All posts by nagaraj11081993

ಕ್ಷಮಿಸು ಡಿಂಪಿ, ಮಹಿಳಾ ಕಾಲೇಜಿನ ಗೋಡೆಯ ಮೇಲೆ ಪ್ರೇಮ ಪುರಾಣ, ಆದ್ರೆ ಸೆಕ್ಯೂರಿಟಿ ಗಾರ್ಡ್ ಬೆಚ್ಚಿಬಿದ್ದಿದ್ದೇಕೆ?

ಕ್ಷಮಿಸು ಡಿಂಪಿ, ಮಹಿಳಾ ಕಾಲೇಜಿನ ಗೋಡೆಯ ಮೇಲೆ ಪ್ರೇಮ ಪುರಾಣ, ಆದ್ರೆ ಸೆಕ್ಯೂರಿಟಿ ಗಾರ್ಡ್ ಬೆಚ್ಚಿಬಿದ್ದಿದ್ದೇಕೆ?

ಧನಬಾದ್, ಏಪ್ರಿಲ್ 10: ಪ್ರೀತಿ(Love) ಎಂಬುದು ಒಂದು ಮಾಯೆ,   ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಇಳಿಸುತ್ತೆ ಅಂತಾರೆ. ಆದರೆ ಧನ್‌ಬಾದ್‌ನ ಬಿಎಸ್‌ಎಸ್ (BSS) ಮಹಿಳಾ ಕಾಲೇಜಿನ ಮುಂದೆ ನಡೆದ ಘಟನೆ ಮಾತ್ರ ವಿದ್ಯಾರ್ಥಿನಿಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಒಬ್ಬ ಹತಾಶ ಪ್ರೇಮಿ ತನ್ನ ಪ್ರೇಯಸಿಯ ಕ್ಷಮೆ ಕೇಳಲು ಇಡೀ ಕಾಲೇಜಿನ ದ್ವಾರವನ್ನೇ ಪೋಸ್ಟರ್‌ಗಳಿಂದ ತುಂಬಿಸಿದ ಘಟನೆ ಗುರುವಾರ (ಏಪ್ರಿಲ್ 9) ನಡೆದಿದೆ.

ಕಾಲೇಜಿನ ಮುಖ್ಯ ದ್ವಾರದ ಗೋಡೆಗಳ ಮೇಲೆ ಬಿಳಿ ಬಣ್ಣದ ದೊಡ್ಡ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದವು. ನನ್ನನ್ನು ಕ್ಷಮಿಸಿ ಡಿಂಪಿ, ನನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ, ನೀನು ನನಗೆ ತುಂಬಾ ಮುಖ್ಯ ಎಂಬ ಪೋಸ್ಟರ್‌ಗಳು ದಾರಿಹೋಕರ ಗಮನ ಸೆಳೆದವು.

ಕಾಲೇಜಿನ ಭದ್ರತಾ ಸಿಬ್ಬಂದಿ ಮತ್ತು ಪ್ಯೂನ್ ಈ ಪೋಸ್ಟರ್‌ಗಳನ್ನು ತೆಗೆದುಹಾಕಲು ಮುಂದಾದಾಗ, ಅಲ್ಲಿಯೇ ಹೊಂಚು ಹಾಕುತ್ತಿದ್ದ ಯುವಕನೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಪೋಸ್ಟರ್‌ಗಳನ್ನು ಮುಟ್ಟಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಗಾರ್ಡ್‌ಗಳಿಗೆ ಎಚ್ಚರಿಕೆ ನೀಡಿ ಗಲಾಟೆ ಮಾಡಿದ್ದಾನೆ. ಗದ್ದಲ ಕೇಳಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕರುಣಾ ಸಿಂಗ್ ಅವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ, ಆರೋಪಿ ಯುವಕ ಅಲ್ಲಿಂದ ಬೈಕ್ ಹತ್ತಿ ಪರಾರಿಯಾಗಿದ್ದಾನೆ.ನಂತರ ಸಿಬ್ಬಂದಿಗಳು ಎಲ್ಲಾ ಪೋಸ್ಟರ್‌ಗಳನ್ನು ಹರಿದು ಹಾಕಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಮತ್ತಷ್ಟು ಓದಿ: ಪ್ರೀತಿ ವಿಚಾರ ಹುಡುಗಿ ಮನೆಗೆ ಗೊತ್ತಾಯ್ತು, ಅವ್ರು ಒಪ್ಪದಿದ್ರೆ ಮಗ ಏನಾದ್ರೂ ಮಾಡಿಕೊಂಡಾನು ಎಂದು ತಂದೆ ಜತೆನೇ ಇದ್ರೂ ಉಳಿಸಲಾಗಲಿಲ್ಲ

ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪ್ರಾಂಶುಪಾಲರು, ಇದು ಕೇವಲ ಪ್ರೇಮದ ವಿಷಯವಲ್ಲ, ವಿದ್ಯಾರ್ಥಿನಿಯರ ಸುರಕ್ಷತೆಯ ಪ್ರಶ್ನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಂದು ಪೋಸ್ಟರ್ ಅಂಟಿಸಿದವನು ನಾಳೆ ಕಾಲೇಜಿನ ಒಳಗೆ ಬಂದು ಅಹಿತಕರ ಕೃತ್ಯ ಎಸಗಬಹುದು. ಇಂತಹ ವ್ಯಕ್ತಿಗಳಿಂದ ವಿದ್ಯಾರ್ಥಿನಿಯರಿಗೆ ಅಪಾಯವಿದೆ, ಎಂದು ಡಾ. ಕರುಣಾ ಸಿಂಗ್ ಹೇಳಿದ್ದಾರೆ.

