RCB vs SRH: ಈ ಅತ್ಯದ್ಭುತ ಕ್ಯಾಚ್ ಹಿಡಿದ ಸಾಲ್ಟ್ಗೊಂದು ಸಲಾಂ ಹೊಡೆಯಲೇಬೇಕು
ಐಪಿಎಲ್ 2026 ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್ಸಿಬಿ ಆಟಗಾರ ಫಿಲ್ ಸಾಲ್ಟ್ ತಮ್ಮ ಅಮೋಘ ಫಿಲ್ಡಿಂಗ್ ಪ್ರದರ್ಶನದ ಮೂಲಕ ಮೊದಲ ಪಂದ್ಯವನ್ನೇ ರೋಮಾಂಚನಗೊಳಿಸಿದರು. ಒಂದಲ್ಲ, ಎರಡಲ್ಲ.. ಈ ಪಂದ್ಯದಲ್ಲಿ ಸಾಲ್ಟ್ ಹಿಡಿದಿದ್ದು ಬರೋಬ್ಬರಿ 3 ಕ್ಯಾಚ್ಗಳು. ಈ ಮೂರು ಕ್ಯಾಚ್ಗಳು ಅಷ್ಟು ಸುಲಭದ ತುತ್ತಾಗಿರಲಿಲ್ಲ. ಹಾಗಿದ್ದರೂ ಫಿಲ್ ಸಾಲ್ಟ್ ಈ ಮೂರು ಕ್ಯಾಚ್ಗಳನ್ನು ಹಿಡಿದು ಎಸ್ಆರ್ಎಚ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅದರಲ್ಲೂ…