ನನ್ನಿಂದ ಅಂತಾ ತಪ್ಪು ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್
ಬೆಂಗಳೂರು, ಏಪ್ರಿಲ್ 11: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದಾವಣಗೆರೆ ಕಾಂಗ್ರೆಸ್ (congress) ಅಭ್ಯರ್ಥಿ ಸಮರ್ಥ್ ವಿರುದ್ಧ ಷಡ್ಯಂತ್ರ ಆರೋಪ ಸಂಬಂಧ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ. ಪಕ್ಷ ವಿರೋಧ ಚಟುವಟಿಕೆಯಲ್ಲಿ ಭಾಗಿ ಆರೋಪ ಸಂಬಂಧ ಹೈಕಮಾಂಡ್ ಕೈಗೆ ವರದಿ ತಲುಪುತ್ತಿದ್ದಂತೆ ಖಡಕ್ ಆಗಿ ರಾಜೀನಾಮೆ ಕೊಡಿ ಅಂತಾ ಎಐಸಿಸಿ ಸೂಚನೆ ಕೊಟ್ಟಿದೆ. ಅದರಂತೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್ (Abdul Jabbar) ರಾಜೀನಾಮೆ ಕೊಟ್ಟಿದ್ದಾರೆ. ನನ್ನಿಂದ ಅಂತಾ ತಪ್ಪು…