All posts by nagaraj11081993

ಟಿ20 ಪಂದ್ಯದಲ್ಲಿ 8 ವಿಕೆಟ್; ವಿಶ್ವ ದಾಖಲೆ ಸೃಷ್ಟಿಸಿದ ಭೂತಾನ್ ಸ್ಪಿನ್ನರ್ – Kannada News | Sonam Yeshey Sets New T20 World Record: First Bowler with 8 Wickets for Bhutan

ಟಿ20 ಪಂದ್ಯವೊಂದರಲ್ಲಿ ಬೌಲರ್ 5 ವಿಕೆಟ್ ಪಡೆದರೆ ಅದು ದೊಡ್ಡ ವಿಷಯ. ಆದರೆ ಅದೇ ಟಿ20 ಪಂದ್ಯದಲ್ಲಿ ಬೌಲರ್ 8 ವಿಕೆಟ್ ಪಡೆದರೆ ಅದೊಂದು ವಿಶ್ವ ದಾಖಲೆ. ಇದೀಗ ಅಂತಹದ್ದೇ ವಿಶ್ವ ದಾಖಲೆಯನ್ನು ಕ್ರಿಕೆಟ್ ಶಿಶು ಭೂತಾನ್‌ ತಂಡದ ಸ್ಪಿನ್ನರ್ ಒಬ್ಬ ಮಾಡಿದ್ದಾನೆ. ಭೂತಾನ್ ತಂಡದ ಸ್ಪಿನ್ನರ್ ಸೋನಮ್ ಯೆಶೆ (Sonam Yeshey) ಬರೋಬ್ಬರಿ 8 ವಿಕೆಟ್​ಗಳನ್ನು ಪಡೆದು ಅಂತರರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿಯವರೆಗೆ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ತಲಾ 7 ವಿಕೆಟ್ ಪಡೆದ ಇಬ್ಬರು ಬೌಲರ್‌ಗಳು ಮಾತ್ರ ಇದ್ದರು. ಆದರೆ ಈಗ ಸೋನಮ್ ಯೆಶೆ 8 ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಭೂತಾನ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಭೂತಾನ್ ಹಾಗೂ ಮ್ಯಾನ್ಮಾರ್‌ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭೂತಾನ್ ತಂಡ 127 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮ್ಯಾನ್ಮಾರ್ 56 ಎಸೆತಗಳಲ್ಲಿ ಕೇವಲ 45 ರನ್‌ಗಳಿಗೆ ಆಲೌಟ್ ಆಯಿತು. ಮ್ಯಾನ್ಮಾರ್ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಭೂತಾನ್ ತಂಡದ ಎಡಗೈ ಸ್ಪಿನ್ನರ್ ಸೋನಮ್ ಯೆಶೆ ಪ್ರಮುಖ ಪಾತ್ರವಹಿಸಿದರು.

8 ವಿಕೆಟ್ ಕಬಳಿಸಿದ ಸೋನಮ್ ಯೆಶೆ

ಮ್ಯಾನ್ಮಾರ್ ವಿರುದ್ಧದ ಟಿ20 ಪಂದ್ಯದಲ್ಲಿ ಸೋನಮ್ ಯೆಶೆ ಏಕಾಂಗಿಯಾಗಿ ಎಂಟು ವಿಕೆಟ್‌ಗಳನ್ನು ಕಬಳಿಸಿದರು. ಮೂರನೇ ಓವರ್‌ನಲ್ಲಿ ದಾಳಿಗಿಳಿದ ಸೋನಮ್ ಯೆಶೆ, ಮ್ಯಾನ್ಮಾರ್‌ ತಂಡದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ನಂತರ ಅವರು ಇನ್ನೂ ಮೂರು ವಿಕೆಟ್‌ಗಳನ್ನು ಪಡೆದು, ಮ್ಯಾನ್ಮಾರ್‌ನ ಸಂಪೂರ್ಣ ಇನ್ನಿಂಗ್ಸ್ ಅನ್ನು 50 ರನ್ ತಲುಪುವ ಮೊದಲೇ ಅಂತ್ಯಗೊಳಿಸಿದರು.