ಘಟನೆಯ ಕುರಿತು ಧನ್‌ಬಾದ್ ಉಪ ಆಯುಕ್ತರು (DC) ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ. ಕಾಲೇಜಿನ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಡಿಂಪಿ ಯಾರು ಮತ್ತು ಆ ಹತಾಶ ಪ್ರೇಮಿ ಯಾರು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

RCB v/s RR: ತವರಿನಿಂದ ಹೊರಗೆ ಆರ್​ಸಿಬಿಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ? ಇಲ್ಲಿದೆ ಫುಲ್ ಡಿಟೇಲ್ಸ್

ಐಪಿಎಲ್ 2026 ರಲ್ಲಿ ಇಂದು (ಏಪ್ರಿಲ್ 10) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ಮುಖಾಮುಖಿಯಾಗುತ್ತಿದ್ದು, ಈ ಋತುವಿನ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಇದೂ ಒಂದಾಗಲಿದೆ. ಆರ್‌ಆರ್ ಇದುವರೆಗಿನ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದ್ದರೆ, ಆರ್‌ಸಿಬಿ ಆಡಿರುವ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್​ನಲ್ಲಿದೆ. ಆರ್‌ಆರ್ ತಂಡ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಯುವ ಆರಂಭಿಕ ಆಟಗಾರರಿಂದ ಪ್ರಬಲ ಪ್ರದರ್ಶನವನ್ನು ನೀಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ 11 ಓವರ್​ಗಳಲ್ಲಿ 150 ರನ್ ಗಳಿಸಿದ್ದು ಅವರ ಸ್ಫೋಟಕ ಬ್ಯಾಟಿಂಗ್​ಗೆ ಸಾಕ್ಷಿ. ಬೌಲಿಂಗ್​ನಲ್ಲಿ ಸಂದೀಪ್ ಶರ್ಮಾ, ಜಾಫ್ರಾ ಆರ್ಚರ್ ಮತ್ತು ರಿಯಾನ್ ಪರಾಗ್ ಉತ್ತಮ ಪ್ರದರ್ಶನ ನೀಡಿದ್ದಾರೆ.

ಮತ್ತೊಂದೆಡೆ, ಆರ್‌ಸಿಬಿ ಕೂಡ ಬಲಿಷ್ಠವಾದ ‘ವಿನ್ನಿಂಗ್ ಕಾಂಬಿನೇಶನ್’ ಹೊಂದಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ತಂಡದ ಆಟಗಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂಡದ ಭಾರತೀಯ ಆಟಗಾರರು ನಿರ್ಣಾಯಕ ಸಂದರ್ಭಗಳಲ್ಲಿ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ತವರಿನಿಂದ ಹೊರಗೆ ಮೊದಲ ಪಂದ್ಯ ಇದಾಗಿದ್ದು, ಕುತೂಹಲ ಹೆಚ್ಚಿಸಿದೆ. ಹೇಗಿದೆ ಉಭಯ ತಂಡಗಳ ಬಲಾಬಲ ಎಂಬ ವಿಶ್ಲೇಷಣೆ ಇಲ್ಲಿದೆ ನೋಡಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿನಿಮಾ ಆಗಲಿದೆ ಇಮ್ಮಡಿ ಪುಲಿಕೇಶಿ ಜೀವನ-ಸಾಧನೆ: ಸಿನಿಮಾ ಹೆಸರೇನು?

ಬಾಲಿವುಡ್​​ನಲ್ಲಿ (Bollywood) ಒಂದರ ಹಿಂದೊಂದು ಐತಿಹಾಸಿಕ ಸಿನಿಮಾಗಳು, ಜೀವನ ಆಧರಿತ ಬಯೋಪಿಕ್ ಸಿನಿಮಾಗಳು ನಿರ್ಮಾಣ ಆಗುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚೆಗೆ ಐತಿಹಾಸಿಕ ಮಹತ್ವವುಳ್ಳ ರಾಜರ, ಮಹಾರಾಜರ ಕತೆಗಳು ಸಿನಿಮಾಗಳಾಗುತ್ತಿವೆ. ಆದರೆ ಈ ಪದ್ಧತಿ ದಕ್ಷಿಣದಲ್ಲಿ ವಿಶೇಷವಾಗಿ ಕನ್ನಡದಲ್ಲಿ ಬಹಳ ವಿರಳ. ಎಲ್ಲೋ ಅಲ್ಲೊಂದು ಇಲ್ಲೊಂದು ಐತಿಹಾಸಿಕ ಸಿನಿಮಾಗಳು ಸೆಟ್ಟೇರುತ್ತವೆಯಷ್ಟೆ. ಅದರಲ್ಲೂ ರಾಜ-ಮಹಾರಾಜರ ಜೀವನ ಆಧರಿಸಿದ ಸಿನಿಮಾಗಳಂತೂ ಬಹಳ ವಿರಳ. ಆದರೆ ಇದೀಗ ಕನ್ನಡದ ದೊರೆ ಇಮ್ಮಡಿ ಪುಲಿಕೇಶಿ ಜೀವನ, ಸಾಹಸ, ಸಾಧನೆ ಕುರಿತು ಹೇಳುವ ಕನ್ನಡ ಸಿನಿಮಾ ಒಂದು ಸೆಟ್ಟೇರಲು ಸಿದ್ಧವಾಗಿದೆ.

