ವಾಷಿಂಗ್ಟನ್, ಏಪ್ರಿಲ್ 4: ನಾನು ನೀಡಿದ್ದ ಸಮಯ ಮೀರುತ್ತಿದೆ. ಇರಾನ್ ಮೇಲೆ ಭೀಕರ ದಾಳಿ ನಡೆಸಲು ಕೇವಲ 48 ಗಂಟೆಗಳು ಮಾತ್ರ ಉಳಿದಿವೆ. ಅಷ್ಟರೊಳಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ನರಕ ತೋರಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಹೊಸ ಎಚ್ಚರಿಕೆ ನೀಡಿದ್ದಾರೆ.
“ನಾನು ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಲು ಅಥವಾ ಹಾರ್ಮುಜ್ ಜಲಸಂಧಿಯನ್ನು ತೆರೆಯಲು 10 ದಿನಗಳನ್ನು ನೀಡಿದ್ದನ್ನು ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ಗಡುವು ಮುಗಿಯುತ್ತಿದೆ. ಮುಂದಿನ 48 ಗಂಟೆಗಳ ಮೊದಲು ಒಪ್ಪಂದಕ್ಕೆ ಒಪ್ಪದಿದ್ದರೆ ನರಕವನ್ನೇ ತೋರಿಸುತ್ತೇವೆ” ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾರ್ಚ್ 26ರಂದು ಡೊನಾಲ್ಡ್ ಟ್ರಂಪ್ ಅಮೆರಿಕದ ಜೊತೆ ಒಪ್ಪಂದ ಮಾಡಿಕೊಳ್ಳಲು ಇರಾನ್‌ಗೆ 10 ದಿನ ಗಡುವು ನೀಡಿದ್ದರು. ಇರಾನ್ ಕೋರಿಕೆಯ ಮೇರೆಗೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಹೇಳಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹುಬ್ಬಳ್ಳಿ, ಏಪ್ರಿಲ್ 04: ಹುಬ್ಬಳ್ಳಿಯ ಜಿಮ್ ಟ್ರೈನರ್ ಸಮೀರ್ ವಿರುದ್ಧ ಅತ್ಯಾಚಾರ ಆರೋಪ ಕೇಸ್ ದಾಖಲಾಗಿದೆ. ಈ ಮಧ್ಯೆ ಸಮೀರ್ಗೆ ಐವತ್ತಕ್ಕೂ ಹೆಚ್ಚು ಜನರ ಗುಂಪಿನಿಂದ ಮನಸೋ ಇಚ್ಛೆ ಥಳಿಸಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಹುಬ್ಬಳ್ಳಿ ನಗರದ ದೇವಾಂಗಪೇಟ್ನಲ್ಲಿರುವ ಸಮೀರ್ ಅಪಾರ್ಟ್ಮೆಂಟ್ಗೆ ನಿನ್ನೆ ಮುಂಜಾನೆ ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು ಮತ್ತು ಕೆಲ ಎಸ್ಎಸ್ಕೆ ಸಮಾಜದ ಯುವಕರು ತೆರಳಿದ್ದಾರೆ. ಸಮೀರ್ ಬರುತ್ತಿದ್ದಂತೆ ಆತನ ಮೊಬೈಲ್ ಕಸಿದುಕೊಂಡಿದ್ದಾರೆ. ನಂತರ ಹಿಗ್ಗಾಮುಗ್ಗಾ ಥಳಿಸಿ, ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಟ ದಳಪತಿ ವಿಜಯ್ (Thalapathy Vijay), ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ತಮಿಳುನಾಡು