All posts by nagaraj11081993

ಅಪೆಕ್ಸ್ ಬ್ಯಾಂಕ್ ಜಟಾಪಟಿ: ರಾಜಣ್ಣ ಭೇಟಿ ಮಾಡಿದ್ದ ಡಿಕೆ ಶಿವಕುಮಾರ್​ಗೆ ಚೆಕ್​ಮೇಟ್ ಕೊಟ್ಟ ಸಿದ್ದರಾಮಯ್ಯ! – Kannada News | Apex Bank Power Tussle in Karnataka: Siddaramaiah Counters DK Shivakumar Amid Leadership Row

ಬೆಂಗಳೂರು, ಡಿಸೆಂಬರ್ 24: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಕೆಎನ್ ರಾಜಣ್ಣ (KN Rajanna) ಹಲವು ಬಾರಿ ಚರ್ಚೆ ನಡೆಸಿದ್ದು, ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಇದೀಗ ಅಪೆಕ್ಸ್ ಬ್ಯಾಂಕ್​ಗೆ ಆಡಳಿತಾಧಿಕಾರಿ (ಎಒ) ನೇಮಕ ಮಾಡಿದ್ದಾರೆ. ಆ ಮೂಲಕ ಡಿಕೆ ಶಿವಕುಮಾರ್​ಗೆ ಕೌಂಟರ್ ಕೊಟ್ಟಿದ್ದಾರೆ. ಸಹಕಾರ ಇಲಾಖೆಯ ಜವಾಬ್ದಾರಿ ಸಿದ್ದರಾಮಯ್ಯ ಬಳಿಯೇ ಇದ್ದು, ಕಾರ್ಯಚಟುವಟಿಕೆಯನ್ನು ಸಿಎಂ ಹೆಚ್ಚುವರಿ ಕಾರ್ಯದರ್ಶಿ ಜಿಯಾವುಲ್ಲಾಗೆ ವಹಿಸಲಾಗಿದೆ.

ಮಂಗಳವಾರ ಸಂಜೆ ಅಪೆಕ್ಸ್ ಬ್ಯಾಂಕ್​ ಆಡಳಿತಾಧಿಕಾರಿಯಾಗಿ ಜಿಯಾವುಲ್ಲ ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹುದ್ದೆಯ ಆಯ್ಕೆ ಮತ್ತಷ್ಟು ಜಟಿಲವಾದಂತಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಸಂಬಂಧಿಯಾಗಿರುವ ಎಂಎಲ್​ಸಿ ರವಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಡಿಕೆ ಶಿವಕುಮಾರ್​ಗೆ ರಾಜಣ್ಣ ಟಾಂಗ್

ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ನಾನೇ ಎಂಬ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಸಿಎಂ ನಿವಾಸ ಕಾವೇರಿಯಲ್ಲಿ ಪ್ರತಿಕ್ರಿಯಿಸಿದ ರಾಜಣ್ಣ, ಎಸ್​ಎಂ ಕೃಷ್ಟ ಅವರ ಕಾಲದಲ್ಲಿ ನಾನು ಅಧ್ಯಕ್ಷ ಆಗಿದ್ದು. ಡಿಕೆ ಶಿವಕುಮಾರ್ ಅವರದ್ದು ಸಹಕಾರ ಇರಬಹುದು, ಇಲ್ಲ ಅಂತ ಏನಿಲ್ಲ. ಸಹಾಯ ಮಾಡಿದರೆ ನನಪಿಸಿಕೊಳ್ಳುವುದು ನನ್ನ ಗುಣ. ಅಂದು ಡಿಕೆಶಿ ಸಹಕಾರ ಸಚಿವರಾಗಿದ್ದರು, ಆಗ ಸಹಾಯ ಆಗಿದೆ. ಅಂದು ನಮಗೆ ಹೆಚ್ಚು ಸಹಾಯ ಮಾಡಿದ್ದು ಜಾಲಪ್ಪ, ಬಸವರಾಜು, ಪರಮ ಹಣದ. ಅವರು ಚುನಾವಣೆ ದಿನ ಎಸ್​ಎಂ ಕೃಷ್ಣ ಮನವೊಲಿಸಿ ನನ್ನ ಅಧ್ಯಕ್ಷನನ್ನಾಗಿ ಮಾಡಿದರು ಎಂದು ಹೇಳಿದ್ದಾರೆ.

ಹಿಂದೆ ಸಿದ್ದರಾಮಯ್ಯ ಕೂಡ ನನ್ನನ್ನು ಅಧ್ಯಕ್ಷನಾಗಿ ಮಾಡಿದ್ದಾರೆ. ಅಲ್ಲಿ ಇರುವ ನಿರ್ದೇಶಕರು ಸೇರಿ ಆಯ್ಕೆ ಮಾಡಬೇಕಾಗಿರುವ ಹುದ್ದೆ ಅದು, ಸರ್ಕಾರ ಅಲ್ಲ. 21 ಜನ ನಮ್ಮನ್ನು ಆಯ್ಕೆ ಮಾಡಬೇಕು, ಸಲಹೆ ಮೇರೆಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ರಾಜಣ್ಣ ಟಾಂಗ್ ಕೊಟ್ಟರು.

ಇದನ್ನೂ ಓದಿ: ಸಿದ್ದರಾಮಯ್ಯ ಅತ್ಯಾಪ್ತನಿಗೆ ಡಿಕೆ ಶಿವಕುಮಾರ್ ಗಾಳ: ಮೇಲಿಂದ ಮೇಲೆ ಭೇಟಿಯ ರಹಸ್ಯ ಬಯಲು

ನಾಯಕತ್ವ ಬಿಕ್ಕಟ್ಟಿನ ಮಧ್ಯೆ ಹಳೇ ವಿಚಾರವನ್ನು ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಹಳೇ ವಿಚಾರ ದೇಶಕ್ಕೇ ಗೊತ್ತಿದೆ, ಯಾರೆಲ್ಲಾ ನೆರವಾಗಿದ್ದಾರೆ ಎಂಬುದನ್ನು ನಾನು ಮರೆಯಲ್ಲ ಎಂದರು.

ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರ ಭೇಟಿ ಸಹಜ. ನಾನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಬೇಕೆಂದು ಆಸೆ ಪಟ್ಟಿಲ್ಲ. ಅದರ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಜೊತೆ ಮಾತನಾಡಿಲ್ಲ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:57 am, Wed, 24 December 25

Source link

ರಾಶಿಕಾ ಬಗ್ಗೆ ಅಪರೂಪದ ವಿಷಯಗಳ ಹೇಳಿದ ತಾಯಿ – Kannada News | Bigg Boss Kannada 12: Rashika’s mother talks about her daughter

ಬಿಗ್​​ಬಾಸ್ (Bigg Boss) ಮನೆಯಲ್ಲಿ ಈ ವಾರ ಫ್ಯಾಮಿಲಿ ವಾರ ಆಗಿದೆ. ರಾಶಿಕಾ ಅವರ ಸಹೋದರ ಮತ್ತು ಅವರ ತಾಯಿ ಅವರು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ರಾಶಿಕಾ ಅವರ ಸಹೋದರನ ಎಂಟ್ರಿ ಸಖತ್ ಆಗಿದೆ. ರಾಶಿಕಾ ಅವರ ತಾಯಿಯೂ ಸಹ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಮನೆ ಮಂದಿಯ ಜೊತೆಗೆಲ್ಲ ಬೆರೆತು ಮಾತನಾಡಿರುವ ರಾಶಿಕಾ ಅವರ ತಾಯಿ, ರಾಶಿಕಾ ಬಗ್ಗೆ ಕೆಲವು ಅಪರೂಪದ ವಿಷಯಗಳನ್ನು ಮನೆ ಮಂದಿಯ ಮುಂದೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನ ಮಾಲೀಕರು ಪರದಾಟ – Kannada News | Karnataka Vehicle Owners Face Crisis as Emission Certificates Fail to Update on VAHAN 4 System

ಬೆಂಗಳೂರು, ಡಿಸೆಂಬರ್​ 23: ರಾಜ್ಯದಲ್ಲಿ ವಾಹನಗಳ ಮಾಲೀಕರು ಪ್ರಸ್ತುತ ಸಾರಿಗೆ ಇಲಾಖೆಯ ವಾಹನ್-4 ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪರಿವಾಹನ್ ಪೋರ್ಟಲ್‌ನಲ್ಲಿ ವಾಹನಗಳ ಎಮಿಷನ್ ಸರ್ಟಿಫಿಕೇಟ್‌ಗಳು ನವೀಕರಣಗೊಳ್ಳದಿರುವುದು ಪ್ರಮುಖ ಸಮಸ್ಯೆಯಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್‌ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಅವರು ಧ್ವನಿ ಎತ್ತಿದ್ದು, ಇದು ಹಲವು ತಿಂಗಳಿಂದ ವಾಹನ ಮಾಲೀಕರಿಗೆ ತಲೆನೋವಾಗಿದೆ ಎಂದಿದ್ದಾರೆ. ಈಗಾಗಲೇ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು, ಸಚಿವರು ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಊಟ ಮಾಡುವಾಗ, ಮಾಡಿದ ನಂತರದ ಈ ಕೆಲವು ತಪ್ಪುಗಳು ಗಂಭೀರ ಸಮಸ್ಯೆಯನ್ನು ಉಂಟುಮಾಡಬಹುದು – Kannada News | Stop These 3 Dinner Mistakes to Prevent Disease

