All posts by nagaraj11081993

ಡ್ರಗ್ಸ್​​ ಫ್ಯಾಕ್ಟರಿ ರಾಜಧಾನಿ ಆಯ್ತಾ ಬೆಂಗಳೂರು?: 55.88 ಕೋಟಿ ರೂ. ಮೌಲ್ಯದ MDMA ಸೀಜ್​​; ನಾಲ್ವರು ಅರೆಸ್ಟ್​​ – Kannada News | Bangalore Drug Factory Busted: 55 Cr MDMA Seized by Maharashtra Police

ಬೆಂಗಳೂರು, ಡಿಸೆಂಬರ್​​ 28: ಮಹಾರಾಷ್ಟ್ರದ ANTF ಕೊಂಕಣ ವಿಭಾಗದ ಪೊಲೀಸರು ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಭರ್ಜರಿ ಬೇಟೆ ನಡೆಸಿದ್ದಾರೆ. ವಿವಿಧೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ ಡ್ರಗ್ಸ್​ ಸೀಜ್ ಮಾಡಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. RJ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿರೋದು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ.

ಮುಂಬೈನಲ್ಲಿ ಇತ್ತೀಚೆಗೆ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿತ್ತು. ಈ ವೇಳೆ ಅರೆಸ್ಟ್​​ ಆಗಿದ್ದ
ಅಬ್ದುಲ್ಲಾ ಖಾದರ್ ಶೇಕ್ ಎಂಬಾತ ವಿಚಾರಣೆ ವೇಳೆ ಹಲವು ವಿಷಯ ಬಾಯ್ಬಿಟ್ಟಿದ್ದ. ಇದರ ಅನ್ವಯ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಲಾಗಿತ್ತು. ಪಾಟೀಲ್ ಮಾಹಿತಿ ಮೇರೆಗೆ ಬೆಂಗಳೂರಿನ ಮೂರು ಕಡೆ ದಾಳಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ್ದಾರೆ. ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಹೊಸ ವರ್ಷ ಹಿನ್ನೆಲೆ ಬೆಂಗಳೂರಲ್ಲಿ ಭರ್ಜರಿ ಡ್ರಗ್ಸ್ ಬೇಟೆ; 2 ಪ್ರತ್ಯೇಕ ಪ್ರಕರಣಗಳಲ್ಲಿ 28 ಕೋಟಿ ರೂ.ಮೌಲ್ಯದ ಗಾಂಜಾ ಸೀಜ್

ದಾಳಿ ವೇಳೆ 4.1 ಕೆಜಿ ಘನ MDMA ಮತ್ತು 17 ಕೆಜಿ ದ್ರವ MDMA ಸೇರಿ 55.88 ಕೋಟಿ ರೂ. ಮೌಲ್ಯದ ಒಟ್ಟು 21.4 ಕೆಜಿ‌ ಡ್ರಗ್ಸ್​​ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ನಾಲ್ವರ ಬಂಧಿಸಲಾಗಿದೆ. ಈ ಫ್ಯಾಕ್ಟರಿಗಳಿಂದ ದೇಶದ ಅನೇಕ ರಾಜ್ಯಗಳಿಗೆ ಡ್ರಗ್ಸ್ ಸಪ್ಲೈ ಶಂಕೆ ವ್ಯಕ್ತವಾಗಿದ್ದು, ಮಹಾರಾಷ್ಟ್ರ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರಿನ ಎಲ್ಲೆಲ್ಲಿ ಡ್ರಗ್ಸ್​​ ಫ್ಯಾಕ್ಟರಿ?

  • ಸ್ಥಳ 1: ಬಾಗಲೂರು ಪೊಲೀಸ್ ಠಾಣೆ ಮಿತಿಯೊಳಗಿನ ಸ್ಪಂದನ ಲೇಔಟ್ ಕಾಲೋನಿ
  • ಸ್ಥಳ 2: ಕೊತ್ತನೂರು ಪೊಲೀಸ್ ಠಾಣೆ ಮಿತಿಯೊಳಗಿನ ಎನ್.ಜಿ. ಗೋಲ್ಲಹಳ್ಳಿ ಪ್ರದೇಶದಲ್ಲಿ ಆರ್.ಜೆ. ಈವೆಂಟ್ ಎಂಬ ಹೆಸರಿನ ಕಾರ್ಖಾನೆ
  • ಸ್ಥಳ 3: ಅವಲಹಳ್ಳಿ ಪೊಲೀಸ್ ಠಾಣೆ ಮಿತಿಯೊಳಗಿನ ಯರಪ್ಪನಹಳ್ಳಿ ಮನೆ

ರಾಜಸ್ಥಾನ ಮೂಲದ ಕಿಂಗ್​​ಪಿನ್​​ಗಳು ಬೆಂಗಳೂರಲ್ಲಿ ಡ್ರಗ್ಸ್​​ ಫ್ಯಾಕ್ಟರಿ ನಡೆಸುತ್ತಿದ್ದು, ಯೋಗಿರಾಜ್ ಕುಮಾರ್ ಮತ್ತು ನಯನ್ ಪವರ್ ಇದರ ಪ್ರಮುಖ ರೂವಾರಿಗಳಾಗಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶದ ಹಲವೆಡೆ ಇವರು ಡ್ರಗ್ಸ್​​ ಫ್ಯಾಕ್ಟರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಉಳಿದ ಆರೋಪಿಗಳಿಗೂ ಮಹಾರಾಷ್ಟ್ರ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ವರದಿ: ಪ್ರದೀಪ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:33 am, Sun, 28 December 25

Source link

ಪ್ರೀತಿ ಇಷ್ಟೇನಾ? ಇಷ್ಟಪಟ್ಟು ಮದುವೆಯಾಗಿ 24 ಗಂಟೆಯೊಳಗೆ ವಿಚ್ಛೇದನ ಪಡೆದ ದಂಪತಿ – Kannada News | Divorce Within 24 Hours Of Love Marriage: Pune Couple’s Separation Sparks Debate

