All posts by nagaraj11081993

ಫಾಕ್ಸ್​ಕಾನ್ ಘಟಕ; ಕರ್ನಾಟಕ ಮಾದರಿ ಎಂದ ರಾಹುಲ್ ಗಾಂಧಿ; ಇದು ಮೇಕ್ ಇನ್ ಇಂಡಿಯಾ ಎಫೆಕ್ಟ್ ಎಂದ ಕೇಂದ್ರ ಸಚಿವ – Kannada News | On Foxconn, Rahul Gandhi says Karnataka set an Example, union minister Vaishnaw gives cheeky reply

ನವದೆಹಲಿ, ಡಿಸೆಂಬರ್ 25: ಬೆಂಗಳೂರಿನ ಬಳಿ ಫಾಕ್ಸ್​ಕಾನ್ ಬೃಹತ್ ಘಟಕ ಸ್ಥಾಪಿಸಿ 9 ತಿಂಗಳಲ್ಲಿ 30,000 ಮಂದಿಯನ್ನು ನೇಮಕಾತಿ ಮಾಡಿಕೊಂಡ ಸುದ್ದಿಯನ್ನು ಹಂಚಿಕೊಂಡು, ಕರ್ನಾಟಕದ ಮಾದರಿ ಹಾಕಿಕೊಟ್ಟಿದೆ ಎಂದಿದ್ದ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇದು ಮೇಕ್ ಇನ್ ಇಂಡಿಯಾ ಯೋಜನೆ ಫಲ ಎಂದು ನೆನಪಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾವನ್ನು ಗುರುತಿಸಿದ್ದಕ್ಕೆ ಧನ್ಯವಾದ ಎಂದು ರಾಹುಲ್ ಗಾಂಧಿಗೆ (Rahul Gandhi) ಪರೋಕ್ಷವಾಗಿ ಟಾಂಟ್ ಕೊಟ್ಟಿದ್ದಾರೆ ಕೇಂದ್ರ ಸಚಿವರು.

ರಾಹುಲ್ ಗಾಂಧಿ ಹೇಳಿದ್ದೇನು?

‘ಕೇವಲ 8-9 ತಿಂಗಳಲ್ಲಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಈವರೆಗೂ ಇಷ್ಟು ವೇಗದಲ್ಲಿ ಫ್ಯಾಕ್ಟರಿ ನೇಮಕಾತಿ ಆಗಿದ್ದಿಲ್ಲ. ಇದು ಕೇವಲ ಅಂಕಿ ಅಂಶ ಅಲ್ಲ. ಪರಿವರ್ತನಾತ್ಮಕ ಉದ್ಯೋಗ ಸೃಷ್ಟಿ ಇದು. ಈ ಘಟಕದಲ್ಲಿ ಶೇ. 80ರಷ್ಟು ಮಹಿಳೆಯರೇ ಇರುವುದು, ಅದರಲ್ಲೂ 19-24ರ ವಯಸ್ಸಿನಲ್ಲಿರುವ, ಮೊದಲ ಬಾರಿಗೆ ಕೆಲಸ ಮಾಡುತ್ತಿರುವ ಯುವತಿಯರೇ ಇದ್ದಾರೆ. ಹೀಗಾಗಿ, ಈ ಉದ್ಯೋಗಸೃಷ್ಟಿ ಇನ್ನೂ ಪ್ರಬಲವೆನಿಸುತ್ತದೆ’ ಎಂದು ಕಾಂಗ್ರೆಸ್ ನಾಯಕ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

‘ಈ ಮಟ್ಟದಲ್ಲಿ ಮತ್ತು ವೇಗದಲ್ಲಿ ಉತ್ಪಾದನಾ ವಲಯ ಬೆಳೆಯಬಲ್ಲಂತಹ ಇಕೋಸಿಸ್ಟಂ ಅನ್ನು ನಿರ್ಮಿಸುವ ಮೂಲಕ ಕರ್ನಾಟಕವು ಒಂದು ಮಾದರಿ ಹಾಕಿಕೊಟ್ಟಿದೆ. ಗೌರವದ ಕೆಲಸ ಮತ್ತು ಸರ್ವರಿಗೂ ಅವಕಾಶ.. ಇಂಥ ಭಾರತವನ್ನು ನಾವು ಕಟ್ಟಬೇಕಿರುವುದು’ ಎಂದು ರಾಹುಲ್ ಗಾಂಧಿ ಕರೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನಿ ವೈಷ್ಣವ್, ‘ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸನ್ನು ಗುರುತಿಸಿದ್ದಕ್ಕೆ ಧನ್ಯವಾದ. ನೀವು ಗಮನಿಸಿದಂತೆ, ನಮ್ಮ ಪ್ರಧಾನಿಗಳ ದೃಷ್ಟಿಯಂತೆ ನಾವು ಉತ್ಪಾದಕ ಆರ್ಥಿಕತೆಯಾಗಿ ಬೆಳೆಯುತ್ತಿದ್ದೇವೆ’ ಎಂದಿದ್ದಾರೆ.

ಸಚಿವ ಅಶ್ವಿನಿ ವೈಷ್ಣವ್ ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: ಒಡಿಶಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಐವರು ನಕ್ಸಲರ ಹತ್ಯೆ

