All posts by nagaraj11081993

‘ಧುರಂಧರ್’ ಸಿನಿಮಾದಿಂದ ಎರಡು ಸಂಭಾಷಣೆ ತೆಗೆಸಿದ ಸರ್ಕಾರ: ಯಾವುದದು? – Kannada News | I and B ministry orders edits to Dhurandhar removes two words

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಈ ಸಿನಿಮಾ 1000 ಕೋಟಿ ಗಳಿಕೆ ದಾಟಿದೆ. ಸಿನಿಮಾವನ್ನು ಮುಗಿಬಿದ್ದು ಜನ ವೀಕ್ಷಿಸುತ್ತಿದ್ದಾರೆ. ಭಾರತೀಯ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಂದ ಭಾರತೀಯ ಸೇನೆಗೆ ಮಾಹಿತಿ ರವಾನೆ ಮಾಡುವ ಕತೆಯನ್ನು ‘ಧುರಂಧರ್’ ಸಿನಿಮಾ ಒಳಗೊಂಡಿದೆ. ಕೆಲವು ನಿಜ ಘಟನೆಗಳಿಂದ ಸ್ಪೂರ್ತಿ ಪಡೆದು ಈ ಸಿನಿಮಾ ಮಾಡಲಾಗಿದೆ. ಸಿನಿಮಾನಲ್ಲಿ ಕೆಲ ನಿಜ ವ್ಯಕ್ತಿಗಳ ಪಾತ್ರಗಳು, ಸ್ಥಳಗಳು ಸಹ ಇವೆ. ಆದರೆ ಇದೀಗ ಭಾರತೀಯ ಸರ್ಕಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ‘ಧುರಂಧರ್’ ಸಿನಿಮಾದ ಎರಡು ಸಂಭಾಷಣೆ ಅಥವಾ ಹೆಸರನ್ನು ತೆಗೆಸಿದ್ದು, ಒಂದು ಸಂಭಾಷಣೆಯನ್ನು ಬದಲಾಯಿಸಲು ಸೂಚಿಸಿದೆ.

ಎಲ್ಲ ಚಿತ್ರಮಂದಿರಗಳಿಗೆ ವಿತರಕರು ಮತ್ತು ನಿರ್ಮಾಪಕರು ಮೇಲ್ ಮಾಡಿದ್ದು, ‘ಧುರಂಧರ್’ ಸಿನಿಮಾದ ಹೊಸ ಆವೃತ್ತಿಯನ್ನು ಕ್ಯೂಬ್ ಮೂಲಕ ಡೌನ್​​ಲೋಡ್ ಮಾಡಿಕೊಂಡು ಹೊಸ ಆವೃತ್ತಿಯನ್ನೇ ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದ್ದು, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸೂಚನೆಯ ಮೇರೆಗೆ ಸಿನಿಮಾದ ಸಂಭಾಷಣೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಹ ಮೇಲ್​​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ದೈವಕ್ಕೆ ಅವಮಾನ: ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ ದೂರು ದಾಖಲು

‘ಧುರಂಧರ್’ ಸಿನಿಮಾನಲ್ಲಿ ಎರಡು ಹೆಸರನ್ನು ತೆಗೆಯಲಾಗಿದ್ದು, ಒಂದು ಸಂಭಾಷಣೆಯನ್ನು ಬದಲಾಯಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಸೂಚನೆಯಂತೆ ಸಿನಿಮಾ ತಂಡ ಈ ಬದಲಾವಣೆಯನ್ನು ಮಾಡಿದೆ. ಅಳಿಸಲಾಗಿರುವ ಎರಡು ಪದಗಳಲ್ಲಿ ‘ಬಲೂಚ್’ ಸಹ ಒಂದಾಗಿದೆ. ಪಾಕಿಸ್ತಾನದ ಬಲೂಚಿಸ್ಥಾನವನ್ನು ಸಿನಿಮಾನಲ್ಲಿ ಬಲೂಚ್ ಎಂದು ಕರೆಯಲಾಗಿದೆ. ಇದರ ಜೊತೆಗೆ ಮತ್ತೊಂದು ಹೆಸರನ್ನು ಸಹ ಅಳಿಸಲಾಗಿದೆ ಅಥವಾ ಬೀಪ್ ಮಾಡಲಾಗಿದೆ. ‘ಧುರಂಧರ್’ ಸಿನಿಮಾದ ಈ ಬದಲಾದ ಆವೃತ್ತಿಯು ಜನವರಿ 1 ರಿಂದಲೇ ಪ್ರಸಾರ ಆಗಲಿದೆ.

‘ಧುರಂಧರ್’ ಸಿನಿಮಾ ಈ ವರ್ಷ ಭಾರತದ ಭಾರಿ ದೊಡ್ಡ ಯಶಸ್ವಿ ಸಿನಿಮಾ ಎನಿಸಿಕೊಂಡಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಈಗಾಗಲೇ 1200 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾನಲ್ಲಿ ರಣ್​ವೀರ್ ಸಿಂಗ್, ಅಕ್ಷಯ್ ಖನ್ನ, ಆರ್ ಮಾಧವನ್, ಸಂಜಯ್ ದತ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ನಾಯಕಿ ಪಾತ್ರದಲ್ಲಿ ಸಾರಾ ಅರ್ಜುನ್ ನಟಿಸಿದ್ದಾರೆ. ಸಿನಿಮಾವನ್ನು ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ಆರೋಗ್ಯ ಸಮಸ್ಯೆ ಇರುವವರು ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ವಾಕಿಂಗ್ ಹೋಗಬಾರದು! – Kannada News | Protect Your Heart: Avoid Early Morning Walks in Winter

ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಅನಿವಾರ್ಯವಾಗುತ್ತದೆ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಕೂಡ ಜೀವಕ್ಕೆ ಅಪಾಯ ಉಂಟುಮಾಡಬಹುದು. ಅದಲ್ಲದೆ ಚಳಿಗಾಲದಲ್ಲಿ ಬೆಳಗಿನ ನಡಿಗೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು ಎಂದರೆ ನಂಬುತ್ತೀರಾ.. ಹೌದು, ಮಾಲಿನ್ಯ, ಮಂಜು ಮತ್ತು ಚಳಿ ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಬೆಳಿಗ್ಗೆ ವಾಕಿಂಗ್ (Walk) ಹೋಗುವುದು ಅತ್ಯಂತ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಯಾರು ಬೆಳಿಗ್ಗೆ ಎದ್ದು ವಾಕಿಂಗ್ ಹೋಗಬಾರದು, ಈ ಅಭ್ಯಾಸ ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಅಜಿತ್ ಜೈನ್ ಮತ್ತು ಡಾ. ಬನ್ಸಾಲ್ ನೀಡಿರುವ ಮಾಹಿತಿ ಅನುಸಾರ, ದೇಹವು ತನ್ನನ್ನು ತಾನು ಬೆಚ್ಚಗಿಡಲು ಪ್ರಯತ್ನಿಸಿದಾಗ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಪಂಪ್ ಮಾಡಲು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ, ಹೃದಯಾಘಾತದ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಿರುತ್ತವೆ. ಹಾಗಾಗಿ ಹೃದ್ರೋಗಿಗಳು, ಅಧಿಕ ರಕ್ತದೊತ್ತಡ ಇರುವವರು, ವೃದ್ಧರು ಬೆಳಿಗ್ಗೆ ಎದ್ದು ವಾಕಿಂಗ್ ಹೋಗುವುದನ್ನು ಆದಷ್ಟು ತಪ್ಪಿಸಬೇಕು.

ವಾಕಿಂಗ್ ಮಾಡುವುದನ್ನು ನಿಲ್ಲಿಸಬೇಕೇ?

ವೈದ್ಯರ ಸಲಹೆಯ ಪ್ರಕಾರ ಅಪಾಯದ ಗುಂಪಿನಲ್ಲಿಲ್ಲದವರು ಅಂದರೆ ಮೇಲೆ ಹೇಳಿರುವ ಸಮಸ್ಯೆ ಇಲ್ಲದವರು ವಾಕಿಂಗ್ ಮಾಡಬಹುದು, ಆದರೆ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ.

ಸಮಯವನ್ನು ಬದಲಾಯಿಸಿ: ಬೆಳಿಗ್ಗೆ 6- 7 ಗಂಟೆಗೆ ನಡುವೆ ನಡೆಯುವ ಬದಲು, ಸೂರ್ಯ ಉದಯಿಸಿದ ನಂತರ ಅಥವಾ ಸಂಜೆ ಹೊತ್ತು ವಾಕಿಂಗ್ ಹೋಗುವುದು ಉತ್ತಮ.

ಬಟ್ಟೆಗಳು: ನಿಮ್ಮ ತಲೆ, ಕಿವಿ ಮತ್ತು ಎದೆ ಮುಚ್ಚುವ ಬೆಚ್ಚಗಿನ ಉಣ್ಣೆಯ ಬಟ್ಟೆಗಳನ್ನು ಧರಿಸಿ.

ವೇಗ ಹೆಚ್ಚಿಸಬೇಡಿ: ಹಠಾತ್ತನೆ ನಡೆಯುವುದು ಅಥವಾ ವೇಗವಾಗಿ ಜಾಗಿಂಗ್ ಮಾಡುವುದನ್ನು ತಪ್ಪಿಸಿ.

ಒಳಾಂಗಣ ನಡಿಗೆ: ನೀವಿರುವ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಿದ್ದರೆ, ಒಳಾಂಗಣ ನಡಿಗೆ ಮಾಡುವುದು ಬಹಳ ಉತ್ತಮ.

ಇದನ್ನೂ ಓದಿ: ದಿನಕ್ಕೆ 10,000 ಹೆಜ್ಜೆ ನಡೆಯುವವರು ಈ ವಿಷಯ ತಿಳಿದುಕೊಳ್ಳಲೇಬೇಕು!

ನಡೆಯುವಾಗ ಈ ಲಕ್ಷಣಗಳು ಕಾಣಿಸಿಕೊಂಡರೆ ಎಂದಿಗೂ ನಿರ್ಲಕ್ಷಿಸಬೇಡಿ:

  • ಉಸಿರಾಟದ ತೊಂದರೆ.
  • ಹಠಾತ್ತನೆ ತೀವ್ರವಾದ ಎದೆ ನೋವು.
  • ಅತಿಯಾಗಿ ಬೆವರು ಬರುವುದು.
  • ತಲೆತಿರುಗುವಿಕೆ ಅಥವಾ ತಲೆ ತಿರುಗುತ್ತಿರುವಂತೆ ಭಾಸವಾಗುವುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಮ್ಮ ಮೇಲೆ ಕೃಪೆ ತೋರಿ’: ಮಂತ್ರಾಲಯದ ರಾಯರಿಗೆ ವಿಚಿತ್ರ ಪತ್ರ ಬರೆದ ಉದ್ಯೋಗಾಕಾಂಕ್ಷಿಗಳು – Kannada News | Job Seekers Write Unusual Letter to Mantralaya Raghavendra Swamy Seeking Recruitment to Vacant Posts

ಧಾರವಾಡ, ಜನವರಿ 01: ರಾಜ್ಯದಲ್ಲಿ ಹಲವು ವರ್ಷಗಳಿಂದ ಯಾವುದೇ ಸರ್ಕಾರಿ ನೇಮಕಾತಿಗಳು ಆಗಿಲ್ಲ. ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಇತ್ತೀಚೆಗೆ ಬೃಹತ್​ ಪ್ರತಿಭಟನೆ ಕೂಡ ಮಾಡಲಾಯಿತು. ಆದರೂ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳು (Job seekers) ಇದೀಗ ರಾಯರ ಮೊರೆ ಹೋಗಿದ್ದಾರೆ. ನಮ್ಮ ಮೇಲೆ ಕೃಪೆ ತೋರುವಂತೆ ವಿಚಿತ್ರ ಪತ್ರವೊಂದನ್ನು ಬರೆಯುವ ಮೂಲಕ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ (mantralaya raghavendra swamy)  ಮುಂದೆ ತಮ್ಮ ಬೇಡಿಕೆ ಇಟ್ಟಿದ್ದಾರೆ.

