All posts by nagaraj11081993

ನನ್ನಿಂದ ಅಂತಾ ತಪ್ಪು‌ ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್

ನನ್ನಿಂದ ಅಂತಾ ತಪ್ಪು‌ ಏನಾಗಿದೆ? ರಾಜೀನಾಮೆ ಬೆನ್ನಲ್ಲೇ ಗುಡುಗಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್

ಬೆಂಗಳೂರು, ಏಪ್ರಿಲ್ 11: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದಾವಣಗೆರೆ ಕಾಂಗ್ರೆಸ್ (congress) ಅಭ್ಯರ್ಥಿ ಸಮರ್ಥ್​​ ವಿರುದ್ಧ ಷಡ್ಯಂತ್ರ ಆರೋಪ ಸಂಬಂಧ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಿದೆ. ಪಕ್ಷ ವಿರೋಧ ಚಟುವಟಿಕೆಯಲ್ಲಿ ಭಾಗಿ ಆರೋಪ ಸಂಬಂಧ ಹೈಕಮಾಂಡ್​ ಕೈಗೆ ವರದಿ ತಲುಪುತ್ತಿದ್ದಂತೆ ಖಡಕ್ ಆಗಿ ರಾಜೀನಾಮೆ ಕೊಡಿ ಅಂತಾ ಎಐಸಿಸಿ ಸೂಚನೆ ಕೊಟ್ಟಿದೆ. ಅದರಂತೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್ (Abdul Jabbar) ರಾಜೀನಾಮೆ ಕೊಟ್ಟಿದ್ದಾರೆ.

ನನ್ನಿಂದ ಅಂತಾ ತಪ್ಪು‌ ಏನಾಗಿದೆ: ಅಬ್ದುಲ್‌ ಜಬ್ಬಾರ್

ಬೆಂಗಳೂರಿನಲ್ಲಿ ಟಿವಿ9ಗೆ ಕಾಂಗ್ರೆಸ್ ಮುಖಂಡ ಅಬ್ದುಲ್‌ ಜಬ್ಬಾರ್​​ ಪ್ರತಿಕ್ರಿಯಿಸಿದ್ದು, ಏಪ್ರಿಲ್‌ 3ರಂದೇ KPCC ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ. ಪಕ್ಷದ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧ. ನನ್ನಿಂದ ಅಂತಾ ತಪ್ಪು‌ ಏನಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಈ ತಕ್ಷಣವೇ ರಾಜೀನಾಮೆ ನೀಡಿ: ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್‌ಗೆ ಸೂಚನೆ! ಮುಂದಿನ ತಲೆದಂಡ ಸಚಿವ ಜಮೀರ್?

ಅತಿ ಬುದ್ಧಿವಂತಿಕೆ ಒಳ್ಳೆಯದಲ್ಲ. ಬೀಳಿಸಿ ಕಾಲು ಎಳೆಯುವ ಕೆಲಸ ಬೇಡ. ಹೈಕಮಾಂಡ್ ಹುದ್ದೆ ಕೊಟ್ಟಿತ್ತು, ಅರ್ಹತೆ ಇಲ್ಲದೆ ಏಕೆ ಕೊಡುತ್ತಾರೆಂದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಬಿಟ್ಟು ನಾನು ಬೇರೆ ಪಕ್ಷದ ಕಡೆ ಯೋಚನೆ ಮಾಡಲ್ಲ. ಪಕ್ಷದಲ್ಲಿ ನ್ಯಾಯ ನೀತಿ‌ ಇತ್ತು, ಅದನ್ನ ಮುಂದುವರಿಸಿ ಹೋಗಬೇಕು. ಸಮುದಾಯಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನ ವಿರೋಧ ಮಾಡುವುದಕ್ಕೆ ಆಗಲ್ಲ. ಇನ್ನು ಅವರು ಸಚಿವ ಸ್ಥಾನಕ್ಕಾಗಿಯೇ ಒಡಕು ಮೂಡಿಸುತ್ತಿದ್ದಾರೆ. ನನಗೆ ಸಚಿವ ಸ್ಥಾನ ಕೊಡಿ ಅಂತಾ ಕೇಳಿಲ್ಲ. ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಕೊಡಿ ಅಂತಾ ಪತ್ರದಲ್ಲಿ ಬರೆದಿದ್ದೇವೆ ಎಂದು ಹೇಳಿದ್ದಾರೆ.

ಅದನ್ನ ಪ್ರಶ್ನಿಸಿದ್ದೇ ತಪ್ಪಾ?

ಇನ್ನು ಬೈಎಲೆಕ್ಷನ್ ಸಂಬಂಧ ಯಾವೊಬ್ಬ ನಾಯಕರೂ ನನ್ನ ಜತೆ ಚರ್ಚಿಸಿಲ್ಲ. ನನ್ನ ಬಿಟ್ಟು ಚುನಾವಣೆಗೆ ಹೋಗಿದ್ದಾರೆ, ಆದರೂ ಗೆಲ್ಲಲಿ ಅಂತಾ ಹಾರೈಸುವೆ. ಕುರುಬ ಸಮುದಾಯ ಸೇರಿ ಬೇರೆಯವರಿಗೆ ಟಿಕೆಟ್ ಕೊಡಿ ಅಂದಿದ್ದೆ. ಒಂದೇ ಮನೆಯಲ್ಲಿ ನಾಲ್ವರಿಗೆ ಟಿಕೆಟ್ ಕೊಟ್ಟರೆ ಹೇಗೆ? ಅದನ್ನ ಪ್ರಶ್ನಿಸಿದ್ದೇ ತಪ್ಪಾ? ಸಚಿವ ಜಮೀರ್ ಬಂದ್ಮೇಲೆ ಶೇ.50ರಷ್ಟು ವಿರೋಧ ಕಡಿಮೆಯಾಗಿತ್ತು. ಯಾವ ನಾಯಕರೂ ಸ್ಪಷ್ಟೀಕರಣ ಕೇಳಿಲ್ಲ ಎಂದು ಅಬ್ದುಲ್‌ ಜಬ್ಬಾರ್ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

SECL Recruitment 2026: ಕೋಲ್ ಇಂಡಿಯಾ ಲಿಮಿಟೆಡ್ ನೇಮಕಾತಿ; 1055 ಹುದ್ದೆಗಳಿಗೆ ಅರ್ಜಿ ಆಹ್ವಾನ; 47,330ರೂ. ಆರಂಭಿಕ ವೇತನ!