ಪುಣೆ, ಡಿಸೆಂಬರ್ 28: ಪ್ರೀತಿಸಿ ಮದುವೆ(Marriage)ಯಾಗಿ 24 ಗಂಟೆಯೊಳಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮದುವೆಯಾದ 24 ಗಂಟೆಗಳಲ್ಲಿ ದಂಪತಿಗಳು ವಿಚ್ಛೇದನ ಪಡೆದಿದ್ದಾರೆ. ಮದುವೆಯ ಬಳಿಕ ಒಂದೇ ದಿನದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಪೂಡಿತ್ತು. ಇಬ್ಬರು ಜತೆಗಿರಲು ಸಾಧ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಪರಸ್ಪರ ಒಪ್ಪಿಗೆ ನೀಡಿ ಬೇರೆಯಾಗಲು ಒಪ್ಪಿಕೊಂಡ ನಂತರ ವಿಚ್ಛೇದನ ನಡೆಯಿತು.

ಇಬ್ಬರೂ ನಾಲ್ಕು ವರ್ಷಗಳಿಂದ ಪರಿಚಿತರು, ಪರಸ್ಪರ ಪ್ರೀತಿಸಿದ ನಂತರ ವಿವಾಹವಾದರು ಎಂದು ಅವರ ವಕೀಲರು ತಿಳಿಸಿದ್ದಾರೆ. ಆಧುನಿಕ ಕಾಲದಲ್ಲಿ ಮದುವೆಗಳ ಬಗ್ಗೆ ತ್ವರಿತ ವಿಚ್ಛೇದನವು ಚರ್ಚೆಯನ್ನು ಹುಟ್ಟುಹಾಕಿದೆ. ಈ ದಂಪತಿ ಎರಡು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು.

ವಾಸ್ತವವಾಗಿ, ಈ ವಿವಾಹವು ಪ್ರೇಮ ವಿವಾಹವಾಗಿತ್ತು. ಇಬ್ಬರೂ ಎರಡು ಮೂರು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು ಮತ್ತು ದೀರ್ಘಕಾಲದ ಸಂಬಂಧದ ನಂತರ ಮದುವೆಯಾಗಲು ನಿರ್ಧರಿಸಿದರು. ಪತ್ನಿ ವೃತ್ತಿಯಲ್ಲಿ ವೈದ್ಯೆ, ಗಂಡ ಎಂಜಿನಿಯರ್.

ಮತ್ತಷ್ಟು ಓದಿ: ತಂಗಿ ಮೇಲೆ ಅತ್ಯಾಚಾರ, ಮದುವೆಯಾಗೋದಾಗಿ ಅಕ್ಕನಿಗೆ ಮೋಸ: ಸಹೋದರಿಯರನ್ನು ಕಾಡಿದ್ದ ಆರೋಪಿ ಅರೆಸ್ಟ್​​

ಮದುವೆಯಾದ ಕೂಡಲೇ, ಮುಂದಿನ ಜೀವನದ ಬಗ್ಗೆ ಹಲವು ಗೊಂದಲಗಳು ಹುಟ್ಟಿಕೊಂಡಿದ್ದವು. ಪತಿ ಮತ್ತು ಪತ್ನಿಯರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ತುಂಬಾ ಆಳವಾಗಿದ್ದವು, ಅವರು ಯಾವುದೇ ಘರ್ಷಣೆಯಿಲ್ಲದೆ ಬೇರ್ಪಡಲು ನಿರ್ಧರಿಸಿದರು ಎಂದು ವಕೀಲರು ವಿವರಿಸಿದರು. ಈ ಇಡೀ ಪ್ರಕರಣದಲ್ಲಿ ಹಿಂಸೆ ಅಥವಾ ಕ್ರಿಮಿನಲ್ ಆರೋಪಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಅವರು ಶಾಂತಿಯುತವಾಗಿ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸಿದರು ಮತ್ತು ಪರಸ್ಪರ ಒಪ್ಪಿಗೆಯ ಮೂಲಕ ತಮ್ಮ ಮದುವೆಯನ್ನು ಕೊನೆಗೊಳಿಸಿದರು.ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ದೀರ್ಘಕಾಲ ವಿಳಂಬವಾಗುತ್ತವೆ, ಆದರೆ ಈ ಪ್ರಕರಣವು ಬಹಳ ಬೇಗನೆ ಇತ್ಯರ್ಥವಾಯಿತು ಎಂದು ವಕೀಲೆ ರಾಣಿ ಸೋನಾವಾನೆ ವಿವರಿಸಿದರು.

ಮದುವೆಯಾದ ಮರುದಿನವೇ ದಂಪತಿಗಳು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು ಮತ್ತು ನ್ಯಾಯಾಲಯವು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ತನ್ನ ನಿರ್ಧಾರವನ್ನು ಪ್ರಕಟಿಸಿತ್ತು.

ಹಾಗಾದರೆ ಘರ್ಷಣೆಗೆ ಕಾರಣವಾಗಿದ್ದೇನು?
ಅಂದು ಮದುವೆಯ ವಿಧಿ ವಿಧಾನಗಳೆಲ್ಲವೂ ನೆರವೇರಿತ್ತು. ಆತ ತಾನೂ ಕೂಡ ವೈದ್ಯನೆಂದು ಹೇಳಿದ್ದ, ಆದರೆ ಮದುವೆಯ ದಿನ ಆತ ವೈದ್ಯನಲ್ಲ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಂಜಿನಿಯರ್ ಎಂದು ತಿಳಿದುಬಂದಿತ್ತು.ಆಗಾಗ ಐದಾರು ತಿಂಗಳುಗಳ ಕಾಲ ಮನೆಯಿಂದ ಹೊರಗಿರಬೇಕಾಗುತ್ತದೆ ಎಂದು ವಿವರಿಸಿದಾಗ ಆಕೆಗೆ ಆಘಾತವಾಗಿತ್ತು. ತಕ್ಷಣವೇ ಪತಿಯಿಂದ ಬೇರ್ಪಟುವ ನಿರ್ಧಾರ ಮಾಡಿದ್ದಾಳೆ. ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳಲು 18 ಗಂಟೆಗಳನ್ನು ತೆಗೆದುಕೊಂಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Taiwan Earthquake: ತೈವಾನ್​ನಲ್ಲಿ ಪ್ರಬಲ ಭೂಕಂಪ, ನಲುಗಿದ ಕಟ್ಟಡಗಳು – Kannada News | Strong Earthquake Strikes Taiwan Again, Triggers Fresh Tremors

