ಗದಗ, ಡಿಸೆಂಬರ್ 26: ಗದಗ ಜಿಲ್ಲೆಯ ಉಣಚಗೆರೆ ಗ್ರಾಮದಲ್ಲಿರುವ ಕೋಳಿ ಫಾರಂ ಅತಿಯಾದ ಗಲೀಜಿನಿಂದ ಕೂಡಿದ್ದು, ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದೆ. ಈ ಕೋಳಿ ಫಾರಂ ಅನೇಕ ವರ್ಷಗಳಿಂದ ಇದೇ ರೀತಿ ಕಾರ್ಯನಿರ್ವಹಿಸುತ್ತಿತ್ತು ಎಂಬುದು ‘ಟಿವಿ9’ ಗ್ರೌಂಡ್ ರಿಪೋರ್ಟ್ನಲ್ಲಿ ತಿಳಿದುಬಂದಿದೆ. ಕೋಳಿಗಳಿಗೆ ಕೊಳಕು ಮಿಶ್ರಿತ ಆಹಾರವನ್ನು ನೀಡಲಾಗುತ್ತಿದೆ ಮತ್ತು ಫಾರಂ ಪರಿಸರವು ತಿಪ್ಪೆಗುಂಡಿಗಿಂತಲೂ ಗಲೀಜಾಗಿದೆ. ಮಾರುಕಟ್ಟೆಗೆ ಸರಬರಾಜಾಗುವ ಕಳಪೆ ಮೊಟ್ಟೆಗಳು ಮತ್ತು ಕೋಳಿಗಳು ಗಜೇಂದ್ರಗಡ ಮತ್ತು ರೋಣ ತಾಲೂಕು ಸೇರಿದಂತೆ ಹಲವೆಡೆ ತಲುಪುತ್ತಿವೆ. ಇದು ಜನರ ಜೀವದೊಂದಿಗೆ ಚೆಲ್ಲಾಟವಾಡಿದಂತೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಈ ಫಾರಂ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಫಾರಂ ಮಾಲೀಕರ ವಿರುದ್ಧ ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಗುರುಗ್ರಾಮ ಡಿಸೆಂಬರ್ 26: ವಿವಾಹಿತೆ ಬಳಿ ವ್ಯಕ್ತಿಯೊಬ್ಬ ಪ್ರೇಮ ನಿವೇದನೆ ಮಾಡಿದ್ದ, ಮದುವೆ(Marriage)ಯಾಗಲ್ಲ ಎಂದಿದ್ದಕ್ಕೆ 25 ವರ್ಷದ ಮಹಿಳೆ ಮೇಲೆ ಗುಂಡು ಹಾರಿಸಿರುವ ಘಟನೆ ಗುರುಗ್ರಾಮದ ಕ್ಲಬ್ ಒಂದರಲ್ಲಿ ನಡೆದಿದೆ. ಈ ಘಟನೆ ಡಿಸೆಂಬರ್ 20 ರ ಮುಂಜಾನೆ ಎಂಜಿ ರಸ್ತೆಯಲ್ಲಿ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡ ಮಹಿಳೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಯ ಪತಿ ದೂರು ನೀಡಿದ್ದು, ಅವರ ಪತ್ನಿ ಕಲ್ಪನಾ (25) ಗುರುಗ್ರಾಮದ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ದೆಹಲಿಯ ಸಂಗಮ್ ವಿಹಾರ್ ನಿವಾಸಿ ತುಷಾರ್ ತನ್ನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾರೆ.
ಡಿಸೆಂಬರ್ 19 ರಂದು ತನ್ನ ಪತ್ನಿ ಕೆಲಸಕ್ಕೆ ಹೋಗಿದ್ದಳು ಮತ್ತು ರಾತ್ರಿ 1 ಗಂಟೆ ಸುಮಾರಿಗೆ ತನಗೆ ಗುಂಡು ಹಾರಿಸಲಾಗಿದೆ ಎಂದು ಹೇಳಲು ಕರೆ ಮಾಡಿದ್ದಾಗಿ ಪತಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ತುಷಾರ್ ನಮ್ಮ ಮನೆಗೆ ಬಂದು ನಮ್ಮೊಂದಿಗೆ ಜಗಳವಾಡಿ ಹೊರಟುಹೋಗಿದ್ದ ಎಂದು ದೂರುದಾರರು ಹೇಳಿದರು.
