nagaraj11081993

Train Fare Hike: ಇಂದಿನಿಂದ ರೈಲು ಪ್ರಯಾಣ ದುಬಾರಿ, ಹೊಸ ಟಿಕೆಟ್ ದರಗಳ ಕುರಿತು ಇಲ್ಲಿದೆ ಮಾಹಿತಿ – Kannada News | New Train Fares Kick In: What Passengers Need to Know

ನವದೆಹಲಿ, ಡಿಸೆಂಬರ್ 26: ದೇಶಾದ್ಯಂತ ಇಂದಿನಿಂದ ಅನ್ವಯವಾಗುವಂತೆ ರೈಲ್ವೆ ಇಲಾಖೆ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಈ ಮೂಲಕ ರೈಲು(Train) ಪ್ರಯಾಣ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವಂತಾಗಿದ್ದು ರೈಲು ಪ್ರಯಾಣ ದುಬಾರಿಯಾಗಲಿದೆ. ಉಪನಗರ ರೈಲು ಪ್ರಯಾಣದ ದರವನ್ನು ಹೆಚ್ಚಿಸಿಲ್ಲವಾದರೂ, ದೀರ್ಘ ಪ್ರಯಾಣದ ದರವನ್ನು ರೈಲ್ವೆ ಸಚಿವಾಲಯ ಹೆಚ್ಚಳ ಮಾಡಿದೆ. ಪ್ರತಿ 500 ಕಿ.ಮೀ.ಗೆ 10 ರೂ. ಹೆಚ್ಚಳ ಮಾಡಲಾಗಿದೆ. ಡಿಸೆಂಬರ್ 21 ರಂದು ಸಚಿವಾಲಯವು ಪ್ರಯಾಣಿಕರ ದರದಲ್ಲಿ ಹೆಚ್ಚಳವನ್ನು ಘೋಷಿಸಿದ್ದು, ಇದು ಡಿಸೆಂಬರ್ 26 ರಿಂದ ಜಾರಿಗೆ…

Read More

ಕ್ರಿಸ್ಮಸ್ ದಿನವೇ ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ – Kannada News | US Conducts Targeted Strikes Against ISIS Positions in Nigeria

ನೈಜೀರಿಯಾ, ಡಿಸೆಂಬರ್ 26: ನೈಜೀರಿಯಾದಲ್ಲಿ ಕ್ರಿಶ್ಚಿಯನ್ನರನ್ನು ಕೊಲ್ಲುವುದನ್ನು ನಿಲ್ಲಿಸುವಂತೆ ಐಸಿಸ್​ಗೆ ಎಚ್ಚರಿಕೆ ನೀಡಿರುವ ಟ್ರಂಪ್, ಕ್ರಿಸ್​ಮಸ್ ಹಬ್ಬದ ದಿನವೇ ಐಸಿಸ್ ನೆಲೆಗಳ ಮೇಲೆ ಮಾರಕ ದಾಳಿ ನಡೆಸಿದ್ದಾರೆ. ನೈಜೀರಿಯಾ ಅಧಿಕಾರಿಗಳ ಕೋರಿಕೆಯ ಮೇರೆಗೆ ನಡೆಸಿದ ದಾಳಿಯಲ್ಲಿ ಹಲವು ಐಸಿಸ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ಹೇಳಿದೆ. ಕ್ರೈಸ್ತರ ಹತ್ಯೆಯನ್ನು ನಿಲ್ಲಿಸದಿದ್ದರೆ, ನರಕದಂಥಾ ಶಿಕ್ಷೆ ಇಲ್ಲೇ ಕಾಣುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಸೇನೆಗೆ ದೇವರ ಆಶೀರ್ವಾದ ಸದಾ ಇರಲಿ, ಮೃತ ಭಯೋತ್ಪಾದಕರು ಸೇರಿದಂತೆ ಎಲ್ಲರಿಗೂ ಕ್ರಿಸ್‌ಮಸ್…