ದೇವನಹಳ್ಳಿ ಬಳಿ 300 ಎಕರೆ ಪ್ರದೇಶದಲ್ಲಿ ಫಾಕ್ಸ್​ಕಾನ್​ನ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಅನ್ನು ಸ್ಥಾಪಿಸಲಾಗಿದೆ. ಇಲ್ಲಿ 50,000 ಮಂದಿ ಉದ್ಯೋಗಿಗಳು ಕೆಲಸ ಮಾಡುವಷ್ಟು ವಿಶಾಲವಾಗಿದೆ. ವರ್ಷಕ್ಕೆ ಇಲ್ಲಿ ಎರಡು ಕೋಟಿ ಐಫೋನ್​ಗಳನ್ನು ಅಸೆಂಬ್ಲಿಂಗ್ ಮಾಡಬಹುದು. ಫಾಕ್ಸ್​ಕಾನ್ ಇಲ್ಲಷ್ಟೇ ಅಲ್ಲದೆ, ತಮಿಳುನಾಡಿನಲ್ಲಿ ಎರಡು ಘಟಕಗಳನ್ನು ಹೊಂದಿದೆ. ಆ್ಯಪಲ್ ಕಂಪನಿಯ ಐಫೋನ್​ಗಳನ್ನು ಭಾರತದಲ್ಲಿ ಫಾಕ್ಸ್​ಕಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಗಳು ಅಸೆಂಬ್ಲಿಂಗ್ ಮಾಡಿಕೊಡುತ್ತವೆ. ಚೀನಾದಲ್ಲಿ ಈಗಲೂ ಹೆಚ್ಚಿನ ಐಫೋನ್ ತಯಾರಿಕೆ ಆಗುತ್ತದಾದರೂ ಸದ್ಯ ಭಾರತದಲ್ಲಿ ತಯಾರಾಗುತ್ತಿರುವ ಐಫೋನ್​ಗಳ ಸಂಖ್ಯೆ ಶೇ. 20 ಮುಟ್ಟಿರುವುದು ಗಮನಾರ್ಹ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿಧಿಯ ಉಡುಗೆ ಜನರನ್ನು ಕೆರಳಿಸಿತು; ವಿವಾದಾತ್ಮಕ ಹೇಳಿಕೆ ಕೊಟ್ಟ ನಟ – Kannada News | Nidhi Agerwal Attire Row: Actor Shivaji Blames Victim, Sparks Outrage

ಹೈದರಾಬಾದ್‌ ಮಾಲ್​​ನಲ್ಲಿ ನಡೆದ ‘ರಾಜಾ ಸಾಬ್’ ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್​​ವಾಲ್ (Nidhi Agerwal) ಭಾಗಿ ಆಗಿದ್ದರು. ಈ ವೇಳೆ ನಟಿಯ ಮೇಲೆ ಅಲ್ಲಿದ್ದ ಜನರು ಮುಗಿಬಿದ್ದಿದ್ದರು.ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. ನಟಿ ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಈಗ ಈ ಘಟನೆ ಬಗ್ಗೆ ತೆಲುಗು ನಟ ಶಿವಾಜಿ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ‘ನಟಿಯರು ಸಾಧಾರಣ ಉಡುಗೆ ತೊಡಬೇಕು’ ಎಂದಿದ್ದಾರೆ. ಈ ಹೇಳಿಕೆ ನಟಿಗೆ ಬೇಸರ ಮೂಡಿಸಿದೆ.

ಡಿಸೆಂಬರ್ 17 ರಂದು ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ರಾಜಾ ಸಾಬ್‌ನ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಿಧಿ ಚಿತ್ರತಂಡದೊಂದಿಗೆ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಊಹೆಗೂ ಮೀರಿದ ಸಂಖ್ಯೆಯಲ್ಲಿ ಜನರು ಸೇರಿದ್ದರು.ಈವೆಂಟ್ ಮುಗಿದ ಬಳಿಕ ನಟಿ ಅಲ್ಲಿಂದ ಹೊರ ಬರಲು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಸಾಕಷ್ಟು ಜನರು ಅವರ ದೇಹವನ್ನು ಟಚ್ ಮಾಡಿದ್ದರು. ಈ ಸಂಬಂಧ ಕೇಸ್ ಕೂಡ ದಾಖಲಾಯಿತು.
ಶಿವಾಜಿ ಪ್ರತಿಕ್ರಿಯೆ..

ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರೋ ಶಿವಾಜಿ, ‘ನಿಧಿಯ ಉಡುಗೆ ಜನಸಮೂಹವನ್ನು ಕೆರಳಿಸಿತು’ ಎಂದು ನೇರವಾಗಿ ಅವರ ಉಡುಗೆ ಬಗ್ಗೆ ಆರೋಪ ಮಾಡಿದ್ದಾರೆ. ‘ಸಾಯಿ ಪಲ್ಲವಿ, ಅನುಷ್ಕಾ, ಸೌಂದರ್ಯ, ಭೂಮಿಕಾ ಮೊದಲಾದವರನ್ನು ಯಾರಾದರೂ ಟಚ್​ ಮಾಡಿದ್ದಾರಾ? ಏಕೆಂದರೆ ಅವರು ಸರಿಯಾಗಿ ಬಟ್ಟೆ ಹಾಕುತ್ತಾರೆ’ ಎಂದಿದ್ದಾರೆ ಶಿವಾಜಿ.

ಇದನ್ನೂ ಓದಿ: ನಿಧಿ ಅಗರ್​​ವಾಲ್ ಜೊತೆ ಅನುಚಿತ ವರ್ತನೆ: ಮಾಲ್ ವಿರುದ್ಧ ಕೇಸ್ ದಾಖಲು

‘ಯಾರೂ ಪ್ರಚೋದಿಸಬೇಡಿ. ನೀವು ಹಾಗೆ ಮಾಡಿದಾಗ ಪುರುಷರು ನಿಮ್ಮನ್ನು ಮುಟ್ಟಬಹುದು ಎಂದು ಭಾವಿಸುತ್ತಾರೆ. ನಿಮಗೆ ಹೇಗೆ ಅನಿಸುತ್ತದೆಯೋ ಹಾಗೆ ಉಡುಗೆ ಧರಿಸಿ. ಆದರೆ,ನಾನು ನಿಜವನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ ಅವರು.