ದಕ್ಷಿಣ ಭಾರತದ ಶ್ರೇಷ್ಠ ದೊರೆ, ಚಾಲುಕ್ಯ ಸಾಮ್ರಾಜ್ಯದ ಅಧಿಪತಿ ಇಮ್ಮಡಿ ಪುಲಕೇಶಿಯ ಸಾಹಸಮಯ ಬದುಕನ್ನು ತೆರೆಯ ಮೇಲೆ ತರಲು ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ಕೆಎಂ ಚೈತನ್ಯ ಸಜ್ಜಾಗಿದ್ದಾರೆ. ಈ ಬೃಹತ್‌ ಐತಿಹಾಸಿಕ ಚಿತ್ರಕ್ಕೆ ‘ಎರೆಯ’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ. ಈ ಹಿಂದೆ ಡಾ ರಾಜ್​​ಕುಮಾರ್ ಅವರು ‘ಇಮ್ಮಡಿ ಪುಲಿಕೇಶಿ’ ಸಿನಿಮಾನಲ್ಲಿ ನಟಿಸಿದ್ದರು. ಡಾಲಿ ಧನಂಜಯ್ ನಟನೆಯ ಸಿನಿಮಾ ಘೋಷಣೆ ಆಗಿತ್ತಾದರೂ ಅದು ಸೆಟ್ಟೇರಿದಂತಿಲ್ಲ.

6ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನಾಳಿದ ದಂತಕಥೆ ಇಮ್ಮಡಿ ಪುಲಕೇಶಿಯ ಜೀವನ, ಆಡಳಿತ ಚಾತುರ್ಯ ಮತ್ತು ಯುದ್ಧದ ಸಾಹಸಗಾಥೆಗಳನ್ನು ಈ ಸಿನಿಮಾ ಒಳಗೊಂಡಿರಲಿವೆ. ಇಮ್ಮಡಿ ಪುಲಕೇಶಿಯ ಆಳ್ವಿಕೆಯ ಸುವರ್ಣಯುಗವನ್ನು ಚಿತ್ರದಲ್ಲಿ ಮರುಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ‘ಆ ದಿನಗಳು’ ನಿರ್ದೇಶಕ ಕೆಎಂ ಚೈತನ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತಿಹಾಸ ತಜ್ಞ ಡಾ ಭೂಷಣ್ ಶಾನಭಾಗ್ ಅವರು ನಡೆಸಿರುವ ಆಳವಾದ ಸಂಶೋಧನೆಯ ಆಧಾರದ ಮೇಲೆ ಚಿತ್ರಕಥೆಯನ್ನು ಸಿದ್ಧಪಡಿಸಿದ್ದಾರೆ ಚೈತನ್ಯ.

ಇದನ್ನೂ ಓದಿ:‘ಸ್ಪಿರಿಟ್’ ಬಳಿಕ ಮತ್ತೊಬ್ಬ ಸ್ಟಾರ್ ನಟನ ಜೊತೆ ಸಂದೀಪ್ ರೆಡ್ಡಿ ಸಿನಿಮಾ

ವಿಂಗ್‌ಸ್ಪ್ಯಾನ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸುನೀತ್ ಜಾವಡೇಕರ್ ಮತ್ತು ನಿವೇದಿತಾ ಕೊಠಾರೆ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿ ಮತ್ತು ದಕ್ಷಿಣ ಭಾರತದ ಉಳಿದ ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಸಿನಿಮಾದ ನಾಯಕ ಸೇರಿದಂತೆ ಇತರೆ ಪಾತ್ರಗಳ ಆಯ್ಕೆ ಜಾರಿಯಲ್ಲಿದ್ದು, ಶೀಘ್ರವೇ ತಾರಾಗಣ ಹಾಗೂ ತಾಂತ್ರಿಕ ವರ್ಗವನ್ನು ಘೋಷಿಸಲಾಗುವುದು ಎಂದು ಚಿತ್ರತಂಡ ಹೇಳಿದೆ. ಕೆಎಂ ಚೈತನ್ಯ ಸದ್ಯಕ್ಕೆ ‘ಬಲರಾಮನ ದಿನಗಳು’ ಸಿನಿಮಾದ ಚಿತ್ರೀಕರಣ ಮತ್ತು ಬಿಡುಗಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆ ಸಿನಿಮಾದ ಕೆಲಸಗಳು ಮುಗಿದ ಬಳಿಕ ‘ಎರೆಯ’ ಸಿನಿಮಾದ ಕಾರ್ಯ ಶುರುವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿಸಿ

Source link

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಬ್ಬಾಳಿಕೆ: ಟ್ಯಾಂಕರ್ ಶುಲ್ಕದ ವಿರುದ್ಧ ಗುಡುಗಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಏಪ್ರಿಲ್ 10: ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಂತಿರುವ ಹಾರ್ಮುಜ್ ಜಲಸಂಧಿ(Hormuz Strait)ಯ ಸುತ್ತ ಈಗ ರಾಜತಾಂತ್ರಿಕ ಸಮರ ತಾರಕಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಈ ಸಂಘರ್ಷವು ವಿಶ್ವದ ಆರ್ಥಿಕತೆಯ ಮೇಲೆ ಆತಂಕದ ನೆರಳು ಮೂಡಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮದ ಒಪ್ಪಂದವು ಜಾರಿಗೆ ಬಂದ ಬೆನ್ನಲ್ಲೇ ಹೊಸ ವಿವಾದವೊಂದು ಸ್ಫೋಟಗೊಂಡಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಶುಲ್ಕ (Fee) ವಿಧಿಸುತ್ತಿದೆ ಎಂಬ ವರದಿಗಳು ಹೊರಬರುತ್ತಿದ್ದಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಈ ನಡವಳಿಕೆಯನ್ನು ಅವಮಾನಕರ ಎಂದು ಕರೆದಿದ್ದಾರೆ.

