Headlines

nagaraj11081993

ಗಲ್ಫ್ ದೇಶಗಳೊಂದಿಗಿನ ಭಾರತದ ಸಂಬಂಧ ಹಾಳು ಮಾಡುವುದೇ ಕಾಂಗ್ರೆಸ್ ಉದ್ದೇಶ; ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ, ಏಪ್ರಿಲ್ 4: ಕೇರಳದಲ್ಲಿ ವಿಧಾನಸಭಾ ಚುನಾವಣೆ (Keralam Assembly Elections)  ನಡೆಯಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿ (PM Modi) ತಿರುವಲ್ಲಾದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. “ಪಶ್ಚಿಮ ಏಷ್ಯಾದ ದೇಶಗಳು ಭಾರತವನ್ನು ತಮ್ಮ ಶತ್ರುವೆಂದು ಪರಿಗಣಿಸಬೇಕೆಂದು ಕಾಂಗ್ರೆಸ್ ಬಯಸುತ್ತದೆ. ಅದೇ ಕಾರಣದಿಂದ ಕಾಂಗ್ರೆಸ್ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ. ನಾವು ಇಲ್ಲಿ ಅಂತಹ ಹೇಳಿಕೆ ನೀಡಿದರೆ ಭಾರತೀಯರನ್ನು ಗಲ್ಫ್ ದೇಶಗಳಿಂದ ಹೊರಹಾಕಲಾಗುತ್ತದೆ. ಅದೇ ಕಾರಣದಿಂದ…

Read More

ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ, ಏಪ್ರಿಲ್​​ 04: ಉಪ ಚುನಾವಣೆಗೆ ಯಾವುದೇ ಅಜೆಂಡಾ ಎಂಬುದನ್ನು ಕಾಂಗ್ರೆಸ್​​ ಇಟ್ಟುಕೊಂಡಿಲ್ಲ. ನಮ್ಮ ಕೆಲಸಗಳನ್ನು ಜನರ ಮುಂದೆ ಇಟ್ಟಿದ್ದು, ಮತದಾರರು ಅವುಗಳ ವಿಮರ್ಶೆ ಮಾಡಿ ವೋಟ್​​ ಹಾಕಲಿದ್ದಾರೆ. ಬಿಜೆಪಿಗರು ನನ್ನ ಮೇಲೆ ಮಾತಿನ ದಾಳಿ ನಡೇಸೋದು ಬಿಟ್ಟು, ರಾಜ್ಯದಲ್ಲಿ ಅಧಿಕಾರದಲ್ಲಿದ್ದ 9 ವರ್ಷ ನಾವೇನು ಮಾಡಿದ್ದೇವೆ ಎಂಬುದನ್ನು ಹೇಳುತ್ತಿಲ್ಲ. ಸಿದ್ದರಾಮಯ್ಯನವರ ಮೇಲೆ ಅಟ್ಯಾಕ್​​ ಮಾಡಿ ಎಂದು ಆರ್​​ಎಸ್​​ಎಸ್​​ನವರು ಬಿಜೆಪಿಗರಿಗೆ ಹೇಳಿಕೊಟ್ಟಿದ್ದು, ಬಡವರ ಮತ್ತು ಹಿಂದುಳಿದವರ ಪರ ನಾನು ಇರೋದಕ್ಕೇ ಅವರು ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ…

Read More

ಹಳೆಯ ವಾಹನಗಳಿಗೆ ಹೆಚ್ಎಸ್ಆರ್​​ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗೆ ತೆರೆ ಎಳೆದ ಸಾರಿಗೆ ಇಲಾಖೆ

