): ಪಕ್ಕದ ಮನೆಯ ಸಾಕು ನಾಯಿ ಸ್ಕೂಬಿ ತನ್ನ ಹೆಂಡ್ತಿಯನ್ನು ನೋಡಿ ಬೊಗಳಿದಕ್ಕೆ ಆಕ್ರೋಶಗೊಂಡ ಪತಿ ಕ್ರೌರ್ಯ ಮೆರೆದಿದ್ದಾನೆ. ತನ್ನ ಪತ್ನಿಯನ್ನು ನೋಡಿ ಬೊಗಳಿದ್ದಕ್ಕೆ ವ್ಯಕ್ತಿಯೋರ್ವ ಪಕ್ಕದ ಮನೆಯ ಸ್ಕೂಬಿ ನಾಯಿಗೆ ಕಟ್ಟಿಗೆಯಿಂದ ಹೊಡೆದು ಸಾಯಿಸಲು ಯತ್ನಿಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅವರೆಹಳ್ಳಿಯಲ್ಲಿ ನಡೆದಿದೆ. ಆಂಜಿನಪ್ಪ‌ ಎಂಬುವವರಿಗೆ ಸೇರಿದ ಸಾಕು ನಾಯಿ ಸ್ಕೂಬಿ, ನಿನ್ನೆ (ಏಪ್ರಿಲ್ 11) ಸಂಜೆ ಪಕ್ಕದ ಮನೆಯ ಮಹಿಳೆಯನ್ನು ನೋಡಿ ಬೊಗಳಿದೆ. ಇದರಿಂದ ಕೋಪಗೊಂಡಿದ್ದ ಪತಿ ಗೋಪಿ, ರಾತ್ರಿ ಆಂಜಿನಪ್ಪ ಮನೆಗೆ ತೆರಳಿ ಗೇಟಿನಲ್ಲಿ ಕಟ್ಟಿದ್ದ ಸ್ಕೂಬಿ ನಾಯಿಗೆ ಕಟ್ಟಿಗೆಯಿಂದ ಮನಬಂದಂತೆ ಹೊಡೆದು ಕ್ರೌರ್ಯ ಮೆರೆದಿದ್ದಾನೆ. ಗೋಪಿಯ ಹೊಡೆತಕ್ಕೆ ಸ್ಕೂಬಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೂಡಲೇ ಮಾಲೀಕ ಅಂಜಿನಪ್ಪ ಸ್ಕೂಬಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಸದ್ಯ ನಾಯಿ ಪ್ರಾಣಾಪಾಯದಿಂದ ಪಾರಾಗಿದೆ. ನಾಯಿ‌ಗೆ ಹೊಡೆದ ದೃಶ್ಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    Personality Test: ಮುಂಗೋಪಿ, ಹಠಮಾರಿ; ಜನ್ಮ ದಿನಾಂಕವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ

    ಸಾಮಾನ್ಯವಾಗಿ ನಮ್ಮ ಭವಿಷ್ಯದ   ತಿಳಿದುಕೊಳ್ಳಲು, ವ್ಯಕ್ತಿತ್ವದ ರಹಸ್ಯದ (secret personality)  ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಗಿಣಿ ಶಾಸ್ತ್ರ ಇತ್ಯಾದಿಗಳನ್ನು ಅವಲಂಬಿಸುತ್ತಾರೆ. ಇದಲ್ಲದೆ ಆಪ್ಟಿಕಲ್‌ ಇಲ್ಯೂಷನ್‌  ಪರ್ಸನಾಲಿಟಿ ಟೆಸ್ಟ್‌, ಪಾದದ ಆಕಾರ, ಕೈ ಬೆರಳುಗಳ ಆಕಾರ, ನೆಚ್ಚಿನ ಬಣ್ಣ, ನೆಚ್ಚಿನ ಪ್ರಾಣಿ ಇತ್ಯಾದಿಗಳ ಮೂಲಕವು ನಮ್ಮ ನಿಗೂಢ ವ್ಯಕ್ತಿತ್ವದ ರಹಸ್ಯಗಳನ್ನು ನಾವೇ ತಿಳಿದುಕೊಳ್ಳಬಹುದು. ಇದಲ್ಲದೆ ಹುಟ್ಟಿದ ದಿನಾಂಕ ಕೂಡ ನಮ್ಮ ವ್ಯಕ್ತಿತ್ವದ ರಹಸ್ಯವನ್ನು ಬಹಿರಂಗಪಡಿಸುತ್ತದೆ.  ನೀವು ಹೃದಯವಂತರೇ, ಕೋಪಿಷ್ಠರೇ ಎಂಬುದನ್ನು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ತಿಳಿದುಕೊಳ್ಳಿ.