ಇರಾನ್ ಜಲಸಂಧಿಯ ಮೂಲಕ ಹಾದುಹೋಗುವ ಟ್ಯಾಂಕರ್‌ಗಳಿಗೆ ಶುಲ್ಕ ವಿಧಿಸುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅವರು ಹಾಗೆ ಮಾಡದಿರುವುದು ಉತ್ತಮ, ಒಂದು ವೇಳೆ ಮಾಡುತ್ತಿದ್ದರೆ ಈಗಲೇ ನಿಲ್ಲಿಸುವುದು ಅವರಿಗೆ ಉತ್ತಮ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಮತ್ತಷ್ಟು ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ಅಷ್ಟೇ ಅಲ್ಲದೆ, ಇರಾನ್ ಕದನ ವಿರಾಮ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅತ್ಯಂತ ಕಳಪೆ ಕೆಲಸ ಮಾಡುತ್ತಿದೆ ಎಂದು ಟ್ರಂಪ್ ದೂರಿದ್ದಾರೆ. ಇದು ನಾವು ಮಾಡಿಕೊಂಡ ಒಪ್ಪಂದವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿ ನಡುವಿನ ಸುಮಾರು 167 ಕಿಲೋಮೀಟರ್ ಉದ್ದದ ಈ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ತೈಲ ಸಾರಿಗೆ ಕೇಂದ್ರವಾಗಿದೆ. ಮಂಗಳವಾರ ನಡೆದ ಸಂಧಾನದ ಪ್ರಕಾರ, ಇರಾನ್ ಈ ಜಲಸಂಧಿಯನ್ನು ಮತ್ತೆ ತೆರೆಯಬೇಕಿತ್ತು.

ಆದರೆ ಎಎಫ್‌ಪಿ (AFP) ವರದಿಯ ಪ್ರಕಾರ, ಒಪ್ಪಂದದ ನಂತರ ಈವರೆಗೆ ಕೇವಲ 10 ಟ್ಯಾಂಕರ್‌ಗಳು ಮಾತ್ರ ಜಲಸಂಧಿಯನ್ನು ದಾಟಿವೆ. ಇರಾನ್ ಬೇಕೆಂದೇ ಹಡಗುಗಳನ್ನು ತಡೆಯುತ್ತಿದೆ ಅಥವಾ ಅನಗತ್ಯ ಶುಲ್ಕ ವಿಧಿಸಿ ಜಾಗತಿಕ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ ಎಂಬುದು ಅಮೆರಿಕದ ಆರೋಪವಾಗಿದೆ.

ಈ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕ ಈಗ ತನ್ನ ಪ್ರಬಲ ನಿಯೋಗವನ್ನು ಅಖಾಡಕ್ಕಿಳಿಸಿದೆ. ಬರುವ ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರಾನ್ ಅಧಿಕಾರಿಗಳೊಂದಿಗೆ ಮಹತ್ವದ ಮಾತುಕತೆ ನಡೆಯಲಿದೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಈ ಮಾತುಕತೆಯ ನೇತೃತ್ವ ವಹಿಸಲಿದ್ದಾರೆ. ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಮತ್ತು ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಈ ನಿಯೋಗದಲ್ಲಿದ್ದಾರೆ.

ಲೆಬನಾನ್ ಎಂಬ ಕಗ್ಗಂಟು
ಇರಾನ್ ತನ್ನ ಶಾಂತಿ ಒಪ್ಪಂದದಲ್ಲಿ ಲೆಬನಾನ್ ಅನ್ನೂ ಸೇರಿಸಬೇಕೆಂದು ಪಟ್ಟು ಹಿಡಿದಿದೆ. ಆದರೆ, ಇತ್ತೀಚೆಗಷ್ಟೇ ಇಸ್ರೇಲ್ ಲೆಬನಾನ್ ಮೇಲೆ ಭೀಕರ ದಾಳಿ ನಡೆಸಿ ನೂರಾರು ಜನರನ್ನು ಕೊಂದಿರುವುದು ಈ ಸಂಧಾನ ಪ್ರಕ್ರಿಯೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.