ದೂರಿನ ಆಧಾರದ ಮೇಲೆ, ಸೆಕ್ಟರ್ 29 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತನಿಖೆಯ ಸಮಯದಲ್ಲಿ, ಅಪರಾಧ ವಿಭಾಗದ ತಂಡವು ಉತ್ತರ ಪ್ರದೇಶದ ಬರೌತ್‌ನಿಂದ ಸಂಗಮ್ ವಿಹಾರ್ ನಿವಾಸಿಗಳಾದ ತುಷಾರ್ ಅಲಿಯಾಸ್ ಜಾಂಟಿ (25) ಮತ್ತು ಆತನ ಸ್ನೇಹಿತ ಶುಭಂ ಅಲಿಯಾಸ್ ಜಾನಿ (24) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ತುಷಾರ್ ಸುಮಾರು ಆರು ತಿಂಗಳ ಹಿಂದೆ ಸಂತ್ರಸ್ತೆಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾಗಿ ಮತ್ತು ಅವಳನ್ನು ಮದುವೆಯಾಗಲು ಬಯಸಿದ್ದಾಗಿ ಬಹಿರಂಗಪಡಿಸಿದ್ದಾನೆ, ಆದರೆ ಅವಳು ಪದೇ ಪದೇ ನಿರಾಕರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 19 ರ ರಾತ್ರಿ, ತುಷಾರ್, ಶುಭಂ ಜೊತೆಗೆ ಕ್ಲಬ್‌ಗೆ ಹೋಗಿ, ಮತ್ತೊಮ್ಮೆ ಆಕೆಗೆ ಪ್ರಪೋಸ್ ಮಾಡಿ, ನಿರಾಕರಿಸಿದಾಗ ಮಹಿಳೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಚಾಲೆಂಜ್ ವೇಳೆ ಮಾಳುಗೆ ಭಿನ್ನ ಹೇರ್ಸ್ಟೈಲ್ ಮಾಡಲಾಗಿದೆ. ತಲೆಯ ಮಧ್ಯದಲ್ಲಿ ಮಾತ್ರ ಕೂದಲನ್ನು ಇಡಲಾಗಿದೆ. ಈಗ ಮಾಳು ಮಕ್ಕಳಿಗೂ ಅದೇ ರೀತಿಯ ಹೇರ್ಸ್ಟೈಲ್ ಮಾಡಲಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಕಲರ್ಸ್ ಕನ್ನಡ ವಾಹಿನಿ ಇದರ ಪ್ರೋಮೋ ಹಂಚಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ದೇವರ ಟ್ಯಾಟೂಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ. ದೇಹದ ಮೇಲೆ ಹೆಸರುಗಳು, ಚಿತ್ರಗಳು, ಹಾಗೂ ಮುಖ್ಯವಾಗಿ ದೇವತಾ ವಿಗ್ರಹಗಳು, ಚಿಹ್ನೆಗಳನ್ನು ಟ್ಯಾಟೂ ರೂಪದಲ್ಲಿ ಹಾಕಿಸಿಕೊಳ್ಳುವ ಪ್ರವೃತ್ತಿ ಬೆಳೆದಿದೆ. ಆದರೆ ಇಂತಹ ದೈವಿಕ ಟ್ಯಾಟೂಗಳು ಶುಭವೇ ಅಥವಾ ಅಶುಭವೇ, ಅವುಗಳನ್ನು ಹಾಕಿಸಿಕೊಂಡರೆ ಏನು ಪ್ರಯೋಜನ ಅಥವಾ ಪರಿಣಾಮಗಳು ಎಂಬ ಪ್ರಶ್ನೆಗಳು ಮೂಡುತ್ತವೆ.