ತೈವಾನ್, ಡಿಸೆಂಬರ್ 28: ತೈವಾನ್‌ನ ಈಶಾನ್ಯ ಕರಾವಳಿ ನಗರವಾದ ಯಿಲಾನ್‌ನಿಂದ ಶನಿವಾರ ಸುಮಾರು 32 ಕಿ.ಮೀ (20 ಮೈಲು) ದೂರದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ನಡುಗಿವೆ ಎಂದು ಹೇಳಲಾಗಿದೆ. ಅನಿಲ ಮತ್ತು ನೀರು ಸೋರಿಕೆ ಮತ್ತು ಕಟ್ಟಡಗಳಿಗೆ ಸಣ್ಣಪುಟ್ಟ ಹಾನಿ ಸೇರಿದಂತೆ ಕೆಲವು ಪ್ರತ್ಯೇಕ ಹಾನಿ ಪ್ರಕರಣಗಳು ವರದಿಯಾಗಿವೆ. ಯಿಲಾನ್‌ನಲ್ಲಿ 3,000 ಕ್ಕೂ ಹೆಚ್ಚು ಮನೆಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಕಡಿತಗೊಂಡಿವೆ ಎಂದು ತೈವಾನ್ ಪವರ್ ಕಂಪನಿ ತಿಳಿಸಿದೆ. 2016 ರಲ್ಲಿ ದಕ್ಷಿಣ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, 1999 ರಲ್ಲಿ 7.3 ತೀವ್ರತೆಯ ಭೂಕಂಪದಲ್ಲಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಗುಡ್ಡ ಏರಲು ಹೋಗಿ ಅವಘಡ: ಎರಡು ದಿನಗಳಾದರೂ ಯಾರ ಕಣ್ಣಿಗೂ ಬೀಳದ ಫ್ರಾನ್ಸ್ ಪ್ರವಾಸಿಗ ಬದುಕುಳಿದಿದ್ದೇಗೆ ಗೊತ್ತಾ? – Kannada News | French Tourist Rescued in Hampi:French Traveler Saved After 2 Days Near UNESCO Site

ಗುಡ್ಡ ಏರಲು ಹೋಗಿ ಜಾರಿ ಬಿದ್ದ ಫ್ರಾನ್ಸ್ ಪ್ರವಾಸಿಗ

ವಿಜಯನಗರ, ಡಿಸೆಂಬರ್ 28: ಫ್ರಾನ್ಸ್‌ನ 52 ವರ್ಷದ ಪ್ರವಾಸಿಗರೊಬ್ಬರು ಹಂಪಿಯ (Hampi) ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಲ್ಲಿರುವ ಐತಿಹಾಸಿಕ ಅಷ್ಟಭುಜ ಸ್ನಾನಘಟಕದ ಸಮೀಪದಲ್ಲಿ ಜಾರಿಬಿದ್ದಿದ್ದು, ಸುಮಾರು ಎರಡು ದಿನಗಳ ಬಳಿಕ ರಕ್ಷಿಸಲಾಗಿದೆ. ಗಾಯಾಳುವನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸುಧಾರಿಸಿದೆ.

ತೆವಳುತ್ತಾ ಬಾಳೆ ತೋಟ ತಲುಪಿದ್ದ ಬ್ರೂನೋ

ಡಿಸೆಂಬರ್ 24ರ ಸಂಜೆ ಸುಮಾರು 6 ಗಂಟೆಗೆ ಫ್ರಾನ್ಸ್‌ನ ಬ್ರುನೋ ರೋಜರ್ ಎಂಬವರು ಸ್ಮಾರಕದ ಸಮೀಪದ ಗುಡ್ಡವನ್ನು ಏರಲು ಯತ್ನಿಸುತ್ತಿದ್ದ ವೇಳೆ ಕಲ್ಲುಗಳಿರುವ ಪ್ರದೇಶದಲ್ಲಿ ಜಾರಿ ಬಿದ್ದು ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಸಂಜೆ ಸಮಯದಲ್ಲಿ ಆ ಪ್ರದೇಶದಲ್ಲಿ ಜನಸಂಚಾರ ಕಡಿಮೆ ಇರುವುದರಿಂದ ಯಾರ ಕಣ್ಣಿಗೂ ಬೀಳದ ಅವರು, ಎರಡು ದಿನಗಳು ಅಲ್ಲಿಯೇ ಸಿಲುಕಿದ್ದರು. ಆಹಾರ ನೀರು ಸಿಗದೆ, ಗಾಯದ ತೀವ್ರ ನೋವಿನ ನಡುವೆಯೂ ಬದುಕುಳಿಯಲು ಪ್ರಯತ್ನಿಸಿದ ಬ್ರುನೋ, ತೆವಳುತ್ತ ಬಾಳೆ ತೋಟದೊಳಗೆ ತಲುಪಿದರು. ಅವರನ್ನು ಗಮನಿಸಿದ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಒಂಟಿಯಾಗಿ ಪ್ರವಾಸಕ್ಕೆ ಬಂದಿದ್ದ ರೋಜರ್

ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ರೋಜರ್ ಅವರು ಒಂಟಿಯಾಗಿ ಭಾರತಕ್ಕೆ ಬಂದಿದ್ದು, ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮದಲ್ಲಿ ಹೋಮ್‌ಸ್ಟೇಯಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.  ಘಟನೆ ವೇಳೆ ಅವರು ಒಬ್ಬರೇ ಅನ್ವೇಷಣೆಗೆ ತೆರಳಿದ್ದರು ಎನ್ನಲಾಗಿದೆ. ಹಂಪಿಯ ಕಲ್ಲುಮಯ ಹಾಗೂ ಏಕಾಂಗಿ ಪ್ರದೇಶಗಳಲ್ಲಿ, ವಿಶೇಷವಾಗಿ ಸಂಜೆ ಸಮಯದಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸಿ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಮದುವೆ ಮಂಟಪದಲ್ಲಿ ವರನ ಕೈಗೆ ಮುತ್ತಿಟ್ಟ ಮಾಜಿ ಪ್ರೇಯಸಿ, ಆಮೇಲೇನಾಯ್ತು ನೀವೇ ನೋಡಿ – Kannada News | Unexpected Clash Erupts During Wedding Function, Video Circulates Online

ಇಂಡೋನೇಷ್ಯಾ, ಡಿಸೆಂಬರ್ 28: ಇಂಡೋನೇಷ್ಯಾದಲ್ಲಿ ನಡೆದ ಮದುವೆ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವರನ ಮಾಜಿ ಗೆಳತಿ ಮದುವೆ ಮಂಪಟದಲ್ಲಿ ವಧುವಿನ ಎದುರೇ ಆತನ ಕೈಗೆ ಮುತ್ತುಕೊಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಮಹಿಳೆ ವರನ ಕೈಗೆ ಮುತ್ತಿಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಇದು ವಧುವಿಗೆ ಕೋಪ ತರಿಸಿತ್ತು. ಕೂಡಲೇ ವಧು ಮಾಜಿ ಪ್ರೇಯಸಿ ಕೂದಲು ಹಿಡಿದು ಆಕೆ ಹಿಗ್ಗಾಮುಗ್ಗ ಥಳಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತಂಗಿ ಮೇಲೆ ಅತ್ಯಾಚಾರ, ಮದುವೆಯಾಗೋದಾಗಿ ಅಕ್ಕನಿಗೆ ಮೋಸ: ಸಹೋದರಿಯರನ್ನು ಕಾಡಿದ್ದ ಆರೋಪಿ ಅರೆಸ್ಟ್​​ – Kannada News | Bengaluru Love Scam: Man Arrested for Cheating and Assaulting Two Sisters

ನೆಲಮಂಗಲ, ಡಿಸೆಂಬರ್​​ 28: ರಾಜ್ಯದಲ್ಲಿ ಮತ್ತೊಂದು ಲವ್​ ಸೆಕ್ಸ್​ ದೋಖಾ ಆರೋಪ ಪ್ರಕರಣ ಸದ್ದು ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯಿಂದ ಲಕ್ಷಾಂತರ ಹಣ ಬೆದರಿಸಿ ಪಡೆದಿರುವ ಜೊತೆಗೆ, ಆಕೆಯ ಮನೆಯಲ್ಲಿದ್ದ ಚಿನ್ನಾಭರಣವನ್ನು ಆರೋಪಿ ಕದ್ದಿದ್ದ. ಅಲ್ಲದೆ, ಯುವತಿಯ ಸಹೋದರಿ ಮೇಲೂ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ ಎನ್ನಲಾಗಿದೆ.

ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಶುಭಾಂಶು ಶುಕ್ಲಾ(27)ನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಸಂತ್ರಸ್ತೆಯ ಸಹೋದರಿಯಾದ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಯ ಕುಟುಂಬಕ್ಕೂ ಬಲ್ಲವನಾಗಿದ್ದ. ಬಳಿಕ ಬಾಲಕಿ ಸಹೋದರಿಯನ್ನ ಪ್ರೀತಿ ಬಲೆಯಲ್ಲಿ ಬೀಳಿಸಿದ್ದ ಈತ, ಮಾಸ್ಟರ್​​ ಪ್ಲ್ಯಾನ್​​ ಮಾಡಿ ಆಕೆಯನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ. ತನಗೆ ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರನ್ನು ನಂಬಿಸಿದ್ದ ಸಂತ್ರಸ್ತೆ, ಈತನನನ್ನು ನಂಬಿ ಜೊತೆಗೆ ತೆರಳಿದ್ದಳು. ನಂತರ ಫ್ಲ್ಯಾಟ್​ನಲ್ಲಿ ಶುಭಾಂಶು ಮತ್ತು ಯುವತಿ ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವಿದ್ಯಾರ್ಥಿ; ಪಾದಚಾರಿ ಸಾವು

ಇನ್ನು ಸಮಯ ಕಳೆದಂತೆ ಶುಭಾಂಶುಗೆ ಮೊದಲೇ ಮದುವೆಯಾಗಿರುವ ಬಗ್ಗೆ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಆಕೆಯ ಜೊತೆ ತಾನು ವಿಚ್ಛೇದನ ಪಡೆದುಕೊಳ್ಳುತ್ತೇನೆ. ನಿನ್ನ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಆತ ಹೇಳಿದ್ದ. ಶುಭಾಂಶು ಪತ್ನಿಯೂ ಸಂತ್ರಸ್ತೆ ಜೊತೆ ಮಾತಾಡಿದ್ದು ತಾನು ಆತನಿಗೆ ಡಿವೋರ್ಸ್​​ ನೀಡೋದಾಗಿ ತಿಳಿಸಿದ್ದಳು. ಹೀಗಾಗಿ ಶುಭಾಂಶು ಮೇಲೆ ಭರವಸೆ ಇಟ್ಟು ಸಂತ್ರಸ್ತೆ ಸಂಬಂಧ ಮುಂದುವರಿಸಿದ್ದಳು. ಆದರೆ, ಮತ್ತೊಂದು ಅಪ್ರಾಪ್ತ ಯುವತಿಗೂ ಶುಭಾಂಶು ಇದೇ ರೀತಿ ವಂಚಿಸುತ್ತಿರೋದು ಸಂತ್ರಸ್ತೆಗೆ ಗೊತ್ತಾಗಿದೆ. ಆಕೆ ಮುಂದೆ ಈತನ ಬಂಡವಾಳವನ್ನು ಸಂತ್ರಸ್ತೆ ಬಯಲು ಮಾಡಿದ್ದಳು. ಆ ಬಳಿಕ ಶುಭಾಂಶು ಚಿತ್ರಹಿಂಸೆ ಆರಂಭವಾಗಿತ್ತು ಎಂದು ದೂರಲಾಗಿದೆ.

