ಲಕ್ನೋ, ಏಪ್ರಿಲ್ 05: ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಹೋದ ಘಟನೆ ಲಕ್ನೋದಲ್ಲಿ ನಡೆದಿದೆ. ಗಂಟೆಗಳಿಂದ ಇದ್ದ ಸಂಚಾರ ದಟ್ಟಣೆ ನಿಮಿಷಗಳಲ್ಲೇ ಕಡಿಮೆಯಾಗಿತ್ತು. ಇದೀಗ ವಿಡಿಯೋ ವೈರಲ್ ಆಗಿದೆ. ಸಹದತ್ ಗಂಜ್ ಪೊಲೀಸ್ ಠಾಣೆ ಪ್ರದೇಶದ ರಾಜಬ್ ಗಂಜ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಆ ವ್ಯಕ್ತಿ ಪಿಸ್ತೂಲ್ ಹಿಡಿದು ರಸ್ತೆಯಲ್ಲಿ ನಡೆಯುತ್ತಿರುವುದು ಪ್ರಯಾಣಿಕರಲ್ಲಿ ಭೀತಿ ಮೂಡಿಸಿತ್ತು. ಟ್ರಾಫಿಕ್ ತೆರವುಗೊಳಿಸಲು ಮತ್ತು ತನ್ನ ವಾಹನವನ್ನು ಮುಂದೆ ಸಾಗಿಸಲು ಪಿಸ್ತೂಲ್ ಬಳಸಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಲಕ್ನೋ ಪೊಲೀಸರು ಗಮನಿಸಿದ್ದು, ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಧಿಕಾರಿಗಳು ಆರೋಪಿಯ ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ನಂತರ ಆ ವಸ್ತುವು ವಾಸ್ತವವಾಗಿ ಬಂದೂಕನ್ನು ಹೋಲುವ ಲೈಟರ್ ಆಗಿತ್ತು ಎಂದು ಸ್ಪಷ್ಟಪಡಿಸಿದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗ ಟೆಸ್ಟ್ ಮತ್ತು ರೆಡ್ ಬಾಲ್ (ಕೆಂಪು ಚೆಂಡು) ಕ್ರಿಕೆಟ್‌ಗೆ ಹೊಸ ಚೈತನ್ಯ ನೀಡಲು ಸಜ್ಜಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಮುಂಬರುವ ದಿನಗಳಲ್ಲಿ ಯುವ ಆಟಗಾರರನ್ನು ಟೆಸ್ಟ್ ಕ್ರಿಕೆಟ್‌ಗೆ ಸಿದ್ಧಪಡಿಸಲು ಬಿಸಿಸಿಐ ಹಲವಾರು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳಲಿದೆ. ಅದರ ಸಂಪೂರ್ಣ ಜವಾಬ್ದಾರಿಯನ್ನು ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮುಖ್ಯಸ್ಥರಾದ ವಿವಿಎಸ್ ಲಕ್ಷ್ಮಣ್ ಅವರಿಗೆ ನೀಡಲಾಗುತ್ತಿದೆ.
ಟೆಸ್ಟ್ ಕ್ರಿಕೆಟ್‌ನ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿದ್ದ ವಿವಿಎಸ್ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಬಿಸಿಸಿಐ ಶೀಘ್ರದಲ್ಲೇ ಹೊಸ ಯೋಜನೆಗಳು ಕಾರ್ಯರೂಪಕ್ಕೆ ತರಲಿದೆ. ಆ ಯೋಜನೆಗಳಾವುವು ಎಂದು ನೋಡುವುದಾದರೆ…
ಶ್ರೀಲಂಕಾ ಪ್ರವಾಸ: ಭಾರತದ ಅಂಡರ್-19 (U19) ಮತ್ತು ಅಂಡರ್-25 (U25) ತಂಡಗಳು ಶೀಘ್ರದಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿವೆ. ವಿಶೇಷವೆಂದರೆ, ಈ ಸರಣಿಗಳು ಕೇವಲ ರೆಡ್ ಬಾಲ್ ಕ್ರಿಕೆಟ್‌ಗೆ ಸೀಮಿತವಾಗಿರಲಿವೆ. ಅಂದರೆ ಟೆಸ್ಟ್ ಕ್ರಿಕೆಟ್ ಆಡಲೆಂದೇ ಭಾರತದ ಕಿರಿಯರ ತಂಡಗಳು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.
ಐಪಿಎಲ್ ನಂತರ ವಿಶೇಷ ಟೂರ್ನಿ: 2026ರ ಐಪಿಎಲ್ ಮುಗಿದ ತಕ್ಷಣ, ಜೂನ್ ಮತ್ತು ಜುಲೈ ತಿಂಗಳಲ್ಲಿ U25 ಆಟಗಾರರಿಗಾಗಿ ವಿಶೇಷ ರೆಡ್ ಬಾಲ್ ಟೂರ್ನಿ ಆಯೋಜಿಸಲಾಗಿದೆ. ಇದರಲ್ಲಿ ಒಟ್ಟು ನಾಲ್ಕು ತಂಡಗಳು ಭಾಗವಹಿಸಲಿದ್ದು, ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಆಡಲಿವೆ.