Read More

ಗಿಲ್ಲಿ ಕ್ಯಾಪ್ಟನ್ ಮಾಡಲು ಬಿಗ್ ಬಾಸ್​ನಿಂದಲೇ ಪ್ಲ್ಯಾನ್? ಸೂರಜ್ ಆರೋಪ – Kannada News | Bigg Boss Kannada: Will Gilli Finally Become Captain? Family Week Twist

ಬಿಗ್ ಬಾಸ್ (Bigg Boss) ಮನೆ ಕಳೆದ ಕೆಲವು ವಾರಗಳಿಂದ ಸ್ಪರ್ಧಿಳ ಕಲರವದಿಂದ ತುಂಬಿತ್ತು.ಈ ವಾರ ಫ್ಯಾಮಿಲಿ ವೀಕ್. ಹೀಗಾಗಿ, ಕುಟುಂಬದವರ ನಗು, ಖುಷಿ ಸ್ಪರ್ಧಿಗಳ ಸಂತೋಷ ಹೆಚ್ಚಿಸಿದೆ. ಹಲವು ವಾರಗಳಿಂದ ಗಿಲ್ಲಿ ಅವರು ಆಟ ಆಡುತ್ತಿದ್ದಾರೆ. ಅವರು ಕ್ಯಾಪ್ಟನ್ ಆಗಿಯೇ ಇಲ್ಲ. ಈ ವಾರ ಅವರಿಗೆ ಕ್ಯಾಪ್ಟನ್ ಆಗುವ ಚಾನ್ಸ್ ಸಿಗೋ ಸಾಧ್ಯತೆ ಇದೆ. ಎಲ್ಲರ ಮನೆಯವರು ಆಗಮಿಸಿ ಸ್ಪರ್ಧಿಗಳಿಗೆ ವಿಶ್ ಮಾಡುತ್ತಿದ್ದಾರೆ. ತಮ್ಮವರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಬಂದವರಲ್ಲಿ ಬಹುತೇಕರು ಗಿಲ್ಲಿಯೇ ಕ್ಯಾಪ್ಟನ್ ಆಗಲಿ ಎಂದು…

Read More

ಜಾತ್ರೆ, ಪೆಟ್ರೋಲ್ ಬಂಕ್ ಸೇರಿ ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್ – Kannada News | Vijayanagara Police Bust Fake Currency Gang Operating at Fairs and Petrol Bunks

ವಿಜಯನಗರ, ಡಿಸೆಂಬರ್ 26: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ, ಜಾತ್ರೆಗಳು, ಪೆಟ್ರೋಲ್ ಬಂಕ್​ಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋಟಾ ನೋಟು ಚಲಾವಣೆ ಮಾಡುತ್ತಿದ್ದ ಗ್ಯಾಂಗ್‌ ಅನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಹಾಗೂ ಒಬ್ಬ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 500 ರೂಪಾಯಿ ಮುಖಬೆಲೆಯ ಒಟ್ಟು 40 ನಕಲಿ ನೋಟುಗಳು ಹಾಗೂ ಒಂದು ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆಯ ದಂಡಿ ದುರ್ಗಮ್ಮನ ಜಾತ್ರೆಯಲ್ಲಿ ನೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ…

Read More

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ; ರಾಜ್ಯದೆಲ್ಲೆಡೆ ಒಣಹವೆ – Kannada News | Bengaluru temperature: Cold with misty weather in Bengaluru, Dry weather elsewhere

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ ಬೆಂಗಳೂರು, ಡಿಸೆಂಬರ್ 26: ರಾಜ್ಯದಲ್ಲಿ ಇಂದು ಹಲವೆಡೆ ಚಳಿಯ ವಾತಾವರಣವಿದ್ದು (Weather Forecast) , ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣವೂ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು…

