ಐಪಿಎಲ್ 2026 ರ ಆರನೇ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯುತ್ತಿದೆ. ಎರಡೂ ತಂಡಗಳು ತಮ್ಮ ಆರಂಭಿಕ ಪಂದ್ಯಗಳಲ್ಲಿ ಕಳಪೆ ಆರಂಭವನ್ನು ಪಡೆದಿದ್ದು, ಸೋಲುಗಳನ್ನು ಅನುಭವಿಸಿವೆ. ಆದ್ದರಿಂದ, ಎರಡು ತಂಡಗಳು ಮೊದಲ ಗೆಲುವನ್ನು ಎದುರು ನೋಡುತ್ತಿವೆ.
ಸಿಂಗಲ್ ಸ್ಕ್ರೀನ್ (Single screen) ಚಿತ್ರಮಂದಿರಗಳು (Theater) ಕಳೆದ ಕೆಲ ವರ್ಷಗಳಿಂದಲೂ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡುತ್ತಲೇ ಇವೆ. ಕೇರಳದಲ್ಲಿ ಈ ಬಗ್ಗೆ ಸ್ವತಃ ರಾಜ್ಯದ ಸಚಿವರು ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿದ್ದು ಸುದ್ದಿ ಆಗಿತ್ತು. ತೆಲುಗು ರಾಜ್ಯಗಳಲ್ಲಿಯೂ ಸಹ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಮಾಲೀಕರು ನಿರ್ಮಾಪಕರ ಸಂಘ ಇನ್ನಿತರೆಗಳ ಕದ ತಟ್ಟುತ್ತಲೇ ಇದ್ದರು. ಅವರ ಬೇಡಿಕೆಯಲ್ಲಿ ಪ್ರಮುಖವಾದ ಬೇಡಿಕೆ ಲಾಭ ಹಂಚಿಕೆಯದ್ದಾಗಿತ್ತು. ಇದೀಗ ತೆಲಂಗಾಣದ ಪ್ರದರ್ಶಕರು ಇನ್ನು ಮುಂದೆ ತಾವು ಬಾಡಿಗೆ ಮಾದರಿಯಲ್ಲ ಬದಲಿಗೆ ಲಾಭ ಹಂಚಿಕೆ ಮಾದರಿಯಲ್ಲಿಯೇ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಇದು ದೊಡ್ಡ ಸಿನಿಮಾಗಳಿಗೆ ದೊಡ್ಡ ಪೆಟ್ಟನ್ನೇ ನೀಡಲಿದೆ.
ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿ ಚಿತ್ರಮಂದಿರಗಳು ಬಾಡಿಗೆ ಮಾಡೆಲ್ನಲ್ಲಿಯೇ ಕೆಲಸ ಮಾಡುವುದು ಹೆಚ್ಚು. ಚಿತ್ರಮಂದಿರಗಳವರಿಗೆ ನಿರ್ಮಾಪಕರು ಅಥವಾ ವಿತರಕರು ನಿಗದಿತ ಬಾಡಿಗೆ ಮೊತ್ತ ನೀಡಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಾರೆ. ಸಿನಿಮಾ ಓಡಲಿ, ಓಡದೇ ಇರಲಿ ಅವರಿಗೆ ಬಾಡಿಗೆ ಬರುತ್ತದೆ. ಆದರೆ ಮಲ್ಟಿಪ್ಲೆಕ್ಸ್ಗಳಲ್ಲಿ ಹಾಗಾಗುವುದಿಲ್ಲ ಅಲ್ಲಿ ಲಾಭಾಂಶದ ಹಂಚಿಕೆ ಮಾದರಿ ಇರುತ್ತದೆ. ಮೊದಲ ವಾರ ನಿರ್ಮಾಪಕರಿಗೆ 50% ಹೋದರೆ, ಮುಂದಿನ ವಾರ ಪಿವಿಆರ್ ಅವರಿಗೆ 60, ನಿರ್ಮಾಪಕರಿಗೆ 40 ಹೋಗುತ್ತದೆ. ಹೀಗೆ ವಾರಗಳು ಕಳೆದಷ್ಟೂ ನಿರ್ಮಾಪಕರಿಗೆ ಲಾಭಾಂಶ ಕಡಿಮೆ ಆಗಿ ಮಲ್ಟಿಪ್ಲೆಕ್ಸ್ಗಳಿಗೆ ಹೆಚ್ಚಾಗುತ್ತದೆ.
