Headlines

nagaraj11081993

ಮೊದಲ ಪತ್ನಿ ಗರ್ಭಿಣಿಯಾದಾಗಲೇ ಮತ್ತೊಬ್ಬಳ ಜತೆ ನಿಶ್ಚಿತಾರ್ಥ! ಏಟು ಬಿದ್ದರೂ ಮತ್ತೆ ಮದುವೆಯಾದ ಎಂಜಿನಿಯರ್ ಕಥೆ ಏನಾಯ್ತು ಗೊತ್ತೇ?

ಆನೇಕಲ್, ಏಪ್ರಿಲ್ 13: ಮದುವೆಯನ್ನೇ ಒಂದು ವ್ಯವಹಾರ ಮಾಡಿಕೊಂಡಿದ್ದ ಕಾಮುಕ ಇಂಜಿನಿಯರ್ ಒಬ್ಬನ ಸರಣಿ ವಂಚನೆಗಳು ಬಯಲಾಗಿವೆ. ಇಬ್ಬರು ಯುವತಿಯರನ್ನು ಮದುವೆಯಾಗಿ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಮಾಯಕ ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡುತ್ತಿದ್ದ ರವಿ ಎಂಬಾತನ ವಿರುದ್ಧ ಈಗ ಜಿಗಣಿ (Jigani) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆಯ ಜಾಲ ಆರಂಭವಾಗಿದ್ದು ಹೇಗೆ? ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ, ಜಿಗಣಿ ಬಳಿಯ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. 2024ರ ಜನವರಿಯಲ್ಲಿ ಈತ ಯುವತಿಯೊಬ್ಬಳನ್ನು…

Read More

ಬೈಕ್​​ ತಪ್ಪಿಸಲು ಹೋಗಿ ಶಿಕಾರಿಪುರದಲ್ಲಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

ಶಿವಮೊಗ್ಗ, ಏಪ್ರಿಲ್​​ 13: ಎದುರಿಗೆ ತೆರಳುತ್ತಿದ್ದ ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕುಮದ್ವತಿ ಕಾಲೇಜು ಮುಂಭಾಗ ನಡೆದಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ವಿದ್ಯುತ್​​ ಕಂಬಕ್ಕೆ ಗುದ್ದಿ ಬಸ್​​ ಪಲ್ಟಿಯಾಗಿದ್ದು, ಹಂಪ್​​ ತಪ್ಪಿಸಲು ಯತ್ನಿಸಿದ ಬೈಕ್​​ ಸವಾರ ಎಡ ಮತ್ತು ಬಲ ಎರಡೂ ಕಡೆ ಒಂದೇ ಸಮನೆ ಬಂದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮತ್ತಷ್ಟು ವಿಡಿಯೋ ನೋಡಲು…

Read More

ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಹೊಟ್ಟೆಯಲ್ಲಿದ್ದ ಮಗು ಸಾವು!

ಬೆಳಗಾವಿ, ಏಪ್ರಿಲ್ 13: ಜಿಲ್ಲೆಯಲ್ಲಿ ಬಿಮ್ಸ್ ವೈದ್ಯರ ನಿರ್ಲಕ್ಷ್ಯ ಆರೋಪದ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ತುರಮರಿ ಗ್ರಾಮದ ಗರ್ಭಿಣಿಯಾದ ಈರಮ್ಮ ಈರಪ್ಪ ಶಿಗೀಹಳ್ಳಿ (21) ಅವರನ್ನು ಏಪ್ರಿಲ್ 10ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸರಿಯಾದ ಚಿಕಿತ್ಸೆ ನೀಡದ ಕಾರಣ ಈರಮ್ಮ ಹಾಗೂ ಹೊಟ್ಟೆಯಲ್ಲಿದ್ದ ಶಿಶು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಾವಿನ ಬಳಿಕ ಮಧ್ಯರಾತ್ರಿ ಸಹಿ ಪಡೆದು ದೇಹವನ್ನು ಕಳುಹಿಸಲು ಯತ್ನಿಸಿದ್ದಾಗಿ ತಿಳಿದುಬಂದಿದೆ. ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ…

