Headlines

nagaraj11081993

ಎಂಥ ಬೌಲಿಂಗ್​ಯ್ಯ ನಿಂದು… ಬೌಲರ್-ಬ್ಯಾಟರ್​ ನಡುವೆ ಮಾತಿನ ಚಕಮಕಿ

ಪಾಕಿಸ್ತಾನ ಸೂಪರ್ ಲೀಗ್ (PSL) 2026ರ ಸೀಸನ್ ಕೇವಲ ಸಿಕ್ಸರ್-ಬೌಂಡರಿಗಳಿಗಷ್ಟೇ ಅಲ್ಲದೆ, ವಿಚಿತ್ರ ಕಾರಣಗಳಿಗೂ ಸುದ್ದಿಯಾಗುತ್ತಿದೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ರಾವಲ್ಪಿಂಡಿಸ್ ನಡುವಿನ ಪಂದ್ಯದಲ್ಲಿ ನ್ಯೂಝಿಲೆಂಡ್‌ನ ಅನುಭವಿ ಆಟಗಾರ ಡೇರಿಲ್ ಮಿಚೆಲ್ ಮತ್ತು ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಖ್ ನಡುವೆ ನಡೆದ ಹಗ್ಗಜಗ್ಗಾಟ ಈಗ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು 20 ಓವರ್​ಗಳಲ್ಲಿ 182 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ರಾವಲ್ಪಿಂಡಿಸ್ ತಂಡವನ್ನು ಕಾಡಿದ್ದು…

Read More

ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್ ರಾಜೀನಾಮೆ ವಿಚಾರಕ್ಕೆ ಟ್ವಿಸ್ಟ್​​: ಸ್ವ ಇಚ್ಛೆಯಿಂದ ಹುದ್ದೆ ತೊರೆದಿದ್ದೇನೆ ಎಂದ ಪರಿಷತ್​​ ಸದಸ್ಯ

ದಾವಣಗೆರೆ, ಏಪ್ರಿಲ್​​ 12: ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್ ರಾಜೀನಾಮೆ ವಿಚಾರಕ್ಕೆ ಟ್ವಿಸ್ಟ್​​ ಸಿಕ್ಕಿದೆ. ದಾವಣಗೆರೆ ಉಪ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್​​ ವಿರುದ್ಧ ಷಡ್ಯಂತ್ರ ಆರೋಪ ಸಂಬಂಧ ಹೈಕಮಾಂಡ್​​ ಕೆಲ ನಾಯಕರ ರಾಜೀನಾಮೆ ಕೇಳಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್‌ ಜಬ್ಬಾರ್, ಸ್ವ ಇಚ್ಛೆಯಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಬಗ್ಗೆ ನನಗೆ ಯಾರೂ ಒತ್ತಡ…

Read More

ಡಾ. ರಾಜ್​ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆ: ಅಭಿಮಾನಿಗಳಿಗೆ ಅನ್ನದಾನ

ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜ್​ಕುಮಾರ್ ಅವರು ನಿಧನರಾಗಿ ಇಂದಿಗೆ (ಏಪ್ರಿಲ್ 12) ಇಪ್ಪತ್ತು ವರ್ಷಗಳು ಕಳೆದಿವೆ. ಅವರ ಪುಣ್ಯಸ್ಮರಣೆ (Death Anniversary) ಅಂಗವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಸಮಾಧಿಗೆ ನಮಿಸಿದ್ದಾರೆ. ಆಗಮಿಸಿದ ಎಲ್ಲರಿಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಅಣ್ಣಾವ್ರು ಇಲ್ಲವಾಗಿ 20 ವರ್ಷಗಳು ಕಳೆದರೂ ಕೂಡ ಜನರಿಗೆ ಅವರ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. ಮಕ್ಕಳು, ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆ ಅಭಿಮಾನಿಗಳು ಇಂದು ಅಣ್ಣಾವ್ರ ಸಮಾಧಿಗೆ…

Read More

Axar Patel: ನಮ್ಮ ಬೌಲಿಂಗ್ ಚೆನ್ನಾಗಿತ್ತು: ಸೋಲಿಗೆ ಈ ತಪ್ಪುಗಳೇ ಕಾರಣ..!