ದೇವರ ಟ್ಯಾಟೂ ಹಾಕಿಸಿಕೊಳ್ಳುವುದು ನವ ವಿಧ ಭಕ್ತಿಗಳಲ್ಲಿ ಒಂದಾದ ಭಕ್ತಿಯ ಸಂಕೇತವೆಂದು ಪರಿಗಣಿಸಬಹುದು. ದೇಹದಲ್ಲಿ ಭಗವಂತನ ಚಿಹ್ನೆಗಳನ್ನು ಅಂಟಿಸಿಕೊಳ್ಳುವುದು, ಮನಸ್ಸಿಗೆ ಆ ಭಗವಂತನ ಸಾನಿಧ್ಯವನ್ನು ತಲುಪಿಸುವ ಒಂದು ಮಾರ್ಗವಾಗಿದೆ. ವಿನಾಯಕ, ಸುಬ್ರಹ್ಮಣ್ಯ, ದೇವಿ, ಅಯ್ಯಪ್ಪ ಸ್ವಾಮಿ, ವೆಂಕಟೇಶ್ವರ, ಸ್ವಸ್ತಿಕ್, ಚಕ್ರ, ಓಂಕಾರ ಮುಂತಾದ ಹಲವು ದೇವತಾ ಚಿಹ್ನೆಗಳನ್ನು ಜನರು ತಮ್ಮ ದೇಹದ ಮೇಲೆ ಹಾಕಿಸಿಕೊಳ್ಳುತ್ತಾರೆ. ಇಂತಹ ಟ್ಯಾಟೂಗಳನ್ನು ಹಾಕಿಸಿಕೊಳ್ಳುವಲ್ಲಿ ಯಾವುದೇ ಆಕ್ಷೇಪಣೆ ಇಲ್ಲ. ಯದ್ಭಾವಂ ತದ್ಭವತಿ ಎಂಬಂತೆ, ನಮ್ಮ ಭಾವನೆಗಳೇ ಫಲವನ್ನು ನಿರ್ಧರಿಸುತ್ತವೆ ಎಂದು ಗುರೂಜಿ ವಿವರಿಸಿದ್ದಾರೆ.
ಆದರೆ, ಶಾಸ್ತ್ರಗಳು ಮತ್ತು ಪುರಾಣಗಳ ಪ್ರಕಾರ, ಈ ದೇಹವು ಮಲ-ಮೂತ್ರಗಳಿಂದ ಕೂಡಿದ ದೇಹ ಎಂದು ದಾಸವರೇಣ್ಯರು ಮತ್ತು ಕಾಲಜ್ಞಾನದ ಕರ್ತೃಗಳು ಹೇಳಿದ್ದಾರೆ. ಆದರೂ, ದೇಹದಲ್ಲಿ ಮನಸ್ಸು ನೆಲೆಸಿದೆ. ದೇಹದಿಂದ ಭಗವಂತನನ್ನು ಆವಾಹನೆ ಮಾಡಿಕೊಳ್ಳುವುದು ಈ ಟ್ಯಾಟೂ ಹಾಕಿಸಿಕೊಳ್ಳುವಿಕೆಯ ಸಂಕೇತವಾಗಿದೆ. ದೇಹಕ್ಕೆ ಭಗವಂತನನ್ನು ಅಂಟಿಸಿಕೊಂಡಾಗ, ಮನಸ್ಸಿಗೆ ಭಗವಂತ ಬರುವುದು ಕೂಡ ಭಕ್ತಿಯ ಸಂಕೇತವಾಗಿದೆ.
ದೇಹದ ಮೇಲೆ ದೇವರ ಚಿಹ್ನೆಗಳನ್ನು ಹಾಕಿಸಿಕೊಂಡಾಗ, ನಮ್ಮ ದೇಹವನ್ನು ಮತ್ತು ಮನಸ್ಸನ್ನು ಆ ದೈವಿಕ ಸ್ವರೂಪಕ್ಕೆ ತಕ್ಕಂತೆ ಪರಿವರ್ತನೆ ಮಾಡಿಕೊಳ್ಳಬೇಕು. ಇದನ್ನು ಶಾಸ್ತ್ರಗಳಲ್ಲಿ ದೀಕ್ಷೆ ಎಂದು ಕರೆಯಲಾಗುತ್ತದೆ. ರಾಮಕೃಷ್ಣ ಮಠ ಅಥವಾ ವೀರಶೈವ ಮಠಗಳಲ್ಲಿ ಮಂತ್ರ ದೀಕ್ಷೆ ನೀಡಿದಂತೆ, ದೈವಿಕ ಟ್ಯಾಟೂ ಕೂಡ ಒಂದು ರೀತಿಯ ದೀಕ್ಷೆಗೆ ಸಮಾನ. ಈ ದೀಕ್ಷೆಯನ್ನು ತೆಗೆದುಕೊಂಡ ಮೇಲೆ ಆ ಭಗವಂತನ ಸ್ವರೂಪಕ್ಕೆ ತಕ್ಕಂತೆ ನಾವು ನಡೆಯಬೇಕು. ಈ ನಡವಳಿಕೆಗೆ ಬದ್ಧರಾಗಿದ್ದರೆ ಯಾವುದೇ ಆತಂಕವಿಲ್ಲ. ಆದರೆ, ಟ್ಯಾಟೂ ಹಾಕಿಸಿಕೊಂಡು ಆ ನಿಯಮಗಳನ್ನು ಅನುಸರಿಸದೆ ಇದ್ದರೆ, ಅದು