ಬೆಂಗಳೂರು, ಏಪ್ರಿಲ್​ 04: 01 ಏಪ್ರಿಲ್​ 2019ಕ್ಕಿಂತ ಹಿಂದೆ ರಿಜಿಸ್ಟ್ರೇಷನ್ ಆಗಿರುವ ಎಲ್ಲಾ ವಾಹನಗಳಿಗೂ ವಾಹನ ಮಾಲೀಕರು ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್​​ (ಹೆಚ್ಎಸ್ಆರ್​ಪಿ HSRP) ನಂಬರ್ ಪ್ಲೇಟ್​​ ಅಳವಡಿಸಿಕೊಳ್ಳಬೇಕು, ಇದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಆ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿಗೆ ಬ್ರೇಕ್ ಹಾಕಲಾಗಿದೆ. ಈ ಕುರಿತಾಗಿ ರಾಜ್ಯ ಸಾರಿಗೆ ಇಲಾಖೆಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ವದಂತಿಗೆ ತೆರೆ ಎಳೆದ ರಾಜ್ಯ ಸಾರಿಗೆ ಇಲಾಖೆ ಹಳೆಯ ವಾಹನಗಳಿಗೆ…

Read More

IPL 2026, RCB vs CSK: ತವರಿನಲ್ಲಿ ಆರ್​ಸಿಬಿಗೆ 2ನೇ ಪಂದ್ಯ; ಎದುರಾಳಿ ಯಾರು ಗೊತ್ತಲ್ಲ?

ಐಪಿಎಲ್ 2026 (IPL 2026) ಏಪ್ರಿಲ್ 5 ರಂದು ಡಬಲ್ ಹೆಡರ್ ಪಂದ್ಯಗಳು ನಡೆಯಿವೆ. ದಿನದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಿದರೆ, ಸಂಜೆಯ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡವನ್ನು ಎದುರಿಸಲಿದೆ. ಸಿಎಸ್​ಕೆ ತಂಡ ಇದುವರೆಗೆ ಗೆಲುವಿನ ಖಾತೆ ತೆರೆದಿಲ್ಲ. ಆಡಿದ ಎರಡೂ ಪಂದ್ಯಗಳನ್ನು ಸೋತಿದ್ದು, ಹ್ಯಾಟ್ರಿಕ್ ಸೋಲಿನ ಆತಂಕದಲ್ಲಿದೆ. ಇತ್ತ ತನ್ನ…

Read More

RCB vs CSK ಪಂದ್ಯ: ಚಿನ್ನಸ್ವಾಮಿ ಸ್ಟೇಡಿಯಂನಿಂದ ಈ ಮಾರ್ಗಗಳಲ್ಲಿ ನಾಳೆ BMTC ವಿಶೇಷ ಬಸ್​​ ಸಂಚಾರ

ಬೆಂಗಳೂರು, ಏಪ್ರಿಲ್​​ 04: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು ಮತ್ತು ಚೆನ್ನೈ ಸೂಪರ್​​ ಕಿಂಗ್ಸ್​ ನಡುವೆ ನಾಳೆ ಐಪಿಎಲ್​​ ಮ್ಯಾಚ್​​ ಹಿನ್ನೆಲೆ ಈಗಾಗಲೇ ಅಗತ್ಯ ಕ್ರಮಗಳನ್ನು ಆಯೋಜಕರು ಮತ್ತು ಬೆಂಗಳೂರು ಪೊಲೀಸರು ಕೈಗೊಂಡಿದ್ದಾರೆ. ಅಭಿಮಾನಿಗಳ ಅನುಕೂಲಕ್ಕಾಗಿ ಬಿಎಂಆರ್​​ಸಿಎಲ್​​ ಈಗಾಗಲೇ ಮೆಟ್ರೋ ರೈಲುಗಳ ಸಮಯ ವಿಸ್ತರಣೆ ಮಾಡಿರುವ ನಡುವೆ, ಮತ್ತೊಂದು ಗುಡ್​​ ನ್ಯೂಸ್​​ ಸಿಕ್ಕಿದೆ. ಜನಸಂದಣಿ ನಿಯಂತ್ರಣದ ನಿಟ್ಟಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬಿಎಂಟಿಸಿ ಬಸ್​ಗಳ ವ್ಯವಸ್ಥೆ ಮಾಡಲಾಗಿದ್ದು, 8 ಬಸ್​​ಗಳು ಓಡಾಟ ನಡೆಸಲಿವೆ. ಬಸ್​​ ಸಂಚರಿಸಲಿರುವ ಮಾರ್ಗಗಳು…

