All posts by nagaraj11081993

Baijnath Mahadev Temple: ಬ್ರಿಟಿಷ್ ದಂಪತಿಯಿಂದ ಪುನರ್ನಿರ್ಮಿಸಲಾದ ಭಾರತದ ಏಕೈಕ ಶಿವ ದೇವಾಲಯ ಎಲ್ಲಿದೆ ಗೊತ್ತಾ? – Kannada News | Baijnath Mahadev Temple: British Miracle and Shiva Devotion in Agar Malwa

ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿರುವ ಬೈಜನಾಥ್ ಮಹಾದೇವ್ ದೇವಾಲಯವು ವಿಶಿಷ್ಟ ಇತಿಹಾಸವನ್ನು ಹೊಂದಿದೆ. 16 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಪ್ರಾಚೀನ ದೇವಾಲಯವನ್ನು 1883 ರಲ್ಲಿ ಬ್ರಿಟಿಷ್ ಸೇನಾಧಿಕಾರಿ ದಂಪತಿ ಪುನರ್ನಿರ್ಮಿಸಿದರು. ಒಂದು ಪವಾಡದ ಘಟನೆಯು ಅವರನ್ನು ಶಿವನ ಭಕ್ತರಾಗುವಂತೆ ಮಾಡಿತು ಎಂದು ಹೇಳಲಾಗುತ್ತದೆ.

ಪುರಾಣ ಕಥೆಗಳ ಪ್ರಕಾರ, 19 ನೇ ಶತಮಾನದ ಉತ್ತರಾರ್ಧದಲ್ಲಿ, ಬ್ರಿಟಿಷ್ ಸೇನಾ ಲೆಫ್ಟಿನೆಂಟ್ ಕರ್ನಲ್ ಮಾರ್ಟಿನ್ ಅಫ್ಘಾನ್ ಯುದ್ಧದಲ್ಲಿ ಭಾಗವಹಿಸಲು ಹೋಗಿದ್ದರು. ಆದರೆ ಅವರ ಪತ್ನಿಗೆ ಕೆಲವು ದಿನಗಳವರೆಗೆ ತನ್ನ ಪತಿಯಿಂದ ಯಾವುದೇ ಸುದ್ದಿ ಬಂದಿರಲಿಲ್ಲ. ಇದರಿಂದ ಚಿಂತಿತಳಾದ ಆಕೆ ಶಿಥಿಲಗೊಂಡ ಬೈಜನಾಥ ದೇವಾಲಯದ ಹತ್ತಿರ ಬರುತ್ತಾಳೆ. ಅಲ್ಲಿನ ಆರತಿ ಮತ್ತು ಮಂತ್ರಗಳ ಪಠಣ ಅವಳನ್ನು ಆಕರ್ಷಿಸಿತು. ಅವಳ ಸಂಕಟವನ್ನು ಗಮನಿಸಿದ ಪುರೋಹಿತರು ಅವಳಿಗೆ ‘ಓಂ ನಮಃ ಶಿವಾಯ’ ಮಂತ್ರವನ್ನು 11 ದಿನಗಳ ಕಾಲ ಪಠಿಸಲು ಸಲಹೆ ನೀಡುತ್ತಾರೆ. ತನ್ನ ಪತಿ ಸುರಕ್ಷಿತವಾಗಿ ಹಿಂತಿರುಗಿದರೆ, ದೇವಾಲಯವನ್ನು ದುರಸ್ತಿ ಮಾಡುವುದಾಗಿ ಅವಳು ಪ್ರತಿಜ್ಞೆ ಮಾಡುತ್ತಾಳೆ.

ಈ ಪ್ರಾರ್ಥನೆಯನ್ನು ಪ್ರಾರಂಭಿಸಿದ ಹತ್ತನೇ ದಿನದಂದು, ಮಾರ್ಟಿನ್ ನಿಂದ ಒಂದು ಪತ್ರ ಬರುತ್ತದೆ. ಅದರಲ್ಲಿ, ಆತ ಆಶ್ಚರ್ಯಕರವಾದ ವಿಷಯವನ್ನು ಬರೆದಿದ್ದ, ಶತ್ರುಗಳು ಯುದ್ಧದಲ್ಲಿ ತನ್ನನ್ನು ಸುತ್ತುವರೆದಾಗ, ಹುಲಿ ಚರ್ಮವನ್ನು ಧರಿಸಿ ಕೈಯಲ್ಲಿ ತ್ರಿಶೂಲವನ್ನು ಹಿಡಿದಿದ್ದ ಯೋಗಿಯೊಬ್ಬರು ಕಾಣಿಸಿಕೊಂಡು ಶತ್ರುಗಳನ್ನು ಓಡಿಸಿದರು ಎಂದು ವಿವರಿಸಿದ್ದನು.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ಅದೃಷ್ಟವಶಾತ್, ತನ್ನ ಪತಿ ಸುರಕ್ಷಿತವಾಗಿ ಹಿಂದಿರುಗಿದ ನಂತರ, ಮಾರ್ಟಿನ್ ದಂಪತಿಗಳು 15,000 ರೂ.ಗಳ ಬೃಹತ್ ದೇಣಿಗೆಯೊಂದಿಗೆ ದೇವಾಲಯವನ್ನು ಪುನರ್ನಿರ್ಮಿಸಿದರು. ಇದಕ್ಕೆ ಪುರಾವೆಗಳನ್ನು ಇನ್ನೂ ದೇವಾಲಯದ ಶಾಸನಗಳಲ್ಲಿ ಕಾಣಬಹುದು. ಅದರ ನಂತರ, ಅವರು ಇಂಗ್ಲೆಂಡ್‌ಗೆ ಹೋದರು, ಆದರೆ ಅವರು ತಮ್ಮ ಮನೆಯಲ್ಲಿ ಶಿವಲಿಂಗವನ್ನು ಸ್ಥಾಪಿಸಿ ತಮ್ಮ ಕೊನೆಯ ಉಸಿರಿನವರೆಗೂ ಶಿವನನ್ನು ಪೂಜಿಸಿದರು ಎಂದು ಹೇಳಲಾಗುತ್ತದೆ. 50 ಅಡಿ ಎತ್ತರದ ಶಿಖರವನ್ನು ಹೊಂದಿರುವ ಬಂಗಂಗಾ ನದಿಯ ದಡದಲ್ಲಿರುವ ಈ ದೇವಾಲಯವು ಇಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.

