ಶೂಟ್ ಮಾಡಿಕೊಂಡು ಪತಿ ಆತ್ಮಹತ್ಯೆ: ನನ್ನ ಗಂಡ ಸೈಕೋ ಎಂದ ಪತ್ನಿ, ಆಗಿದ್ದೇನು? – Kannada News | Kalaburagi: Man Dies by Suicide Using Gun Amid Marital Dispute
ಕಲಬುರಗಿ, ಡಿಸೆಂಬರ್ 29: ನಗರದ ಶಿವಶಕ್ತಿ ಕಾಲೋನಿಯಲ್ಲಿ ರಿವಾಲ್ವರ್ನಿಂದ ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ನಡೆದಿದೆ. ಖಂಡುರಾಜ್ ದವಳಜಿ(36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತನ್ನ ಲೈಸೆನ್ಸ್ ರಿವಾಲ್ವರ್ನಿಂದಲೇ ಖಂಡುರಾಜ್ ಶೂಟ್ ಮಾಡಿಕೊಂಡಿದ್ದಾರೆ. ಪತ್ನಿ ಜೊತೆಗಿನ ಜಗಳ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಚೌಕ್ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ. ನನ್ನ ಗಂಡ ಸೈಕೋ: ಖಂಡುರಾಜ್ ದವಳಜಿ ಪತ್ನಿ ಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ಖಂಡುರಾಜ್…