ಊಟ ಮಾಡುವಾಗ ಮಾಡಿದ ನಂತರ ಮಾಡುವ ತಪ್ಪುಗಳು

ಬೆಳಗಿನ ಉಪಾಹಾರ ಎಷ್ಟು ಮುಖ್ಯವೋ, ರಾತ್ರಿ ಸೇವನೆ ಮಾಡುವಂತಹ ಆಹಾರವೂ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೌದು, ರಾತ್ರಿ ಊಟ (Dinner) ಮಾಡುವಾಗ ಮತ್ತು ಮಾಡಿದ ನಂತರ ಮಾಡುವ ತಪ್ಪುಗಳಿಂದಲೇ ಸಕ್ಕರೆ ಮಟ್ಟ, ಬಿಪಿ, ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಆ ತಪ್ಪುಗಳು ಯಾವವು, ಇದರಿಂದ ದೇಹಕ್ಕಾಗುವ ತೊಂದರೆಗಳು ಯಾವವು, ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಜನರು 90% ಆಹಾರವನ್ನು ರಾತ್ರಿ ಸಮಯದಲ್ಲಿಯೇ ಸೇವನೆ ಮಾಡುತ್ತಾರೆ. ಏಕೆಂದರೆ ದಿನವಿಡೀ ಕಾರ್ಯನಿರತರಾಗಿರುವುದರಿಂದ, ರಾತ್ರಿ ಸಮಯದಲ್ಲಿ ಶಾಂತವಾಗಿ ಕುಳಿತು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲಿಯೂ ಹೆಚ್ಚಿನವರು ಮಸಾಲೆಯುಕ್ತ ಆಹಾರಗಳಾದ ಬಿರಿಯಾನಿ, ಚಪಾತಿ ಈ ರೀತಿಯ ಆಹಾರವನ್ನು ಸೇವನೆ ಮಾಡುತ್ತಾರೆ. ಅಷ್ಟು ಮಾತ್ರವಲ್ಲ, ರಾತ್ರಿ ತಡವಾಗಿ ಊಟ ಮಾಡುತ್ತಾರೆ. ಜೊತೆಗೆ ಊಟ ಮಾಡಿದ ನಂತರ ಸೆಲ್‌ಫೋನ್‌ನಲ್ಲಿ ಸಮಯ ಕಳೆಯುತ್ತಾ ನೇರವಾಗಿ ಮಲಗುತ್ತಾರೆ. ಇವೆಲ್ಲವೂ ಆರೋಗ್ಯಕ್ಕೆ ಹಾನಿಕಾರವಾದಂತಹ ಅಭ್ಯಾಸ. ಸಾಮಾನ್ಯವಾಗಿ ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ ಮೂರು ಗಂಟೆಗಳ ಅಂತರವಿರಬೇಕಾಗುತ್ತದೆ. ಹಾಗಾಗಿ ಈ ರೀತಿಯ ತಪ್ಪುಗಳನ್ನು ಮಾಡಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ:

ರಾತ್ರಿ ಬಿರಿಯಾನಿ, ಕಬಾಬ್‌ಗಳು ಮತ್ತು ಚಿಕನ್ 65 ನಂತಹ ಕರಿದ, ಡೀಪ್- ಫ್ರೈಡ್ ಆಹಾರಗಳನ್ನು ಸೇವನೆ ಮಾಡುವುದರಿಂದ. ಕೊಬ್ಬು ಶೇಖರಣೆ ಹೆಚ್ಚಾಗುತ್ತದೆ, ಅದರಲ್ಲಿಯೂ ಸ್ಯಾಚುರೇಟೆಡ್ ಕೊಬ್ಬು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲ್ಪಡುವ ಟ್ರಾನ್ಸ್ ಕೊಬ್ಬುಗಳು LDL ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ.

ಕರುಳಿನ ಚಲನೆಯ ಸಮಸ್ಯೆಗಳು:

ಸಿರ್ಕಾಡಿಯನ್ ಲಯದ ಪ್ರಕಾರ, ಸೂರ್ಯಾಸ್ತದ ನಂತರ, ದೇಹದ ಅಂಗಗಳು ವಿಶ್ರಾಂತಿ ಪಡೆಯಲು ಪ್ರಾರಂಭಿಸುತ್ತವೆ. ಆ ಸಮಯದಲ್ಲಿ, ರಾತ್ರಿ ಊಟವನ್ನು ತಡವಾಗಿ ಅಥವಾ ಹೆಚ್ಚೆಚ್ಚು ಆಹಾರಗಳ ಸೇವನೆ ಮಾಡುತ್ತಾರೆ. ಇದು ಜೀರ್ಣವಾಗದೆ ಹೊಟ್ಟೆಯಲ್ಲಿ ಉಳಿಯುತ್ತದೆ. ಬಳಿಕ ಜೀರ್ಣಾಂಗ ವ್ಯವಸ್ಥೆಯು ಮರುದಿನ ಬೆಳಿಗ್ಗೆ ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ರಾತ್ರಿ ಊಟ ಜೀರ್ಣವಾಗುವ ಮೊದಲು, ನಾವು ಉಪಾಹಾರ ಸೇವನೆ ಮಾಡುತ್ತೇವೆ. ಈ ರೀತಿಯಾದಾಗ ಇದು ಅನಿಲ, ಉಬ್ಬುವುದು ಮತ್ತು ಎದೆಯುರಿಯನ್ನು ಉಂಟುಮಾಡುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಕೊಲೊನ್ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಮಧುಮೇಹದ ಅಪಾಯ:

ಕಳಪೆ ಆಹಾರ ಪದ್ಧತಿ ಮಧುಮೇಹಕ್ಕೆ ಕಾರಣವಾಗುತ್ತದೆ. ರಾತ್ರಿಯಲ್ಲಿ ದೋಸೆ ಅಥವಾ ಚಪಾತಿಯಂತಹ ಕಾರ್ಬೋಹೈಡ್ರೇಟ್ ಭರಿತ ಆಹಾರಗಳ ಸೇವನೆ, ತಡವಾಗಿ ಆಹಾರ ಸೇವನೆ ಮಾಡುವುದು ಅಥವಾ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ಸೇವಿಸುವುದರಿಂದ ರಾತ್ರಿಯಿಡೀ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು. ಇದು ಬೆಳಿಗ್ಗೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ಆರೋಗ್ಯ ಚೆನ್ನಾಗಿರಬೇಕಂದ್ರೆ, ರಾತ್ರಿ ಈ ನಿಗದಿತ ಸಮಯದೊಳಗೆ ಊಟ ಮಾಡುವುದು ಸೂಕ್ತವಂತೆ

ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ:

ತಡವಾಗಿ ಊಟ ಮಾಡುವುದು ಅಥವಾ ಮಲಗುವುದರಿಂದ ದೇಹದಲ್ಲಿ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಹೆಚ್ಚಾಗುತ್ತದೆ. ಒತ್ತಡ ಹೆಚ್ಚಾದಾಗ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೃದಯಕ್ಕೆ ಒಳ್ಳೆಯದಲ್ಲ. ರಾತ್ರಿ ರಕ್ತದೊತ್ತಡದಲ್ಲಿ ಏರಿಳಿತಗಳು ಹೃದಯಾಘಾತದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಬೊಜ್ಜು ಸಂಬಂಧಿತ ಸಮಸ್ಯೆಗಳು:

ರಾತ್ರಿ ಸಮಯದಲ್ಲಿ ಬಿರಿಯಾನಿ, ಮಸಾಲೆಯುಕ್ತ ಆಹಾರಗಳು ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಹೆಚ್ಚಿನ ಕ್ಯಾಲೋರಿ ಇರುವ ಆಹಾರಗಳ ಸೇವನೆ ಮಾಡಿದಾಗ ಸ್ವಾಭಾವಿಕವಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಈ ಅಭ್ಯಾಸ ಮುಂದುವರಿದರೆ, ತೀವ್ರ ಬೊಜ್ಜಿನ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 24ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಈ ದಿನ ಒಂದಲ್ಲ ಒಂದು ಕಾರ್ಯದಲ್ಲಿ ನಿರತರಾಗಿ ಇರುತ್ತೀರಿ ಹಾಗೂ ಅವುಗಳು ಫಲದಾಯಕವಾಗಿಯೂ ಇರುತ್ತವೆ. ಏನಾದರೊಂದು ಕಾರಣಕ್ಕೆ ಬಾಕಿ ಉಳಿದು ಹೋದ ಕೆಲಸಗಳನ್ನು ಮುಗಿಸಲು ಅವಕಾಶ ಸಿಗುತ್ತದೆ. ನೀವು ಈಗಾಗಲೇ ಸಾಲ ನೀಡಿದ್ದಲ್ಲಿ ಅದರ ಹಣ ವಸೂಲಿ ಮಾಡುವುದಕ್ಕೆ ಅಥವಾ ಮುಖ್ಯವಾದ ವ್ಯವಹಾರ ಒಪ್ಪಂದ ಪೂರ್ಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಗುರುತಿಸಲಾಗುತ್ತದೆ. ಹೆಚ್ಚಿನ ಜವಾಬ್ದಾರಿಗಳನ್ನು ಸಹ ವಹಿಸಬಹುದು. ಆದರೆ ನಿಮಗೆ ಈ ದಿನದ ಅತಿ ಮುಖ್ಯವಾದ ಎಚ್ಚರಿಕೆ ಏನೆಂದರೆ, ಯಾವುದೇ ವಿಚಾರದಲ್ಲಿಯೂ ಕೋಪ ಹಾಗೂ ಆತುರ ನಿಯಂತ್ರಣದಲ್ಲಿರಲಿ. ಕುಟುಂಬದ ಸದಸ್ಯರಿಂದ ನಿಮ್ಮ ನಿರ್ಧಾರಗಳಿಗೆ ಬೆಂಬಲ ಸಿಗುತ್ತದೆ. ರಕ್ತದೊತ್ತಡ ಅಥವಾ ಉರಿಮೂತ್ರದ ಸಮಸ್ಯೆ ಕಂಡುಬರಬಹುದು. ನೀವೇನಾದರೂ ಶಾಂತ ಮನಸ್ಥಿತಿಯಲ್ಲಿ ನಡೆದುಕೊಂಡರೆ ದಿನ ಸಂಪೂರ್ಣ ನಿಮ್ಮ ಪರವಾಗಿರುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕುಟುಂಬದ ಕಡೆಯಿಂದಲೂ ಉದ್ಯೋಗ ಸ್ಥಳದಲ್ಲಿಯೂ ಈ ದಿನ ಜವಾಬ್ದಾರಿಗಳ ಒತ್ತಡ ಹೆಚ್ಚಾಗುತ್ತದೆ. ಕೆಲಸದ ಕಾರಣದಿಂದ ಬೇಸರ ಆಗಬಹುದು. ಹಣಕಾಸಿನಲ್ಲಿ ಸಾಲ, ಕಂತು, ತೆರಿಗೆ ಪಾವತಿ ವಿಚಾರಗಳಿಗೆ ವಿಶೇಷವಾದ ಗಮನ ಕೊಡಿ. ವ್ಯಾಪಾರ- ವ್ಯವಹಾರದಲ್ಲಿ ಪ್ರಗತಿ ನಿಧಾನವಾಗಿರುತ್ತದೆ. ಕುಟುಂಬದ ಬೆಂಬಲ ಇದ್ದರೂ ನಿಮ್ಮ ಆಪ್ತರಿಗೆ ಅಂತ ಸಮಯ ಕೊಡಲು ಸಾಧ್ಯವಾಗದೇ ಅಸಮಾಧಾನಕ್ಕೆ ಕಾರಣ ಆಗಬಹುದು. ಸಂಧಿ ನೋವು ಅಥವಾ ಭುಜದ ನೋವು ಕಾಡಬಹುದು. ಶಿಸ್ತು ಮತ್ತು ಸಮಯಪಾಲನೆ ಇಟ್ಟುಕೊಂಡರೆ ದಿನ ನಿಮ್ಮ ಪಾಲಿಗೆ ಕೆಲವು ಅವಕಾಶಗಳು ಹುಡುಕಿಕೊಂಡು ಬರಲಿವೆ. ನಾನು ಮಾಡಿದ್ದೇ ಸರಿ ಎಂದು ಯಾವುದೇ ವಾದ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದಂತೆ ಕೆಲವು ಮುಖ್ಯ ವಿಚಾರಗಳನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಸರ್ಕಾರಿ ಕೆಲಸ- ಕಾರ್ಯಗಳಲ್ಲಿ ಅತಿಯಾದ ಒತ್ತಡ ಹಾಕಬೇಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಹೆಚ್ಚು ಮಾತನಾಡದೆ, ಇತರರ ಜತೆಗೆ ಸೇರಿಕೊಳ್ಳದೆ ಏಕಾಂಗಿಯಾಗಿ ಇರುವುದಕ್ಕೆ ಬಯಸುತ್ತೀರಿ. ಈ ದಿನ ಮನಸ್ಸು ಹೆಚ್ಚು ಅಂತರ್ಮುಖಿ ಆಗಿರುತ್ತದೆ. ಒಂಟಿಯಾಗಿಯೇ ಕೆಲಸ- ಕಾರ್ಯಗಳನ್ನು ಮಾಡುವ ಆಸಕ್ತಿ ಹೆಚ್ಚಾಗುತ್ತದೆ. ಸಂಬಂಧಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ಇವತ್ತಿನ ಮಟ್ಟಿಗೆ ಮುಂದೂಡುವುದು ಒಳಿತು. ಹಣಕಾಸಿನ ವಿಚಾರದಲ್ಲಿ ಷೇರು- ಮ್ಯೂಚುವಲ್ ಫಂಡ್ ಈ ರೀತಿ ಹೊಸ ಹೂಡಿಕೆ ಬೇಡ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಕಡಿಮೆ ಆಗಬಹುದು. ದೇಹದಲ್ಲಿ ನೀರಿನ ಅಂಶದ ಕೊರತೆ ಅಥವಾ ಮೂತ್ರಕೋಶಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳನ್ನು ಅನುಭವಿಸುತ್ತೀರಿ. ಹಣದ ವಿಚಾರವಾಗಿ ಯಾರಿಗೆ ಮಾತು ನೀಡುವ ಮುಂಚಿತವಾಗಿ ಅದು ಸಾಧ್ಯವಾ- ಇಲ್ಲವಾ ಎಂಬ ಎಚ್ಚರಿಕೆ ಅಗತ್ಯ. ಅನಗತ್ಯ ಚರ್ಚೆಗಳಿಂದ ದೂರ ಉಳಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ. ದಿನವನ್ನು ಹೆಚ್ಚು ಧಾವಂತ ಇಲ್ಲದೆ ಕಳೆದರೆ ಒತ್ತಡ ಕಡಿಮೆಯಾಗುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಈ ದಿನ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳು ಮುಖ್ಯ ಸ್ಥಾನ ಪಡೆದುಕೊಳ್ಳುತ್ತವೆ. ಮನೆ ಖರ್ಚು, ಅಲಂಕಾರ ಅಥವಾ ದುರಸ್ತಿ ಬಗ್ಗೆ ಚರ್ಚೆ ನಡೆಯಬಹುದು. ದಿನಸಿ ಪದಾರ್ಥಗಳ ಖರೀದಿಯಲ್ಲಿ ಖರ್ಚು ಹೆಚ್ಚಾಗಲಿದೆ. ಸಾವಯವ ಉತ್ಪನ್ನಗಳ ಖರೀದಿಗಾಗಿಯೋ ಅಥವಾ ಒಣಹಣ್ಣುಗಳ ಖರೀದಿಗೋ ಹೆಚ್ಚು ಖರ್ಚು ಬರಲಿದೆ. ಇನ್ನು ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಮುಂದಿನ ಆರು ತಿಂಗಳ ಒಳಗೆ ಬಡ್ತಿ ಸಿಗುವ ಬಗ್ಗೆ ಸೂಚನೆ ಸಿಗಲಿದೆ. ಭಾವುಕತೆಗೆ ಒಳಗಾಗಿ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಸಂಬಂಧಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಚರ್ಮ, ಕಣ್ಣು ಅಥವಾ ಹಾರ್ಮೋನ್ ಸಮಸ್ಯೆಗಳು ಕಾಡಬಹುದು. ದೈಹಿಕವಾದ ವಿಶ್ರಾಂತಿ ಮತ್ತು ಆಹಾರ ಸಮತೋಲನ ಅಗತ್ಯ. ಕುಟುಂಬಕ್ಕೆ ಸಮಯ ಕೊಟ್ಟರೆ ದಿನ ಸುಖಕರವಾಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಇಡೀ ದಿನ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಬಿಡುವಿಲ್ಲದಷ್ಟು ಕೆಲಸಗಳಲ್ಲಿ ತೊಡಗಿರುತ್ತೀರಿ. ಫೋನ್ ಕರೆಗಳು, ಸಂದೇಶಗಳು, ಭೇಟಿಗಳು ಜಾಸ್ತಿ ಆಗುತ್ತವೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶದ ಮಾತು ಬರಬಹುದು, ಆದರೆ ತಕ್ಷಣ ಒಪ್ಪಿಕೊಳ್ಳಬೇಡಿ. ಪ್ರಭಾವಿಗಳ ಸಂಪರ್ಕದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇನ್ನು ಒಂದು ಕಡೆ ಹಣ ಬರುತ್ತದೆ, ಆದರೆ ಖರ್ಚು ಸಹ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣ ಮಾಡುವಾಗ ಸಮಯ ಮತ್ತು ಹಣ ಎರಡಕ್ಕೂ ಲೆಕ್ಕವಿರಲಿ. ಆರೋಗ್ಯದ ದೃಷ್ಟಿಯಿಂದ ನಿದ್ರೆಗೆ ಕೊರತೆ ಅಥವಾ ತಲೆನೋವು ಕಾಡಬಹುದು. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಹೂಡಿಕೆ ಮಾಡಬೇಕು ಎಂದೇನಾದರೂ ಇದ್ದಲ್ಲಿ ಆತುರಕ್ಕಿಂತ ವಿವೇಕ ಬಳಸಿದರೆ ಲಾಭದಾಯಕವಾಗುತ್ತದೆ. ಜತೆಗೆ ಫೈನಾನ್ಷಿಯಲ್ ಅಡ್ವೈಸರ್ ಗಳ ಸಲಹೆ- ಮಾರ್ಗದರ್ಶನ ಪಡೆದುಕೊಳ್ಳಲು ಆದ್ಯತೆಯನ್ನು ನೀಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಪ್ರಯಾಣದಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ಏಕಾಏಕಿ ಸಿಟ್ಟು ಹೊರ ಹಾಕುವುದಕ್ಕೆ ಹೋಗಬೇಡಿ. ಈ ದಿನ ತಾಳ್ಮೆ ಬಹಳ ಅಗತ್ಯ. ಸರ್ಕಾರಿ ಕೆಲಸ, ದಾಖಲೆ ಅಥವಾ ಬ್ಯಾಂಕ್ ಸಂಬಂಧಿಸಿದ ವಿಚಾರಗಳಲ್ಲಿ ವಿಳಂಬ ಆಗಬಹುದು. ಹಣಕಾಸಿನ ವಿಷಯದಲ್ಲಿ ಸಣ್ಣ ಲಾಭದ ಸೂಚನೆ ಇದ್ದರೂ ಅದನ್ನು ಎಲ್ಲರಿಗೂ ಹೇಳಿಕೊಳ್ಳಬೇಡಿ. ನಿಮ್ಮಲ್ಲಿ ಕೆಲವರು ಚಿನ್ನ- ಬೆಳ್ಳಿ ಇತರ ಬೆಲೆ ಬಾಳುವ ಲೋಹದಲ್ಲಿ ಹೂಡಿಕೆ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಕೆಲಸ ನಿಧಾನವಾಗಿ ಸಾಗುತ್ತದೆ, ಆದರೆ ನಿಮ್ಮ ಕಡೆಯಿಂದ ತಪ್ಪು ಕಡಿಮೆ ಇರುತ್ತದೆ. ಬೆನ್ನು ಅಥವಾ ಕುತ್ತಿಗೆ ನೋವು ಕಾಡಬಹುದು, ಹೆಚ್ಚೆಚ್ಚು ವಾಹನ ಚಾಲನೆಯನ್ನು ತಪ್ಪಿಸಿ. ಕುಟುಂಬದವರ ಜೊತೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕ್ರೆಡಿಟ್ ಕಾರ್ಡ್ ಸಾಲ ಮಾಡದಂತೆ ಜಾಗ್ರತೆ ವಹಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಈ ದಿನ ಖರ್ಚಿನ ವಿಚಾರವೇ ಹೆಚ್ಚು ಯೋಚನೆಗೆ ಕಾರಣ ಆಗುತ್ತದೆ. ಕೆಲವು ಅನಿವಾರ್ಯ ವೆಚ್ಚಗಳನ್ನು ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಉದ್ಯೋಗ ಅಥವಾ ವ್ಯವಹಾರದಲ್ಲಿ ನಿಮ್ಮ ಸಲಹೆಗೆ ಮೌಲ್ಯ ಸಿಗುತ್ತದೆ, ಆದರೆ ತಕ್ಷಣ ಫಲವನ್ನು ನಿರೀಕ್ಷಿಸಬೇಡಿ. ಹಳೆಯ ಸಂಪರ್ಕಗಳು ನಿಮಗೆ ಸಹಾಯ ಮಾಡಬಹುದು. ಈ ಹಿಂದೆ ನಿಮ್ಮ ಜೊತೆಗೆ ಕೆಲಸ ಮಾಡಿದ್ದಂಥ ವ್ಯಕ್ತಿಗಳೇ ಕೆಲವು ಆಕರ್ಷಕ ಆಫರ್ ಗಳನ್ನು ತರಲಿದ್ದಾರೆ. ನಿಮ್ಮ ಸ್ನೇಹಿತರು- ಸಂಬಂಧಿಕರ ಕುಟುಂಬದಲ್ಲಿನ ವಿಚಾರಗಳಲ್ಲಿ ಆಗಿರುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭ ಬರುತ್ತದೆ. ಆರೋಗ್ಯದ ದೃಷ್ಟಿಯಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆ ಆಗುವಂಥ ಬೆಳವಣಿಗೆ ಆಗಬಹುದು. ಹೊಟ್ಟೆ ಅಥವಾ ತೂಕಕ್ಕೆ ಸಂಬಂಧಿಸಿದ ತೊಂದರೆ ಕಾಣಿಸಬಹುದು. ಹಣವನ್ನು ಹಿಡಿತದಲ್ಲಿ ಖರ್ಚು ಮಾಡಿದಲ್ಲಿ ಈ ದಿನ ನಿಮ್ಮ ನಿಯಂತ್ರಣದಲ್ಲಿಯೇ ಇರುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8);

