All posts by nagaraj11081993

ಒಟ್ಟಿಗೆ ದಾಳಿ ಮಾಡಿದ ಧ್ರುವಂತ್-ಅಶ್ವಿನಿ, ಕಕ್ಕಾಬಿಕ್ಕಿಯಾದ ಗಿಲ್ಲಿ – Kannada News | Bigg Boss Kannada 12: Dhruvanth and Ashwini attacks on Gilli

ಬಿಗ್​​ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಮಾಡುವ ಹಾಸ್ಯ ಎಲ್ಲರಿಗೂ ಇಷ್ಟ ಆಗುವಂಥಹುದ್ದಲ್ಲ, ಅದರಲ್ಲೂ ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹಿರಿಯರು, ಕಿರಿಯರೆನ್ನದೆ ಮಾತನಾಡುವುದು, ವಿಪರೀತಕ್ಕೆ ಹೋಗಿ ಗೇಲಿ ಮಾಡುವುದು, ವ್ಯಂಗ್ಯ ಮಾಡುವುದು ಮಾಡುತ್ತಾರೆ. ಇದೇ ಕಾರಣಕ್ಕೆ ಮನೆಯ ಕೆಲವು ಸದಸ್ಯರಿಂದ ಬೈಸಿಕೊಂಡಿದ್ದು, ವಿರೋಧ ಕಟ್ಟಿಕೊಂಡಿದ್ದೂ ಸಹ ಇದೆ. ಆದರೆ ಯಾರೂ ಸಹ ಗಿಲ್ಲಿಯ ಬಾಯಿಗೆ ಬಾಯಿ ಕೊಟ್ಟು ಮಾತನಾಡಿರಲಿಲ್ಲ. ಆದರೆ ಈ ಬಾರಿ ಧ್ರುವಂತ್ ಮತ್ತು ಅಶ್ವಿನಿ ಅವರ ಆರ್ಭಟಕ್ಕೆ ಸ್ವತಃ ಗಿಲ್ಲಿ ಕಕ್ಕಾ ಬಿಕ್ಕಿ ಆಗಿಬಿಟ್ಟಿದ್ದಾರೆ.

ಅಶ್ವಿನಿ, ಧ್ರುವಂತ್ ಅವರು ಗಾರ್ಡನ್ ಏರಿಯಾನಲ್ಲಿ ಕುಳಿತಿದ್ದಾಗ ಸುಮ್ಮನೆ ನಿನ್ನೆ ನಡೆದ ಟಾಸ್ಕ್​ ವಿಚಾರವಾಗಿ ಚರ್ಚೆಗೆ ಎಳೆದ ಗಿಲ್ಲಿ, ಅಶ್ವಿನಿ ಅವರನ್ನು ಮೂದಲಿಸಲು ಆರಂಭಿಸಿದರು. ಕೂಡಲೇ ಧ್ರುವಂತ್ ಸಹ ಗಿಲ್ಲಿಯ ಮೂದಲಿಕೆ ಆರಂಭಿಸಿದರು. ಅಶ್ವಿನಿ ಮತ್ತು ಧ್ರುವಂತ್ ಒಟ್ಟಾಗಿ ಗಿಲ್ಲಿಯ ಮೇಲೆ ಮುಗಿಬಿದ್ದರು. ಟಾಸ್ಕ್ ವಿಷಯದಿಂದ ಆರಂಭವಾದ ಜಗಳ ವೈಯಕ್ತಿಕ ಮಟ್ಟಕ್ಕೂ ಸಹ ಹೋಯ್ತು. ಒಂದು ಹಂತದಲ್ಲಂತೂ ಗಿಲ್ಲಿಗೆ ಏನು ಮಾತನಾಡಬೇಕು ಎಂದು ಸಹ ತೋಚದೆ ಏನೇನೋ ಚಿತ್ರ ವಿಚತ್ರ ಸದ್ದುಗಳನ್ನು ಮಾಡಲು ಆರಂಭಿಸಿದರು.

ಇದನ್ನೂ ಓದಿ:ಅಶ್ವಿನಿ ಗೌಡ ಎದುರು ಗಿಲ್ಲಿ ನಟ ಆ್ಯಟಿಟ್ಯೂಡ್: ವಿಡಿಯೋ ನೋಡಿ..

