All posts by nagaraj11081993

ಅಶ್ವಿನಿಯ ಫಿನಾಲೆಗೆ ಕರೆದೊಯ್ಯುವ ಜವಾಬ್ದಾರಿ ಧನುಶ್​​​ಗೆ ವಹಿಸಿದ ಗಿಲ್ಲಿ – Kannada News | Bigg Boss Kannada: Gilli loose against Ashwini

ಅಶ್ವಿನಿ ಮತ್ತು ಗಿಲ್ಲಿ ಬಿಗ್​​ಬಾಸ್ (Bigg Boss) ಮನೆಯ ಟಾಮ್ ಆಂಡ್ ಜೆರ್ರಿ. ಬಿಗ್​​ಬಾಸ್ ಪ್ರಾರಂಭವಾದಾಗಿನಿಂದ ಇನ್ನೇನು ಮುಗಿಯುವ ಸಮಯ ಬಂದರೂ ಈ ಇಬ್ಬರ ವೈರತ್ವದಲ್ಲಿ ಬದಲಾವಣೆಯೇ ಆಗಿಲ್ಲ. ಮೊದಲ ವಾರದಂತೆಯೇ ಈಗಲೂ ಸಹ ಕಿತ್ತಾಡುತ್ತಾರೆ. ಆದರೆ ಈ ವಾರ ಗಿಲ್ಲಿ ನಟ ಮತ್ತು ಅಶ್ವಿನಿ ಅವರುಗಳು ಮನೆಯ ರಾಜ ಮತ್ತು ರಾಣಿ ಆಗಿದ್ದರು. ಇಬ್ಬರೂ ಒಟ್ಟಿಗೆ ಟಾಸ್ಕ್​​ನ ಉಸ್ತುವಾರಿ ನೋಡಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಹಲವು ಬಾರಿ ಗಿಲ್ಲಿ ಮತ್ತು ಅಶ್ವಿನಿ ಪರಸ್ಪರ ಜಗಳ ಆಡಿದರು, ಕಿತ್ತಾಡಿದರು. ಇದೀಗ ಪರಸ್ಪರ ಎದುರಾಳಿಗಳಾಗಿ ಆಟ ಆಡಬೇಕಾಗಿ ಬಂತು. ಆಟದಲ್ಲಿ ಅಶ್ವಿನಿ ಗೆದ್ದರೆ, ಗಿಲ್ಲಿ ಸೋತರು.

ವಾರವೆಲ್ಲ ಉಸ್ತುವಾರಿ ನಿಭಾಯಿಸಿದ ಅಶ್ವಿನಿ ಮತ್ತು ಗಿಲ್ಲಿ ಅವರಿಗೆ ಕ್ಯಾಪ್ಟನ್ ರೇಸಿಗೆ ಅವಕಾಶವನ್ನು ಬಿಗ್​ಬಾಸ್ ಕೊಟ್ಟರು. ಅದಾಗಲೇ ರೇಸಿನಲ್ಲಿದ್ದ ರಾಶಿಕಾ ಮತ್ತು ಧನುಶ್ ಅವರಿಗೆ ಜೋಡಿ ಆಗಿ ಆಡುವ ಅವಕಾಶ ನೀಡಲಾಯ್ತು. ಅದರಂತೆ ಅಶ್ವಿನಿ ಮತ್ತು ಧನುಶ್ ಒಟ್ಟಿಗೆ ಮತ್ತು ರಾಶಿಕಾ ಮತ್ತು ಗಿಲ್ಲಿ ಒಟ್ಟಿಗೆ ಆಡಿದರು. ಈ ಆಟದಲ್ಲಿ ಧನುಶ್ ಮತ್ತು ಅಶ್ವಿನಿ ಒಳ್ಳೆಯ ಆಟವಾಡಿ ಗೆದ್ದರು. ಆಟ ಮುಗಿಯುವ ಮುನ್ನವೇ ಗಿಲ್ಲಿ, ಅಶ್ವಿನಿ ಬಗ್ಗೆ ಗೇಲಿ ಮಾಡಲು ಪ್ರಾರಂಭ ಮಾಡಿದ್ದರು. ಆದರೆ ಕೊನೆಯಲ್ಲಿ ಅಶ್ವಿನಿಯೇ ಆಟ ಗೆದ್ದು ಕ್ಯಾಪ್ಟೆನ್ಸಿ ರೇಸಿನ ಫೈನಲ್​​ಗೆ ಎಂಟ್ರಿ ಕೊಟ್ಟರು.

