ಮೈದಾನಕ್ಕಿಳಿಯದಿದ್ದರೂ ನಿತೀಶ್ ರಾಣಾಗೆ ಬಿತ್ತು ಭಾರೀ ದಂಡ..!

ಮೈದಾನಕ್ಕಿಳಿಯದಿದ್ದರೂ ನಿತೀಶ್ ರಾಣಾಗೆ ಬಿತ್ತು ಭಾರೀ ದಂಡ..!

IPL 2026: ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಆಟಗಾರ ನಿತೀಶ್ ರಾಣಾ (Nitish Rana) ಅವರು ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪಂದ್ಯದ ಸಂಭಾವನೆಯ ಶೇಕಡಾ 25ರಷ್ಟು ದಂಡಕ್ಕೆ ಗುರಿಯಾಗಿದ್ದಾರೆ. ಇದರೊಂದಿಗೆ ಅವರಿಗೆ ಒಂದು ‘ಡಿಮೆರಿಟ್’ ಪಾಯಿಂಟ್ ಕೂಡ ನೀಡಲಾಗಿದೆ. ಕುತೂಹಲಕಾರಿ ವಿಷಯ ಎಂದರೆ ಈ ಪಂದ್ಯದಲ್ಲಿ ನಿತೀಶ್ ರಾಣಾ ಕಣಕ್ಕಿಳಿದಿರಲಿಲ್ಲ ಎಂಬುದು.

ಏಪ್ರಿಲ್ 11, 2026 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ವೇಳೆ ನಿತೀಶ್ ರಾಣಾ ಲೈನ್ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು.

ಪಂದ್ಯದ ವೇಳೆ ಡೆಲ್ಲಿ ಬ್ಯಾಟರ್ ಟ್ರಿಸ್ಟನ್ ಸ್ಟಬ್ಸ್ ಅವರ ಗ್ಲೌಸ್ ಬದಲಾಯಿಸಲು ಮಾಡಿದ ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರು. ಈ ಸಂದರ್ಭದಲ್ಲಿ ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್ ಆಗಿದ್ದ ನಿತೀಶ್ ರಾಣಾ, ಮೈದಾನದ ಹೊರಗಿನಿಂದ ನಾಲ್ಕನೇ ಅಂಪೈರ್ ಜೊತೆ ತೀವ್ರ ವಾಗ್ವಾದಕ್ಕಿಳಿದರು.

ಈ ವೇಳೆ ಅವರು ಅಸಭ್ಯ ಪದಗಳನ್ನು ಬಳಸಿದ್ದಾರೆ ಎಂಬುದು ಸಾಬೀತಾಗಿದೆ. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3 ರ ಅಡಿಯಲ್ಲಿ ‘ಲೆವೆಲ್ 1’ ಅಪರಾಧವೆಂದು ಪರಿಗಣಿಸಲಾಗಿದೆ.

ಶಿಕ್ಷೆಯ ಪ್ರಮಾಣ:

ನಿತೀಶ್ ರಾಣಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಅಂಗೀಕರಿಸಿದ್ದಾರೆ. ಹೀಗಾಗಿ ಈ ನಿರ್ಧಾರವೇ ಅಂತಿಮವಾಗಿದೆ. ಅದರಂತೆ ಇದೀಗ ನಿತೀಶ್ ರಾಣಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ.

ಇನ್ನು ಈ ಪಂದ್ಯದಲ್ಲಿ ಕೇವಲ ರಾಣಾಗೆ ಮಾತ್ರವಲ್ಲದೆ, ನಿಧಾನಗತಿಯ ಓವರ್ ರೇಟ್ ಕಾರಣಕ್ಕಾಗಿ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರಿಗೂ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ದಂಡದ ಮೊತ್ತ ಎಷ್ಟು?

ನಿತೀಶ್ ರಾಣಾ ಅವರಿಗೆ ವಿಧಿಸಲಾದ ಶೇ. 25ರಷ್ಟು ದಂಡದ ಅಂದಾಜು ಮೊತ್ತ ₹7.5 ಲಕ್ಷ ರೂ.  ಐಪಿಎಲ್ ನಿಯಮಗಳ ಪ್ರಕಾರ ಆಟಗಾರರ ದಂಡವನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ…

  • ನಿತೀಶ್ ರಾಣಾ ಅವರ ಒಟ್ಟು ಸಂಭಾವನೆ: ಐಪಿಎಲ್ 2026ರ ಸೀಸನ್‌ಗಾಗಿ ನಿತೀಶ್ ರಾಣಾ ಅವರ ಸಂಭಾವನೆ ₹4.20 ಕೋಟಿ.
  • ಪ್ರತಿ ಪಂದ್ಯದ ಸಂಭಾವನೆ: ಐಪಿಎಲ್‌ನ ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳಿರುತ್ತವೆ. ಆದ್ದರಿಂದ ಒಂದು ಪಂದ್ಯದ ಸಂಭಾವನೆಯು ₹4.20 ಕೋಟಿ / 14 = ₹30 ಲಕ್ಷ ಆಗುತ್ತದೆ.
  • ದಂಡದ ಲೆಕ್ಕಾಚಾರ: ಈ ₹30 ಲಕ್ಷದ ಶೇ. 25ರಷ್ಟು ಅಂದರೆ (30,00,000 * 0.25) = ₹7,50,000.

ಇದನ್ನೂ ಓದಿ: VIDEO: ಚೆನ್ನೈನಲ್ಲಿ ಹೈಡ್ರಾಮಾ: ಅಂಪೈರ್​ ಜೊತೆ ನಿತೀಶ್ ರಾಣಾ ವಾಗ್ವಾದ!

ಒಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯದೇ ಇದೀಗ ನಿತೀಶ್ ರಾಣಾ ದಂಡದ ಶಿಕ್ದೆಗೆ ಗುರಿಯಾಗಿ ಸುದ್ದಿಯಾಗಿದ್ದಾರೆ.

Source link

Leave a Reply

Your email address will not be published. Required fields are marked *