ಇವರ ಜಗಳದ ಜೋರು ನೋಡಿ ಮನೆ ಸದಸ್ಯರೆಲ್ಲ ಗಾರ್ಡನ್ ಏರಿಯಾದಿಂದ ಎದ್ದು ಕಿಚನ್​​ಗೆ ಹೊರಟು ಬಿಟ್ಟರು. ಅಲ್ಲಿ ಅವರು ಅಡುಗೆ ಮಾಡಿ ವಾಪಸ್ ಗಾರ್ಡನ್ ಏರಿಯಾಕ್ಕೆ ಬಂದಾಗಲೂ ಸಹ ಇವರ ಜಗಳ ಮುಂದುವರೆಯುತ್ತಲೇ ಇತ್ತು. ಧ್ರುವಂತ್ ಮತ್ತು ಅಶ್ವಿನಿ, ಪಾಯಿಂಟ್​​ಗಳ ಮೇಲೆ ಪಾಯಿಂಟ್ ಹಾಕುತ್ತಾ, ಗಿಲ್ಲಿ ರೀತಿಯಲ್ಲೇ ವ್ಯಂಗ್ಯ ಮಾಡುತ್ತಾ, ಹೀಗಳೆಯುತ್ತಾ ಜಗಳ ಮಾಡಿದರು. ತನ್ನದೇ ಮದ್ದು ತನ್ನ ಮೇಲೆ ಪ್ರಯೋಗಿಸಿದಾಗ ಸಹಜವಾಗಿಯೇ ಗಿಲ್ಲಿ ಅವಕ್ಕಾದರು, ಅದರಲ್ಲೂ ಧ್ರುವಂತ್ ಅಂತೂ ಗಿಲ್ಲಿಯ ಮುಂದೆ ಹೋಗಿ ಕೂತು, ‘ತಾಕತ್ತಿದ್ದರೆ ಮಾತನಾಡು’ ಎಂದು ಸವಾಲುಗಳನ್ನು ಎಸೆದರು. ಧ್ರುವಂತ್ ಆರ್ಭಟಕ್ಕೆ ಪೆಚ್ಚಾಗಿ ಕೊನೆಗೆ ಗಿಲ್ಲಿಯೇ ಮಾತು ನಿಲ್ಲಿಸಿ ಎದ್ದು ಹೋಗುವಂತಾಯ್ತು.

‘ನಿನ್ನ ಮೂರು-ಮುಕ್ಕಾಲು ರಿಯಾಲಿಟಿ ಶೋನ ಕಂಟೆಂಟ್ ಮುಗಿದು ಹೋಗಿದೆ ಅದೇ ಕಾರಣಕ್ಕೆ ಈಗ ಏನೇನೋ ಶಬ್ದ ಮಾಡುತ್ತಿದ್ದೀಯ’ ಎಂದೆಲ್ಲ ಧ್ರುವಂತ್ ಬೈದರೆ, ಗಿಲ್ಲಿ, ಅಶ್ವಿನಿ ಕುರಿತಂತೆ ‘ಅಜ್ಜಿ ಎಂದು, ಹಲ್ಲು ಸೆಟ್’ ಎಂದು ರೇಗಿಸಿದ. ಧ್ರುವಂತ್​​ಗೆ ‘ವೀಕ್ ಪರ್ಸನ್’ ಎಂದು ರೇಗಿಸಿದ. ಆದರೆ ಇಂದು ನಡೆದ ಜಗಳದಲ್ಲಿ ಸ್ಪಷ್ಟವಾಗಿ ಧ್ರುವಂತ್ ಅವರದ್ದೇ ಮೇಲುಗೈ ಆಗಿದ್ದು ಸ್ಪಷ್ಟವಾಗಿ ಕಂಡು ಬಂತು. ಗಿಲ್ಲಿ ಸಾಮಾನ್ಯವಾಗಿ ಜಗಳದಲ್ಲಿ ಗೆಲುವು ಸಾಧಿಸುತ್ತಿದ್ದ ಆದರೆ ಈ ಬಾರಿ ಸೋತಿದ್ದಾರೆ. ಗಿಲ್ಲಿಯ ಮಾತಿಗೆ ಪ್ರತಿ ಮಾತು ಸಹ ಆಡದೆ ಸುಮ್ಮನೇ ಇರುತ್ತಿದ್ದ ಧ್ರುವಂತ್, ಗಿಲ್ಲಿಯನ್ನೇ ಕೆಣಕಿ ಸೈ ಎನಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು; ವಿವಾದಕ್ಕೀಡಾಯ್ತು ವಿಡಿಯೋ – Kannada News | Amroha School Sparks Outrage After Men dressed in burqas dancing to Dhurandhar Song Viral Video