    ಹುಟ್ಟಿದ ದಿನಾಂಕವೂ ಬಹಿರಂಗಪಡಿಸುತ್ತದೆ ವ್ಯಕ್ತಿತ್ವದ ರಹಸ್ಯ:

     ಸಂಖ್ಯೆ 1: ನೀವು ಯಾವುದೇ ತಿಂಗಳ 1, 10, 19, 28 ರಂದು ಜನಿಸಿದರೆ, ನೀವು ನಿಮ್ಮ ನಿಯಮಗಳ ಪ್ರಕಾರ ಬದುಕುವವರು ಎಂದರ್ಥ. ನಾಯಕತ್ವ ಗುಣವನ್ನು ಹೊಂದಿರುವ ನೀವು ಪ್ರಾಬಲ್ಯ ಮತ್ತು ದೃಢನಿಶ್ಚಯದಿಂದ ಇರುತ್ತೀರಿ. ನೀವು ಸಾಮಾನ್ಯವಾಗಿ ಸಂಯಮದಿಂದ ಇರುತ್ತೀರಿ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪ್ರಾಯೋಗಿಕ ವಿಧಾನವನ್ನು ಕಾಪಾಡಿಕೊಳ್ಳಲು ನೀವು ಇಷ್ಟಪಡುತ್ತೀರಿ. ನೀವು ವಿಷಯಗಳನ್ನು ಸ್ಪಷ್ಟವಾಗಿ ಮತ್ತು ಪಾರದರ್ಶಕವಾಗಿಡಲು ಇಷ್ಟಪಡುತ್ತೀರಿ. ನಿಮ್ಮ ಮನಸ್ಸಿನಲ್ಲಿರುವುದನ್ನು ನೀವು ನಿಖರವಾಗಿ ಮಾತನಾಡುತ್ತೀರಿ. ಏನು ಹೇಳಬೇಕು ಮತ್ತು ಯಾವಾಗ ಹೇಳಬೇಕೆಂದು ನಿಮಗೆ ಯಾವಾಗಲೂ ತಿಳಿದಿರುತ್ತದೆ.

    ಸಂಖ್ಯೆ 2: ನೀವು ಯಾವುದೇ ತಿಂಗಳ 2, 11, 20, 29 ರಂದು ಜನಿಸಿದರೆ, ನಿಮ್ಮ ವ್ಯಕ್ತಿತ್ವದ ಲಕ್ಷಣಗಳು ನೀವು ಭಾವನಾತ್ಮಕರು ಎಂದು ಬಹಿರಂಗಪಡಿಸುತ್ತವೆ. ನೀವು  ಎಲ್ಲರನ್ನೂ ಬಹು ಬೇಗನೆ ನಂಬುತ್ತೀರಿ. ನೀವು ಪ್ರಾಯೋಗಿಕ ಸಂಗತಿಗಳಿಗಿಂತ ಭಾವನೆಗಳಿಗೆ ಹೆಚ್ಚು ಬೆಲೆ ನೀಡುತ್ತೀರಿ. ಭಾವನೆಗಳಿಗೆ ಬೆಲೆ ನೀಡಿದರೂ ನಿಮಗೆ ಅಷ್ಟಾಗಿ ಭಾವನೆಗಳನ್ನು ವ್ಯಕ್ತಪಡಿಸಲು ಗೊತ್ತಿಲ್ಲ. ಅಲ್ಲದೆ ನೀವು ಜನರು ಶುದ್ಧ ಮತ್ತು ಸೌಮ್ಯ ಹೃದಯದವರು ಹೌದು.  ನೀವು ಶಾಂತಿಯನ್ನು ಪ್ರೀತಿಸುತ್ತೀರಿ ಮತ್ತು ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತೀರಿ.