ಸಂತ್ರಸ್ತ ಯುವತಿ ಬಳಿ 37 ಲಕ್ಷ ಹಣವನ್ನೂ ಪಡೆದಿದ್ದ ಆರೋಪಿ ಶುಭಾಂಶು, ಯುವತಿ ಮನೆಯಲ್ಲಿ 559 ಗ್ರಾಂ ಚಿನ್ನಾಭರಣ ಸಹ ಕದ್ದಿದ್ದ. ಈ ಬಗ್ಗೆ ದೂರು ನೀಡಿದರೆ ಸಾಯಿಸುತ್ತೇನೆ ಎಂದು ಬೆದರಿಸಿದ್ದ. ಆ ಬಳಿಕ ಸಂತ್ರಸ್ತೆ ಚಿತ್ರಹಿಂಸೆ ತಾಳಲಾರದೆ ಶುಭಾಂಶುನನ್ನು ಬಿಟ್ಟು ಬಂದಿದ್ದಳು. ಸಂತ್ರಸ್ತೆಯ ಪರಿಚಯಕ್ಕೆ ಮೂಲ ಕಾರಣವಾಗಿದ್ದ ಆಕೆಯ ಅಪ್ರಾಪ್ತ ಸಹೋದರಿಯ ಮೇಲೂ ಶುಭಾಂಶು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಗ್ರೂಪ್​​ ಸ್ಟಡಿ ಮಾಡಲು ತೆರಳುತ್ತಿದ್ದಾಗ ಪರಿಚಯವಾಗಿದ್ದ ಶುಭಾಂಶು, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಕರೆದಾಗೆಲ್ಲ ಬರಬೇಕು ಎಂದು ಬೆದರಿಸಿದ್ದ ಆತ, ನಿನ್ನ ಮನೆಯವರನ್ನು ನನಗೆ ಪರಿಚಯ ಮಾಡಿಸು ಎಂದಿದ್ದ. ಹಾಗಾದರೆ ಮಾತ್ರ ತಾನು ನಿನ್ನ ಬಿಡೋದಾಗಿ ಹೆದರಿಸಿದ್ದ ಎಂದು ಅಪ್ರಾಪ್ತೆಯೂ ದೂರಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:17 am, Sun, 28 December 25

Source link

ಝೆಲೆನ್ಸ್ಕಿ- ಟ್ರಂಪ್ ಶಾಂತಿ ಮಾತುಕತೆಗೂ ಮುನ್ನ ಉಕ್ರೇನ್ ಮೇಲೆ ರಷ್ಯಾ ದಾಳಿ – Kannada News | Russia Intensifies Attacks in Ukraine Ahead of Key Zelenskyy Trump Talks

ದಾಳಿ-ಸಾಂದರ್ಭಿಕ ಚಿತ್ರImage Credit source: India TV

ಕೈವ್, ಡಿಸೆಂಬರ್ 28: ಉಕ್ರೇನ್‌(Ukraine)ನ ರಾಜಧಾನಿಯಲ್ಲಿ ರಷ್ಯಾ ಶನಿವಾರ ತೀವ್ರ ದಾಳಿ ನಡೆಸಿದ್ದು, ಓರ್ವ ಸಾವನ್ನಪ್ಪಿದ್ದು, 27 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶಾಂತಿ ಮಾತುಕತೆ ನಡೆಯುವ ಒಂದು ದಿನದ ಮೊದಲು ಇದು ಸಂಭವಿಸಿದೆ.

ಮುಂಜಾನೆ ದಾಳಿ ಪ್ರಾರಂಭವಾಗಿ ಗಂಟೆಗಳ ಕಾಲ ಮುಂದುವರೆದಿತ್ತು ಕೈವ್‌ನಾದ್ಯಂತ ಪ್ರಬಲ ಸ್ಫೋಟಗಳು ಸಂಭವಿಸಿವೆ. ರಷ್ಯಾ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿ ನಡೆಸಿದೆ.
ವೊಲೊಡಿಮಿರ್ ಝೆಲೆನ್ಸ್ಕಿ ಅವರು ಇಂದು ಫ್ಲೋರಿಡಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ, ಯುದ್ಧವು ಈಗ ನಾಲ್ಕನೇ ವರ್ಷವನ್ನು ಸಮೀಪಿಸುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಝೆಲೆನ್ಸ್ಕಿ, ಉಕ್ರೇನ್‌ಗೆ ದೀರ್ಘಾವಧಿಯ ಭದ್ರತಾ ಭರವಸೆಗಳು ವಿವಾದಿತ ಪ್ರದೇಶಗಳ ಭವಿಷ್ಯ ಸೇರಿದಂತೆ ಹಲವಾರು ಪ್ರಮುಖ ವಿಷಯಗಳನ್ನು ಚರ್ಚೆಗಳು ಒಳಗೊಂಡಿರುತ್ತವೆ ಎಂದು ಹೇಳಿದರು. ಈ ದಾಳಿಯು ನಮ್ಮ ಶಾಂತಿ ಪ್ರಯತ್ನಗಳಿಗೆ ರಷ್ಯಾದ ಉತ್ತರವಾಗಿದೆ, ಪುಟಿನ್ ಅವರಿಗೆ ಶಾಂತಿ ಬೇಕಾಗಿಲ್ಲ ಎಂದು ಇದು ನಿಜವಾಗಿಯೂ ತೋರಿಸುತ್ತದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಮತ್ತಷ್ಟು ಓದಿ: ಉಕ್ರೇನ್​​ ಮೇಲಿನ ಯುದ್ಧಕ್ಕೆ ಭಾರತ-ಚೀನಾ ಮುಖ್ಯ ಹೂಡಿಕೆದಾರರು; ವಿಶ್ವಸಂಸ್ಥೆಯಲ್ಲಿ ಮತ್ತೆ ಹಳೇ ರಾಗ ಹಾಡಿದ ಟ್ರಂಪ್

