Headlines

nagaraj11081993

ಕುಮಾರಸ್ವಾಮಿ-ಲೋಕಾಯುಕ್ತ ಎಡಿಜಿಪಿ ಜಟಾಪಟಿ ಕ್ಲೈಮ್ಯಾಕ್ಸ್ ಹಂತಕ್ಕೆ: ರಾಜಿ ಸಂಧಾನಕ್ಕೆ ಸಮ್ಮತಿ

ಬೆಂಗಳೂರು, (ಏಪ್ರಿಲ್ 02):  ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್‌ (Lokayukta AdGP Chandrashekhar) ಅವರಿಗೆ ಮತ್ತು ಅವರ ಕುಟುಂಬಕ್ಕೆ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ (hd kumaraswamy) ಬೆದರಿಕೆ ಹಾಕಿರುವ ಪ್ರಕರಣ ರಾಜಿ ಸಂಧಾನ ಮಾತುಕತೆ ಹಂತಕ್ಕೆ ಬಂದಿದೆ. ಹೌದು.. ಹೈಕೋರ್ಟ್ ಸಲಹೆಯಂತೆ ಆರೋಪಿ ಎಚ್​.ಡಿ.ಕುಮಾರಸ್ವಾಮಿ ಹಾಗೂ ದೂರುದಾರ ಚಂದ್ರಶೇಖರ್ ರಾಜಿ ಸಂಧಾನದ ಮಾತುಕತೆಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೈಕೋರ್ಟ್ (Karnataka High Court)​.ರಾಜಿ ಸಂಧಾನಕ್ಕೆ ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು ಎಂದು ಹೇಳಿದ್ದು, ಹಾಜರಾಗಬೇಕಾದ ದಿನಾಂಕ, ಸ್ಥಳವನ್ನು…

Read More

ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

ಟೆಹ್ರಾನ್, ಏಪ್ರಿಲ್ 2: ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಹೇಳಿಕೆಗಳಿಗೆ ಇರಾನ್ ಮತ್ತೊಮ್ಮೆ ತಿರುಗೇಟು ನೀಡಿದೆ. ಇರಾನ್​ನ ನಾಯಕತ್ವ ಮತ್ತು ಮಿಲಿಟರಿಯನ್ನು ಸಂಪೂರ್ಣವಾಗಿ ತೊಡೆದುಹಾಕಲಾಗಿದೆ ಎಂದು ಅಮೆರಿಕ ಹೇಳಿತ್ತು. ಆದರೆ, ಅದಕ್ಕೆ ಪ್ರತ್ಯುತ್ತರ ನೀಡಿರುವ ಟೆಹ್ರಾನ್ ಅಮೆರಿಕ ಶಾಶ್ವತ ಅವಮಾನವನ್ನು ಎದುರಿಸುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ಶಪಥ ಮಾಡಿದೆ. ಇರಾನ್‌ನ ನೌಕಾಪಡೆ ಮತ್ತು ವಾಯುಪಡೆಯು ತೀವ್ರವಾಗಿ ದುರ್ಬಲಗೊಂಡಿದೆ. ಅದರ ನಾಯಕತ್ವ ರಚನೆಯು ದೊಡ್ಡ ನಷ್ಟವನ್ನು ಅನುಭವಿಸಿದೆ ಎಂದು ಟ್ರಂಪ್…

Read More

‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್

ಬಾಲಿವುಡ್‌ನ ಅನುಭವಿ ನಟ ಸಂಜಯ್ ದತ್ (Sanjay Dutt) ಅವರಿಗೆ ಈಗ ಯಶಸ್ಸಿನ ಸುಗ್ಗಿಯ ಕಾಲ. ಇತ್ತೀಚೆಗಷ್ಟೇ ತೆರೆಕಂಡ ‘ಧುರಂಧರ್’ ಮತ್ತು ‘ಧುರಂಧರ್ 2’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿ ಅಭೂತಪೂರ್ವ ಯಶಸ್ಸು ಸಾಧಿಸಿವೆ. ಈ ಗೆಲುವಿನ ಬೆನ್ನಲ್ಲೇ ಸಂಜಯ್ ದತ್ ಈಗ ‘ರಾಜ ಶಿವಾಜಿ’ (Raja Shivaji) ಐತಿಹಾಸಿಕ ಚಿತ್ರದ ಮೂಲಕ ಮತ್ತೊಂದು ಬ್ಲಾಕ್‌ಬಸ್ಟರ್ ನೀಡಲು ಸಜ್ಜಾಗಿದ್ದಾರೆ. ಅಲ್ಲದೇ, ‘ಆಖ್ರಿ ಸವಾಲ್’ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಮರಾಠ ಸಾಮ್ರಾಜ್ಯದ ಕಥೆಯಿರುವ…