ಕೇಂದ್ರ ಕಲ್ಲಿದ್ದಲು ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ, ಛತ್ತೀಸ್‌ಗಢದ ಬಿಲಾಸ್‌ಪುರ ಮೂಲದ ಸೌತ್ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (SECL) ಖಾಲಿ ಇರುವ 1055 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಮೈನಿಂಗ್ ಸರ್ದಾರ್ (577), ಸಹಾಯಕ ಫೋರ್‌ಮನ್ (435) ಮತ್ತು ಡೆಪ್ಯೂಟಿ ಸರ್ವೇಯರ್ (43) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 15, ರಿಂದ ಮೇ 14 ರವರೆಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಥವಾ ಪದವಿ ಪಡೆದಿರಬೇಕು. ಇದರೊಂದಿಗೆ ಮೈನಿಂಗ್ ಸರ್‌ಡಾರ್ಶಿಪ್, ಗ್ಯಾಸ್ ಟೆಸ್ಟಿಂಗ್ ಮತ್ತು ಪ್ರಥಮ ಚಿಕಿತ್ಸಾ ಪ್ರಮಾಣಪತ್ರಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷದೊಳಗಿರಬೇಕು; ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಮತ್ತು ವೇತನದ ವಿವರ:

ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು 1180 ರೂಪಾಯಿಗಳ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಎಸ್‌ಸಿ, ಎಸ್‌ಟಿ, ಮಹಿಳೆಯರು ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 47,330 ರೂಪಾಯಿಗಳ ವೇತನದ ಜೊತೆಗೆ ಸರ್ಕಾರದ ನಿಯಮಾವಳಿಯಂತೆ ಇತರ ಎಲ್ಲಾ ಭತ್ಯೆಗಳನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:

ಅಭ್ಯರ್ಥಿಗಳ ಅಂತಿಮ ಆಯ್ಕೆಯು ಸಂಪೂರ್ಣವಾಗಿ ಆನ್‌ಲೈನ್ ಲಿಖಿತ ಪರೀಕ್ಷೆಯ ಮೇಲೆ ಆಧಾರಿತವಾಗಿರುತ್ತದೆ. ಪರೀಕ್ಷೆಯು ಒಟ್ಟು 100 ಅಂಕಗಳ 100 ಪ್ರಶ್ನೆಗಳನ್ನು ಒಳಗೊಂಡಿದ್ದು, ಇದರಲ್ಲಿ ತಾಂತ್ರಿಕ ಜ್ಞಾನಕ್ಕೆ ಸಂಬಂಧಿಸಿದ 80 ಪ್ರಶ್ನೆಗಳು ಮತ್ತು ಸಾಮಾನ್ಯ ಅರಿವು ಹಾಗೂ ಆಪ್ಟಿಟ್ಯೂಡ್‌ಗೆ ಸಂಬಂಧಿಸಿದ 20 ಪ್ರಶ್ನೆಗಳು ಇರುತ್ತವೆ. ಈ ಪರೀಕ್ಷೆಯ ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿ ಯಾವುದೇ ಋಣಾತ್ಮಕ ಅಂಕಗಳು (Negative Marking) ಇರುವುದಿಲ್ಲ, ಇದು ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಡ್ಲೆ ಹಿಟ್ಟು ಹಚ್ಚುವುದರಿಂದ ನಿಜಕ್ಕೂ ಮುಖದ ಗ್ಲೋ ಹೆಚ್ಚುತ್ತದೆಯೇ? ಇಲ್ಲಿದೆ ನೋಡಿ ಅಸಲಿ ಸತ್ಯ

ಹಿಂದಿನ ಕಾಲದಿಂದಲೂ ಸೋಪ್‌ ಬದಲು ಸ್ನಾನಕ್ಕೆ, ತ್ವಚೆಯ ಆರೈಕೆಗಾಗಿ ಕಡ್ಲೆ ಹಿಟ್ಟನ್ನೇ (besan flour) ಬಳಸಲಾಗುತ್ತಿತ್ತು. ಇಂದಿನ ಈ ಮಾಡರ್ನ್‌ ಜಗತ್ತಿನಲ್ಲಿಯೂ ಸಹ ಅನೇಕರು ತ್ವಚೆಯ ಆರೈಕೆಗಾಗಿ ದುಬಾರಿ ಫೇಸ್‌ ಪ್ಯಾಕ್‌, ಕ್ರೀಮ್‌ಗಳ ಬದಲಿಗೆ ಕಡ್ಲೆ ಹಿಟ್ಟನ್ನೇ ಉಪಯೋಗಿಸುತ್ತಿದ್ದಾರೆ.  ಹೌದು ಚರ್ಮವನ್ನು ಸ್ವಚ್ಛವಾಗಿ, ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿಡಲು ಅನೇಕ ಜನರು ಇದನ್ನು ನೈಸರ್ಗಿಕ ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ. ಆದ್ರೆ ಇದು ನಿಜಕ್ಕೂ ಪರಿಣಾಮಕಾರಿಯೇ, ಕಡ್ಲೆ ಹಿಟ್ಟನ್ನು ಅತಿಯಾಗಿ ಮುಖಕ್ಕೆ ಹಚ್ಚುವುದರಿಂದ ಅಡ್ಡಪರಿಣಾಮಗಳನ್ನು ಬೀರಬಹುದೇ? ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವ ಸರಿಯಾದ ವಿಧಾನ ಯಾವುದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ತ್ವಚೆಯ ಆರೈಕೆಗೆ ಕಡ್ಲೆ ಹಿಟ್ಟು ಪ್ರಯೋಜನಕಾರಿಯೇ?

ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವುದರಿಂದ ಅದು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ, ಮುಖದ ರಂಧ್ರಗಳನ್ನು ತೆರೆದು ತ್ವಚೆಯಲ್ಲಿ ಅಂಟಿಕೊಂಡಿರುವ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಕಡಲೆ ಹಿಟ್ಟು ಸೌಮ್ಯವಾದ ಎಫ್ಫೋಲಿಯೇಟಿಂಗ್ ಗುಣಗಳನ್ನು ಹೊಂದಿದ್ದು, ಇದು ಇದು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ ಮತ್ತು ಮುಖವನ್ನು ರಿಫ್ರೆಶ್ ಮಾಡುತ್ತದೆ.

ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವುದರ  ದೊಡ್ಡ ಪ್ರಯೋಜನವೆಂದರೆ ಅದು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ನಿಯಮಿತವಾಗಿ ಕಡ್ಲೆ ಹಿಟ್ಟನ್ನು ಹಚ್ಚುವ ಮೂಲಕ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ಇದಲ್ಲದೆ, ಇದು ಚರ್ಮವನ್ನು ಸ್ವಚ್ಛವಾಗಿಡುವ ಮೂಲಕ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಲೆ ಹಿಟ್ಟನ್ನು ಹಚ್ಚುವುದರಿಂದ ಚರ್ಮಕ್ಕೆ ಸ್ವಲ್ಪ ಹೊಳಪು ಸಿಗುತ್ತದೆ ಮತ್ತು ಮೈಬಣ್ಣ ಸುಧಾರಿಸುತ್ತದೆ.

ತ್ವಚೆಯ ಆರೈಕೆಗೆ ಕಡ್ಲೆ ಹಿಟ್ಟನ್ನು ಬಳಸುವುದರಿಂದಾಗುವ ಅನಾನುಕೂಲಗಳೇನು?

ಕಡಲೆ ಹಿಟ್ಟು ಪ್ರಯೋಜನಗಳನ್ನು ಹೊಂದಿದ್ದರೂ, ಅದರ ತಪ್ಪಾದ ಬಳಕೆಯಿಂದ ತ್ವಚೆಗೆ ಅನಾನುಕೂಲಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹೌದು ನಿಮ್ಮ ಚರ್ಮವು ತುಂಬಾ ಡ್ರೈ ಆಗಿದ್ದು, ನೀವೇನಾದರೂ ಮುಖಕ್ಕೆ ಕಡ್ಲೆ ಹಿಟ್ಟು ಹಚ್ಚಿದರೆ ಅದರಿಂದ ತ್ವಚೆ ಇನ್ನಷ್ಟು ಡ್ರೈ ಆಗಬಹುದು. ಅಲ್ಲದೆ ಇದನ್ನು ಹಚ್ಚುವುದರಿಂದ ಕೆಲವು ಜನರು ಅಲರ್ಜಿಯ ಪ್ರತಿಕ್ರಿಯೆಗಳು ಅಥವಾ ಕಿರಿಕಿರಿಯನ್ನು ಅನುಭವಿಸಬಹುದು. ಇದನ್ನು ನಿಯಮಿತವಾಗಿ ಬಳಸುವುದರಿಂದ, ಅದು ಚರ್ಮದಿಂದ ಅದರ ನೈಸರ್ಗಿಕ ತೇವಾಂಶವನ್ನು ತೆಗೆದುಹಾಕಬಹುದು, ಮತ್ತು ಚರ್ಮವನ್ನು ಮಂದವಾಗಿ ಕಾಣುವಂತೆ ಮಾಡುತ್ತದೆ.

ಇದನ್ನೂ ಓದಿ: ದಾಳಿಂಬೆ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯಲ್ಲೂ ಇವೆ ಸಾಕಷ್ಟು ಪ್ರಯೋಜನ

ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವ ಸರಿಯಾದ ವಿಧಾನ ಯಾವುದು?

ಬರೀ ಕಡ್ಲೆ ಹಿಟ್ಟನ್ನು ನೇರವಾಗಿ ಮುಖಕ್ಕೆ ಹಚ್ಚುವ ಬದಲು, ಅದನ್ನು ಬೇರೆ ಯಾವುದಾದರೂ ವಸ್ತುವಿನೊಂದಿಗೆ ಬೆರೆಸಿ ಮುಖಕ್ಕೆ ಅಪ್ಲೈ ಮಾಡುವುದು ಉತ್ತಮ. ಉದಾಹರಣೆಗೆ, ನೀವು ಮೊಸರು, ಹಾಲು ಅಥವಾ ರೋಸ್ ವಾಟರ್ ಅನ್ನು ಸೇರಿಸಬಹುದು. ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ರೋಸ್ ವಾಟರ್ ಉತ್ತಮ. ತ್ವಚೆ ಡ್ರೈ ಆಗಿದ್ದರೆ ಮೊಸರು ಅಥವಾ ಹಾಲನ್ನು ಕಡ್ಲೆ ಹಿಟ್ಟಿಗೆ ಬೆರೆಸಿ ಹಚ್ಚುವುದು ಉತ್ತಮ.  ಕಡ್ಲೆ ಹಿಟ್ಟಿನ ಪ್ಯಾಕನ್ನು ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಬಿಡಿ, ನಂತರ ನಿಧಾನವಾಗಿ ತೊಳೆಯಿರಿ. ಇದನ್ನು ವಾರಕ್ಕೆ 2 ರಿಂದ 3 ಬಾರಿ ಬಳಸುವುದು ಸೂಕ್ತ.

ಕಡ್ಲೆ ಹಿಟ್ಟನ್ನು ಯಾರು ಬಳಸಬೇಕು ಮತ್ತು ಯಾರು ಬಳಸಬಾರದು?

ನಿಮ್ಮ ಚರ್ಮವು ಎಣ್ಣೆಯುಕ್ತ ಅಥವಾ ಸಾಮಾನ್ಯವಾಗಿದ್ದರೆ, ನೀವು ತ್ವಚೆಯ ಆರೈಕೆಗೆ ಕಡ್ಲೆ ಹಿಟ್ಟು ಬಳಸಬಹುದು. ಆದರೆ  ನಿಮ್ಮ ಚರ್ಮವು ತುಂಬಾ ಸೂಕ್ಷ್ಮ ಅಥವಾ ಒಣಗಿದ್ದರೆ, ಮೊದಲು ಪ್ಯಾಚ್ ಪ್ಯಾಚ್‌ ಟೆಸ್ಟ್‌ ಮಾಡಿ, ಚರ್ಮದ ಕಿರಿಕಿರಿ ಅಥವಾ ತುರಿಕೆ ಅನುಭವಿಸಿದರೆ ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚಲು ಹೋಗಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನಸು ಬೆಳಿಗ್ಗಿನ ಸಮಯದಲ್ಲಿಯೇ ಹೆಚ್ಚಾಗಿ ಕಂಡುಬರುವುದಕ್ಕೆ ಕಾರಣವೇನು ಗೊತ್ತಾ?