ರಾಜ್ಯದಾದ್ಯಂತ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಅವರ ಟಿವಿಕೆ ಪಕ್ಷಕ್ಕೆ ಅವರೇ ಸ್ಟಾರ್ ಪ್ರಚಾರಕ ಆಗಿದ್ದು ರಾಜ್ಯದೆಲ್ಲೆಡೆ ರೋಡ್ ಶೋ ಮಾಡುತ್ತಿದ್ದಾರೆ. ವಿಶೇಷವಾಗಿ ವಿನ್ಯಾಸ ಮಾಡಿದ ತೆರೆದ ವಾಹನದಲ್ಲಿ ಓಡಾಡುತ್ತಿದ್ದಾರೆ. ವಿಜಯ್ ಹೋದಲ್ಲೆಲ್ಲ ಅವರನ್ನು ನೋಡಲು ಭಾರಿ ಸಂಖ್ಯೆಯ ಜನ ಸೇರುತ್ತಿದ್ದಾರೆ. ಇದೀಗ ಪುದುಚೆರಿಯ ರೋಡ್ ಶೋ ವೇಳೆ ವಿಜಯ್, ತೆರೆದ ವಾಹನದಲ್ಲಿ ಹೋಗುತ್ತಿದ್ದಾಗ ಅದರ ಹತ್ತಿರ ಬಂದ ವೃದ್ಧನೋರ್ವರನ್ನು ಭದ್ರತೆಯವನು ತಳ್ಳಿದ್ದಾನೆ, ಇದರಿಂದ ಸಿಟ್ಟಾದ ವಿಜಯ್, ಕೂಡಲೇ ಭದ್ರತೆಯವನನ್ನು ಬೈದು ಪಕ್ಕಕ್ಕೆ ಸರಿಯುವಂತೆ ಹೇಳಿದ್ದಾರೆ. ವಿಡಿಯೋ ನೋಡಿ…
ಅಭಿಷೇಕ್ ಬಚ್ಚನ್ (Abhishek Bachchan), ಬಾಲಿವುಡ್ನ ಆರಕ್ಕೇರದ ಮೂರಕ್ಕಿಳಿಯದ ನಟ. ಒಳ್ಳೆಯ ನಟರಾಗಿದ್ದರೂ ಸಹ ತಂದೆ ಹಾಗೂ ಪತ್ನಿಯ ಯಶಸ್ಸು ಮತ್ತು ಜನಪ್ರಿಯತೆಯ ಎದುರು ಮಂಕಾಗಿಬಿಟ್ಟರು. ಈಗಲೂ ಸಹ ಅಭಿಷೇಕ್ ಬಚ್ಚನ್ ಅವರು ಎಷ್ಟೇ ಒಳ್ಳೆಯ ನಟನೆ ಮಾಡಿದರೂ ತಂದೆಯೊಟ್ಟಿಗೆ ಹೋಲಿಸಿ ನೋಡಿ, ಅಭಿಷೇಕ್ ಅನ್ನು ಕಡೆಗಣಿಸುತ್ತಾರೆ ಪ್ರೇಕ್ಷಕರು. ಅಮಿತಾಬ್ ಬಚ್ಚನ್ ಮಗನಾಗಿದ್ದೇ ಅಭಿಷೇಕ್ಗೆ ಒಂದು ರೀತಿ ಶಾಪವೂ ಆಗಿಬಿಟ್ಟಿದೆ. ಇನ್ನು ಅವರ ಪತ್ನಿ ಐಶ್ವರ್ಯಾ ರೈಗೂ ಸಹ ದೊಡ್ಡ ಯಶಸ್ಸು, ಜನಪ್ರಿಯತೆ ಇದೆ. ಪತ್ನಿಯ ಜನಪ್ರಿಯತೆ ಬಗ್ಗೆ ಅಭಿಷೇಕ್ ಅಸೂಯೆ ಪಡುತ್ತಾರೆ ಎಂಬ ಸುದ್ದಿಯೂ ಸಹ ಹಿಂದೆ ಹರಿದಾಡಿತ್ತು.
ಇತ್ತೀಚೆಗಿನ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಅವರಿಗೆ ಇದೇ ಪ್ರಶ್ನೆ ಎದುರಾಯ್ತು, ಇದಕ್ಕೆ ಸ್ಪಷ್ಟ ಉತ್ತರ ನೀಡಿದ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಅವರ ಯಶಸ್ಸಿನ ಬಗ್ಗೆ ತಮಗೆ ಎಂದಿಗೂ ಅಸೂಯೆ ಅನಿಸಿಲ್ಲ ಎಂದು ಅಭಿಷೇಕ್ ಸ್ಪಷ್ಟಪಡಿಸಿದರು. ‘ಯಾರಾದರೂ ತಮ್ಮ ಸಂಗಾತಿಯ ಯಶಸ್ಸಿನ ಬಗ್ಗೆ ಹೆಮ್ಮೆಪಡಬೇಕೇ ಹೊರತು ಅಸೂಯೆಯನ್ನಲ್ಲ’ ಎಂದು ಅವರು ತಿಳಿಸಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳೂ ಸಹ ಹರಿದಾಡಿದ್ದವು. ಇದೀಗ ಅಭಿಷೇಕ್ ಬಚ್ಚನ್ ಅವರ ಉತ್ತರದಿಂದ ಆ ವದಂತಿಗಳಿಗೂ ಪೂರ್ಣ ವಿರಾಮ ಬಿದ್ದಂತಾಗಿದೆ.