Read More

ಮಕ್ಕಳ ಜೊತೆ ಕ್ರಿಸ್​​​ಮಸ್ ಆಚರಿಸಿದ ರಾಧಿಕಾ ಪಂಡಿತ್; ಇಲ್ಲಿದೆ ಕ್ಯೂಟ್ ಫೋಟೋಸ್

ರಾಧಿಕಾ ಪಂಡಿತ್ ಅವರು ಈಗ ನಟನೆಯಿಂದ ದೂರ ಇದ್ದಾರೆ. ಅವರು ಈಗ ಮಕ್ಕಳನ್ನು ಪೋಷಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕ್ರಿಸ್​ಮಸ್ ಆಚರಣೆ ಮಾಡಿದ್ದಾರೆ. ಎಲ್ಲರಿಗೂ ಅವರು ಕ್ರಿಸ್​ಮಸ್ ಹಾಗೂ ಹೊಸ ವರ್ಷದ ವಿಶ್ ಕೋರಿದ್ದಾರೆ. ರಾಧಿಕಾ ಪಂಡಿತ್ ಅವರು ಮನೆಯಲ್ಲಿ ಕ್ರಿಸ್​​ಮಸ್ ಟ್ರೀ ಅಲಂಕರಿಸಿದ್ದಾರೆ. ಇದಕ್ಕೆ ಲೈಟಿಂಗ್ ಮಾಡಲಾಗಿದೆ. ಈ ಫೋಟೋಗಳು ಗಮನ ಸೆಳಯೋ ರೀತಿಯಲ್ಲಿ ಇದೆ. ರಾಧಿಕಾ ಜೊತೆ ಯಥರ್ವ್ ಹಾಗೂ ಆಯ್ರಾ ಕೂಡ ಇದ್ದಾರೆ. ಇವರು…

Read More

Video: ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ, ಆಮೇಲೆ ನಡೆದಿದ್ದೇ ರೋಚಕ – Kannada News | Man Survives 10th Floor Fall After Leg Gets Caught in Building Grille

ಸೂರತ್, ಡಿಸೆಂಬರ್ 26: ವ್ಯಕ್ತಿಯೊಬ್ಬರು 10ನೇ ಮಹಡಿಯಲ್ಲಿರುವ ತಮ್ಮ ಫ್ಲ್ಯಾಟ್​ನಲ್ಲಿ ಮಲಗಿದ್ದರು. ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ಎರಡು ಮಹಡಿಗಳ ಕೆಳಗಿನ ಗ್ರಿಲ್​ಗಳ ನಡುವೆ ಸಿಲುಕಿದ್ದರು. 57 ವರ್ಷದ ನಿತಿನ್ ಭಾಯ್ ಆದಿಯಾ ಸೂರತ್‌ನ ಜಹಾಂಗೀರ್‌ಪುರದಲ್ಲಿರುವ ಟೈಮ್ಸ್ ಗ್ಯಾಲಕ್ಸಿ ಕಟ್ಟಡದಲ್ಲಿರುವ ತಮ್ಮ ಮನೆಯ ಕಿಟಕಿಯ ಬಳಿ ಮಲಗಿದ್ದಾಗ ಆಯತಪ್ಪಿ ಬಿದ್ದು, ಎಂಟನೇ ಮಹಡಿಯಲ್ಲಿ ಗ್ರಿಲ್‌ನಿಂದ ಆಯತಪ್ಪಿ ಬಿದ್ದಿದ್ದು, ಅವರ ಕಾಲು ಸಿಲುಕಿಕೊಂಡಿದೆ. ನಂತರ ಒಂದು ಗಂಟೆಯ ಕಾಲ ಅಗ್ನಿಶಾಮಕ ದಳದ ಅಧಿಕಾರಿಗಳು…

Read More

ಕಾಂಗ್ರೆಸ್ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ, ಸುಮ್ನೆ ಭಾಷಣ ಮಾಡಿ ಹೋಗಿಲ್ಲ: ಖರ್ಗೆ ನಿವಾಸದ ಎದುರೇ ಡಿಕೆಶಿ ಖಡಕ್ ಮಾತು – Kannada News | Karnataka Congress Power sharing issue: DK Shivakumar’s Strong Message Outside Mallikarjun Kharge’s Residence

ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದರು ಬೆಂಗಳೂರು, ಡಿಸೆಂಬರ್ 26: ಕರ್ನಾಟಕ ರಾಜಕೀಯದಲ್ಲಿ, ವಿಶೇಷವಾಗಿ ಕಾಂಗ್ರೆಸ್ (Congress) ಪಕ್ಷದೊಳಗಿನ ನಾಯಕತ್ವ ಬದಲಾವಣೆ ವಿಚಾರ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಸ್ಥಳೀಯವಾಗಿ ಸೃಷ್ಟಿಯಾಗಿರುವ ಸಮಸ್ಯೆಯನ್ನು ಅಲ್ಲಿನವರೇ ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂಬ ಸಂದೇಶವಾಗಿಯೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

Read More

Daily Devotional: ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ? – Kannada News | Daily Devotional: The Astrological Significance of the Index Finger and Its Impact on Destiny

ಬೆಂಗಳೂರು, ಡಿಸೆಂಬರ್ 26: ಶಾಸ್ತ್ರಗಳ ಪ್ರಕಾರ, ಮಾನವ ದೇಹದ ಅಂಗಾಂಗಗಳು, ಅದರಲ್ಲೂ ವಿಶೇಷವಾಗಿ ತೋರು ಬೆರಳಿನ ಆಕಾರವು ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಹೆಬ್ಬೆರಳನ್ನು ಶುಕ್ರನಿಗೆ, ತೋರು ಬೆರಳನ್ನು ಗುರು (ಬೃಹಸ್ಪತಿ) ಗ್ರಹಕ್ಕೆ, ಮಧ್ಯದ ಬೆರಳನ್ನು ಶನಿಗೆ, ಉಂಗುರದ ಬೆರಳನ್ನು ರವಿಗೆ (ಸೂರ್ಯ) ಮತ್ತು ಕಿರು ಬೆರಳನ್ನು ಬುಧನಿಗೆ ಹೋಲಿಸಲಾಗುತ್ತದೆ. ತೋರು ಬೆರಳಿನ ಆಕಾರದಿಂದ ವ್ಯಕ್ತಿಯ ಗುಣಲಕ್ಷಣಗಳನ್ನು ಅರಿಯಲು ಸಾಧ್ಯವಿದೆ. ಉದಾಹರಣೆಗೆ, ಉದ್ದವಾದ ತೋರು ಬೆರಳು ನಾಯಕತ್ವದ ಗುಣಗಳನ್ನು ಸೂಚಿಸುತ್ತದೆ. ಚಪ್ಪಟೆಯಾದ ಮತ್ತು…

Read More

ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿದ ‘ಮಾರ್ಕ್’ ಹಾಗೂ ‘45’ ಸಿನಿಮಾ – Kannada News | 45 and Mark Movie Box Office: Sudeep And Shivarajkumar Movie Collections Revealed

ಕ್ರಿಸ್​ಮಸ್ ಪ್ರಯುಕ್ತ ರಿಲೀಸ್ ಆದ ‘45’ ಹಾಗೂ ‘ಮಾರ್ಕ್​’ ಸಿನಿಮಾಗಳು (Mark Movie) ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿವೆ. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿವೆ. ಇಂದು ವಾರದ ದಿನ ಆಗಿರುವುದರಿಂದ, ಯಾವುದೇ ರಜೆ ಇಲ್ಲದಿರುವುದರಿಂದ ಕಲೆಕ್ಷನ್ ಕೊಂಚ ತಗ್ಗಬಹುದು. ಆದರೆ, ಶನಿವಾರ, ಭಾನುವಾರ ಮತ್ತು ಹೊಸ ವರ್ಷದಂದು ಈ ಚಿತ್ರ ಅಬ್ಬರದ ಕಲೆಕ್ಷನ್ ಮಾಡೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟಾಗುತ್ತದೆ ಎಂಬ ಕುತೂಹಲ ಮೂಡಿದೆ. ‘ಮಾರ್ಕ್​’ ಚಿತ್ರದ ಮೊದಲ…

Read More