ಅಮ್ರೋಹಾ, ಡಿಸೆಂಬರ್ 31: ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಬುರ್ಖಾ ಧರಿಸಿದ ಯುವಕರು ಧುರಂಧರ್ ಸಿನಿಮಾದ ಹಾಡಿಗೆ ನೃತ್ಯ ಮಾಡುತ್ತಿರುವ ವೈರಲ್ ವಿಡಿಯೋ (Viral Video) ಆನ್‌ಲೈನ್‌ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮೆಸ್ಕೊ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಅಪಹಾಸ್ಯ ಮಾಡುತ್ತಾ ಡ್ಯಾನ್ಸ್ ಮಾಡಿದ್ದಾರೆ. ವಿವಾದಾತ್ಮಕ ಸಿನಿಮಾ ಧುರಂಧರ್‌ನ ಹಾಡಿಗೆ ನೃತ್ಯ ಮಾಡುತ್ತಿರುವ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆಕ್ರೋಶವನ್ನು ಹುಟ್ಟುಹಾಕಿದೆ. ಹಿಜಾಬ್ ಮತ್ತು ಮುಸ್ಲಿಂ ಧಾರ್ಮಿಕ ಗುರುತನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಈ ಕೃತ್ಯವನ್ನು ಟೀಕಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

New Year 2026 Celebration Live: ನ್ಯೂ ಇಯರ್​ ಫೀವರ್, ಸಂಭ್ರಮಾಚರಣೆ ಶುರು – Kannada News | New Year 2026 Celebration Live: New Year celebrations across Karnataka, watch live

ಬೆಂಗಳೂರು, ಡಿಸೆಂಬರ್​​ 31: ಇನ್ನೇನು ಕೆಲವೇ ಕ್ಷಣದಲ್ಲಿ 2025 ರ ಅಧ್ಯಾಯ ಮುಗಿಯಲಿದೆ. 2026ರ ಹೊಸ ಪರ್ವ ಶುರುವಾಗಲಿದೆ. ಇಂದು ಬೆಳಗಿನಿಂದಲೇ ರಾಜ್ಯದ ಉದ್ದಗಲಕ್ಕೂ ಜನ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಹೊಸ ವರ್ಷವನ್ನ ಸ್ವಾಗತಿಸೋಕೆ ರಾಜ್ಯದ ಜನ ಕಾತರರಾಗಿದ್ದಾರೆ. ಅದರಲ್ಲೂ ಸಿಲಿಕಾನ್​ ಸಿಟಿಯಲ್ಲಿ ಪಾರ್ಟಿ ಗಮ್ಮತ್ತು ಜೋರಾಗಿದೆ. ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್​ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರದ ಸೆಲೆಬ್ರೇಷನ್ ಸ್ಪಾಟ್​ಗಳು ಲಕ ಲಕ ಅಂತಿವೆ. ಹೊಸ ವರ್ಷದ ಸಂಭ್ರಮಾಚರಣೆ ಲೈವ್​​ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ: ಆಟೋ ಚಾಲಕರ ವಿಶೇಷ ಕೆಲಸ – Kannada News | Police Backed Initiative: Bengaluru Auto Drivers Provide Free Rides for Drunken Party goers

ಬೆಂಗಳೂರು, ಡಿ.31: ಹೊಸ ವರ್ಷದ ಸಂಭ್ರಮಕ್ಕೆ ಬೆಂಗಳೂರು ಸಿದ್ಧವಾಗಿದ್ದು, ಪಾರ್ಟಿ ಪ್ರಿಯರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಅದರಲ್ಲೂ ಮದ್ಯ ಸೇವಿಸಿ ಅಮಲೇರಿದವರಿಗಾಗಿ ಬೆಂಗಳೂರಿನ ಆಟೋ ಚಾಲಕರು ವಿನೂತನ ಸೇವೆಗೆ ಮುಂದಾಗಿದ್ದಾರೆ. ನಗರದ ಯಾವುದೇ ಭಾಗದಲ್ಲಿ ಮನೆ ಇರುವ ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಪೊಲೀಸ್ ಇಲಾಖೆಯ ನಿರ್ದೇಶನದ ಮೇರೆಗೆ ಸುಮಾರು 25 ಆಟೋಗಳನ್ನು ಈ ಸೇವೆಗೆ ನಿಯೋಜಿಸಲಾಗಿದೆ. ಮುಖ್ಯವಾಗಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಮಹಿಳಾ ಪೊಲೀಸರೊಂದಿಗೆ ಸುರಕ್ಷಿತವಾಗಿ ಅವರನ್ನು ಮನೆಗೆ ತಲುಪಿಸಲಾಗುವುದು. ಪ್ರಜ್ಞೆ ಕಳೆದುಕೊಂಡವರು ಅಥವಾ ಆರೋಗ್ಯದಲ್ಲಿ ಏರುಪೇರಾದವರಿಗೂ ಈ ಸೇವೆ ಲಭ್ಯವಿದೆ. ಈ ಸೇವೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ, ಆದರೆ ಪ್ರೀತಿಯಿಂದ ನೀಡಿದರೆ ಸ್ವೀಕರಿಸಲಾಗುವುದು ಎಂದು ಚಾಲಕರು ತಿಳಿಸಿದ್ದಾರೆ. ಗಲಾಟೆಗಳನ್ನು ತಪ್ಪಿಸಿ ಸುರಕ್ಷಿತ ಹೊಸ ವರ್ಷಾಚರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಡ-ಹೆಂಡತಿಯನ್ನು ಜೀವಂತವಾಗಿ ಸುಟ್ಟುಹಾಕಿದ ಗ್ರಾಮಸ್ಥರು; ಕಾರಣ ಕೇಳಿದರೆ ಶಾಕ್ ಆಗ್ತೀರ – Kannada News | Assam Villagers burn couple alive over suspicion of witchcraft