ಜನ್ಮಜನ್ಮಾಂತರಕ್ಕೂ ಕಷ್ಟವನ್ನು ತರಬಹುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಇದಲ್ಲದೆ, ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಕೆಲವು ದುಶ್ಚಟಗಳು, ದುರ್ಬುದ್ಧಿಗಳನ್ನು, ಕೆಟ್ಟ ಹವ್ಯಾಸಗಳನ್ನು ತ್ಯಜಿಸುವ ಸಂಕಲ್ಪವನ್ನು ಇಟ್ಟುಕೊಳ್ಳುವುದು ಅತ್ಯಂತ ಶುಭಕರ. ಭಗವಂತ ಸರ್ವಾಂತರ್ಯಾಮಿ, ಸರ್ವವ್ಯಾಪಿ ಮತ್ತು ಸರ್ವಶಕ್ತ. ಈ ದೇಹ ಪಂಚಭೂತಗಳಲ್ಲಿ ಮೂರು ಭೂತಗಳಿಂದ ಕೂಡಿರುವ ಮತ್ತು ಮಲ-ಮೂತ್ರಗಳಿಂದ ಕೂಡಿದ ದೇಹವಾದರೂ, ಮನಸ್ಸು ಮತ್ತು ದೇಹವನ್ನು ಶುದ್ಧವಾಗಿಟ್ಟುಕೊಂಡರೆ, ಸ್ನಾನ ಮಾಡಿದಾಗ ಟ್ಯಾಟೂಗೂ ಅಭಿಷೇಕ ಮಾಡಿದಂತಾಗುತ್ತದೆ. ತೃಪ್ತ ಮನಸ್ಸಿನಿಂದ ಹಾಕಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ.
ಆದರೆ, ಕೇವಲ ತೋರ್ಪಡಿಕೆಗಾಗಿ ಟ್ಯಾಟೂ ಹಾಕಿಸಿಕೊಂಡಾಗ, ಯೌವನದಲ್ಲಿ ಅಥವಾ ದೇಹ ಚೆನ್ನಾಗಿದ್ದಾಗ ಅದು ಶುಭವೆಂದು ಕಾಣಿಸಬಹುದು. ಆದರೆ ವಯಸ್ಸಾದಂತೆ ದೇಹದಲ್ಲಿ ಬದಲಾವಣೆಗಳು ಬಂದಾಗ, ಅದರ ಪ್ರಭಾವ ಕಡಿಮೆಯಾಗಿ ಅಶುಭ ಸಂಕೇತಗಳು ಕಾಣಿಸಬಹುದು. ಆದ್ದರಿಂದ, ಯಾವುದೇ ಕ್ಷಣಿಕ ಖುಷಿಗೆ ಅಥವಾ ಪ್ರದರ್ಶನಕ್ಕಾಗಿ ದೇವರ ಟ್ಯಾಟೂಗಳನ್ನು ಹಾಕಿಸಿಕೊಳ್ಳುವುದು ಅಷ್ಟು ಶುಭಕರವಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಡಿಸೆಂಬರ್ 26: ದೇಶಾದ್ಯಂತ ಇಂದಿನಿಂದ ಅನ್ವಯವಾಗುವಂತೆ ರೈಲ್ವೆ ಇಲಾಖೆ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಈ ಮೂಲಕ ರೈಲು(Train) ಪ್ರಯಾಣ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವಂತಾಗಿದ್ದು ರೈಲು ಪ್ರಯಾಣ ದುಬಾರಿಯಾಗಲಿದೆ. ಉಪನಗರ ರೈಲು ಪ್ರಯಾಣದ ದರವನ್ನು ಹೆಚ್ಚಿಸಿಲ್ಲವಾದರೂ, ದೀರ್ಘ ಪ್ರಯಾಣದ ದರವನ್ನು ರೈಲ್ವೆ ಸಚಿವಾಲಯ ಹೆಚ್ಚಳ ಮಾಡಿದೆ. ಪ್ರತಿ 500 ಕಿ.ಮೀ.ಗೆ 10 ರೂ. ಹೆಚ್ಚಳ ಮಾಡಲಾಗಿದೆ.