ನಟಿಯ ಪ್ರತಿಕ್ರಿಯೆ

ಈ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ನಿಧಿ, ‘ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಲುಲು ಮಾಲ್ ಕಾರ್ಯಕ್ರಮದ ಫೋಟೋವನ್ನು ಹಂಚಿಕೊಂಡು, ‘ಸಂತ್ರಸ್ತೆಯನ್ನು ದೂಷಿಸುವುದು ತಪ್ಪು’ ಎಂರ್ಥದಲ್ಲಿ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್ – Kannada News | Shivarajkumar reaction to Darshan and Kichcha Sudeep fans war in Kannada Film Industry

ಸೋಶಿಯಲ್ ಮೀಡಿಯಾ ತುಂಬೆಲ್ಲ ದರ್ಶನ್ (Darshan) ಫ್ಯಾನ್ಸ್ ವರ್ಸಸ್ ಸುದೀಪ್ ಫ್ಯಾನ್ಸ್ ಎಂಬಂತಹ ವಾತಾವರಣ ನಿರ್ಮಾಣ ಆಗಿದೆ. ‘ದಿ ಡೆವಿಲ್’ ಮತ್ತು ‘ಮಾರ್ಕ್’ ಸಿನಿಮಾಗಳು ಕೆಲವೇ ದಿನಗಳ ಅಂತರದಲ್ಲಿ ಬಿಡುಗಡೆ ಆಗಿದ್ದು, ಫ್ಯಾನ್ಸ್ ವಾರ್ (Fans War) ಶುರುವಾಗಿದೆ. ಇದೇ ಸಮಯದಲ್ಲಿ ಶಿವರಾಜ್​​ಕುಮಾರ್ ಅಭಿನಯದ ‘45’ ಸಿನಿಮಾ ಕೂಡ ತೆರೆಕಂಡಿದೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ಬಳಿಕ ಮಾಧ್ಯಮಗಳ ಜೊತೆ ಶಿವಣ್ಣ ಮಾತನಾಡಿದ್ದಾರೆ. ಫ್ಯಾನ್ಸ್ ವಾರ್ ಕುರಿತು ಅವರು ಖಡಕ್ ರಿಯಾಕ್ಷನ್ ನೀಡಿದ್ದಾರೆ. ‘ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾರ ಮನೆಯನ್ನೂ ಒಡೆಯೋಕೆ ಹೋಗಬಾರದು. ಯಾರ ಭಾವನೆಗಳ ಜೊತೆಗೂ ಆಟ ಆಡಬಾರದು. ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಬದುಕೋಣ, ಬದುಕೋಕೆ ಬಿಡೋಣ ಎಂಬ ಭಾವನೆ ಎಲ್ಲರಿಗೂ ಇರಬೇಕು. ಸಮಾಜ ಇಷ್ಟೇ. ನಾವು ಎಷ್ಟು ದಿನ ಇರುತ್ತೇವೆ? ಅಷ್ಟು ದಿನ ನಾವೆಲ್ಲರೂ ಅನ್ಯೋನ್ಯವಾಗಿ ಹೊಂದಿಕೊಂಡು ಇರಬೇಕು’ ಎಂದು ಶಿವರಾಜ್​ಕುಮಾರ್ (Shivarajkumar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಭೆಗೆ ಆಹ್ವಾನವಿಲ್ಲ: ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ – Kannada News | Power Tussle In Karnataka Congress: DK Shivakumar Talks about CM Siddaramaiah participate In cwcc Meeting after mallikarjun kharge met

ಬೆಂಗಳೂರು, (ಡಿಸೆಂಬರ್ 25): ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ಈ ನಡುವೆ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿಗೆ ಯತ್ನಿಸಿದ್ದಾರೆ. ಆದ್ರೆ ಅದು ಆಗದಿದ್ದಕ್ಕೆ ಬರಿಗೈನಲ್ಲೇ ವಾಪಸ್ ಆಗಿದ್ದಾರೆ. ಇತ್ತ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC) ಸಭೆಗೆ ಡಿಕೆಶಿಗೆ ಆಹ್ವಾನ ಬಂದಿಲ್ಲ. ಬದಲಿಗೆ ಸಿಎಂ ಸಿದ್ದರಾಮಯ್ಯಗೆ ಮಾತ್ರ ಆಹ್ವಾನ ನೀಡಲಾಗಿದೆ. ಹೀಗಾಗಿ ನಾಳೆ(ಡಿಸೆಂಬರ್ 26) ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಕೆಶಿ, ಇಂದು (ಡಿಸೆಂಬರ್ 25) ಬೆಂಗಳೂರಿನಲ್ಲಿ ದಿಢೀರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಮಹತ್ವದ ಚರ್ಚೆ ಮಾಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಡಿಸೆಂಬರ್ 27ರಂದು ದೆಹಲಿಯಲ್ಲಿ ಕಾಂಗ್ರೆಸ್​ ಕಾರ್ಯಕಾರಿಣಿ ಸಭೆ ಇದ್ದು, ಸಿಡಬ್ಲ್ಯುಸಿ ಸಭೆಗೆ ನನ್ನನ್ನು ಕರೆದಿಲ್ಲ. ಕರೆದರೆ ನಾನು ಹೋಗುತ್ತೇನೆ. ಸಿಎಂ ಸಿದ್ದರಾಮಯ್ಯರನ್ನು ಸಿಡಬ್ಲ್ಯುಸಿ ಸಭೆಗೆ ಕರೆದ ಮಾಹಿತಿ ಇದ್ದು, ಸಭೆಯಲ್ಲಿ ಭಾಗಿಯಾಗಲು ಸಿಎಂ ದೆಹಲಿಗೆ ಹೋಗುತ್ತಾರೆ ಎಂದರು.  ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಕನೂರು SBI ದರೋಡೆ ಕೇಸ್​​: ಮತ್ತಿಬ್ಬರು ಆರೋಪಿಗಳು ಲಾಕ್​​; ಹಣ, ಬಂಗಾರ ಜಪ್ತಿ – Kannada News | Kakanur SBI Robbery: Two More Arrested; Police Seize Gold and Cash

ಬಾಗಲಕೋಟೆ, ಡಿಸೆಂಬರ್​​ 25: ಕಾಕನೂರು ಗ್ರಾಮದಲ್ಲಿ ಎಸ್​​ಬಿಐ ದರೋಡೆ ಪ್ರಕರಣ ಸಂಬಂಧ ಇಬ್ಬರು ಖತರ್ನಾಕ್​​ ಕಳ್ಳರನ್ನು ಬಾದಾಮಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಚಿಕಲಿ ತಾಲೂಕಿನ ನಯಗಾಂವ್ ನಿವಾಸಿಗಳಾದ ಅಕ್ಷಯ್ ಅಂಬೋರೆ ಮತ್ತು ಕುನಾಲ್ ಚವ್ಹಾಣ್ ಬಂಧಿತ ಆರೋಪಿಗಳು. ಬಂಧಿತರಿಂದ ಹಣ, ಚಿನ್ನಾಭರಣ, ವಾಹನ ಸೇರಿ ಹಲವು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಘಟನೆ ಏನು?