ಇದೇ ರೀತಿಯ ಮಾಡೆಲ್ ತಮಗೂ ಬೇಕೆಂದು ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಒತ್ತಾಯಿಸಿದ್ದು, ಇದೀಗ ತೆಲಂಗಾಣದಲ್ಲಿ ಈ ಮಾಡೆಲ್ ಅನ್ನು ಜಾರಿಗೆ ತಂದಿದ್ದು, ನಾಳಿನಿಂದ ಅಂದರೆ ಏಪ್ರಿಲ್ 3 ರಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು 60-50-40 ಮಾದರಿಯಲ್ಲಿ ಲಾಭ ಹಂಚಿಕೆ ಮಾಡಲಿವೆ. ಅಂದರೆ ಮೊದಲ ವಾರ ವಿತರಕರಿಗೆ 60% ಲಾಭ ಹೋಗಲಿದೆ. ಎರಡನೇ ವಾರ 50% ಮೂರನೇ ವಾರ 40% ಮಾತ್ರವೇ ವಿತರಕರ ಅಥವಾ ನಿರ್ಮಾಪಕರ ಪಾಲಾಗಲಿದೆ. ದೊಡ್ಡ ಸಿನಿಮಾಗಳಿಗೆ 2.50% ಹೆಚ್ಚಿನ ಪಾಲು ನೀಡಲಾಗುತ್ತದೆ, ಅದೂ ಟಿಕೆಟ್ ದರ ಹೆಚ್ಚಳ ಮಾಡಿದರೆ ಮಾತ್ರ ಎಂದು ಪ್ರದರ್ಶಕರು ಹೇಳಿದ್ದಾರೆ.
ಆದರೆ ಈ ಪರ್ಸೆಂಟೇಜ್ ವ್ಯವಸ್ಥೆಯಿಂದ ಸಿನಿಮಾಗಳಿಗೆ ಬರುವ ಲಾಭ ಕಡಿಮೆ ಆಗಲಿದೆ. ಅದರಲ್ಲೂ ದೊಡ್ಡ ಸಿನಿಮಾಗಳಿಗೆ, ಸ್ಟಾರ್ ನಟರ ಸಿನಿಮಾಗಳಿಗೆ ಹೊಡೆತ ಬೀಳಲಿದೆ. ಸ್ಟಾರ್ ನಟರ ಸಿನಿಮಾಗಳಿಗೆ ಹೆಚ್ಚು ಆದಾಯ ಬರುತ್ತಿದ್ದಿದ್ದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದ ಆದರೆ ಅಲ್ಲಿಯೂ ಲಾಭಾಂಶ ಹಂಚಿಕೆ ಮಾಡೆಲ್ ಅನುಸರಿಸಿದರೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದ ಬರುತ್ತಿದ್ದ ಲಾಭದಲ್ಲಿ 40 ರಿಂದ 50% ಕಡಿತ ಆಗಲಿದೆ ಎಂಬ ಆತಂಕ ಚಿತ್ರರಂಗವನ್ನು ಕಾಡುತ್ತಿದೆ. ಇದೀಗ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಬಳಿಕ ಯಶ್ ಅವರ ‘ಟಾಕ್ಸಿಕ್’ ಸಹ ಇದೆ. ಈ ಎರಡೂ ಸಿನಿಮಾಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ.
ಒಂದೆಡೆ ಭಾರತದಲ್ಲಿ ಐಪಿಎಲ್(IPL 2026) ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದಲ್ಲಿ ಪಿಎಸ್‌ಎಲ್ (PSL) ನಡೆಯುತ್ತಿದೆ. ಆದಾಗ್ಯೂ ಪಿಎಸ್ಎಲ್ಗೆ ಆರಂಭದಲ್ಲೇ ನಾನಾ ಸಂಕಷ್ಟಗಳು ಎದುರಾಗಿವೆ. ಇದರಿಂದಾಗಿ ಪಂದ್ಯಾವಳಿಯನ್ನು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ. ಇದರ ಜೊತೆಗೆ ಲೀಗ್ ಆರಂಭಕ್ಕೂ ಮುನ್ನ ಕೆಲವು ಆಟಗಾರರು ಲೀಗ್ನಿಂದ ಹಿಂದೆ ಸರಿದಿದ್ದರು. ಇದೀಗ ಅವರ ಬದಲಿಯಾಗಿ ಕೆಲವು ಫ್ರಾಂಚೈಸಿಗಳು ಬೇರೆ ಆಟಗಾರರ ಮೊರೆ ಹೋಗಿವೆ. ಅದರಂತೆ ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಪಿಎಸ್ಎಲ್ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ತೊರೆದು ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದರು. ಇದೀಗ ಅವರ ಬದಲಿಯಾಗಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ (Harry Brook) ತಂಡವನ್ನು ಸೇರಲಿದ್ದಾರೆ.