ದೇವಸ್ಥಾನ ತಲುಪುವ ಮಾರ್ಗಗಳು:

  • ವಿಮಾನ ಮಾರ್ಗ: ಇಂದೋರ್‌ನಲ್ಲಿರುವ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣ (126 ಕಿಮೀ).
  • ರೈಲು ಮಾರ್ಗ: ಉಜ್ಜಯಿನಿ ರೈಲು ನಿಲ್ದಾಣ (68 ಕಿ.ಮೀ).
  • ರಸ್ತೆ ಮಾರ್ಗ: ಉಜ್ಜಯಿನಿ, ಇಂದೋರ್ ಮತ್ತು ಭೋಪಾಲ್ ನಿಂದ ಬಸ್ ಸೌಲಭ್ಯ ಲಭ್ಯವಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:35 am, Fri, 26 December 25

Source link

ತಿರುಪತಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ: ಅಭಿವೃದ್ಧಿ ಕಾಮಗಾರಿ ಪರಿಶೀಲನೆ – Kannada News | Karnataka Minister Ramalinga Reddy Visits Tirumala, Reviews TTD Works

ತಿರುಪತಿ, ಡಿ.26: ತಿರುಪತಿ ತಿರುಮಲಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy )ಭೇಟಿ ನೀಡಿದರು. ಅಲ್ಲಿ ನಡೆಯುತ್ತಿರುವಂತಿ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಪರಿಷತ್ ಸದಸ್ಯ ಶರವಣ ತಿರುಪತಿ ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ನ್ಯೂನತೆಗಳಿರುವುದಾಗಿ ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಾವೇ ಖುದ್ದು ಭೇಟಿ ನೀಡಿ ಪರಿವೀಕ್ಷಣೆ ನಡೆಸುವುದಾಗಿ ಉತ್ತರಿಸಿದ್ದರು.

ಅದರಂತೆ ನಿನ್ನೆಯ ಮಂಗಳವಾರದಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿರುಮಲಕ್ಕೆ ಭೇಟಿ ನೀಡಿ, ಟಿಟಿಡಿ ಅಧಿಕಾರಿಗಳೊಂದಿಗೆ ತಿರುಮಲದಲ್ಲಿರುವ ಕರ್ನಾಟಕ ಸರ್ಕಾರದ 3 ಅತಿಥಿ ಗೃಹಗಳು ಹಾಗೂ ಛತ್ರದ ಪರಿಶೀಲನೆ ನಡೆಸಿದರು.ಬಾಕಿ ಉಳಿದಿರುವ ಎಲ್ಲಾ ಸಮಸ್ಯೆ ಹಾಗೂ ಕಾಮಗಾರಿಗಳನ್ನು ಮಾರ್ಚ್ 2026ರೊಳಗೆ ಪೂರ್ಣ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರ ಪಾರ್ಕಿಂಗ್ ಸಮಸ್ಯೆಗೆ ಬೀಳಲಿದೆ ಬ್ರೇಕ್

ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಕೆಳಕಂಡ ವಿಷಯಗಳ ಕುರಿತು ಚರ್ಚೆ ನಡೆಸಿದರು.

1. ತಿರುಮಲದಲ್ಲಿನ ಭೂಮಿಯ ಲೀಸ್ ವಿಷಯ

2. ಟಿಟಿಡಿ ವಾಪಸ್ ಪಡೆದ ಭೂಮಿಗೆ ಬದಲಾಗಿ ತಿರುಪತಿಯಲ್ಲಿ 30 ಸೆಂಟ್ಸ್ ಪರ್ಯಾಯ ಭೂಮಿ ಒದಗಿಸುವುದು.

3. ತಿರುಮಲದಲ್ಲಿ ನಮ್ಮ ಪರವಾಗಿ ಟಿಟಿಡಿ ಕೈಗೊಂಡ ನಾಗರಿಕ ಕಾಮಗಾರಿಗಳ ಮೇಲೆ ವಿಧಿಸಲಾಗುವ ಸೆಂಟೇಜ್ ಶುಲ್ಕಕ್ಕೆ ವಿನಾಯಿತಿ ನೀಡುವುದು.

4. ತಿರುಮಲದಲ್ಲಿರುವ ಎಲ್ಲಾ ಅತಿಥಿ ಗೃಹಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಹಸ್ತಾಂತರಿಸುವುದು.