ಉಕ್ರೇನ್‌ಗೆ 1.8 ಶತಕೋಟಿ ಡಾಲರ್ ಮೌಲ್ಯದ ಆರ್ಥಿಕ ಸಹಾಯವನ್ನು ಕೆನಡಾ ಪ್ರಧಾನಿ ಕಾರ್ನಿ ಘೋಷಿಸಿದ್ದಾರೆ, ಇದು ಕೈವ್‌ನೊಂದಿಗೆ ನಿಲ್ಲುವ ಸಮಯ ಎಂದು ಹೇಳಿದ್ದಾರೆ. ರಷ್ಯಾದ ರಕ್ಷಣಾ ಸಚಿವಾಲಯವು ರಾತ್ರಿಯಿಡೀ ದೊಡ್ಡ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತು.ಈ ದಾಳಿಯಲ್ಲಿ ಕಿಂಜಾಲ್ ಹೈಪರ್ಸಾನಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಸೇರಿವೆ ಎಂದು ಸಚಿವಾಲಯ ತಿಳಿಸಿದೆ.

ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಭಾನುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಮಾತುಕತೆಗೆ ಮುಂಚಿತವಾಗಿ ರಷ್ಯಾ ಉಕ್ರೇನಿಯನ್ ನಗರಗಳ ಮೇಲೆ ಪ್ರಮುಖ ದಾಳಿಯನ್ನು ಪ್ರಾರಂಭಿಸಿದೆ. ಸುಮಾರು 500 ಡ್ರೋನ್‌ಗಳು ಮತ್ತು 40 ಕ್ಷಿಪಣಿಗಳನ್ನು ಒಳಗೊಂಡ ಇತ್ತೀಚಿನ ದಾಳಿಯಲ್ಲಿ ರಾಜಧಾನಿ ಕೈವ್‌ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ 19 ಜನರು ಗಾಯಗೊಂಡಿದ್ದಾರೆ.

ಈ ದಾಳಿಯ ನಂತರ, ಉಕ್ರೇನ್‌ನ ನೆರೆಯ ದೇಶವಾದ ಪೋಲೆಂಡ್, ಗಡಿಯ ಸಮೀಪವಿರುವ ತನ್ನ ಎರಡು ವಿಮಾನ ನಿಲ್ದಾಣಗಳನ್ನು ಮುಚ್ಚಿತು ಮತ್ತು ತನ್ನ ವಾಯುಪಡೆಯನ್ನು ಜಾಗರೂಕತೆಯಿಂದ ಇರಿಸಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜೋಶ್ ಟಂಗ್​ ಕರಾರುವಾಕ್ ದಾಳಿಯಿಂದ ಆಸ್ಟ್ರೇಲಿಯಾಗೆ 60 ಕೋಟಿ ರೂ. ನಷ್ಟ..! – Kannada News | Cricket Australia lost out on Around Rs. 60.6 crore

ಏಕೆಂದರೆ ಈ ಪಂದ್ಯವನ್ನು ವೀಕ್ಷಿಸಲು ಮೊದಲೆರಡು ದಿನಗಳು 90 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸಿದ್ದರು. ಅತ್ತ ಆಸ್ಟ್ರೇಲಿಯಾದಲ್ಲಿ ಕ್ರಿಸ್ಮಸ್ ರಜೆ ಇರುವುದರಿಂದ 5 ದಿನದಾಟಗಳ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ 5 ಪೌಂಡ್​ ಮಿಲಿಯನ್​ಗಿಂತಲೂ ಆದಾಯಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಜೋಶ್ ಟಂಗ್​ನ ನಿಖರ ದಾಳಿಯಿಂದ ತತ್ತರಿಸಿದ ಆಸ್ಟ್ರೇಲಿಯಾ ತಂಡವು ಎರಡು ಇನಿಂಗ್ಸ್​ಗಳ ಮೂಲಕ ಎದುರಿಸಿದ್ದು 479 ಎಸೆತಗಳನ್ನು ಮಾತ್ರ.  ಪರಿಣಾಮ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ಕೇವಲ 2 ದಿನಗಳಲ್ಲೇ ಕೊನೆಗೊಂಡಿದ್ದು, ಇದರಿಂದ ಕ್ರಿಕೆಟ್ ಆಸ್ಟ್ರೇಲಿಯಾಗೆ ಸುಮಾರು 60.6 ಕೋಟಿ ರೂ. ನಷ್ಟವಾಗಿದೆ ಎಂದು ವರದಿಯಾಗಿದೆ.

Source link

ಅಕ್ಷಯ್ ಖನ್ನಾ ಬದಲಿಗೆ ‘ಪಾತಾಳ್ ಲೋಕ್’ ನಟನಿಗೆ ‘ದೃಶ್ಯಂ 3’ ಅವಕಾಶ – Kannada News | Patal Lok actor Jaideep Ahlawat replaces Akshaye Khanna in Drishyam 3

ಬಾಲಿವುಡ್ ನಟ ಅಕ್ಷಯ್ ಖನ್ನಾ (Akshaye Khanna) ಅವರಿಗೆ ‘ಧುರಂಧರ್’ ಸಿನಿಮಾದಿಂದ ಏಕಾಏಕಿ ಅವಕಾಶ ಹೆಚ್ಚಾಯಿತು. ಒಮ್ಮೆಲೇ ಅವರ ಜನಪ್ರಿಯತೆ ಮುಗಿಲು ಮುಟ್ಟಿತು. ಇದರಿಂದಾಗಿ ಅವರ ಡಿಮ್ಯಾಂಡ್ ಜಾಸ್ತಿ ಆಗಿದೆ. 2ರಿಂದ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಅವರು ಈಗ ಏಕಾಏಕಿ 20 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಬೇಕು ಎಂದು ಕೇಳುತ್ತಿದ್ದಾರೆ. ಇದರಿಂದಾಗಿ ‘ದೃಶ್ಯಂ 3’ (Drishyam 3) ಸಿನಿಮಾದ ನಿರ್ಮಾಪಕರಿಗೆ ಕೋಪ ಬಂದಿದೆ. ಹಾಗಾಗಿ ಅಕ್ಷಯ್ ಖನ್ನಾ ಬದಲಿಗೆ ಜೈದೀಪ್ ಅಹಲಾವತ್ (Jaideep Ahlawat) ಅವರಿಗೆ ಅವಕಾಶ ನೀಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