ಡಿಸೆಂಬರ್ 21 ರಂದು ಸಚಿವಾಲಯವು ಪ್ರಯಾಣಿಕರ ದರದಲ್ಲಿ ಹೆಚ್ಚಳವನ್ನು ಘೋಷಿಸಿದ್ದು, ಇದು ಡಿಸೆಂಬರ್ 26 ರಿಂದ ಜಾರಿಗೆ ಬರಲಿದೆ ಎಂಬುದನ್ನು ಗಮನಿಸಬೇಕು. ಈ ವರ್ಷ ರೈಲು ದರದಲ್ಲಿ ಇದು ಎರಡನೇ ಹೆಚ್ಚಳವಾಗಿದೆ. ಹಿಂದಿನ ಹೆಚ್ಚಳ ಜುಲೈನಲ್ಲಿ ಆಗಿತ್ತು.
215 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕಾಗಿ, ಸಾಮಾನ್ಯ ವರ್ಗದಲ್ಲಿ ಪ್ರತಿ ಕಿಲೋಮೀಟರಿಗೆ ಒಂದು ಪೈಸೆ, ಮೇಲ್, ಎಕ್ಸ್‌ಪ್ರೆಸ್ ರೈಲುಗಳ ಎಸಿ ಅಲ್ಲದ ವರ್ಗದಲ್ಲಿ ಪ್ರತಿ ಕಿಲೋಮೀಟರಿಗೆ ಎರಡು ಪೈಸೆ ಮತ್ತು ಎಲ್ಲಾ ರೈಲುಗಳ ಎಸಿ ವರ್ಗದ ದರವನ್ನು ಹೆಚ್ಚಿಸಲಾಗಿದೆ. ಮುಂದಿನ ಪ್ರಯಾಣಕ್ಕಾಗಿ ಡಿಸೆಂಬರ್ 26 ರ ಮೊದಲು ಬುಕ್ ಮಾಡಿದ ಟಿಕೆಟ್‌ಗಳಿಗೆ ಈ ಬದಲಾವಣೆ ಅನ್ವಯಿಸುವುದಿಲ್ಲ.
215 ಕಿಲೋಮೀಟರ್ ದೂರದವರೆಗಿನ ಸಾಮಾನ್ಯ ದರ್ಜೆಯ ಟಿಕೆಟ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ 215 ಕಿಮೀಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿಮೀಗೆ 1 ಪೈಸೆ ವೆಚ್ಚವಾಗುತ್ತದೆ. ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹವಾನಿಯಂತ್ರಿತವಲ್ಲದ ಕೋಚ್‌ಗಳಿಗೆ, ಪ್ರತಿ ಕಿಮೀಗೆ 2 ಪೈಸೆ ಹೆಚ್ಚಳವಾಗಲಿದೆ. ಹವಾನಿಯಂತ್ರಿತ ಕೋಚ್‌ಗಳಲ್ಲಿ ಪ್ರಯಾಣದ ವೆಚ್ಚವನ್ನು ಸಹ ಪ್ರತಿ ಕಿಮೀಗೆ 2 ಪೈಸೆ ಹೆಚ್ಚಿಸಲಾಗಿದೆ.
ಹೊಸ ದರಗಳು ಜಾರಿಗೆ ಬಂದ ನಂತರ ಹವಾನಿಯಂತ್ರಿತವಲ್ಲದ ಬೋಗಿಗಳಲ್ಲಿ 500 ಕಿ.ಮೀ ಪ್ರಯಾಣಕ್ಕೆ 10 ರೂ. ಹೆಚ್ಚಾಗಲಿದೆ. ಇದರಿಂದ ಪ್ರಯಾಣಿಕರಿಗೆ ಹೊರಯಾಗುವುದು ಖಚಿತವಾಗಿದೆ.
ತೇಜಸ್ ರಾಜಧಾನಿ, ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ಹಮ್ಸಾಫರ್, ಅಮೃತ್ ಭಾರತ್, ತೇಜಸ್, ಮಹಾಮಾನ, ಗತಿಮಾನ್, ಅಂತ್ಯೋದಯ, ಗರೀಬ್ ರಥ, ಜನ ಶತಾಬ್ದಿ, ಯುವ ಎಕ್ಸ್‌ಪ್ರೆಸ್, ನಮೋ ಭಾರತ್ ರಾಪಿಡ್ ರೈಲ್ ಸೇರಿದಂತೆ ಪ್ರಮುಖ ರೈಲುಗಳ ದರ ಬದಲಾಗಲಿದೆ.