ಪ್ರತಿಭೆಗಳ ಆಯ್ಕೆ: ಈ ಟೂರ್ನಿಗಾಗಿ ಸುಮಾರು 64 ಯುವ ಆಟಗಾರರನ್ನು ಗುರುತಿಸಲಾಗಿದೆ. ಸಿ.ಕೆ. ನಾಯುಡು ಟ್ರೋಫಿ ಮತ್ತು ರಣಜಿ ಟ್ರೋಫಿಯಲ್ಲಿ ಮಿಂಚಿದ ಆಟಗಾರರಿಗೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಆಯೂಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಉದಯೋನ್ಮುಖ ತಾರೆಗಳು ಈ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.
ತಜ್ಞರ ಮಾರ್ಗದರ್ಶನ: ಟೆಸ್ಟ್ ಕ್ರಿಕೆಟ್‌ನಲ್ಲಿ ಯುವ ಆಟಗಾರರ ಕೌಶಲ್ಯ ಹೆಚ್ಚಿಸಲು ಝಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಅವರಂತಹ ದಿಗ್ಗಜರಿಂದ ವಿಶೇಷ ಬೌಲಿಂಗ್ ಶಿಬಿರಗಳನ್ನು ಆಯೋಜಿಸಲು ಬಿಸಿಸಿಐ ಯೋಜಿಸಿದೆ.
ಯುವ ಪಡೆಯೇ ಗುರಿ:
ಕೇವಲ ಟಿ20 ಕ್ರಿಕೆಟ್‌ಗೆ ಮಾತ್ರ ಸೀಮಿತವಾಗದೆ, ಟೆಸ್ಟ್ ಕ್ರಿಕೆಟ್‌ನ ಸತ್ವವನ್ನು ಉಳಿಸಿಕೊಳ್ಳುವುದು ಬಿಸಿಸಿಐನ ಮೂಲ ಉದ್ದೇಶವಾಗಿದೆ. ಮುಂದಿನ ದಶಕದಲ್ಲಿ ಭಾರತೀಯ ಟೆಸ್ಟ್ ತಂಡಕ್ಕೆ ಬಲಿಷ್ಠ ಬೆನ್ನೆಲುಬನ್ನು ನಿರ್ಮಿಸಲು ಈ ‘ರೆಡ್ ಬಾಲ್ ಪೂಲ್’ ಸಹಾಯ ಮಾಡಲಿದೆ.
ಒಟ್ಟಾರೆಯಾಗಿ, ಬಿಸಿಸಿಐನ ಈ ‘ಮಿಷನ್ ರೆಡ್ ಬಾಲ್’ ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಬಲಿಷ್ಠ ಟೀಮ್ ಇಂಡಿಯಾವನ್ನು ರೂಪಿಸಲು ಬಿಸಿಸಿಐ ಭರ್ಜರಿ ಪ್ಲ್ಯಾನ್ಗಳನ್ನು ರೂಪಿಸುತ್ತಿದೆ.
ಖ್ಯಾತ ಜ್ಯೋತಿಷಿ ಮತ್ತು ವಾಸ್ತುಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಏಪ್ರಿಲ್ 6 ರಿಂದ ಏಪ್ರಿಲ್ 12 ರವರೆಗಿನ ವಾರಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ವಾರದಲ್ಲಿ ಗ್ರಹಗಳ ಸ್ಥಿತಿ, ತಿಥಿಗಳ ಮಹತ್ವ, ಮತ್ತು ದ್ವಾದಶ ರಾಶಿಗಳ ಮೇಲೆ ಅವುಗಳ ಪ್ರಭಾವದ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಿದ್ದಾರೆ. ಪರಾಭಾವನಾಂ ಸಮವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಮತ್ತು ಕೃಷ್ಣ ಪಕ್ಷದ ಪಂಚಾಂಗವು ಈ ವಾರದ ವಿಶೇಷವಾಗಿದೆ.
ವಾರದ ಗ್ರಹಗತಿಗಳನ್ನು ಗಮನಿಸಿದರೆ, ಗುರು ಗ್ರಹವು ಮಿಥುನ ರಾಶಿಯಲ್ಲಿ, ಕೇತು ಗ್ರಹವು ಸಿಂಹ ರಾಶಿಯಲ್ಲಿ, ಮತ್ತು ರಾಹು ಗ್ರಹವು ಕುಂಭ ರಾಶಿಯಲ್ಲಿ ಸಂಚರಿಸುತ್ತಿವೆ. ರವಿ, ಶನಿ, ಕುಜ, ಮತ್ತು ಬುಧ ಎಂಬ ನಾಲ್ಕು ಗ್ರಹಗಳು ಪ್ರಮುಖ ಸ್ಥಾನಗಳಲ್ಲಿವೆ. ಏಪ್ರಿಲ್ 11, ಶನಿವಾರದಂದು ಬುಧ ಗ್ರಹವು ಮೀನ ರಾಶಿಗೆ ಸಂಚಾರ ಪ್ರಾರಂಭಿಸುತ್ತದೆ. ಶುಕ್ರ ಗ್ರಹವು ವಾರಪೂರ್ತಿ ಮೇಷ ರಾಶಿಯಲ್ಲಿ ಇರುತ್ತದೆ.