2025ರ ಸೆಪ್ಟೆಂಬರ್​​ 2ರಂದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕಾಕನೂರಿನ ಎಸ್​​ಬಿಐ ಲಾಕರ್​​ ಒಡೆದು ಚಿನ್ನಾಭರಣ ಮತ್ತು ಹಣ ದರೋಡೆ ಮಾಡಲಾಗಿತ್ತು. ಸಿಸಿ ಕ್ಯಾಮರಾಗಳಿಗೆ ಸ್ಪ್ರೇ ಹೊಡೆದು, ಮೊಬೈಲ್​​ ಬಳಕೆ ಮಾಡದೆ, ಫಿಂಗರ್​​ ಪ್ರಿಂಟ್​​ ಕೂಡ ಸಿಗದ ರೀತಿಯಲ್ಲಿ ಆರೋಪಿಗಳು ಬ್ಯಾಂಕ್​​ನಲ್ಲಿ ಕಳವು ಮಾಡಿದ್ದರು. ಕಳ್ಳತನ ನಡೆಸುವ ಆರು ತಿಂಗಳ ಹಿಂದೆಯೇ ಬ್ಯಾಂಕ್​​ಗೆ ಬಂದು ಹೇಗೆ ಕನ್ನ ಹಾಕಬಹುದು ಎಂದು ತಂತ್ರ ರೂಪಿಸಿದ್ದರು.

ಇದನ್ನೂ ಓದಿ: ಬ್ಯಾಂಕ್​ಗಳ​ ರಾಬರಿ ಪ್ರಕರಣ; ಅಂತಾರಾಜ್ಯ ಕಳ್ಳರು ಅಂದರ್​

ಈವರೆಗೆ ನಾಲ್ವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳಿಂದ 25 ಲಕ್ಷ 90 ಸಾವಿರ ಮೌಲ್ಯದ ಚಿನ್ನಾಭರಣ, ಹಣ, ಕಳ್ಳತನಕ್ಕೆ ಬಳಸಿದ್ದ ಕಾರು, ಗ್ಯಾಸ್ ಕಟರ್, ಕಂಟ್ರಿಮೇಡ್ ಗನ್, ಎರಡು ಜೀವಂತ‌ಗುಂಡು, ರಾಡ್ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ಪ್ರಕರಣ ಸಂಬಂಧ ಈ ಹಿಂದೆ ಬಾಗಲಕೋಟೆ ಜಿಲ್ಲಾ ಪೊಲೀಸರು ಉತ್ತರ‌ ಪ್ರದೇಶದ ಕಕ್ರಾಳ ಗ್ರಾಮದ ಮಹಮ್ಮದ ನವಾನ್ ಹಾಗೂ ಕಮರುಲ್‌ಖಾನ್ ಎಂಬವರನ್ನು ಬಂಧಿಸಿದ್ದರು. ಒಟ್ಟು ನಾಲ್ವರು ಆರೋಪಿಗಳಿಂದ 62 ಲಕ್ಷ 20 ಸಾವಿರ ಮೌಲ್ಯದ 472.20 ಗ್ರಾಂ ಚಿನ್ನಾಭರಣ ಸೇರಿ ಹಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಬೇರೆ ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರಿಗೆ ಜೈಲಿನಲ್ಲಿ ಪರಸ್ಪರ ಪರಿಚಯವಾಗಿತ್ತು ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Yearly Horoscope 2026: 2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ, ವೃತ್ತಿ ಪ್ರಗತಿ, ವಿವಾಹ ಯೋಗವಿದೆ – Kannada News | Sagittarius 2026 Yearly Horoscope: Predictions and Remedies by Dr Basavaraj Guruji

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರ ಧನುಸ್ಸು ರಾಶಿಯವರಿಗೆ ಮಹತ್ವದ ಬದಲಾವಣೆಗಳನ್ನು ತರಲಿದೆ. ವರ್ಷದ ಆರಂಭದಲ್ಲಿ ಆರ್ಥಿಕವಾಗಿ ಉತ್ತಮ ಲಾಭಗಳಿದ್ದು, ಜೂನ್ ಎರಡರವರೆಗೆ ಈ ಶುಭ ಫಲಗಳು ಮುಂದುವರೆಯಲಿವೆ. ನಂತರ ಗುರು ಗ್ರಹವು ಸಪ್ತಮ ಸ್ಥಾನದಿಂದ ಅಷ್ಟಮ ಸ್ಥಾನಕ್ಕೆ ಪ್ರವೇಶಿಸಲಿದೆ. ಇದು ಸಾಲಗಳಿಂದ ಮುಕ್ತಿ, ಕಾನೂನು ವಿಷಯಗಳಲ್ಲಿ ಯಶಸ್ಸು ಮತ್ತು ಬ್ಯಾಂಕ್ ಸಾಲಗಳನ್ನು ತೀರಿಸುವ ಯೋಗವನ್ನು ತರುತ್ತದೆ. ಅಷ್ಟಮದಲ್ಲಿ ಗುರು ಇರುವುದು ವಿಪರೀತ ರಾಜಯೋಗಕ್ಕೆ ಕಾರಣವಾಗಬಹುದು.