IND-W vs SL-W: ಶ್ರೀಲಂಕಾ ವಿರುದ್ಧ ಸತತ 4ನೇ ಟಿ20 ಪಂದ್ಯ ಗೆದ್ದ ಭಾರತ

82 ರನ್‌ಗಳಿಂದ ಗೆದ್ದ ಭೂತಾನ್

ಸೋನಮ್ ಯೆಶೆ ಅವರ ಅತ್ಯುತ್ತಮ ಬೌಲಿಂಗ್‌ನಿಂದ ಭೂತಾನ್ 82 ರನ್‌ಗಳಿಂದ ಗೆದ್ದಿತು. ಸೋನಮ್ ಯೆಶೆ ಅಂತರರಾಷ್ಟ್ರೀಯ ಕ್ರಿಕೆಟ್ ಅಥವಾ ಯಾವುದೇ ಟಿ20 ಪಂದ್ಯದಲ್ಲಿ ಎಂಟು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. ಯೆಶೆ ಅವರ ಸಾಧನೆಗೆ ಮೊದಲು, ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ ಇಬ್ಬರು ಬೌಲರ್‌ಗಳು ಏಳು ವಿಕೆಟ್ ಪಡೆದಿದ್ದರು. 2023 ರಲ್ಲಿ ಚೀನಾ ವಿರುದ್ಧ ಸಯಾಜ್ರುಲ್ ಇದ್ರಸ್ ಎಂಟು ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಪಡೆದಿದ್ದರು. ಈ ವರ್ಷದ ಆರಂಭದಲ್ಲಿ ಬಹ್ರೇನ್‌ನ ಅಲಿ ದಾವೂದ್ ಭೂತಾನ್ ವಿರುದ್ಧ 19 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಪಡೆದಿದ್ದರು. ಈಗ, ಈ ದಾಖಲೆ ಭೂತಾನ್ ಸ್ಪಿನ್ನರ್ ಸೋನಮ್ ಯೆಶೆ ಅವರ ಪಾಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:13 pm, Mon, 29 December 25

Source link

ಬಿಗ್ ಬಾಸ್ ಕನ್ನಡ: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್ ಸಿಂಗ್ – Kannada News | Bigg Boss Kannada Season 12 Suraj Singh says he had 3 relationships

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಹೋಗಿದ್ದ ಸೂರಜ್ ಸಿಂಗ್ ಅವರು ನಿಜ ಜೀವನದಲ್ಲಿ ತುಂಬ ಕಷ್ಟಗಳನ್ನು ಕಂಡಿದ್ದಾರೆ. ಬಿಗ್ ಬಾಸ್ ಶೋ ಮೂಲಕ ಅವರಿಗೆ ಬಹಳ ಖ್ಯಾತಿ ಸಿಕ್ಕಿದೆ. ಈಗ ಅವರು ಎಲಿಮಿನೇಟ್ ಆಗಿ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಟಿವಿ9 ಜತೆ ಮಾತನಾಡಿ ತಮ್ಮ ಬದುಕಿನ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಿಲೇಷನ್​ಶಿಪ್ (Relationship) ಬಗ್ಗೆ ಕೂಡ ಮಾತನಾಡಿದ್ದಾರೆ. ‘ಈಗ ನನಗೆ ಯಾರೂ ಲವ್ವರ್ ಇಲ್ಲ. ಈ ಮೊದಲು ನಾನು ಮೂರು ರಿಲೇಷನ್​ಶಿಪ್​​ನಲ್ಲಿ ಇದ್ದೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ಕಳೆದ 10-12 ವರ್ಷಗಳಲ್ಲಿ ಮೊದಲ ಎರಡು ರಿಲೇಷನ್​ಶಿಪ್ ತುಂಬ ಗಂಭೀರವಾಗಿ ಇರಲಿಲ್ಲ. ಇನ್ನೊಂದು ಸೀರಿಯಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಬ್ರೇಕಪ್ ಆಯಿತು’ ಎಂದು ಸೂರಜ್ ಸಿಂಗ್ (Suraj Singh) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

New Year 2026: ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರೋಕೆ ಈ ಸರಳ ಮನೆಮದ್ದುಗಳನ್ನು ಟ್ರೈ ಮಾಡಿ – Kannada News | New Year 2026: How to get over a New Year’s party hangover? Here are some simple tips

ಹೊಸ ವರ್ಷಕ್ಕೆ (New Year) ಇನ್ನೆರಡು ದಿನಗಳು ಬಾಕಿ ಉಳಿದಿದ್ದು, ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲು ಹೆಚ್ಚಿನವರು ಪ್ರವಾಸ, ಪಾರ್ಟಿಗಳನ್ನು ಯೋಜಿಸುತ್ತಾರೆ. ನ್ಯೂ ಇಯರ್‌ ಅಂದ್ಮೇಲೆ ಎಣ್ಣೆ ಪಾರ್ಟಿ ಇರ್ಲೇ ಬೇಕು. ಕೆಲವರಂತೂ ಪಾರ್ಟಿಯಲ್ಲೂ ತುಸು ಜಾಸ್ತಿಯೇ ಆಲ್ಕೋಹಾಲ್‌ ಸೇವನೆ ಮಾಡುತ್ತಾರೆ. ಹೊಸ ವರ್ಷದ ಪಾರ್ಟಿಗಳು ಮೋಜಿನದ್ದಾಗಿದ್ದರೂ, ಮರುದಿನ ಬೆಳಿಗ್ಗೆ ಕಾಣಿಸಿಕೊಳ್ಳುವ ಹ್ಯಾಂಗೊವರ್ ಇಡೀ ದಿನವನ್ನು ಹಾಳುಮಾಡಬಹುದು. ಹೌದು ತಲೆನೋವು, ಆಯಾಸ ಕಿರಿಕಿರಿ ಮತ್ತು ಗೊಂದಲವನ್ನು ನಿಭಾಯಿಸುವುದು ಸುಲಭವಲ್ಲ. ಹೀಗಿರುವಾಗ ಈ ಕೆಲವು ಮನೆಮದ್ದುಗಳ ಸಹಾಯದಿಂದ ಪಾರ್ಟಿ ಹ್ಯಾಂಗೋವರ್‌ನಿಂದ ಬರೀ 10 ನಿಮಿಷದಲ್ಲಿ ಹೊರ ಬರುವಂತೆ ಮಾಡಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಾರ್ಟಿ ಹ್ಯಾಂಗೋವರ್‌ನಿಂದ ಹೊರ ಬರಲು ಇಲ್ಲಿದೆ ಸುಲಭ ಸಲಹೆ:

ನೀವು ಅತಿಯಾದ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿದಾಗ ಹ್ಯಾಂಗೊವರ್ ಉಂಟಾಗುತ್ತದೆ. ಇದರಿಂದ ನೀವು ಮರುದಿನ  ಎಚ್ಚರವಾದಾಗ ತಲೆ ಭಾರವಾದಂತೆ ಅನಿಸುತ್ತದೆ, ತಲೆನೋವು, ಅಥವಾ ತಲೆತಿರುಗುವಿಕೆ, ವಾಕರಿಕೆ ಕಾಣಿಸಿಕೊಳ್ಳುತ್ತದೆ. ಈ ಕೆಲವು ಪಾನೀಯಗಳನ್ನು ಕುಡಿಯುವ ಮೂಲಕ ಹ್ಯಾಂಗೋವರ್‌ನಿಂದ ಹೊರಬರಬಹುದು.

ಅರಿಶಿನ ನೀರು: ಅರಿಶಿನ ನೀರು ಹ್ಯಾಂಗೋವರ್‌ನಿಂದ ಹೊರ ಬರಲು ನಿಮಗೆ ಸಹಾಯ ಮಾಡುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಹ್ಯಾಂಗೊವರ್ ಲಕ್ಷಣಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. 1 ರಿಂದ 2 ಟೀ ಚಮಚ ತುರಿದ ಅರಿಶಿನ ಮತ್ತು ಕೆಲವು ನಿಂಬೆ ಹೋಳುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ. ಜೊತೆಗೆ ಇದಕ್ಕೆ ಸ್ವಲ್ಪ ಜೇನುತುಪ್ಪ, ಕರಿಮೆಣಸನ್ನೂ ಸೇರಿಸಬಹುದು.

ಎಳನೀರು ಕುಡಿಯಿರಿ: ಎಳ ನೀರು ಹ್ಯಾಂಗೊವರ್ ನಿವಾರಿಸಲು ಪ್ರಯೋಜನಕಾರಿ. ಹೆಚ್ಚು ಆಲ್ಕೋಹಾಲ್ ಸೇವಿಸುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ. ಎಳನೀರು ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ, ಇದು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ, ನಿರ್ಜಲೀಕರಣವನ್ನು ಹೋಗಲಾಡಿಸುತ್ತವೆ. ಮತ್ತು ಇದು ದೇಹವನ್ನು ಚೈತನ್ಯಗೊಳಿಸುತ್ತದೆ.

ನಿಂಬೆ ನೀರು: ನಿಂಬೆ ನೀರು ಹ್ಯಾಂಗೊವರ್‌ಗೆ ಅತ್ಯಂತ ಪರಿಣಾಮಕಾರಿ ಪರಿಹಾರಗಳಲ್ಲಿ ಒಂದಾಗಿದೆ. ಒಂದು ಲೋಟಕ್ಕೆ ಅರ್ಧ ನಿಂಬೆ ರಸ ಮತ್ತು ಸ್ವಲ್ಪ ಉಪ್ಪು ಸೇರಿಸಿ, ಮಿಶ್ರಣ ಮಾಡಿ ಕುಡಿಯಿರಿ. ಇದು ಎಲೆಕ್ಟ್ರೋಲೈಟ್‌ಗಳನ್ನು ಪುನಃ ತುಂಬಿಸುತ್ತದೆ, ಜಲಸಂಚಯನವನ್ನು ಸುಧಾರಿಸುತ್ತದೆ ಮತ್ತು ವಾಕರಿಕೆ, ವಾಂತಿ ಮತ್ತು ತಲೆನೋವಿನಿಂದ ಪರಿಹಾರ ನೀಡುತ್ತದೆ.

ಮೊಸರು: ಹ್ಯಾಂಗೋವರ್‌ನಿಂದ ಹೊರ ಬರಲು ಮೊಸರನ್ನು ಸೇವನೆ ಮಾಡುವುದು ಸಹ ಪರಿಣಾಮಕಾರಿಯಾಗಿದೆ. ಸಕ್ಕರೆ ಅಥವಾ ಉಪ್ಪು ಸೇರಿಸದೆ ಮೊಸರನ್ನು ಹಾಗೆಯೇ ಸೇವನೆ ಮಾಡುವುದು ಉತ್ತಮ.

ಬಾಳೆಹಣ್ಣು: ಬಾಳೆಹಣ್ಣು ಹ್ಯಾಂಗೊವರ್ ಹೋಗಲಾಡಿಸುವಲ್ಲಿ ಅತ್ಯಂತ ಪರಿಣಾಮಕಾರಿ. ಅವುಗಳಲ್ಲಿ ಪೊಟ್ಯಾಸಿಯಮ್ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿವೆ, ಇದು ನಿರ್ಜಲೀಕರಣವನ್ನು ತಡೆಯುತ್ತದೆ. ಅಲ್ಲದೆ ಸಾಕಷ್ಟು ಪೋಷಕಾಂಶಗಳನ್ನೂ ನೀಡುತ್ತದೆ.