ಈ ದಿನ ನಿಮ್ಮ ಮನಸ್ಥಿತಿ ಹೇಗಿರುತ್ತದೋ ಅದು ನೀವು ಮಾಡುವ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ಬೇಡ ಎನಿಸಿ, ನಿಮ್ಮ ಮನಸ್ಸು ಒಪ್ಪದ ಕೆಲಸಗಳನ್ನೂ ಮಾಡಬೇಕಾದ ಅನಿವಾರ್ಯ ಎದುರಾಗಲಿದೆ. ವ್ಯಾಪಾರ- ವ್ಯವಹಾರಕ್ಕೆ ಸಂಬಂಧಿಸಿದಂತೆ ಬರಬೇಕಾದ ಹಣಕಾಸಿನ ವಿಷಯದಲ್ಲಿ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಬಹುದು. ಒಂದು ವೇಳೆ ಬಾಕಿ ಹಣ ವಸೂಲಿಗೆ ಪ್ರಯತ್ನವನ್ನು ಪಟ್ಟರೆ ಫಲ ಸಿಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಲಹೆ ಹಾಗೂ ಅನುಭವದ ಮಾತುಗಳನ್ನು ಕೇಳಿಸಿಕೊಳ್ಳುವುದರಿಂದ ಉಪಯುಕ್ತವಾಗುತ್ತದೆ. ಕುಟುಂಬದಲ್ಲಿ ಹಿರಿಯರ ಸಲಹೆ ಕೇಳುವುದು ಒಳಿತು. ಸಂಬಂಧಗಳಲ್ಲಿ ಅತಿಯಾದ ಸಂಶಯ ಬೇಡ. ನಿದ್ರೆ ಸರಿಯಾಗಿ ಆಗದಿದ್ದರೆ ದಣಿವು ಹೆಚ್ಚಾಗುತ್ತದೆ. ಈ ದಿನ ಪ್ರೀತಿ- ಪ್ರೇಮದ ವಿಚಾರದಲ್ಲಿ ನಿಧಾನವಾಗಿ, ತಾಳ್ಮೆಯಿಂದ ವರ್ತಿಸಿದರೆ ನೆಮ್ಮದಿ ಇರುವುದಕ್ಕೆ ಸಾಧ್ಯವಾಗುತ್ತದೆ, ಜೊತೆಗೆ ಸಂಬಂಧಗಳಿಗೂ ಹಾನಿ ಆಗುವುದಿಲ್ಲ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಈ ದಿನ ಕೆಲಸದ ವಿಚಾರದಲ್ಲಿ ನೀವು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂಬ ಬೇಸಂದರ್ಭ ಬರುತ್ತದೆ. ಮುಂದೂಡುತ್ತಾ ಬಂದಿದ್ದ ಕೆಲವು ಜವಾಬ್ದಾರಿಗಳನ್ನು ಇಂದೇ ಮುಗಿಸಬೇಕಾಗುತ್ತದೆ. ಗಡುವಿನೊಳಗೆ ಉತ್ತರ ಹೇಳಬೇಕಾದ ಸಂಗತಿಗಳನ್ನು ಆದ್ಯತೆ ಮೇಲೆ ಮಾಡುತ್ತಾ ಬನ್ನಿ. ಇನ್ನು ವ್ಯವಹಾರದ ವಿಷಯಕ್ಕೆ ಬಂದಲ್ಲಿ ಲಾಭಕ್ಕಿಂತ ಸ್ಥಿರತೆ ಮುಖ್ಯವಾಗುತ್ತದೆ. ಹೊಸ ಸಾಲ ಅಥವಾ ಹೂಡಿಕೆ ನಿರ್ಧಾರವನ್ನು ಈ ದಿನದ ಮಟ್ಟಿಗೆ ಕೈ ಬಿಡುವುದು ಒಳಿತು. ಉದ್ಯೋಗದಲ್ಲಿ ಮೇಲಧಿಕಾರಿಗಳ ಜೊತೆ ನಿಮ್ಮ ಭವಿಷ್ಯದ ಬೆಳವಣಿಗೆ ಬಗ್ಗೆ ಮಾತುಕತೆ ನಡೆಯಬಹುದು; ಮಾತಿನಲ್ಲಿ ಸಂಯಮ ಇರಲಿ. ಕುಟುಂಬದ ಖರ್ಚು ಅಥವಾ ಆರೋಗ್ಯ ವಿಚಾರದಲ್ಲಿ ಸ್ವಲ್ಪ ಒತ್ತಡ ಬರುತ್ತದೆ. ಗಂಟಲು, ನಾಲಗೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ತೊಂದರೆ ಕಾಣಿಸಬಹುದು. ಆಹಾರ ಸೇವನೆಯಲ್ಲಿ ಸ್ವಚ್ಛತೆಗೆ ಹಾಗೂ ಸಮಯ ಪಾಲನೆಗೆ ಗಮನವನ್ನು ನೀಡಿ.

ಲೇಖನ- ಎನ್‌.ಕೆ.ಸ್ವಾತಿ

Source link

ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು: ಸಚಿವ ಪ್ರಿಯಾಂಕ್ ಖರ್ಗೆ – Kannada News | Kharge Counters Mohan Bhagwat on RSS Claims, Addresses Central Governments Impact on MNREGA

ಬೆಂಗಳೂರು, ಡಿ.23: ಕರ್ನಾಟಕ ಭವನದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಸಮಾಲೋಚನಾ ಸಭೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ, ಈ ಸಭೆಯಲ್ಲಿ ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ಕಾನೂನು ತಜ್ಞರೊಂದಿಗೆ ಈ ಯೋಜನೆಗೆ ಸಂಬಂಧಿಸಿದಂತೆ ಭವಿಷ್ಯದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿದರು. ಕೇಂದ್ರ ಸರ್ಕಾರವು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಾಶ ಮಾಡಿದೆ ಎಂದು ಖರ್ಗೆ ಆರೋಪಿಸಿದರು. ಈ ಯೋಜನೆಯು ಉದ್ಯೋಗ ಮತ್ತು ಜೀವನೋಪಾಯದ ಭರವಸೆಯನ್ನು ಕಸಿದುಕೊಂಡಿದೆ, ಪಂಚಾಯತ್‌ಗಳ ಅಧಿಕಾರವನ್ನು ಮೊಟಕುಗೊಳಿಸಿದೆ ಮತ್ತು ರಾಜ್ಯಕ್ಕೆ ಧನಸಹಾಯವನ್ನು ಬದಲಿಸಿದೆ. ಇದು ಪಂಚಾಯತ್ ರಾಜ್ ವ್ಯವಸ್ಥೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಅವರು ಟೀಕಿಸಿದರು. ಇದೇ ವೇಳೆ, ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಸೂರ್ಯ ಮತ್ತು ಚಂದ್ರರ ಹುಟ್ಟು ವಿಜ್ಞಾನ. ನಮ್ಮ ದೇಶವು ಸಂವಿಧಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ, ಅದು ಆರ್‌ಎಸ್‌ಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದರು. ಆರ್‌ಎಸ್‌ಎಸ್ ಸಂವಿಧಾನೇತರ ಸಂಸ್ಥೆಯಲ್ಲ. ಆರ್‌ಎಸ್‌ಎಸ್ ಸಂಸ್ಥೆಗೆ ನೋಂದಣಿಯ ಅಗತ್ಯವಿದೆ. ಅದರ ಆದಾಯದ ಮೂಲಗಳ ಬಗ್ಗೆಯೂ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಭಾರತ ದೇಶವು ಯಾವುದೇ ಧಾರ್ಮಿಕ ಗ್ರಂಥಗಳಿಂದ ನಡೆಯುತ್ತಿಲ್ಲ, ಸಂವಿಧಾನದಿಂದ ನಡೆಯುತ್ತದೆ ಎಂದು ಹೇಳಿದರು. ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದರು. 3000 ವರ್ಷಗಳಿಂದ ಇರುವ ಧರ್ಮವನ್ನು ರಕ್ಷಿಸಲು 100 ವರ್ಷವೂ ಆಗದ ಆರ್‌ಎಸ್‌ಎಸ್‌ಗೆ ಯಾರೂ ಬರೆದುಕೊಟ್ಟಿಲ್ಲ ಎಂದರು. ಕಾಂಗ್ರೆಸ್ ಪಕ್ಷವು ಆರ್‌ಎಸ್‌ಎಸ್‌ನ ಸಂವಿಧಾನಿಕ ಮಾನ್ಯತೆಯ ಬಗ್ಗೆ ಪ್ರಶ್ನಿಸುತ್ತದೆ ಎಂದು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿಯನ್ನು ಕೊಚ್ಚಿಕೊಂದ 24 ಗಂಟೆಯಲ್ಲೇ ಹಂತಕರು ಅರೆಸ್ಟ್​

ಹುಬ್ಬಳ್ಳಿ, ಡಿಸೆಂಬರ್​ 23: ಹುಬ್ಬಳ್ಳಿ ಮರ್ಯಾದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು 24 ಗಂಟೆಗಳ ಒಳಗಾಗಿ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ನಿನ್ನೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಫಕೀರಗೌಡ ಪಾಟೀಲ್, ಬಸನಗೌಡ ಪಾಟೀಲ್ ಮತ್ತು ಗುರಸಿದ್ದಗೌಡ ಪಾಟೀಲ್ ಎಂಬ ಮೂವರು ಇನಾಂ ವೀರಪುರ ಗ್ರಾಮದವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮೃತ ಯುವತಿಯ ತಂದೆಯೂ ಒಬ್ಬರಾಗಿದ್ದಾರೆ. ಮೃತ ಯುವತಿಯ ಪತಿ ವಿವೇಕಾನಂದ ಅವರು ಸುಮಾರು 20 ಜನರ ವಿರುದ್ಧ ದೂರು ನೀಡಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಡಿ. 30ರಂದು ಕಸ್ಟಮ್ಸ್ ಇಲಾಖೆಯಿಂದ ಹರಾಜು: ಅತ್ಯಂತ ಕಡಿಮೆ ಬೆಲೆಗೆ ಸಿಗಲಿವೆ ಈ ವಸ್ತುಗಳು – Kannada News | Bengaluru Customs Online Auction via MSTC: Get Electronic Items, Vehicles, Furniture at Low Prices

ಬೆಂಗಳೂರು, ಡಿಸೆಂಬರ್​​ 23: ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (CBIC) ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿರುವ ದೇಶಕ್ಕೆ ಅಕ್ರಮವಾಗಿ ಸಾಗಾಟ ಮಾಡಿದ ವಸ್ತುಗಳ ಹರಾಜು ಪ್ರಕ್ರಿಯೆ ಡಿಸೆಂಬರ್​​ 30ರಂದು ನಡೆಯಲಿದೆ. ಎಕ್ಸ್​​ ಖಾತೆಯಲ್ಲಿ ಕಸ್ಟಮ್ಸ್ ಇಲಾಖೆ ನೀಡಿರುವ ಮಾಹಿತಿಯಂತೆ, ಈ ಹರಾಜಿನಲ್ಲಿ ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳು, ಐಪ್ಯಾಡ್‌ಗಳು ಹಾಗೂ ಟಿವಿಗಳಂತಹ ಉತ್ಪನ್ನಗಳು ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಬಹಳ ಕಡಿಮೆ ದರದಲ್ಲಿ ಲಭ್ಯವಾಗಲಿವೆ.