5. ಪ್ರೀಫ್ಯಾಬ್ರಿಕೇಟೆಡ್ ನಾಗರಿಕ ರಚನೆಗಳಿಂದ ಉಂಟಾಗುವ ನೀರು ಸೋರಿಕೆ ಸಮಸ್ಯೆಯನ್ನು ತಡೆಯುವುದು.

6. ಎಕ್ಸ್ಹಾಸ್ಟ್ ಡಕ್ಟ್‌ಗಳಿಗೆ ಸೂಕ್ತ ವಾತಾಯನ ವ್ಯವಸ್ಥೆ ಒದಗಿಸುವುದು.

7. ಎಲ್ಲಾ ಸ್ನಾನಗೃಹಗಳಲ್ಲಿ ಇರುವ PoP ಮೇಲ್ಚಾವಣಿಯನ್ನು PVC ಮೇಲ್ಚಾವಣಿಯಿಂದ ಬದಲಿಸುವುದು.

8. ಛತ್ರಕ್ಕೆ ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವುದು.

9. HT ಲೈನ್ ಅನುಮತಿ ಪಡೆಯಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು.

10. ಹೊರಾಂಗಣ ಪೋರ್ಟಿಕೋದಲ್ಲಿರುವ PoP ಮೇಲ್ಚಾವಣಿಯನ್ನು PVC ಮೇಲ್ಚಾವಣಿಯಿಂದ ಬದಲಿಸುವುದು.

11. ಕರ್ನಾಟಕದ ಭಕ್ತರಿಗೆ ದರ್ಶನ ಸೌಲಭ್ಯ ಒದಗಿಸುವುದು.

ಈ‌ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಆಯುಕ್ತರಾದ ಶರತ್, ಟಿಟಿಡಿ ಟ್ರಸ್ಟ್ ಸದಸ್ಯ ದರ್ಶನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Source link

ಗಿಲ್ಲಿ ಬಿಟ್ಟುಕೊಡಬೇಡ; ಕಾವ್ಯಾಗೆ ತಾಯಿಯ ಕಿವಿಮಾತು – Kannada News | Kavya Gowda Mother Ask her daughter To Keep continue Friendship of Gilli

ಗಿಲ್ಲಿ ನಟ ಅವರು ಯಾವಾಗಲೂ ಕಾವ್ಯಾ ಪರ ಬೆಂಬಲಕ್ಕೆ ನಿಂತಿದ್ದು ಗೊತ್ತೇ ಇದೆ. ಇದನ್ನು ಅವರ ತಾಯಿ ಕೂಡ ಗಮನಿಸಿದ್ದಾರೆ. ‘ಗಿಲ್ಲಿನ ಎಂದಿಗೂ ಬಿಟ್ಟುಕೊಡಬೇಡ. ಆತ ನಿನ್ನನ್ನು ಯಾವಾಗಲೂ ಬಿಟ್ಟುಕೊಟ್ಟಿಲ್ಲ. ಮೊಟ್ಟೆ ಕೇಳಿದರೆ ಕೊಡು’ ಎಂದು ಕಾವ್ಯಾಗೆ ಅವರ ತಾಯಿ ಕಿವಿಮಾತು ಹೇಳಿದ್ದಾರೆ. ಈ ವಾರ ಫ್ಯಾಮಿಲಿ ವೀಕ್ ಆಗಿತ್ತು ಮತ್ತು ಕಾವ್ಯಾ ತಾಯಿ ಬಂದಿದ್ದರು. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಉಡುಪಿ ನೇಮೋತ್ಸವದಲ್ಲಿ ವೃದ್ಧೆಯ ಚಿನ್ನದ ಸರ ಕಳ್ಳತನ, ಸಿಸಿಟಿವಿಯಲ್ಲಿ ಸೆರೆ – Kannada News | Hejamadi Temple Theft: 2 Lakh Gold Chain Snatched from Woman During Nemotsava

ಉಡುಪಿ, ಡಿ.26: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ವೇಳೆ ವೃದ್ದೆಯ ಚಿನ್ನದ ಸರವನ್ನು ಕಳ್ಳಿಯರು ಎಗರಿಸಿದ್ದಾರೆ. ಮೂವರು ಕಳ್ಳಿಯರ ಕರಾಮತ್ತು ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೃದ್ಧೆಯನ್ನು ಮೂರು ಕಡೆಯಿಂದ ಸುತ್ತುವರಿದು ಚಿನ್ನದ ಸರ ಕದ್ದಿದ್ದಾರೆ. ಹೆಜಮಾಡಿ ನಿವಾಸಿ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಪೂಜೆಯ ವೇಳೆ ಮೂರು ಕಡೆಯಿಂದ ಸುತ್ತುವರಿದ ಕಳ್ಳಿಯರು ಗಂಟೆ ಹೊಡೆಯುವ ನೆಪದಲ್ಲಿ ಚಿನ್ನದ ಸರ ಎಗರಿಸಿದ್ದಾರೆ. 2 ಲಕ್ಷ ಮೌಲ್ಯದ ಚಿನ್ನದ ಸರ ಎಂದು ಹೇಳಲಾಗಿದೆ. ಇದೀಗ ಆ ಮೂರು ಕಳ್ಳಿಯರ ಪತ್ತೆಗಾಗಿ ಪಡುಬಿದ್ರಿ ಪೊಲೀಸರು ಬಲೆ ಬಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಟ್ಟುಹಬ್ಬದಂದು ಬಾಯ್​ಫ್ರೆಂಡ್ ಎದುರು ಸ್ನೇಹಿತನಿಗೆ ಮೊದಲು ಕೇಕ್ ತಿನ್ನಿಸಿದ ಯುವತಿ, ಆಮೇಲೇನಾಯ್ತು ನೋಡಿ – Kannada News | Celebration Turns Chaotic After Boyfriend Loses Temper Over Cake Moment