ಆದರೆ ಆಟ ಮುಗಿದ ಮೇಲೆ ಅಂದರೆ ಸೋತ ಮೇಲೆ ಗಿಲ್ಲಿ, ಪ್ರತಿ ಬಾರಿಯಂತೆ ಮಾತಿನ ಮೂಲಕ ಗೆದ್ದವರನ್ನು ಕುಗ್ಗಿಸುವ ಯತ್ನ ಮಾಡಲು ಆರಂಭಿಸಿದರು. ವಿಶೇಷವಾಗಿ ಅಶ್ವಿನಿ ಬಗ್ಗೆ ಮಾತನಾಡಿದ ಗಿಲ್ಲಿ, ‘ನಿಮಗೆ ಯಾರಾದರೂ ಒಬ್ಬರ ಸಹಾಯ ಇಲ್ಲದೆ ಏನನ್ನೂ ಮಾಡಲು ಆಗಲ್ಲ. ಈಗಲೂ ಸಹ ಇನ್ನೊಬ್ಬರ ಸಹಾಯದಿಂದ (ಧನುಶ್) ಕ್ಯಾಪ್ಟೆನ್ಸಿ ರೇಸಿಗೆ ಬಂದಿದ್ದೀರಿ’ ಎಂದು ಹೀಗಳೆಯಲು ಆರಂಭಿಸಿದರು. ಅಶ್ವಿನಿ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ

ಕೊನೆಗೆ ಗಿಲ್ಲಿ, ‘ಇಷ್ಟು ದಿನ ಈ ಮನೆಯಲ್ಲಿ ಅಶ್ವಿನಿ ಅವರು ನನ್ನಿಂದ ಇಲ್ಲಿಯವರೆಗೆ ಬಂದರು, ಇನ್ನು ಮುಂದೆ ಧನುಶ್ ನೀನೇ ಇವರನ್ನು ಮುಂದೆ ಕರೆದುಕೊಂಡು ಹೋಗಬೇಕು. ನೀನೇ ಅಶ್ವಿನಿ ಅವರನ್ನು ಫಿನಾಲೆ ವರೆಗೆ ಕರೆದುಕೊಂಡು ಹೋಗಬೇಕು, ನನ್ನಿಂದ ಇನ್ನು ಮುಂದೆ ಆಗುವುದಿಲ್ಲ’ ಎಂದರು. ಇದೀಗ ಧನುಶ್ ಮತ್ತು ಅಶ್ವಿನಿ ನಡುವೆ ಕ್ಯಾಪ್ಟೆನ್ಸಿಗೆ ಸ್ಪರ್ಧೆ ನಡೆಯಲಿದೆ. ಯಾರು ಗೆಲ್ಲಲಿದ್ದಾರೆಯೋ ಅವರು ಫಿನಾಲೆ ವಾರಕ್ಕೆ ನೇರವಾಗಿ ಎಂಟ್ರಿ ಕೊಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

VHT 2025-26: ಒಂದೇ ಪಂದ್ಯದಲ್ಲಿ ಐದು ಶತಕಗಳು; ಐತಿಹಾಸಿಕ ದಾಖಲೆ ಸೃಷ್ಟಿ

Source link

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಸಕ ಶಾಕಿಂಗ್ ರಿಯಾಕ್ಷನ್ – Kannada News | MLA Janardhana Reddy Reacts to Ballari Incident: Clash Over Valmiki Jayanti Banners at His Residence

