ಹೋಟೆಲ್ ಮಾಲೀಕನಿಂದಲೇ ಕಾರ್ಮಿಕನ ಹತ್ಯೆ: ಕೊಲೆ ಮಾಡುವಷ್ಟು ಆಗಿದ್ದೇನು?
ಶಿವಮೊಗ್ಗ, ಏಪ್ರಿಲ್ 02: ಹಣಕಾಸಿನ ವಿಚಾರಕ್ಕೆ ಹೋಟೆಲ್ ಮಾಲೀಕನಿಂದಲೇ ಕಾರ್ಮಿಕನ ಹತ್ಯೆ (kill) ಮಾಡಿರುವಂತಹ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ನಡೆದಿದೆ. ಮಾಲೀಕ ಇಮ್ರಾನ್ನಿಂದ ಟಿಂಕು ಶರ್ಮಾ(30)ನ ಕೊಲೆ ಮಾಡಲಾಗಿದೆ. ಸದ್ಯ ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಇಮ್ರಾನ್ನನ್ನು ವಶಕ್ಕೆ ಪಡೆದಿದ್ದಾರೆ. ನಡೆದಿದ್ದೇನು? ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ಬಿಹಾರ ಮೂಲದ ಟಿಂಕು ಶರ್ಮಾ ಕೆಲಸ ಮಾಡುತ್ತಿದ್ದ. ಹಣಕಾಸಿನ ವಿಚಾರಕ್ಕೆ ಮಾಲೀಕ…