IPL 2026: ಆರ್ಸಿಬಿ ವಿರುದ್ಧ ಸೇಡಿನ ಸಮರಕ್ಕೆ ಸಜ್ಜಾದ ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ (Vaibhav Suryavanshi).. ಪ್ರಸ್ತುತ ಕ್ರಿಕೆಟ್ ಲೋಕದಲ್ಲಿ ಓಡುತ್ತಿರುವ ಕುದುರೆ. ತನ್ನ ಪ್ರತಿಭೆಯಿಂದ ಕೇವಲ 15ನೇ ವಯಸ್ಸಿನಲ್ಲೇ ವಿಶ್ವ ಕ್ರಿಕೆಟ್ನ ಮನೆಮಾತಾಗಿರುವ ಈ ಪೋರ ಪ್ರಸ್ತುತ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ (IPL) ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲೇ ರಾಜಸ್ಥಾನ್ ಪರ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ವೈಭವ್, ಇದೀಗ ತನ್ನ ಹಳೆಯ ಆಟವನ್ನು ಈ ಆವೃತ್ತಿಯಲ್ಲೂ ಮುಂದುವರೆಸಿದ್ದಾರೆ. ಬಲಿಷ್ಠ ತಂಡಗಳೆದುರು ಅದರಲ್ಲೂ ಸ್ಟಾರ್ ಬೌಲರ್ಗಳ ಎದುರು ವೈಭವ್ ಅವರ ನಿರ್ಭೀತಿಯ ಆಟ ಪ್ರೇಕ್ಷಕರನ್ನು ಹುಚ್ಚೆದ್ದು…