ಬಳ್ಳಾರಿ, ಜನವರಿ 01: ಬಳ್ಳಾರಿ ನಗರದಲ್ಲಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಖಾಸಗಿ ಗನ್‌ಮ್ಯಾನ್‌ಗಳಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಈ ಘಟನೆ ಬಗ್ಗೆ ಶಾಸಕ ಜನಾರ್ದನ ರೆಡ್ಡಿ ಮಾತನಾಡಿದ್ದು, ಬೆಂಗಳೂರಿನಿಂದ ಬಂದು ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ಚಲಪತಿ ಅವರೊಂದಿಗೆ ಚರ್ಚಿಸಿ ವಾಪಸ್ ಬರುವ ಸಂದರ್ಭದಲ್ಲಿ ಈ ರೀತಿ ಆಗಿದೆ ಎಂದು ಕರೆ ಬಂತು. ಮನೆ ಮುಂದೆ ಬಂದು ಗಲಾಟೆ ಮಾಡುವುದೇ ಅವರ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

2026 ರಲ್ಲಿ ಎಷ್ಟು ಪಂದ್ಯಗಳನ್ನಾಡಲಿದ್ದಾರೆ ರೋಹಿತ್, ಕೊಹ್ಲಿ? ಇಲ್ಲಿದೆ ಪೂರ್ಣ ವಿವರ – Kannada News | Team India’s Rohit Kohli ODI Schedule 2026: Road to World Cup 2027

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಟೀಂ ಇಂಡಿಯಾದ (Team India) ಇಬ್ಬರು ಸೂಪರ್​ಸ್ಟಾರ್​ಗಳಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲೂ ಮಿಂಚಿದ್ದರು. ಇದೀಗ ಇವರಿಬ್ಬರನ್ನು ಮತ್ತೆ ರಾಷ್ಟ್ರೀಯ ತಂಡದಲ್ಲಿ ನೋಡುವುದು ಯಾವಾಗ ಎಂಬ ಪ್ರಶ್ನೆ ಎಲ್ಲಾ ಅಭಿಮಾನಿಗಳ ಮನದಲ್ಲಿ ಮೂಡಿದೆ. ಆ ಪ್ರಶ್ನೆಗಳಿಗೆ ನಾವು ಉತ್ತರ ಹೇಳಲಿದ್ದೇವೆ. ಇದರ ಜೊತೆಗೆ ಈ ಇಡೀ ವರ್ಷ ಅಂದರೆ 2026 ರಲ್ಲಿ ಈ ಇಬ್ಬರು ದಿಗ್ಗಜರು ಎಷ್ಟು ಪಂದ್ಯಗಳನ್ನಾಡಿದ್ದಾರೆ? ಹಾಗೆಯೇ 2027 ರಲ್ಲಿ ನಡೆಯಲಿರುವ ವಿಶ್ವಕಪ್​ಗೂ ಮುನ್ನ ಇವರಿಬ್ಬರು ಎಷ್ಟು ಪಂದ್ಯಗಳನ್ನು ಆಡಲಿದ್ದಾರೆ? ಎಂಬುದರ ಪೂರ್ಣ ವಿವರ ಇಲ್ಲಿದೆ.

2026 ರಲ್ಲಿ ಭಾರತ ಎಷ್ಟು ಏಕದಿನ ಪಂದ್ಯಗಳನ್ನು ಆಡಲಿದೆ?

2026 ರಲ್ಲಿ, ಭಾರತ ತಂಡವು ಆರು ವಿಭಿನ್ನ ತಂಡಗಳ ವಿರುದ್ಧ ಒಟ್ಟು 18 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಇದರಲ್ಲಿ ತವರು ಮತ್ತು ವಿದೇಶ ಸರಣಿಗಳು ಸೇರಿವೆ. ರೋಹಿತ್ ಮತ್ತು ವಿರಾಟ್ ಫಿಟ್ ಆಗಿ ಉಳಿದು ತಮ್ಮ ಫಾರ್ಮ್ ಅನ್ನು ಕಾಯ್ದುಕೊಂಡರೆ, ಈ ಪಂದ್ಯಗಳಲ್ಲಿ ಹೆಚ್ಚಿನವುಗಳಲ್ಲಿ ಆಡಲು ಅವಕಾಶ ಪಡೆಯಲಿದ್ದಾರೆ. ವಿಶ್ವಕಪ್‌ಗೆ ಮುನ್ನ ಏಕದಿನ ಪಂದ್ಯಗಳ ಸಂಖ್ಯೆ ಸೀಮಿತವಾಗಿರುವುದರಿಂದ ಈ ವರ್ಷ ಅವರಿಗೆ ವಿಶೇಷವಾಗಿರಲಿದೆ.