ಹುಬ್ಬಹಬ್ಬ ರಣರಂಗವಾಗಿ ಮಾರ್ಪಟ್ಟಿತ್ತು , ಬಾಯ್​ಫ್ರೆಂಡ್ ಎದುರು ತನ್ನ ಆತ್ಮೀಯ ಸ್ನೇಹಿತನಿಗೆ ಯುವತಿ ಮೊದಲು ಕೇಕ್(Cake) ತಿನ್ನಿಸಿದ್ದಕ್ಕೆ ದೊಡ್ಡ ಜಗಳವೇ ನಡೆದುಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಗೆಳೆಯನೊಬ್ಬ ತನ್ನ ಗೆಳತಿಯ ಹುಟ್ಟುಹಬ್ಬವನ್ನು ಎಂದೂ ಮರೆಯದ ರೀತಿ ಆಚರಿಸಲು ಹಲವು ಬಗೆಯ ಅಲಂಕಾರವನ್ನು ಮಾಡಿದ್ದ,ಎಲ್ಲೆಲ್ಲೂ ದೀಪಗಳು, ಕೇಕ್​ಗಳು ರಾರಾಜಿಸುತ್ತಿದ್ದವು. ಆದರೆ ಆ ಸಂತೋಷ ಕೆಲವೇ ಕೆಲವು ನಿಮಿಷಗಳಿಗೆ ಸೀಮಿತವಾಗಿತ್ತು.

ಯುವತಿ ತನ್ನ ಪಕ್ಕದಲ್ಲಿ ನಿಂತಿದ್ದ ಗೆಳೆಯನಿಗೆ ಕೇಕ್ ಮೊದಲು ತಿನ್ನಿಸಿದ ಪರಿಣಾಮ ಆಕೆಯ ಬಾಯ್​ಫ್ರೆಂಡ್ ಕೋಪಗೊಂಡು ಗೆಳೆತಿ ಮುಂದೆ ರೇಗಾಡಿದ್ದಾನೆ. ಆಕೆ ತನಗೆ ಮೊದಲು ಕೇಕ್ ತಿನ್ನಿಸಬೇಕೆಂದು ಆತ ಬಯಸಿದ್ದ. ಆದರೆ ಗೆಳತಿ ನಡೆದುಕೊಂಡಿದ್ದನ್ನು ಕಂಡು ಆತನಿಗೆ ಬೇಸರಗೊಂಡು. ಅಲ್ಲಿದ್ದ ಕೇಕ್, ಅಲಂಕಾರಿಕ ವಸ್ತುಗಳೆಲ್ಲವನ್ನೂ ನಾಶಪಡಿಸಿದ್ದಾರೆ. ವೀಕ್ಷಕರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಅನೇಕರು ಗೆಳೆಯನ ನಡವಳಿಕೆಯನ್ನು ಟೀಕಿಸಿದ್ದಾರೆ. ಈ ಸಂಬಂಧ ಹೆಚ್ಚು ದಿನ ಬಾಳುವುದಿಲ್ಲ ಎಂದು ಹೇಳಿದ್ದಾರೆ. ಕೆಲವೊಂದು ಸಂಬಂಧಗಳು ಹಾಗೆ ಹೆಣ್ಣಾಗಲಿ, ಗಂಡಾಗಲೀ ತಮ್ಮ ಗೆಳೆಯ ಅಥವಾ ಗೆಳತಿ ತಮಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕೆಂದು ಬಯಸುತ್ತಾರೆ. ಆದರೆ ಅದು ಸಾಧ್ಯವಾಗದಿದ್ದಾಗ, ತಾವು ಕೊಟ್ಟಿರುವ ಪ್ರೀತಿ ಸಾಲಲಿಲ್ಲವೇ ಎಂದು ಬೇಸರ ಪಡುತ್ತಾ, ದ್ವೇಷ ಬೆಳೆಸಿಕೊಳ್ಳುತ್ತಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Optical Illusion: ನಿಮ್ಮ ಕಣ್ಣಿಗೊಂದು ಸವಾಲ್;‌ ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಗಿಳಿಯನ್ನು ಹುಡುಕಬಲ್ಲಿರಾ – Kannada News | Optical Illusion: If you have an eagle eye, spot the cute parrot in just 7 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಷ್ಣತೆ ಪರೀಕ್ಷಿಸಲು ನೀವು ಮುಂದಾಗಿದ್ರೆ ಈ ಇಲ್ಯೂಷನ್ ಚಿತ್ರವು ನಿಮ್ಮ ಸಹಾಯಕ್ಕೆ ಬರುತ್ತದೆ. ಈ ಒಗಟಿನ ಆಟಗಳು ಅಥವಾ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್‌ ಆಗಿದ್ದು, ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಗಿಳಿಯನ್ನು ಕೇವಲ 7 ಸೆಕೆಂಡುಗಳಲ್ಲಿ ಹುಡುಕುವ ಮೂಲಕ ನಿಮ್ಮ ವೀಕ್ಷಣಾ ಸಾಮರ್ಥ್ಯ ತೀಕ್ಷ್ಣವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.

