ಧಾರವಾಡದಲ್ಲಿ ಮಹಿಳೆ ದುರಂತ ಸಾವು: ನೀರು ಕಾಯಿಸುವಾಗ ಇರಲಿ ಎಚ್ಚರಿಕೆ!
ಧಾರವಾಡ, ಏಪ್ರಿಲ್ 02: ಮನೆಯಲ್ಲಿ ನೀರು ಕಾಯಿಸುವಾಗ ವಿದ್ಯುತ್ ಸ್ಪರ್ಶಿಸಿ ಗೃಹಿಣಿ ಬಾತ್ರೂಮ್ನಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ನಿವೇದಿತಾ ನಾಯ್ಕರ್(24) ಮೃತ ಗೃಹಿಣಿ. ನಿವೇದಿತಾ ನಾಯ್ಕರ್ ಎರಡು ಮಕ್ಕಳ ತಾಯಿ. ಸದ್ಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ನಿವೇದಿತಾ ನಾಯ್ಕರ್ ಬಕೆಟ್ನಲ್ಲಿ ಕ್ವಾಯಿಲ್ ಮೂಲಕ ನೀರು ಕಾಯಿಸಲು ಇಟ್ಟಿದ್ದರು. ಈ ವೇಳೆ ಆಕಸ್ಮಿಕವಾಗಿ ಬಕೆಟ್ ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶದಿಂದ ನಿವೇದಿತಾ…