ಇದನ್ನೂ ಓದಿ: ಮೋಜು-ಮಸ್ತಿ ಮಾತ್ರವಲ್ಲ, ರೀತಿಯೂ ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಬಹುದು

ಪುದೀನ ನೀರು: ಪುದೀನದ ತಂಪಾಗಿಸುವ ಸುವಾಸನೆ ಹ್ಯಾಂಗೊವರ್‌ ಹೋಗಲಾಡಿಸಲು ಸಹಾಯ ಮಾಡುತ್ತದೆ. ಅದಕ್ಕೆ ತಾಜಾ ಪುದೀನಾ ಎಲೆಗಳನ್ನು ಸ್ವಲ್ಪ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿ, ನಂತರ ಸೋಸಿ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ವಾಕರಿಕೆ ಶಮನಗೊಳಿಸಲು ಸಹಾಯ ಮಾಡುತ್ತದೆ.

ಗ್ರೀನ್‌ ಟೀ: ಗ್ರೀನ್‌ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಅಲ್ಲದೆ ಇದು ಹ್ಯಾಂಗೋವರ್‌ ಅನ್ನು ಹೋಗಲಾಡಿಸಲು ತುಂಬಾನೇ ಸಹಕಾರಿ.

ತರಕಾರಿ ಅಥವಾ ಚಿಕನ್ ಸೂಪ್: ಹ್ಯಾಂಗೊವರ್ ಸಮಯದಲ್ಲಿ, ದೇಹವು ಎಲೆಕ್ಟ್ರೋಲೈಟ್‌ಗಳು ಖಾಲಿಯಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಹಗುರವಾದ ತರಕಾರಿ ಅಥವಾ ಚಿಕನ್ ಸೂಪ್ ಸೇವಿಸಿ, ಇದು ದೇಹಕ್ಕೆ ಅಗತ್ಯವಾದ ಖನಿಜಗಳನ್ನು ಒದಗಿಸುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಬೆಚ್ಚಗಿನ ಸೂಪ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹ್ಯಾಂಗೊವರ್‌ನಿಂದ ಹೊರ ಬರಲು ನೀವು ಸೂಪ್‌ ಸಹ ಕುಡಿಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

VHT 2025-26: ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬಳಿಕ ನಿಲ್ಲುತ್ತಿಲ್ಲ ರಿಂಕು ಸಿಂಗ್ ಅಬ್ಬರ – Kannada News | Rinku Singh Dominates Vijay Hazare: 3 Straight Fifties Boost T20 WC Hopes

ವಿಜಯ್ ಹಜಾರೆ ಟ್ರೋಫಿಯಲ್ಲಿ ರಿಂಕು ಸಿಂಗ್ ಅವರ ಅದ್ಭುತ ಪ್ರದರ್ಶನ ಸತತ ಮೂರನೇ ಪಂದ್ಯದಲ್ಲೂ ಮುಂದುವರೆದಿದೆ. ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದರೂ, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದರ ಬಗ್ಗೆ ಅನುಮಾನದಲ್ಲಿದ್ದ ರಿಂಕು ತಮ್ಮ ಅಮೋಘ ಪ್ರದರ್ಶನದ ಮೂಲಕ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

Source link

27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ? – Kannada News | Nifty50 beats gold and US equity in total return in last 27 years, says Samir Arora

ನವದೆಹಲಿ, ಡಿಸೆಂಬರ್ 28: ಈ ವರ್ಷ ಈಕ್ವಿಟಿ ಮಾರುಕಟ್ಟೆ (Stock Market) ಬಹಳ ಸಾಧಾರಣ ಗತಿ ಪಡೆದಿದೆ. ಆದರೆ, ಚಿನ್ನದ ಬೆಲೆ ಯದ್ವಾತದ್ವ ಏರುತ್ತಿದೆ. ದೀರ್ಘಾವಧಿಯಲ್ಲೂ ಚಿನ್ನದ ಓಟ ಸ್ಥಿರವಾಗಿದೆ. ಯಾವುದೇ ವರ್ಷವೂ ಅದು ಹಿನ್ನಡೆ ಕಂಡಿಲ್ಲ. ಹೀಗಾಗಿ, ಹೂಡಿಕೆಗೆ ಈಕ್ವಿಟಿ ಮಾರುಕಟ್ಟೆ ಉತ್ತಮವೋ, ಚಿನ್ನ ಉತ್ತಮವೋ ಎನ್ನುವ ಪ್ರಶ್ನೆ ಸಹಜವಾಗಿ ಎದ್ದಿದೆ. ಎಕ್ಸ್​ನಲ್ಲಿ ತಜ್ಞರಿಂದ ಇಂಥದ್ದೊಂದು ಹೋಲಿಕೆ ನಡೆದಿದೆ.

ಹೀಲಿಯೋಸ್ ಕ್ಯಾಪಿಟಲ್ ಸಂಸ್ಥೆಯ ಸಂಸ್ಥಾಪಕ ಹಾಗೂ ಫಂಡ್ ಮ್ಯಾನೇಜರ್ ಆಗಿರುವ ಸಮೀರ್ ಅರೋರಾ ಪ್ರಕಾರ ಕಳೆದ 27 ವರ್ಷದಲ್ಲಿ ಚಿನ್ನ, ಎಸ್ ಅಂಡ್ ಪಿ 500 (ಅಮೆರಿಕದ ಇಂಡೆಕ್ಸ್) ಗಿಂತ ನಿಫ್ಟಿ50 ಹೆಚ್ಚು ರಿಟರ್ನ್ ಕೊಟ್ಟಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದ ಅಂಶ ಪರಿಗಣಿಸಿ ಈ ತುಲನೆ ಮಾಡಿದ್ದಾರೆ ಅರೋರಾ.

ಸಮೀರ್ ಅರೋರಾ ಅವರು ಪ್ರಸ್ತುತಪಡಿಸಿದ ದತ್ತಾಂಶದ ಪ್ರಕಾರ, 1998ರ ಡಿಸೆಂಬರ್​ 31ರಿಂದ ಇಲ್ಲಿಯವರೆಗೆ 27 ವರ್ಷದಲ್ಲಿ ನಿಫ್ಟಿ50 ಶೇ. 1,922.38ರಷ್ಟು ಬೆಳೆದಿದೆ. ಇದರ ಸಿಎಜಿಆರ್ ಶೇ. 11.78ರಷ್ಟಿದೆ.

ಇದನ್ನೂ ಓದಿ: 2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ

ಚಿನ್ನ ಇದೇ ಅವಧಿಯಲ್ಲಿ ಕೊಟ್ಟಿರುವ ಒಟ್ಟು ರಿಟರ್ನ್ ಶೇ. 1,472.66 ರಷ್ಟು ಇದೆ. ಇದರ ಸಿಎಜಿಆರ್ 10.74.

ಅಮೆರಿಕದ ಈಕ್ವಿಟಿ ಮಾರುಕಟ್ಟೆಯ ಪ್ರಮುಖ ಸೂಚಿಯಾಗಿರುವ ಎಸ್ ಅಂಡ್ ಪಿ 500 ಇಂಡೆಕ್ಸ್ ಈ 27 ವರ್ಷದಲ್ಲಿ ಶೇ. 821.05 ರಿಟರ್ನ್ ನೀಡಿದೆ. ಇದರ ಸಿಎಜಿಆರ್ ಶೇ. 8.57 ಮಾತ್ರ.

ಈ ಮೇಲಿನವು ಅಮೆರಿಕದ ಡಾಲರ್​ನಲ್ಲಿ ಪಡೆಯಲಾಗಿರುವ ಮೊತ್ತ. ಮತ್ತು ನಿಫ್ಟಿಯಲ್ಲಿ ಲಿಸ್ಟ್ ಆಗಿರುವ ಷೇರುಗಳಿಂದ ಸಿಕ್ಕಿರುವ ಡಿವಿಡೆಂಡ್ ಆದಾಯಗಳನ್ನೂ ಪರಿಗಣಿಸಲಾಗಿದೆ. ಅಲ್ಲದೇ, ರುಪಾಯಿ ಕರೆನ್ಸಿಯ ಮೌಲ್ಯ ಕುಸಿತವನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ನಿಫ್ಟಿ ತನ್ನ ಹೂಡಿಕೆದಾರರಿಗೆ ಅಮೋಘವಾದ ಲಾಭ ಕೊಟ್ಟಿದೆ ಎನ್ನುವುದು ಸಮೀರ್ ಅವರ ಎಕ್ಸ್ ಪೋಸ್ಟ್​ನಿಂದ ಸ್ಪಷ್ಟವಾಗುತ್ತದೆ.

ನಿಫ್ಟಿ500 ಇಂಡೆಕ್ಸ್ ಪರಿಗಣಿಸಿದರೆ, ಅದರ 27 ವರ್ಷದಲ್ಲಿ ಸಿಎಜಿಆರ್ ಬರೋಬ್ಬರಿ ಶೇ. 12.96ರಷ್ಟಾಗುತ್ತದೆ.

ನಿಫ್ಟಿ ಎಂಬುದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ಸೂಚ್ಯಂಕ. ನಿಫ್ಟಿ50 ಸೂಚ್ಯಂಕ ಮೊದಲು ಚಾಲನೆಗೆ ಬಂದಿದ್ದು 1996ರಲ್ಲಿ. 1,000 ಅಂಕಗಳೊಂದಿಗೆ ಇದರ ಪ್ರಯಾಣ ಆರಂಭವಾಯಿತು. ಈ ವರ್ಷ ಅದು 26,325 ಅಂಕಗಳ ಗರಿಷ್ಠ ಮಟ್ಟ ಮುಟ್ಟಿದೆ.

ಇದನ್ನೂ ಓದಿ: ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?