Read More

ತಮಿಳುನಾಡು ಸಿಎಂ ಸ್ಟಾಲಿನ್ ಭಾಷಾ ಹೇರಿಕೆ ಆರೋಪಕ್ಕೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು

ನವದೆಹಲಿ, ಏಪ್ರಿಲ್ 4: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಇಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ತ್ರಿಭಾಷಾ ಸೂತ್ರದ ಕುರಿತು ನೀಡಿದ ಹೇಳಿಕೆಗಳನ್ನು ಟೀಕಿಸಿದ್ದಾರೆ. “ತ್ರಿಭಾಷಾ ಹೇರಿಕೆ” ಹೇಳಿಕೆಯನ್ನು ರಾಜಕೀಯ ನ್ಯೂನತೆಗಳನ್ನು ಮುಚ್ಚಲು ಮಾಡುತ್ತಿರುವ “ವಿಫಲ ಪ್ರಯತ್ನ” ಎಂದು ಅವರು ಟೀಕಿಸಿದ್ದಾರೆ. ಸಿಎಂ ಸ್ಟಾಲಿನ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, “ರಾಷ್ಟ್ರೀಯ ಶಿಕ್ಷಣ ನೀತಿ, 2020 ಭಾಷಾ ವಿಮೋಚನೆಗಾಗಿ ಪ್ರಣಾಳಿಕೆಯಾಗಿದೆ. ಇದು ಮಾತೃಭಾಷೆಗೆ ಆದ್ಯತೆ ನೀಡುತ್ತದೆ. ಆದ್ದರಿಂದ…

Read More

ಭಾರತದ ಇನ್ಯಾವ ಸಂಗೀತ ನಿರ್ದೇಶಕನಿಗೂ ಸಿಗದಷ್ಟು ಸಂಭಾವನೆ ಪಡೆದ ಎಆರ್ ರೆಹಮಾನ್

ಭಾರತೀಯ ಸಿನಿಮಾಗಳಲ್ಲಿ (Indian Cinema) ಸ್ಟಾರ್ ನಟರಿಗೆ ಸಿಕ್ಕಷ್ಟು ಸಂಭಾವನೆ, ಮಾನ್ಯತೆ ಸಿನಿಮಾದ ಇನ್ಯಾವುದೇ ವಿಭಾಗದ ಇನ್ಯಾವುದೇ ತಂತ್ರಜ್ಞರಿಗೆ ದೊರೆಯುವುದಿಲ್ಲ. ಸಂಗೀತ ನಿರ್ದೇಶಕರನ್ನಂತೂ ಕೇಳುವವರೇ ಇಲ್ಲ. ಎಷ್ಟೋ ಬಾರಿ ಕೇವಲ ಸಂಗೀತದಿಂದಲೇ ಸಿನಿಮಾಗಳು ಗೆದ್ದಿರುವುದುಂಟು. ಆದರೂ ಸಹ ಸಂಗೀತ ನಿರ್ದೇಶಕರಿಗೆ ಅವರ ಪ್ರತಿಭೆಗೆ ತಕ್ಕಷ್ಟು ಸೂಕ್ತ ಸಂಭಾವನೆ ದೊರೆಯುವುದಿಲ್ಲ. ಇದೀಗ ಎಆರ್ ರೆಹಮಾನ್ ಅವರಿಗೆ ಭಾರಿ ಮೊತ್ತದ ಸಂಭಾವನೆ ದೊರೆತಿದ್ದು, ಭಾರತದ ಇನ್ಯಾವ ಸಂಗೀತ ನಿರ್ದೇಶಕನಿಗೂ ಇಷ್ಟು ದೊಡ್ಡ ಸಂಭಾವನೆ ದೊರೆತಿಲ್ಲ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ‘ರಾಮಾಯಣ’…

Read More

DC vs MI: ಡೆಲ್ಲಿ ಕ್ಯಾಪಿಟಲ್ಸ್ ಎದುರು ಮಕಾಡೆ ಮಲಗಿದ ಮುಂಬೈ ಇಂಡಿಯನ್ಸ್

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026  (IPL 2026 ) ರ 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Mumbai Indians) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 162 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಸಮೀರ್ ರಿಜ್ವಿ (Sameer Rizvi) ಅವರ ಸತತ ಎರಡನೇ ಅರ್ಧಶತಕದ ನೆರವಿನಿಂದ 18.1 ಓವರ್​ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು…