ಅಮಿತಾಬ್ ಬಚ್ಚನ್ ಅವರ ಜನಪ್ರಿಯತೆಯ ಭಾರ ತಮ್ಮ ಮೇಲೆ ಬಿದ್ದ ಬಗ್ಗೆಯೂ ಮಾತನಾಡಿರುವ ಅಭಿಷೇಕ್ ಬಚ್ಚನ್, ‘ಅಮಿತಾಭ್ ಬಚ್ಚನ್ ಅವರಂತಹ ದಿಗ್ಗಜ ನಟನ ಮಗನಾಗಿರುವುದರಿಂದ ಅವರ ಸ್ಥಾನವನ್ನು ತುಂಬುವ ಮತ್ತು ಜನರ ನಿರೀಕ್ಷೆಗಳನ್ನು ತಲುಪುವ ಒತ್ತಡ ಸದಾ ಇರುತ್ತದೆ. ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಪ್ರತಿಭೆ ಮತ್ತು ಯಶಸ್ಸಿನ ಹಾದಿ ಇರುತ್ತದೆ. ಐಶ್ವರ್ಯಾ ತಮ್ಮ ವೃತ್ತಿಜೀವನದಲ್ಲಿ ಸಾಧಿಸಿರುವುದು ದೊಡ್ಡ ಮಟ್ಟದ್ದು ಮತ್ತು ಅದನ್ನು ತಾನು ಗೌರವಿಸುತ್ತೇನೆ’ ಎಂದು ಅಭಿಷೇಕ್ ಹೇಳಿದ್ದಾರೆ.
ಅಭಿಷೇಕ್ ಬಚ್ಚನ್, ಕಮರ್ಶಿಯಲ್, ಆರ್ಟ್. ಮಾಸ್ ಮಸಾಲ, ಕಾಮಿಡಿ, ಗಂಭೀರ ಪಾತ್ರಗಳು, ವಿಲನ್, ಐತಿಹಾಸಿಕ ಎಲ್ಲ ರೀತಿಯ ಪಾತ್ರಗಳಲ್ಲೂ ಸಹ ನಟಿಸಿದ್ದಾರೆ. ಎಲ್ಲ ರೀತಿಯ ಪಾತ್ರಗಳನ್ನೂ ಅದ್ಭುತವಾಗಿ ನಿಭಾಯಿಸುತ್ತಾರೆ. ಆದರೆ ಬಾಲಿವುಡ್ನ ಇತರೆ ನಟರ ರೀತಿ ಅವರಿಗೆ ದೊಡ್ಡ ಯಶಸ್ಸು ಮತ್ತು ಜನಪ್ರಿಯತೆ ಧಕ್ಕಿಲ್ಲ. ಇದೀಗ ಅಭಿಷೇಕ್ ಬಚ್ಚನ್ ಅವರು ‘ಶಿವಾಜಿ’ ಕುರಿತ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.
ಬೆಂಗಳೂರು, ಏಪ್ರಿಲ್ 04: ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರಿಗೆ 42ನೇ ಎಸಿಎಂಎಂ ಕೋರ್ಟ್ ಬಿಗ್ ಶಾಕ್ ನೀಡಿದೆ. 2018ರ ಎಲೆಕ್ಷನ್ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಸಂಬಂಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಚುನಾವಣೆ ವೇಳೆ ಮತದಾರರಿಗೆ ಆಮಿಷ ಕೇಸ್ ಸಂಬಂಧ ಕಾಂಗ್ರೆಸ್ ನಾಯಕನ ವಿರುದ್ಧ ಅಬಕಾರಿ ಕಾಯ್ದೆ, ಐಪಿಸಿ ಅಡಿ ಕೇಸ್ ದಾಖಲಾಗಿತ್ತು. ಆದರೆ ಪ್ರಕರಣ ಸಂಬಂಧ ಕೋರ್ಟ್ ವಿಚಾರಣೆಗೆ ಹಾಜರಾಗದೇ ಶಾಸಕರು ಗೈರಾಗಿರುವ ಹಿನ್ನಲೆ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ಪ್ರಕರಣ ಏನು?
2018ರ ವಿಧಾನಸಭಾ ಎಲೆಕ್ಷನ್ ಸಂದರ್ಭ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರಾಮನಗರ ತಾಲೂಕಿನ ಬಸವನಪುರ ಗ್ರಾಮದ ಬಳಿ ಇರುವ ಹೀಲ್ ವ್ಯೂ ರೆಸಾರ್ಟ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಹೆಚ್. ಸಿ. ಬಾಲಕೃಷ್ಣ ನಡೆಸಿದ್ದರು. ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ತಹಶೀಲ್ದಾರ್ ವಿಷಯವನ್ನು ಫ್ಲೈಯಿಂಗ್ ಸ್ಕ್ಯಾಡ್‌ಗೆ ತಿಳಿಸಿದ್ದರು. ಆ ಮಾಹಿತಿ ಆಧರಿಸಿ ಅಬಕಾರಿ ಸಬ್ ಇನ್ಸ್‌ಕ್ಟರ್ ಸಮೇತ ಸ್ಥಳಕ್ಕೆ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿ ಭೇಟಿ ನೀಡಿದ್ದು, ಈ ವೇಳೆ ವೇದಿಕೆ ಮೇಲೆ ಹೆಚ್.ಸಿ.ಬಾಲಕೃಷ್ಣ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದು ಕಂಡಿತ್ತು. ಈ ಕಾರ್ಯಕ್ರಮ ಆಯೋಜನೆ ಮಾಡಲು ಸಂಬಂಧಪಟ್ಟ ಚುನಾವಣೆ ಅಧಿಕಾರಿಯಿಂದ ಯಾವುದೇ ಅನುಮತಿಯನ್ನು ಪಡೆಯದ ಕಾರಣ ಪ್ರಕರಣ ದಾಖಲಾಗಿತ್ತು.