ರಾತ್ರಿ ನಿದ್ರೆಯಲ್ಲಿ (Sleep) ಕಾಣುವ ಕನಸುಗಳು ಕೇವಲ ಕಲ್ಪನೆ ಮಾತ್ರವಲ್ಲ, ಅವು ನಮ್ಮ ನಿದ್ರೆಯ ಗುಣಮಟ್ಟದ ಬಗ್ಗೆ ಪ್ರಮುಖ ಸೂಚನೆ ನೀಡುತ್ತವೆ ಎಂಬುದನ್ನು ಹೊಸ ಸಂಶೋಧನೆ ತಿಳಿಸಿದೆ. ಇಟಲಿಯ ಐಎಂಟಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಕನಸುಗಳ ಸ್ಪಷ್ಟತೆ ಮತ್ತು ನಿದ್ರೆಯ ಗುಣಮಟ್ಟದ ನಡುವೆ ನೇರ ಸಂಬಂಧವಿದೆ. ಹೌದು, ಇದೆಲ್ಲಾ ಕೆಲವರಿಗೆ ವಿಚಿತ್ರ ಎನಿಸಬಹುದು ಆದರೆ ಇದು ಸತ್ಯ. ಹಾಗಾದರೆ ಸಂಶೋಧನೆ ಹೇಳುವುದೇನು, ಇದೆಲ್ಲಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಂಶೋಧನೆ ಹೇಳುವುದೇನು?

ಈ ಅಧ್ಯಯನದಲ್ಲಿ 44 ಆರೋಗ್ಯವಾಗಿರುವ ವ್ಯಕ್ತಿಗಳ ಮೇಲೆ ಸಂಶೋಧನೆ ನಡೆಸಲಾಗಿದ್ದು, ಅವರ ನಿದ್ರೆಯ ಮಾದರಿಗಳನ್ನು ಗಮನಿಸಿ, ರಾತ್ರಿ ವಿವಿಧ ಸಮಯಗಳಲ್ಲಿ ಎಬ್ಬಿಸಿ, ಅವರು ಕಂಡ ಕನಸುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಈ ವೇಳೆ ಕನಸುಗಳ ಸ್ಪಷ್ಟತೆ ಮತ್ತು ನಿದ್ರೆಯ ಗುಣಮಟ್ಟದ ನಡುವೆ ಸಂಬಂಧವಿರುವುದು ಕಂಡುಬಂದಿದೆ. ಅಧ್ಯಯನದ ಪ್ರಕಾರ, ಗಾಢ ಮತ್ತು ಸ್ಪಷ್ಟ ಕನಸುಗಳನ್ನು ಕಾಣುವವರಿಗೆ ಉತ್ತಮ ನಿದ್ರೆ ದೊರೆಯುತ್ತದೆ. ಇಂತಹವರು ಬೆಳಗ್ಗೆ ಎದ್ದಾಗ ತಾಜಾತನವಿರುತ್ತದೆ.

ಇದನ್ನೂ ಓದಿ: ಒಳ್ಳೆಯ ನಿದ್ರೆ ಬೇಕಂದ್ರೆ ರಾತ್ರಿ ಹೊತ್ತು ಈ ಆಹಾರಗಳನ್ನು ಸೇವನೆ ಮಾಡುವುದನ್ನು ನಿಲ್ಲಿಸಿ

ಮೆದುಳಿನ ಚಟುವಟಿಕೆ ಏನು ಹೇಳುತ್ತದೆ?

ಈ ಸಂಶೋಧನೆ ಪ್ರಕಾರ, ಕನಸುಗಳು ಗಾಢವಾಗಿದ್ದಷ್ಟು ನಿದ್ರೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಅರ್ಧಸಿದ್ಧ ಕನಸುಗಳನ್ನು ಕಾಣುವವರಲ್ಲಿ ನಿದ್ರೆ ಅಷ್ಟಾಗಿ ಗಾಢವಾಗಿರುವುದಿಲ್ಲ. ಗಾಢ ಕನಸುಗಳ ವೇಳೆ ಮೆದುಳಿನಲ್ಲಿ ಕೆಲವು ರಾಸಾಯನಿಕಗಳು ಬಿಡುಗಡೆಯಾಗಿ ನಿದ್ರೆಯನ್ನು ಸುಧಾರಿಸುತ್ತವೆ. ಉತ್ತಮ ನಿದ್ರೆ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಬಹಳ ಮುಖ್ಯ. ಗಾಢ ನಿದ್ರೆಯಿಂದ ಒತ್ತಡ ಕಡಿಮೆಯಾಗುತ್ತದೆ, ತಲೆನೋವು ಹಾಗೂ ಇತರ ಆರೋಗ್ಯ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ. ಬೆಳಿಗ್ಗೆ ಕಾಣುವ ಕನಸುಗಳು ಹೆಚ್ಚು ಗಾಢವಾಗಿದ್ದು, ಆ ಸಮಯದಲ್ಲಿ ನಿದ್ರೆಯ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PBKS vs SRH: 18 ಎಸೆತಗಳಲ್ಲಿ ಅರ್ಧಶತಕ; ಅಭಿಷೇಕ್ ಅಬ್ಬರ ಹೇಗಿತ್ತು ನೋಡಿ

ಐಪಿಎಲ್ 2026 ರ 17 ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಎಂದಿನಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ಪರಿಣಾಮವಾಗಿ ಸನ್‌ರೈಸರ್ಸ್ ತಂಡ ಪವರ್‌ಪ್ಲೇನಲ್ಲಿಯೇ ಶತಕದ ಗಡಿ ದಾಟಿತು. ಅದರಲ್ಲೂ ಅಬ್ಬರದ ಇನ್ನಿಂಗ್ಸ್ ಕಟ್ಟಿದ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 53 ರನ್ ಗಳಿಸಿದರು. ಇದರೊಂದಿಗೆ, ಅವರು ಈ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರೈಸಿದರು.

ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸತತ ಮೂರನೇ ಅರ್ಧಶತಕ ಗಳಿಸಿದ್ದಾರೆ . ಇದಕ್ಕೂ ಮೊದಲು, ಅವರು ಐಪಿಎಲ್ 2024 ಮತ್ತು ಐಪಿಎಲ್ 2025 ರಲ್ಲಿ ಅರ್ಧಶತಕ ಗಳಿಸಿದ್ದರು. ಈಗ ಅವರು ಐಪಿಎಲ್ 2026 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೂರನೇ ಅರ್ಧಶತಕ ಬಾರಿಸಿದ್ದಾರೆ. ಅಭಿಷೇಕ್ ಶರ್ಮಾ ಪವರ್‌ಪ್ಲೇನ 6 ಓವರ್‌ಗಳಲ್ಲಿ 22 ಎಸೆತಗಳನ್ನು ಆಡಿ 66 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳು ಸೇರಿದ್ದವು. ಅಭಿ ಮತ್ತು ಹೆಡ್ ಆಟದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ 6 ಓವರ್‌ಗಳಲ್ಲಿ 105 ರನ್ ಗಳಿಸಿತು. ಅಂತಿಮವಾಗಿ ಅಭಿಷೇಕ್ ಶರ್ಮಾ, ಶಶಾಂಕ್ ಸಿಂಗ್ ಬೌಲಿಂಗ್‌ನಲ್ಲಿ 28 ಎಸೆತಗಳಲ್ಲಿ 8 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳ ಸಹಾಯದಿಂದ 74 ರನ್ ಗಳಿಸಿ ಔಟಾದರು.

