ಒಂದಲ್ಲ ಎರಡಲ್ಲ, ಬರೋಬ್ಬರಿ 167 ಕೋಟಿ ರೂ. ಕೊಟ್ಟು ರಾಜಾ ರವಿ ವರ್ಮನ ಚಿತ್ರ ಖರೀದಿಸಿದ ಔಷಧಿ ಕಿಂಗ್ ಸೈರಸ್ ಪೂನಾವಾಲಾ
ನವದೆಹಲಿ, ಏಪ್ರಿಲ್ 02: ರಾಜಾ ರವಿ ವರ್ಮನ(Raja Ravi Verma) ಕುಂಚದಲ್ಲಿ ಮೂಡಿ ಬಂದಿರುವ ಯಶೋಧ ಮತ್ತು ಕೃಷ್ಣ ಇರುವ ಚಿತ್ರವನ್ನು ಔಷಧಿ ಕಿಂಗ್ ಸೈರಸ್ ಪೂನಾವಾಲಾ ಬರೋಬ್ಬರಿ 167 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ. ಚಿತ್ರಕಲೆ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಭಾರತೀಯ ಕಲಾಕೃತಿಯಾಗಿದೆ. ಕೈಗಾರಿಕೋದ್ಯಮಿ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥಾಪಕ ಸೈರಸ್ ಎಸ್ ಪೂನವಲ್ಲಾ ಈ ಆಯಿಲ್ ಪೇಂಟಿಂಗ್ ಖರೀದಿಸಿದ್ದಾರೆ. ಯುರೋಪಿಯನ್ ತಂತ್ರ ಮತ್ತು ಭಾರತೀಯ ಸಂವೇದನೆಯನ್ನು ತಮ್ಮ ಚಿತ್ರಕಲೆಯಲ್ಲಿ ಮಿಶ್ರಣ…