Video: ಅಮೆರಿಕದ ಉತ್ತರ ಕೆರೊಲಿನಾದಲ್ಲಿ ವಿಮಾನ ಪತನ, ನಾಸ್ಕರ್ ಚಾಲಕನ ಇಡೀ ಕುಟುಂಬವೇ ಬೆಂಕಿಯಲ್ಲಿ ಬೆಂದು ಹೋಯ್ತು – Kannada News | Former NASCAR Driver Greg Biffle Dies With Family in North Carolina Plane Crash
ಕೆರೊಲಿನಾ, ಡಿಸೆಂಬರ್ 19: ಅಮೆರಿಕದ ಉತ್ತರ ಕರೆಲಿನಾದಲ್ಲಿ ಗುರುವಾರ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಏಳು ಜನರು ಸಾವನ್ನಪ್ಪಿದ್ದಾರೆ.ಈ ಅಪಘಾತದಲ್ಲಿ ನಿವೃತ್ತ NASCAR ಚಾಲಕ ಗ್ರೆಗ್ ಬಿಫಲ್, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದ್ದಾರೆ. ಸೆಸ್ನಾ C550 ವಿಮಾನವು ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ಟೇಟ್ಸ್‌ವಿಲ್ಲೆ ಪ್ರಾದೇಶಿಕ ವಿಮಾನ ನಿಲ್ದಾಣದಿಂದ ಹೊರಟಿತು. ವಿಮಾನವು ಫ್ಲೋರಿಡಾಕ್ಕೆ ತೆರಳುತ್ತಿತ್ತು, ಆದರೆ ಟೇಕ್ ಆಫ್ ಆದ ಸ್ವಲ್ಪ…