ಇದರ ಜೊತೆಗೆ ಅಭಿಷೇಕ್ ಶರ್ಮಾ ಐಪಿಎಲ್ ಇನ್ನಿಂಗ್ಸ್‌ನಲ್ಲಿ 1 ರಿಂದ 6 ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಗೆ ಸೇರಿದ್ದಾರೆ. ಇದಕ್ಕೂ ಮೊದಲು, ಮುಂಬೈ ಇಂಡಿಯನ್ಸ್ ಪರ ಆಡುವಾಗ ಸನತ್ ಜಯಸೂರ್ಯ 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಜೋಸ್ ಬಟ್ಲರ್ 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. 2022 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವಾಗ ಜಾನಿ ಬೈರ್‌ಸ್ಟೋವ್ ಆರ್‌ಸಿಬಿ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈಗ ಸನ್‌ರೈಸರ್ಸ್ ಹೈದರಾಬಾದ್ ಪರ ಆಅಭಿಷೇಕ್ ಶರ್ಮಾ ಪಂಜಾಬ್ ಕಿಂಗ್ಸ್ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಅಂತಹ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಸೀಮ್ ಮುನೀರ್ ಮಿಲಿಟರಿ ಡ್ರೆಸ್ ಬಿಟ್ಟು ಸೂಟ್ ಧರಿಸಿ ಜೆಡಿ ವ್ಯಾನ್ಸ್​ಗೆ ಸ್ವಾಗತ ಕೋರಿದ್ದೇಕೆ?

ಇಸ್ಲಮಾಬಾದ್, ಏಪ್ರಿಲ್ 11: ಅಮೆರಿಕ ಹಾಗೂ ಇರಾನ್ (Iran War) ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದ ನಂತರ ಲೆಬನಾನ್​ಗಾಗಿ ಮತ್ತೆ ಎರಡೂ ಕಡೆಯವರ ನಡುವೆ ಬಿಕ್ಕಟ್ಟು ಎದುರಾಗಿತ್ತು. ಇದರಿಂದ ಇರಾನ್ ಕದನವಿರಾಮವನ್ನು ಹಿಂಪಡೆಯುವ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಮಾತುಕತೆ ನಡೆಸಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ನೇತೃತ್ವದ ಯುಎಸ್ ನಿಯೋಗ ಮತ್ತು ಇರಾನಿನ ನಾಯಕರು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇಸ್ಲಮಾಬಾದ್​ಗೆ ಬಂದ ಜೆ.ಡಿ. ವ್ಯಾನ್ಸ್ ಅವರನ್ನು ಸ್ವಾಗತಿಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದಕ್ಕೂ ಮೊದಲು ಇರಾನಿನ ನಿಯೋಗವನ್ನು ಮಿಲಿಟರಿ ಉಡುಗೆಯಲ್ಲಿ ಸ್ವಾಗತಿಸಿದ್ದ ಅಸೀಮ್ ಮುನೀರ್ ಅಮೆರಿಕದ ನಿಯೋಗವನ್ನು ಸ್ವಾಗತಿಸುವಾಗ ಸೂಟ್ ಧರಿಸಿ ಬಂದಿದ್ದು ಬಹಳ ಗಮನ ಸೆಳೆಯಿತು.

ಇರಾನ್​ನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಗಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ನೇತೃತ್ವದ 71 ಸದಸ್ಯರ ನಿಯೋಗವನ್ನು ಸ್ವಾಗತಿಸುವಾಗ ಅಸೀಮ್ ಮುನೀರ್ ಮಿಲಿಟರಿ ಡ್ರೆಸ್ ಧರಿಸಿದ್ದರು. ಅದಾದ ಕೆಲವು ಗಂಟೆಗಳ ನಂತರ ಜೆಡಿ ವ್ಯಾನ್ಸ್ ಅವರ ನಿಯೋಗವನ್ನು ಸ್ವಾಗತಿಸುವಾಗ ಸೂಟು-ಬೂಟು ಧರಿಸಿ ಬಂದಿದ್ದರು. ಇದು ಅವರ ರಾಜತಾಂತ್ರಿಕ ದೃಷ್ಟಿಕೋನವನ್ನು ಸೂಚಿಸುತ್ತದೆ. ಇದು ಇರಾನ್ ಮತ್ತು ಯುಎಸ್ ಎರಡನ್ನೂ ಗುರಿಯಾಗಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಸಂದೇಶ ಕಳುಹಿಸುವಿಕೆ ಎಂದು ಹಲವಾರು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೇನಾ ಅಧಿಕಾರಿಯೊಬ್ಬರು ವಿದೇಶಿ ನಾಯಕರನ್ನು ಸ್ವೀಕರಿಸುವಾಗ ಯಾವಾಗಲೂ ಸಮವಸ್ತ್ರದಲ್ಲಿರಬೇಕು. ಅಸಿಮ್ ಮುನೀರ್ ಅವರು ಅಮೆರಿಕನ್ನರೊಂದಿಗೆ ರಾಜತಾಂತ್ರಿಕ ಮತ್ತು ಇರಾನ್‌ನೊಂದಿಗೆ ಸೈನಿಕ ಎಂದು ತೋರಿಸಲು ಈ ರೀತಿ ತಮ್ಮ ಡ್ರೆಸ್ ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದಾವಣಗೆರೆ ಬೈ-ಎಲೆಕ್ಷನ್: ಕಾಂಗ್ರೆಸ್​ನಲ್ಲಿ ಶುರುವಾಗಿದೆಯಾ ಕೋಲ್ಡ್ ವಾರ್? ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹೇಳಿದ್ದಿಷ್ಟು