ನಿಫ್ಟಿ50ಯಲ್ಲಿ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ50 ಎಂಬುದು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಅತಿಹೆಚ್ಚು ಮಾರ್ಕೆಟ್ ಕ್ಯಾಪ್ ಇರುವ 50 ಷೇರುಗಳ ಗುಂಪು. ನಿಫ್ಟಿ50 ಇಂಡೆಕ್ಸ್ ಫಂಡ್​ಗಳು ಈ 50 ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಈ ನಿಫ್ಟಿ50 ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುವ ಇಟಿಎಫ್​ಗಳು ಅಥವಾ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಇಟಿಎಫ್​ನಲ್ಲಿ ಹೂಡಿಕೆ ಮಾಡಬೇಕೆಂದರೆ ಡೀಮ್ಯಾಟ್ ಅಕೌಂಟ್ ತೆರೆಯಬೇಕು. ಡೀಮ್ಯಾಟ್ ಅಕೌಂಟ್ ತೆರೆದರೆ ಇಟಿಎಫ್, ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು. ಯಾವುದೇ ಷೇರುಗಳಲ್ಲಿ ನೇರವಾಗಿಯೂ ಹೂಡಿಕೆ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚರ್ಮರೋಗ ಇದ್ಯಾ? ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಸಮಸ್ಯೆ ಉಲ್ಬಣವಾಗುವುದು ಗ್ಯಾರೆಂಟಿ – Kannada News | How to Bathe Safely with Skin Issues in Winter

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲಿನ ಕೆಲಸ. ಅದರಲ್ಲಿಯೂ ಚರ್ಮ ಸಂಬಂಧಿ ಸಮಸ್ಯೆ (Skin Disease) ಇರುವವರು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಶೀತ ಮತ್ತು ಕಡಿಮೆ ಆರ್ದ್ರತೆಯಿಂದ, ಚರ್ಮವು ಬಿಗಿಯಾಗುವುದಲ್ಲದೆ ಸೂಕ್ಷ್ಮವಾಗುತ್ತದೆ. ಹಾಗಾಗಿ ಈ ಋತುವಿನಲ್ಲಿ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆ ಇರುವವರು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಈ ಸಮಯದಲ್ಲಿ ಸ್ನಾನದ ಅಭ್ಯಾಸಗಳು ಸಹ ಪ್ರಮುಖ ಪಾತ್ರವಹಿಸುತ್ತವೆ, ಏಕೆಂದರೆ ಕೆಲವೊಮ್ಮೆ ಸರಿಯಾಗಿ ಸ್ನಾನ ಮಾಡದಿರುವುದರಿಂದ ಚರ್ಮದ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಹೌದು, ಹೆಚ್ಚಿನವರು ಚಳಿಗಾಲದಲ್ಲಿ ನೀರಿನ ತಾಪಮಾನದತ್ತ ಗಮನ ಹರಿಸುವುದಿಲ್ಲ ಅಥವಾ ಸ್ನಾನದ ನಂತರ ಚರ್ಮದ ಆರೈಕೆ ಮಾಡದೆಯೇ ನಿರ್ಲಕ್ಷಿಸುತ್ತಾರೆ. ಇದು ತುರಿಕೆ, ಸುಡುವಿಕೆ ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ. ಆದ್ದರಿಂದ, ಚರ್ಮರೋಗಗಳಿಂದ ಬಳಲುತ್ತಿರುವವರು ಚಳಿಗಾಲದಲ್ಲಿ ತಮ್ಮ ದಿನಚರಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆ ಮೂಲಕ ಸಮಸ್ಯೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಹಾಗಾದರೆ ಚರ್ಮರೋಗಿಗಳು ಸ್ನಾನ ಮಾಡುವಾಗ ಯಾವ ರೀತಿ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಚರ್ಮರೋಗಿಗಳು ಸ್ನಾನ ಮಾಡುವಾಗ ಈ ಸಲಹೆಗಳನ್ನು ಅನುಸರಿಸಿ:

ಮ್ಯಾಕ್ಸ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ಸೌಮ್ಯ ಸಚ್‌ದೇವ ಹೇಳುವ ಪ್ರಕಾರ, ಚಳಿಗಾಲದಲ್ಲಿ ಚರ್ಮರೋಗಗಳಿಂದ ಬಳಲುತ್ತಿರುವವವರು ಕೆಲವು ಸರಳ ಸಲಹೆಗಳನ್ನು ಅನುಸರಿಸಬೇಕು. ಈ ಋತುವಿನಲ್ಲಿ ತುಂಬಾ ಬಿಸಿ ಅಥವಾ ತಣ್ಣನೆಯ ನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಉಗುರು ಬೆಚ್ಚಗಿನ ನೀರು ಚರ್ಮ ರೋಗಗಳನ್ನು ಶಮನಗೊಳಿಸುತ್ತದೆ ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಸ್ನಾನದ ಸಮಯವನ್ನು ಸೀಮಿತಗೊಳಿಸಿ ಏಕೆಂದರೆ ನೀರಿನಲ್ಲಿ ಹೆಚ್ಚು ಹೊತ್ತು ಇರುವುದು ಚರ್ಮವನ್ನು ಒಣಗಿಸಬಹುದು.

ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರದಂತೆ ಹಗುರವಾದ ಮತ್ತು ಸೌಮ್ಯವಾದ ಕ್ಲೆನ್ಸರ್ ಬಳಸಿ. ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದ ತೇವಾಂಶವನ್ನು ಹಾಗೆಯೇ ಇಡುತ್ತದೆ ಮತ್ತು ಕಿರಿಕಿರಿ ಅಥವಾ ಬಿಗಿತದ ಭಾವನೆಯನ್ನು ಕಡಿಮೆ ಮಾಡುತ್ತದೆ ಮತ್ತು ದೈನಂದಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಸರಿಯಾದ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಚಳಿಗಾಲದಲ್ಲಿಯೂ ಸಹ ಚರ್ಮವನ್ನು ರಕ್ಷಿಸಬಹುದು.