ಆದರೆ, ಶನಿಯು ಅರ್ಧಾಷ್ಟಮ ಸ್ಥಾನದಲ್ಲಿದ್ದು, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು, ತಾಯಿಯ ಆರೋಗ್ಯ ಮತ್ತು ವಾಹನ, ಮನೆ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿಳಂಬವನ್ನು ಉಂಟುಮಾಡಬಹುದು. ರಾಹು ಮೂರರಿಂದ ಎರಡಕ್ಕೆ ಮತ್ತು ಕೇತು ಒಂಬತ್ತರಿಂದ ಎಂಟಕ್ಕೆ ಸಂಚರಿಸುವುದರಿಂದ ಧೈರ್ಯ ಹೆಚ್ಚುತ್ತದೆ, ಉನ್ನತ ಶಿಕ್ಷಣ, ತಂದೆಯ ಆಶೀರ್ವಾದ ಮತ್ತು ಪಿತ್ರಾರ್ಜಿತ ಆಸ್ತಿ ವಿಷಯಗಳಲ್ಲಿ ಶುಭವಾಗಲಿದೆ. ವೃತ್ತಿಪರವಾಗಿ ಸರ್ಕಾರಿ ನೌಕರರಿಗೆ ಲಾಭ, ಖಾಸಗಿ ಉದ್ಯೋಗಸ್ಥರಿಗೆ ಜವಾಬ್ದಾರಿಗಳು ಹೆಚ್ಚಲಿವೆ. ವಿವಾಹ ಯೋಗ, ಮಕ್ಕಳ ಪ್ರಗತಿ ಮತ್ತು ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಪ್ರಾಪ್ತಿಯು ಈ ವರ್ಷದ ಪ್ರಮುಖ ಅಂಶಗಳಾಗಿವೆ. ಮಾನಸಿಕ ಶಾಂತಿ ಮತ್ತು ನೆಮ್ಮದಿ ವರ್ಷದ ಮಧ್ಯಭಾಗದಲ್ಲಿ ದೊರೆಯಲಿದೆ. ಆರೋಗ್ಯದ ಕಡೆ ಗಮನಹರಿಸುವುದು ಮತ್ತು ಅನ್ನದಾನ ಮಾಡುವುದು ಶುಭ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Chanakya Niti: ಕೌಟುಂಬಿಕ ಕಲಹಗಳಿಗೆ ಮೂಲ ಕಾರಣವೇ ಈ ಅಂಶಗಳು ಎನ್ನುತ್ತಾರೆ ಚಾಣಕ್ಯರು – Kannada News | Chanakya Niti: Chanakya says these mistakes are the main reason for conflicts at home

ಪ್ರತಿಯೊಬ್ಬರಿಗೂ ನೆಮ್ಮದಿಯ ತಾಣ ಮನೆಯೇ ಆಗಿರುತ್ತದೆ. ಆದರೆ ಮನೆಯಲ್ಲಿ ನಡೆಯುವ ಮನಸ್ತಾಪ, ಜಗಳಗಳಿಂದ ಮನೆಯ ನೆಮ್ಮದಿಯೇ ಹಾಳಾಗುತ್ತದೆ. ತಪ್ಪು ಗ್ರಹಿಕೆ, ಮಾತಿಗೆ ಮಾತು ಬೆಳೆಯುವುದು ಇತ್ಯಾದಿ ಸಣ್ಣಪುಟ್ಟ ಕಾರಣಗಳಿಗೆ ವಾಗ್ವಾದ, ಜಗಳಗಳು (conflicts) ಏರ್ಪಡುತ್ತವೆ. ಇದು ಸಂಬಂಧದ ಸಾಮರಸ್ಯವನ್ನೇ ಹಾಳು ಮಾಡುತ್ತವೆ. ಈ ರೀತಿ ಘರ್ಷಣೆಗಳು ಉಂಟಾಗಲು, ಮನೆಯವರ ಮಧ್ಯೆಯೇ ಮನಸ್ತಾಪ ತಲೆದೋರಲು ನಾವು ಮಾಡುವಂತಹ ಕೆಲವೊಂದು ತಪ್ಪುಗಳೇ ಮುಖ್ಯ ಕಾರಣ. ಆ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಬಹುದು, ಕುಟುಂಬ ಸದಸ್ಯರ ಸಾಮರಸ್ಯವನ್ನು ಮತ್ತಷ್ಟು ಬಲಪಡಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಿದ್ರೆ ಕೌಟುಂಬಿಕ ಕಲಹಗಳಿಗೆ ಕಾರಣವಾಗುವ ತಪ್ಪುಗಳು ಯಾವುವು ಎಂಬುದನ್ನು ನೋಡೋಣ.

ಮನೆಯಲ್ಲಾಗುವ ಜಗಳಗಳಿಗೆ ಈ ತಪ್ಪುಗಳೇ ಮುಖ್ಯ ಕಾರಣ:

ಸ್ವಾರ್ಥ ಭಾವನೆ: ನನಗೆ ಮಾತ್ರ ಬೇಕು, ನನ್ನಿಂದಲೇ ಎಲ್ಲಾ, ನನ್ನಿಂದಲೇ ಮನೆ ನಡೆಯುತ್ತಿದೆ ಎಂಬ ಸ್ವಾರ್ಥ ಮತ್ತು ಅಹಂ ಭಾವನೆಯಿಂದ ಮನಸ್ತಾಪಗಳು ತಲೆದೋರುತ್ತವೆ. ಸ್ವಂತ ಲಾಭಕ್ಕಾಗಿ ಮಾತ್ರ ಯೋಚಿಸುವುದರಿಂದ ಕುಟುಂಬದ ಐಕ್ಯತೆ ಹಾಳಾಗುತ್ತದೆ. ಹೀಗಿರುವಾಗ ನಾನು ಎಂಬ ಅಹಂಕಾರವನ್ನು ತ್ಯಜಿಸಿ ನಾವು, ನಮಗಾಗಿ  ಎಂದು ಒಟ್ಟಾಗಿ ಯೋಚಿಸಿದಾಗ ಮಾತ್ರ ಮನೆಯಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಚಾಣಕ್ಯ ಹೇಳಿದ್ದಾರೆ.