ಖ್ಯಾತ ನಟಿ ಜ್ಯೋತಿಕಾ (Jyothika) ಅವರಿಗೆ ಈಗ 47 ವರ್ಷ ವಯಸ್ಸು. ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದ್ದರೂ ಕೂಡ ಅವರು ಫಿಟ್ನೆಸ್ ಕಳೆದುಕೊಂಡಿಲ್ಲ. ಇಂದಿಗೂ ಅವರು ತಪ್ಪದೇ ವರ್ಕೌಟ್ ಮಾಡುತ್ತಾರೆ. ಆ ಕಾರಣದಿಂದ ಅವರು ಫಿಟ್ ಆಗಿದ್ದಾರೆ. ತಮ್ಮ ವರ್ಕೌಟ್ ಹೇಗಿರುತ್ತದೆ ಎಂಬುದನ್ನು ಅಭಿಮಾನಿಗಳಿಗೆ ತೋರಿಸಲು ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. 47ರ ಪ್ರಾಯದ ಜ್ಯೋತಿಕಾ ಅವರು ಹದಿಹರೆಯದ ಹುಡುಗಿಯ ರೀತಿಯಲ್ಲಿ ವರ್ಕೌಟ್ ಮಾಡುತ್ತಾರೆ. ಅವರ ಶಿಸ್ತು ಮತ್ತು ಉತ್ಸಾಹ ಎಲ್ಲರಿಗೂ ಮಾದರಿ ಆಗುವಂತಿದೆ. ಇತ್ತೀಚಿನ ವರ್ಷಗಳಲ್ಲಿ ಜ್ಯೋತಿಕಾ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಡಿಮೆ ಆಗಿದೆ. ದೊಡ್ಡ ಪರದೆಯಲ್ಲಿ ಅಭಿಮಾನಿಗಳನ್ನು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 9ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಸೋಲನುಭವಿಸಿದೆ. ಅದು ಸಹ ಕೇವಲ 6 ರನ್‌ಗಳ ಅಂತರದಿಂದ. ಆದರೆ ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮಾಡಿದ ಒಂದು ತಪ್ಪಿನಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 6 ರನ್‌ಗಳು ಸೇರ್ಪಡೆಯಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಸಿರಾಜ್, ರಾಜಸ್ಥಾನ್ ರಾಯಲ್ಸ್‌ನ ಧ್ರುವ್ ಜುರೆಲ್ ಅವರ ಕ್ಯಾಚ್ ಕೈಬಿಟ್ಟಿದ್ದು ಪಂದ್ಯದ ಮೇಲೆ ಭಾರಿ ಪ್ರಭಾವ ಬೀರಿತು.
ಕ್ಯಾಚ್ ಮಿಸ್ ಆಗಿದ್ದು ಹೇಗೆ?
ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್‌ನ 15ನೇ ಓವರ್‌ಗಿಂತ ಮೊದಲು, ಲಾಂಗ್-ಆನ್ ಬೌಂಡರಿಯಲ್ಲಿ ಧ್ರುವ್ ಜುರೆಲ್ ನೀಡಿದ ಕ್ಯಾಚ್ ಅನ್ನು ಸಿರಾಜ್ ಹಿಡಿದು ಒಳಗೆ ಎಸೆಯಲು ಪ್ರಯತ್ನಿಸಿದರು. ಆದರೆ ಸಮತೋಲನ ಕಳೆದುಕೊಂಡಿದ್ದರಿಂದ ಚೆಂಡು ಕೈಯಿಂದ ಜಾರಿ ಬೌಂಡರಿ ಗೆರೆ ದಾಟಿತು, ಇದು ಜುರೆಲ್‌ಗೆ ಸಿಕ್ಸರ್ ಮತ್ತು ಜೀವದಾನ ಎರಡನ್ನೂ ನೀಡಿತು.
ಇಲ್ಲಿ ಸಿರಾಜ್ ಬೌಂಡರಿ ಲೈನ್ ಬಳಿ ನಿಲ್ಲದೇ ತುಸು ಮುಂದೆ ನಿಂತು ಫೀಲ್ಡಿಂಗ್ ಮಾಡಿದ್ದರಿಂದ ನೇರ ಕ್ಯಾಚ್ ಹಿಡಿಯಲು ಸಾಧ್ಯವಾಗಿರಲಿಲ್ಲ. ಇದಾಗ್ಯೂ ಕ್ಯಾಚ್ ಹಿಡಿಯುವ ಪ್ರಯತ್ನ ನಡೆಸಿದರೂ ನಿಯಂತ್ರಣ ಕಳೆದುಕೊಂಡು ಚೆಂಡನ್ನು ಸಿಕ್ಸ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 6 ರನ್ ನೀಡಿದರು.
ಮೊಹಮ್ಮದ್ ಸಿರಾಜ್ ಕ್ಯಾಚ್ ಬಿಟ್ಟಾಗ ಧ್ರುವ್ ಜುರೆಲ್ ಗಳಿಸಿದದ್ದು ಕೇವಲ 11 ರನ್‌ಗಳು ಮಾತ್ರ. ಆದರೆ ಆ ಬಳಿಕ ಸಿಕ್ಕ ಜೀವದಾನದ ಲಾಭ ಪಡೆದ ಜುರೆಲ್ ಕೇವಲ 42 ಎಸೆತಗಳಲ್ಲಿ 75 ರನ್ (5 ಬೌಂಡರಿ, 5 ಸಿಕ್ಸರ್) ಚಚ್ಚಿದರು. ಈ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ರಾಜಸ್ಥಾನ್ ರಾಯಲ್ಸ್ 210 ರನ್‌ಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.
