U19 Asia Cup 2025: 41 ಬೌಂಡರಿ, 19 ಸಿಕ್ಸರ್, 471 ರನ್..! ಇತಿಹಾಸ ಸೃಷ್ಟಿಸಿದ ಪಾಕ್ ಬ್ಯಾಟ್ಸ್‌ಮನ್
2025 ರ ಅಂಡರ್-19 ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಯುವ ಆರಂಭಿಕ ಬ್ಯಾಟ್ಸ್‌ಮನ್ ಸಮೀರ್ ಮಿನ್ಹಾಸ್ ಭಾರತದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 113 ಎಸೆತಗಳನ್ನು ಎದುರಿಸಿದ ಮಿನ್ಹಾಸ್, 152.21 ರ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ 172 ರನ್ಗಳ ಇನ್ನಿಂಗ್ಸ್ ಆಡಿದರು, ಇದರಲ್ಲಿ 17 ಬೌಂಡರಿಗಳು ಮತ್ತು 9 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ ಸಮೀರ್ ಮಿನ್ಹಾಸ್ ಅಂಡರ್-19 ಏಷ್ಯಾ ಕಪ್‌ನ ಫೈನಲ್‌ನಲ್ಲಿ ಅತಿದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆಯನ್ನು ನಿರ್ಮಿಸಿದರು. ಇದಕ್ಕೂ ಮೊದಲು, ಅಂಡರ್-19 ಏಷ್ಯಾಕಪ್‌ನ…