ರಾಯರ ಮೊರೆಹೋದ ಉದ್ಯೋಗಾಕಾಂಕ್ಷಿಗಳು 

ರಾಜ್ಯದಲ್ಲಿ ಆಡಳಿತ ಸುಧಾರಣೆ ಸೇರಿದಂತೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನಿರುದ್ಯೋಗಿ ದೈಹಿಕ ಶಿಕ್ಷಕರ ಸಂಘ ರಾಯರಿಗೆ ಮನವಿ ಪತ್ರ ಸಲ್ಲಿಸಿದೆ. ಸರ್ಕಾರ ಸಂಪೂರ್ಣ ಆಡಳಿತ ಸುಧಾರಣೆಯಲ್ಲಿ ವಿಫಲವಾಗಿದೆ. ಹಲವು ವರ್ಷಗಳಿಂದ ಯಾವುದೇ ನೇಮಕಾತಿ ಆಗಿಲ್ಲ. ಹಲವು ಹೋರಾಟ ಮಾಡಿದರೂ ಸಮಸ್ಯೆ ಬಗೆ ಹರಿದಿಲ್ಲ. ಹೀಗಾಗಿ ಖಾಲಿ ಇರುವ ಎಲ್ಲ ದೈಹಿಕ ಶಿಕ್ಷಕರ ಹುದ್ದೆಗಳನ್ನ ಭರ್ತಿ ಮಾಡಿಸುವಂತೆ ರಾಯರ ಮುಂದೆ ವಿಚಿತ್ರ ಬೇಡಿಕೆ ಇಡಲಾಗಿದೆ.

ರಾಯರಿಗೆ ಬರೆದ ಪತ್ರದಲ್ಲೇನಿದೆ?

ಶ್ರೀ ಗುರು ರಾಘವೇಂದ್ರ ಸ್ವಾಮೀಜಿಗಳು ಭಕ್ತರ ಆರಾಧ್ಯ ದೈವ ಆದ ತಾವು ಕರ್ನಾಟಕ ರಾಜ್ಯದಲ್ಲಿ ಆಡಳಿತಮಟ್ಟ ಎಲ್ಲಿಗೆ ಬಂದು ತಲುಪಿದೆ ತಮಗೆ ತಿಳಿದಿದೆ ಇದನ್ನು ಬಗೆಹರಿಸಿ. ತಾವುಗಳು ರಾಜ್ಯದಲ್ಲಿ ಸುಮಾರು ವರ್ಷದಿಂದ ನೇಮಕಾತಿ ನಡೆದಿಲ್ಲ. ನಿರುದ್ಯೋಗಿಗಳು ಸುಮಾರು ಹೋರಾಟ ಮಾಡಿ ಬೇಸತ್ತು ಹೋಗಿದ್ದೇವೆ. ಇದಕ್ಕೆ ಬೇಗ ಕಡಿವಾಣ ಹಾಕಿ ತಮ್ಮ ದಿವ್ಯ ದೃಷ್ಟಿಯಿಂದ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಿ ಉದ್ಯೋಗ ಭಾಗ್ಯ ದೊರಕಲಿ ದೇವ ಹಾಗೂ ನಾವು ದೈಹಿಕ ಶಿಕ್ಷಣ ಶಿಕ್ಷಕರು.

ಇದನ್ನೂ ಓದಿ: ಬೆಂಗಳೂರು ಬನಶಂಕರಿ ದೇವಸ್ಥಾನ ಹುಂಡಿ ಎಣಿಕೆ: ‘ನನ್ನ ತಾಯಿ ಕಡೆಯಿಂದ ಬರುವ ಆಸ್ತಿ ನನಗೆ ಬರಲೆಂದು ಕರುಣಿಸು’ ಎಂದು ದೇವಿಗೆ ಪತ್ರ

ನೇಮಕಾತಿ ನಡೆಯದೆ ಸುಮಾರು ದಶಮಾನ ಕಳೆದು ಹೋಗಿವೆ. ಮಕ್ಕಳು, ಆರೋಗ್ಯ ಸಮಸ್ಯೆ ಮತ್ತು ದೈಹಿಕ ಶಿಕ್ಷಣ ಪದವಿ ಪಡೆದು ನಿರುದ್ಯೋಗ ಸಮಸ್ಯೆಯಿಂದ ಸಂಸಾರಗಳು ಬೀದಿಗೆ ಬರುತ್ತಿವೆ. ಕಾರಣ ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಕಲಿಸಿ, ಬೇಗ ನೇಮಕಾತಿ ಪ್ರಾರಂಭವಾಗಬೇಕೆಂದು ಭಕ್ತಿಪೂರಕ ಕೇಳಿಕೊಳ್ಳುತ್ತಿದ್ದೇವೆ. ಭಕ್ತಿಪೂರಕ ನಮಸ್ಕಾರಗಳೊಂದಿಗೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:49 pm, Thu, 1 January 26

Source link

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್ – Kannada News | Kichcha Sudeep said he will be in weekend episode of Bigg Boss

ಬಿಗ್​​ಬಾಸ್​ ಕನ್ನಡ 12 (Bigg Boss Kannada) ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಬಿಗ್​​ಬಾಸ್ ಶೋ 96 ದಿನಗಳನ್ನು ಪೂರೈಸಿದೆ. ಆದರೆ ಸುದೀಪ್ ಅವರು ಕಳೆದ ವಾರ ಸುದೀಪ್ ಅವರು ವೀಕೆಂಡ್ ಶೋ ನಡೆಸಿಕೊಡಲು ಬಂದಿಲ್ಲ. ‘ಮಾರ್ಕ್’ ಸಿನಿಮಾದ ಬಿಡುಗಡೆ ಮತ್ತು ಪ್ರಚಾರದಲ್ಲಿ ಸುದೀಪ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು ಇನ್ನೂ ಕೆಲವೆಡೆಗೆ ತೆರಳಿ ಅಭಿಮಾನಿಗಳೊಟ್ಟಿಗೆ ‘ಮಾರ್ಕ್’ ಸಿನಿಮಾ ನೋಡುತ್ತಿದ್ದಾರೆ. ಮೈಸೂರಿನಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಸುದೀಪ್ ಅವರು ಬಿಗ್​​ಬಾಸ್​​ ಬಗ್ಗೆ ಸಹ ಮಾತನಾಡಿದ್ದು, ಈ ವೀಕೆಂಡ್ ಎಪಿಸೋಡ್​​ನಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಮಾತ್ರವಲ್ಲದೆ ಈ ವಾರ ಏನು ಮಾಡ್ತೀನಿ ನೋಡ್ತಿರಿ ಎಂದು ಕುತೂಹಲ ಸಹ ಕೆರಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋಗಿಲು ಅಕ್ರಮ ವಸತಿ ತೆರವು ಪ್ರಕರಣ: ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಕೆ; ಬೇಡಿಕೆಗಳೇನು? – Kannada News | Kogilu eviction pil submitted to high court seeking rehabilitation and basic facilities