ಬೆಂಗಳೂರು, ಏಪ್ರಿಲ್​ 11: ದಾವಣಗೆರೆ ಬೈ-ಎಲೆಕ್ಷನ್ ನಂತರ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಕಾಂಗ್ರೆಸ್ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಲೀಂ ಮೊಹಮ್ಮದ್ ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದ ಜಬ್ಬಾರ್, ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಇಂತಹ ಆರೋಪಗಳನ್ನು ಮಾಡಲು ಬಳಸಿಕೊಂಡಿರುವುದು ಆಶ್ಚರ್ಯ ಎಂದಿದ್ದಾರೆ. ಯಾವುದೇ ಆರೋಪಗಳನ್ನು ಮಾಡುವಾಗ ಸೂಕ್ತ ದಾಖಲೆಗಳನ್ನು ಪ್ರಸ್ತುತಪಡಿಸಬೇಕು. ಸುಮ್ಮಸುಮ್ಮನೆ ಆರೋಪಗಳನ್ನು ಮಾಡುವುದು ಸರಿಯಲ್ಲ. ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಜಬ್ಬಾರ್, ಒಂದು ವೇಳೆ ಸೋಲುಂಟಾದರೆ ಅದನ್ನು ನಮ್ಮ ಮೇಲೆ ಹೊರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ತಕ್ಷಣವೇ ರಾಜಿನಾಮೆ ನೀಡಿ: ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್‌ಗೆ ಸೂಚನೆ! ಮುಂದಿನ ತಲೆದಂಡ ಸಚಿವ ಜಮೀರ್?

ಬೆಂಗಳೂರು, ಏ.11 : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವ ಬೆಳವಣಿಗಳು ನಡೆದಿದೆ. ಕಾಂಗ್ರೆಸ್​​ ಆಂತರಿಕ ಕಚ್ಚಾಟಕ್ಕೆ ರಾಜೀನಾಮೆ ಮೂಲಕ ತೆರೆ ಬೀಳುವ ಸಾಧ್ಯತೆ ಇದೆ. ದಾವಣಗೆರೆ ಚುನಾವಣೆ ಪ್ರಚಾರದಲ್ಲಿ ನಡೆದ ಘಟನೆಗಳು ಹಾಗೂ ಸಂಪೂರ್ಣ ಆಂತರಿಕ ವರದಿ ಕಾಂಗ್ರೆಸ್ ಹೈಕಮಾಂಡ್ ಕೈಸೇರಿದೆ. ಇದೀಗ ಈ ವರದಿ ಹೈಕಮಾಂಡ್​​ ಕೈಸೇರುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿದೆ. ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ ನೀಡಿದ ವರದಿಯ ಬೆನ್ನಲ್ಲೇ, ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಶಿಸ್ತು ಕ್ರಮದ ತೂಗುಕತ್ತಿ ನೇತಾಡುತ್ತಿದೆ.

ಉಪಚುನಾವಣಾ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳು ಮತ್ತು ನಾಯಕರ ನಡುವಿನ ಮುನಿಸು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಅಡ್ಡಿಯಾಗಬಹುದು ಎಂಬ ಆತಂಕವನ್ನು ವರದಿ ಎತ್ತಿ ತೋರಿಸಿದೆ. ಪ್ರಮುಖವಾಗಿ ಅಲ್ಪಸಂಖ್ಯಾತ ಸಮುದಾಯದ ಕೆಲವು ಶಾಸಕರೇ ಸಚಿವ ಜಮೀರ್ ಅಹ್ಮದ್ ಅವರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದು, ಸಚಿವ ಸಂಪುಟ ಪುನಾರಚನೆ ವೇಳೆ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಆ್ಯಕ್ಷನ್ ಆರಂಭವಾಗುವ ಸೂಚನೆ ಸಿಗುತ್ತಿದ್ದಂತೆಯೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮತ್ತು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷವು ಸಸ್ಪೆಂಡ್ ಮಾಡುವ ಮುನ್ಸೂಚನೆ ಅರಿತ ಜಬ್ಬಾರ್, ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಮತ್ತೊಂದೆಡೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ನಜೀರ್ ಅಹ್ಮದ್ ಅವರಿಗೂ ರಾಜೀನಾಮೆ ನೀಡಲು ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ಕಿಚ್ಚು ಹೊತ್ತಿಸಿದ ದಾವಣಗೆರೆ ದಂಗಲ್, ಪಕ್ಷದ ವಿರುದ್ಧ ಜಮೀರ್ ಷಡ್ಯಂತ್ರ ರೂಪಿಸಿದ್ರಾ?

ಸದ್ಯದ ಬೆಳವಣಿಗೆಗಳು ಸಚಿವ ಜಮೀರ್ ಅಹ್ಮದ್ ಅವರನ್ನೇ ಗುರಿಯಾಗಿಸಿಕೊಂಡಿವೆ. ಸಚಿವ ಸಂಪುಟ ಪುನಾರಚನೆಯ ಸಂದರ್ಭದಲ್ಲಿ ಜಮೀರ್ ಅವರ ‘ತಲೆದಂಡ’ವಾಗುವುದು ಬಹುತೇಕ ನಿಶ್ಚಿತ ಎಂಬ ಮಾತುಗಳು ಕೈ ಪಾಳಯದಲ್ಲಿ ಕೇಳಿಬರುತ್ತಿವೆ. ಇತ್ತ ಈ ಭಾರಿ ಬೆಳವಣಿಗೆಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂತರ ಕಾಯ್ದುಕೊಂಡಿದ್ದಾರೆ. ದಾವಣಗೆರೆ ವಿದ್ಯಮಾನ ಮತ್ತು ರಾಜೀನಾಮೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ನನಗೇನೂ ಗೊತ್ತಿಲ್ಲ” ಎನ್ನುವ ಮೂಲಕ ಜಾಣ್ಮೆಯ ಮೌನ ವಹಿಸಿದ್ದಾರೆ.

ವರದಿ: ಈರಣ್ಣ ಬಸವ

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಮೆರಿಕ-ಅಮೆರಿಕ’ಕ್ಕೆ 30 ವರ್ಷ, ಬರಲಿದೆ ‘ಅಮೆರಿಕ-ಅಮೆರಿಕ 2’

‘ಅಮೆರಿಕ-ಅಮೆರಿಕ’ (America America) ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ಇಂದಿಗೂ ಹಲವಾರು ಜನರ ನೆಚ್ಚಿನ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ಬಿಡುಗಡೆ ಆಗಿ ಇಂದಿಗೆ (ಏಪ್ರಿಲ್ 11) 30 ವರ್ಷಗಳಾಗಿವೆ. 1997ರ ಏಪ್ರಿಲ್ 11ರಂದು ಸಿನಿಮಾ ಬಿಡುಗಡೆ ಆಗಿತ್ತು. ರಮೇಶ್ ಅರವಿಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಗೆಳೆತನ, ಪ್ರೀತಿ, ದೇಶ, ದೇಶಪ್ರೇಮ, ಆಧುನಿಕತೆಯ ಸೈಡ್ ಎಫೆಕ್ಟ್ಸ್ ಹೀಗೆ ಹಲವು ವಿಷಯಗಳನ್ನು ಚರ್ಚಿಸಿದ್ದ ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು.

