ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸುಂಕದಲ್ಲಿ ಭರ್ಜರಿ ಹೆಚ್ಚಳ; ಡೀಸಲ್ಗೆ 55.5 ರೂ, ಎಟಿಎಫ್ಗೆ 42 ರೂ ಸುಂಕ
ನವದೆಹಲಿ, ಏಪ್ರಿಲ್ 12: ಕೆಲ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ರಫ್ತು ಸುಂಕವನ್ನು (Exports Duty) ಗಣನೀಯವಾಗಿ ಹೆಚ್ಚಿಸಿದೆ. ಆಂತರಿಕವಾಗಿ ಈ ಇಂಧನ ಲಭ್ಯತೆ ಕಡಿಮೆ ಆಗದಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ಸುಂಕ ಹೆಚ್ಚಿದೆ. ಅಚ್ಚರಿ ಎಂಬಂತೆ ಪೆಟ್ರೋಲ್ ಮೇಲೆ ಯಾವುದೇ ರಫ್ತು ಸುಂಕ ಹಾಕಲಾಗಿಲ್ಲ. ಡೀಸಲ್ ಮೇಲಿನ ರಫ್ತು ಸುಂಕವನ್ನು ಲೀಟರ್ಗೆ 34 ರೂಗಳಷ್ಟು ಏರಿಸಲಾಗಿದೆ. 21.5 ರೂ ಇದ್ದ ಇದರ ರಫ್ತು ಸುಂಕವನ್ನು 55.5…