ಬೆಂಗಳೂರು, ಜನವರಿ 01: ಕೋಗಿಲು ಬಡಾವಣೆಯಲ್ಲಿ ಅಕ್ರಮ ವಸತಿಗಳ ತೆರವು ಪ್ರಕರಣ ಸಂಬಂಧ ಒಂದೆಡೆ ರಾಜಕೀಯ ಜಟಾಪಟಿಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಪುನರ್ವಸತಿ ಮತ್ತು ಪರಿಹಾರ ಕೋರಿ ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಕೆಯಾಗಿದೆ. ಜೈಬಾ ತಬಸ್ಸುಮ್ ಮತ್ತಿತರರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದು, ಹಲವು ಬೇಡಿಕೆಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ.

ಬೇಡಿಕೆಗಳು ಏನು?

30 ವರ್ಷಗಳಿಂದ ಇಲ್ಲಿ 3 ಸಾವಿರ ಜನರು ವಾಸಿಸುತ್ತಿದ್ದಾರೆ. ವಸೀಂ, ಫಕೀರ್ ಕಾಲೋನಿಗಳ ತೆರವಿನಿಂದ ನಿರ್ವಸತಿಕರಾಗಿದ್ದು, ಎಸ್​ಡಿಪಿಐ ಮತ್ತು ಎಂಐಎಂ ಪಕ್ಷಗಳು ಈಗ ನೆರವು ಒದಗಿಸುತ್ತಿವೆ. ಸರ್ಕಾರ 5 ಕಿ.ಮೀ. ಅಂತರದಲ್ಲೇ ಮರುವಸತಿ ಕಲ್ಪಿಸಬೇಕು ಮತ್ತು ಅಲ್ಲಿಯವರೆಗೆ 3 ಹೊತ್ತಿನ ಪೌಷ್ಟಿಕಾಂಶಯುತ ಆಹಾರ ಒದಗಿಸಬೇಕು. 300 ಪ್ರತ್ಯೇಕ ಟೆಂಟ್, ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ವೈದ್ಯಕೀಯ ವ್ಯವಸ್ಥೆ ಕಲ್ಪಿಸಿ ಆರೋಗ್ಯ ತಪಾಸಣೆ ಮಾಡಬೇಕು. ಜೊತೆಗೆ ಕಟ್ಟಡ ತೆರವಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ.

ಇದನ್ನೂ ಓದಿ: ಯೋಗಿ ಬುಲ್ಡೋಜರ್ ರಾಜ್ ಜತೆ ಹೋಲಿಕೆ ಬೇಡ; ಕೋಗಿಲು ಶೆಡ್​ಗಳ ತೆರವು ವಿಚಾರದಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಂತ ಮುಸ್ಲಿಂ ಲೀಗ್

ನಿರಾಶ್ರಿತರಿಗೆ ನಾಳೆಯೂ ಮನೆ ಹಂಚಿಕೆ ಡೌಟ್​

ಕೋಗಿಲು ಬಡಾವಣೆ ನಿರಾಶ್ರಿತರಿಗೆ ನಾಳೆಯೂ ಮನೆ ಹಂಚಿಕೆ ನಡೆಯುವುದು ಅನುಮಾನವಾಗಿದೆ. ಇನ್ನೂ ನಮಗೆ ಪಟ್ಟಿ ಬಂದಿಲ್ಲ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಪರಶುರಾಮ್ ಶಿನ್ನಾಳ್ಕರ್ ಹೇಳಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಯಿಂದ ನಮಗೆ ಪಟ್ಟಿ ಬರಬೇಕಾಗಿದೆ. ಆ ಬಳಿಕವೇ ಪರಿಶೀಲಿಸಿ ನಾವು ಮನೆ ಹಂಚಿಕೆಪತ್ರ ನೀಡಬೇಕು ಎಂದಿದ್ದಾರೆ. ಹೀಗಾಗಿ ಮನೆ ಹಂಚಿಕೆ ಇನ್ನೂ 2-3 ದಿನಗಳು ತಡವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಜೆಪಿಗೆ ಜಮೀರ್​​ ಕೌಂಟರ್​​

ಕೋಗಿಲು ನಿರಾಶ್ರಿತರಿಗೆ ಮನೆ ಹಂಚಿಕೆ ವಿಚಾರವಾಗಿ ಬಿಜೆಪಿ ಆರೋಪಗಳಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. ಕರ್ನಾಟಕದವರಲ್ಲದೆ ಹೊರಗಿನವರಿಗೆ ಹೇಗೆ ಮನೆ ಕೊಡುತ್ತೇವೆ? ಬಾಂಗ್ಲಾದೇಶದವರು ಹೇಗೆ ಬೆಂಗಳೂರಿನಲ್ಲಿ ಇರಲು ಸಾಧ್ಯ? ಹಾಗೇನಾದ್ರೂ ಅವರು ಬಾಂಗ್ಲಾದೇಶದವರಾಗಿದ್ದರೆ ಸಾಬೀತುಪಡಿಸಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಬಾರದು. ಉರ್ದು ಮಾತನಾಡುವವರಿಗೂ ಮನೆ ಕೊಡಲ್ಲ. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ವೋಟರ್ ಐಡಿ ಇರಬೇಕು. ಎಲ್ಲಾ ದಾಖಲೆಗಳು ಇದ್ದರೆ ಮಾತ್ರ ಅವರಿಗೆ ಮನೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಡಿಸಿ ರಿಪೋರ್ಟ್ ಬಂದ ನಂತರ ಅರ್ಹರ ಬಗ್ಗೆ ನಿಖರ ಮಾಹಿತಿ ಸಿಗುತ್ತೆ. ಯಾರಿಗೂ ಅನ್ಯಾಯ ಆಗಬಾರದೆಂದು ಒಂದು ದಿನ ಹೆಚ್ಚು ಸಮಯತೆಗೆದುಕೊಂಡು ಪರಿಶೀಲಿಸುತ್ತಿದ್ದೇವೆ. ಕೋಗಿಲು ಬಡಾವಣೆಯಲ್ಲಿ ಒಟ್ಟು 257 ಮನೆಗಳು ಇದ್ದವು. ಅದರಲ್ಲಿ 157 ಮನೆಗಳನ್ನಷ್ಟೇ ಡೆಮಾಲಿಷನ್ ಮಾಡಲಾಗಿದೆ. ಇವರಲ್ಲಿ ಯಾರು ಅರ್ಹರು ಅನ್ನೋದನ್ನ ಪತ್ತೆ ಮಾಡಲಾಗ್ತಿದೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶ್ರವಣಕುಮಾರನ ಸಾಹಸ… ಟೆಂಪೋ ಡ್ರೈವರ್ ಆಗಿದ್ದವ ನಾಲ್ಕೇ ವರ್ಷದಲ್ಲಿ ವಿಮಾನ ಸಂಸ್ಥೆ ಕಟ್ಟಿದ ಕಥೆ..! – Kannada News | From tempo driver to airlines owner, story of Shankh Air founder Shravan Kumar Vishwakarma