Read More

New AI Syllabus for CBSE Schools: ಸಿಬಿಎಸ್ಇ ಶಾಲೆಗಳಲ್ಲಿ AI; ಹೊಸ ಪಠ್ಯಕ್ರಮದ ಅನಾವರಣ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 3 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟೇಷನಲ್ ಥಿಂಕಿಂಗ್ ಅನ್ನು ಒಳಗೊಂಡ ಹೊಸ ಪಠ್ಯಕ್ರಮವನ್ನು ಪರಿಚಯಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಉಪಕ್ರಮವನ್ನು ಅನಾವರಣಗೊಳಿಸಿದ್ದಾರೆ. ಶಾಲಾ ಪರಿಸರ ವ್ಯವಸ್ಥೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಶಿಕ್ಷಣವನ್ನು ಔಪಚಾರಿಕವಾಗಿ ಪರಿಚಯಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಹೊಸ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಎಐ ಮತ್ತು ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ಜ್ಞಾನವನ್ನು ನೀಡುವ ಗುರಿ ಹೊಂದಿದೆ….

Read More

ಚರ್ಚ್​​ಗೆ ಹೋಗಿದ್ದಕ್ಕೆ ಟೀಕೆ: ಉತ್ತರಿಸಿದ ನಟ ಪ್ರಕಾಶ್ ರಾಜ್

ನಟ ಪ್ರಕಾಶ್ ರಾಜ್ (Prakash Raj) ಅವರ ತಾಯಿ ಸ್ವರ್ಣಲತಾ ಅವರು ತಮ್ಮ 89ನೇ ವಯಸ್ಸಿನಲ್ಲಿ ಇತ್ತೀಚೆಗಷ್ಟೆ ನಿಧನ ಹೊಂದಿದರು. ಸ್ವರ್ಣಲತಾ ಅವರ ಅಂತ್ಯಕ್ರಿಯೆ ಕ್ರಿಶ್ಚಿಯನ್ ಧರ್ಮದ ಅನ್ವಯ ನೆರವೇರಿತು. ಬೆಂಗಳೂರಿನ ಶಾಂತಿನಗರ ಚರ್ಚ್​​ನಲ್ಲಿ ಪ್ರಾರ್ಥನೆ, ಅಂತಿಮಕ್ರಿಯೆ ನಡೆಸಲಾಯ್ತು. ನಟ ಪ್ರಕಾಶ್ ರೈ ಸಹ ಶಾಂತಿನಗರ ಚರ್ಚ್​​ನಲ್ಲಿ ಹಾಜರಿದ್ದು, ಪ್ರಾರ್ಥನೆ, ಅಂತಿಮಕ್ರಿಯೆಯಲ್ಲಿ ಭಾಗಿ ಆಗಿದ್ದರು. ಆದರೆ ಇದೀಗ ಹಲವರು ಪ್ರಕಾಶ್ ರೈ ಚರ್ಚ್​​ಗೆ ಹೋಗಿದ್ದಕ್ಕೆ ಅವರನ್ನು ಟೀಕೆ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ನಟ ಪ್ರಕಾಶ್ ರೈ ಸಾಮಾಜಿಕ…