ಅಲ್ಲದೆ, ಹಿಲ್ ವ್ಯೂನ ರೆಸಾರ್ಟ್‌ನಲ್ಲಿ ಪರವಾನಿಗೆ ಇಲ್ಲದೆ ಮದ್ಯಪಾನಕ್ಕೆ ವ್ಯವಸ್ಥೆಯನ್ನೂ ಮಾಡಿದ್ದ ಕಾರಣ ರೆಸಾರ್ಟ್ ಮಾನೇಜರ್ ವಿರುದ್ಧವೂ ಕ್ರಮ ಜರುಗಿಸುವಂತೆ ರಾಮನಗರ ರೂರಲ್ ಪೊಲೀಸ್ ಠಾಣೆಯಲ್ಲಿ ಕಲಂ 34 ಐಪಿಸಿ, ಕಲಂ 171(E) RP Act ಹಾಗೂ ಕಲಂ 34, 38(A) K.E Act-1965 ಅಡಿ ಪ್ರಕರಣ ದಾಖಲಾಗಿದ್ದು, ಈ ಕೇಸ್ನ ವಿಚಾರಣೆಯು 42ನೇ ಎಸಿಎಂಎಂ ಕೋರ್ಟ್ನಲ್ಲಿ ನಡೆಯುತ್ತಿತ್ತು. ಆದರೆ ಹಾಲಿ ಶಾಸಕ ಬಾಲಕೃಷ್ಣ ವಿಚಾರಣೆಗೆ ಬಾರದ ಕಾರಣ ನ್ಯಾಯಾಲಯವೀಗ ಬಿಸಿ ಮುಟ್ಟಿಸಿದೆ.
ಕೋಲಾರ, ಏಪ್ರಿಲ್ 04: ಬಿರು ಬೇಸಿಗೆ ಆರಂಭವಾಗುತ್ತಿದ್ದಂತೆ ಆಹಾರ ಮತ್ತು ನೀರಿನ ಅಭಾವದಿಂದ ಆಕ್ರೋಶಗೊಂಡ ಕೋತಿಗಳು (monkeys) ಪ್ರವಾಸಿಗರು ಮತ್ತು ಭಕ್ತರ ಮೇಲೆ ದಾಳಿ ನಡೆಸಿ 15ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸುವಂತಹ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಹೊರವಲಯದಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಅಂತರಗಂಗೆ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಕೋತಿಗಳ ದಾಳಿಗೆ ಒಳಗಾದ ಭಕ್ತರು ಮತ್ತು ಪ್ರವಾಸಿಗರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಬರದ ನಾಡು ಕೋಲಾರಕ್ಕೆ ಈ ಬಾರಿ ಉತ್ತಮ ಮಳೆಯಾಗಿದ್ದರೂ ಸದ್ಯ ಬಿರು ಬಿಸಿಲು ನೆತ್ತಿ ಸುಡುತ್ತಿದೆ. ಪರಿಣಾಮ ಮಿತಿಮೀರಿದ ತಾಪಮಾನದಿಂದ ತತ್ತರಿಸಿ ಹೋಗಿರುವ ಜನರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮನುಷ್ಯರ ಸ್ಥಿತಿ ಹೀಗಿದ್ದರೆ ಪ್ರಾಣಿಗಳ ಪರಿಸ್ಥಿತಿ ಊಹಿಸಿಕೊಳ್ಳುವುದು ಕಷ್ಟ ಸಾಧ್ಯ. ಅದರಲ್ಲೂ ಕೋಲಾರದ ಪ್ರಸಿದ್ಧ ಯಾತ್ರಾ ಸ್ಥಳವಾದ ಅಂತರಗಂಗೆಯ ಬೆಟ್ಟದಲ್ಲಿರುವ ಸಾವಿರಾರು ಕೋತಿಗಳದ್ದು ಹೇಳತೀರದ ಪರಿಸ್ಥಿತಿ.
