ಆನೆಗೆ ಗುಲಾಬಿ ಬಣ್ಣ ಹಚ್ಚಿ ಫೋಟೊಶೂಟ್, ಒಂದು ತಿಂಗಳಲ್ಲೇ ಆನೆ ಸಾವು
ಜೈಪುರ, ಏಪ್ರಿಲ್ 02: ವಿದೇಶಿ ಛಾಯಾಗ್ರಾಹಕ ಫೋಟೊಶೂಟ್ಗೆ ಬಳಸಿಕೊಂಡಿದ್ದ ಆನೆ ‘ಚಂಚಲ್’ ಸಾವನ್ನಪ್ಪಿದೆ. ಅಂದು ಆನೆ(Elephant) ಹಾಗೂ ಮಾಡೆಲ್ ಇಬ್ಬರಿಗೂ ಗುಲಾಬಿ ಬಣ್ಣವನ್ನು ಬಳಿಯಲಾಗಿತ್ತು ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾಗಿ ಒಂದು ತಿಂಗಳಿಗೆ ಆನೆ ಸಾವನ್ನಪ್ಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚಂಚಲ್ ಎಂಬ ಹೆಸರಿನ ಈ ಆನೆಗೆ 65 ವರ್ಷ ವಯಸ್ಸಾಗಿದ್ದು, ಕಳೆದ ತಿಂಗಳು ಸಾವನ್ನಪ್ಪಿದೆ. ಜೈಪುರ ಆನೆಗಳ ಸಂಘವು ಇದು ಸಹಜ ಸಾವು ಎಂದು ದೃಢಪಡಿಸಿದೆ. ಆನೆ ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಲ್ಲು…