     ಸಂಖ್ಯೆ 3: ನೀವು ಯಾವುದೇ ತಿಂಗಳ 3, 12, 21, 30 ರಂದು ಜನಿಸಿದರೆ, ನೀವು ಆಧ್ಯಾತ್ಮಕ ವ್ಯಕ್ತಿಯೆಂದು ಅರ್ಥ. ನೀವು ಸಾಮಾನ್ಯವಾಗಿ ಬುದ್ಧಿವಂತಿಕೆಯಿಂದ ಮಾತನಾಡಲು ಇಷ್ಟಪಡುತ್ತೀರಿ. ನೀವು ಉತ್ತಮ ಸಲಹೆಗಾರರು ಹೌದು. ನೀವು ಜ್ಞಾನವನ್ನು ಸಂಗ್ರಹಿಸಲು ಮತ್ತು ನಿಮ್ಮ ಜೀವನವನ್ನು ಪ್ರಾಯೋಗಿಕ ರೀತಿಯಲ್ಲಿ ಯೋಜಿಸಲು ಇಷ್ಟಪಡುತ್ತೀರಿ. ನೀವು ಹಣಕಾಸಿನ ವಿಷಯದಲ್ಲೂ ಉತ್ತಮರು. ನೀವು ಬಹಳಷ್ಟು ಹೂಡಿಕೆ ಮಾಡಲು ಇಷ್ಟಪಡಬಹುದು. ನೀವು ಷೇರು ವಿನಿಮಯ, ಹಣ ನಿರ್ವಹಣೆ ಇತ್ಯಾದಿ ವಿಷಯಗಳಲ್ಲಿ ತುಂಬಾ ನಿಪುಣರು.

    ಸಂಖ್ಯೆ 4: ನೀವು ಯಾವುದೇ ತಿಂಗಳ 4, 13, 22, 31 ರಂದು ಜನಿಸಿದರೆ, ನೀವು ತುಂಬಾನೇ ಬುದ್ಧಿವಂತರು ಮತ್ತು ಚುರುಕು ಸ್ವಭಾವದವರಾಗಿರುತ್ತೀರಿ. ಜೊತೆಗೆ ನೀವು ಸಾಹಸಮಯ ವ್ಯಕ್ತಿತ್ವದವರೂ ಹೌದು. ನೀವು ಶಕ್ತಿಯುತವಾಗಿರಲು ಮತ್ತು ಜೀವನವನ್ನು ವೇಗವಾಗಿ ನಡೆಸಲು ಇಷ್ಟಪಡುತ್ತೀರಿ. ನೀವು ಹೆಚ್ಚು ಕಾಲ ಸುಮ್ಮನೆ ಕೂರುವುದೇ ಇಲ್ಲ, ಯಾವಾಗಲೂ ಆಕ್ಟಿವ್‌ ಆಗಿರುತ್ತೀರಿ. ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ಪರಿಹರಿಸುವ ಕೌಶಲ್ಯವೂ ನಿಮ್ಮಲ್ಲಿದೆ.  ಅಲ್ಲದೆ ನೀವು ಗಣಿತ, ಭೌತಶಾಸ್ತ್ರ ಮುಂತಾದ ಲೆಕ್ಕಾಚಾರಗಳು ಮತ್ತು ವಿಷಯಗಳಲ್ಲಿಯೂ ಉತ್ತಮರು.