ಒಂದು ಕಡೆ ಇಸ್ಲಾಮಾಬಾದ್‌ನಲ್ಲಿ ರಾಜತಾಂತ್ರಿಕ ಮಾತುಕತೆಗಳಿಗೆ ವೇದಿಕೆ ಸಿದ್ಧವಾಗುತ್ತಿದ್ದರೆ, ಇನ್ನೊಂದು ಕಡೆ ಟ್ರಂಪ್ ಅವರ ಸೇನಾ ಬೆದರಿಕೆಗಳು ಇರಾನ್ ಮೇಲೆ ಒತ್ತಡ ಹೆಚ್ಚಿಸಿವೆ. ಹಾರ್ಮುಜ್ ಜಲಸಂಧಿಯು ಸುಸೂತ್ರವಾಗಿ ಕಾರ್ಯನಿರ್ವಹಿಸದಿದ್ದರೆ ಜಾಗತಿಕ ತೈಲ ಬೆಲೆಗಳಲ್ಲಿ ಭಾರಿ ಏರಿಕೆಯಾಗುವ ಭೀತಿ ಎದುರಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಉಡುಪಿ, ಶಿವಮೊಗ್ಗದ ವಾಯು ಗುಣಮಟ್ಟದಲ್ಲಿ ಸುಧಾರಣೆ

ಬೆಂಗಳೂರು, ಏಪ್ರಿಲ್ 10: ಕಳೆದ ಹಲವು ದಿನಗಳಿಂದ ಬೆಂಗಳೂರು ಸೆರಿದಂತೆ ರಾಜ್ಯದ ವಿವಿಧೆಡೆ ವಾಯು ಗುಣಮಟ್ಟ (Bengaluru Air Quality) ಸುಧಾರಿಸುತ್ತಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 109ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 109
  • ಮಂಗಳೂರು-92
  • ಮೈಸೂರು –109
  • ಬೆಳಗಾವಿ – 72
  • ಕಲಬುರ್ಗಿ-111
  • ಶಿವಮೊಗ್ಗ – 95
  • ಬಳ್ಳಾರಿ – 104
  • ಹುಬ್ಬಳ್ಳಿ- 83
  • ಉಡುಪಿ –96
  • ವಿಜಯಪುರ –99

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹತ್ವದ ಘಟ್ಟದಲ್ಲಿ ‘ಆಸೆ’ ಧಾರಾವಾಹಿ; ರೋಹಿಣಿಯೇ ಕ್ರಿಶ್ ತಾಯಿ ಅಂತ ಎಲ್ಲರಿಗೂ ತಿಳಿಯುವ ಸಮಯ

ಸ್ಟಾರ್ ಸುವರ್ಣದ ‘ಆಸೆ’ ಧಾರಾವಾಹಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಧಾರಾವಾಗೆ ದೊಡ್ಡ ಅಭಿಮಾನಿ ಬಳಗ ಇದ್ದಿರೋದು ಗೊತ್ತೇ ಇದೆ. ಈಗ ‘ಆಸೆ’ ಧಾರಾವಾಹಿಯು ಒಂದು ಮಹತ್ವದ ಘಟ್ಟ ತಲುಪಿದೆ. ಈ ಧಾರಾವಾಹಿಯಲ್ಲಿ ಕ್ರಿಶ್ ಸೂರ್ಯನ ಮಗ ಎಂಬುದು ನಾಯಕಿ ಮೀನಾಗೆ ಗೊತ್ತಾಗಿ ಹೋಗಿದೆ. ಈ ವಿಷಯವನ್ನು ಮನೆಯ ಎಲ್ಲರಿಗೂ ಹೇಳುವಂತೆ ಆಕೆ ಒತ್ತಡ ಹೇರುವುದನ್ನು ನೀವು ಧಾರಾವಾಹಿಯಲ್ಲಿ ಕಾಣಬಹುದು.

‘ಆಸೆ’ ಧಾರಾವಾಹಿಯಲ್ಲಿ ರೋಹಿಣಿ ಪತಿಗೆ ಹಾಗೂ ಕುಟುಂಬಕ್ಕೆ ಮೋಸ ಮಾಡುತ್ತಲೇ ಬರುತ್ತಿದ್ದಾಳೆ. ಈ ವಿಷಯದಲ್ಲಿ ಆಕೆಗೆ ಯಾವುದೇ ಬೇಸರ ಇಲ್ಲ. ಆಕೆ ಮೋಸ ಮಾಡುವುದರಲ್ಲೇ ನಿರತರಾಗಿದ್ದಾಳೆ. ಮೊದಲು ತನ್ನ ತಂದೆ ಮಲೇಷಿಯಾದಲ್ಲಿದ್ದಾನೆ ಎಂದು ನಂಬಿಸಿ ಮನೋಜ್ ಜೊತೆ ಮದುವೆ ಆದಳು. ಆ ಬಳಿಕ ಅದು ಸುಳ್ಳು ಎಂಬುದು ಗೊತ್ತಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ತನಗೆ ಮಗು ಇರುವ ವಿಷಯವನ್ನು ಆಕೆ ಮುಚ್ಚಿಟ್ಟಿದ್ದಳು.

ಈಗ ಅದು ಹೊರಗೆ ಬಂದಿದೆ. ಮೀನಾಗೆ ಈ ವಿಷಯ ಗೊತ್ತಾಗಿದೆ. ಆಕೆಗೆ ಸತ್ಯ ಗೊತ್ತಾದಾಗಿನಿಂದ ಆಕೆಯ ಮನಸ್ಸು ನಿಲ್ಲುತ್ತಿಲ್ಲ. ಈ ಸತ್ಯವನ್ನು ಎಲ್ಲರಿಗೂ ಹೇಳುವಂತೆ ಒತ್ತಡ ಹೇರುತ್ತಿದ್ದಾಳೆ. ಆದರೆ, ಇದನ್ನು ತೆಗೆದುಕೊಳ್ಳಲು ಆಕೆ ರೆಡಿ ಇಲ್ಲ. ಅವಳು ಒದ್ದಾಡುತ್ತಿದ್ದಾಳೆ. ಜೊತೆಗೆ ರೋಹಿಣಿಗೆ ಸತ್ಯ ಹೇಳುವಂತೆ ಒತ್ತಡ ಹೇರುತ್ತಿದ್ದಾಳೆ. ಇದರಿಂದ ಆಕೆ ಕಂಗಾಲಾಗಿ ಹೋಗಿದ್ದಾಳೆ.