ಇದನ್ನೂ ಓದಿ: ನಿರಂತರ ಆಯಾಸವಾಗಿ ಕೈ, ಕಾಲುಗಳಲ್ಲಿ ಜುಮ್ಮೆನಿಸುತ್ತಾ? ಹಾಗಿದ್ರೆ ನಿಮ್ಮ ದೇಹದಲ್ಲಿ ಈ ವಿಟಮಿನ್ ಕೊರತೆ ಇದೆ ಎಂದರ್ಥ!

ಚರ್ಮದ ಆರೋಗ್ಯ ಕಾಪಾಡಲು ಈ ಸಲಹೆ ಅನುಸರಿಸಿ:

ಚಳಿಗಾಲದಲ್ಲಿ ಚರ್ಮವನ್ನು ಆರೋಗ್ಯವಾಗಿಡಲು, ಸ್ನಾನ ಮಾಡುವುದರ ಜೊತೆಗೆ ಕೆಲವು ವಿಷಯಗಳತ್ತ ಗಮನ ಹರಿಸುವುದು ಮುಖ್ಯ. ಸ್ನಾನದ ನಂತರ ತಕ್ಷಣ ಮಾಯಿಶ್ಚರೈಸರ್ ಹಚ್ಚುವುದು ಪ್ರಯೋಜನಕಾರಿಯಾಗಿದೆ ಇದರಿಂದ ಚರ್ಮದ ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಹುದು. ಅಷ್ಟೇ ಅಲ್ಲ, ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಕೂಡ ಚರ್ಮದ ಆರೋಗ್ಯಕ್ಕೆ ಮುಖ್ಯವೆಂದು ಪರಿಗಣಿಸಲಾಗಿದೆ. ಶೀತ ಗಾಳಿಯಿಂದ ರಕ್ಷಿಸಲು, ಹೊರಗೆ ಹೋಗುವಾಗ ಚರ್ಮವನ್ನು ಆದಷ್ಟು ಮುಚ್ಚಿಕೊಳ್ಳಿ. ಹೆಚ್ಚು ಸೋಪು ಅಥವಾ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ಕಡಿಮೆಮಾಡಿ. ಸಮತೋಲಿತ ಆಹಾರ ಸೇವನೆ ಮತ್ತು ಸಾಕಷ್ಟು ಪ್ರಮಾಣದಲ್ಲಿ ವಿಶ್ರಾಂತಿ ಕೂಡ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಚರ್ಮದ ಸಮಸ್ಯೆಗಳು ಉಲ್ಬಣಗೊಂಡರೆ, ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೋಲ್ಡ್ ಇಟ್ಟಿಲ್ಲ, ಲೋನ್ ಪಡೆದಿಲ್ಲ: ಮತ್ತೊಂದು ಕೆನರಾ ಬ್ಯಾಂಕಿನಿಂದ ಮಹಾ ಮೋಸ

ಮೈಸೂರು (ಡಿಸೆಂಬರ್ .29) : ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದ ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದ ಪ್ರಕರಣವೊಂದು ಮೈಸೂರಿನ ಕೆನರಾ ಬ್ಯಾಂಕ್‌ನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್‌ನ ಅಧಿಕೃತ ಅಕ್ಕಸಾಲಿಗ (Appraiser) ಅಶ್ವಿನ್ ಆಚಾರ್ ಎಂಬುವವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಮಲ್ಲೇಶ್ವರಂ 15ನೇ ಕ್ರಾಸ್​ನ ಕೆನರಾ ಬ್ಯಾಂಕ್​ನಲ್ಲಿ ಇಂತದ್ದೇ ಘಟನೆ ನಡೆದಿದೆ. ಹೌದು… ಬೆಂಗಳೂರಿನ ಮಲ್ಲೇಶ್ವರಂ 15ನೇ ಕ್ರಾಸ್​ನ ಕೆನರಾ ಬ್ಯಾಂಕ್​ನ ಹಿರಿಯ ವ್ಯವಸ್ಥಾಪಕ ಮ್ಯಾನೇಂಜರ್ ಎನ್.ರಘು ವಿರುದ್ಧ ವಿರುದ್ಧ 41 ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕಿ ಒಟ್ಟು 3.11 ಕೋಟಿಗೂ ಹೆಚ್ಚು ಹಣ ವಂಚಿಸಿರುವ ಆರೋಪ ಕೇಳಿಬಂದಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಅಗಸ್ಟ್ 4 ರಿಂದ ಡಿ.9ರವರೆಗೆ ನಕಲಿ ಗೋಲ್ಡ್ ಲೋನ್ ಸೃಷ್ಟಿಸಿದ್ದ ರಘು, 41 ಗ್ರಾಹಕರ ಖಾತೆಗಳಲ್ಲಿ ನಕಲಿ ಗೋಲ್ಡ್ ಲೋನ್ ಮಾಡಿ ಹಣ ಪಡೆದು ಲೂಟಿ ಮಾಡಿದ್ದಾರೆ. ಬ್ಯಾಂಕ್​ನ ಗ್ರಾಹಕರಾಗಿರುವ ವೃದ್ಧರು, ಪಿಂಚಣಿದಾರರು, ಆರ್ಚಕರು, ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ನಕಲಿ ಗೋಲ್ಡ್​ ಲೋನ್ ಸೃಷ್ಟಿಸಿದ್ದು, ಇವರ ಖಾತೆಗಳ ಒಟಿಪಿ ಹಾಗೂ ಚೆಕ್ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಮ್ಯಾನೇಜರ್​​ ರಘು ಎಸ್ಕೇಪ್ ಆಗಿದ್ದು, ಇತ್ತ 41 ಖಾತೆಗಳನ್ನ ಬ್ಯಾಂಕ್ ಫ್ರೀಜ್ ಮಾಡಿದ್ದರಿಂದ ಗ್ರಾಹಕರು ಪರದಾಡುವಂತಾಗಿದೆ. ಇನ್ನು ಈ ಬಗ್ಗೆ ಗ್ರಾಹಕರೊಬ್ಬರು ಟಿವಿ9 ಜತೆ ಮಾತನಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಉನ್ನಾವ್ ಲೈಂಗಿಕ ದೌರ್ಜನ್ಯ ಪ್ರಕರಣ; ಕುಲದೀಪ್ ಸೆಂಗಾರ್ ಜಾಮೀನು ರದ್ದತಿಗೆ ಸುಪ್ರೀಂ ಕೋರ್ಟ್ ತಡೆ – Kannada News | Supreme Court upholds Kuldeep Sengar sentence in Unnao rape case Stays Delhi High Court Order