ಹ್ಯಾರಿ ಬ್ರೂಕ್ಗೆ ಆಹ್ವಾನ
ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮತ್ತೆ ಆಡಲಿದ್ದಾರೆ. ಇಸ್ಲಾಮಾಬಾದ್ ಯುನೈಟೆಡ್ ತಂಡವು ಬ್ಲೆಸ್ಸಿಂಗ್ ಮುಜರಬಾನಿ ಬದಲಿಗೆ ಹ್ಯಾರಿ ಬ್ರೂಕ್ ಅವರನ್ನು ತಂಡಕ್ಕೆ ನೇಮಿಸಿಕೊಂಡಿದೆ. ಹ್ಯಾರಿ ಬ್ರೂಕ್ ಈ ಹಿಂದೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಆಗಮನದಿಂದ ಇಸ್ಲಾಮಾಬಾದ್ ಯುನೈಟೆಡ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದೆ.
ಹ್ಯಾರಿ ಬ್ರೂಕ್ ಐಪಿಎಲ್‌ನಿಂದ ಬ್ಯಾನ್
ಹ್ಯಾರಿ ಬ್ರೂಕ್ ಈ ವರ್ಷ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಅವರನ್ನು ಎರಡು ಆವೃತ್ತಿಗಳ (2026 ಮತ್ತು 2027) ಐಪಿಎಲ್‌ನಿಂದ ನಿಷೇಧಿಸಲಾಗಿದೆ. ವಾಸ್ತವವಾಗಿ ಐಪಿಎಲ್ ಹರಾಜಿನಲ್ಲಿ ಹ್ಯಾರಿ ಬ್ರೂಕ್ ಅವರನ್ನು ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 6.25 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದರೆ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ಹೆಚ್ಚು ಆದ್ಯತೆ ನೀಡಿ ಐಪಿಎಲ್ ಒಪ್ಪಂದದಿಂದ ಹಿಂದೆ ಸರಿದಿದ್ದರು. ಬಿಸಿಸಿಐನ ಕಟ್ಟುನಿಟ್ಟಿನ ನೀತಿಯಡಿಯಲ್ಲಿ, ಹರಾಜಿನಲ್ಲಿ ಆಯ್ಕೆಯಾದ ಮತ್ತು ನಂತರ ಗಾಯವಿಲ್ಲದೆ ಪಂದ್ಯಾವಳಿಯಿಂದ ಹಿಂದೆ ಸರಿಯುವ ಆಟಗಾರರು ಎರಡು ವರ್ಷಗಳ ನಿಷೇಧವನ್ನು ಎದುರಿಸುತ್ತಾರೆ.
ಅದರಂತೆ ಐಪಿಎಲ್‌ನಿಂದ ಹಿಂದೆ ಸರಿದ ಬ್ರೂಕ್ ಅವರ ದೆಹಲಿ ಕ್ಯಾಪಿಟಲ್ಸ್‌ನೊಂದಿಗಿನ ಒಪ್ಪಂದದ ಎರಡನೇ ಉಲ್ಲಂಘನೆಯಾಗಿದ್ದು, ಇದರ ಪರಿಣಾಮವಾಗಿ ಅವರಿಗೆ ಎರಡು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಹೀಗಾಗಿ ಹ್ಯಾರಿ ಬ್ರೂಕ್ ಮುಂದಿನ ಎರಡು ಆವೃತ್ತಿಗಳ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಅಥವಾ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ಹ್ಯಾರಿ ಬ್ರೂಕ್ ವೃತ್ತಿಜೀವನ
ಹ್ಯಾರಿ ಬ್ರೂಕ್ ಕೊನೆಯ ಬಾರಿಗೆ 2022 ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಿದ್ದರು. ಆ ಆವೃತ್ತಿಯಲ್ಲಿ ಅವರು ಒಟ್ಟು 10 ಪಂದ್ಯಗಳನ್ನು ಆಡಿ264 ರನ್ ಬಾರಿಸಿದ್ದರು. ಇದರಲ್ಲಿ ಒಂದು ಶತಕವನ್ನೂ ಬಾರಿಸಿದ್ದರು. ಆದ್ದರಿಂದ, ಹ್ಯಾರಿ ಬ್ರೂಕ್ ಆಗಮನವು ಇಸ್ಲಾಮಾಬಾದ್ ಯುನೈಟೆಡ್ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಲಿದೆ ಎಂದರೆ ತಪ್ಪಾಗಲಾರದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹಿಂದೂ ಧರ್ಮದಲ್ಲಿ ಮನೆಯ ಮುಖ್ಯ ದ್ವಾರವನ್ನು ಕೇವಲ ಪ್ರವೇಶ ದ್ವಾರವೆಂದು ಪರಿಗಣಿಸದೆ, ಶಕ್ತಿಯ ಮೂಲವೆಂದು ನಂಬಲಾಗುತ್ತದೆ. ಅನೇಕರು ಬಾಗಿಲಿಗೆ ಸಿಂಧೂರ ಮತ್ತು ಎಣ್ಣೆಯ ತಿಲಕವನ್ನು ಹಚ್ಚುವುದನ್ನು ನೀವು ನೋಡಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ ಇದರ ಅದ್ಭುತ ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ.