IPL 2026: ಐಪಿಎಲ್ 2026ರ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 23 ರನ್‌ಗಳ ಸೋಲು ಕಂಡ ನಂತರ ಡೆಲ್ಲಿ ಕ್ಯಾಪಿಟಲ್ಸ್ (DC) ನಾಯಕ ಅಕ್ಷರ್ ಪಟೇಲ್ ತಮ್ಮ ತಂಡದ ಪ್ರದರ್ಶನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚೆನ್ನೈನಲ್ಲಿ ನಡೆದ ಈ ಪಂದ್ಯದ ನಂತರದ ಮಾತನಾಡಿದ ಅವರು, ಸೋಲಿಗೆ ಮುಖ್ಯ ಕಾರಣಗಳನ್ನು ವಿಶ್ಲೇಷಿಸಿದ್ದಾರೆ. ಫೀಲ್ಡಿಂಗ್ ವೈಫಲ್ಯವೇ ಪಂದ್ಯದ ತಿರುವು: ಅಕ್ಷರ್ ಪಟೇಲ್ ಅವರ ಪ್ರಕಾರ, ಈ ಪಂದ್ಯದ ಫಲಿತಾಂಶವನ್ನು ಬದಲಿಸಿದ್ದು ತಂಡದ ಕಳಪೆ ಫೀಲ್ಡಿಂಗ್. “ನನ್ನ…

Read More

ಪಿಪಿಎಫ್​ನಲ್ಲಿ ಒಂದು ಕೋಟಿ ರೂ ಹಣ ಪಡೆಯುವುದು ಹೇಗೆ? 61,000 ರೂ ಮಾಸಿಕ ಆದಾಯ ಪಡೆಯಲು ಹೀಗೆ ಮಾಡಿ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ (PPF- Public Provident Fund) ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದು. ದೀರ್ಘಾವಧಿ ಹೂಡಿಕೆಗೆ ಅವಕಾಶ ಕೊಡುವ ಸ್ಕೀಮ್. ಪಿಪಿಎಫ್​ನನಲ್ಲಿ ವಾರ್ಷಿಕ ಬಡ್ಡಿದರ ಶೇ. 7.1 ಇದೆ. ಬ್ಯಾಂಕ್ ಡೆಪಾಸಿಟ್​ಗಳಿಗಿಂತ ತುಸು ಹೆಚ್ಚು. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಕೊಡುತ್ತದೆ. ತಿಂಗಳಿಗೆ 12,500 ರೂವರೆಗೂ ಹೂಡಿಕೆ ಮಾಡಬಹುದು. ಕೋಟಿ ರೂ ಕಾರ್ಪಸ್ ನಿರ್ಮಿಸಬಯಸುವವರು ಪಿಪಿಎಫ್ ಮೂಲಕ ಅದನ್ನು ಸಾಕಾರಗೊಳಿಸಬಹುದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್​ನ ವಿವರ…

Read More

‘ಲವ್ ಇನ್ಶೂರೆನ್ಸ್ ಕಂಪನಿ’ ಬಾಕ್ಸ್ ಆಫೀಸ್ ಕಲೆಕ್ಷನ್: 2ನೇ ದಿನವೂ ಮಂದಗತಿ

ವಿಘ್ನೇಶ್ ಶಿವನ್ ನಿರ್ದೇಶನದ, ಪ್ರದೀಪ್ ರಂಗನಾಥನ್ ನಟನೆಯ ‘ಲವ್ ಇನ್ಶೂರೆನ್ಸ್ ಕಂಪನಿ’ (Love Insurance Kompany) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಕಲೆಕ್ಷನ್ ಮಾಡುತ್ತಿದೆ. ವಾರಾಂತ್ಯದ ರಜಾ ದಿನಗಳಿದ್ದರೂ ಸಹ ಚಿತ್ರದ ಕಲೆಕ್ಷನ್‌ನಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿಲ್ಲ. ಸೈನ್ಸ್ ಫಿಕ್ಷನ್ ರೊಮ್ಯಾಂಟಿಕ್ ಕಾಮಿಡಿ ಈ ಸಿನಿಮಾದಲ್ಲಿದೆ. ಈ ಸಿನಿಮಾ ಮೇಲೆ ಪ್ರದೀಪ್ ರಂಗನಾಥನ್ (Pradeep Ranganathan) ಫ್ಯಾನ್ಸ್ ಬಹಳ ನಿರೀಕ್ಷೆ ಹೊಂದಿದ್ದರು. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪಲು ಈ ಸಿನಿಮಾಗೆ ಸಾಧ್ಯವಾಗಿಲ್ಲ. Sacnilk ವರದಿಯ…