‘ದೃಶ್ಯಂ ಎಂಬುದು ಬಹಳ ದೊಡ್ಡ ಬ್ರ್ಯಾಂಡ್. ಅಕ್ಷಯ್ ಖನ್ನಾ ಈ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬುದು ಮುಖ್ಯವಾಗುವುದೇ ಇಲ್ಲ. ಈಗ ಅಕ್ಷಯ್ ಖನ್ನಾ ಬದಲಿಗೆ ಜೈದೀಪ್ ಬಂದಿದ್ದಾರೆ. ದೇವರ ದಯೆಯಿಂದ ಅಕ್ಷಯ್ ಖನ್ನಾ ಅವರಿಗಿಂದ ಉತ್ತಮವಾದ ನಟ ನಮಗೆ ಸಿಕ್ಕಿದ್ದಾರೆ. ಅದಕ್ಕಿಂತ ಮುಖ್ಯವಾಗಿ, ಜೈದೀಪ್ ಅವರು ಅಕ್ಷಯ್ ಖನ್ನಾಗಿಂತ ಒಳ್ಳೆಯ ಮನುಷ್ಯ’ ಎಂದು ‘ದೃಶ್ಯಂ’ ಚಿತ್ರದ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್ ಅವರು ಹೇಳಿದ್ದಾರೆ.

ಅಕ್ಷಯ್ ಖನ್ನಾ ಅವರು ‘ದೃಶ್ಯಂ 2’ ಸಿನಿಮಾದಲ್ಲಿ ನಟಿಸಿದ್ದರು. ಈಗ ‘ದೃಶ್ಯಂ 3’ ಸೆಟ್ಟೇರುತ್ತಿದೆ. ಅಷ್ಟರಲ್ಲಾಗಲೇ ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಮಾಡಿದ ರೆಹಮಾನ್ ಡಕಾಯಿತ್ ಪಾತ್ರ ಬಹಳ ಹೈಲೈಟ್ ಆಗಿದೆ. ಆದ್ದರಿಂದ ಅಕ್ಷಯ್ ಖನ್ನಾ ಅವರು ಮುಂದಿನ ಸಿನಿಮಾಗಳ ನಿರ್ಮಾಪಕರಿಂದ ಏಕಾಏಕಿ ದುಬಾರಿ ಸಂಭಾವನೆ ಕೇಳಲು ಶುರು ಮಾಡಿದ್ದಾರೆ.

ಸಂಭಾವನೆ ಮಾತ್ರವಲ್ಲದೇ ತಮ್ಮ ಲುಕ್ ಕೂಡ ಬದಲಾಗಬೇಕು ಎಂಬುದು ಅಕ್ಷಯ್ ಖನ್ನಾ ಅವರ ಡಿಮ್ಯಾಂಡ್. ಅದಕ್ಕೆ ‘ದೃಶ್ಯಂ 3’ ಸಿನಿಮಾದ ನಿರ್ದೇಶಕರು ಒಪ್ಪಿಕೊಂಡಿಲ್ಲ. ಯಾಕೆಂದರೆ, ‘ದೃಶ್ಯಂ 2’ ಚಿತ್ರದಲ್ಲಿ ಅಕ್ಷಯ್ ಖನ್ನಾ ಮಾಡಿದ್ದ ಪಾತ್ರವೇ ಈಗ ಮುಂದುವರಿಯಬೇಕಿತ್ತು. ‘ದೃಶ್ಯಂ 2’ ಚಿತ್ರದಲ್ಲಿ ವಿಗ್ ಇಲ್ಲದೇ ನಟಿಸಿದ್ದ ಅಕ್ಷಯ್ ಖನ್ನಾ ಅವರು ‘ದೃಶ್ಯಂ 3’ ಚಿತ್ರದಲ್ಲಿ ವಿಗ್ ಧರಿಸಿ ಕಾಣಿಸಿಕೊಂಡರೆ ಚೆನ್ನಾಗಿ ಇರುವುದಿಲ್ಲ ಎಂಬುದು ನಿರ್ದೇಶಕರ ವಾದ. ಈ ಕಾರಣಕ್ಕಾಗಿಯೂ ಭಿನ್ನಾಭಿಪ್ರಾಯ ಮೂಡಿತು.

ಇದನ್ನೂ ಓದಿ: 2 ಕೋಟಿಯಿಂದ 21 ಕೋಟಿ ರೂಪಾಯಿಗೆ ಏರಿಕೆ ಆಯ್ತು ಅಕ್ಷಯ್ ಖನ್ನಾ ಸಂಬಳ

ಜೈದೀಪ್ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ‘ಪಾತಾಳ್ ಲೋಕ್’ ವೆಬ್ ಸರಣಿ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದಿದ್ದಾರೆ. ಅಕ್ಷಯ್ ಖನ್ನಾ ಅವರಿಂದ ತೆರವಾದ ಪಾತ್ರವನ್ನು ಈಗ ಜೈದೀಪ್ ಮಾಡಬೇಕಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್​ಚಿದೆ. ಸಿನಿಮಾ ತಂಡದಿಂದ ಹೊರನಡೆದಿದ್ದರ ಬಗ್ಗೆ ಅಕ್ಷಯ್ ಖನ್ನಾ ಅವರು ಪ್ರತಿಕ್ರಿಯೆ ನೀಡುವುದು ಇನ್ನೂ ಬಾಕಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇಹದ ಮೇಲೆ ಗಾಯಗಳು, ಒಳ ಉಡುಪುಗಳು ನಾಪತ್ತೆ, ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ – Kannada News | Woman Accuses Udaipur CEO of Physical Assault, Police Record Complaint

