ಅಂಬಾನಿ ಮಗನ ಹುಟ್ಟುಹಬ್ಬದ ಪಾರ್ಟಿ: ಕುಣಿದು ಕುಪ್ಪಳಿಸಿದ ನಟ ರಣವೀರ್ ಸಿಂಗ್
ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ಏಪ್ರಿಲ್ 10ರಂದು ತಮ್ಮ 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರವು ಈಗ ದೇಶದ ಅತ್ಯಂತ ಹೈ-ಪ್ರೊಫೈಲ್ ತಾಣವಾಗಿ ಮಾರ್ಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ಬಾಲಿವುಡ್‌ನ ಘಟಾನುಘಟಿ ನಟ-ನಟಿಯರು ಈ ಅದ್ದೂರಿ ಸಮಾರಂಭದಲ್ಲಿ ಭಾಗವಹಿಸಲು ಜಾಮ್‌ನಗರಕ್ಕೆ ಆಗಮಿಸಿದ್ದಾರೆ. ಶಾರುಖ್ ಖಾನ್, ರಣವೀರ್ ಸಿಂಗ್ (Ranveer Singh), ಸಲ್ಮಾನ್ ಖಾನ್ ಮುಂತಾದವರು ಬಂದಿದ್ದಾರೆ. ಇತ್ತೀಚೆಗಷ್ಟೇ ‘ಧುರಂಧರ್ 2’ ಮೂಲಕ…