ಈ ಚಿತ್ರವನ್ನೊಮ್ಮೆ ಸೂಕ್ಷ್ಮವಾಗಿ ನೋಡಿ

ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಇದ್ದು, ಹದ್ದಿನ ಕಣ್ಣು ನಿಮ್ಮದಾಗಿದೆ ಎಂದಾದರೆ ಮಾತ್ರ ಈ ಚಿತ್ರದಲ್ಲಿ ಗಿಳಿಯನ್ನು ಹುಡುಕಲು ಸಾಧ್ಯ. ಈ ಚಿತ್ರದಲ್ಲಿ ಮಹಿಳೆಯೊಬ್ಬಳು ಮನೆಯ ಮುದ್ದಿನ ಶ್ವಾನವನ್ನು ಹಿಡಿದು ಕುಳಿತುಕೊಂಡಿದ್ದಾಳೆ. ಅಲ್ಲೇ ಪಕ್ಕದಲ್ಲಿ ಗಿಳಿಯೊಂದಿದೆ. ಈ ಪಕ್ಷಿಯನ್ನು 7 ಸೆಕೆಂಡುಗಳೊಳಗೆ ಕಂಡು ಹಿಡಿಯುವ ಸವಾಲು ನಿಮ್ಮ ಮುಂದಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಈ ಒಗಟು ಬಿಡಿಸಲು ಸಾಧ್ಯ.

ಇದನ್ನೂ ಓದಿ: ಈ ಚಿತ್ರದಲ್ಲಿರುವ ಅಣಬೆಯನ್ನು 30 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ

ಉತ್ತರ ಇಲ್ಲಿದೆ ನೋಡಿ

ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ 7 ಸೆಕೆಂಡುಗಳ ಒಳಗಾಗಿ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲವೇ. ನಿಮ್ಮ ಕಣ್ಣಿಗೆ ಮುದ್ದಾದ ಗಿಳಿಯೂ ಬಿದ್ದಿಲ್ಲವೇ. ಚಿಂತೆ ಬೇಡ ಇಲ್ಲಿದೆ ಉತ್ತರ. ಹೂವು ಕುಂಡದಲ್ಲಿರುವ ಸಣ್ಣ ಗಿಡದ ಮೇಲೆ ಗಿಳಿಯೊಂದು ಕುಳಿತುಕೊಂಡಿದೆ. ಈ ಮೇಲಿನ ಚಿತ್ರದಲ್ಲಿ ಗಿಳಿ ಎಲ್ಲಿದೆ ಎಂದು ಕೆಂಪು ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹ ದುರ್ಬಲ ಸ್ಥಾನದಲ್ಲಿದ್ದರೆ ಈ ಸಮಸ್ಯೆ ಖಚಿತ! – Kannada News | Weak Mars in Astrology: Signs, Effects and Powerful Remedies

ಜ್ಯೋತಿಷ್ಯದ ಪ್ರಕಾರ ಒಟ್ಟು ಒಂಬತ್ತು ಗ್ರಹಗಳಲ್ಲಿ ಮಂಗಳವನ್ನು ಅತ್ಯಂತ ಶಕ್ತಿಶಾಲಿ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದನ್ನು ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಮಂಗಳವು ಅಗ್ನಿ ಅಂಶದ ಗ್ರಹವಾಗಿದೆ. ಮಂಗಳವು ಭೂಮಿ, ಕಟ್ಟಡಗಳು, ಧೈರ್ಯ, ಶೌರ್ಯ, ಶಕ್ತಿ ಇತ್ಯಾದಿಗಳ ಅಂಶವಾಗಿದೆ ಎಂದು ಹೇಳಲಾಗುತ್ತದೆ. ದುರ್ಬಲ ಮಂಗಳ ಜಾತಕವನ್ನು ಹೊಂದಿರುವ ವ್ಯಕ್ತಿಯು ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿಯೇ ಜ್ಯೋತಿಷಿಗಳು ಮಂಗಳ ಗ್ರಹವನ್ನು ಸರಿಪಡಿಸಲು ಕ್ರಮಗಳನ್ನು ಸಾಧ್ಯವಾದಷ್ಟು ಬೇಗ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ. ಎಲ್ಲರಿಗೂ ಜ್ಯೋತಿಷ್ಯ ಅರ್ಥವಾಗುವುದಿಲ್ಲ, ಆದ್ದರಿಂದ ವ್ಯಕ್ತಿಯ ಮಂಗಳ ದುರ್ಬಲವಾಗಿದೆಯೇ ಅಥವಾ ಅಶುಭವಾಗಿದೆಯೇ ಎಂದು ಗುರುತಿಸಲು ಕೆಲವು ಮಾರ್ಗಗಳು ಇಲ್ಲಿವೆ.