ವಸ್ತುಗಳ ಖರೀದಿ ಹೇಗೆ?

ವಿದೇಶಗಳಿಂದ ಖರೀದಿಸಿ ತಂದ ವಸ್ತುಗಳಿಗೆ ದಾಖಲೆಗಳನ್ನು ಪ್ರಯಾಣಿಕರು ಒದಗಿಸಲು ವಿಫಲವಾದಲ್ಲಿ, ಆ ವಸ್ತುಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ವಶಪಡಿಸಿಕೊಂಡ ವಸ್ತುಗಳನ್ನು ದಂಡ ಮತ್ತು ಶುಲ್ಕಗಳನ್ನು ಪಾವತಿಸುವ ಮೂಲಕ ನಿಗದಿತ ಅವಧಿಯಲ್ಲಿ ಮರಳಿ ಪಡೆಯಬಹುದು. ಆದರೆ, ಅವನ್ನು ಪಡೆಯಲು ಪ್ರಯಾಣಿಕರು ವಿಫಲವಾದಲ್ಲಿ ಆ ವಸ್ತುಗಳನ್ನು ಕಸ್ಟಮ್ಸ್ ಗೋದಾಮುಗಳಿಗೆ ಕಳುಹಿಸಲಾಗುತ್ತದೆ. ಗೋದಾಮುಗಳಲ್ಲಿ ಸಂಗ್ರಹವಾಗಿರುವ ವಸ್ತುಗಳನ್ನು ವಿಲೇವಾರಿ ಮಾಡಲು ಕಸ್ಟಮ್ಸ್ ಇಲಾಖೆ ನಿಯಮಿತವಾಗಿ ಹರಾಜುಗಳನ್ನು ನಡೆಸುತ್ತದೆ. ಇದೇ ರೀತಿಯಲ್ಲಿ, ಬೆಂಗಳೂರು ಕಸ್ಟಮ್ಸ್ ಕೂಡ ಈ ತಿಂಗಳ ಕೊನೆಯಲ್ಲಿ ಹರಾಜು ಆಯೋಜಿಸಲು ಮುಂದಾಗಿದೆ.

ಸರ್ಕಾರದ ಅಧಿಕೃತ ವೆಬ್‌ಸೈಟ್ ಎಂಎಸ್‌ಟಿಸಿ (ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್) ಇ-ಕಾಮರ್ಸ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಆನ್‌ಲೈನ್ ಹರಾಜಿನಲ್ಲಿ ಭಾರತೀಯ ನಾಗರಿಕರು ಈ ವಸ್ತುಗಳನ್ನು ಖರೀದಿಸಬಹುದಾಗಿದೆ. ಎಲೆಕ್ಟ್ರಾನಿಕ್ಸ್ ವಸ್ತುಗಳಷ್ಟೇ ಅಲ್ಲದೆ, ವಾಹನಗಳು, ವಿದ್ಯುತ್ ಉಪಕರಣಗಳು, ಫರ್ನಿಚರ್ ಹಾಗೂ ಉಡುಪುಗಳು ಸಹ ಎಂಎಸ್‌ಟಿಸಿ ಪೋರ್ಟಲ್‌ನಲ್ಲಿ ಮಾರುಕಟ್ಟೆಯ ಬೆಲೆಗಿಂತ ಕಡಿಮೆ ದರದಲ್ಲಿ ದೊರೆಯಲಿವೆ.

ಇದನ್ನೂ ಓದಿ: ಕೈಕೊಟ್ಟ ಕೇಂದ್ರದ ವಾಹನ್-4, ಬೇರೆ ರಾಜ್ಯಗಳಿಗೆ ತೆರಳುವ ವಾಹನ ಮಾಲೀಕರು ಪರದಾಟ

ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸೋದು ಹೇಗೆ?

ಹಂತ 1: ಎಂಎಸ್‌ಟಿಸಿ ಇ-ಕಾಮರ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಮಧ್ಯಭಾಗದಲ್ಲಿರುವ ನೀಲಿ ಬಣ್ಣದ ‘Search Auction’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ಹಂತ 3: ‘Upcoming Auction’ ಆಯ್ಕೆ ಮಾಡಿ >> ‘Select: All’ ಆಯ್ಕೆ ಮಾಡಿ ಮತ್ತು ‘from’ ಹಾಗೂ ‘to’ ದಿನಾಂಕಗಳನ್ನು ನಮೂದಿಸಿ.

ಹಂತ 4: ನಂತರ ‘Filter by Office’ ಆಯ್ಕೆ ಮಾಡಿ >> State: ಕರ್ನಾಟಕ >> City: ‘BLR-MSTC Bangalore Office’ ಆಯ್ಕೆ ಮಾಡಿ >> Item Type (ಎಡಭಾಗ): ‘Electronics’ >> Computers / Phones / Tablet / Peripherals ಆಯ್ಕೆ ಮಾಡಿ ಮತ್ತು ‘Search’ ಮೇಲೆ ಕ್ಲಿಕ್ ಮಾಡಿ.

ಹಂತ 5: ಕ್ಯಾಪ್ಚಾ ನಮೂದಿಸಲು ಕೇಳಲಾಗುತ್ತದೆ. ನಂತರ ಮುಂದಿನ ಪುಟಕ್ಕೆ ಅನುಮತಿ ದೊರಕಿದ ಮೇಲೆ, ಕೆಳಗೆ ಸ್ಕ್ರೋಲ್ ಮಾಡಿ ‘mobile/tablet’ ವಿಭಾಗವನ್ನು ಹುಡುಕಿ. ಅಲ್ಲಿ MSTC/BLR/Additional Commissioner of Customs Air Cargo Complex Division/1/Bengaluru/25-26/50088 ಎಂಬ ಲಿಂಕ್ ಕಾಣುತ್ತದೆ. ಅದರಲ್ಲಿ ‘Click Here’ ಮೇಲೆ ಕ್ಲಿಕ್ ಮಾಡಿ.

ಹಂತ 6: ಬಳಿಕ ಹೊಸ ಬಳಕೆದಾರರಾಗಿ ನಿಮ್ಮ ನೋಂದಣಿ ಆಗುತ್ತದೆ. ‘New Registration’ ಟ್ಯಾಬ್ ಪಕ್ಕದಲ್ಲೇ ನೋಂದಣಿ ಕುರಿತು ವೀಡಿಯೋ ಮಾರ್ಗದರ್ಶಿಯೂ ಲಭ್ಯವಿರುತ್ತದೆ. ನೋಂದಣಿ ವೇಳೆ ‘Buyer’ ಆಗಿ ನೋಂದಾಯಿಸಲು ಇ-ಹರಾಜಿನ ಸಾಮಾನ್ಯ ನಿಯಮಗಳು ಮತ್ತು ಷರತ್ತುಗಳನ್ನು (GTC) ಅಂಗೀಕರಿಸಬೇಕು. ಮುಂದಿನ ಪುಟದಲ್ಲಿ ‘Buyer Specific Terms and Conditions’ (BSTC) ಅನ್ನು ಅಂಗೀಕರಿಸಿ ‘Agree’ ಮೇಲೆ ಕ್ಲಿಕ್ ಮಾಡಬೇಕು.

ಹಂತ 7: ನಂತರ ಖರೀದಿದಾರರ ನೋಂದಣಿ ಫಾರ್ಮ್ ತೆರೆಯುತ್ತದೆ. ಅಲ್ಲಿ ‘General Auction’ ಆಯ್ಕೆ ಮಾಡಿ ಮತ್ತು ‘Proceed’ ಬಟನ್ ಒತ್ತಿರಿ.

ಹಂತ 8: ನಿಮ್ಮ ಇಮೇಲ್ ಐಡಿ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಭದ್ರತಾ ಪರಿಶೀಲನೆ ಪೂರ್ಣಗೊಳಿಸಿ. ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಮೊಬೈಲ್ OTP ಮತ್ತು ಇಮೇಲ್ OTP ನಮೂದಿಸಿದ ಬಳಿಕ ‘Submit’ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಹಂತ 9: OTP ಪರಿಶೀಲನೆ ಯಶಸ್ವಿಯಾದ ನಂತರ, ಹೊಸ ‘Buyer Registration Form’ ವೆಬ್‌ಪೇಜ್ ತೆರೆಯುತ್ತದೆ. ಅಲ್ಲಿ ಖರೀದಿದಾರರ ಪ್ರಕಾರ (General Auction), ಸಂಸ್ಥೆಯ ಹೆಸರು (ಇದ್ದರೆ), ವಿಳಾಸ (ದೇಶ, ರಾಜ್ಯ, ನಗರ, ಪಿನ್‌ಕೋಡ್), ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಸೇರಿದಂತೆ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಜಿಎಸ್‌ಟಿ ನೋಂದಣಿ ಸಂಖ್ಯೆ ಇದ್ದಲ್ಲಿ ಅದನ್ನು ನಮೂದಿಸಬಹುದು. ಇದಲ್ಲದೆ, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಮಾಣೀಕೃತ / ನಿರ್ಬಂಧಿತ ವಸ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಕೇಳಲಾಗುತ್ತದೆ. ಅನ್ವಯವಾಗಿದ್ದರೆ ಸೂಕ್ತ ಆಯ್ಕೆಯನ್ನು ಮಾಡಿ ಮುಂದಿನ ಹಂತಕ್ಕೆ ಸಾಗಬೇಕು. ಈ ಮೂಲಕ ನೋಂದಣಿ ಪೂರ್ಣಗೊಳ್ಳುತ್ತದೆ.

