ಲಡಾಖ್‌ನ ಜೋಜಿಲಾದಲ್ಲಿ ಭಾರೀ ಹಿಮಪಾತವಾಗಿ 7 ಮಂದಿ ಸಾವು; ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ಲಡಾಖ್, ಮಾರ್ಚ್ 27: ಲಡಾಖ್‌ನ ಜೋಜಿಲಾ ಪಾಸ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ (Ladakh avalanche) 7 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವಾರು ಜನರು ಹಿಮಪಾತದಿಂದ ಹೂತುಹೋಗಿರುವ ವಾಹನಗಳಲ್ಲಿ ಸಿಲುಕಿಕೊಂಡಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 5 ವಾಹನಗಳು ಭಾರೀ ಹಿಮದ ಅಡಿಯಲ್ಲಿ ಹೂತುಹೋಗಿರುವುದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ವಾಹನಗಳು ಹಿಮಪಾತದಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಶ್ರೀನಗರ-ಲೇಹ್ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಹಠಾತ್ ಮತ್ತು ತೀವ್ರವಾದ ಹಿಮಪಾತವು ಹಲವಾರು ವಾಹನಗಳನ್ನು ಆವರಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ….