ಬೆಂಗಳೂರು: ಕೋಗಿಲು ಲೇಔಟ್ ನಿರಾಶ್ರಿತರಿಗೆ ವಸತಿ ಭಾಗ್ಯ; ಮನೆ ಹಸ್ತಾಂತರಕ್ಕೆ ದಿನಾಂಕ ನಿಗದಿ – Kannada News | Bengaluru: Kogilu Housing Project Handover on January 2, Victims to Receive New Homes
ಬೆಂಗಳೂರು, ಡಿಸೆಂಬರ್ 31: ಕೋಗಿಲು (Kogilu) ಸುತ್ತ ರಾಜಕೀಯ ಜಟಾಪಟಿ ಜೋರಾಗಿ ನಡೆಯುತ್ತಿದೆ. ಇದೇ ವಿಚಾರ ಮುಂದಿಟ್ಟುಕೊಂಡು ವಿಪಕ್ಷ ಬಿಜೆಪಿ ಸರ್ಕಾರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ. ಕೋಗಿಲು ಲೇಔಟ್ನಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದವರಿಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ಕೊಡುತ್ತಿದೆ. ಇದೀಗ ಜನವರಿ 2ರಂದು ಕೋಗಿಲು ನಿರಾಶ್ರಿತರಿಗೆ ಮನೆ (home) ಹಸ್ತಾಂತರಕ್ಕೆ ಸರ್ಕಾರ ದಿನಾಂಕ ನಿಗದಿ ಮಾಡಿದೆ. ನಿರಾಶ್ರಿತರಿಗೆ ವಸತಿ ಭಾಗ್ಯ ಯಲಹಂಕ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಹಿನ್ನೆಲೆ ಅರ್ಹ ಸಂತ್ರಸ್ತರಿಗೆ ಜಿಬಿಎ…