ಕೇಂದ್ರ ಸರ್ಕಾರದಿಂದ ಲೈಸೆನ್ಸ್ ಪಡೆದ ಮೂರು ಹೊಸ ಏರ್ಲೈನ್ ಕಂಪನಿಗಳಲ್ಲಿ ಶಂಖ್ ಏರ್ (Shankh Air) ಒಂದು. ಇದರ ಸ್ಥಾಪನೆ ಹಾಗೂ ಸ್ಥಾಪಕನ ಹಿಂದಿನ ಕಥೆ ನಿಜಕ್ಕೂ ರೋಚಕ. ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಮಾದರಿ ಶ್ರವಣ್ ಕುಮಾರ್ ವಿಶ್ವಕರ್ಮ (Shravan Kumar Vishwakarma). ಉತ್ತರಪ್ರದೇಶದ ಈ ವ್ಯಕ್ತಿ ಒಂದು ಕಾಲದಲ್ಲಿ ಕಾನಪುರ್​ನ ಬೀದಿಗಳಲ್ಲಿ ಟೆಂಪೋ ಡ್ರೈವರ್ ಆಗಿ ಜೀವನ ನಿರ್ವಹಣೆ ಮಾಡುತ್ತಿದ್ದವ. ಇವತ್ತು ವಿಮಾನ ಕಂಪನಿಯ ಮಾಲೀಕನಾಗಿ ಬೆಳೆದಿದ್ದಾರೆ. ಶಂಖ್ ಏರ್ ಶೀಘ್ರದಲ್ಲೇ ವಿಮಾನಗಳ ಹಾರಾಟ ನಡೆಸಲಿದೆ.

ಶ್ರವಣ್ ಕುಮಾರ್ ವಿಶ್ವಕರ್ಮ ಹೆಚ್ಚು ಓದಲಿಲ್ಲ. ಆಟೊರಿಕ್ಷಾ ಓಡಿಸುತ್ತಿದ್ದರು. ಟೆಂಪೋ ಇಟ್ಟುಕೊಂಡು ಕೆಲ ಬ್ಯುಸಿನೆಸ್​ಗಳಿಗೆ ವಿಫಲ ಯತ್ನ ಮಾಡಿದರು. ಆದರೆ, ಹತಾಶರಾಗಲಿಲ್ಲ. 2014ರಲ್ಲಿ ಸಿಮೆಂಟ್ ಬ್ಯುಸಿನೆಸ್​ಗೆ ಇಳಿದಾಗ ವಿಶ್ವಾಸ ಸಿಕ್ಕಿತು. ಟಿಎಂಟಿ ರೀಬಾರ್ ಉದ್ಯಮ ಕೈಹಿಡಿಯಿತು. ಸಿಮೆಂಟ್, ಮೈನಿಂಗ್ ಮತ್ತು ಟ್ರಾನ್ಸ್​ಪೋರ್ಟ್ ಸೆಕ್ಟರ್​ನಲ್ಲಿ ಬ್ಯುಸಿನೆಸ್ ಬೆಳೆಸಿದರು. ಹಲವು ಟ್ರಕ್​ಗಳನ್ನು ಖರೀದಿಸಿದರು. ಈ ಹಂತದಲ್ಲೇ ಅವರಿಗೆ ಭವಿಷ್ಯದ ಯೋಜನೆಗಳು ಮನಸ್ಸಿಗೆ ಬಂದವು. ಅಂಥ ಒಂದು ಆಲೋಚನೆಯ ಕುಡಿಯೇ ಶಂಖ್ ಏರ್.

ಇದನ್ನೂ ಓದಿ: ಬರಲಿವೆ ಹೊಸ ಏರ್ಲೈನ್ಸ್; ಶಂಖ್ ಏರ್ ಆಯ್ತು, ಈಗ ಅಲ್ ಹಿಂದ್ ಏರ್ ಮತ್ತು ಫ್ಲೈ ಎಕ್ಸ್​ಪ್ರೆಸ್​ಗೂ ಸಿಕ್ಕಿತು ಎನ್​ಒಸಿ

ನಾಲ್ಕು ವರ್ಷದ ಹಿಂದೆ, ಟ್ರಕ್​ನಂತೆ ವಿಮಾನಗಳನ್ನೂ ಓಡಿಸಬೇಕೆಂಬ ಆಲೋಚನೆ ವಿಶ್ವಕರ್ಮರ ತಲೆಯಲ್ಲಿ ಮೊದಲಿಟ್ಟಿತು. ಅಷ್ಟಕ್ಕೇ ಅದು ನಿಲ್ಲಲಿಲ್ಲ. ವಿಮಾನ ಸಂಸ್ಥೆ ಕಟ್ಟಲು ಏನು ಬೇಕು, ಆ ಉದ್ಯಮ ಹೇಗೆ ಕೆಲಸ ಮಾಡುತ್ತೆ ಎಂಬುದನ್ನು ಅರಿಯಲು ಯತ್ನಿಸಿದರು. ತಮ್ಮ ಟ್ರಾನ್ಸ್​ಪೋರ್ಟ್ ಬ್ಯುಸಿನೆಸ್​ನಲ್ಲಿ ವಿಮಾನದ ಸೇವೆಯನ್ನೂ ನಡೆಸಿ ಅನುಭವ ಇದ್ದ ಕಾರಣ ಶಂಖ್ ಏರ್​ಗೆ ಸರ್ಕಾರದಿಂದ ಎನ್​ಒಸಿ ಕೂಡ ಸಿಕ್ಕಿತು.