ಅಂತಿಮವಾಗಿ ಗುಜರಾತ್ ಟೈಟಾನ್ಸ್ ಈ ಪಂದ್ಯವನ್ನು ಕೇವಲ 6 ರನ್ಗಳಿಂದ ಸೋಲಬೇಕಾಯಿತು. ಸಿರಾಜ್ ಕೈಬಿಟ್ಟ ಆ ಒಂದು ಕ್ಯಾಚ್ ಮತ್ತು ಅದರಿಂದ ಬಂದ ಹೆಚ್ಚುವರಿ ರನ್‌ಗಳು ಗುಜರಾತ್ ಟೈಟಾನ್ಸ್ ತಂಡಕ್ಕೆ ನಿಜಕ್ಕೂ ದುಬಾರಿಯಾದವು.
ಈ ಸೋಲಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಏಪ್ರಿಲ್ 8 ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ಗುಜರಾತ್ ಪಡೆ ಮೊದಲ ಗೆಲುವು ದಕ್ಕಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.
ನವದೆಹಲಿ, ಏಪ್ರಿಲ್ 5: ಟಾಟಾ ಟ್ರಸ್ಟ್ಸ್ ಅಡಿಗೆ ಬರುವ ಬಾಯ್ ಹೀರಾಬಾಯ್ ಚಾರಿಟಬಲ್ ಟ್ರಸ್ಟ್ನಿಂದ ವೇಣು ಶ್ರೀನಿವಾಸನ್ (Venu Srinivasan) ಅವರು ಹೊರಬಿದ್ದಿದ್ದಾರೆ. ನಿಯಮಗಳ ಪ್ರಕಾರ ಟ್ರಸ್ಟೀ ಆಗಿ ಕೆಲಸ ಮಾಡಲು ಅರ್ಹತೆ ಹೊಂದಿಲ್ಲ ಎನ್ನುವ ತಕರಾರು ಬಂದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಮಾಜಿ ಟ್ರಸ್ಟೀ ಮೆಹ್ಲೀ ಮಿಸ್ತ್ರಿ ಅವರು ಟ್ರಸ್ಟೀಗಳ ಆಯ್ಕೆ ಅಕ್ರಮವಾಗಿ ಆಗಿದೆ ಎಂದು ಆಕ್ಷೇಪ ಸಲ್ಲಿಕೆ ಮಾಡಿದ್ದರು.
ಬಾಯ್ ಹೀರಾಬಾಯ್ ಚಾರಿಟಬಲ್ ಟ್ರಸ್ಟ್ಗೆ (Bai Hirabai Charitable Trust) ವೇಣು ಶ್ರೀನಿವಾಸನ್ ಅವರನ್ನು ಟ್ರಸ್ಟೀ ಆಗಿ ಮಾಡಿದ್ದೇ ರತನ್ ಟಾಟಾ. ಆಗಲೇ ಈ ನೇಮಕಾತಿ ಬಗ್ಗೆ ತಕರಾರುಗಳು ಮತ್ತು ಚರ್ಚೆಗಳು ನಡೆದಿದ್ದವು. ಟ್ರಸ್ಟ್ನಲ್ಲಿ ಅಕ್ರಮ ನಡೆದಿದ್ದು ಅದರ ತನಿಖೆ ನಡೆಸಿಸಬೇಕೆಂದು ಮೆಹ್ಲಿ ಮಿಸ್ತ್ರಿ ಅವರು ಮಹಾರಾಷ್ಟ್ರ ಚಾರಿಟಿ ಕಮಿಷನರ್ ಎದುರು ಅಫಿಡವಿಟ್ ಸಲ್ಲಿಸಿದ್ದಾರೆ. ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಅವರ ನೇಮಕಾತಿಯನ್ನು ಅವರು ಪ್ರಶ್ನಿಸಿದ್ದಾರೆ.
ಟಾಟಾ ಕುಟುಂಬದಲ್ಲಿ ಹಲವು ಟ್ರಸ್ಟ್ಗಳು ಕಾರ್ಯನಿರ್ವಹಿಸುತ್ತಿವೆ. ಅವೆಲ್ಲವನ್ನು ಕೂಡ ಸರ್ ರತನ್ ಟಾಟಾ ಟ್ರಸ್ಟ್ ಅಡಿಗೆ ಸೇರಿಸಲಾಗಿದೆ. ಈ ಟ್ರಸ್ಟ್ಗಳಲ್ಲಿ ಬಾಯ್ ಹೀರಾಬಾಯ್ ಜಮ್ಶೆಟ್ಜಿ ಟಾಟಾ ನವಸಾರಿ ಚಾರಿಟಬಲ್ ಇನ್ಸ್ಟಿಟ್ಯೂಶನ್ನ ಟ್ರಸ್ಟ್ ಡೀಡ್ ಆಗಿದ್ದು 1923ರಲ್ಲಿ. ಈ ಟ್ರಸ್ಟ್ನ ನಿಬಂಧನೆಗಳ ಪ್ರಕಾರ ಪಾರ್ಸೀ ಸಮುದಾಯದವರೇ ಇದರ ಟ್ರಸ್ಟೀಗಳಾಗಬೇಕು ಎಂದಿದೆ.
