Taiwan Earthquake: ತೈವಾನ್ನಲ್ಲಿ ಪ್ರಬಲ ಭೂಕಂಪ, ನಲುಗಿದ ಕಟ್ಟಡಗಳು – Kannada News | Strong Earthquake Strikes Taiwan Again, Triggers Fresh Tremors
ತೈವಾನ್, ಡಿಸೆಂಬರ್ 28: ತೈವಾನ್‌ನ ಈಶಾನ್ಯ ಕರಾವಳಿ ನಗರವಾದ ಯಿಲಾನ್‌ನಿಂದ ಶನಿವಾರ ಸುಮಾರು 32 ಕಿ.ಮೀ (20 ಮೈಲು) ದೂರದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ನಡುಗಿವೆ ಎಂದು ಹೇಳಲಾಗಿದೆ. ಅನಿಲ ಮತ್ತು ನೀರು ಸೋರಿಕೆ ಮತ್ತು ಕಟ್ಟಡಗಳಿಗೆ ಸಣ್ಣಪುಟ್ಟ ಹಾನಿ ಸೇರಿದಂತೆ ಕೆಲವು ಪ್ರತ್ಯೇಕ ಹಾನಿ ಪ್ರಕರಣಗಳು ವರದಿಯಾಗಿವೆ. ಯಿಲಾನ್‌ನಲ್ಲಿ 3,000 ಕ್ಕೂ ಹೆಚ್ಚು ಮನೆಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಕಡಿತಗೊಂಡಿವೆ ಎಂದು ತೈವಾನ್ ಪವರ್ ಕಂಪನಿ ತಿಳಿಸಿದೆ….