ರೋಹಿತ್, ವಿರಾಟ್‌ಗೆ ವಿಪುಲ ಅವಕಾಶಗಳು

ಜನವರಿ 2026 ರಲ್ಲಿ, ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ತವರು ಸರಣಿಯನ್ನು ಆಡಲಿದೆ. ಜನವರಿ 11 ರಿಂದ 18 ರವರೆಗೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಇದು ವರ್ಷದ ಆರಂಭ ಮತ್ತು ಇಬ್ಬರೂ ಅನುಭವಿ ಆಟಗಾರರಿಗೆ ತಮ್ಮ ಫಾರ್ಮ್ ಅನ್ನು ಕಾಯ್ದುಕೊಳ್ಳಲು ಉತ್ತಮ ಅವಕಾಶವಾಗಿರುತ್ತದೆ. ಇದರ ನಂತರ, ಟೀಂ ಇಂಡಿಯಾ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಜುಲೈ 14 ರಿಂದ 19 ರವರೆಗೆ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಇದರ ನಂತರ, ಟೀಂ ಇಂಡಿಯಾ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಬಹುದು, ಆದರೆ ವೇಳಾಪಟ್ಟಿಯನ್ನು ಘೋಷಿಸಲಾಗಿಲ್ಲ.

ಟೀಂ ಇಂಡಿಯಾ ಅಕ್ಟೋಬರ್ 2026 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರು ಸರಣಿಯನ್ನು ಆಡಲಿದೆ. ಈ ಅವಧಿಯಲ್ಲಿ ಎರಡೂ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ರೋಹಿತ್ ಮತ್ತು ವಿರಾಟ್ ಕೆರಿಬಿಯನ್ ತಂಡದ ವಿರುದ್ಧ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ, ಆದ್ದರಿಂದ ಈ ಸರಣಿ ಅವರಿಗೆ ಸ್ಮರಣೀಯವಾಗಬಹುದು. ಆ ಬಳಿಕ ಟೀಂ ಇಂಡಿಯಾ ಅಕ್ಟೋಬರ್-ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಾಗುತ್ತದೆ. ನಂತರ, ವರ್ಷದ ಕೊನೆಯಲ್ಲಿ, ಭಾರತ ತಂಡವು ಶ್ರೀಲಂಕಾ ವಿರುದ್ಧ ತವರು ಸರಣಿಯನ್ನು ಆಡಲಿದೆ, ಇದರಲ್ಲಿ ಮೂರು ಏಕದಿನ ಪಂದ್ಯಗಳು ಸಹ ಸೇರಿವೆ.

IND vs NZ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಯಾವಾಗ?

2025 ರಲ್ಲಿ ಮಿಂಚಿದ್ದ ಇಬ್ಬರು

2025 ರಲ್ಲಿ, ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆಡಿದ 13 ಪಂದ್ಯಗಳಲ್ಲಿ 65.1 ರ ಸರಾಸರಿಯಲ್ಲಿ 651 ರನ್ ಕಲೆಹಾಕಿದರು. ಇದರೊಂದಿಗೆ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಇದರ ಜೊತೆಗೆ ಗೆಲುವಿನ ಪಂದ್ಯಗಳಲ್ಲಿ 18,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಬರೆದರು. ಕೊಹ್ಲಿಯಂತೆ ರೋಹಿತ್ ಶರ್ಮಾ ಕೂಡ ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಾಯಕತ್ವ ವಹಿಸುವುದರ ಜೊತೆಗೆ, ಆಡಿದ 14 ಏಕದಿನ ಪಂದ್ಯಗಳಲ್ಲಿ 50 ಸರಾಸರಿಯನ್ನು ಹೊಂದಿದ್ದರು ಮತ್ತು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ವಿಜರ್ಲೆಂಡ್​ ಬಾರ್​​ನಲ್ಲಿ ಬೆಂಕಿ ಅವಘಡ; ಸಾವಿನ ಸಂಖ್ಯೆ 40ಕ್ಕೆ ಏರಿಕೆ – Kannada News | Death toll rises to 40 in Switzerland bar fire accident Swiss police rule out terrorist attack