ಪ್ರಸಕ್ತ ಟ್ರಸ್ಟೀಗಳಾಗಿರುವ ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಅವರು ಪಾರ್ಸಿ ಸಮುದಾಯಕ್ಕೆ ಸೇರಿದವರಲ್ಲ. ಹಿಂದೆ ಟ್ರಸ್ಟೀ ಆಗಿದ್ದ ಆರ್ ಕೃಷ್ಣಕುಮಾರ್ ಅವರೂ ಪಾರ್ಸಿ ಸಮುದಾಯದವರಲ್ಲ. ಹೀಗಾಗಿ, ಈ ನೇಮಕಾತಿಗಳು ಮೂಲ ನಿಬಂಧನೆಗಳ ಉಲ್ಲಂಘನೆಯಾಗಿದೆ. ಈ ರೀತಿ ಅಕ್ರಮವಾಗಿ ಟ್ರಸ್ಟೀಗಳಾದವರು ತೆಗೆದುಕೊಳ್ಳುವ ನಿರ್ಧಾರಗಳು ಸಿಂಧುವೆನಿಸುವುದಿಲ್ಲ ಎಂದು ಮಿಸ್ತ್ರಿ ಅವರ ವಾದ.
ಮುಂಬೈ ಮತ್ತು ನವಸಾರಿಯಲ್ಲಿ ಪಾರ್ಸಿ ಸಮುದಾಯಕ್ಕೆಂದು ಅಗ್ನಿ ಮಂದಿರ, ಶಾಲೆ ಮತ್ತು ವಾಸ ಸೌಕರ್ಯಗಳು ಇತ್ಯಾದಿ ಆಸ್ತಿಗಳನ್ನು ಈ ಟ್ರಸ್ಟ್ ನಿರ್ವಹಿಸುತ್ತಿದೆ. ಶತಮಾನದ ಹಿಂದಿನ ಈ ಟ್ರಸ್ಟ್ನಲ್ಲಿ ಆಡಳಿತ ದುರುಪಯೋಗ ತಡೆಯಬೇಕು ಎಂದು ಮಿಸ್ತ್ರಿ ಹೇಳುತ್ತಿದ್ದಾರೆ.
ಚಾಮರಾಜನಗರ, ಏಪ್ರಿಲ್ 05:ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಡಬಲ್ ಧಮಾಕ ಸಿಕ್ಕಿದೆ. ಒಂದೆಡೆ ತನ್ನ ಮರಿಗಳೊಂದಿಗೆ ತಾಯಿ ಹುಲಿ ದರ್ಶನ ನೀಡಿದ್ದರೆ, ಮತ್ತೊಂದೆಡೆ ಬೃಹತ್ ವ್ಯಾಘ್ರವೊಂದು ಕ್ಯಾಮರಕ್ಕೆ ಪೋಸ್ ಕೊಟ್ಟಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನಲ್ಲಿ ತಾಯಿಯೊಂದಿಗೆ ಚಿನ್ನಾಟ ಆಡುತ್ತಿರುವ ಮರಿಗಳ ಅಪರೂಪದ ದೃಶ್ಯ ಸೆರೆಯಾಗಿದ್ದು, ಸಫಾರಿ ರೀ ಓಪನ್ ಆದ ಬಳಿಕ ಮೊದಲ ಬಾರಿಗೆ ವ್ಯಾಘ್ರನ ಕುಟುಂಬವನ್ನ ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ.
ಬೆಂಗಳೂರು (ಏ. 05): ಅನೇಕ ಜನರು ತಮ್ಮ ಮನೆಗಳಲ್ಲಿ ಮನಿ ಪ್ಲಾಂಟ್ (Money Plant) ಅನ್ನು ಬೆಳೆಸುತ್ತಾರೆ. ಈ ಸಸ್ಯವು ಗಾಳಿಯನ್ನು ಶುದ್ಧೀಕರಿಸುವುದಲ್ಲದೆ ಆಕರ್ಷಕವಾಗಿ ಕಾಣುತ್ತದೆ. ಆದಾಗ್ಯೂ, ವಾಸ್ತು ಶಾಸ್ತ್ರದ ಪ್ರಕಾರ, ಈ ಇಂಡೋರ್ ಪ್ಲಾಂಟ್ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಅದೃಷ್ಟ ಮತ್ತು ಸಂಪತ್ತು ಬರುತ್ತದೆ ಎಂದು ಭಾರತೀಯ ಸಂಸ್ಕೃತಿಯಲ್ಲಿ ಬಲವಾಗಿ ನಂಬಲಾಗಿದೆ. ವೈಜ್ಞಾನಿಕವಾಗಿ, ಈ ಸಸ್ಯವು ಅದರ ಸುತ್ತಲೂ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಮನೆಯಲ್ಲಿ ಶಕ್ತಿ ಮತ್ತು ಅದೃಷ್ಟವನ್ನು ನೀಡುತ್ತದೆ ಎಂದು ಕೆಲವರು ನಂಬುತ್ತಾರೆ. ಆದಾಗ್ಯೂ, ವಾಸ್ತು ಶಾಸ್ತ್ರವು ಮನಿ ಪ್ಲಾಂಟ್ ಸಿಕ್ಕ-ಸಿಕ್ಕಲ್ಲಿ ಇಡಬಾರದು ಎಂದು ಹೇಳುತ್ತದೆ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಇಡುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ.