ನವದೆಹಲಿ, ಡಿಸೆಂಬರ್ 31: ಅಸ್ಸಾಂನಲ್ಲೊಂದು (Assam) ಅಮಾನವೀಯ ಘಟನೆ ನಡೆದಿದೆ. ಇಲ್ಲಿನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಗ್ರಾಮಸ್ಥರ ಗುಂಪೊಂದು ದಂಪತಿಯನ್ನು ಹರಿತವಾದ ಆಯುಧಗಳಿಂದ ಹೊಡೆದು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಆ ದಂಪತಿ ಮಾಟಮಂತ್ರ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಹೀಗಾಗಿಯೇ ಅವರನ್ನು ಸುಟ್ಟುಹಾಕಲಾಗಿದೆ. ಮೃತರನ್ನು ಗಾರ್ಡಿ ಬಿರೋವಾ (43) ಮತ್ತು ಅವರ ಪತ್ನಿ ಮೀರಾ ಬಿರೋವಾ (33) ಎಂದು ಗುರುತಿಸಲಾಗಿದೆ.

ಇಲ್ಲಿನ ಬೆಲೋಗುರಿ ಮುಂಡಾ ಗ್ರಾಮದಲ್ಲಿ ಮಂಗಳವಾರ ಸಂಜೆ ಈ ಭೀಕರ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ರಾತ್ರಿ 9 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. “ಈ ಕೃತ್ಯ ಎಸಗಲು ಬಹುತೇಕ ಇಡೀ ಗ್ರಾಮದ ಜನರು ಒಗ್ಗೂಡಿದ್ದರು. ಹೀಗಾಗಿ ಅವರು ಯಾರೂ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ನಮ್ಮ ಆರಂಭಿಕ ತನಿಖೆಯ ಪ್ರಕಾರ, ಪತಿ ಮತ್ತು ಪತ್ನಿಯನ್ನು ಮೊದಲು ಥಳಿಸಿ ನಂತರ ಬೆಂಕಿ ಹಚ್ಚಲಾಯಿತು. ಅವರ ಮೂಳೆಗಳನ್ನು ಸಹ ನಮಗೆ ಪಡೆಯಲು ಸಾಧ್ಯವಾಗಲಿಲ್ಲ” ಎಂದು ಕರ್ಬಿ ಅಂಗ್ಲಾಂಗ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪುಷ್ಪರಾಜ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಗ್ರಹಚಾರ ಎಂದರೆ ಇದೇ ನೋಡಿ; ಸೋಫಾದಿಂದ ಏಳುವಾಗ ಆಕಸ್ಮಿಕವಾಗಿ ಗುಂಡು ಹಾರಿ ಎನ್​ಆರ್​ಐ ಸಾವು

ದುಷ್ಕರ್ಮಿಗಳು ಆರಂಭದಲ್ಲಿ ದಂಪತಿಗಳ ಮೇಲೆ ಮನೆಯೊಳಗೆ ಹಲ್ಲೆ ನಡೆಸಿದರು. ನಂತರ ಮನೆ ಸುಟ್ಟು ಭಸ್ಮವಾಯಿತು. ಬಳಿಕ ಆ ದಂಪತಿ ಬೆಂಕಿಯಲ್ಲಿ ಸಾವನ್ನಪ್ಪಿದರು. ಗ್ರಾಮಸ್ಥರು ದಂಪತಿಗಳು ಮಾಟಮಂತ್ರದಲ್ಲಿ ತೊಡಗಿದ್ದಾರೆಂದು ಶಂಕಿಸಿದ್ದರು. ಇದರಿಂದಾಗಿ ಆ ಊರಿನಲ್ಲಿ ಕೆಟ್ಟ ಘಟನೆಗಳು ಮತ್ತು ಅನಾರೋಗ್ಯ ಉಂಟಾಗಿದೆ ಎಂಬುದು ಅವರ ನಂಬಿಕೆಯಾಗಿತ್ತು. ಬೆಂಕಿ ಹಚ್ಚಿದ ಎಲ್ಲಾ ಅಪರಾಧಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:24 pm, Wed, 31 December 25

Source link

Video: ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ – Kannada News | New Year Festivities Ignite Bengaluru: Crowds Gather at MG Road and Brigade Road