ಬಿಸಿಲ ಬೇಗೆ ಬರಗಾಲ ಇಲ್ಲಿನ ಪ್ರಾಣಿಗಳಿಗೆ ಕುಡಿಯಲು ನೀರಿಲ್ಲದೆ, ತಿನ್ನಲು ಅನ್ನವಿಲ್ಲದೆ ಹಸಿವೆಯಿಂದ ಸಾಯುವ ಸ್ಥಿತಿ ತಲುಪಿವೆ. ಪರಿಣಾಮ ಅನ್ನ, ನೀರು ಸಿಗದೆ ಕೆಲವು ಅಸ್ವಸ್ಥವಾಗಿದ್ದರೆ ಮತ್ತೆ ಕೆಲವು ಪ್ರವಾಸಿಗರ ಮೇಲೆ ದಾಳಿ ಮಾಡಿ ಅವರ ಬಳಿ ಇರುವ ಬ್ಯಾಗ್‌ಗಳನ್ನ ಕಸಿದುಕೊಳ್ಳುತ್ತಿವೆ. ಈಗಾಗಲೆ 15ಕ್ಕೂ ಹೆಚ್ಚು ಜನರನ್ನ ತೀವ್ರವಾಗಿ ಕಚ್ಚಿ ಗಾಯಗೊಳಿಸಿರುವ ವಾನರ ಸೇನೆ ಮಾತ್ರ ಕ್ರೂರಿಗಳಂತೆ ವರ್ತಿಸಲು ಆರಂಭಿಸಿವೆ. ವ್ಯಾಪಾರ ಮಾಡುವ ಮಹಿಳೆ ಅಶ್ವಿನಿ, ಪ್ರವಾಸಿಗರಾದ ಭವ್ಯ, ಸಂದ್ಯ ಹಾಗೂ ಮಿತ್ರ ಶ್ರೀನಾಥ್ ಎಂಬುವವರ ಮೇಲೆ ದಾಳಿ ಮಾಡಿವೆ.
ಪ್ರವಾಸಿಗರೇ ಟಾರ್ಗೆಟ್
ಇನ್ನು ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿರುವ ಅಂತರಗಂಗೆಯಲ್ಲಿ ಸಾವಿರಾರು ಕೋತಿಗಳು ಬೆಟ್ಟದಲ್ಲಿ ವಾಸವಿವೆ. ಪ್ರತಿ ವರ್ಷ ಬೇಸಿಗೆ ಬಂದರೆ ಸಾಕು ಇಲ್ಲಿನ ವಾನರ ಸೈನ್ಯಕ್ಕೆ ನೀರು, ಆಹಾರದ ಸಮಸ್ಯೆ ತಲೆ ದೂರುತ್ತೆ. ಕೆಲ ಕೋತಿಗಳು ಪ್ರವಾಸಿಗರನ್ನು ಕಾಡಿ, ಬೇಡಿ ಜೀವ ಉಳಿಸಿಕೊಂಡರೆ ಮತ್ತೆ ಕೆಲವು ಜನರ ಮೇಲೆ ಮೃಗಗಳಂತೆ ವರ್ತಿಸುತ್ತಾ ಗಾಯಗೊಳಿಸಿವೆ. ಮತ್ತೆ ಕೆಲ ಕೋತಿಗಳು ಇಲ್ಲಿಗೆ ಬರುವ ಪ್ರವಾಸಿಗರ ಕೈಕಾಲು ಹಿಡಿದು ಕೊಟ್ಟ ತಿಂಡಿ ತಿನಿಸು ತಿಂದು ಬದುಕುತ್ತಿವೆ. ಅನ್ನ, ನೀರು ಇಲ್ಲದೆ ವಾರದಲ್ಲಿ ಎರಡ್ಮೂರು ದಿನ ಮಾರುಕಟ್ಟೆಯಿಂದ ಕೆಲವು ದಾನಿಗಳು ಹಣ್ಣು, ತರಕಾರಿಗಳನ್ನ ತಂದುಕೊಡುವುದು ವಾಡಿಕೆ.
ಹಣ್ಣಿನ ಗಿಡ-ಮರ ಬೆಳೆಸುವಂತೆ ಆಗ್ರಹ
ಇನ್ನು ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗಾಗಿ ಮಾಡಿದ ಕೋಟ್ಯಂತರ ರೂಪಾಯಿ ಯೋಜನೆಗಳು ಮಾತ್ರ ಪುಸ್ತಕದಲ್ಲಿ ಇದೆ. ಬದಲಾಗಿ ಇಲ್ಲಿನ ಕೆಲವು ಪ್ರಾಣಿ ಪ್ರಿಯರು ಈ ಕೋತಿಗಳ ಪರಿಸ್ಥಿತಿಯನ್ನು ನೋಡಲಾಗದೆ ಆಗಾಗ ಮುದ್ದೆ, ತರಕಾರಿ, ಹಣ್ಣುಗಳನ್ನು ನೀಡುತ್ತಿದ್ದಾರೆ. ಅದನ್ನು ಹೊರತು ಪಡಿಸಿದರೆ ಕೋತಿಗಳಿಗೆ ಹೊಟ್ಟೆಗೆ ತಣ್ಣೀರು ಬಟ್ಟೆನೇ ಗತಿ ಎನ್ನುವಂತ್ತಾಗಿದ್ದು, ಅರಣ್ಯ ಇಲಾಖೆ ಬೆಟ್ಟದಲ್ಲಿ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗುವ ಮರ, ಗಿಡಗಳನ್ನ ಬೆಳೆಸಬೇಕಿದೆ. ಹಣ್ಣು ಸಿಗುವ ಗಿಡಮರಗಳನ್ನ ಬೆಳೆಸಬೇಕು ಹಾಗೂ ಅವುಗಳಿಗೆ ಸರಿಯಾದ ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರಾದ ರವಿ ಅವರ ಮಾತು.