ಹಂತ 10: ನಂತರ ಮತ್ತೆ ನೋಂದಣಿ ಪೋರ್ಟಲ್‌ಗೆ ಹೋಗಿ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗಬೇಕು. ಅದಾದ ಬಳಿಕ ಇ-ಪಾವತಿ ಪೋರ್ಟಲ್‌ಗೆ ಕಳುಹಿಸಲಾಗುತ್ತದೆ. ಇಲ್ಲಿ NEFT ಅಥವಾ RTGS ಮೂಲಕ ಶುಲ್ಕ ಪಾವತಿಸಬೇಕು. ಪರದೆ ಮೇಲಿನ ಸೂಚನೆಗಳನ್ನು ಅನುಸರಿಸಿ ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ. ಪಾವತಿ ಮುಗಿದ ನಂತರ ಆನ್‌ಲೈನ್ ಪಾವತಿ ಚಲನ್ ಪಡೆಯಬೇಕು.

ಪಾವತಿ ಯಶಸ್ವಿಯಾದ ಬಳಿಕ ಖರೀದಿದಾರರ ಖಾತೆ ಸಕ್ರಿಯಗೊಳ್ಳುತ್ತದೆ ಮತ್ತು ನೋಂದಾಯಿತ ಹರಾಜುದಾರರ ಪೇಜ್​​ಗೆ ಪ್ರವೇಶ ದೊರೆಯುತ್ತದೆ. ನಂತರ, ಹರಾಜು ನಡೆಯುವ ದಿನ ಎಂಎಸ್‌ಟಿಸಿ ಇ-ಕಾಮರ್ಸ್ ಪೋರ್ಟಲ್‌ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ಬೇಕಾದ ವಸ್ತುಗಳನ್ನು ಖರೀದಿಸಬಹುದು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:43 pm, Tue, 23 December 25

Source link

ICC Rankings: ನಂಬರ್ 1 ಕಿರೀಟ ಕಳೆದುಕೊಂಡ ಸ್ಮೃತಿ, ಇತಿಹಾಸ ಸೃಷ್ಟಿಸಿದ ದೀಪ್ತಿ ಶರ್ಮಾ – Kannada News | ICC Women’s Rankings: Deepti Sharma Rises, Smriti Mandhana Drops

ಐಸಿಸಿ ಬಿಡುಗಡೆ ಮಾಡಿರುವ ಮಹಿಳಾ ಕ್ರಿಕೆಟ್​ನ ಟಿ20 ಶ್ರೇಯಾಂಕದಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ. ಏತನ್ಮಧ್ಯೆ, ಸ್ಮೃತಿ ಮಂಧಾನಗೆ ಹಿನ್ನಡೆಯಾಗಿದ್ದು, ಬ್ಯಾಟರ್​ಗಳ ಏಕದಿನ ಶ್ರೇಯಾಂಕದಲ್ಲಿ ತಮ್ಮ ನಂಬರ್ ಒನ್ ಸ್ಥಾನವನ್ನು ಕಳೆದುಕೊಂಡಿದ್ದಾರೆ.

Source link

Horoscope Today 24 December : ಇಂದು ಈ ರಾಶಿಯವರಿಂದ ಭವಿಷ್ಯ ನೀರೀಕ್ಷೆಗೆ ಪ್ರೋತ್ಸಾಹ, ಅಧಿಕ ಅವಲಂಬನೆ – Kannada News | Horoscope Today in Kannada on 24 December Wednesday; Dina Bhavishya Tithi Panchanga Details here

ಮೇಷ ರಾಶಿ :

ಆಸ್ತಿ ಸಂಬಂಧಿತ ಕನಸು ಫಲಿಸುವುದು. ತಪ್ಪಿಲ್ಲದ ಕಡೆ ಭಯ ಬೇಡ. ಸರ್ಕಾರಿ ಉದ್ಯೋಗದಲ್ಲಿ ಪ್ರಾರ್ಥನೆ ಫಲಿಸುವ ಸೂಚನೆ. ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ. ಅನಾರೋಗ್ಯದ ನಡುವೆಯೂ ಉತ್ಸಾಹದಿಂದ ಇರುವಿರಿ. ಶತ್ರುಗಳ ಮುಖಾಮುಖಿ ಭೇಟಿಯ ಸಂದರ್ಭವು ಬರುವುದು. ನೀವು ಇಂದು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಎಚ್ಚರವಿರಲಿ. ಕೃಷಿಯಲ್ಲಿ ಪ್ರಕೃತಿ ಅನುಕೂಲ. ಮಾರಾಟದಲ್ಲಿ ನಂಬಿಕೆಯ ಗ್ರಾಹಕರು. ದಾಂಪತ್ಯದಲ್ಲಿ ಪರಸ್ಪರ ಕರುಣೆ ಹೆಚ್ಚುತ್ತದೆ. ವಿದ್ಯಾಭ್ಯಾಸದಲ್ಲಿ ಕಲ್ಪನೆ ಶಕ್ತಿ ಜಾಗರೂಕವಾಗಲಿದೆ. ಒಂದೊಂದು ರೂಪಾಯಿಯನ್ನೂ ಜೊಪಾನ ಮಾಡುವಿರಿ. ಎಂತಹ ಸನ್ನಿವೇಶದಲ್ಲಿಯೂ ನೀವು ವಿಚಲಿತರಾಗುವುದಿಲ್ಲ. ಸಿಟ್ಟಗೊಂಡು ಮಾತನಾಡಬೇಕಾದ ಅವಶ್ಯಕತೆ ಇಲ್ಲ.

ವೃಷಭ ರಾಶಿ:

ಕೃಷಿಯಲ್ಲಿ ತಂತ್ರಜ್ಞಾನದ ಪ್ರಯೋಗವಾಗಲಿದೆ. ಮಾರಾಟದಲ್ಲಿ ಹೊಸ ಆಲೋಚನೆ ಫಲಕಾರಿ. ದಾಂಪತ್ಯದಲ್ಲಿ ಸ್ನೇಹಭಾವ. ಓದಿನಲ್ಲಿ ವಿಭಿನ್ನ ಆಸಕ್ತಿ. ಮಕ್ಕಳಿಂದ ಅಚ್ಚರಿ ಸುದ್ದಿ ನಿಮಗೆ ಸಂತಸ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು. ವಿದೇಶದ ವ್ಯವಹಾರದಲ್ಲಿ ಪಾಲುದಾರಿಕೆ ಇರಲಿದೆ. ವೃತ್ತಿಯನ್ನು ಹೊರತುಪಡಿಸಿದ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ದಾಂಪತ್ಯದ ಒಳ ಜಗಳವು ಇಂದು ವ್ಯಕ್ತವಾಗಬಹುದು. ನಿಮ್ಮನ್ನು ನಂಬಿದವರಿಗೆ ಸಹಾಯ ಮಾಡಲಾಗದು. ಉತ್ತಮ ಸಮಯದ ನಿರೀಕ್ಷೆಯಲ್ಲಿ ಸಮಾಧಾನ ಇರುವುದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ಕೊಡುವುದು ಬೇಡ. ಆಸ್ತಿ ಹಂಚಿಕೆ ವಿಚಾರದಲ್ಲಿ ಗೊಂದಲ. ಸರ್ಕಾರಿ ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆ. ಮಕ್ಕಳಿಂದ ನೆಮ್ಮದಿಯು ಪಡೆಯವಿರಿ. ವ್ಯವಹಾರವನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಲು ಸೋಲಾಗಬಹುದು. ನಿಮ್ಮ ಗುರಿಯನ್ನು ತಲುಪಲು ನಿಮಗೆ ವಿಘ್ನಗಳು ಬರಬಹುದು. ಅಂದುಕೊಂಡಿದ್ದನ್ನು ಸಾಧಿಸಲಾಗದು ಎಂಬ ಅಳುಕು ನಿಮ್ಮಲ್ಲಿ ಇರುವುದು.

ಮಿಥುನ ರಾಶಿ:

ಮ‌ನೆಯ ಕಾರ್ಯಗಳಿಗೆ ಮಕ್ಕಳಿಂದ ಸಹಕಾರ. ಆಸ್ತಿ ದಾಖಲೆ ತಿದ್ದುಪಡಿ. ಭಯ ನಿಧಾನವಾಗಿ ಇಳಿಮುಖ. ಸರ್ಕಾರಿ ಉದ್ಯೋಗದಲ್ಲಿ ಕಠಿಣ ಪರಿಶ್ರಮ. ನಂಬಿಕೆಯಲ್ಲಿ ದ್ರೋಹವಾಗಿದ್ದು ಯಾರನ್ನು ನಂಬಬೇಕು ಎನ್ನುವ ಗೊಂದಲ ಕಾಣಿಸುವುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಆಸೆ ಅತಿಯಾಗುವುದು. ವೈಯಕ್ತಿಕ‌ ಕೆಲಸಗಳು ಬಹಳಷ್ಟು ಇದ್ದು, ಮಾಡಲು ಸಮಯ ಸಾಲದು. ಮಿತ್ರರ ಸಹಾಯದಿಂದ ನಿಮಗೆ ಧನ ಸಹಾಯವು ಸಿಗಬಹುದು. ಸಾರ್ವಜನಿಕವಾಗಿ ಯಾರಾದರೂ ನಿಮ್ಮನ್ನು ಅವಮಾನ ಮಾಡುವ ಸಾಧ್ಯತೆ ಇದೆ. ನಿಮಗೆ ಪರಿಚಿತರನ್ನು ಆಪ್ತರನದನಾಗಿ ಮಾಡಿಕೊಳ್ಳುವಿರಿ. ಯಾರಿಗೋ ಸಿಗುವ ಸಂಪತ್ತು ನಿಮ್ಮ ಕೈ ಸೇರುವುದು. ಸಂಗಾತಿಯ ಭಾವನೆಗಳಿಗೆ ಸ್ಪಂದಿಸದಿದ್ದರೆ ನಿಮ್ಮ ಮೇಲೆ ಕೋಪಗೊಳ್ಳುವರು. ಕೃಷಿಯಲ್ಲಿ ಶ್ರಮ ಹೆಚ್ಚು ಫಲ ಕಡಿಮೆ. ಮಾರಾಟದಲ್ಲಿ ಸ್ಥಿರತೆ. ದಾಂಪತ್ಯದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ವಿದ್ಯಾಭ್ಯಾಸದಲ್ಲಿ ತಾಳ್ಮೆ ಅಗತ್ಯ. ಗೆಳೆತನದಿಂದ ಸಲ್ಲದ ಮಾತುಗಳು ನಿಮ್ಮ ಬಗ್ಗೆ ಬರಬಹುದು. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು.