    ಸಂಖ್ಯೆ 5: ನೀವು ಯಾವುದೇ ತಿಂಗಳ 5, 14, 23 ರಂದು ಜನಿಸಿದರೆ, ನೀವು ಶಾಂತ, ಸಂತೋಷದಾಯಕ ಮತ್ತು ಪ್ರಾಯೋಗಿಕ ಮತ್ತು ಭಾವನಾತ್ಮಕ ಮಿಶ್ರಣದ ವ್ಯಕ್ತಿ ಎಂದರ್ಥ. ನೀವು ಪೂರ್ಣವಾಗಿ ಜೀವನವನ್ನು ಇಷ್ಟಪಡುತ್ತೀರಿ. ನೀವು ಯಾವುದೇ ನಿರ್ಬಂಧಗಳಿಲ್ಲದೆ ಜೀವನವನ್ನು ಸಂತೋಷದಿಂದ ಸಾಗಿಸಲು ಇಷ್ಟಪಡುತ್ತೀರಿ. ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ನೀವು ನಿಸ್ಸೀಮರು. ನೀವು ಎಲ್ಲರ ಮುಂದೆಯೂ ಕೇಂದ್ರಬಿಂದುವಾಗಿರಲು ಇಷ್ಟಪಡುತ್ತೀರಿ. ನೀವು ಹೊಸ ವಿಷಯಗಳನ್ನು ಕಲಿಯಲು ಮತ್ತು ಪ್ರಯಾಣಿಸಲು ಇಷ್ಟಪಡುತ್ತೀರಿ.

    ಸಂಖ್ಯೆ 6: ನೀವು ಯಾವುದೇ ತಿಂಗಳ 6, 15, 24 ರಂದು ಜನಿಸಿದರೆ,  ನೀವು ಐಷಾರಾಮಿ ಜೀವ ಮತ್ತು ಐಷಾರಾಮಿ ವಸ್ತುಗಳನ್ನು ಇಷ್ಟಪಡುವವರು ಎಂದರ್ಥ. ನೀವು ಹೆಚ್ಚಾಗಿ ಅತ್ಯಂತ ದುಬಾರಿ ಬಟ್ಟೆ, ಬ್ಯಾಗ್‌ಳು, ಕಾರುಗಳು ಇತ್ಯಾದಿಗಳನ್ನು ಇಷ್ಟಪಡುತ್ತೀರಿ. ನೀವು ಜನರೊಂದಿಗೆ ಸಂಪರ್ಕ ಸಾಧಿಸುವಲ್ಲಿಯೂ ಸಹ ತುಂಬಾ ಒಳ್ಳೆಯವರು. ನೀವು ಪ್ರಯಾಣಿಸಲು ಇಷ್ಟಪಡುತ್ತೀರಿ. ನಿಮಗೆ ಶಿಸ್ತಿನ ಕೊರತೆ ಇರುವುದರಿಂದ ನೀವು ಸಾಮಾನ್ಯವಾಗಿ ನಾಯಕತ್ವದ ಸ್ಥಾನದಲ್ಲಿರಲು  ಉತ್ತಮರಲ್ಲ. ಅಲ್ಲದೆ ನೀವು ಬಹಳಷ್ಟು ದುಂದು ವೆಚ್ಚವನ್ನೂ ಮಾಡುತ್ತೀರಿ.