ಬೆಂಗಳೂರು, ಡಿ.31: ನಗರವು ನವ ವರ್ಷದ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಯಂತಹ ಪ್ರಮುಖ ಸ್ಥಳಗಳಲ್ಲಿ ಲಕ್ಷಾಂತರ ಜನರು ಜಮಾಯಿಸುವ ನಿರೀಕ್ಷೆಯಿದೆ. ಈಗಾಗಲೇ ಹೊಸ ವರ್ಷದ ಕೌಂಟ್ ಡೌನ್‌ಗೆ ಕ್ಷಣಗಣನೆ ಆರಂಭವಾಗಿದ್ದು, ನಗರದಲ್ಲಿ ಜನಸಂದಣಿ ಹೆಚ್ಚುತ್ತಿದೆ. ಈ ಪ್ರದೇಶಗಳಲ್ಲಿನ ವಾತಾವರಣ ಸಂಪೂರ್ಣವಾಗಿ ಹಬ್ಬದ ಸಡಗರದಿಂದ ಕೂಡಿದೆ, ಎಲ್ಲೆಡೆ ಉತ್ಸಾಹ ಮತ್ತು ಸಡಗರ ಮನೆಮಾಡಿದೆ. ಜನರಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಉತ್ಸಾಹ “ಫುಲ್ ಜೋಶ್” ನಲ್ಲಿದೆ. ಪೊಲೀಸ್ ಇಲಾಖೆಯು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ. ಸಾರ್ವಜನಿಕರು ಸುರಕ್ಷಿತವಾಗಿ ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರನ್ನು ಉದ್ದೇಶಿಸಿ, “ಬರ್ರಿ, ಬರ್ರಿ ಮುಂದೆ. ಎಲ್ಲರೂ ಬರ್ತೀರಿ, ಟೆನ್ಶನ್ ತಗೋಬೇಡ್ರಿ. Happy New Year” ಎಂಬಂತಹ ಸ್ವಾಗತದ ಮಾತುಗಳು ಕೇಳಿಬರುತ್ತಿವೆ, ಇದು ಜನರನ್ನು ಇನ್ನಷ್ಟು ಹುರಿದುಂಬಿಸುತ್ತಿದೆ. ಒಟ್ಟಾರೆ, ಬೆಂಗಳೂರು ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಸನ್ನದ್ಧವಾಗಿದ್ದು, ಎಲ್ಲರೂ ಹೊಸ ಚೈತನ್ಯದೊಂದಿಗೆ ಹೊಸ ವರ್ಷಕ್ಕೆ ಕಾಲಿಡಲು ಕಾತರರಾಗಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್? ಎನ್​ಐಎ ತನಿಖೆಗೆ ಆಗ್ರಹಿಸಿದ ಅಶೋಕ್ – Kannada News | Kogilu Displaced Persons Case: Is There a Pakistan Link? BJP Leader Ashok Demands NIA Probe

ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅನಧಿಕೃತ ಶೆಡ್, ಮನೆಗಳಲ್ಲಿದ್ದವರ ಪೌರತ್ವ ಮತ್ತು ಮೂಲದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್ಐಎ) ತನಿಖೆ ನಡೆಸಬೇಕೆಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಕೋಗಿಲು ಬಡಾವಣೆಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅಶೋಕ್, ಇಲ್ಲಿ ಮನೆಗಳ ತೆರವು ಮಾಡಿದ ಕೂಡಲೇ ಪಾಕಿಸ್ತಾನದ ಸಚಿವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟು ಬೇಗ ಅಲ್ಲಿಗೆ ಹೇಗೆ ಮಾಹಿತಿ ಹೋಯಿತು? ಇಲ್ಲಿದ್ದ ಸ್ಲೀಪರ್​ ಸೆಲ್​​ನಿಂದ ಹೋಗಿರಬಹುದಲ್ಲವೇ? ಈ ಅನುಮಾನದ ಬಗ್ಗೆ ಎನ್​ಐಎ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳು ಕೇರಳದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವೇದಿಕೆ ಹಂಚಿಕೊಂಡಿರುವುದನ್ನು ಅಶೋಕ್ ಖಂಡಿಸಿದ್ದಾರೆ. ಕೇರಳ ಸರ್ಕಾರ ಕರ್ನಾಟಕವನ್ನು ಬುಲ್ಡೋಜರ್ ರಾಜ್ಯ ಎಂದು ಕರೆದಿದ್ದರೂ, ಸಿಎಂ ವೇದಿಕೆ ಹಂಚಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದ್ದಾರೆ. ಅತಿಕ್ರಮಣ ತೆರವುಗೊಳಿಸಿದ ಕನ್ನಡಿಗರಿಗೆ ಪರಿಹಾರ ನೀಡುವ ಬದಲು, ಸರ್ಕಾರವು ಬಾಂಗ್ಲಾದೇಶ ಮೂಲದವರು ಎಂದು ಆರೋಪಿಸಲಾದವರಿಗೆ ಆಶ್ರಯ ನೀಡಲು ಯತ್ನಿಸುತ್ತಿದೆ ಎಂದು ಆಪಾದಿಸಿದ್ದಾರೆ. ನಿಜವಾದ ಕನ್ನಡಿಗರು, ಮಳೆಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ಇನ್ನೂ ನೆರವು ನೀಡಿಲ್ಲ. ಅಕ್ರಮ ಬಾಂಗ್ಲಾ ವಲಸಿಗರಿಗೆ ನೀಡಲು ಮುಂದಾಗಿದೆ ಎಂದು ಅಶೋಕ್ ಕಿಡಿ ಕಾರಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯೂಇಯರ್​ ಪಾರ್ಟಿಗೆ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ ವೇಳೆ ಪೊಲೀಸ್​​​​ ಕೈಗೆ ಸಿಕ್ಕಿಬಿದ್ದ ನೈಜಿರಿಯಾ ಮೂಲದ ವ್ಯಕ್ತಿ – Kannada News | Devanahalli Drug Seizure: Nigerian National Caught Supplying for NYE Parties