ಅಗೌರವ ಮತ್ತು ನಿರ್ಲಕ್ಷ್ಯ: ಅಗೌರವ ತೋರುವುದು, ಮನೆಯವರ ಭಾವನೆಗಳನ್ನು ನಿರ್ಲಕ್ಷಿಸುವುದು, ಅವರ ಭಾವನೆಗಳಿಗೆ ಬೆಲೆ ಕೊಡದಿರುವುದು ಇವೆಲ್ಲವು ಹತಾಶೆ ಮತ್ತು ಕೋಪದ ಭಾವನೆ ಮೂಡಲು ಕಾರಣವಾಗುತ್ತದೆ. ಈ ಕಾರಣದಿಂದಾಗಿ ಸಂಬಂಧದಲ್ಲಿ ಬಿರುಕು ಮೂಡಿ ಮನಸ್ತಾಪಗಳು ಏರ್ಪಡುತ್ತವೆ ಎನ್ನುತ್ತಾರೆ ಚಾಣಕ್ಯ.  ಹೀರುವಾಗ ಮನೆಯವರ ಮಾತನ್ನು ಆಲಿಸುವ ಮತ್ತು ಗೌರವಿಸುವ ಮೂಲಕ ಸಂಬಂಧಗಳನ್ನು ಬಲಪಡಿಸಬಹುದು.

ಸುಳ್ಳು ಮತ್ತು ವಂಚನೆ: ನಂಬಿಕೆಯು ಯಾವುದೇ ಸಂಬಂಧದ ಅಡಿಪಾಯವಾಗಿದೆ. ಹೀಗಿರುವಾಗ ನೀವು ಹೇಳುವ ಸಣ್ಣ ಸುಳ್ಳು, ವಂಚನೆಗಳು ಸಹ ಸಂಬಂಧದಲ್ಲಿ ಬಹುದೊಡ್ಡ ಬಿರುಕನ್ನು ಮೂಡಿಸಬಹುದು. ಚಾಣಕ್ಯನ ಪ್ರಕಾರ, ಸುಳ್ಳು ಮತ್ತು ವಂಚನೆಯು ಕುಟುಂಬಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಪ್ರಾಮಾಣಿಕತೆ ತುಂಬಿದ ಮನೆಯಲ್ಲಿ ಮಾತ್ರ ಶಾಂತಿ ನೆಲೆಸುತ್ತದೆ.

ಮೂರನೇ ವ್ಯಕ್ತಿಯ ಹಸ್ತಕ್ಷೇಪ: ಮನೆಯ ವಿಷಯಗಳಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಲು ಅವಕಾಶ ನೀಡುವುದು ಅತ್ಯಂತ ಅಪಾಯಕಾರಿ ಎಂದು ಚಾಣಕ್ಯ ಎಚ್ಚರಿಸಿದ್ದಾರೆ. ಮೂರನೇ ವ್ಯಕ್ತಿ ನಿಮ್ಮ ಮನೆಯ ವಿಷಯಗಳಿಗೆ ಮಧ್ಯಪ್ರವೇಶಿಸಿದಾಗ ಖಂಡಿತವಾಗಿ ಸಮಸ್ಯೆಗಳು ಉದ್ಭವಿಸುತ್ತವೆ, ಮನೆಯವರ ಸಂಬಂಧ ಹಾಳಾಗುತ್ತದೆ. ಈ ರೀತಿಯ ತಪ್ಪುಗಳಾಗದಂತೆ ನೋಡಿಕೊಳ್ಳಿ.

ಅಹಂಕಾರ ಮತ್ತು ಕೋಪ:  ನಾನೇ ಸರಿ, ನಾನು ಬೇರೆಯವರ ಮಾತನ್ನು ಕೇಳುವುದಿಲ್ಲ ಎಂಬ ದುರಹಂಕಾರ ಮತ್ತು ಕ್ಷಣಿಕ ಕೋಪ  ಕುಟುಂಬದ ನೆಮ್ಮದಿಯನ್ನೇ ನಾಶ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ. ಹಾಗಾಗಿ ಅಹಂಕಾರವನ್ನು ಪಕ್ಕಕ್ಕಿಟ್ಟು ಮನೆಯವರ ಜೊತೆ ತಾಳ್ಮೆಯಿಂದ ಮತ್ತು ಪ್ರೀತಿಯಿಂದ ನಡೆದುಕೊಂಡಾಗ ಮಾತ್ರ ಇಡೀ ಕುಟುಂಬ ಸಂತೋಷದಿಂದಿರಲು ಸಾಧ್ಯ.

ಇದನ್ನೂ ಓದಿ: ಸಾಲ ತೆಗೆದುಕೊಳ್ಳುವ, ನೀಡುವ ಮೊದಲು ಚಾಣಕ್ಯರು ಹೇಳಿರುವ ಮಾತುಗಳನ್ನು ಪಾಲಿಸಿ   

ಅತಿಯಾದ ನಿರೀಕ್ಷೆಗಳು: ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹ ಮನೆಯಲ್ಲಿ ಮನಸ್ತಾಪಗಳು ಉಂಟಾಗಲು ಕಾರಣವಾಗಬಹುದು. ಹೌದು ಮನೆಯವರು ನಾನು ಹೇಳಿದಂತೆಯೇ ನಡೆದುಕೊಳ್ಳಬೇಕು, ನನಗೆ ಅದು ಕೊಡ್ಬೇಕು, ಇದು ಕೊಡ್ಬೇಕು ಅಂತೆಲ್ಲಾ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಂಡಾಗ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇದು ನಂತರ ಜಗಳಗಳಿಗೆ ಕಾರಣವಾಗುತ್ತದೆ.