Read More

ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ (Yash) ಮೊದಾದವರು ನಟಿಸಿರೋ ‘ರಾಮಾಯಣ’ ಸಿನಿಮಾದ ಟೀಸರ್ ಇಂದು (ಏಪ್ರಿಲ್ 2) ರಿಲೀಸ್ ಆಗಿದೆ. ಈ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಹನುಮಂತ ಜಯಂತಿ ಪ್ರಯುಕ್ತ ಟೀಸರ್ ತೆರೆಗೆ ಬಂದಿದೆ. ಈ ಸಿನಿಮಾದ ಟೀಸರ್ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಹಾಕುತ್ತಿದ್ದಾರೆ. ಆದರೆ, ಮಹೇಶ್ ಬಾಬು ಹಾಗೂ ರಾಜಮೌಳಿ ಅಭಿಮಾನಿಗಳು ಮಾತ್ರ ನೆಗೆಟಿವ್ ಆಗಿ ಕಮೆಂಟ್ ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ‘ರಾಮಾಯಣ’ ಸಿನಿಮಾದ ಮೊದಲ ಭಾಗ…

Read More

15 ದಿನ ಪಶ್ಚಿಮ ಬಂಗಾಳದಲ್ಲೇ ಇರ್ತೀನಿ, ಮಮತಾಗೆ ಬೈ-ಬೈ ಹೇಳಿಯೇ ಬರ್ತೀನಿ: ಅಮಿತ್ ಶಾ

ಕೋಲ್ಕತ್ತಾ, ಏಪ್ರಿಲ್ 02:ಪಶ್ಚಿಮ ಬಂಗಾಳದಲ್ಲಿ 2026ರ ಚುನಾವಣೆಗೂ ಮುನ್ನ ರಾಜಕೀಯ ವಾತಾವರಣ ಬಿಸಿಯಾಗುತ್ತಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಪ್ರಮುಖ ವಿರೋಧಪಕ್ಷ ಬಿಜೆಪಿ ನಡುವೆ ನೇರ ಹೋರಾಟ ಕಂಡುಬರುತ್ತಿದೆ. ಶುಭೇಂದು ಅಧಿಕಾರಿಯ ನಾಮಪತ್ರ ಸಲ್ಲಿಕೆ ಇದ್ದ ಕಾರಣ ನಂದಿಗ್ರಾಮಕ್ಕೆ ಹೋಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇನ್ನು 15 ದಿನ ಇಲ್ಲೇ ಇರುತ್ತೇನೆ, ಪಶ್ಚಿಮ ಬಂಗಾಳದಲ್ಲಿಯೇ ಉಳಿದು ಚುನಾವಣಾ ಉಸ್ತುವಾರಿವಹಿಸಿಕೊಳ್ಳುವುದಾಗಿ ಘೋಷಿಸಿದರು. ತಾನು ಇಡೀ ಬಂಗಾಳವನ್ನು ಪ್ರವಾಸ ಮಾಡಿರುವುದಾಗಿ ಹೇಳಿದ್ದು, ಎಲ್ಲ ಕಡೆಯೂ ಮಮತಾ…

Read More

IPL 2026: ಆರ್​​ಸಿಬಿ ಪರ ಆಡಲು ಬಿಡದ ಕ್ರಿಕೆಟ್ ಮಂಡಳಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಕ್ರಿಕೆಟಿಗ

2026 ರ ಐಪಿಎಲ್‌ನಲ್ಲಿ ಮೊದಲ ಹಂತ ಮುಕ್ತಾಯಗೊಂಡಿದೆ. ಅಂದರೆ ಎಲ್ಲಾ 10 ತಂಡಗಳು ತಲಾ ಒಂದೊಂದು ಪಂದ್ಯಗಳನ್ನಾಡಿವೆ. ಮೊದಲ ಈ ಐದು ಪಂದ್ಯಗಳು ಕೆಲವು ಪ್ರಮುಖ ಆಟಗಾರರ ಇಂಜುರಿ ಹಾಗೂ ಅಲಭ್ಯತೆಯ ನಡುವೆ ಅದ್ಧೂರಿಯಾಗಿ ನಡೆದಿವೆ. ಇಂದಿನಿಂದ ಎರಡನೇ ಹಂತ ಆರಂಭವಾಗುತ್ತಿದ್ದು, ಈ ಸುತ್ತಿನಿಂದ ಕೆಲವು ಅಟಗಾರರು ಕಣಕ್ಕಿಳಿಯಲಿದ್ದಾರೆ. ಆದಾಗ್ಯೂ ಶ್ರೀಲಂಕಾ ತಂಡದ ಸ್ಟಾರ್ ವೇಗದ ಬೌಲರ್ ನುವಾನ್ ತುಷಾರಗೆ ಮಾತ್ರ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಐಪಿಎಲ್‌ನಲ್ಲಿ ಆರ್​ಸಿಬಿ ತಂಡದ ಭಾಗವಾಗಿರುವ ತುಷಾರ, ಫಿಟ್​ನೆಸ್ ಪರೀಕ್ಷೆಯಲ್ಲಿ…