Read More

ಪ್ರತ್ಯೇಕ ಪ್ರಕರಣ: ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಇಬ್ಬರು ಯುವಕರು ಆತ್ಮಹತ್ಯೆ

ವಿಜಯಪುರ/ಚಿಕ್ಕಮಗಳೂರು, ಏಪ್ರಿಲ್​​ 04: ಹಳ್ಳಿಗಳಲ್ಲಿ ನೆಲೆಸಿರುವವರಿಗೆ ಅದರಲ್ಲೂ ಕೃಷಿಕ ಯುವಕರಿಗೆ ಮದುವೆಗೆ ಹೆಣ್ಣು ಸಿಗೋದೇ ಕಷ್ಟ ಎಂಬ ಸ್ಥಿತಿ ಸದ್ಯ ಸಮಾಜದಲ್ಲಿದೆ. ಇದೇ ಕಾರಣಕ್ಕೆ ಅದೆಷ್ಟೋ ಯುವಕರಿಗೆ ಈವರೆಗೂ ಕಂಕಣ ಭಾಗ್ಯವೇ ಕೂಡಿಬರುತ್ತಿಲ್ಲ. ಈ ನಡುವೆ ವಿವಾಹಕ್ಕೆ ಹುಡುಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಾನಸಿಕವಾಗಿ ತೀವ್ರ ನೊಂದು ಯುವಕರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ರಾಜ್ಯದಲ್ಲಿ ನಡೆದಿವೆ. ವಿಜಯಪುರದಲ್ಲಿ ಕುರಿಗಾಹಿ ನೇಣಿಗೆ ಶರಣಾಗಿದ್ದರೆ ಇತ್ತ ಚಿಕ್ಕಮಗಳೂರಲ್ಲಿ ಕುಡಿದ ಮತ್ತಿನಲ್ಲಿ ಮತ್ತೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ…

Read More

ಬೈ ಎಲೆಕ್ಷನ್​​: ಅಬ್ಬರದ ಕ್ಯಾಂಪೇನ್​​ ಮಧ್ಯೆ ಜಮೀರ್​​ಗೆ ಸಿಎಂ ತುರ್ತು ಬುಲಾವ್; ನಾಳೆ ಅಖಾಡಕ್ಕೆ ಸಚಿವ ಎಂಟ್ರಿ

ಬೆಂಗಳೂರು, ಏಪ್ರಿಲ್​ 04: ಉಭಯ ಕ್ಷೇತ್ರಗಳಲ್ಲಿ ಉಭಯ ಪಕ್ಷದಿಂದ ಮತ ಶಿಕಾರಿ ನಡೆಯುತ್ತಿದೆ. ಮತದಾನಕ್ಕೆ ಇನ್ನೂ ಐದು ದಿನ ಬಾಕಿ ಇದ್ದು, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಅಬ್ಬರದ ಪ್ರಚಾರ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಎರಡನೇ ಸುತ್ತಿನ ಪ್ರಚಾರ ಮಾಡಿದ್ದು, ಅಭ್ಯರ್ಥಿ ಉಮೇಶ್ ಮೇಟಿ ಪರ ಅಬ್ಬರದ ಕ್ಯಾಂಪೇನ್ ಮಾಡಿದ್ದಾರೆ. ವಿವಿಧ ಸಮುದಾಯಗಳ ಮತಗಳ ಮೇಲೂ ಕಣ್ಣಿಡಲಾಗಿದೆ. ಈ ಮಧ್ಯೆ ಸಚಿವ ಜಮೀರ್​​ಗೆ ಸಿದ್ದರಾಮಯ್ಯರಿಂದ ತುರ್ತು ಬುಲಾವ್ ನೀಡಲಾಗಿದೆ. ಸದ್ಯ ಈ ವಿಚಾರ ಸಾಕಷ್ಟು…

Read More