ಹಣದ ಹಿಂದೆ ಓಡುವುದು: ಸಂಬಂಧಕ್ಕೆ ಬೆಲೆ ಕೊಡುವ ಬದಲು ಹಣ, ಆಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಕುಟುಂಬದ ನೆಮ್ಮದಿಯೇ ಹಾಳಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸಬೇಕೆಂದರೆ ಕುಟುಂಬ ಮತ್ತು ಸಂಬಂಧಗಳಿಗೆ ಮೊದಲ ಆದ್ಯತೆ ನೀಡಬೇಕು ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ – Kannada News | Chitradruga Bus Accident: Some passengers great escaped form sea bird bus tragedy

ಚಿತ್ರದುರ್ಗ, (ಡಿಸೆಂಬರ್ 25): ಜಿಲ್ಲೆಯ ಹಿರಿಯೂರು (Hiriyuru) ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ ಹಲವು ಸಾವು ನೋವು ಸಂಭವಿಸಿವೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟ್ಟಿದ್ದ ಸಿಬರ್ಡ್​ ಬಸ್ ಗೆ ಲಾಡಿ ಬಂದು ಗುದ್ದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬಸ್​​​ ಸುಟ್ಟು ಕರಕಲಾಗಿದೆ. ದುರಂತದಲ್ಲಿ ಈವರೆಗೂ ಐವರ ಮೃತದೇಹಗಳು ಪತ್ತೆಯಾಗಿದ್ದು, ಕೆಲವರು ದುರಂತ ಗಾಯಗೊಂಡಿದ್ದಾರೆ. ಆದ್ರೆ, ಒಟ್ಟು ಎಷ್ಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನುವ ನಿಖರ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸ್, ಸೋಕೋ ತಂಡ ಪರಿಶೀಲನೆ ನಡೆಸಿದೆ. ಇನ್ನು ಈ ದುರಂತದಿಂದ ಹಲವು ಗ್ರೇಟ್ ಎಸ್ಕೇಪ್ ಆಗಿದ್ದು, ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕವಾಗಿದೆ. ಹಾಗಾದ್ರೆ, ಯಾರೆಲ್ಲಾ ಹೇಗೆ ಜೀವ ಉಳಿಸಿಕೊಂಡಿದ್ದಾರೆ ಎನ್ನುವುದನ್ನು ನೋಡಿ.

ಇದನ್ನೂ ಓದಿ: ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್​​​​, 9ಕ್ಕೂ ಹೆಚ್ಚು ಜನ ಸಜೀವ ದಹನ

Source link

Maoists Encounter: ಒಡಿಶಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಐವರು ನಕ್ಸಲರ ಹತ್ಯೆ – Kannada News | Anti naxal operation in Odisha, 5 Maoists killed, 3 rifles recovered

ಭುಬನೇಶ್ವರ್, ಡಿಸೆಂಬರ್ 25: ಒಡಿಶಾದ ಕಂಧಮಾಲ್ ಜಿಲ್ಲೆಯ ವಿವಿಧೆಡೆ ನಿನ್ನೆ ಮತ್ತು ಇಂದು ನಡೆದ ಎರಡು ದಿನಗಳ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ (Anti-Naxal operation) ಐವರು ಮಾವೋವಾದಿ ಹೋರಾಟಗಾರರು ಹತರಾಗಿದ್ದಾರೆ. ನಿನ್ನೆ ಬುಧವಾರ ಬೆಲಗಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಮ್ಮ ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರನ್ನು ಕೊಲ್ಲಲಾಗಿದೆ. ಇಂದು ಗುರುವಾರ ಚಾಕಪಾದ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರಿಗ್ ಜೊಲ್ಲ ಅರಣ್ಯ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​​ನಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದಾರೆ. ಈ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಈವರೆಗೆ ಐವರು ಮಾವೋವಾದಿಗಳನ್ನು ಭದ್ರತಾ ಪಡೆಗಳು ಸಾಯಿಸಿವೆ.

ಕಂಧಮಾಲ್ ಜಿಲ್ಲೆಯಲ್ಲಿರುವ ಬಹುತೇಕ ಕಾಡು ಪ್ರದೇಶಗಳು ನಕ್ಸಲರಿಗೆ ಅಡಗುದಾಣದಂತಿವೆ. ವಿಶೇಷ ಗುಪ್ತಚರ ಘಟಕದಿಂದ ನಕ್ಸಲರ ಇರುವಿಕೆಯ ಸುಳಿವು ಪಡೆದ ಭದ್ರತಾ ಪಡೆಗಳು ದೊಡ್ಡ ಕಾರ್ಯಾಚರಣೆಯನ್ನೇ ರೂಪಿಸಿದವು. ಅದಕ್ಕಾಗಿ 23 ತಂಡಗಳು, 20 ವಿಶೇಷ ಕಾರ್ಯಾಚರಣೆ ತಂಡ (ಎಸ್​ಒಜಿ), ಎರಡು ಸಿಆರ್​ಪಿಎಫ್ ತಂಡಗಳು ಮತ್ತು ಒಂದು ಬಿಎಸ್​ಎಫ್ ತಂಡ ಹೀಗೆ ವಿವಿಧ ತಂಡಗಳೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಯೋಜಿಸಲಾಯಿತು.

ಇದನ್ನೂ ಓದಿ: ಆಲಿಗಡ್ ಮುಸ್ಲಿಂ ಯೂನಿವರ್ಸಿಟಿ ಕ್ಯಾಂಪಸ್​ನಲ್ಲೇ ಬೋಧಕ ರಾವ್ ದಾನಿಶ್ ಅಲಿ ಹತ್ಯೆ

ಕಂಧಮಾಲ್ ಮತ್ತು ಗಂಜಾಮ್ ಜಿಲ್ಲೆಯ ವಿವಿಧ ಕಡೆ ಈ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದವು. ಈ ವೇಳೆ, ನಕ್ಸಲರು ಮುಖಾಮುಖಿಯಾಗಿ ಗುಂಡಿನ ಚಕಮಕಿ ನಡೆದಿದೆ. ಒಟ್ಟು ಐವರು ನಕ್ಸಲರು ಹತರಾಗಿದ್ದಾರೆ.