ಬೆಂಗಳೂರು, ಡಿ.31: ಒಂದು ಕಡೆಯಲ್ಲಿ ಬೆಂಗಳೂರಿನಲ್ಲಿ (Bengaluru drug) ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ ಹಾಗೂ ಇಂದಿರಾನಗರ ಇನ್ನು ಅನೇಕ ಕಡೆ ಈಗಾಗಲೇ ಜನ ಸೇರಿದ್ದಾರೆ. ಪಬ್​​​ಗಳಲ್ಲಿ ಪಾರ್ಟಿ ಶುರುವಾಗಿದೆ. ಜತೆಗೆ ಪೊಲೀಸ್​​​​ ಕಣ್ಗಾವಲು ಇದೆ. ಬಿಗಿ ಭದ್ರತೆ ಇದೆ. ಇದರ ನಡುವೆ ನ್ಯೂಇಯರ್​ ಪಾರ್ಟಿಗೆ ಡ್ರಗ್ಸ್​ ಸಪ್ಲೈ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ನೈಜಿರಿಯಾ ಮೂಲದ ವ್ಯಕ್ತಿ ಡ್ರಗ್ಸ್​ ಸಪ್ಲೈ ಮಾಡುತ್ತಿದ್ದ ಎಂದು ಹೇಳಲಾಗಿದೆ. ದೇವನಹಳ್ಳಿ ಠಾಣೆ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ನಡೆಸಿದ ವೇಳೆ ಈತ ಸಿಕ್ಕಿಬಿದ್ದಿದ್ದಾನೆ. ಏರ್​​ಪೋರ್ಟ್​ ಬ್ಯಾಕ್​ ಗೇಟ್​ ಬಳಿ ಮಾರುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಇದೀಗ ಈ ನೈಜಿರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದ್ದು, 21 ಗ್ರಾಂ ಕೊಕೇನ್ ಹಾಗೂ 30 ಗ್ರಾಂ MDMA ಸೀಜ್​ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷ ಹಿನ್ನೆಲೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಹಿಂದೆ ಕೂಡ ಈ ವ್ಯಕ್ತಿ ಡ್ರಗ್ಸ್​​​​​ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಇತರ ಪ್ರದೇಶದಲ್ಲೂ ಕೂಡ ಪೊಲೀಸರ ವಿಶೇಷ ತಂಡ ಕಾರ್ಯಚರಣೆ ನಡೆಸಿದ್ದಾರೆ.

ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಿದ ಮಹಾ ಪೊಲೀಸ್:

ಈ ಹಿಂದೆ ಮಹಾರಾಷ್ಟ್ರ ಪೊಲೀಸರು ಬಂದು ಬೆಂಗಳೂರಿನಲ್ಲಿದ್ದ ಡ್ರಗ್ಸ್ ಫ್ಯಾಕ್ಟರಿಯನ್ನು ಪತ್ತೆ ಮಾಡಿದ್ದರು. ಫ್ಯಾಕ್ಟರಿ ತಯಾರಿಸಲು ದಂಧೆಕೋರರು ಆಲ್ ಇಂಡಿಯಾ ಪ್ಲಾನ್ ಮಾಡುತ್ತಿದ್ದರು ಎಂದು ತಿಳಿದು ಬಂದಿತು. ಕೇವಲ 8 ಕಿ.ಮೀ ವ್ಯಾಪ್ತಿಯಲ್ಲಿ ದಂಧೆ ನಡೆಸಲು ಪಕ್ಕಾ ಸೆಟಪ್ ಮಾಡಿದ್ದರು. ಇದರ ಮಧ್ಯೆ ಡ್ರಗ್ಸ್ ದಂಧೆಯನ್ನು ಭೇದಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆ ಮೂವರು ಇನ್ಸ್​​ಪೆಕ್ಟರ್​​ಗಳನ್ನು ಅಮಾನತು ಮಾಡಲಾಗಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಜಾಲಕ್ಕೆ NCB ಶಾಕ್​​: 8 ಕೋಟಿ ಮೌಲ್ಯದ ಡ್ರಗ್ಸ್​​ ಸೀಜ್​