ವಿಶೇಷವಾಗಿ, ಮನೆಯ ಈಶಾನ್ಯ ಭಾಗದಲ್ಲಿ ಮನಿ ಪ್ಲಾಂಟ್ ಇಡಬಾರದು. ಈ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಲಾಭಕ್ಕಿಂತ ಹೆಚ್ಚಿನ ನಷ್ಟ ಮತ್ತು ಅನಾರೋಗ್ಯ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು, ಹಣದ ಗಿಡಗಳನ್ನು ನೀರಿನಿಂದ ತುಂಬಿದ ಪಾತ್ರೆಯಲ್ಲಿ ಅಥವಾ ಬಾಟಲಿಯಲ್ಲಿ ಇಡಬೇಕು. ಪ್ರತಿದಿನ ನೀರು ಹಾಕಿ. ಹೀಗೆ ಮಾಡುವುದರಿಂದ, ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನುಕೂಲಕರ ಶಕ್ತಿಯು ಉಂಟಾಗುತ್ತದೆ.
ಮನಿ ಪ್ಲಾಂಟ್ ಅನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮ. ಇದು ವಿಘ್ನೇಶ್ವರನ ನೆಚ್ಚಿನ ದಿಕ್ಕು ಎಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಗಿಡವನ್ನು ಇಡುವುದರಿಂದ ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ. ನೀವು ಮನಿ ಪ್ಲಾಂಟ್ ಅನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ, ನಿಮಗೆ ಆರ್ಥಿಕ ನಷ್ಟವಾಗುವುದಲ್ಲದೆ, ಮನೆಯೂ ನಕಾರಾತ್ಮಕವಾಗುತ್ತದೆ. ಗಣೇಶನು ಆಗ್ನೇಯ ದಿಕ್ಕಿನಲ್ಲಿ ಒಳ್ಳೆಯದನ್ನು ಪ್ರತಿನಿಧಿಸುವ ದೇವರು ಆಗಿರುವುದರಿಂದ, ಈ ದಿಕ್ಕಿನಲ್ಲಿ ಅದನ್ನು ನೆಡುವುದರಿಂದ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆಯಿದೆ.
ಹಾಗೆಯೆ ಮನಿ ಪ್ಲಾಂಟ್ ಬಳ್ಳಿಗಳು ಬೆಳೆದಂತೆ, ಅವು ನೆಲವನ್ನು ಮುಟ್ಟದಂತೆ ನೋಡಿಕೊಳ್ಳಿ. ಬಳ್ಳಿಗಳು ಬೆಳೆದಂತೆ, ಅವುಗಳನ್ನು ಹಗ್ಗದಿಂದ ಕಟ್ಟಿ ಮೇಲಾವರಣದಂತೆ ಹೆಣೆದುಕೊಳ್ಳಬೇಕು. ವಾಸ್ತು ಪ್ರಕಾರ, ಬೆಳೆಯುವ ಬಳ್ಳಿಗಳು ಶುಭ. ಮನಿ ಪ್ಲಾಂಟ್‌ಗಳು ಲಕ್ಷ್ಮಿ ದೇವಿಯ ಅಭಿವ್ಯಕ್ತಿ ಎಂದು ಹೇಳಲಾಗುತ್ತದೆ, ಆದ್ದರಿಂದ ಅವು ನೆಲವನ್ನು ಮುಟ್ಟದಂತೆ ನೋಡಿಕೊಳ್ಳಬೇಕು. ಒಣಗಿದ ಮತ್ತು ಹಳದಿ ಎಲೆಗಳನ್ನು ಕಾಲಕಾಲಕ್ಕೆ ತೆಗೆದುಹಾಕದಿದ್ದರೆ, ವಾಸ್ತು ದೋಷಗಳು ಉಂಟಾಗುತ್ತವೆ. ವಾಸ್ತು ಪ್ರಕಾರ, ಒಣಗಿದ ಮನಿ ಪ್ಲಾಂಟ್ ಹಾಳಾಗುವ ಸಂಕೇತವಾಗಿದೆ, ಇದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು, ಪ್ರತಿದಿನ ನೀರು ಹಾಕಿ ಮತ್ತು ಒಣಗಿದ ಎಲೆಗಳನ್ನು ಕತ್ತರಿಸಿ ತೆಗೆದುಹಾಕಿ.
