ಇನ್ಸ್ಟಾಗ್ರಾಂ ವಿಡಿಯೋ ನೋಡಿ ಸಿನಿಮಾನಲ್ಲಿ ಅವಕಾಶ ಕೊಟ್ಟ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ (Vijay Deverakonda) ಈಗ ಟಾಲಿವುಡ್ನ ಸ್ಟಾರ್ ನಟರಲ್ಲಿ ಒಬ್ಬರು. ಯಾವುದೇ ಗಾಡ್ಫಾದರ್ಗಳಿಲ್ಲದೆ ತೀರ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಒಂದೊಂದೇ ಮೆಟ್ಟಿಲು ಏರಿ ಈಗ ಸ್ಟಾರ್ ಆದವರು. ಸ್ಟಾರ್ ಆದ ಬಳಿಕ ತನ್ನಂತೆ ಪ್ರತಿಭೆ ಇರುವ ಆದರೆ ಗಾಡ್ ಫಾದರ್ಗಳಿಲ್ಲದ ಯುವಕರಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮಾಡುತ್ತಾ ಸಿನಿಮಾ ಅವಕಾಶಕ್ಕಾಗಿ ಹುಡುಕಾಡುತ್ತಿದ್ದ ಯುವಕನೊಬ್ಬನಿಗೆ ವಿಜಯ್ ದೇವರಕೊಂಡ ಸಿನಿಮಾನಲ್ಲಿ ಅವಕಾಶ ಕೊಟ್ಟು, ಆತನ ಕನಸು ನನಸು ಮಾಡಿದ್ದಾರೆ. ಜೀವನ್ ಹೆಸರಿನ ಯುವಕನೊಬ್ಬ…