ಕರ್ಕಾಟಕ ರಾಶಿ:

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಗುರಿ ಸ್ಪಷ್ಟ. ಮಕ್ಕಳಿಗೆ ಕೊಡುವ ಶಿಕ್ಷಣ ಚರ್ಚೆ. ಆಸ್ತಿ ಸಂಬಂಧಿತ ದೂರ ಪ್ರಯಾಣ. ಸರ್ಕಾರಿ ಉದ್ಯೋಗದಲ್ಲಿ ಅವಕಾಶದ ಸೂಚನೆ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುನ್ನುಗ್ಗುವುದು ಸೂಕ್ತ. ನಿಮಗೆ ಇಷ್ಟವಾದ ವಿಚಾರವನ್ನು ತಕ್ಷಣ ಪಡೆಯುವಿರಿ. ಉದ್ಯೋಗವಿಲ್ಲವೆಂಬುದು ನಿಮಗೆ ಅವಮಾನದ ಸಂಗತಿಯಾಗಲಿದೆ. ಸಿಕ್ಕ ಅವಕಾಶವನ್ನು ಸದ್ಯ ಬಳಸಿಕೊಳ್ಳಿ. ನಿಮ್ಮ‌ ನಕಾರಾತ್ಮಕ ಆಲೋಚನೆಗಳಿಂದ ಕುಟುಂಬದ ಆಲೋಚನೆಯನ್ನು ಕೆಡಿಸುವಿರಿ. ನಿಮ್ಮವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ. ಅಪರಿಚಿತರು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಲಹೆಯನ್ನು ಕೊಡಬಹುದು.‌ ಕೃಷಿಯಲ್ಲಿ ವಿಸ್ತರಣೆ ಯೋಚನೆ. ಮಾರಾಟದಲ್ಲಿ ದೂರದ ವ್ಯವಹಾರ ಲಾಭ. ದಾಂಪತ್ಯದಲ್ಲಿ ಆಶಾವಾದ. ಆತುರದಲ್ಲಿ ನಿಮ್ಮ ಎಲ್ಲ ಕಾರ್ಯವೂ ಮೊಟಕುಮಾಡುವಿರಿ.

ಸಿಂಹ ರಾಶಿ:

ವಿದ್ಯಾಭ್ಯಾಸದಲ್ಲಿ ಆಳವಾದ ಅಧ್ಯಯನದ ಆರಂಭ. ಮಕ್ಕಳ ಹಠವನ್ನು ನೀವು ಕಡಿಮೆ ಮಾಡಬೇಕಾಗುತ್ತದೆ. ಆಸ್ತಿ ವಿವಾದ ಎಚ್ಚರಿಕೆ. ಮನೋಭಯ ನಿಯಂತ್ರಣ. ಸರ್ಕಾರಿ ಉದ್ಯೋಗದಲ್ಲಿ ಅನಿರೀಕ್ಷಿತ ತಿರುವು. ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾದರೂ ಮಾಡುವಿರಿ. ಪಾಲುದಾರಿಕೆಯಲ್ಲಿ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ಕಾರ್ಯದ ಒತ್ತಡವನ್ನು ಸಹಿಸಲು ಅಸಾಧ್ಯವೆನಿಸುವುದು. ಕಛೇರಿಯಲ್ಲಿ ನಾನಾ‌ ಕಡೆಗಳಿಂದ ಒತ್ತಡ ಬರಬಹುದು. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ. ಕೃಷಿಯಲ್ಲಿ ಗುಪ್ತ ಸಮಸ್ಯೆ ಗಮನಿಸಿ ಆದಾಯ ಹೆಚ್ಚಳಕ್ಕೆ ಪ್ರಯತ್ನ. ಮಾರಾಟದಲ್ಲಿ ಪರೋಕ್ಷ ಲಾಭ. ದಾಂಪತ್ಯದಲ್ಲಿ ಸಂಶಯ ಬೇಡ. ಅಗತ್ಯವಿರುವ ಸಂಪತ್ತನ್ನು ಸ್ನೇಹಿತರಿಂದ ಸಾಲವಾಗಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವುದು ಬೇಡ. ಮನೋರಂಜನೆಗೆ ಹಣವು ಖರ್ಚಾಗುವುದು.

ಕನ್ಯಾ ರಾಶಿ:

ಓದಿನಲ್ಲಿ ಕಲಾತ್ಮಕ ವಿಷಯಗಳು ಚೆನ್ನಾಗಿ ಅರ್ಥವಾಗಲಿದೆ. ಮಕ್ಕಳೊಂದಿಗೆ ಸಮಯ ಕಳೆಯಿರಿ. ಆಸ್ತಿ ವಿಷಯದಲ್ಲಿ ಒಪ್ಪಂದ ಸಾಧ್ಯ. ಅಜ್ಞಾತ ಭಯದಿಂದ ಕಷ್ಟ. ಸರ್ಕಾರಿ ಉದ್ಯೋಗಕ್ಕೆ ನಿರೀಕ್ಷೆ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು.‌ ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಅನಿಶ್ಚಿತ ಕೆಲಸದಲ್ಲಿ ಆದಾಯವನ್ನು ಹೆಚ್ಚು ಪಡೆಯುವಿರಿ. ಸರ್ಕಾರಿ ಕೆಲಸಗಳು ಒತ್ತಡದ ಕಾರಣಕ್ಕೆ ಮುಂದುವರಿಯುವುದು. ನೀವು ಮೌನದಿಂದ ಇದ್ದರೆ ಒಪ್ಪಿಗೆ ಕೊಟ್ಟಿದ್ದೀರಿ ಎಂದಾಗುವುದು. ಸಮಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಕಾಲಕ್ಕೆ ಮುಗಿಸುವುದು ಉತ್ತಮ. ಕೃಷಿಯಲ್ಲಿ ಅಸಾಧ್ಯದ ಸಾಧನೆಗೆ ಪ್ರಯತ್ನ. ಮಾರಾಟದಲ್ಲಿ ಸಮತೋಲನ ಅಗತ್ಯ. ದಾಂಪತ್ಯದಲ್ಲಿ ಸೌಹಾರ್ದ ವಾತಾವರಣ. ಆಪ್ತರನ್ನು ದೂರ ಮಾಡಿಕೊಳ್ಳಬೇಕಾಗುವುದು. ಒಂಟಿಯಾಗಿ ವಾಹನವನ್ನು ಚಲಾಯಿಸುವುದು ಬೇಡ.

ತುಲಾ ರಾಶಿ:

ಚರಾಸ್ತಿಯಗಳನ್ನ ದುರಸ್ತಿ ಮಾಡಿಸುವಿರಿ. ಸರ್ಕಾರಿ ಉದ್ಯೋಗದಲ್ಲಿ ದಾಖಲೆ ಕೆಲಸ ಹೆಚ್ಚಾಗುತ್ತದೆ. ವ್ಯಾಪಾರದ ಸ್ಥಳದಲ್ಲಿ ಇಕ್ಕಟ್ಟು ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ರಾಜಕೀಯ ಏರಿಳಿತವನ್ನು ನೀವು ಊಹಿಸುವುದು ಕಷ್ಟವಾದೀತು. ಸಾಲದಿಂದ ಬಿಡುಗಡೆ ಸಿಕ್ಕ ಕಾರಣ ಕುಟುಂಬದಲ್ಲಿ ಸೌಖ್ಯವಿರುವುದು. ಎಲ್ಲ ಕೆಲಸಗಳೂ ಅಪೂರ್ಣವಾಗಿದ್ದು ನಿಮಗೆ ಅಸಮಾಧನ ಇರುವುದು. ನೂತನ ವಾಹನ ಖರೀದಿಯಿಂದ ಸಂತೋಷವಾಗಲಿದೆ. ಕಾರ್ಯದ ಒತ್ತಡದಿಂದ ತಾಳ್ಮೆಯನ್ನು ಕಳೆದುಕೊಳ್ಳಬೇಕಾಗುವುದು. ಕೃಷಿಯಲ್ಲಿ ಸಣ್ಣ ಸಣ್ಣ ಲೆಕ್ಕಾಚಾರದಿಂದ ಲಾಭ. ಮಾರಾಟದಲ್ಲಿ ನಿಧಾನ ಪ್ರಗತಿಯನ್ನು ಕಂಡುಕೊಳ್ಳುವಿರಿ. ದಾಂಪತ್ಯದಲ್ಲಿ ಅತಿಯಾದ ವಿಮರ್ಶೆ ಬೇಡ. ವಿದ್ಯಾಭ್ಯಾಸದಲ್ಲಿ ಶಿಸ್ತು ಫಲ ಕೊಡುತ್ತದೆ. ಮಕ್ಕಳ ಚಟುವಟಿಕೆ ಗಮನಿಸಿ. ಯಾವ ಕಾರ್ಯಕ್ಕೂ ಉತ್ಸಾಹವೇ ಇಲ್ಲದಂತಾದೀತು. ಯಾರಿಂದಲಾದರೂ ಪ್ರಚೋದನೆ ಸಿಕ್ಕೀತು. ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ.

ವೃಶ್ಚಿಕ ರಾಶಿ :

ಆಸ್ತಿ ಖರೀದಿಯಲ್ಲಿ ಹಲವು ಯೋಚನೆ. ಅಂತರಂಗದ ಭಯ ನಿವಾರಣೆ ಅನೇಕರ ಪ್ರಯತ್ನ. ಸರ್ಕಾರಿ ಉದ್ಯೋಗ ಪ್ರಯತ್ನಕ್ಕೆ ಪ್ರೋತ್ಸಾಹ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ನಿಮಗೆ ಸಿಗುವ ಸಾಮಾಜಿಕವಾಗಿ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡೀತು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ಮೇಲಧಿಕಾರಿಗಳು ನಿಮ್ಮ ಮೇಲೆ ಒತ್ತಡ ತಂದು ಕೆಲಸವನ್ನು ಮಾಡಿಸಿಕೊಳ್ಳುವರು. ವಿರೋಧಿಗಳನ್ನು ಲೆಕ್ಕಿಸದೇ ನಿಮ್ಮಷ್ಟಕ್ಕೆ ಇರುವಿರಿ. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ನಿಮ್ಮ ಬಯಕೆಗಳನ್ನು ಯಾರ ಬಳಿಯೂ ಪ್ರಕಟಪಡಿಸುವುದಿಲ್ಲ. ಕೃಷಿಯಲ್ಲಿ ನಾಯಕತ್ವ ತೋರಬಹುದು. ಮಾರಾಟದಲ್ಲಿ ಸ್ಪರ್ಧೆ ಹೆಚ್ಚಾಗುತ್ತದೆ. ದಾಂಪತ್ಯದಲ್ಲಿ ಅಹಂಕಾರ ತಪ್ಪಿಸಿ. ವಿದ್ಯಾಭ್ಯಾಸದಲ್ಲಿ ಸಾಧನೆ. ಮಕ್ಕಳಿಗೆ ಮಾರ್ಗದರ್ಶನ ಅಗತ್ಯ. ಸ್ಪರ್ಧಾತ್ಮಕ ಪರೀಕ್ಷೆಗೆ ಇನ್ನೂ ಹೆಚ್ಚಿನ ಶ್ರಮವು ಬೇಕು. ಎಂದೋ ಕಾಣೆಯಾದ ವಸ್ತುವು ಅನಿರೀಕ್ಷಿತವಾಗಿ ಸಿಗುವುದು. ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು.

