ಯೂಟ್ಯೂಬರ್ ಭೇಟಿಯಾಗಲು ಕೊಯಮತ್ತೂರಿನಿಂದ ಓಡಿಹೋದ 7ನೇ ತರಗತಿ ವಿದ್ಯಾರ್ಥಿನಿಯರು!
ಕೊಯಮತ್ತೂರು, ಏಪ್ರಿಲ್ 2: ಯೂಟ್ಯೂಬರ್ (YouTuber) ಮೊನಾಲಿಸಾಳನ್ನು ಭೇಟಿಯಾಗುವ ಉದ್ದೇಶದಿಂದ ಕೊಯಮತ್ತೂರಿನಿಂದ ಚೆನ್ನೈಗೆ ಪ್ರಯಾಣಿಸಲು ಯತ್ನಿಸಿದ ನಾಲ್ವರು ಶಾಲಾ ವಿದ್ಯಾರ್ಥಿನಿಯರನ್ನು ಕೊಯಮತ್ತೂರು ರೈಲ್ವೆ ನಿಲ್ದಾಣದ ಪೊಲೀಸರು ರಕ್ಷಿಸಿದ್ದಾರೆ. ಕೊಯಮತ್ತೂರಿನ ಖಾಸಗಿ ಶಾಲೆಯಲ್ಲಿ 7ನೇ ತರಗತಿಯ ಆಪ್ತ ಸ್ನೇಹಿತರಾದ ನಾಲ್ವರು ವಿದ್ಯಾರ್ಥಿನಿಯರು ಮನೆಯಿಂದ ಓಡಿಹೋಗಿ ರೈಲು ಹತ್ತುವ ಮೊದಲೇ ಅವರನ್ನು ತಡೆಹಿಡಿಯಲಾಯಿತು. ಈ ಹುಡುಗಿಯರು ತಮ್ಮ ಪೋಷಕರ ಒಪ್ಪಿಗೆ ಪಡೆದು ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದರು. ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಗಳನ್ನು ರಚಿಸಿದರು, ಅದರಲ್ಲಿ ಹಲವಾರು ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಂಡರು. ಸದಾ…