ಒಟ್ಟಾರೆ ನೂರಾರು ದೇವಾಲಯಗಳನ್ನು ನಿರ್ಮಾಣ ಮಾಡಿ ಹನುಮಂತನಿಗೆ ಪೂಜೆ ಮಾಡುವ ನಮ್ಮ ಜನರು, ಹನುಮಂತನ ಪ್ರತಿರೂಪ ಎಂದು ಹೇಳಲಾಗುವ ಈ ಕೋತಿಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಇನ್ನಾದರೂ ಪ್ರಾಣಿ ಪ್ರಿಯರು, ಜಿಲ್ಲಾಡಳಿತ ಈ ಕೋತಿಗಳ ಹಸಿವು ನೀಗಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ.
ತಿರುವಲ್ಲಾ, ಏಪ್ರಿಲ್ 4: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಪುದುಚೆರಿಗೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು ಇಂದು ಕೇರಳಕ್ಕೆ (ಕೇರಳಂ) ತೆರಳಿದ್ದಾರೆ. ಕೇರಳದ ತಿರುವಲ್ಲಾದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ ನಡೆಸಿದ್ದಾರೆ. ಎಡ ಮತ್ತು ಕಾಂಗ್ರೆಸ್ ವಿರುದ್ಧ ನಡೆದ ವಾಗ್ದಾಳಿಯ ನಂತರ ಪ್ರಧಾನಿ ಮೋದಿ ಕೇರಳದಲ್ಲಿ ಬೃಹತ್ ರೋಡ್ ಶೋ ನಡೆಸಿದ್ದಾರೆ.
“ತಿರುವಲ್ಲಾದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ ಜನರು ಎನ್‌ಡಿಎ ಮೇಲಿನ ನಿಮ್ಮ ನಂಬಿಕೆಯನ್ನು ತೋರಿಸುತ್ತಿದೆ. ನನ್ನ ತಾಯಂದಿರು ಮತ್ತು ಸಹೋದರಿಯರು ತೋರಿಸಿದ ಪ್ರೀತಿ ಮತ್ತು ವಿಶ್ವಾಸವು ಇಂದು ಕೇರಳದಾದ್ಯಂತ ಇದೇ ರೀತಿಯ ವಾತಾವರಣವನ್ನು ಪ್ರತಿಬಿಂಬಿಸುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಾಲ್ಡಾ, ಏಪ್ರಿಲ್ 4: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಹೆಲಿಕಾಪ್ಟರ್ ಹತ್ತುವ ಕೆಲವೇ ಕ್ಷಣಗಳ ಮೊದಲು ಆಗಸದಲ್ಲಿ ಅನುಮಾನಾಸ್ಪದ ಡ್ರೋನ್ ಕಾಣಿಸಿಕೊಂಡಿದೆ. ಇದರಿಂದ ಭದ್ರತಾ ಭೀತಿ ಆವರಿಸಿತು. ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ ನಂತರ ಮಾಲ್ಡಾದ ಮಾಲತಿಪುರದಿಂದ ಗಜೋಲ್‌ಗೆ ತೆರಳುತ್ತಿದ್ದಾಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಡ್ರೋನ್ ಕಾಣಿಸಿಕೊಂಡಿತು. ಈ ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಗರ್ಭಧಾರಣೆಯ ಕೊನೆಯ ಹಂತ ತಾಯಿ ಮತ್ತು ಮಗುವಿಗೆ ಅತ್ಯಂತ ಮುಖ್ಯವಾದ ಸಮಯವಾಗಿರುತ್ತದೆ. ಈ ಅವಧಿಯಲ್ಲಿ ದೇಹದಲ್ಲಿ ವೇಗವಾಗಿ ಹಾರ್ಮೋನಲ್ ಬದಲಾವಣೆಗಳು ನಡೆಯುತ್ತವೆ. ಇದರಿಂದ ದಣಿವು, ದುರ್ಬಲತೆ ಮತ್ತು