ಬರ್ನ್ (ಸ್ವಿಟ್ಜರ್ಲೆಂಡ್), ಜನವರಿ 1: ಸ್ವಿಜರ್ಲೆಂಡ್‌ನ ಐಷಾರಾಮಿ ಬಾರ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ 40 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಜನರು ಗಾಯಗೊಂಡಿದ್ದಾರೆ ಎಂದು ಸ್ವಿಸ್ ಪೊಲೀಸರು ಖಚಿತಪಡಿಸಿದ್ದಾರೆ. ಇದಲ್ಲದೆ, ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್-ಮೊಂಟಾನಾದಲ್ಲಿರುವ ಲೆ ಕಾನ್ಸ್ಟೆಲೇಷನ್ ಬಾರ್ ಮತ್ತು ಲೌಂಜ್‌ನ ನೆಲಮಾಳಿಗೆಯಲ್ಲಿ ಸಂಭವಿಸಿದ ಸ್ಫೋಟವನ್ನು ಬೆಂಕಿ ಅವಘಡ ಎಂದು ಊಹಿಸಲಾಗಿದೆ, ಇದು ಭಯೋತ್ಪಾದಕ ದಾಳಿಯಲ್ಲ ಎಂದು ಸ್ವಿಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಸಮಯದಲ್ಲಿ 150ಕ್ಕೂ ಹೆಚ್ಚು ಜನರು ಬಾರ್‌ನಲ್ಲಿದ್ದರು.

ಐಷಾರಾಮಿ ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್-ಮೊಂಟಾನಾದಲ್ಲಿರುವ ಲೆ ಕಾನ್ಸ್ಟೆಲೇಷನ್ ಬಾರ್‌ನಲ್ಲಿ ಮಧ್ಯರಾತ್ರಿಯ ನಂತರ ಬೆಂಕಿ ಕಾಣಿಸಿಕೊಂಡಿತ್ತು. ಅಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಅನೇಕ ಜನರು ಸೇರಿದ್ದರು. ಬೆಂಕಿಯ ನಿಖರವಾದ ಕಾರಣವನ್ನು ನಿರ್ಧರಿಸಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆದರೆ ಇದು ಭಯೋತ್ಪಾದನಾ ಕೃತ್ಯವಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Video: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ, ಹಲವು ಮಂದಿ ಸಾವು

ಕ್ರಾನ್ಸ್-ಮೊಂಟಾನಾ ರೆಸಾರ್ಟ್ ಅಂತಾರಾಷ್ಟ್ರೀಯ ಸ್ಕೀ ಮತ್ತು ಗಾಲ್ಫ್ ಸ್ಥಳವೆಂದು ಪ್ರಸಿದ್ಧವಾಗಿದೆ. ರಾತ್ರೋರಾತ್ರಿ ಅದರ ಜನದಟ್ಟಣೆಯ ಲೆ ಕಾನ್ಸ್ಟೆಲೇಷನ್ ಬಾರ್ ಮೋಜು ಮಸ್ತಿಯಿಂದ ಸ್ವಿಜರ್ಲೆಂಡ್‌ನ ಅತ್ಯಂತ ಕೆಟ್ಟ ದುರಂತಗಳಲ್ಲಿ ಒಂದಾಗಿ ಮಾರ್ಪಟ್ಟಿದೆ. ಮೃತರಾದ 40 ಜನರನ್ನು ಗುರುತಿಸಲು ಮತ್ತು ಅವರ ಕುಟುಂಬಗಳಿಗೆ ತಿಳಿಸಲು ಕೆಲಸ ನಡೆಯುತ್ತಿದೆ.