ಮಂಗಳ ಗ್ರಹ ದುರ್ಬಲ ಸ್ಥಾನದಲ್ಲಿದ್ದರೆ:

ಮಂಗಳ ಗ್ರಹವು ವ್ಯಕ್ತಿಯಲ್ಲಿ ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ. ಆದರೆ ಮಂಗಳ ಗ್ರಹ ದುರ್ಬಲ ಸ್ಥಾನದಲ್ಲಿದ್ದರೆ ಅದು ಅವರ ಆತ್ಮವಿಶ್ವಾಸದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದಲ್ಲದೇ ಆವ್ಯಕ್ತಿಯ ಜೀವನದಲ್ಲಿ ರಕ್ತ ಸಂಬಂಧಿತ ಕಾಯಿಲೆಗಳು ಅಥವಾ ಅಸ್ವಸ್ಥತೆಗಳು ಉಂಟಾಗಬಹುದು. ಜೊತೆಗೆ ಆಸ್ತಿ ಸಂಬಂಧಿತ ವಿವಾದಗಳಿಗೂ ಕಾರಣವಾಗಬಹುದು.

ಮಂಗಳ ಗ್ರಹವು ದುರ್ಬಲ ಅಥವಾ ಅಶುಭವಾಗಿದ್ದಾಗ, ವ್ಯಕ್ತಿಯು ದುರ್ಬಲನಾಗಿರುತ್ತಾನೆ. ಅನಗತ್ಯ ಕೋಪ ಉಂಟಾಗುತ್ತದೆ. ಆಗಾಗ್ಗೆ ಗಾಯ, ಅಪಘಾತಗಳು ಸಂಭವಿಸುತ್ತವೆ. ಮನೆಯಲ್ಲಿ ಮತ್ತು ಹೊರಗೆ ಜಗಳಗಳು ಸಾಮಾನ್ಯ. ಈ ವ್ಯಕ್ತಿಗಳು ಹೆಚ್ಚಾಗಿ ರಕ್ತದಲ್ಲಿನ ಸಕ್ಕರೆ ಮತ್ತು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಾರೆ. ಕಠಿಣ ಪರಿಶ್ರಮವು ಹೆಚ್ಚಾಗಿ ಫಲಿತಾಂಶಗಳನ್ನು ನೀಡುತ್ತದೆ.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ಮಂಗಳ ಗ್ರಹವನ್ನು ಬಲಪಡಿಸುವ ಕ್ರಮಗಳು:

ದುರ್ಬಲ ಮಂಗಳ ಹೊಂದಿರುವ ವ್ಯಕ್ತಿಯು ಪ್ರತಿದಿನ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಮಂಗಳವನ್ನು ಬಲಪಡಿಸಲು ಇದು ಸುಲಭವಾದ ಮಾರ್ಗವಾಗಿದೆ. ಮಂಗಳವಾರ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಬಜರಂಗಬಲಿಯನ್ನು ಪೂಜಿಸಿ, ತುಪ್ಪದ ದೀಪವನ್ನು ಬೆಳಗಿಸಿ. ಬಾಳೆಹಣ್ಣುಗಳನ್ನು ದಾನ ಮಾಡಿ. ಮಂಗಳವಾರದಂದು ಕನಿಷ್ಠ 108 ಬಾರಿ “ಓಂ ಕ್ರಮ್ ಕ್ರೀಂ ಕ್ರೌಂ ಸಹ ಭೌಮಯ ನಮಃ” ಎಂಬ ಮಂತ್ರವನ್ನು ಪಠಿಸಿ. ಮಂಗಳ ದುರ್ಬಲವಾಗಿದ್ದರೆ, ವ್ಯಕ್ತಿಯು ಮಾಂಸ ಅಥವಾ ತಾಮಸಿಕ ಆಹಾರವನ್ನು ತಪ್ಪಿಸಬೇಕು. ಕನಿಷ್ಠ 21 ಬಾರಿ ಮಂಗಳವಾರದಂದು ಉಪವಾಸ ಮಾಡಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಕೃತ್ಯ; ನರ್ಸ್‌ಗಳು ಬಟ್ಟೆ ಬದಲಿಸುವ ವಿಡಿಯೋ ಮಾಡುತ್ತಿದ್ದ ಸೈಕೋ ಅಂದರ್! – Kannada News | Bengaluru Nurse Privacy Breach: Man Arrested for Secretly Filming Nurses

ನರ್ಸ್‌ಗಳ ಖಾಸಗಿ ವಿಡಿಯೋ ಮಾಡುತ್ತಿದ್ದ ಸೈಕೋ ಅಂದರ್!

ಬೆಂಗಳೂರು, ಡಿಸೆಂಬರ್ 26: ಇತ್ತೀಚೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವ ಪ್ರಕರಣವೊಂದು ಸುದ್ದಿಯಾಗಿತ್ತು. ಇದೀಗ ಬೆಂಗಳೂರಿನ (Bengaluru) ಆಸ್ಪತ್ರೆಯೊಂದರಲ್ಲಿ ಸೈಕೋ ಸಿಬ್ಬಂದಿಯೊಬ್ಬ ಮಹಿಳಾ ನರ್ಸ್​ಗಳ ಖಾಸಗಿ ವೀಡಿಯೋ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯ ಈ ಕೃತ್ಯವು ವೈದ್ಯರ ಗಮನಕ್ಕೆ ಬಂದ ನಂತರ ಪೊಲೀಸರಲ್ಲಿ ದೂರು ನೀಡಲಾಗಿದ್ದು, ಕಾಮುಕನನ್ನು ಬಂಧಿಸಲಾಗಿದೆ.