ಭಾವನಾತ್ಮಕ ಏರಿಳಿತಗಳು ಕಾಣಿಸಬಹುದು. ಆದ್ದರಿಂದ ಡಿಲಿವರಿ ಮೊದಲು ಗರ್ಭಿಣಿಯರು (Pregnant Women) ತಮ್ಮ ಆರೋಗ್ಯದ ಕಡೆ ವಿಶೇಷ ಗಮನ ಹರಿಸುವುದು ಅತ್ಯಗತ್ಯ. ತಜ್ಞರ ಪ್ರಕಾರ, ಈ ಸಮಯದಲ್ಲಿ ತಾಯಿಯ ಆರೋಗ್ಯ ಮಗುವಿನ ಬೆಳವಣಿಗೆ ಮತ್ತು ಜನನದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಸರಿಯಾದ ಆರೈಕೆ, ಪೌಷ್ಟಿಕ ಆಹಾರ ಮತ್ತು ಉತ್ತಮ ಜೀವನಶೈಲಿ ಬಹಳ ಮುಖ್ಯವಾಗುತ್ತದೆ. ಹಾಗಾದರೆ ಡಿಲಿವರಿ ಮೊದಲು ಯಾವ ರೀತಿಯ ವಿಷಯಗಳು ಮುಖ್ಯವಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಡಿಲಿವರಿ ಮೊದಲು ಗಮನಿಸಬೇಕಾದ ವಿಷಯಗಳು:
ಪೌಷ್ಟಿಕ ಆಹಾರ ಸೇವನೆ: ಪ್ರೋಟೀನ್, ಐರನ್ ಮತ್ತು ಕ್ಯಾಲ್ಸಿಯಂಯುಕ್ತ ಆಹಾರವನ್ನು ಸೇವಿಸಬೇಕು ಸಾಕಷ್ಟು ನೀರು ಕುಡಿಯುವುದು: ದೇಹವನ್ನು ಹೈಡ್ರೇಟ್ ಆಗಿರಿಸಬೇಕು ನಿಯಮಿತ ವೈದ್ಯಕೀಯ ತಪಾಸಣೆ: ವೈದ್ಯರು ನೀಡಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಲಘು ವ್ಯಾಯಾಮ: ವಾಕಿಂಗ್ ಮಾಡುವುದು ಅಥವಾ ಸಣ್ಣ ವ್ಯಾಯಾಮಗಳನ್ನು ವೈದ್ಯರ ಸಲಹೆಯಂತೆ ಪಾಲಿಸಬೇಕು ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ: ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಬೇಕು ಅಗತ್ಯ ಸಾಮಗ್ರಿ ಸಿದ್ಧತೆ: ಡಿಲಿವರಿ ಸಮಯಕ್ಕೆ ಬೇಕಾದ ವಸ್ತುಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಬೇಕು
ಡಿಲಿವರಿ ಮೊದಲು ಮಾನಸಿಕವಾಗಿ ಸಿದ್ಧರಾಗಿರುವುದು ಬಹಳ ಮುಖ್ಯ. ಕುಟುಂಬದ ಬೆಂಬಲ ಮತ್ತು ಪಾಸಿಟಿವ್ ವಾತಾವರಣ ಗರ್ಭಿಣಿಗೆ ಆತ್ಮವಿಶ್ವಾಸ ನೀಡುತ್ತದೆ. ಆಸ್ಪತ್ರೆ ಮತ್ತು ವೈದ್ಯರನ್ನು ಮುಂಚಿತವಾಗಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಅದೇ ರೀತಿ ಅಗತ್ಯ ದಾಖಲೆಗಳನ್ನು ಮೊದಲೇ ಸಿದ್ಧವಾಗಿಟ್ಟುಕೊಳ್ಳಬೇಕು. ಡಿಲಿವರಿ ಲಕ್ಷಣಗಳ ಬಗ್ಗೆ ತಿಳಿದಿರುವುದು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹೋಗುವುದಕ್ಕೆ ಸಹಾಯ ಮಾಡುತ್ತದೆ. ಒಟ್ಟಿನಲ್ಲಿ, ಸರಿಯಾದ ಮಾಹಿತಿ, ಉತ್ತಮ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಡಿಲಿವರಿ ಪ್ರಕ್ರಿಯೆಯನ್ನು ಸುರಕ್ಷಿತ ಮತ್ತು ಸುಲಭವಾಗಿಸಬಹುದು.