Read More

Breaking: ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಿನ್ನೆಯಷ್ಟೆ ಅವರು ತೀವ್ರ ಉಸಿರಾಟದ ಸಮಸ್ಯೆ ಮತ್ತೆ ಎದೆನೋವಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಮಧ್ಯಾಹ್ನದ ವೇಳೆಗೆ ನಿಧನ ಹೊಂದಿದ್ದಾರೆ.     Source link

Read More

Women’s Reservation Bill 2026: ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಬೆಂಬಲ ಕೋರಿ ಸಂಸದರಿಗೆ ಪ್ರಧಾನಿ ಮೋದಿ ಪತ್ರ

ನವದೆಹಲಿ, ಏಪ್ರಿಲ್ 12: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದೀಯ ಪಕ್ಷಗಳ ನಾಯಕರಿಗೆ ಪತ್ರ ಬರೆದು ನಾರಿ ಶಕ್ತಿ ವಂದನಾ ಕಾಯ್ದೆ(ಮಹಿಳಾ ಮೀಸಲಾತಿ ಕಾಯ್ದೆ) ತಿದ್ದುಪಡಿಗೆ ಸಂಪೂರ್ಣ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ಈ ಪತ್ರದಲ್ಲಿ ಪ್ರಧಾನಿ ಮೋದಿ ಅವರು ಏಪ್ರಿಲ್ 16ರಂದು ಪ್ರಾರಂಭವಾಗುತ್ತಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಐತಿಹಾಸಿಕ ತಿದ್ದುಪಡಿಯನ್ನು ಸರ್ವಾನುಮತದಿಂದ ಅಂಗೀಕರಿಸಬೇಕೆಂದು ಕರೆ ನೀಡಿದ್ದಾರೆ. ಇದಲ್ಲದೆ, ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಏಪ್ರಿಲ್…

Read More

IPL 2026: ಸತತ ಸೋಲುಗಳಿಂದ ಕಂಗೆಟ್ಟ KKRಗೆ ಸಿಕ್ತು ಗುಡ್ ನ್ಯೂಸ್

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ  ಕೊನೆಗೂ ಸಿಹಿ ಸಿಕ್ಕಿದೆ. ಶ್ರೀಲಂಕಾದ ಸ್ಟಾರ್ ವೇಗಿ ಮಥೀಶ ಪತಿರಾಣ ಅವರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಅಂತಿಮವಾಗಿ 'ನಿರಕ್ಷೇಪಣಾ ಪತ್ರ' (NOC) ನೀಡಿದ್ದು, ಅವರು ಶೀಘ್ರದಲ್ಲೇ ಕೆಕೆಆರ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಟಿ20 ವಿಶ್ವಕಪ್ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದ ಮಥೀಶ ಪತಿರಾಣ, ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ವಂಚಿತರಾಗಿದ್ದರು. ಶ್ರೀಲಂಕಾದಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದ ಅವರು ಈಗ ಸಂಪೂರ್ಣ ಫಿಟ್…

Read More

ಗಾಯಾಳುವಿಗೆ ನೆರವಾದ ಹೆಚ್.ಡಿ. ಕುಮಾರಸ್ವಾಮಿ: ಕೇಂದ್ರ ಸಚಿವರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ

ಬೆಂಗಳೂರು, ಏಪ್ರಿಲ್​​ 12: ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಕ್ಷಣ ಸ್ಪಂದಿಸಿ ಮಾನವೀಯ ನೆರವು ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಹಾಸನಕ್ಕೆ ತೆರಳುತ್ತಿದ್ದ ಕುಮಾರಸ್ವಾಮಿ, ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಆಟೋ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತವನ್ನು ಗಮನಿಸಿದ್ದಾರೆ. ಈ ಅಪಘಾತದಲ್ಲಿ ವಿಕ್ರಂ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸುಮಾರು ಅರ್ಧ ಗಂಟೆಯಿಂದ ರಸ್ತೆಯಲ್ಲೇ ಬಿದ್ದಿದ್ದರು. ಸಚಿವರು ಕೂಡಲೇ ಕಾರ್ಯಪ್ರವೃತ್ತರಾಗಿ, ಗಾಯಾಳುವನ್ನು ಪೊಲೀಸ್ ವಾಹನದಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ…

Read More