ಬೆಂಗಳೂರು ವೈರಲ್ ಜೋಂಬಿ ಡ್ರಗ್ಸ್ ಕೇಸ್; ಪೊಲೀಸ್ ತನಿಖೆಯಲ್ಲಿ ಅಸಲಿಯತ್ತು ಬಯಲು
ಬೆಂಗಳೂರು, ಏಪ್ರಿಲ್ 09: ಇತ್ತೀಚೆಗೆ ಒಂದು ವಿಡಿಯೋ ಭಾರೀ ವೈರಲ್ ಆಗಿತ್ತು. ಅದರಲ್ಲಿ ಓರ್ವ ವ್ಯಕ್ತಿ ಗಂಟೆಗಟ್ಟಲ್ಲೇ ನಿಂತಲ್ಲೇ ನಿಂತಿದ್ದ. ಇದನ್ನ ಕೆಲವರು ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ (zombie drug) ಕಾಲಿಟ್ಟಿದೆ ಎಂದು ವೈರಲ್ ಮಾಡಲಾಗಿತ್ತು. ಇನ್ನು ಇದೇ ವಿಚಾರವಾಗಿ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಕೂಡ ಧ್ವನಿ ಎತ್ತಿದ್ದಾರೆ. ಇದೀಗ ಈಶಾನ್ಯ ವಿಭಾಗದ ಪೊಲೀಸರಿಂದ ಈ ಬಗ್ಗೆ ತನಿಖೆ ಮಾಡಲಾಗಿದ್ದು, ಈ ವೇಳೆ ಅಸಲಿಯತ್ತು ಬಯಲಾಗಿದೆ. ಜೋಂಬಿ ಡ್ರಗ್ಸ್ ಎನ್ನುವುದೇ ಇಲ್ಲಾ ಎಂಬ ಸ್ಫೋಟಕ ಸತ್ಯ…