ನಕಾರಾತ್ಮಕ ಶಕ್ತಿಯಿಂದ ರಕ್ಷಣೆ:
ಸಿಂಧೂರವು ಶಕ್ತಿಯ ಸಂಕೇತವಾದರೆ, ಎಣ್ಣೆಯು ಸ್ಥಿರತೆಯನ್ನು ಪ್ರತಿನಿಧಿಸುತ್ತದೆ. ಇವೆರಡರ ಮಿಶ್ರಣವನ್ನು ಮುಖ್ಯ ದ್ವಾರಕ್ಕೆ ಹಚ್ಚುವುದರಿಂದ ಮನೆಗೆ ಒಂದು ‘ರಕ್ಷಣಾತ್ಮಕ ಗುರಾಣಿ’ ಸೃಷ್ಟಿಯಾಗುತ್ತದೆ. ಇದು ದುಷ್ಟ ಶಕ್ತಿಗಳು ಮತ್ತು ಅಶುಭ ಕಂಪನಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.
ವಾಸ್ತು ದೋಷ ನಿವಾರಣೆ:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರವೇಶದ್ವಾರದಲ್ಲಿ ಉದ್ಭವಿಸುವ ದೋಷಗಳನ್ನು ಹೋಗಲಾಡಿಸಲು ಸಿಂಧೂರದ ತಿಲಕ ರಾಮಬಾಣ. ಇದು ಮನೆಯ ವಾತಾವರಣವನ್ನು ಪವಿತ್ರಗೊಳಿಸಿ, ಸಕಾರಾತ್ಮಕ ಶಕ್ತಿಯು ಮುಕ್ತವಾಗಿ ಹರಿಯುವಂತೆ ಮಾಡುತ್ತದೆ.
ಸಂಪತ್ತು ಮತ್ತು ಸಮೃದ್ಧಿಯ ಆಗಮನ:
ಮುಖ್ಯ ದ್ವಾರವನ್ನು ಲಕ್ಷ್ಮಿ ದೇವಿಯ ಪ್ರವೇಶ ದ್ವಾರ ಎನ್ನಲಾಗುತ್ತದೆ. ಇಲ್ಲಿ ಸಿಂಧೂರದ ತಿಲಕ ಇಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ. ಇದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ, ಮನೆಯಲ್ಲಿ ಸುಖ, ಶಾಂತಿ ಮತ್ತು ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ಬಾಗಿಲಿನ ಮೇಲೆ ಸಿಂಧೂರದಿಂದ ಸ್ವಸ್ತಿಕ ಅಥವಾ ಓಂ ಚಿಹ್ನೆಯನ್ನು ಬರೆಯುವುದು ಗಣೇಶನ ಆಶೀರ್ವಾದಕ್ಕೆ ಕಾರಣವಾಗುತ್ತದೆ. ವಿಘ್ನನಿವಾರಕನಾದ ಗಣೇಶನು ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ದೂರ ಮಾಡಿ, ಮನೆಗೆ ಬರುವ ಪ್ರತಿಯೊಂದು ಶಕ್ತಿಯನ್ನು ಶುದ್ಧೀಕರಿಸುತ್ತಾನೆ.