Read More

ಸುದೀಪ್ ಆತ್ಮಹತ್ಯೆ ಪ್ರಕರಣ: ಪತಿ ಸಾವಿಗೆ ಕಾರಣ ಬಿಚ್ಚಿಟ್ಟ ಉದ್ಯಮಿ ಪತ್ನಿ ಸೌಮ್ಯಾ

ಉಡುಪಿ, ಏಪ್ರಿಲ್​​ 02: ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿತ್ತು. ಮಗನ ಸಾವಿಗೆ ಆತನ ಪತ್ನಿ ಸೌಮ್ಯಾ ಶೆಟ್ಟಿಯೇ ಕಾರಣ ಎಂಬ ಗಂಭೀರ ಆರೋಪವನ್ನು ಸುದೀಪ್​​ ಪೋಷಕರು ಮಾಡಿದ್ದರು. ಆದರೀಗ ತನ್ನ ಮೇಲಿನ ಆರೋಪಗಳಿಗೆ ಸ್ವತಃ ಸೌಮ್ಯಾ ಶೆಟ್ಟಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್​​ ಹೆತ್ತವರ ಆರೋಪ ಅಲ್ಲಗಳೆದಿರುವ ಈಕೆ, ಪತಿಯ ಸಾವಿಗೆ ತಾನು ಕಾರಣಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದೀಪ್​​ ಪೋಷಕರು ಹೇಳುವಂತೆ…

Read More

ಹೈದರಾಬಾದ್‌ನಲ್ಲಿ ಸೊಳ್ಳೆ ಪರದೆ ಧರಿಸಿ ಪ್ರತಿಭಟನೆ ನಡೆಸಿದ ಬಿಆರ್‌ಎಸ್ ಶಾಸಕ

ಹೈದರಾಬಾದ್, ಏಪ್ರಿಲ್ 2: ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಸುಧೀರ್ ರೆಡ್ಡಿ ಇಂದು ಹೈದರಾಬಾದ್​ನ (Hyderabad) ವಿಧಾನಸಭೆ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಸೊಳ್ಳೆ ಪರದೆ ಧರಿಸಿಕೊಂಡು, ಫಾಗಿಂಗ್ ಯಂತ್ರವನ್ನು ಹಿಡಿದುಕೊಂಡು ಆಗಮಿಸಿದ್ದಾರೆ. ಹೈದರಾಬಾದ್ ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸೊಳ್ಳೆ ಸಮಸ್ಯೆಯ ವಿರುದ್ಧ ಅವರು ಈ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮೊದಲು ಮಾಧ್ಯಮ ಕೇಂದ್ರಕ್ಕೆ ಸೊಳ್ಳೆ ಪರದೆ ಮತ್ತು ಫಾಗಿಂಗ್ ಯಂತ್ರವನ್ನು ಕೊಂಡೊಯ್ಯಲು ಪ್ರಯತ್ನಿಸಿದಾಗ ಸುಧೀರ್ ರೆಡ್ಡಿ ಅವರಿಗೆ ವಿಧಾನಸಭೆ ಸಿಬ್ಬಂದಿ ಅನುಮತಿ ನಿರಾಕರಿಸಿದರು. ಭದ್ರತಾ ಸಿಬ್ಬಂದಿಯ…

Read More