ಕಳೆದ ದಶಕದಲ್ಲಿ ರೈಲ್ವೆ ತನ್ನ ಜಾಲ ಮತ್ತು ಕಾರ್ಯಾಚರಣೆಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ ಮತ್ತು ತನ್ನ ಮಾನವಶಕ್ತಿಯನ್ನು ಹೆಚ್ಚಿಸುತ್ತಿದೆ ಈ ಹಿನ್ನೆಯಲ್ಲಿ ಇತ್ತೀಚಿನ ಪ್ರಯಾಣ ದರ ಹೆಚ್ಚಳ ಮಾಡಿದ್ದು ರೈಲ್ವೆಯ ಆದಾಯವನ್ನು ವಾರ್ಷಿಕವಾಗಿ 600 ಕೋಟಿ ರೂ.ಗಳಷ್ಟು ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ.
ನೈಜೀರಿಯಾ, ಡಿಸೆಂಬರ್ 26: ನೈಜೀರಿಯಾದಲ್ಲಿ ಕ್ರಿಶ್ಚಿಯನ್ನರನ್ನು ಕೊಲ್ಲುವುದನ್ನು ನಿಲ್ಲಿಸುವಂತೆ ಐಸಿಸ್ಗೆ ಎಚ್ಚರಿಕೆ ನೀಡಿರುವ ಟ್ರಂಪ್, ಕ್ರಿಸ್ಮಸ್ ಹಬ್ಬದ ದಿನವೇ ಐಸಿಸ್ ನೆಲೆಗಳ ಮೇಲೆ ಮಾರಕ ದಾಳಿ ನಡೆಸಿದ್ದಾರೆ. ನೈಜೀರಿಯಾ ಅಧಿಕಾರಿಗಳ ಕೋರಿಕೆಯ ಮೇರೆಗೆ ನಡೆಸಿದ ದಾಳಿಯಲ್ಲಿ ಹಲವು ಐಸಿಸ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಇಲಾಖೆ ಹೇಳಿದೆ. ಕ್ರೈಸ್ತರ ಹತ್ಯೆಯನ್ನು ನಿಲ್ಲಿಸದಿದ್ದರೆ, ನರಕದಂಥಾ ಶಿಕ್ಷೆ ಇಲ್ಲೇ ಕಾಣುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಸೇನೆಗೆ ದೇವರ ಆಶೀರ್ವಾದ ಸದಾ ಇರಲಿ, ಮೃತ ಭಯೋತ್ಪಾದಕರು ಸೇರಿದಂತೆ ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ಕ್ರಿಶ್ಚಿಯನ್ನರ ಮೇಲಿನ ದಾಳಿ ಮುಂದುವರೆದರೆ, ಉಗ್ರರು ಇನ್ನೂ ಕೆಟ್ಟ ಸಾವನ್ನು ಕಾಣುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ.
ಬಿಗ್ ಬಾಸ್ (Bigg Boss) ಮನೆ ಕಳೆದ ಕೆಲವು ವಾರಗಳಿಂದ ಸ್ಪರ್ಧಿಳ ಕಲರವದಿಂದ ತುಂಬಿತ್ತು.ಈ ವಾರ ಫ್ಯಾಮಿಲಿ ವೀಕ್. ಹೀಗಾಗಿ, ಕುಟುಂಬದವರ ನಗು, ಖುಷಿ ಸ್ಪರ್ಧಿಗಳ ಸಂತೋಷ ಹೆಚ್ಚಿಸಿದೆ. ಹಲವು ವಾರಗಳಿಂದ ಗಿಲ್ಲಿ ಅವರು ಆಟ ಆಡುತ್ತಿದ್ದಾರೆ. ಅವರು ಕ್ಯಾಪ್ಟನ್ ಆಗಿಯೇ ಇಲ್ಲ. ಈ ವಾರ ಅವರಿಗೆ ಕ್ಯಾಪ್ಟನ್ ಆಗುವ ಚಾನ್ಸ್ ಸಿಗೋ ಸಾಧ್ಯತೆ ಇದೆ. ಎಲ್ಲರ ಮನೆಯವರು ಆಗಮಿಸಿ ಸ್ಪರ್ಧಿಗಳಿಗೆ ವಿಶ್ ಮಾಡುತ್ತಿದ್ದಾರೆ. ತಮ್ಮವರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಬಂದವರಲ್ಲಿ ಬಹುತೇಕರು ಗಿಲ್ಲಿಯೇ ಕ್ಯಾಪ್ಟನ್ ಆಗಲಿ ಎಂದು ಬಯಸುತ್ತಿದ್ದಾರೆ. ಈ ಬಗ್ಗೆ ಸೂರಜ್ ಪ್ರಶ್ನೆ ಎತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಅವರು ಅದ್ಭುತವಾಗಿ ಮನರಂಜನೆ ನೀಡುತ್ತಿದ್ದಾರೆ. ಕೆಲವೊಮ್ಮೆ ಅವರ ಮಾತು ಮಿತಿ ಮೀರಿದ ಉದಾಹರಣೆ ಇದೆ. ಆದರೆ, ಇತ್ತೀಚಿನ ವಾರಗಳಲ್ಲಿ ಅದು ಸಂಪೂರ್ಣವಾಗಿ ಬದಲಾಗಿದೆ. ಅವರು ತಮ್ಮನ್ನು ತಾವು ತಿದ್ದುಕೊಂಡಿದ್ದಾರೆ. ಗಿಲ್ಲಿ ಆಟವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಹೊರಗಿನಿಂದ ಬಂದವರಿಗೆ ಗಿಲ್ಲಿ ಆಟ ಇಷ್ಟ ಆಗುತ್ತಿದೆ.