ಈ ಘಟನೆ ನಡೆಯುತ್ತಿದ್ದಂತೆ ವಿವಿಧ ದೇಶಗಳ ಕೆಲವರು ಸೇರಿದಂತೆ ಮೃತರಿಗೆ ಸಹಾಯ ಮಾಡಲು ಹೆಲಿಕಾಪ್ಟರ್‌ಗಳು ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಬಾರ್‌ಮೇಡ್ ಬಾಟಲಿಯಲ್ಲಿ ಮೇಣದಬತ್ತಿಯನ್ನು ಹೊತ್ತಿಸಿ ಇಟ್ಟಿದ್ದರು, ಅದರಿಂದ ಮರದ ಸೀಲಿಂಗ್‌ಗೆ ಬೆಂಕಿ ಹೊತ್ತಿತು. ಬೆಂಕಿಯ ಜ್ವಾಲೆಗಳು ಬೇಗನೆ ಹರಡಿ ಸೀಲಿಂಗ್ ಅನ್ನು ಆವರಿಸಿದವು ಎನ್ನಲಾಗಿದೆ. ಆದರೆ, ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ – Kannada News | Ram Fighting Competition in Andhra Pradesh ahead of New Year

ಹೈದರಾಬಾದ್, ಜನವರಿ 1: ಇಂದು ಹೊಸ ವರ್ಷದ (New Year Celebration) ಆಚರಣೆಯ ಸಂದರ್ಭದಲ್ಲಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಂಗುಲೂರು ಮಂಡಲದ ರೇಣಿಂಗವರಂ ಗ್ರಾಮದಲ್ಲಿ ನಡೆದ ಸಾಂಪ್ರದಾಯಿಕ ಟಗರು ಸ್ಪರ್ಧೆಗಳು ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸಿದವು. ನೆರೆಯ ಹಳ್ಳಿಗಳಿಂದ ಹಾಗೂ ಪ್ರಕಾಶಂ, ಬಾಪಟ್ಲ ಮತ್ತು ಮಾರ್ಕಪುರಂ ಜಿಲ್ಲೆಗಳಿಂದ ಸುಮಾರು 41 ಜೋಡಿ ಟಗರುಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಈ ಅಪರೂಪದ ಟಗರು ಕಾಳಗ ನೋಡಲು ಹಲವು ಜಿಲ್ಲೆಗಳಿಂದ ಜನರು ಆಗಮಿಸಿದ್ದರು.

ತೆಲುಗು ದೇಶಂ ಪಕ್ಷದ ನಾಯಕ ಬೋರೆಡ್ಡಿ ಓಬುಲ್ ರೆಡ್ಡಿ ಅವರ ಮೇಲ್ವಿಚಾರಣೆಯಲ್ಲಿ ಈ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳ ಮುಖ್ಯ ಉದ್ದೇಶ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವುದು ಮತ್ತು ಹಬ್ಬದ ಸಮಯದಲ್ಲಿ ಜನರಲ್ಲಿ ಏಕತೆಯನ್ನು ತೋರಿಸುವುದು. ಸಂಕ್ರಾಂತಿ ಮತ್ತು ದಸರಾ ಹಬ್ಬಗಳಲ್ಲಿ ಮತ್ತು ಹಳ್ಳಿ ಜಾತ್ರೆಗಳಲ್ಲಿ ಇಲ್ಲಿ ಗೂಳಿ ಓಟದ ಜೊತೆಗೆ ಟಗರು ಸ್ಪರ್ಧೆಗಳನ್ನು ನಡೆಸುವುದು ವಾಡಿಕೆ. ಪ್ರಾಣಿ ಹಿಂಸೆ ನಿಷೇಧಿಸಿರುವುದರಿಂದ ಕೆಲವು ಪ್ರದೇಶಗಳಲ್ಲಿ ಮಾತ್ರ ವಿಶೇಷ ಅನುಮತಿಯೊಂದಿಗೆ ಇದನ್ನು ನಡೆಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ – Kannada News | CM Siddaramaiah says budget preparations will begin from January itself: Amid power sharing

