ಕರ್ನಾಟಕದ ಕಾಲು ಭಾಗ ಜನ ಕುಡಿಯೋದು ಕ್ಯಾನ್, ಬಾಟಲ್ ನೀರು! ಇಲ್ಲಿ ನಲ್ಲಿ ನೀರಿಗಿಂತ ಬಾಟಲ್ ವಾಟರ್‌ಗೇ ಹೆಚ್ಚು ಡಿಮಾಂಡ್
ಬೆಂಗಳೂರು, ಏಪ್ರಿಲ್ 7: ಭಾರತದಲ್ಲಿ ಕುಡಿಯುವ ನೀರಿನ (Drinking Water) ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ, ಕ್ರಾಂತಿಕಾರಕ ಬದಲಾವಣೆಯಾಗಿದ್ದು, ದೇಶದ ಶೇ 95ರಷ್ಟು ಕುಟುಂಬಗಳು ಇಂದು ಶುದ್ಧ ಕುಡಿಯುವ ನೀರಿನ ಸೌಲಭ್ಯ ಹೊಂದಿವೆ. ಇದರೊಂದಿಗೆ, ಕುಡಿಯುವ ನೀರು ಸಂಪರ್ಕದ ಈ ಪ್ರಗತಿಯಲ್ಲಿ ಭಾರತ ಜಗತ್ತಿಗೇ ಮಾದರಿಯಾಗಿದೆ. ಆದರೆ, ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದು ಕುತೂಹಲಕಾರಿ ಬೆಳವಣಿಗೆ ಕಂಡುಬಂದಿದೆ. ಬೆಂಗಳೂರು (Bangalore) ಸೇರಿದಂತೆ ದಕ್ಷಿಣ ಭಾರತದ ಹೆಚ್ಚಿಮ ನಗರವಾಸಿಗಳು ನಲ್ಲಿ ನೀರಿಗಿಂತ ಹೆಚ್ಚಾಗಿ ‘ಬಾಟಲ್ ವಾಟರ್’ ಅಥವಾ ‘ಕ್ಯಾನ್…