ಎಲ್ಲಾ ಸದಸ್ಯರ ಕುಟುಂಬದವರಿಗೆ ಸ್ಪರ್ಧಿಗಳಿಗೆ ಗಿಲ್ಲಿಯೇ ಫೇವರಿಟ್. ಈ ವಿಷಯ ಸ್ಪಷ್ಟವಾಗಿ ಕಾಣುತ್ತಿದೆ. ಬಂದ ಎಲ್ಲರೂ ಗಿಲ್ಲಿಯನ್ನು ಹೊಗಳುತ್ತಿದ್ದಾರೆ. ಗಿಲ್ಲಿ ಕಾಮಿಡಿ ಇಷ್ಟ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಗಿಲ್ಲಿಯಲ್ಲಿ ಇಷ್ಟ ಆಗುವ ಗುಣ ಹೇಳುತ್ತಿದ್ದಾರೆ. ಗಿಲ್ಲಿ ಇಲ್ಲದೆ ಇದ್ದಿದ್ದರೆ ಇಡೀ ಮನೆ ಡಲ್ ಆಗುತ್ತಿತ್ತು ಎಂದು ಕೆಲವರು ನೇರವಾಗಿ ಹೇಳಿದ್ದು ಇದೆ. ಹೀಗಾಗಿ, ಕ್ಯಾಪ್ಟನ್ ಯಾರಾಗಬೇಕು ಎಂದು ಹೇಳಿದರೆ ಬಹುತೇಕರು ಗಿಲ್ಲಿ ಹೆಸರು ತೆಗೆದುಕೊಂಡಿದ್ದಾರೆ.
ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ. ರಘು ಹಾಗೂ ಸೂರಜ್ ಈ ಬಗ್ಗೆ ಮಾತನಾಡಿಕೊಂಡಿದ್ದಾರೆ.
‘ಗಿಲ್ಲಿ ಇವತ್ತು ಮಲಗೋದಿಲ್ಲ. ಈಗಾಗಲೇ ನಾಲ್ಕು ವೋಟ್ ಸಿಕ್ಕಿದೆ. ಅವನು ಗೇಮ್ ಆಡಿಯಂತೂ ಕ್ಯಾಪ್ಟ್ ಆಗಲ್ಲ, ಹೀಗಾದರೂ ಮಾಡೋಣ ಅಂತ’ ಎಂದರು ರಘು. ಆಗ ಸೂರಜ್ ಅವರು, ‘ಬಿಗ್ ಬಾಸ್ ಪ್ಲ್ಯಾನ್ ಹಾಕಿದಾರೆ’ ಎಂದರು. ಇದು ಸರಿ ಅಲ್ಲ ಎಂದು ವೀಕ್ಷಕರು ಹೇಳಿದ್ದಾರೆ.ಈ ಮೊದಲು ವೋಟಿಂಗ್ ಮೂಲಕ ಧನುಷ್, ಕಾವ್ಯಾ ಕೂಡ ಕ್ಯಾಪ್ಟನ್ ಆಗಿದ್ದಾರೆ.