ಬೆಂಗಳೂರು, ಜನವರಿ 01: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಪಟ್ಟದ ಪೈಟ್​​ ಮಧ್ಯೆ ಸಿಎಂ ಸಿದ್ದರಾಮಯ್ಯ 2026-27ರ ರಾಜ್ಯ ಬಜೆಟ್ ಮಂಡಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಲ ಕಾಂಗ್ರೆಸ್ ಶಾಸಕರೇ ಸಿಎಂ ಬದಲಾವಣೆ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ಬಜೆಟ್ ಮಂಡನೆಗೆ ಸಿದ್ಧತೆಗಳು ನಡೆಯುತ್ತಿವೆ. ಜನವರಿಯಲ್ಲಿ ಬಜೆಟ್ ಸಿದ್ಧತೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು – Kannada News | Another Hindu man attacked with weapons and set on fire by mob in Bangladesh

ಢಾಕಾ, ಜನವರಿ 1: ಬಾಂಗ್ಲಾದೇಶದ ಹಿಂದೂ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ದಾಳಿ ಮಾಡಿ ಬೆಂಕಿ ಹಚ್ಚಿದೆ. ಇದರಿಂದ ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಇದು ಬಾಂಗ್ಲಾದೇಶದಲ್ಲಿ (Bangladesh) ಅಲ್ಪಸಂಖ್ಯಾತರ ಮೇಲೆ ನಡೆದ ಮತ್ತೊಂದು ಆತಂಕಕಾರಿ ದಾಳಿಯಾಗಿದೆ. ಡಿಸೆಂಬರ್ 31ರಂದು ಶರಿಯತ್‌ಪುರ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹೆಚ್ಚುತ್ತಿರುವ ದ್ವೇಷವು ಆತಂಕಕಾರಿಯಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು 50 ವರ್ಷದ ಖೋಕೋನ್ ದಾಸ್ ಎಂದು ಗುರುತಿಸಲಾಗಿದೆ. ಅವರು ಮನೆಗೆ ಹಿಂತಿರುಗುತ್ತಿದ್ದಾಗ ದಾಳಿಕೋರರ ಗುಂಪೊಂದು ಅವರ ಮೇಲೆ ದಾಳಿ ಮಾಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ – Kannada News | Abhishek of Lord Neelkanthvarni performed by baps during New Year Celebration

ನವದೆಹಲಿ, ಜನವರಿ 1: 2026ರ ಹೊಸ ವರ್ಷದ ಪ್ರಯುಕ್ತ ಬಿಎಪಿಎಸ್ (BAPS)  ಸ್ವಾಮಿನಾರಾಯಣ ಸಂಸ್ಥೆಯು ಪ್ರಪಂಚದಾದ್ಯಂತದ ಭಕ್ತರಿಗೆ ತನ್ನ ಆತ್ಮೀಯ ಶುಭಾಶಯಗಳನ್ನು ಕೋರಿದೆ. ಈ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಯಿಂದ ತುಂಬಿದ ವರ್ಷವಾಗಲಿ ಎಂದು ಸಂಸ್ಥೆಯು ಹಾರೈಸಿದೆ. ಬಿಎಪಿಎಸ್ ಆಧ್ಯಾತ್ಮಿಕ ಗುರು ಮಹಾಂತ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಈ ಹೊಸ ವರ್ಷವು ಭಕ್ತರ ಜೀವನವನ್ನು ದೈವಿಕ ಆಶೀರ್ವಾದ, ಆಂತರಿಕ ಶಕ್ತಿ ಮತ್ತು ಸಂತೋಷದಿಂದ ತುಂಬಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಬಿಎಪಿಎಸ್ ಹೇಳಿದೆ. ಹೊಸ ವರ್ಷದ ಸಂದರ್ಭದಲ್ಲಿ ಬಿಎಪಿಎಸ್ ಸಂಸ್ಥೆಯು ಭಗವಾನ್ ನೀಲಕಂಠವರ್ಣಿ ಸ್ವಾಮಿಯ ಅಭಿಷೇಕ ದರ್ಶನವನ್ನು ಭಕ್ತರೊಂದಿಗೆ ಹಂಚಿಕೊಂಡಿದೆ.