ಸಮವಸ್ತ್ರ ಧರಿಸಿದ್ದ ನಾಲ್ವರು ಮಾವೋವಾದಿಗಳ ಶವ ಸಿಕ್ಕಿದೆ. ಈ ನಾಲ್ವರಲ್ಲಿ ಇಬ್ಬರು ಮಹಿಳೆಯರೂ ಇದ್ದಾರೆ. ಈ ನಾಲ್ವರು ಮೃತ ನಕ್ಸಲರಿಂದ ಮೂರು ವಿವಿಧ ರೈಫಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಎರಡು ಕಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್ಸು, 7 ಮಂದಿ ಸಾವು

ಒಬ್ಬ ನಕ್ಸಲನನ್ನು ಗಣೇಶ್ ಯೂಕೆ ಎಂದು ಗುರುತಿಸಲಾಗಿದೆ. ಈತ ಒಡಿಶಾದ ನಕ್ಸಲ್ ಕಾರ್ಯಾಚರಣೆಯ ಮುಖ್ಯಸ್ಥ ಹಾಗೂ ಕೇಂದ್ರೀಯ ಸಮಿತಿ ಸದಸ್ಯನೂ ಆಗಿದ್ದ ಎನ್ನಲಾಗಿದೆ. ಇನ್ನುಳಿದ ಮೃತ ನಕ್ಸಲರ ಗುರುತು ಇನ್ನಷ್ಟೇ ಸಿಗಬೇಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತೆ ಕಣಕ್ಕಿಳಿಯುವುದು ಯಾವಾಗ? – Kannada News | When will Virat Kohli and Rohit Sharma play next?

ವಿಜಯ ಹಝಾರೆ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್​ಗೆ ಮರಳಿದ್ದಾರೆ. ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿಂಗ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದರೆ, ಜೈಪುರದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟ್ ಬೀಸಿದ್ದರು. ವಿಶೇಷ ಎಂದರೆ ಈ ಇಬ್ಬರು ದಿಗ್ಗಜರು ಮೊದಲ ಮ್ಯಾಚ್​ನಲ್ಲೇ ಶತಕ ಸಿಡಿಸಿದ್ದಾರೆ.

  • ಆಂಧ್ರ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 101 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 131 ರನ್ ಬಾರಿಸಿದ್ದಾರೆ.
  • ಸಿಕ್ಕಿಂ ವಿರುದ್ಧದ ಮ್ಯಾಚ್​ನಲ್ಲಿ ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ 94 ಎಸೆತಗಳನ್ನು ಎದುರಿಸಿದ ಹಿಟ್​ಮ್ಯಾನ್ 9 ಭರ್ಜರಿ ಸಿಕ್ಸ್ ಹಾಗೂ 18 ಫೋರ್​ಗಳೊಂದಿಗೆ 155 ರನ್ ಬಾರಿಸಿದ್ದಾರೆ.

ಅಂದರೆ 15 ವರ್ಷಗಳ ಬಳಿಕ ದೇಶೀಯ ಏಕದಿನ ಪಂದ್ಯವಾಡಿದ ವಿರಾಟ್ ಕೊಹ್ಲಿ ಭರ್ಜರಿ ಸೆಂಚುರಿಯೊಂಧಿಗೆ ಅಬ್ಬರಿಸಿದ್ದಾರೆ. ಮತ್ತೊಂದೆಡೆ 7 ವರ್ಷಗಳ ಬಳಿಕ ವಿಜಯ ಹಝಾರೆ ಪಂದ್ಯವಾಡಿದ ರೋಹಿತ್ ಶರ್ಮಾ ಕೂಡ ಶತಕದೊಂದಿಗೆ ಮಿಂಚಿದ್ದಾರೆ. ಈ ಅಬ್ಬರದೊಂದಿಗೆ ಇಬ್ಬರು ದಿಗ್ಗಜರು ತಮ್ಮ ಫಾರ್ಮ್​ ಅನ್ನು ಮುಂದುವರೆಸಿದ್ದಾರೆ.

ಮತ್ತೆ ಕಣಕ್ಕಿಳಿಯುವುದು ಯಾವಾಗ?

ವಿಜಯ ಹಝಾರೆ ಟೂರ್ನಿಯ ಮೊದಲ ಮ್ಯಾಚ್​ನಲ್ಲಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಡಿಸೆಂಬರ್ 26 ರಂದು ನಡೆಯಲಿರುವ ದ್ವಿತೀಯ ಪಂದ್ಯದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಏಕೆಂದರೆ ಬಿಸಿಸಿಐ, ಟೀಮ್ ಇಂಡಿಯಾ ಆಟಗಾರರಿಗೆ ವಿಜಯ ಹಝಾರೆ ಟೂರ್ನಿಯಲ್ಲಿ ಕನಿಷ್ಠ 2 ಪಂದ್ಯಗಳನ್ನಾಡುವಂತೆ ಸೂಚಿಸಲಾಗಿದೆ. ಹೀಗಾಗಿ ಶುಕ್ರವಾರ ನಡೆಯಲಿರುವ ದ್ವಿತೀಯ ಸುತ್ತಿನ ಪಂದ್ಯಗಳಲ್ಲೂ ರೋ-ಕೊ ಜೋಡಿ ಮತ್ತೆ ಕಣಕ್ಕಿಳಿಯಲಿದ್ದಾರೆ.

  • ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಮುಂಬೈ ಮತ್ತು ಉತ್ತರಾಖಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯುವುದು ಖಚಿತ.
  • ಬೆಂಗಳೂರಿನ ಸಿಒಇ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದಲ್ಲಿ ದೆಹಲಿ ಮತ್ತು ಗುಜರಾತ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಎರಡು ಮ್ಯಾಚ್​ಗಳ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಜನವರಿ 11 ರಿಂದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿ ಶುರುವಾಗಲಿದ್ದು, ಅದಕ್ಕೂ ಮುನ್ನ ಸಂಪೂರ್ಣ ವಿಶ್ರಾಂತಿ ಪಡೆದು ಹಿಟ್​ಮ್ಯಾನ್, ಕಿಂಗ್ ಕೊಹ್ಲಿ ಜೋಡಿ ಮತ್ತೆ ಅಭ್ಯಾಸಕ್ಕೆ ಮರಳುವ ಸಾಧ್ಯತೆಯಿದೆ.

Source link