ಸಿನಿಮಾ ನಿರ್ದೇಶಿಸಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ನಾನು ರೂಪಿಸಿದ್ದಲ್ಲ; ನನ್ನನ್ನೇ ರೂಪಿಸಿದ ಸಿನಿಮಾ! ಕೋಟಿ ಕೋಟಿ ಕಂಗಳಿಗೆ ಕನಸು ಕೊಟ್ಟ ಸಿನಿಮಾ. ಕೋಟಿ ಕೋಟಿ ಮನಗಳಿಗೆ ಮಮಕಾರವಿತ್ತ ಸಿನಿಮಾ. ಕನ್ನಡ ಜನತೆಗೆ ಕೋಟಿ ಕೋಟಿ ಕೃತಜ್ಞತೆಗಳು’ ಎಂದಿದ್ದಾರೆ. ಇದರ ಜೊತೆಗೆ ‘ಸದ್ಯದಲ್ಲೇ ನಿಮ್ಮೆದುರು ‘ಅಮೆರಿಕ-ಅಮೆರಿಕ 2’ ಎಂದು ಸಹ ನಾಗತಿಹಳ್ಳಿ ಚಂದ್ರಶೇಖರ್ ಅವರು ಘೋಷಿಸಿದ್ದಾರೆ.

‘ಅಮೆರಿಕ-ಅಮೆರಿಕ 2’ ಸಿನಿಮಾವನ್ನು ನಾಗತಿಹಳ್ಳಿ ಅವರು ಘೋಷಿಸಿದ್ದಾರಾದರೂ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಆದರೆ ನಾಗತಿಹಳ್ಳಿ ಅವರ ಪೋಸ್ಟ್​​ಗೆ ಕಮೆಂಟ್ ಮಾಡಿರುವ ಹಲವರು, ‘ಅಮೆರಿಕ-ಅಮೆರಿಕ’ ಸಿನಿಮಾವನ್ನು ಮರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ‘ಅಮೆರಿಕ-ಅಮೆರಿಕ 2’ ಸಿನಿಮಾನಲ್ಲಿ ಹಳೆಯ ಮುಖಗಳನ್ನೇ ಅಂದರೆ ರಮೇಶ್ ಅರವಿಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಅವರನ್ನೇ ಹಾಕಿಕೊಳ್ಳಿ ಎಂದು ಇನ್ನಿತರೆ ಸಲಹೆಗಳನ್ನು ನೀಡಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ಅವರು ಇತ್ತೀಚೆಗೆ ಸಿನಿಮಾ ನಿರ್ದೇಶನ ತುಸು ಕಡಿಮೆ ಮಾಡಿದ್ದಾರೆ. ಅವರು ಕೊನೆಯದಾಗಿ ನಿರ್ದೇಶಿಸಿದ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು 2020ರಲ್ಲಿ ‘ಇಂಡಿಯಾ vs ಇಂಗ್ಲಂಡ್’. ಅದಕ್ಕೆ ಮುಂಚೆ 2015 ರಲ್ಲಿ ‘ಇಷ್ಟಕಾಮ್ಯ’ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಬಹಳ ವರ್ಷಗಳ ಬಳಿಕ ತಮಗೆ ದೊಡ್ಡ ಯಶಸ್ಸು, ಹೆಸರು ತಂದುಕೊಟ್ಟ ‘ಅಮೆರಿಕ-ಅಮೆರಿಕ’ ಸಿನಿಮಾದ ಸೀಕ್ವೆಲ್ ನಿರ್ದೇಶಿಸಲು ಮುಂದಾಗಿದ್ದಾರೆ. ನಾಗತಿಹಳ್ಳಿ ಅವರ ಸಿನಿಮಾಗಳನ್ನು ನೋಡುತ್ತಾ ಬಂದಿರುವ, ಅವರ ಸಿನಿಮಾಗಳ ಮೆಚ್ಚುವ ಅಭಿಮಾನಿಗಳು ನಾಗತಿಹಳ್ಳಿ ಅವರಿಂದ ಒಂದು ಸುಂದರ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Quiet Quitting: ಸಂಬಳಕ್ಕಾಗಿ ಮಾತ್ರ ಕೆಲಸ: ‘ಕ್ವೈಟ್ ಕ್ವಿಟಿಂಗ್’ನಲ್ಲಿ ವಿಶ್ವದಲ್ಲೇ ಭಾರತಕ್ಕೆ ಮೊದಲ ಸ್ಥಾನ!

ಭಾರತದಲ್ಲಿ ಈಗ ಹೊಸದೊಂದು ಟ್ರೆಂಡ್ ಸದ್ದು ಮಾಡುತ್ತಿದೆ, ಅದೇ ‘ಮೌನ ನಿರ್ಗಮನ’ ಅಥವಾ ಕ್ವೈಟ್ ಕ್ವಿಟಿಂಗ್. ಕಚೇರಿಗೆ ಹೋದರೂ ಕೆಲಸದ ಬಗ್ಗೆ ಉತ್ಸಾಹವಿಲ್ಲದೆ, ಕೇವಲ ಸಂಬಳಕ್ಕಾಗಿ ಯಾಂತ್ರಿಕವಾಗಿ ದುಡಿಯುವವರ ಸಂಖ್ಯೆಯಲ್ಲಿ ಭಾರತ ಈಗ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ!

ಏನಿದು ‘ಮೌನ ನಿರ್ಗಮನ’ (Quiet Quitting)?

ಒಬ್ಬ ಉದ್ಯೋಗಿ ತನ್ನ ಕೆಲಸವನ್ನು ಪೂರ್ಣವಾಗಿ ಬಿಡುವುದಿಲ್ಲ, ಯಾವುದೇ ಆಸಕ್ತಿ ತೋರದೇ ಕೆಲಸ ಮಾಡುವುದು. ತನಗೆ ವಹಿಸಿದ ಕನಿಷ್ಠ ಜವಾಬ್ದಾರಿಯನ್ನು ಮಾತ್ರ ಪೂರೈಸಿ, ಉಳಿದ ಸಮಯ ಕೇವಲ ದೇಹದ ಉಪಸ್ಥಿತಿಯಷ್ಟೇ ಇರುವುದನ್ನು ಮನಶ್ಶಾಸ್ತ್ರಜ್ಞರು ‘ಕ್ವೈಟ್ ಕ್ವಿಟಿಂಗ್’ ಎನ್ನುತ್ತಾರೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ವಿಶ್ವದ ಇತರ ದೇಶಗಳಿಗಿಂತ ಭಾರತೀಯರಲ್ಲಿ ಈ ಪ್ರವೃತ್ತಿ ಗರಿಷ್ಠ ಮಟ್ಟದಲ್ಲಿದೆ.