Read More

Viral: 10 ಕೋಟಿ ರೂ ದುಡ್ಡಿದ್ರೂ ಭಾರತ ತೊರೆಯಲು ಮುಂದಾದ ವ್ಯಕ್ತಿ, ಕಾರಣ ಇದೇ ನೋಡಿ

ಭಾರತೀಯ (Indian) ಯುವಕ ಯುವತಿಯರು ಓದು ಮುಗಿಯುತ್ತಿದ್ದಂತೆ ವಿದೇಶಕ್ಕೆ (foreign) ತೆರಳುತ್ತಾರೆ, ಅಲ್ಲೇ ಸೆಟ್ಲ್ ಆಗ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಭಾರತ ಬಿಡಲು ಮುಂದಾಗಿದ್ದಾರೆ. 10 ಕೋಟಿ ರೂ ಉಳಿತಾಯ ಹೊಂದಿರುವ ವ್ಯಕ್ತಿಯೂ, ಭಾರತದ ಬಗೆಗಿನ ನನ್ನ ನಿಷ್ಠೆ ಮಿತಿಯನ್ನು ಮೀರಿದೆ ಎಂದು ಹೇಳಿದ್ದಾರೆ. ಈ ಕುರಿತಾದ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಅನಾಮಧೇಯ ಕೆಲಸದ ವೇದಿಕೆ ಬ್ಲೈಂಡ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ವ್ಯಕ್ತಿಯೊಬ್ಬರು 10 ಕೋಟಿ ಉಳಿಸಲಾಗಿದೆ ಮತ್ತು ನಾನು ಭಾರತ ಎಂಬ…

Read More

ಇದು ನಿಜವಾದ ‘ಸ್ಪಷ್ಟತೆ’… ಗೆಲುವಿನ ಬಳಿಕ ರಜತ್ ಪಾಟಿದಾರ್ ಹೇಳಿದ್ದೇನು?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ 50 ರನ್ ಬಾರಿಸಿದರೆ, ಫಿಲ್ ಸಾಲ್ಟ್ 78 ರನ್ ಸಿಡಿಸಿದರು. ಇನ್ನು ರಜತ್ ಪಾಟಿದಾರ್ 53 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಆರ್​ಸಿಬಿ…

Read More

ನಾರಿ ಶಕ್ತಿ ವಂದನ ಸಮ್ಮೇಳನ, ಪ್ರಧಾನಿ ಮೋದಿ ಭಾಷಣದ ನೇರ ಪ್ರಸಾರ

ನವದೆಹಲಿ, ಏಪ್ರಿಲ್ 13:ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಕೇವಲ ಪಾಲುದಾರರಲ್ಲ, ಬದಲಾಗಿ ಅವರು ನಿರ್ಧಾರ ಕೈಗೊಳ್ಳುವ ನಾಯಕಿಯರಾಗಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಾರಿ ಶಕ್ತಿ ವಂದನ ಸಮ್ಮೇಳನದಲ್ಲಿ ಮಾತನಾಡಿದ್ದಾರೆ. 2023ರ ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಲಾದ ‘ನಾರಿ ಶಕ್ತಿ ವಂದನ ಕಾಯ್ದೆ’ ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಕ್ರಾಂತಿಕಾರಿ ಬದಲಾವಣೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು (ಮೂರನೇ ಒಂದು ಭಾಗ) ಮೀಸಲಾತಿ ನೀಡುವ ಈ ಕಾಯ್ದೆಯು ಈಗ ಅನುಷ್ಠಾನದ ಹಂತಕ್ಕೆ ಬಂದಿದೆ….

Read More

ಎರಡು ಬೆಕ್ಕುಗಳ ಮಿಲನ, ನಾಲ್ಕು ಮರಿ ಜನನ: ಮಾಲೀಕರ ಕಿತ್ತಾಟ ಜೋರಾದ ಬೆನ್ನಲ್ಲೇ ಪೊಲೀಸ್ ಎಂಟ್ರಿ!

ಬೆಂಗಳೂರು, ಏಪ್ರಿಲ್ 13: ಅಕ್ಕಪಕ್ಕದ ಮನೆಗಳ ನಡುವೆ ಬೆಕ್ಕುಗಳ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಶೇಷಾದ್ರಿಪುರದಲ್ಲಿ (Bengaluru) ನಡೆದಿದೆ. ಒಂದು ಮನೆಯ ಹೆಣ್ಣು ಬೆಕ್ಕು ಹಾಗೂ ಪಕ್ಕದ ಮನೆಯ ಗಂಡು ಬೆಕ್ಕಿನ ನಡುವಿನ ಸಂಪರ್ಕದಿಂದ ನಾಲ್ಕು ಮರಿಗಳು ಜನಿಸಿದ್ದು, ಈ ವಿಚಾರವೇ ಎರಡು ಕುಟುಂಬಗಳ ನಡುವೆ ವಿವಾದಕ್ಕೆ ಕಾರಣವಾಗಿದೆ. ಅತಿರೇಕಕ್ಕೆ ತಿರುಗಿದ ಗಲಾಟೆ ತಮ್ಮ ಮನೆಯ ಹೆಣ್ಣು ಬೆಕ್ಕಿನ ಜೊತೆ ನಾಲ್ಕು ಮರಿಗಳೂ ಮನೆಗೆ ಸೇರಿರುವುದನ್ನು ಕಂಡ ಮಾಲೀಕರು ಪಕ್ಕದ…

Read More

ಚನ್ನಗಿರಿ: ಬಿಯರ್ ಬಾಕ್ಸ್ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!