ಈ ಪವಿತ್ರ ದರ್ಶನವು ಭಕ್ತರ ಹೃದಯಗಳನ್ನು ಶುದ್ಧೀಕರಿಸಬೇಕು, ಅವರ ಆಲೋಚನೆಗಳನ್ನು ಶುದ್ಧೀಕರಿಸಬೇಕು ಮತ್ತು ಭಕ್ತಿ, ಸೇವೆ ಮತ್ತು ಸತ್ಸಂಗದ ಹಾದಿಯಲ್ಲಿ ಮುಂದುವರಿಯಲು ಅವರನ್ನು ಪ್ರೇರೇಪಿಸಬೇಕು ಎಂದು ಸಂಸ್ಥೆ ಹೇಳಿದೆ. ಸಮಾಜದಲ್ಲಿ ಶಾಂತಿ, ಏಕತೆ ಮತ್ತು ನೈತಿಕ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯು ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಸನ: ಹೊಸ ವರ್ಷದ ಮೊದಲ ದಿನವೇ ಭೀಕರ ದುರಂತ; ವಾಹನ​ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವು – Kannada News | Hassan Accident: 3 Dead as Pickup Overturns on NH 69 Near Areseekere

ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಅಪಘಾತ

ಹಾಸನ, ಜನವರಿ 01: ಜಿಲ್ಲೆ ಅರಸೀಕೆರೆ ತಾಲೂಕಿನ ಚಿಕ್ಕಾರಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಭೀಕರ ಅಪಘಾತವೊಂದು (Accident) ಸಂಭವಿಸಿದೆ. ಅಡಕೆ ಕಟಾವು ಮಾಡಿ ಸಾಗಿಸುತ್ತಿದ್ದ ಪಿಕಪ್​ ವಾಹನ​ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ಕಡೂರು ತಾಲೂಕಿನ ತಂಗ್ಲಿ ಗ್ರಾಮದ ನಿವಾಸಿಗಳಾದ ಶಬ್ಬೀರ್(55), ತಿಮ್ಮಣ್ಣ(53) ಮತ್ತು ಸಂಜಯ್(45) ಮೃತರು. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದ್ದೇನು?

ಅಡಿಕೆ ಕಟಾವು ಮಾಡಿ ಸಾಗಿಸುತ್ತಿದ್ದ ಪಿಕಪ್ ವಾಹನದ ಟೈರ್ ಬ್ಲಾಸ್ಟ್ ಆಗಿ ಪಲ್ಟಿ ಹೊಡೆದಿದೆ ಎನ್ನಲಾಗುತ್ತಿದೆ. ಘಟನೆ ವೇಳೆ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದರೆ, ಹಾಸನ ಮೂಲದ ನೌಶದ್ ಎಂಬುವವರು ಗಂಭೀರ ಗಾಯಗೊಂಡಿದ್ದು, ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಕಡೂರು ಆಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಪ್ರತ್ಯೇಕ ರಸ್ತೆ ಅಪಘಾತ: ತಮ್ಮದಲ್ಲದ ತಪ್ಪಿಗೆ ಮಗು ಸೇರಿ ನಾಲ್ವರು ದಾರುಣವಾಗಿ ಸಾವು

ಇನ್ನು ತಿಮ್ಮಣ್ಣ ಮತ್ತು ಸಂಜಯ್ ಮೃತದೇಹವನ್ನು ಕಡೂರು ಸರ್ಕಾರಿ ಆಸ್ಪತ್ರೆ, ಶಬ್ಬೀರ್ ಮೃತದೇಹವನ್ನು ಅರಸೀಕೆರೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Published On – 8:45 pm, Thu, 1 January 26

Source link