ಕಾಲು ನೋವಿಗೆ ಐಸ್ ವಾಟರ್ ಬಾಟಲ್ ರೋಲಿಂಗ್; ಇದು ನಿಜವಾಗಿಯೂ ಪರಿಹಾರ ನೀಡುತ್ತಾ? – Kannada News | Foot Pain Relief at Home: How Ice Bottle Rolling Works
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಐಸ್ ನೀರಿನಿಂದ ತುಂಬಿದ ಬಾಟಲಿಯನ್ನು ಕಾಲಿನ ಕೆಳಗೆ ಇಟ್ಟು ರೋಲ್ ಮಾಡಿದರೆ ಕಾಲು ನೋವು ಅಥವಾ ಪಾದದ ನೋವು (Foot Pain) ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ವೈದ್ಯರು ಹೇಳುವ ಪ್ರಕಾರ, ಇದು “ಕೋಲ್ಡ್ ಥೆರಪಿ” ಮತ್ತು ಮಸಾಜ್, ಎರಡರ ಸಂಯೋಜನೆಯಂತೆ ಕೆಲಸ ಮಾಡುತ್ತದೆ. ಐಸ್‌ನ ತಂಪು ಕಾಲಿಗೆ ತಾಗಿದಾಗ ಆ ಭಾಗದ ರಕ್ತನಾಳಗಳು ತಾತ್ಕಾಲಿಕವಾಗಿ ಸಂಕೋಚಗೊಳ್ಳುತ್ತವೆ. ಇದರಿಂದ ಊತ ಮತ್ತು ಉರಿಯೂತ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ತಂಪಿನಿಂದ…