VBL Deal: 1,118 ಕೋಟಿ ರೂಗೆ ಸೌತ್ ಆಫ್ರಿಕಾದ ಟ್ವಿಜ್ಜಾ ಖರೀದಿಸಲಿರುವ ಭಾರತದ ವರುಣ್ ಬೆವರೇಜಸ್ – Kannada News | Varun Beverages to acquire Twizza, a beverage firm in South Africa for over 1,118 crore of enterprise value
ನವದೆಹಲಿ, ಡಿಸೆಂಬರ್ 23: ಭಾರತದ ವರುಣ್ ಬೆವರೇಜಸ್ ಲಿಮಿಟೆಡ್ ಸಂಸ್ಥೆಯು ಸೌತ್ ಆಫ್ರಿಕಾ ಮೂಲದ ಟ್ವಿಜ್ಜಾ ಎನ್ನುವ ಕಂಪನಿಯನ್ನು ಪೂರ್ಣವಾಗಿ ಖರೀದಿಸಲಿದೆ. ಈ ವಿಷಯವನ್ನು ಸ್ವತಃ ವರುಣ್ ಬೆವರೇಜಸ್ ಸಂಸ್ಥೆಯೇ ಬಹಿರಂಗಪಡಿಸಿದೆ. ಸೌತ್ ಅಫ್ರಿಕಾದಲ್ಲಿರುವ ತನ್ನ ಅಂಗಸಂಸ್ಥೆಯಾದ ಬೆವ್ಕೋ (ದಿ ಬೆವರೇಜಸ್ ಕಂಪನಿ ಪ್ರಾಪ್ರಿಯೇಟರಿ ಲಿ) ಮೂಲಕ ಟ್ವಿಜ್ಜಾವನ್ನು ಖರೀದಿಸುತ್ತಿರುವುದಾಗಿ ಹೇಳಿದೆ. ವರದಿ ಪ್ರಕರ 1,118.7 ಕೋಟಿ ರೂ ಬೆಲೆಗೆ (ಎಂಟರ್ಪ್ರೈಸ್ ಮೌಲ್ಯ) ಖರೀದಿಸಲು ಡೀಲ್ ನಡೆದಿದೆ ಎನ್ನಲಾಗಿದೆ. ವರುಣ್ ಬೆವರೇಜಸ್ ಸಂಸ್ಥೆಯು ಪೆಪ್ಸಿಕೋದ ಅತಿದೊಡ್ಡ ಫ್ರಾಂಚೈಸಿ…