ಮನಿ ಪ್ಲಾಂಟ್‌ಗಳನ್ನು ಯಾವಾಗಲೂ ಮನೆಯೊಳಗೆ ಇಡಬೇಕು. ಅವುಗಳಿಗೆ ಹೆಚ್ಚು ಸೂರ್ಯನ ಬೆಳಕು ಅಗತ್ಯವಿಲ್ಲ. ಮನೆಯ ಹೊರಗೆ ಮನಿ ಪ್ಲಾಂಟ್‌ಗಳನ್ನು ನೆಡುವುದು ವಾಸ್ತು ಪ್ರಕಾರ ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವು ಬಿಸಿಲಿನಲ್ಲಿ ಬೇಗನೆ ಒಣಗುತ್ತವೆ ಮತ್ತು ಬೆಳವಣಿಗೆ ಕುಂಠಿತವಾಗಬಹುದು. ಇದು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು. ವಾಸ್ತು ಪ್ರಕಾರ, ಮನಿ ಪ್ಲಾಂಟ್‌ಗಳನ್ನು ಇತರರಿಗೆ ಉಡುಗೊರೆಯಾಗಿ ನೀಡಬಾರದು. ಇದು ಶುಕ್ರ ಗ್ರಹವನ್ನು ಕೋಪಗೊಳಿಸುತ್ತದೆ ಮತ್ತು ಶುಕ್ರನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾಗಿರುವುದರಿಂದ, ಈ ಸಸ್ಯವನ್ನು ಇತರರಿಗೆ ನೀಡುವುದರಿಂದ ಉಡುಗೊರೆಗಳು ಮತ್ತು ಸಂಪತ್ತಿನ ನಷ್ಟವಾಗುತ್ತದೆ ಎಂದು ನಂಬಲಾಗಿದೆ.
ಸಿನಿಮಾದ ಅವಧಿ ಎಷ್ಟೇ ದೀರ್ಘವಾಗಿದ್ದರೂ, ಕಥೆ ಪ್ರೇಕ್ಷಕರನ್ನು ಹಿಡಿದಿಡುವಂತಿದ್ದರೆ ಅದು ಯಶಸ್ವಿಯಾಗುತ್ತದೆ ಎಂಬುದನ್ನು ‘ಧುರಂಧರ್’ ಸಿನಿಮಾ ಸಾಬೀತುಪಡಿಸಿದೆ. ಈ ಚಿತ್ರದ ಎರಡು ಭಾಗಗಳ ಒಟ್ಟು ಅವಧಿ 7 ಗಂಟೆಗಳಿಗೂ ಹೆಚ್ಚು. ಆದರೂ ರೋಚಕ ನಿರೂಪಣೆಯಿಂದಾಗಿ ಪ್ರೇಕ್ಷಕರು ಈ ಸಿನಿಮಾವನ್ನು ಸಂಭ್ರಮಿಸಿದರು. ಇದೀಗ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ (Ramayana) ಕೂಡ ಇದೇ ದಾರಿಯಲ್ಲಿ ಸಾಗಲು ಸಿದ್ಧವಾಗುತ್ತಿದೆ. ಎರಡು ಭಾಗಗಳಲ್ಲಿ ಬರುತ್ತಿರುವ ಈ ಸಿನಿಮಾದ ಅವಧಿ 6 ಗಂಟೆ ಇರಲಿದೆ.
ನಿರ್ದೇಶಕ ನಿತೇಶ್ ತಿವಾರಿ ಅವರ ಈ ಮಹತ್ವಾಕಾಂಕ್ಷೆಯ ‘ರಾಮಾಯಣ’ ಸಿನಿಮಾ ಒಟ್ಟು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಈ ಎರಡು ಭಾಗಗಳ ಒಟ್ಟು ಅವಧಿ ಸುಮಾರು 6 ಗಂಟೆಗಳಿರಲಿದೆ. ಅಂದರೆ ಪ್ರತಿ ಭಾಗವು ಸರಿಸುಮಾರು 3 ಗಂಟೆಗಳ ಕಾಲ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರಿಸಬೇಕಿದೆ. ಇದು ‘ಧುರಂಧರ್’ ಚಿತ್ರಕ್ಕಿಂತಲೂ ಕಡಿಮೆ ಅವಧಿ ಆಗಿದ್ದರೂ ಕೂಡ ಚಿತ್ರತಂಡಕ್ಕೆ ಸವಾಲಾಗಲಿದೆ.
‘ಧುರಂಧರ್’ ಕಥೆ ಏನು ಎಂಬುದು ಪ್ರೇಕ್ಷಕರಿಗೆ ತಿಳಿದಿರಲಿಲ್ಲ. ಹಾಗಾಗಿ ಜನರು ಅಷ್ಟು ದೀರ್ಘ ಅವಧಿಯ ಸಿನಿಮಾವನ್ನು ಗಮನವಿಟ್ಟು ನೋಡಿದರು. ಆದರೆ ‘ರಾಮಾಯಣ’ ಚಿತ್ರದ ವಿಚಾರದಲ್ಲಿ ಹಾಗೆ ಆಗುವುದು ಕಷ್ಟ. ಯಾಕೆಂದರೆ, ರಾಮಾಯಣದ ಕಥೆ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಕಥೆಯನ್ನು, ಮತ್ತೆ ಆಸಕ್ತಿಕರವಾಗಿ ಸುದೀರ್ಘವಾಗಿ ನಿರೂಪಿಸುವುದು ನಿರ್ದೇಶಕರಿಗೆ ಇರುವ ದೊಡ್ಡ ಸವಾಲು.