ಅಂತಾರಾಷ್ಟ್ರೀಯ ಮಾದಕವಸ್ತು ಜಾಲವನ್ನು ಭೇದಿಸಿದ ಎನ್‌ಸಿಬಿ:

ಅಂತಾರಾಷ್ಟ್ರೀಯ ಮಾದಕವಸ್ತು ಜಾಲವನ್ನು ಎನ್‌ಸಿಬಿ ಭೇದಿಸಿದೆ. ಬೆಂಗಳೂರು ಮೂಲಕ ಕಾರ್ಯನಿರ್ವಹಿಸುತ್ತಿದ್ದ ಅಂತಾರಾಷ್ಟ್ರೀಯ ಮಾದಕವಸ್ತು ಜಾಲಗಳು ಕಂಡು ಬಂದಿದೆ. ಸುಮಾರು 160 ಕಿಲೋಗ್ರಾಂ ತೂಕದ ಖಾಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಮೌಲ್ಯವು ಸುಮಾರು 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 2018ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಖಾಟ್ ಅನ್ನು ಮಾದಕ ವಸ್ತು ಪಟ್ಟಿಗೆ ಸೇರಿಸಿಸಲಾಗಿತ್ತು. ಆ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾಟ್​​ ಎಲೆಗಳನ್ನು ವಶಪಡಿಸಿಕೊಂಡಿರೋದು ರಾಜ್ಯದಲ್ಲಿ ಇದೇ ಮೊದಲು ಎಂದು ಎನ್​​ಸಿಬಿ ತಿಳಿಸಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:08 pm, Wed, 31 December 25

Source link

ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ; ರಷ್ಯಾದಿಂದ ಮೊದಲ ವಿಡಿಯೋ ಬಿಡುಗಡೆ – Kannada News | Russia releases Ukraine drone footage which targeted Putin’s residence

ಮಾಸ್ಕೋ, ಡಿಸೆಂಬರ್ 31: ಉಕ್ರೇನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿವಾಸವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ (Russia) ಹೇಳಿಕೊಂಡಿದೆ. ಆದರೆ, ಉಕ್ರೇನ್ ಈ ಆರೋಪವನ್ನು ನಿರಾಕರಿಸಿದೆ. ಇದರ ನಡುವೆ ರಷ್ಯಾ ತಾನು ಪತನಗೊಳಿಸಿದ ಉಕ್ರೇನ್​ನ ಡ್ರೋನ್​ಗಳ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದೆ. ನವ್ಗೊರೊಡ್ ಪ್ರದೇಶದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸಂಬಂಧಿಸಿದ ನಿವಾಸವನ್ನು ಹೊಡೆಯಲು ಉಕ್ರೇನ್ ಪ್ರಯತ್ನ ಮಾಡಿತ್ತು ಎಂದು ಆರೋಪಿಸಿರುವ ರಷ್ಯಾ ತಾನು ಹೊಡೆದುರುಳಿಸಿದ ಡ್ರೋನ್‌ನ ರಾತ್ರಿಯ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಹಿಮದಿಂದ ಆವೃತವಾದ ಕಾಡಿನಲ್ಲಿ ಬಿದ್ದಿರುವ, ಹಾನಿಗೊಳಗಾದ ಉಕ್ರೇನ್​ನ ಮಾನವರಹಿತ ವೈಮಾನಿಕ ವಾಹನವಿದು ಎಂದು ಮಾಸ್ಕೋ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹೊಸ ವರ್ಷಕ್ಕೆ ಹೊಸ ಚಾಲೆಂಜ್; 10 ದಿನ ಸಕ್ಕರೆ ತಿನ್ನದಿದ್ದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ನೋಡಿ – Kannada News | Sugar Detox: 10 Days to a Healthier You