ಇದನ್ನೂ ಓದಿ: ‘ಜನ ನಾಯಗನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ

ಈಗಾಗಲೇ ರೋಹಿಣಿಯನ್ನು ಆಕೆಯ ಅತ್ತೆ ಶಾಂತಿಯು ಒಮ್ಮೆ ಮನೆಯಿಂದ ಹೊರಹಾಕಿದ್ದಳು. ಇದಕ್ಕೆ ಕಾರಣ ಆಗಿದ್ದು, ಆಕೆಯ ಮಲೇಷ್ಯಾ ಸುಳ್ಳು ವಿಷಯ. ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕಲಾಗಿತ್ತು. ಕೊನೆಗೆ ಶಾಂತಿಯ ಮನಸ್ಸು ಬದಲಿಸಿ ರೋಹಿಣಿಯನ್ನು ಮರಳಿ ಕರೆತರಲಾಯಿತು. ಈಗ ಈ ವಿಷಯ ಗೊತ್ತಾದರೆ, ಅತ್ತೆ ಜೀವಂತ ಉಳಿಸೋದಿಲ್ಲ ಎನ್ನುವ ಭಯ ಅವಳನ್ನು ಬಹುವಾಗಿ ಕಾಡುತ್ತಿದೆ. ಈ ಮಧ್ಯೆ ಕ್ರಿಶ್ ಮನೆಯಲ್ಲೇ ಬಂದು ಉಳಿದುಕೊಳ್ಳುವಂತೆ ಮಾಡಿದ್ದಾಳೆ ಮೀನಾ. ಇದರಿಂದ ರೋಹಿಣಿಗೆ ಸಂಕಷ್ಟ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 10, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ನವಮಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.

 

 

Source link

‘ಸ್ಪಿರಿಟ್’ ಬಳಿಕ ಮತ್ತೊಬ್ಬ ಸ್ಟಾರ್ ನಟನ ಜೊತೆ ಸಂದೀಪ್ ರೆಡ್ಡಿ ಸಿನಿಮಾ

ಸಂದೀಪ್ ರೆಡ್ಡಿ ವಂಗಾ (Sandeep Reddy Vanga), ಪ್ರಸ್ತುತ ಭಾರತದ ಯಶಸ್ವಿ ಮತ್ತು ಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರು. ‘ಅನಿಮಲ್’ ಸಿನಿಮಾದ ಯಶಸ್ವಿನ ಬಳಿಕ ಸಂದೀಪ್ ರೆಡ್ಡಿ ಇದೀಗ ಪ್ರಭಾಸ್ ಜೊತೆಗೆ ಕೆಲಸ ಮಾಡುತ್ತಿದ್ದು, ಪ್ರಭಾಸ್ ಅವರಿಗಾಗಿ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಸ್ಪಿರಿಟ್’ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ ಮತ್ತೊಬ್ಬ ಸ್ಟಾರ್ ನಟನೊಟ್ಟಿಗೆ ಕೆಲಸ ಮಾಡಲು ತಯಾರಾಗಿದ್ದು, ಈಗಾಗಲೇ ಮಾತುಕತೆ ಸಹ ಚಾಲ್ತಿಯಲ್ಲಿದೆ.

ಪ್ರಭಾಸ್ ಜೊತೆಗೆ ‘ಸ್ಪಿರಿಟ್’ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ, ಅಲ್ಲು ಅರ್ಜುನ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಮಾತುಕತೆ ಚಾಲ್ತಿಯಲ್ಲಿದ್ದು, ಕತೆ ಫೈನಲ್ ಆಗಿದೆಯಂತೆ. ಅಲ್ಲು ಅರ್ಜುನ್ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸಂದೀಪ್ ಅವರೊಟ್ಟಿಗೆ ಕೆಲಸ ಮಾಡಲು ಆಸಕ್ತಿ ತೋರಿದ್ದಾರಂತೆ.

ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ. ಅದಾದ ಬಳಿಕ ಮಲಯಾಳಂ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕ ಬಾಸಿಲ್ ಜೋಸೆಫ್ ನಿರ್ದೇಶನ ಮಾಡಲಿರುವ ಸೂಪರ್ ಹೀರೋ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ. ಈ ಮೂರೂ ಸಿನಿಮಾಗಳು ಮುಗಿದ ಬಳಿಕವಷ್ಟೆ ಸಂದೀಪ್ ರೆಡ್ಡಿ ವಂಗಾ ಜೊತೆಗೆ ಸಿನಿಮಾ ಮಾಡಲಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಸಿನಿಮಾ ‘ರಾಕಾ’ ಟೈಟಲ್ ಅರ್ಥವೇನು? ಶುರುವಾಗಿದೆ ಚರ್ಚೆ