ಬಸ್, ಟೆಂಪೋದಂತೆ ವಿಮಾನವೂ ಕೂಡ ಒಂದು ಸಾರಿಗೆ ವಾಹನ ಎನ್ನುವ ವಿಶ್ವಕರ್ಮ

ವಿಮಾನಗಳ ಬಗ್ಗೆ ಶ್ರವಣಕುಮಾರ್ ವಿಶ್ವಕರ್ಮ ಅವರಿಗಿರುವ ಧೋರಣೆ ಗಮನಾರ್ಹ ಎನಿಸುತ್ತದೆ. ಅವರ ಪ್ರಕಾರ ವಿಮಾನ ಎಂಬುದು ಬಸ್ ಅಥವಾ ಟೆಂಪೋ ರೀತಿಯಲ್ಲೇ ಒಂದು ಸಾರಿಗೆ ವಾಹನ ಮಾತ್ರ. ಅದನ್ನು ಬೇರೆ ರೀತಿಯಲ್ಲಿ ನೋಡಬಾರದು ಎಂದು ಶಂಖ್ ಏರ್​ನ ಛೇರ್ಮನ್ ಆಗಿರುವ ಅವರು ಹೇಳುತ್ತಾರೆ.

ಇದನ್ನೂ ಓದಿ: ರಿಸರ್ಚ್ ಅನಾಲಿಸ್ಟ್ ಲೈಸೆನ್ಸ್ ಪಡೆದು, ಯಾರಿಗೋ ಪಾಸ್ವರ್ಡ್ ಕೊಟ್ಟು, ದಿನಸಿ ಅಂಗಡಿ ನಡೆಸುತ್ತಿದ್ದ ವ್ಯಕ್ತಿ

ಶಂಖ್ ಏರ್ ಇದೇ ಜನವರಿ ತಿಂಗಳಲ್ಲಿ ಕಾರ್ಯಾಚರಣೆಗೆ ಇಳಿಯುತ್ತದೆ. ಆರಂಭದಲ್ಲಿ ಏರ್​ಬಸ್​ನ ಮೂರು ವಿಮಾನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಲಕ್ನೋ, ಮುಂಬೈ, ದೆಹಲಿ ಮತ್ತಿತರ ಕೆಲ ನಗರಗಳಿಗೆ ಇವರ ವಿಮಾನಗಳ ಹಾರಾಟ ನಡೆಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗುವಾಹಟಿ-ಕೊಲ್ಕತ್ತಾ ಮಾರ್ಗದಲ್ಲಿ ಶೀಘ್ರದಲ್ಲೇ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ – Kannada News | New Vande Bharat sleeper train to To Run on Guwahati Kolkata Route it has advanced safety system, world class coaches

ನವದೆಹಲಿ, ಜನವರಿ 1: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Train) ಗುವಾಹಟಿ-ಕೊಲ್ಕತ್ತಾ ಮಾರ್ಗದಲ್ಲಿ ಸಂಚಾರ ನಡೆಸಲಿದ್ದು, ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ. ಕೊಲ್ಕತ್ತಾದಿಂದ ಗುವಾಹಟಿಗೆ ಹೋಗುವ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಮುಂದಿನ 15-20 ದಿನಗಳಲ್ಲಿ ಅಂದರೆ ಜನವರಿ 18 ಅಥವಾ 19ರ ಸುಮಾರಿಗೆ ವಂದೇ ಭಾರತ್ ಸ್ಲೀಪರ್ ರೈಲಿನ ಉದ್ಘಾಟನೆ ನಡೆಯುವ ನಿರೀಕ್ಷೆಯಿದೆ ಎಂದು ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹೊಸ ಸ್ಲೀಪರ್ ರೈಲಿನ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದೆ.

“ಬಹಳ ದಿನಗಳಿಂದ ಹೊಸ ಪೀಳಿಗೆಯ ರೈಲುಗಳಿಗೆ ಬೇಡಿಕೆ ಹೆಚ್ಚಾಗಿದೆ. ವಂದೇ ಭಾರತ್ ಚೇರ್ ಕಾರ್ ಭಾರತೀಯ ರೈಲ್ವೆಯಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದೆ. ಜನರು ಇದನ್ನು ತುಂಬಾ ಇಷ್ಟಪಡಲು ಪ್ರಾರಂಭಿಸಿದ್ದಾರೆ. ವಂದೇ ಭಾರತ್ ರೈಲುಗಳನ್ನು ಓಡಿಸಲು ದೇಶದ ಮೂಲೆ ಮೂಲೆಗಳಿಂದ ಬೇಡಿಕೆಗಳು ಬರುತ್ತಿವೆ” ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲಿಗೆ ಮುಗಿಬೀಳ್ತಿದ್ದಾರೆ ಪ್ರಯಾಣಿಕರು! ಒಂದೇ ತಿಂಗಳಲ್ಲಿ 55 ಸಾವಿರ ಮಂದಿ ಸಂಚಾರ

ಹೊಸ ದರಗಳ ಪ್ರಕಾರ, 3ನೇ ಎಸಿ ಕೋಚ್‌ಗಳ ದರ ಆಹಾರ ಸೇರಿದಂತೆ 2,300 ರೂ., 2ನೇ ಎಸಿ ದರ 3,000 ರೂ. ಮತ್ತು 3ಡಿಡಿ ಎಸಿ ಕೋಚ್‌ಗಳ ದರ 3,600 ರೂ. ಆಗಿರುತ್ತದೆ. ಈ ಎಲ್ಲಾ ದರಗಳು ಆಹಾರವನ್ನು ಒಳಗೊಂಡಿರುತ್ತವೆ. “ಇದರ ಪ್ರಯಾಣ ದರವನ್ನು ವಿಮಾನದ ದರಕ್ಕಿಂತ ಕಡಿಮೆ ಇರಿಸಲಾಗಿದೆ. ಗುವಾಹಟಿಯಿಂದ ಹೌರಾಗೆ ವಿಮಾನ ದರ ಸಾಮಾನ್ಯವಾಗಿ 6,000 ರೂ.ನಿಂದ 8,000 ರೂ.ವರೆಗೆ ಇರುತ್ತದೆ. ವಂದೇ ಭಾರತ್ ರೈಲಿನಲ್ಲಿ 3ನೇ ಎಸಿ ದರವು ಊಟ ಸೇರಿದಂತೆ ಸುಮಾರು 2,300 ರೂ. ಇರಲಿದೆ. 2ನೇ ಎಸಿಗೆ ಸುಮಾರು 3,000 ರೂ. ಮತ್ತು 1ನೇ ಎಸಿಗೆ ಸುಮಾರು 3,600 ರೂ. ಆಗಿರುತ್ತದೆ. ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಈ ದರಗಳನ್ನು ನಿಗದಿಪಡಿಸಲಾಗಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