ಧನು ರಾಶಿ:

ದಾಂಪತ್ಯದಲ್ಲಿ ಭಾವನಾತ್ಮಕ ಬೆಂಬಲ ಕಡಿಮೆಯಾಗಬಹುದು. ಓದಿನಲ್ಲಿ ಸ್ಮರಣಶಕ್ತಿ ಹೆಚ್ಚಳ. ಮಕ್ಕಳು ಹೆಮ್ಮೆ ತರಿಸುವರು. ಆಸ್ತಿ ವಿಷಯದಲ್ಲಿ ಕುಟುಂಬ ಸಲಹೆ ಪಡೆಯಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ಸಂಗಾತಿಯಿಂದ ನಿರೀಕ್ಷಿತ ಬೆಂಬಲವು ಸಿಗದು. ಧಾರ್ಮಿಕ ವಿಷಯದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗಲಿದೆ. ಸಕಾರಾತ್ಮಕ ಚಿಂತನೆಯನ್ನು ದೂರ ಮಾಡಿಕೊಳ್ಳುವಿರಿ.‌ ಸದಾ ಅನುಮಾನದಿಂದಲೇ ಇರುವಿರಿ.‌ ನಿಮ್ಮ ಗೌರವಕ್ಕೆ ತೊಂದರೆಯಾಗುವ ಕಡೆ ನೀವು ಹೋಗುವುದು ಬೇಡ.‌ ಕೃಷಿಯಲ್ಲಿ ನೀರಿನ ನಿರ್ವಹಣೆ ಮುಖ್ಯ. ಮಾರಾಟದಲ್ಲಿ ಹಳೆಯ ಸಂಪರ್ಕ ಲಾಭ. ಸರ್ಕಾರಿ ಉದ್ಯೋಗದಲ್ಲಿ ಶುಭ ಸುದ್ದಿ ಸಾಧ್ಯ. ಕುತೂಹಲದಲ್ಲಿ ಈ ದಿನವನ್ನು ಕಳೆಯುವಿರಿ. ಪತ್ರವ್ಯವಹಾರವನ್ನು ಸರಿಯಾಗಿ ಇಟ್ಟುಕೊಳ್ಳಿ. ಎಲ್ಲದಕ್ಕೂ ಯಾರನ್ನಾದರೂ ಕಾರಣವಾಗಿಸುವಿರಿ.

ಮಕರ ರಾಶಿ:

ವಿದ್ಯಾಭ್ಯಾಸದಲ್ಲಿ ಗಮನ ಚದುರಬಹುದು. ಮಕ್ಕಳ ಮಾತು ಆಲಿಸಿ. ಆಸ್ತಿ ವ್ಯವಹಾರದಲ್ಲಿ ಎಚ್ಚರಿಕೆ. ಮನಸ್ಸಿನ ಭಯ ಶಮನ. ಸರ್ಕಾರಿ ಉದ್ಯೋಗ ವಿಳಂಬ. ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ. ಆದಾಯವನ್ನು ನಿರೀಕ್ಷಿತ ಖರ್ಚಿನ ಬಗ್ಗೆ ನಿಯಂತ್ರಣ ಬೇಕು. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ಅಲ್ಪ ಕಾರ್ಯದಿಂದ ಎಲ್ಲವೂ ಸಿದ್ಧಿಸುವುದಾದರೂ ಅಧಿಕ ಶ್ರಮವಿರುವುದು. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ಯಾರೋ‌ ಮಾಡಬೇಕಾದ ಕೆಲಸಕ್ಕೆ ನೀವು ಹೋಗಬೇಕಾದೀತು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತುರ್ತಾಗಿ ಸಾಲವನ್ನು ಮಾಡಬೇಕಾಗುವುದು. ಕೃಷಿಯಲ್ಲಿ ಹೊಸ ವಿಧಾನ ಪ್ರಯೋಗಿಸಬಹುದು. ಮಾರಾಟದಲ್ಲಿ ಗ್ರಾಹಕರೊಂದಿಗೆ ಗೊಂದಲ ಸಾಧ್ಯ. ದಾಂಪತ್ಯದಲ್ಲಿ ಸಣ್ಣ ಭಿನ್ನಾಭಿಪ್ರಾಯ. ನಿಮ್ಮ ವೃತ್ತಿಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸುವಿರಿ. ಸಂಗಾತಿಯು ನಿಮ್ಮನ್ನು ಬೆಂಬಲಿಸರು.

ಕುಂಭ ರಾಶಿ:

ಓದಿನಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಮಕ್ಕಳ ಆರೋಗ್ಯ ಗಮನಿಸಿ. ಆಸ್ತಿ ದಾಖಲೆ ಪರಿಶೀಲನೆ ಅಗತ್ಯ. ಭಯ ಕಡಿಮೆಯಾಗುತ್ತದೆ. ಸರ್ಕಾರಿ ಉದ್ಯೋಗದಲ್ಲಿ ನಿರೀಕ್ಷೆ ಜೀವಂತ. ನಿಮ್ಮ ಭಾವನೆಗೇ ಇಂದು ನೇರವಾಗಿ ಪೆಟ್ಟುಬೀಳುವ ಸಾಧ್ಯತೆ ಇದೆ. ಅದನ್ನು ಆ ಸಮಯದಲ್ಲಿ ನಿಭಾಯಿಸುವ ಜಾಣ್ಮೆ ಇರಲಿ. ನಿಮ್ಮ ಗುರಿಯನ್ನು ಬದಲಾಯಿಸುವುದು ಬೇಡ. ಹೇಳಬೇಕಾದ‌ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ.‌ ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿನ ಶಿಸ್ತು ಉಳಿದವರಿಗೆ ಕಷ್ಟವಾದೀತು. ನೀವು ಹೋದಕಡೆ ನಿಮಗೆ ಬೇಕಾದ ಹಾಗೆ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ. ಕೇಳಿ ಬಂದವರಿಗೆ ನೀವು ಇಂದು ಧನ ಸಹಾಯವನ್ನು ಮಾಡುವಿರಿ. ಭೂಮಿ ಸಂಬಂಧಿತ ಕೃಷಿ ಕೆಲಸಗಳು ಅನುಕೂಲ. ಮಾರಾಟದಲ್ಲಿ ಸ್ಥಿರ ಆದಾಯ. ದಾಂಪತ್ಯದಲ್ಲಿ ಮನದಾಳದ ಮಾತು ಹಂಚಿಕೊಳ್ಳಿ. ಹೆಚ್ಚಿ‌ನ ಆದಾಯಕ್ಕೆ ನೀವು ಚಿಂತನೆ ನಡೆಸುವಿರಿ. ಅಧ್ಯಾತ್ಮದಲ್ಲಿ ನಿಮಗೆ ನಿರಾಸಕ್ತಿಯು ಉಂಟಾಗಬಹುದು. ಏಕತಾನತೆಯಿಂದ ಹೊರಬರುವಿರಿ.

ಮೀನ ರಾಶಿ:

ಕೃಷಿಯಲ್ಲಿ ಪರಿಶ್ರಮದ ಫಲ ತಡವಾಗಿ ಸಿಗುತ್ತದೆ. ಮಾರಾಟದಲ್ಲಿ ಮಾತಿನ ಜಾಣ್ಮೆ ಅಗತ್ಯ. ದಾಂಪತ್ಯದಲ್ಲಿ ಸಹನೆ ಇರಲಿ. ವಿದ್ಯಾಭ್ಯಾಸದಲ್ಲಿ ಹೊಸ ಉತ್ಸಾಹ. ಮಕ್ಕಳಿಂದ ಸಂತೋಷ. ಆಪಾಯದ ಸೂಚನೆಯನ್ನು ಗಮನಿಸಿಕೊಳ್ಳಿ. ನಿಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾಸ ಇರಲಿದೆ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು. ಆಮದು ವ್ಯವಹಾರವು ಸ್ವಲ್ಪ ಲಾಭವನ್ನು ಕೊಡುವುದು. ಉದ್ಯಮಿಗಳ ಭೇಟಿ ಮಾಡುವಿರಿ. ಭೂಮಿಯ ಖರೀದಿಗೆ ಸೂಕ್ತ ಸಮಯವಿದ್ದು ಇಷ್ಟಪಟ್ಟ ಭೂಮಿಯು ಸಿಗುವುದು. ಸಂಗಾತಿಯ ಮಾತಿನಿಂದ ನೀವು ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಮನಸ್ಸಿನ ಚಾಂಚಲ್ಯವನ್ನು ಯೋಗವೇ ಮದ್ದಾಗಲಿದೆ. ಆಸ್ತಿ ವ್ಯವಹಾರ ಮುಂದೂಡಿರಿ. ಅಕಾರಣ ಭಯ ಕಡಿಮೆಯಾಗುತ್ತದೆ. ಸರ್ಕಾರಿ ಉದ್ಯೋಗ ಪ್ರಯತ್ನಗಳಿಗೆ ಸಣ್ಣ ಮುನ್ನಡೆ. ಜಾಣ್ಮೆಯಿಂದ ಸವಾಲನ್ನು ಎದುರಿಸಬೇಕಾಗಬಹುದು. ನೀವೇ ಸಮಯವನ್ನು ಹೊಂದಿಸಿಕೊಂಡು ಕಾರ್ಯದಿಂದ ಸಲ್ಪ‌ ವಿಶ್ರಾಂತಿಯನ್ನು ಪಡೆಯಬೇಕು.

24 ಡಿಸೆಂಬರ್​​ 2025ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಹರ್ಷಣ, ಕರಣ : ಭದ್ರ, ಸೂರ್ಯೋದಯ – 06 – 46 am, ಸೂರ್ಯಾಸ್ತ – 06 – 01 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:24 – 13:28, ಯಮಗಂಡ ಕಾಲ 08:11 – 09:35, ಗುಳಿಕ ಕಾಲ 10:59 – 12:24

-ಲೋಹಿತ ಹೆಬ್ಬಾರ್ – 8762924271 (what’s app only)

Source link