ನವದೆಹಲಿ, ಡಿಸೆಂಬರ್ 29: ಉನ್ನಾವ್ (Unnao Case) ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ. ಈ ಮೂಲಕ ಕುಲದೀಪ್ ಸೆಂಗಾರ್​​ಗೆ ಭಾರೀ ಹಿನ್ನಡೆಯಾಗಿದೆ. ದೆಹಲಿ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಈ ಹಿಂದಿನ ಶಿಕ್ಷೆಯನ್ನು ಎತ್ತಿಹಿಡಿದಿದೆ. ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಸೆಂಗಾರ್‌ಗೆ ನೋಟಿಸ್ ನೀಡಿದೆ.

ಕುಲದೀಪ್ ಸೆಂಗಾರ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿದ ಡಿಸೆಂಬರ್ 23ರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠವು ವಿಚಾರಣೆ ನಡೆಸಿತು.

ಇದನ್ನೂ ಓದಿ: ಉನ್ನಾವ್ ಅತ್ಯಾಚಾರ ಪ್ರಕರಣ; ಮಾಜಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್​​ಗೆ ಬಿಗ್ ರಿಲೀಫ್

2019ರ ಡಿಸೆಂಬರ್‌ನಲ್ಲಿ ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಕುಲದೀಪ್ ಸಿಂಗ್ ಸೆಂಗಾರ್ ತಪ್ಪಿತಸ್ಥರಾಗಿದ್ದು, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಅವರಿಗೆ 25 ಲಕ್ಷ ರೂ. ದಂಡವನ್ನೂ ವಿಧಿಸಿದೆ. ಡಿಸೆಂಬರ್ 23ರಂದು ದೆಹಲಿ ಹೈಕೋರ್ಟ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಮತ್ತು ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿತ್ತು.

ಈ ಹಿನ್ನೆಲೆಯಲ್ಲಿ ಕುಲದೀಪ್ ಸೆಂಗಾರ್‌ಗೆ ಪರಿಹಾರ ನೀಡುವ ದೆಹಲಿ ಹೈಕೋರ್ಟ್‌ನ ನಿರ್ಧಾರಕ್ಕೆ ತಡೆ ನೀಡುವಂತೆ ಕೋರಿ ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೆಲಮಂಗಲ: ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್, ಕಾರಿನಲ್ಲಿದ್ದ ಕುಟುಂಬ ಪವಾಡಸದೃಶ ಪಾರು – Kannada News | Bengaluru Rural: Water Tanker Crash in Nelamangala; Family Survives!

ಬೆಂಗಳೂರು, ಡಿ.29: ವಾಟರ್ ಟ್ಯಾಂಕರ್ ಕಾರಿನ ಮೇಲೆ ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ. ಕಾಮಗಾರಿ ಮಾಡಲಾಗುತ್ತಿದ್ದ ರಸ್ತೆಗೆ ನೀರು ಹಾಕುತ್ತಿದ್ದ ವೇಳೆ, ಟ್ರ್ಯಾಕ್ಟರ್​ನಿಂದ ಕಳಚಿ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ. ಇದೀಗ ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿನಲ್ಲಿದ್ದ ಮೂವರು ಮಕ್ಕಳು, ತಂದೆ ತಾಯಿ ಪವಾಡ ರೀತಿಯಲ್ಲಿ ಪಾರಾಗಿದ್ದಾರೆ. ಇದೀಗ ನೆಲಮಂಗಲ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

VHT 2025-26: 78 ಎಸೆತಗಳಲ್ಲಿ ಶತಕ, ಮುಂದಿನ 19 ಎಸೆತಗಳಲ್ಲಿ 150 ರನ್ ಚಚ್ಚಿದ ಧ್ರುವ್ ಜುರೆಲ್

Source link