ಸಂದೀಪ್ ರೆಡ್ಡಿ ವಂಗಾ ಸಹ ‘ಸ್ಪಿರಿಟ್’ ಮುಗಿಸಿದ ಬಳಿಕ ರಣ್​​ಬೀರ್ ಕಪೂರ್ ಜೊತೆಗೆ ‘ಅನಿಮಲ್ ಪಾರ್ಕ್’ ಸಿನಿಮಾ ಮಾಡಲಿದ್ದಾರೆ. ಇದು ‘ಅನಿಮಲ್’ ಸಿನಿಮಾದ ಮುಂದುವರೆದ ಭಾಗ ಆಗಿರಲಿದೆ. ಅದರ ಬಳಿಕ ಅಲ್ಲು ಅರ್ಜುನ್ ಜೊತೆಗೆ ಕೆಲಸ ಪ್ರಾರಂಭಿಸಲಿದ್ದಾರೆ.

ಅಲ್ಲು ಅರ್ಜುನ್ ಅವರಿಗೆ ಮುಂದಿನ ಕೆಲ ವರ್ಷಗಳು ವೃತ್ತಿ ಜೀವನದ ಅತ್ಯುತ್ತಮ ವರ್ಷಗಳಾಗುವುದು ಖಾತ್ರಿ. ಸುಕುಮಾರ್ ಬಳಿಕ ಈಗ ಅಟ್ಲಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಲೋಕೇಶ್ ಕನಗರಾಜ್, ಬಾಸಿಲ್ ಜೋಸೆಫ್, ಸಂದೀಪ್ ರೆಡ್ಡಿ ವಂಗಾ, ಮತ್ತೆ ಸುಕುಮಾರ್, ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಪ್ರಶಾಂತ್ ನೀಲ್ ಅವರುಗಳೊಟ್ಟಿಗೆ ಅಲ್ಲು ಅರ್ಜುನ್ ಕೆಲಸ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೆಂಡತಿಯ ಒಂದು ಕ್ಷಣದ ಸಿಟ್ಟಿಗೆ ಪತಿ ಬಲಿ: ಶವದ ಪಕ್ಕದಲ್ಲೇ ರಾತ್ರಿ ಕಳೆದ ಪತ್ನಿ

ಗುಜರಾತ್, ಏಪ್ರಿಲ್ 10: ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಡೆದ ಈ ಘಟನೆಯು ಕೌಟುಂಬಿಕ ಕಲಹವು ಎಷ್ಟು ಭೀಕರ ರೂಪ ಪಡೆದುಕೊಳ್ಳಬಹುದು ಎಂಬುದಕ್ಕೆ ಕನ್ನಡಿಯಾಗಿದೆ. ಆ ಕ್ಷಣದ ಸಿಟ್ಟು ಮತ್ತು ಆನಂತರದ ಮೌನ ಎರಡೂ ಈ ಘಟನೆಯಲ್ಲಿದೆ. ಪ್ರೀತಿ ಮತ್ತು ವಿಶ್ವಾಸದಿಂದ ಇರಬೇಕಾದ ದಂಪತಿ ನಡುವೆ ನಡೆದ ಸಣ್ಣ ಜಗಳವೊಂದು ಅಂತಿಮವಾಗಿ ಕೊಲೆ(Murder)ಯಲ್ಲಿ ಅಂತ್ಯವಾಗಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಡೆದ ಈ ಭೀಕರ ಘಟನೆಯು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ದಾರಿಯುದ್ದಕ್ಕೂ ನಡೆದ ಜಗಳ
ಘಟನೆಯ ದಿನ ಪತಿ ಮತ್ತು ಪತ್ನಿ ಇಬ್ಬರೂ ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದರು. ಆರಂಭದಲ್ಲಿ ಮಾತಿನ ಚಕಮಕಿಯಿಂದ ಶುರುವಾದ ಜಗಳ, ರಸ್ತೆಯುದ್ದಕ್ಕೂ ಮುಂದುವರೆದಿದೆ. ವಾದವು ಮಿತಿಮೀರಿದಾಗ ಪತಿ ಆಕ್ರೋಶಗೊಂಡು ಪತ್ನಿಯ ಕೆನ್ನೆಗೆ ಬಲವಾಗಿ ಕಪಾಳಮೋಕ್ಷ ಮಾಡಿದ್ದಾನೆ.

ಕಲ್ಲು ಎತ್ತಿ ತಲೆಗೆ ಹೊಡೆದ ಪತ್ನಿ
ಪತಿ ಕೈಮಾಡಿದ್ದರಿಂದ ವಿಚಲಿತಳಾದ ಮಹಿಳೆ, ತಕ್ಷಣವೇ ರಸ್ತೆಯ ಪಕ್ಕದಲ್ಲಿದ್ದ ಒಂದು ದೊಡ್ಡ ಕಲ್ಲನ್ನು ಎತ್ತಿಕೊಂಡಿದ್ದಾಳೆ. ಆ ಕ್ಷಣದ ಆವೇಶದಲ್ಲಿ ಅವಳು ಅದೇ ಕಲ್ಲಿನಿಂದ ಪತಿಯ ತಲೆಗೆ ಬಲವಾಗಿ ಜಜ್ಜಿದ್ದಾಳೆ. ತಲೆಗೆ ತೀವ್ರವಾದ ಗಾಯಗಳಾದ ಪರಿಣಾಮವಾಗಿ, ಪತಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾನೆ.