ನರ್ಸ್​ಗಳು ಬಟ್ಟೆ ಬದಲಿಸುವ ವೀಡಿಯೋ ಮಾಡುತ್ತಿದ್ದ!

ನಗರದ ನಾಗರಬಾವಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ ತನ್ನ ಮಹಿಳಾ ಸಹೋದ್ಯೋಗಿಗಳ ಖಾಸಗಿ ಫೋಟೋ ತೆಗೆದು ಸಿಕ್ಕಿಹಾಕಿಕೊಂಡಿದ್ದಾನೆ. ಆರೋಪಿಯನ್ನು ಸುವೆಂದು ಮೊಹಂತ ಎಂದು ಗುರುತಿಸಲಾಗಿದೆ. ಈತ ಲೇಡಿ ನರ್ಸ್‌ಗಳು ಬಟ್ಟೆ ಬದಲಿಸುವ ಸಂದರ್ಭದಲ್ಲಿ ಫೋಟೋ ಮತ್ತು ವೀಡಿಯೋ ಚಿತ್ರಿಸಿ ವಿಕೃತಿ ಮೆರೆದಿದ್ದ. ಕಾಮುಕನ ಈ ಕೃತ್ಯವನ್ನು ಗಮನಿಸಿದ್ದ ನರ್ಸ್​ವೊಬ್ಬರು ತಕ್ಷಣವೇ ಈ ವಿಷಯವನ್ನು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಕೂಡಲೆ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಚೇತನ್ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಮುಕನನ್ನು ಬಂಧಿಸಿದ ಪೊಲೀಸರು

ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಆರೋಪಿ ಸುವೆಂದು ಮೊಹಂತ ಕಳೆದ ಒಂದು ವರ್ಷದಿಂದ ಅದೇ ಖಾಸಗಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಅದಲ್ಲದೇ ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ ಮಹಿಳಾ ಸಹೋದ್ಯೋಗಿಗಳ ಖಾಸಗಿ ಫೋಟೋ ಮತ್ತು ವೀಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿ ಸುವೆಂದು ಮೊಹಂತನನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:06 am, Fri, 26 December 25

Source link

ಬಿಗ್ ಬಾಸ್ ಮನೆಯಲ್ಲಿರುವಾಗಲೇ ಅಬ್ಬರದಲ್ಲಿ ರಿಲೀಸ್ ಆಯ್ತು ರಘು ನಟನೆಯ ಸಿನಿಮಾ – Kannada News | Vrushabha Movie: Bigg Boss 12 Raghu’s Shocking Villain Transformation

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ರಘು ಅವರು ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅವರು ಈ ಮೊದಲು ಕಲರ್ಸ್ ಕನ್ನಡದ ‘ಕ್ವಾಟ್ಲೆ ಕಿಚನ್’ ಶೋನಲ್ಲಿ ಗೆಲುವು ಕಂಡಿದ್ದರು. ಆ ಬಳಿಕ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ರಘು ಅವರು ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅವರ ನಟನೆಯ ಸಿನಿಮಾ ಅಬ್ಬರದಿ ರಿಲೀಸ್ ಆಗಿದೆ. ಅಷ್ಟಕ್ಕೂ ಯಾವುದು ಆ ಸಿನಿಮಾ? ಅದುವೇ ‘ವೃಷಭ’.

ಮೋಹನ್ ಲಾಲ್ ನಟನೆಯ ‘ವೃಷಭ’ ಚಿತ್ರಕ್ಕೆ ಕನ್ನಡದ ನಂದ ಕಿಶೋರ್ ನಿರ್ದೇಶನ ಇದೆ. ಈ ಸಿನಿಮಾಗೆ ರಾಗಿಣಿ ನಾಯಕಿ. ಖ್ಯಾತ ನಿರ್ದೇಶಕ ಇಂದ್ರಜಿತ್ ಅವರ ಮಗ ಸಮರ್ಜಿತ್ ಲಂಕೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಘು ಕೂಡ ನಟಿಸಿದ್ದಾರೆ. ಸಿನಿಮಾದ ಆರಂಭದಲ್ಲಿ ಕೆಲವು ಹೊತ್ತು ಅವರು ಕಾಣ ಸಿಗುತ್ತಾರೆ. ಅವರದ್ದು ವಿಲನ್ ಪಾತ್ರ.

‘ವೃಷಭ’ ಸಿನಿಮಾ ಎರಡು ಕಾಲಘಟ್ಟದಲ್ಲಿ ಸಾಗುತ್ತದೆ. ಒಂದು ರಾಜರ ಕಾಲ, ಮತ್ತೊಂದು 2025. ರಾಜರ ಕಾಲಘಟ್ಟದಲ್ಲಿ ರಘು ಕಾಣಿಸಿಕೊಳ್ಳುತ್ತಾರೆ. ರಾಜ ವಿಯಯೇಂದ್ರ ವೃಷಭ (ಮೋಹನ್​ಲಲ್) ಆಸ್ಥಾನದಲ್ಲಿ ಸ್ಫಟಿಕ ಲಿಂಗ ಇರುತ್ತದೆ. ಇದನ್ನು ಕದಿಯಲು ಒಂದು ಗ್ಯಾಂಗ್ ಬರುತ್ತದೆ. ಈ ಗ್ಯಾಂಗ್​​ನ ಲೀಡರ್ ಆಗಿ ರಘು ನಟಿಸಿದ್ದಾರೆ.