‘ರಾಮಾಯಣ’ ಸಿನಿಮಾ ಟೀಸರ್:
ಇತ್ತೀಚಿನ ವರ್ಷಗಳಲ್ಲಿ ರಾಮಾಯಣವನ್ನು ತೆರೆಯ ಮೇಲೆ ತರುವ ಪ್ರಯತ್ನಗಳು ಸಂಪೂರ್ಣ ಯಶಸ್ವಿಯಾಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಪ್ರಭಾಸ್ ಅಭಿನಯದ ‘ಆದಿಪುರುಷ್’. ಕಳಪೆ ವಿಎಫ್‌ಎಕ್ಸ್ ಮತ್ತು ನೀರಸ ನಿರೂಪಣೆಯಿಂದಾಗಿ ಆ ಸಿನಿಮಾ ಪ್ರೇಕ್ಷಕರ ಅಸಮಾಧಾನಕ್ಕೆ ಗುರಿಯಾಗಿತ್ತು. ಹಾಗಾಗಿ, ನಿತೇಶ್ ತಿವಾರಿ ಅವರು ದೃಶ್ಯ ವೈಭವದ ಜೊತೆಗೆ ಭಾವನಾತ್ಮಕ ಕಥೆಗೂ ಅಷ್ಟೇ ಪ್ರಾಮುಖ್ಯತೆ ನೀಡಬೇಕಿದೆ.
ಸಿನಿಮಾವನ್ನು ಎರಡು ಭಾಗಗಳಲ್ಲಿ ಮಾಡುವುದು ಕೂಡ ದೊಡ್ಡ ಚಾಲೆಂಜ್. ಮೊದಲ ಭಾಗ ಮತ್ತು ಎರಡನೇ ಭಾಗದ ಬಿಡುಗಡೆಯ ನಡುವೆ ದೀರ್ಘ ಕಾಲದ ಗ್ಯಾಪ್ ಇರುತ್ತದೆ. ಮೊದಲ ಭಾಗವು ಎಷ್ಟು ರೋಚಕವಾಗಿ ಕೊನೆಗೊಳ್ಳಬೇಕು ಎಂದರೆ, ಪ್ರೇಕ್ಷಕರು ಎರಡನೇ ಭಾಗಕ್ಕಾಗಿ ಕಾತರದಿಂದ ಕಾಯುವಂತಾಗಬೇಕು. ಒಂದು ವೇಳೆ ಮೊದಲ ಭಾಗ ನಿರೀಕ್ಷಿತ ಮಟ್ಟ ತಲುಪದಿದ್ದರೆ, ಅದು ಎರಡನೇ ಭಾಗದ ಮೇಲೆ ನೇರ ಪರಿಣಾಮ ಬೀರುತ್ತದೆ.
ದಾವಣಗೆರೆ, ಏಪ್ರಿಲ್ 05: ಜೆಡಿಎಸ್ ಬಗ್ಗೆ ಟೀಕಿಸುವ ಸಿಎಂ ಸಿದ್ದರಾಮಯ್ಯ ಅವರು ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸಿ ಚುನಾವಣೆಗೆ ಸ್ಫರ್ಧಿಸಲಿ. ಆಗ ಅವರು ಎಷ್ಟು ಕ್ಷೇತ್ರ ಗೆಲ್ಲುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಕುಟುಂಬ ರಾಜಕಾರಣದ ವಿಷಯವನ್ನೂ ಪ್ರಸ್ತಾಪಿಸಿದ ಅವರು, ತಮ್ಮ ಕುಟುಂಬದ ರಾಜಕೀಯ ಪ್ರವೇಶವು ಜನರ ಬೆಂಬಲದಿಂದ ಆದದ್ದು, ಆದರೆ ಸಿದ್ದರಾಮಯ್ಯರ ಮಗನ ರಾಜಕೀಯ ಪ್ರವೇಶವು ರಾಜ್ಯದ ಉದ್ದಾರಕ್ಕಲ್ಲ, ಬದಲಿಗೆ ವಸೂಲಿಗಾಗಿ ಎಂದು ಆರೋಪಿಸಿದ್ದಾರೆ. ಜೆಡಿಎಸ್ 40 ಸೀಟುಗಳನ್ನು ಗೆದ್ದಿದ್ದು ಸ್ವಂತ ಶಕ್ತಿಯಿಂದ. 130-140 ಸೀಟು ಗೆದ್ದಿದ್ದೀವಿ ಎಂಬ ಅಹಂಕಾರ ಶಾಶ್ವತವಲ್ಲ. ತಮಿಳುನಾಡಲ್ಲಿ ಡಿಎಂಕೆ ಬಳಿಯಿಂದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ 28 ಸೀಟುಗಳನ್ನು ಪಡೆದಿದ್ದು, ಆ ಪೈಕಿ ಕೆಲ ಕ್ಷೇತ್ರಗಳಿಗೂ ಅಭ್ಯರ್ಥಿಗಳಿಲ್ಲದೆ ಬೀದಿಯಲ್ಲಿ ಹೋಗುವವರನ್ನು ತಂದು ನಿಲ್ಲಿಸಿದ್ದಾರೆ ಎಂದು ಹೆಚ್ಡಿಕೆ ವ್ಯಂಗ್ಯವಾಡಿದ್ದಾರೆ.