ಜೈಪುರ, ಡಿಸೆಂಬರ್ 28: ಮಹಿಳೆಯ ದೇಹದ ಮೇಲೆ ಹತ್ತಾರು ಗಾಯಗಳು, ಒಳ ಉಡುಪುಗಳು ಕೂಡ ನಾಪತ್ತೆಯಾಗಿದ್ದವು, ಐಟಿ ಸಂಸ್ಥೆಯ ಉದ್ಯೋಗಿ ಮೇಲೆ ನಡೆದ ಅತ್ಯಾಚಾರ(Rape) ತೀರಾ ಭಯಾನಕವಾಗಿತ್ತು. ರಾಜಸ್ಥಾನದ ಉದಯಪುರದಲ್ಲಿ ಕಾರಿನಲ್ಲಿ ಈ ಘಟನೆ ನಡೆದಿತ್ತು. ಘಟನೆ ಡಿಸೆಂಬರ್ 20 ರಂದು ನಡೆದಿತ್ತು. ಜಿಕೆಎಂ ಐಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಿತೇಶ್ ಪ್ರಕಾಶ್ ಸಿಸೋಡಿಯಾ ಹಾಗೂ ಇನ್ನಿಬ್ಬರು ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಜಿತೇಶ್, ಗೌರವ್ ಸರದಿಯಂತೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಅತ್ಯಾಚಾರವನ್ನು ದೃಢಪಡಿಸಿದ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ, ಮಹಿಳೆಗೆ ಗಾಯಗಳಾಗಿದ್ದು, ಆಕೆಯ ಖಾಸಗಿ ಭಾಗಗಳು ಮತ್ತು ದೇಹದ ಇತರ ಭಾಗಗಳಲ್ಲಿ ತೀರಾ ನೋವಾಗಿದೆ ಎಂದು ತಿಳಿದುಬಂದಿದೆ.

ತನ್ನ ಕೆಲವು ಆಭರಣಗಳು, ಸಾಕ್ಸ್ ಮತ್ತು ಒಳ ಉಡುಪುಗಳು ಕಾಣೆಯಾಗಿವೆ ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಡಿಸೆಂಬರ್ 20 ರಂದು ನಡೆದಿದ್ದೇನು?
ಡಿಸೆಂಬರ್ 20 ರಂದು ಸಂತ್ರಸ್ತೆ ಉದಯಪುರದ ಶೋಬಾಗ್‌ಪುರದ ಹೋಟೆಲ್‌ನಲ್ಲಿ ಸಿಸೋಡಿಯಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿ ರಾತ್ರಿ 9 ಗಂಟೆಗೆ ಪ್ರಾರಂಭವಾಗಿ ಬೆಳಗಿನ ಜಾವ 1.30 ರವರೆಗೆ ನಡೆಯಿತು. ಮಹಿಳೆ ಸೇರಿ ಎಲ್ಲರೂ ಮದ್ಯ ಸೇವಿಸಿದ್ದರು.

ಬೆಳಗಿನ ಜಾವ 1.30 ರ ಸುಮಾರಿಗೆ, ಜಿತೇಶ್ ಸಿಸೋಡಿಯಾ, ಗೌರವ್ ಸಿರೋಹಿ ಮರಳಲು ಅವಕಾಶ ನೀಡಿದ್ದರು. ಆಗ ಅವರ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ಗೌರವ್ ಕಾರನ್ನು ಚಲಾಯಿಸುತ್ತಿದ್ದರು ಮತ್ತು ಶಿಪ್ಲಾ, ಜಿತೇಶ್ ಮತ್ತು ಸಂತ್ರಸ್ತೆ ಹಿಂಭಾಗದಲ್ಲಿ ಕುಳಿತಿದ್ದರು. ಕಾರು ಆರೋಪಿಗಳಲ್ಲಿ ಒಬ್ಬರಿಗೆ ಸೇರಿದೆ.

ಪ್ರಯಾಣದ ಸಮಯದಲ್ಲಿ, ಆರೋಪಿಯು ಅಂಗಡಿಯಿಂದ ಸಿಗರೇಟ್ ಹೋಲುವ ವಸ್ತುವನ್ನು ಖರೀದಿಸಲು ವಾಹನವನ್ನು ನಿಲ್ಲಿಸಿ ವ್ಯವಸ್ಥಾಪಕರಿಗೆ ನೀಡಿದ್ದಾನೆ. ಅದನ್ನು ಸೇವಿಸಿದ ನಂತರ ಆಕೆ ಪ್ರಜ್ಞೆ ತಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜ್ಞೆ ಮರಳಿ ಬಂದ ನಂತರ, ಸಂತ್ರಸ್ತೆ ತನ್ನ ಗಾಯಗಳ ಮೇಲೆ ಗಾಯಗಳನ್ನು ಗಮನಿಸಿರುವುದಾಗಿ ಹೇಳಿದ್ದಾರೆ. ಕಾರಿನ ಡ್ಯಾಶ್‌ಕ್ಯಾಮ್ ಅನ್ನು ಪರಿಶೀಲಿಸಿದ್ದರು. ಅದು ಇಡೀ ಅಪರಾಧದ ಮತ್ತು ಆರೋಪಿಗಳ ನಡುವಿನ ಸಂಭಾಷಣೆಯನ್ನು ಸಹ ರೆಕಾರ್ಡ್ ಮಾಡಿದೆ. ಈ ಸಾಕ್ಷ್ಯದೊಂದಿಗೆ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಡಿಸೆಂಬರ್ 23 ರಂದು ದೂರು ದಾಖಲಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಾಲ್ಕು ದಿನಗಳ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ವಿವರವಾದ ತನಿಖೆ ಪ್ರಸ್ತುತ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:50 am, Sun, 28 December 25

Source link