“ವಂದೇ ಭಾರತ್ ಸ್ಲೀಪರ್ ರೈಲನ್ನು ಸಾವಿರ ಕಿಲೋಮೀಟರ್‌ಗಳಿಗೂ ಹೆಚ್ಚಿನ ದೂರದ ಪ್ರಯಾಣವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಈ ರೈಲು ದೂರದ ಪ್ರಯಾಣಿಕರಿಗೆ ವೇಗದ, ಆರಾಮದಾಯಕ ಮತ್ತು ಆಧುನಿಕ ಪ್ರಯಾಣದ ಅನುಭವವನ್ನು ನೀಡುತ್ತದೆ. ವಂದೇ ಭಾರತ್ ಸ್ಲೀಪರ್ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು, ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆ ಮತ್ತು ರಾತ್ರಿ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ವಿಶ್ವ ದರ್ಜೆಯ ಸ್ಲೀಪರ್ ಕೋಚ್‌ಗಳನ್ನು ಹೊಂದಿದೆ” ಎಂದು ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​​ ನೀಡಿದ ಕೇಂದ್ರ, ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಸಿದ್ಧ

ಈ ವಂದೇ ಭಾರತ್ ಸ್ಲೀಪರ್ ರೈಲಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ವಾರಾಂತ್ಯದೊಳಗೆ ನೀಡಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದರು. ಮೊದಲ ಹಂತವಾಗಿ ಎರಡು ಸ್ಲೀಪರ್ ರೈಲುಗಳನ್ನು ಪ್ರಾರಂಭಿಸಲಾಗುವುದು. ಇವು ಎರಡೂ ಕಡೆಯಿಂದ ಕಾರ್ಯನಿರ್ವಹಿಸುತ್ತವೆ. ಪ್ರಯಾಣವು ರಾತ್ರಿಯದ್ದಾಗಿರುತ್ತದೆ. ರೈಲಿನಲ್ಲಿ ರಾತ್ರಿ ಭೋಜನ ಮತ್ತು ಬೆಳಿಗ್ಗೆ ಚಹಾವನ್ನು ನೀಡಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ ಮಿಸ್​​ – Kannada News | Drunk Driver Rams Car Into Multiple Pedestrians near Mall of Asia in Bengaluru

ದೇವನಹಳ್ಳಿ, ಜನವರಿ 01: ಹೊಸ ವರ್ಷದ ಹಿನ್ನಲೆ ಕಂಠ ಪೂರ್ತಿ ಕುಡಿದ ಕಾರು ಚಾಲಕನೊಬ್ಬ ಮದ್ಯದ ಅಮಲಿನಲ್ಲಿ ಪಾದಚಾರಿಗಳ ಮೇಲೆ ಕಾರು ಹರಿಸಿರುವ ಘಟನೆ ಬೆಂಗಳೂರಿನ ಸಹಕಾರ ನಗರದಲ್ಲಿರುವ ಮಾಲ್ ಆಫ್​​ ಏಷ್ಯಾದ ಗೇಟ್ ನಂ.3ರಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ವೇಳೆ ಅದೃಷ್ಟವಶಾತ್​​ ಕೂದಲೆಳೆ ಅಂತರದಲ್ಲಿ ಬಾಲಕಿ ಬಚಾವ್​​ ಆಗಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಚಾಲಕ ಮದ್ಯದಮಲಿನಲ್ಲಿದ್ದ ಹಿನ್ನೆಲೆ ಮಾಲ್​ನಿಂದ ಹೊರಗೆ ಬರುವಾಗ ಕಾರು ನಿಯಂತ್ರಣ ತಪ್ಪಿದೆ. ಹೀಗಾಗಿ ಫುಟ್‌ಪಾತ್​​ಗೆ ಕಾರು ನುಗ್ಗಿದ ಪರಿಣಾಮ 7 ಜನರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಕಾರು‌ ಚಾಲಕ ಸುನೀಲ್ ಕುಮಾರ್ ಸಿಂಗ್ ಮತ್ತು ಮಾಲ್ ಆಫ್​​ ಏಷ್ಯಾ ಆಡಳಿತ ಮಂಡಳಿ ವಿರುದ್ಧ ಸಂಜಯ್​​ನಗರ ಸಂಚಾರಿ ಠಾಣೆ ಪೊಲೀಸರು ಸುಮೋಟೋ ಕೇಸ್​ ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

T20 World Cup 2026: ಟಿ20 ವಿಶ್ವಕಪ್​ಗೆ 6 ತಂಡಗಳು ಪ್ರಕಟ

Source link

ನಟನೆ ಆರಂಭಿಸಿದ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ – Kannada News | AR Rahman acting in a movie with Prabhudeva

ಎಆರ್ ರೆಹಮಾನ್ (AR Rahman), ಭಾರತ ಚಿತ್ರರಂಗದ ಲೆಜೆಂಡರಿ ಸಂಗೀತ ನಿರ್ದೇಶಕ. ಕಳೆದ ಕೆಲವು ದಶಕಗಳಿಂದಲೂ ಸಂಗೀತ ಕ್ಷೇತ್ರದಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಎಆರ್ ರೆಹಮಾನ್. ಹಲವಾರು ಹೊಸ ಸಂಗೀತ ನಿರ್ದೇಶಕರು ಬಂದು ಹೋದರೂ ಸಹ ರೆಹಮಾನ್ ಸಂಗೀತ ಇಂದಿಗೂ ಸೂಪರ್ ಹಿಟ್ ಆಗುತ್ತಿದೆ. ಭಾರತದ ಸಿನಿಮಾಗಳು ಮಾತ್ರವೇ ಅಲ್ಲದೆ ಹಾಲಿವುಡ್​​ನಲ್ಲೂ ಬೇಡಿಕೆ ಹೊಂದಿದ್ದಾರೆ ಎಆರ್ ರೆಹಮಾನ್. ಸಂಗೀತ ಕ್ಷೇತ್ರದಲ್ಲಿ ಬಹಳ ಬ್ಯುಸಿ ಆಗಿರುವ ಹೊತ್ತಿನಲ್ಲಿಯೇ ರೆಹಮಾನ್, ನಟನೆಯನ್ನೂ ಆರಂಭಿಸಿದ್ದಾರೆ.