ದಾವಣಗೆರೆ, ಏಪ್ರಿಲ್ 13: ಹಾಸನದಿಂದ ಚಿಕ್ಕೋಡಿಗೆ ‘ಪವರ್ ಕೂಲ್’ ಬಿಯರ್ ಟಿನ್ ಬಾಕ್ಸ್‌ಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಬಳಿ ನಡೆದಿದೆ. ರಾಜ್ಯ ಹೆದ್ದಾರಿಯ ಪಕ್ಕದಲ್ಲಿದ್ದ ಸೇತುವೆಗೆ ಡಿಕ್ಕಿ ಹೊಡೆದ ಲಾರಿ, ಪಕ್ಕದ ಅಡಿಕೆ ತೋಟಕ್ಕೆ ಉರುಳಿ ಬಿದ್ದಿದೆ. ಅಪಘಾತದ ಭೀಕರತೆಗೆ ಲಾರಿಯಲ್ಲಿದ್ದ ಸಾವಿರಾರು ಬಿಯರ್ ಟಿನ್‌ಗಳು ತೋಟದಾದ್ಯಂತ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿದ್ದ…

Read More

ಬಾಯ್​ಫ್ರೆಂಡ್ನ ಮದುವೆಯಾಗಲು ಹೆತ್ತವರಿಗೆ ವಿಷ ಉಣಿಸಿದ ಅಪ್ರಾಪ್ತ ಮಗಳು

ಮರೆನಾ, ಏಪ್ರಿಲ್ 13: ಅಪ್ರಾಪ್ತ ಬಾಲಕಿಯೊಬ್ಬಳು ಬಾಯ್​ಫ್ರೆಂಡ್​ನನ್ನು ಮದುವೆಯಾಗಲು ತನ್ನ ಹೆತ್ತವರಿಗೆ ವಿಷ(Poison) ಉಣಿಸಿರುವ ಘಟನೆ ಮಧ್ಯಪ್ರದೇಶದ ಮರೆನಾದಲ್ಲಿ ನಡೆದಿದೆ. ಮನುಷ್ಯತ್ವಕ್ಕೇ ಕಪ್ಪುಚುಕ್ಕಿ ಇಡುವಂತಹ ಘಟನೆಯೊಂದು ನಡೆದಿದೆ. ಪ್ರೀತಿಯ ಅಮಲಿನಲ್ಲಿ ಕುರುಡಾದ ಮಗಳೊಬ್ಬಳು, ಹೆತ್ತವರನ್ನೇ ಮುಗಿಸಲು ಸಂಚು ರೂಪಿಸಿದ ಕರಾಳ ಕಥೆ ಇಲ್ಲಿದೆ. ಹೆತ್ತವರು ಮಗಳ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ, ಚಪಾತಿಯಲ್ಲಿ ಇಲಿ ಪಾಷಾಣ ಬೆರೆಸಿ ಪೋಷಕರಿಗೆ ನೀಡಿರುವ ಘಟನೆ ಬೆಳಕಿಗೆ . ಮೊರೆನಾ ಜಿಲ್ಲೆಯ ಪೋರ್ಸಾ ಎಂಬಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಗೆಳೆಯನ ಜೊತೆ…

Read More

‘ಅಕ್ಷಯ್ ಕುಮಾರ್ ನನ್ನ ಹಾಗೂ ಪ್ರಿಯಾಂಕಾನ ಅಣ್ಣನಂತೆ ರಕ್ಷಿಸಿದ್ರು ’

ನಟ ಅಕ್ಷಯ್ ಕುಮಾರ್ ಅವರು ಇಂದು ಸ್ಟಾರ್ ಹೀರೋ. ಅವರಿಗೆ ಭಾರತದಲ್ಲಿ ಮಾತ್ರವಲ್ಲದೆ ಭಾರತದ ಹೊರಗೆಯೂ ತುಂಬಾ ದೊಡ್ಡ ಅಭಿಮಾನಿ ಬಳಗ ಇದೆ. 2003ರ ವರ್ಷ ನಟನಿಗೆ ಮಾತ್ರವಲ್ಲದೆ ಚಿತ್ರರಂಗಕ್ಕೂ ಬಹಳ ವಿಶೇಷವಾಗಿತ್ತು. ಏಕೆಂದರೆ ಈ ವರ್ಷ, ನಟಿಯರಾದ ಲಾರಾ ದತ್ ಮತ್ತು ಪ್ರಿಯಾಂಕಾ ಚೋಪ್ರಾ ‘ಅಂದಾಜ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಲಾರಾ ಅವರು ಅಕ್ಷಯ್ ಕುಮಾರ್ ಬಗ್ಗೆ ಮಾತನಾಡಿದ್ದಾರೆ. ‘ಪ್ರಿಯಾಂಕಾ ಮತ್ತು ನಾನು ಒಟ್ಟಿಗೆ ಚಿತ್ರರಂಗಕ್ಕೆ ಬಂದೆವು. ಆಗ ನಾವಿಬ್ಬರೂ…

Read More