ಮತ್ತಷ್ಟು ಓದಿ: ಬೆಳಗಾವಿ ಸಿದ್ದೇಶ್ವರ ಜಾತ್ರೆಯಲ್ಲಿ ರಕ್ತದೊಕುಳಿ: ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

 

ಶವದ ಪಕ್ಕದಲ್ಲೇ ಕಳೆದುಹೋದ ರಾತ್ರಿ
ಸಾಮಾನ್ಯವಾಗಿ ಕೊಲೆ ಮಾಡಿದವರು ಭಯದಿಂದ ಸ್ಥಳ ಬಿಟ್ಟು ಓಡಿಹೋಗುತ್ತಾರೆ. ಆದರೆ ಇಲ್ಲಿ ನಡೆದಿದ್ದೇ ಬೇರೆ. ಕೊಲೆಯ ನಂತರ ಆ ಮಹಿಳೆ ಅಲ್ಲಿಂದ ಕದಲಲಿಲ್ಲ. ರಾತ್ರಿಯಿಡೀ ಅವಳು ತನ್ನ ಪತಿಯ ಶವದ ಪಕ್ಕದಲ್ಲೇ ಮೌನವಾಗಿ ಕುಳಿತು ಕಾಲ ಕಳೆದಿದ್ದಾಳೆ. ಅಳು ಅಥವಾ ಪಶ್ಚಾತ್ತಾಪವೋ ಎಂಬುದು ತಿಳಿದಿಲ್ಲವಾದರೂ, ಮರುದಿನ ಬೆಳಗ್ಗೆಯವರೆಗೂ ಅವಳು ಅದೇ ಸ್ಥಳದಲ್ಲಿ ಇದ್ದಳು.

ಮರುದಿನ ಬೆಳಗ್ಗೆ ಸ್ಥಳೀಯರು ಮತ್ತು ಅಧಿಕಾರಿಗಳು ಅಲ್ಲಿಗೆ ಬಂದಾಗ ಮಹಿಳೆ ಶವದ ಪಕ್ಕದಲ್ಲೇ ಇರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಭಾರತೀಯ ನ್ಯಾಯ ಸಂಹಿತಾದ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಂಪತಿ ನಡುವಿನ ಜಗಳಕ್ಕೆ ನಿಖರವಾದ ಕಾರಣವೇನು? ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆದಿದೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಘಟನೆಯು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕ್ಷಣಿಕ ಆವೇಶವೊಂದು ಇಡೀ ಸಂಸಾರವನ್ನೇ ಹೇಗೆ ಸ್ಮಶಾನ ಮಾಡಬಲ್ಲದು ಎಂಬುದಕ್ಕೆ ಇದು ದುರಂತ ಸಾಕ್ಷಿ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಕಾಲಾಷ್ಟಮಿಯು ಮಹತ್ತರವಾದ ಪ್ರಭಾವವನ್ನು ಬೀರುವ, ಪರಿವರ್ತನೆ ಮತ್ತು ಅದೃಷ್ಟವನ್ನು ತರುವ, ಸಂಕಟಗಳನ್ನು ದೂರಮಾಡುವ ವಿಶೇಷ ಪರ್ವಕಾಲವಾಗಿದೆ. ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯನ್ನು ಕಾಲಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನದಂದು ಶಿವನ ಉಗ್ರ ರೂಪವಾದ ಕಾಲಭೈರವನನ್ನು ಆರಾಧಿಸಲಾಗುತ್ತದೆ. ಕಾಲಭೈರವನು ಕಾಲದ ಅಧಿಪತಿಯಾಗಿದ್ದು, ಅತ್ಯಂತ ಬೇಗ ಫಲಿತಾಂಶಗಳನ್ನು ನೀಡುವ ಶಕ್ತಿಯನ್ನು ಹೊಂದಿದ್ದಾನೆ.

ಮನೆ ಕಟ್ಟುವ ಕನಸು, ವಿವಾಹ, ಮಕ್ಕಳ ಪ್ರಾಪ್ತಿ, ಆರೋಗ್ಯ ಸುಧಾರಣೆ, ಶತ್ರುಗಳ ಸಂಹಾರ, ರಾಜಕೀಯ ಸ್ಥಾನಮಾನದಂತಹ ಎಲ್ಲ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಕಾಲಾಷ್ಟಮಿ ದಿನ ಅತ್ಯಂತ ಶುಭಪ್ರದವಾಗಿದೆ. ಭಯ, ಆತಂಕ, ಸಾಲಬಾದೆ ಮತ್ತು ನ್ಯಾಯಾಲಯದ ಪ್ರಕರಣಗಳಿಂದ ಬಳಲುತ್ತಿರುವವರಿಗೆ ಕಾಲಭೈರವನ ಆರಾಧನೆಯು ಪರಿಹಾರವನ್ನು ನೀಡುತ್ತದೆ. ಶನಿ ದೋಷ, ರಾಹು ದೋಷ, ಅರ್ಧಾಷ್ಟಮ ಶನಿ, ಅಷ್ಟಮ ಶನಿ, ಮತ್ತು ಪಂಚಮ ಶನಿ ದೋಷಗಳ ನಿವಾರಣೆಗೂ ಈ ಪೂಜೆ ಸಹಕಾರಿಯಾಗಿದೆ ಎಂದು ಗುರೂಜಿ ಹೇಳಿದ್ದಾರೆ.

 

Source link