ರೆಹಮಾನ್ ಅವರು ಈ ಹಿಂದೆ ಕೆಲವು ಆಲ್ಬಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ, ಕೆಲವು ಹಾಡುಗಳಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ಕೆಲವು ಯೂಟ್ಯೂಬ್ ವಿಡಿಯೋಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ ಆದರೆ ಎಂದೂ ಸಹ ಪೂರ್ಣ ಪ್ರಮಾಣದ ಪಾತ್ರದಲ್ಲಿ ನಟಿಸಿದ್ದೇ ಇಲ್ಲ. ಆದರೆ ಇದೀಗ ಎಆರ್ ರೆಹಮಾನ್ ಅವರು ಮೊದಲ ಬಾರಿಗೆ ಸಿನಿಮಾ ಪಾತ್ರವೊಂದರಲ್ಲಿ ನಟಿಸಲು ಮುಂದಾಗಿದ್ದಾರೆ. ರೆಹಮಾನ್ ಅವರ ಈ ಸಾಹಸ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಎಆರ್ ರೆಹಮಾನ್ ಅವರು ತಮಿಳಿನ ‘ಮೂನ್ ವಾಕ್’ ಹೆಸರಿನ ಸಿನಿಮಾದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ‘ಮೂನ್ ವಾಕ್’ ಸಿನಿಮಾದ ನಾಯಕ ಖ್ಯಾತ ನಟ ಪ್ರಭುದೇವ. ಎಆರ್ ರೆಹಮಾನ್ ಮತ್ತು ಪ್ರಭುದೇವ ಬಹಳ ಒಳ್ಳೆಯ ಗೆಳೆಯರು. ಇದೇ ಸಲುಗೆಯ ಕಾರಣಕ್ಕೆ ರೆಹಮಾನ್ ಅವರು ಮೊದಲ ಬಾರಿಗೆ ಸಿನಿಮಾನಲ್ಲಿ ಪಾತ್ರವೊಂದರಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಮನೋಜ್ ಎನ್​​ಎಸ್ ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಬಿಹೈಂದ್ ವೂಡ್ಸ್ ನಿರ್ಮಾಣ ಸಂಸ್ಥೆ ಸಿನಿಮಾದ ನಿರ್ಮಾಣ ಮಾಡಲಿದೆ.

ಇದನ್ನೂ ಓದಿ:ಮೈಸೂರು ಮೋಹನ್ ಸಂಗೀತ, ಹಿಮಾ ಎಂ. ಕಂಠದಲ್ಲಿ ಹೊಸ ವರ್ಷದ ಸಾಂಗ್

‘ಮೂನ್​ವಾಕ್’ ಹೆಸರೇ ಸೂಚಿಸುತ್ತಿರುವ ನೃತ್ಯದ ವಿಷಯ ಹೊಂದಿರುವ ಹಾಸ್ಯ ಪ್ರಧಾನ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಎಆರ್ ರೆಹಮಾನ್ ಕೋಪಿಷ್ಟ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ನಟಿಸಲಿದ್ದಾರೆ. ‘ಮೂನ್​​ವಾಕ್’ ಸಿನಿಮಾನಲ್ಲಿ ಎಆರ್ ರೆಹಮಾನ್ ನಿರ್ವಹಿಸುತ್ತಿರುವ ಪಾತ್ರದ ಹೆಸರೂ ಸಹ ಎಆರ್ ರೆಹಮಾನ್ ಆಗಿರಲಿದೆ. ಆದರೆ ಅಲ್ಲಿ ಅವರದ್ದು ಸಿನಿಮಾ ನಿರ್ದೇಶಕನ ಪಾತ್ರ. ಅದು ಮಾತ್ರವೇ ಅಲ್ಲದೆ, ‘ಮೂನ್​​ವಾಕ್’ ಸಿನಿಮಾದ ಎಲ್ಲ ಐದೂ ಹಾಡುಗಳನ್ನು ರೆಹಮಾನ್ ಅವರೇ ಹಾಡಿರುವುದು ಮತ್ತೊಂದು ವಿಶೇಷ. ಈ ಹಿಂದೆ ಪೂರ್ಣ ಸಿನಿಮಾ ಆಲ್ಬಂನಲ್ಲಿ ರೆಹಮಾನ್ ಒಬ್ಬರೇ ಹಾಡಿದ್ದೇ ಇಲ್ಲ.

ಸಿನಿಮಾದ ಹಲವು ದೃಶ್ಯಗಳ ಚಿತ್ರೀಕರಣವನ್ನು ರೆಹಮಾನ್ ಅವರು ಈಗಾಗಲೇ ಮುಗಿಸಿದ್ದಾರೆ. ಇನ್ನು ಕೆಲವು ದೃಶ್ಯಗಳಷ್ಟೆ ಬಾಕಿ ಇವೆಯಂತೆ. ಸಿನಿಮಾ ನಟನೆಯನ್ನು ಬಹಳ ಎಂಜಾಯ್ ಮಾಡಿರುವುದಾಗಿ ರೆಹಮಾನ್ ಹೇಳಿಕೊಂಡಿದ್ದಾರೆ. ರೆಹಮಾನ್ ಅವರು ಸಂಗೀತ ನೀಡಿರುವ ‘ಪೆದ್ದಿ’ ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿವೆ. ಇದರ ಜೊತೆಗೆ ರೆಹಮಾನ್ ‘ರಾಮಾಯಣ’ ಸಿನಿಮಾಕ್ಕೂ ಸಂಗೀತ ನೀಡುತ್ತಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link