ಉದ್ಯೋಗಿಗಳ ಈ ನಿರಾಸಕ್ತಿಗೆ ಪ್ರಮುಖ ಕಾರಣಗಳು:

ಕೆಲಸದ ಅತಿಯಾದ ಹೊರೆ ಮತ್ತು ಒತ್ತಡ:

ಬೆಳಿಗ್ಗೆಯಿಂದ ರಾತ್ರಿಯವರೆಗೆ ಕಚೇರಿ ಕೆಲಸದಲ್ಲೇ ಮುಳುಗಿರುವ ಉದ್ಯೋಗಿಗಳಿಗೆ ತಮ್ಮ ವೈಯಕ್ತಿಕ ಜೀವನಕ್ಕೆ (Work-Life Balance) ಸಮಯವೇ ಸಿಗುತ್ತಿಲ್ಲ. ಕುಟುಂಬದೊಂದಿಗೆ ಕಳೆಯುವ ಸಮಯ ಕಡಿತವಾಗುತ್ತಿರುವುದು ಉದ್ಯೋಗಿಗಳನ್ನು ಮಾನಸಿಕ ಖಿನ್ನತೆಗೆ ದೂಡುತ್ತಿದೆ.

ವಿಷಕಾರಿ ಕಚೇರಿ ವಾತಾವರಣ (Toxic Work Culture):

ಕಷ್ಟಪಟ್ಟು ಕೆಲಸ ಮಾಡಿದರೂ ಸರಿಯಾದ ಮನ್ನಣೆ ಸಿಗದಿರುವುದು, ಮೇಲಧಿಕಾರಿಗಳ ಕಿರುಕುಳ ಮತ್ತು ಕಚೇರಿ ರಾಜಕೀಯವು ನೌಕರರ ಮಾನಸಿಕ ಸ್ಥಿತಿಯನ್ನು ಹದಗೆಡಿಸುತ್ತಿದೆ. ಇದು ಸಂಸ್ಥೆಯ ಬೆಳವಣಿಗೆಗಿಂತ ಕೇವಲ “ತಿಂಗಳ ಸಂಬಳ ಬಂದರೆ ಸಾಕು” ಎಂಬ ಮನೋಭಾವನೆಗೆ ಕಾರಣವಾಗಿದೆ.

ವೇತನ ಮತ್ತು ವೆಚ್ಚದ ನಡುವಿನ ಅಂತರ:

ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ವೇತನ ಏರಿಕೆಯಾಗುತ್ತಿಲ್ಲ ಎಂಬುದು ಬಹುತೇಕರ ದೂರು. ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದರೂ ಅದಕ್ಕೆ ಸರಿಯಾದ ಪ್ರತಿಫಲ ಸಿಗದಿದ್ದಾಗ, ಉದ್ಯೋಗಿಗಳು ತಮಗೆ ಸಿಗುವ ಸಂಬಳಕ್ಕೆ ಎಷ್ಟು ಬೇಕೋ ಅಷ್ಟೇ ಕೆಲಸ ಮಾಡಲು ನಿರ್ಧರಿಸುತ್ತಿದ್ದಾರೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ವೃತ್ತಿಜೀವನದ ಮೇಲೆ ಇದರ ಪರಿಣಾಮವೇನು?

ಈ ‘ಮೌನ ನಿರ್ಗಮನ’ ಕೇವಲ ಕಂಪನಿಗಳಿಗೆ ಮಾತ್ರವಲ್ಲ, ಉದ್ಯೋಗಿಗಳ ವೈಯಕ್ತಿಕ ಬೆಳವಣಿಗೆಗೂ ಅಪಾಯಕಾರಿ ಎನ್ನುತ್ತಾರೆ ತಜ್ಞರು. ಕೆಲಸದಲ್ಲಿ ಆಸಕ್ತಿ ಇಲ್ಲದಿದ್ದಾಗ ಹೊಸ ಆಲೋಚನೆಗಳು ಬರುವುದಿಲ್ಲ. ಹೊಸ ವಿಷಯಗಳನ್ನು ಕಲಿಯುವ ಹಸಿವು ಇಲ್ಲದೆ ಹೋಗುವುದರಿಂದ ವೃತ್ತಿಜೀವನ ಒಂದೇ ಕಡೆ ಸ್ಥಗಿತಗೊಳ್ಳಬಹುದು.

ಪರಿಹಾರವೇನು?

ಈ ಸಮಸ್ಯೆಯನ್ನು ಹೋಗಲಾಡಿಸಲು ಕಂಪನಿಗಳು ತಮ್ಮ ನೀತಿಗಳಲ್ಲಿ ಬದಲಾವಣೆ ತರಬೇಕಿದೆ. ಉದ್ಯೋಗಿಗಳ ಮಾನಸಿಕ ಸ್ಥಿತಿಯನ್ನು ಅರಿತು ಅವರಿಗೆ ಬೆಂಬಲ ನೀಡಬೇಕು. ಉತ್ತಮವಾಗಿ ಕೆಲಸ ಮಾಡುವವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಗೌರವ ನೀಡಬೇಕು. ಉದ್ಯೋಗಿಗಳಿಗೆ ತಮ್ಮ ಕುಟುಂಬದೊಂದಿಗೆ ಕಳೆಯಲು ಪೂರಕವಾದ ಸಮಯಾವಕಾಶ ಕಲ್ಪಿಸಬೇಕು. ಆರೋಗ್ಯಕರ ಕೆಲಸದ ವಾತಾವರಣ ನಿರ್ಮಾಣವಾದಾಗ ಮಾತ್ರ ಇಂತಹ ‘ಸಾಂಕ್ರಾಮಿಕ’ ಪ್ರವೃತ್ತಿಯನ್ನು ತಡೆಗಟ್ಟಲು ಸಾಧ್ಯ. ಉದ್ಯೋಗಿ ಮತ್ತು ಸಂಸ್ಥೆ ಇಬ್ಬರೂ ಪರಸ್ಪರ ಗೌರವದಿಂದ ಸಾಗಿದಾಗ ಮಾತ್ರ ಪ್ರಗತಿ ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link