ವಿಜಯನಗರ, ಡಿಸೆಂಬರ್ 26: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ, ಜಾತ್ರೆಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋಟಾ ನೋಟು ಚಲಾವಣೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಹಾಗೂ ಒಬ್ಬ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 500 ರೂಪಾಯಿ ಮುಖಬೆಲೆಯ ಒಟ್ಟು 40 ನಕಲಿ ನೋಟುಗಳು ಹಾಗೂ ಒಂದು ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆಯ ದಂಡಿ ದುರ್ಗಮ್ಮನ ಜಾತ್ರೆಯಲ್ಲಿ ನೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ಕಳೆದ ಹಲವು ದಿನಗಳಿಂದ ವಿವಿಧ ಜಾತ್ರೆಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಜಾತ್ರೆಗಳಲ್ಲಿನ ಜನಸಂದಣಿ ಹಾಗೂ ಚಿಲ್ಲರೆ ವ್ಯವಹಾರಗಳನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯ ನಡೆಸಲಾಗುತ್ತಿತ್ತು ಎನ್ನಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಡಿಸೆಂಬರ್ 26: ರಾಜ್ಯದಲ್ಲಿ ಇಂದು ಹಲವೆಡೆ ಚಳಿಯ ವಾತಾವರಣವಿದ್ದು (Weather Forecast) , ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣವೂ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಮಂಜು
ಕಳೆದ ಕೆಲ ದಿನಗಳಿಂದ ರಾಜಧಾನಿಯ ವಾತಾವರಣದಲ್ಲಿ ಸಾಕಷ್ಟು ಏರು ಪೇರಾಗುತ್ತಿದ್ದು, ಚಳಿಯ ಪ್ರಮಾಣ ಹೆಚ್ಚುತ್ತಿದೆ. ಈ ಮಧ್ಯೆ ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.
ಎಲ್ಲೆಲ್ಲಿ ಒಣ ಹವೆ
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಧಿಕಾ ಪಂಡಿತ್ ಅವರು ಈಗ ನಟನೆಯಿಂದ ದೂರ ಇದ್ದಾರೆ. ಅವರು ಈಗ ಮಕ್ಕಳನ್ನು ಪೋಷಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ. ಎಲ್ಲರಿಗೂ ಅವರು ಕ್ರಿಸ್ಮಸ್ ಹಾಗೂ ಹೊಸ ವರ್ಷದ ವಿಶ್ ಕೋರಿದ್ದಾರೆ.
ರಾಧಿಕಾ ಪಂಡಿತ್ ಅವರು ಮನೆಯಲ್ಲಿ ಕ್ರಿಸ್ಮಸ್ ಟ್ರೀ ಅಲಂಕರಿಸಿದ್ದಾರೆ. ಇದಕ್ಕೆ ಲೈಟಿಂಗ್ ಮಾಡಲಾಗಿದೆ. ಈ ಫೋಟೋಗಳು ಗಮನ ಸೆಳಯೋ ರೀತಿಯಲ್ಲಿ ಇದೆ. ರಾಧಿಕಾ ಜೊತೆ ಯಥರ್ವ್ ಹಾಗೂ ಆಯ್ರಾ ಕೂಡ ಇದ್ದಾರೆ. ಇವರು ಕ್ಯೂಟ್ ಆಗಿ ಕಾಣಿಸಿದ್ದಾರೆ.
ರಾಧಿಕಾ ಪಂಡಿತ್ ಅವರು ಪ್ರತಿ ವರ್ಷವೂ ಕ್ರಿಸ್ಮಸ್ ಆಚರಣೆ ಮಾಡುತ್ತಾರೆ. ಅವರು ಹೊಸ ವರ್ಷವನ್ನು ಅವರು ಖುಷಿ ಖುಷಿಯಿಂದ ಆಮಂತ್ರಿಸಿಕೊಳ್ಳುತ್ತಾರೆ. ರಾಧಿಕಾಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಹೀಗಾಗಿ ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ರಾಧಿಕಾ ಪಂಡಿತ್ ಹಂಚಿಕೊಂಡ ಫೋಟೋದಲ್ಲಿ ಯಶ್ ಇಲ್ಲ. ಅವರು ‘ಟಾಕ್ಸಿಕ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರು ಈ ಸಂಭ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗುತ್ತಿಲ್ಲ. ಮಾರ್ಚ್ 19ರಂದು ‘ಟಾಕ್ಸಿಕ್’ ರಿಲೀಸ್ ಆಗುತ್ತಿದೆ.
ರಾಧಿಕಾ ಪಂಡಿತ್ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಾರೆ. ಅವರು ಯಶ್ ವೃತ್ತಿ ಜೀವನಕ್ಕೆ ಬೆಂಬಲ ನೀಡುತ್ತಿದ್ದಾರೆ. ಯಥರ್ವ್ ಹಾಗೂ ಆಯ್ರಾ ಬಗ್ಗೆ ರಾಧಿಕಾ ಗಮನ ಹರಿಸುತ್ತಿರುವುದರಿಂದ ಯಶ್ ಅವರು ಯಾವುದೇ ಚಿಂತೆ ಇಲ್ಲದೆ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗುತ್ತಿದ್ದಾರೆ.