ರಘು ಅವರು ಈ ಸಿನಿಮಾಗಾಗಿ ಸಂಪೂರ್ಣವಾಗಿ ಗಡ್ಡ ಬೋಳಿಸಿದ್ದು, ಮುಖ ಹಾಗೂ ಕಣ್ಣನ್ನು ಭಯಾನಕವಾಗಿ ಮಾಡಲಾಗಿದೆ. ಈ ಚಿತ್ರ ಡಿಸೆಂಬರ್ 25ರಂದು ರಿಲೀಸ್ ಆಗಿದೆ. ಈ ಚಿತ್ರದ ಮೂಲ ಭಾಷೆ ಮಲಯಾಳಂ ಆಗಿದ್ದು, ಕನ್ನಡಕ್ಕೂ ಡಬ್ ಆಗಿ ತೆರೆಗೆ ಬಂದಿದೆ.

ಇದನ್ನೂ ಓದಿ: ಗಿಲ್ಲಿ ಕ್ಯಾಪ್ಟನ್ ಮಾಡಲು ಬಿಗ್ ಬಾಸ್​ನಿಂದಲೇ ಪ್ಲ್ಯಾನ್? ಸೂರಜ್ ಆರೋಪ

ರಘು ಅವರು ಈ ಮೊದಲು ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ವಿಲನ್ ಪಾತ್ರ ಮಾಡಿದ್ದರು. ಈ ವೇಳೆ ರಘು ಅವರನ್ನು ಗುರುತಿಸಲು ಸಾಧ್ಯವೇ ಆಗಿರಲಿಲ್ಲ. ಆ ರೀತಿಯಲ್ಲಿ ಮೇಕಪ್ ಇತ್ತು. ಈಗ ‘ವೃಷಭ’ ಚಿತ್ರಕ್ಕೂ ಅವರು ಅದೇ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ಗುರುತು ಹಿಡಿಯುವುದೇ ಕಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಕ್ಷದ ನಿರ್ದೇಶನ ಪಾಲಿಸುವುದು ಕಾರ್ಯಕರ್ತರ ಕರ್ತವ್ಯ: ಡಿಕೆಶಿಗೆ ಟಾಂಗ್ ಕೊಟ್ರಾ ಯತೀಂದ್ರ ಸಿದ್ದರಾಮಯ್ಯ? – Kannada News | Power Is Not Permanent, Party Discipline Comes First: Yathindra Siddaramaiah’s Sharp Remark Amid Congress Row

ಬೆಂಗಳೂರು, ಡಿಸೆಂಬರ್ 26: ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಯಾರಿಗೂ ಅಧಿಕಾರ ಶಾಶ್ವತವಲ್ಲ. ಪಕ್ಷ ಏನು ನಿರ್ದೇಶನ ನೀಡುತ್ತದೆಯೋ ಅದನ್ನು ಪಾಲಿಸಬೇಕಾದದ್ದು ಎಲ್ಲ ಕಾರ್ಯಕರ್ತರ ಕರ್ತವ್ಯ ಎಂದು ಸಿಎಂ ಸಿದ್ದರಾಮಯ್ಯ ಪುತ್ರ, ಎಂಎಲ್​ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ನಾವೆಲ್ಲರೂ ಕೂಡ ಸಾಮಾನ್ಯ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಮುಖ್ಯಮಂತ್ರಿಗಳಾಗಲಿ, ಉಪಮುಖ್ಯಮಂತ್ರಿಗಳಾಗಲಿ, ಮಂತ್ರಿಗಳಾಗಲಿ ಅಥವಾ ಸಾಮಾನ್ಯ ಕಾರ್ಯಕರ್ತರಾಗಲಿ, ಪಕ್ಷವನ್ನು ಕಟ್ಟುವುದು ಮತ್ತು ಪಕ್ಷದ ಆದೇಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕು ಎಂದು ಹೇಳಿದ್ದಾರೆ.

ಈ ಹೇಳಿಕೆಯು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ‘ಸಾಮಾನ್ಯ ಕಾರ್ಯಕರ್ತ’ ಮತ್ತು ‘ಸುಮ್ನೆ ಭಾಷಣ ಮಾಡಿ ಹೋಗಿಲ್ಲ, ಕಾಂಗ್ರೆಸ್ ಬಾವುಟ ಕಟ್ಟಿದ್ದೇನೆ, ಕಸ ಗುಡಿಸಿದ್ದೇನೆ’ ಎಂಬ ಹೇಳಿಕೆಗೆ ತಿರುಗೇಟು ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಅವರ ನಿವಾಸದ ಹೊರಗಡೆ ಮಾತನಾಡಿದ್ದ ಡಿಕೆಶಿ, ‘ನಾನು ಈ ಪಕ್ಷವನ್ನು ಕಟ್ಟಿದ್ದೇನೆ, ಬಾವುಟ ಕಟ್ಟಿದ್ದೇನೆ, ಕಸವೂ ಗುಡಿಸಿದ್ದೇನೆ. ಕೇವಲ ಬಂದು ಭಾಷಣ ಮಾಡಿ ಹೋಗಿಲ್ಲ’ ಎಂದು ಹೇಳಿದ್ದರು. ಆ ಮೂಲಕ ಅಸಮಾಧಾನ ಹೊರಹಾಕಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link