    ಇದನ್ನೂ ಓದಿ: ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ

    ಸಂಖ್ಯೆ 7: ನೀವು ಯಾವುದೇ ತಿಂಗಳ 7, 16, 25 ರಂದು ಜನಿಸಿದರೆ, ನೀವು ರಹಸ್ಯ, ಆಧ್ಯಾತ್ಮಿಕ ಮತ್ತು ವೈಯಕ್ತಿಕವಾಗಿ ಯಾರೊಂದಿಗೂ ಅಷ್ಟಾಗಿ ತೆರೆದುಕೊಳ್ಳದ ವ್ಯಕ್ತಿಯೆಂದು ಅರ್ಥ. ನೀವು ನಿಮ್ಮ ಕುಟುಂಬದ ಸುತ್ತಲೂ ಇರಲು ತುಂಬಾ ಇಷ್ಟಪಡುತ್ತೀರಿ. ಸಂಶೋಧನೆ, ಡೇಟಾ ಸೈನ್ಸ್ ಇತ್ಯಾದಿ ಕೆಲಸಗಳನ್ನು ನೀವು ಆನಂದಿಸುತ್ತೀರಿ. ನೀವು ಯಾವಾಗಲೂ ಆಸಕ್ತಿದಾಯಕವಾದ ಸಂಗತಿಗಳನ್ನು ಹುಡುಕುತ್ತಿರುತ್ತೀರಿ. ನಿಮ್ಮ ಶಾಂತ, ವಿದ್ವಾಂಸ ಮನಸ್ಸು ಮತ್ತು ದೂರದೃಷ್ಟಿಯ ನಿಮ್ಮನ್ನು ಉನ್ನತ ಸ್ಥಾನದತ್ತ ತಲುಪಲು ಸಹಾಯ ಮಾಡುತ್ತದೆ.

    ಸಂಖ್ಯೆ 8: ನೀವು ಯಾವುದೇ ತಿಂಗಳ 8, 17, 26 ರಂದು ಜನಿಸಿದರೆ, ನೀವು  ಉತ್ತಮ ನಿರ್ಧಾರ ತೆಗೆದುಕೊಳ್ಳುವವರು ಎಂದರ್ಥ. ನೀವು ಕಠಿಣ ಪರಿಶ್ರಮವನ್ನು ನಂಬುವಿರಿ. ನೀವು ಅತ್ಯಂತ ಪ್ರಾಯೋಗಿಕರು ಹೌದು.  ನೀವು ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ.  ನೀವು ಅನಗತ್ಯ ಪ್ರದರ್ಶನವನ್ನು ನಂಬುವುದಿಲ್ಲ, ನಿಮ್ಮ ಕಠಿಣ ಪರಿಶ್ರಮವನ್ನು ಅವಲಂಬಿಸುತ್ತೀರಿ. ನೀವು ಸ್ವಲ್ಪ ಕಠಿಣವಾಗಿ ಕಂಡರೂ, ನೀವು ವಿಶ್ವಾಸಾರ್ಹ ವ್ಯಕ್ತಿಗಳು. ನಿಮಗೆ ಯಶಸ್ಸು ಸ್ವಲ್ಪ ತಡವಾಗಿ ಬಂದರೂ ಅದು ಶಾಶ್ವತವಾಗಿರುತ್ತದೆ.

    ಸಂಖ್ಯೆ 9: ನೀವು ಯಾವುದೇ ತಿಂಗಳ 9, 18, 27 ರಂದು ಜನಿಸಿದರೆ, ನೀವು ಶಕ್ತಿಯುತರು ಎಂದರ್ಥ.  ನೀವು ಸವಾಲುಗಳನ್ನು ಎದುರಿಸಲು ಹೆದರುವುದಿಲ್ಲ. ನೀವು ಮುಂಗೋಪಿಗಳಾಗಿರಬಹುದು, ಆದರೆ ನೀವು ಅನ್ಯಾಯವನ್ನು ಎಂದಿಗೂ  ಸಹಿಸುವುದಿಲ್ಲ. ನಿಮ್ಮ ಪ್ರೀತಿಪಾತ್ರರಿಗಾಗಿ, ಅವರ ರಕ್ಷಣೆಗಾಗಿ ಯಾವ ಮಟ್ಟಕ್ಕೆ ಬೇಕಾದರೂ  ಹೋಗುತ್ತೀರಿ. ಅಲ್ಲದೆ ನೀವು ಜನರನ್ನು ನಿಮ್ಮತ್ತ ಆಕರ್ಷಿಸುವ ವಿಶಿಷ್ಟ ವ್ಯಕ್ತಿತ್ವವವನ್ನು ಹೊಂದಿದ್ದೀರಿ.

    ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link