ನವದೆಹಲಿ, ಏಪ್ರಿಲ್ 4: ಕೇರಳದಲ್ಲಿ ವಿಧಾನಸಭಾ ಚುನಾವಣೆ (Keralam Assembly Elections) ನಡೆಯಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿ (PM Modi) ತಿರುವಲ್ಲಾದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. “ಪಶ್ಚಿಮ ಏಷ್ಯಾದ ದೇಶಗಳು ಭಾರತವನ್ನು ತಮ್ಮ ಶತ್ರುವೆಂದು ಪರಿಗಣಿಸಬೇಕೆಂದು ಕಾಂಗ್ರೆಸ್ ಬಯಸುತ್ತದೆ. ಅದೇ ಕಾರಣದಿಂದ ಕಾಂಗ್ರೆಸ್ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ. ನಾವು ಇಲ್ಲಿ ಅಂತಹ ಹೇಳಿಕೆ ನೀಡಿದರೆ ಭಾರತೀಯರನ್ನು ಗಲ್ಫ್ ದೇಶಗಳಿಂದ ಹೊರಹಾಕಲಾಗುತ್ತದೆ. ಅದೇ ಕಾರಣದಿಂದ ಕಾಂಗ್ರೆಸ್ ಪಕ್ಷವು ಗಲ್ಫ್ ರಾಷ್ಟ್ರಗಳನ್ನು ಕೆರಳಿಸುವ ಹೇಳಿಕೆಗಳನ್ನು ನೀಡುತ್ತಿದೆ” ಎಂದು ಮೋದಿ ಟೀಕಿಸಿದ್ದಾರೆ.
“ರಾಜಕೀಯ ಒಂದೇ ಮುಖ್ಯವಲ್ಲ. ಚುನಾವಣೆಗಳು ಬರುತ್ತವೆ ಹೋಗುತ್ತವೆ, ನನಗೆ ಕೇರಳದ ಜನರ ಸುರಕ್ಷತೆಯೇ ಪ್ರಮುಖ ಆದ್ಯತೆ. ನಾನು ಅದಕ್ಕೆ ಬದ್ಧನಾಗಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದರು. ಕೇರಳದಲ್ಲಿ ಅಧಿಕಾರದಲ್ಲಿರುವ ಸರ್ಕಾರವಾದ ಎಲ್‌ಡಿಎಫ್ ಮೇಲೆಯೂ ಅವರು ತೀವ್ರ ವಾಗ್ದಾಳಿ ನಡೆಸಿದರು. ಮುಂಬರುವ ಮೇ 4ರಂದು ನಡೆಯುವ ಚುನಾವಣೆ ದಶಕಗಳ ದುರಾಡಳಿತದ ಅಂತ್ಯವನ್ನು ಸೂಚಿಸಲಿದೆ. ಈ ಬಾರಿ ಕೇರಳದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ಅವರು ಹೇಳಿದರು.
ಎಲ್ಡಿಎಫ್ ಸರ್ಕಾರದ ನಿರ್ಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂಬುದು ಖಚಿತ. ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ-ಎನ್‌ಡಿಎ ಸರ್ಕಾರ ರಚನೆಯಾಗಲಿದೆ. ಕೇರಳದ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಸಿಲುಕಿಕೊಂಡಿದೆ. ಈ ಬಾರಿ ಕೇರಳದ ಜನರು ಎರಡೂ ಪಕ್ಷಗಳನ್ನು ಅಧಿಕಾರದಿಂದ ದೂರ ಇಡುತ್ತಾರೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
Keralam stands with the BJP-NDA. It rejects the LDF and UDF’s empty promises. Addressing a huge public meeting in Thiruvalla. https://t.co/DK5Z9rSfSw
ಎಲ್‌ಡಿಎಫ್-ಯುಡಿಎಫ್ ಸರ್ಕಾರಗಳು ಈ ಪ್ರದೇಶದ ಬಗ್ಗೆ ಎಂದಿಗೂ ಕಾಳಜಿ ವಹಿಸಿಲ್ಲ. ಸಂಪರ್ಕ ರಸ್ತೆಗಳು ಭಯಾನಕ ಸ್ಥಿತಿಯಲ್ಲಿವೆ. ವರ್ಷಗಳಲ್ಲಿ ಒಂದೇ ಒಂದು ಪ್ರಮುಖ ಸೇತುವೆಯನ್ನು ನಿರ್ಮಿಸಿಲ್ಲ. ವೈದ್ಯಕೀಯ ಕಾಲೇಜು ಕೆಟ್ಟ ಸ್ಥಿತಿಯಲ್ಲಿದೆ. ಮೂಲಭೂತ ಮೂಲಸೌಕರ್ಯಗಳ ಕೊರತೆಯಿರುವ ಈ ಪ್ರದೇಶದ ಜೀವನ ಮಟ್ಟವನ್ನು ಯಾರಾದರೂ ಊಹಿಸಬಹುದು. ಈ ಎಲ್ಲಾ ವಿಷಯಗಳ ಕುರಿತು ಕೆಲಸ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