ಇತ್ತೀಚಿಗೆ ಶುಗರ್ (Sugar) ಫ್ರೀ ಚಾಲೆಂಜ್ ನಡೆಯುತ್ತಿದ್ದು ಇದು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು, ತೂಕ ಇಳಿಸಿಕೊಳ್ಳಲು, ದೇಹದಲ್ಲಿರುವ ಶಕ್ತಿಯನ್ನು ಹೆಚ್ಚಿಸಲು ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆದರೆ ಸಿಹಿ ತಿನ್ನುವ ಬಯಕೆ ಅಥವಾ ಹಂಬಲವನ್ನು ನಿಯಂತ್ರಿಸುವುದು ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಅಷ್ಟು ಸುಲಭವಲ್ಲ, ಅದೊಂದು ಸವಾಲಾಗಿರುತ್ತದೆ. ಆದರೆ ಸಿಹಿ ತಿಂಡಿ ಸೇವನೆ ಮಾಡುವುದನ್ನು ಕಡಿಮೆ ಮಾಡುವ ಮೂಲಕ ಅಥವಾ ತ್ಯಜಿಸುವ ಮೂಲಕ ಒಬ್ಬ ವ್ಯಕ್ತಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಸಕ್ಕರೆಯ ಸೇವನೆ ಅಥವಾ ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿದ ನಂತರ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳಾಗುತ್ತವೆ, ಈ ಬಗ್ಗೆ ತಜ್ಞರ ಅಭಿಪ್ರಾಯವೇನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ಹಣ್ಣು, ತರಕಾರಿ ಮತ್ತು ಡೈರಿ ಉತ್ಪನ್ನಗಳಂತಹ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಎಲ್ಲಾ ಆಹಾರಗಳಲ್ಲಿ ಸಕ್ಕರೆ ನೈಸರ್ಗಿಕವಾಗಿ ಕಂಡುಬರುತ್ತದೆ. ಈ ರೀತಿ ನೈಸರ್ಗಿಕವಾಗಿ ಕಂಡುಬರುವ ಸಿಹಿಅಂಶವಿರುವ ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದರೆ ನಾವು ಸೇವಿಸುವ ಆಹಾರಗಳಿಗೆ ಹೆಚ್ಚಿನ ಸಕ್ಕರೆ ಸೇರಿಸುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸಕ್ಕರೆ ಅಥವಾ ಸಿಹಿ ಸೇವನೆ ಮಾಡುವುದನ್ನು ಕಡಿಮೆ ಮಾಡುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆರಂಭದಲ್ಲಿ, ಒಮ್ಮೆಲೇ ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದಾಗ ಕೆಲವರಲ್ಲಿ ತಲೆನೋವು, ಆಯಾಸ ಅಥವಾ ಮಾನಸಿಕ ಬದಲಾವಣೆ ಅನುಭವಕ್ಕೆ ಬರುತ್ತದೆ, ಆದರೆ ಅಂತಿಮವಾಗಿ ಅಂದರೆ ದೀರ್ಘಾವಧಿಯಲ್ಲಿ ಉತ್ತಮ ಫಲಿತಾಂಶ ನೀಡುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ: ಚಳಿಗೆ ಬಿಸಿಬಿಸಿಯಾಗಿ ತಿನ್ನಬೇಕು ಅಂತಾ ಅನಿಸುತ್ತಾ? ಅಪ್ಪಿತಪ್ಪಿಯೂ ಸಂಜೆ 6 ಗಂಟೆಯ ನಂತರ ಈ ಆಹಾರಗಳನ್ನು ತಿನ್ನಬೇಡಿ

ಸಕ್ಕರೆ ಸೇವನೆ ಮಾಡದಿದ್ದರೆ ಏನಾಗುತ್ತದೆ?

10 ದಿನ ಸಕ್ಕರೆ ಸೇವನೆ ಮಾಡುವುದನ್ನು ನಿಲ್ಲಿಸಿದರೆ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟದಲ್ಲಿ ಬದಲಾವಣೆಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವು ಆರು ದಿನಗಳಲ್ಲಿ ಸುಧಾರಿಸಬಹುದು, ಮಾನಸಿಕ ಸ್ಥಿತಿ ಒಂದು ವಾರದೊಳಗೆ ಬದಲಾಗಬಹುದು ಮತ್ತು ಚರ್ಮವು ಹತ್ತು ದಿನಗಳಲ್ಲಿ ಕಾಂತಿಯುತವಾಗಿ ಕಾಣಬಹುದು ಎಂದು ಸಂಶೋಧನೆ ಹೇಳುತ್ತದೆ. ದೇಹದ ತೂಕದಲ್ಲಿನ ಬದಲಾವಣೆಗಳನ್ನು ಗಮನಿಸಲು ಕನಿಷ್ಠ ಒಂದು ತಿಂಗಳ ಕಾಲ ಸಕ್ಕರೆಯಿಂದ ದೂರವಿರುವುದರ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸಬೇಕಾಗುತ್ತದೆ. ವಯಸ್ಕರು ದಿನಕ್ಕೆ 30 ಗ್ರಾಂ ಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು ಮತ್ತು ಎರಡರಿಂದ ಮೂರು ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 14 ಗ್ರಾಂ ಗಿಂತ ಹೆಚ್ಚು ಸಕ್ಕರೆಯನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link