ಕೆಟ್ಟ ದೃಷ್ಟಿಯಿಂದ ರಕ್ಷಣೆ:
ಕುಟುಂಬ ಸದಸ್ಯರ ಯೋಗಕ್ಷೇಮವನ್ನು ಕಾಪಾಡಲು ಮತ್ತು ಜನರ ‘ಕೆಟ್ಟ ದೃಷ್ಟಿ’ (Evil Eye) ತಗುಲದಂತೆ ತಡೆಯಲು ಈ ಸಣ್ಣ ಪರಿಹಾರವು ಅತ್ಯಂತ ಪರಿಣಾಮಕಾರಿ. ಇದು ಕುಟುಂಬವನ್ನು ಬಾಹ್ಯ ಪ್ರಭಾವಗಳಿಂದ ರಕ್ಷಿಸಿ ಸುಭದ್ರವಾಗಿಡುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅಭಿನಯದ ಬಹುನಿರೀಕ್ಷಿತ ‘ಆಖ್ರಿ ಸವಾಲ್’ (Aakhri Sawal) ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಹನುಮ ಜಯಂತಿ ಪಯುಕ್ತ (ಏಪ್ರಿಲ್ 2) ಈ ಟೀಸರ್ ಅನಾವರಣ ಮಾಡಲಾಗಿದೆ. ಸತ್ಯ, ಇತಿಹಾಸ ಮತ್ತು ಯುವಜನತೆಯ ದೃಷ್ಟಿಕೋನವನ್ನು ಪ್ರಶ್ನಿಸುವ ಈ ಚಿತ್ರದ ಸಣ್ಣ ಝಲಕ್ ಈಗ ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಸಂಜಯ್ ದತ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಆಖ್ರಿ ಸವಾಲ್’ ಸಿನಿಮಾ ಕೂಡ ಅವರಿಗೆ ಗೆಲುವು ತಂದುಕೊಡುವ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಆರ್ಎಸ್ಎಸ್ (RSS) ಕುರಿತಾದ ಕಥೆ ಇದೆ.
‘ಆಖ್ರಿ ಸವಾಲ್’ ಚಿತ್ರದ ಕಥೆಯು ವಿಕ್ಕಿ ಎಂಬ ವಿದ್ಯಾರ್ಥಿಯ ಸುತ್ತ ಸಾಗುತ್ತದೆ. ತನ್ನ ಪ್ರಬಂಧವನ್ನು ತಿರಸ್ಕರಿಸಿದ ಗುರುವಿಗೆ ಆತ ಆರ್ಎಸ್ಎಸ್ ಕುರಿತು ಪ್ರಶ್ನಿಸುತ್ತಾನೆ. ಇದು ಕೇವಲ ವೈಯಕ್ತಿಕ ಭಿನ್ನಾಭಿಪ್ರಾಯವಾಗಿ ಉಳಿಯದೆ, ಇಡೀ ದೇಶದ ಗಮನ ಸೆಳೆಯುವ ಸಾರ್ವಜನಿಕ ಚರ್ಚೆಯಾಗಿ ಮಾರ್ಪಡುತ್ತದೆ. ಸಿನಿಮಾವು ಪ್ರಬಲವಾದ ಗುರು-ಶಿಷ್ಯರ ನಡುವಿನ ಸಂಘರ್ಷವನ್ನು ತೆರೆಯ ಮೇಲೆ ತರಲಿದೆ ಎಂಬುದು ಟೀಸರ್ನಲ್ಲಿ ಕಾಣಿಸಿದೆ.
ಈ ಮೊದಲು ಬಿಡುಗಡೆಯಾದ ಪೋಸ್ಟರ್‌ನಲ್ಲಿ ಸಂಜಯ್ ದತ್ ಅತ್ಯಂತ ಗಂಭೀರವಾದ ಮುಖಭಾವದಲ್ಲಿ ಕಾಣಿಸಿಕೊಂಡಿದ್ದಾರೆ. ಬೃಹತ್ ಪ್ರಶ್ನಾರ್ಥಕ ಚಿಹ್ನೆಯ ಒಳಗೆ ಅವರ ಮುಖವನ್ನು ಚಿತ್ರಿಸಲಾಗಿದ್ದು, ಕಪ್ಪು ಮತ್ತು ಬೆಂಕಿಯಂತಹ ಕೆಂಪು ಬಣ್ಣದ ವಿನ್ಯಾಸವು ಚಿತ್ರದ ತೀವ್ರತೆಯನ್ನು ಸಾರುತ್ತಿದೆ. ‘ಭಾರತ ಎಂದಿಗೂ ಕೇಳುವುದನ್ನು ನಿಲ್ಲಿಸದ ಪ್ರಶ್ನೆ’ ಎಂಬ ಟ್ಯಾಗ್‌ಲೈನ್ ಪೋಸ್ಟರ್‌ನಲ್ಲಿ ಗಮನ ಸೆಳೆದಿದೆ.
‘ಆಖ್ರಿ ಸವಾಲ್’ ಟೀಸರ್:
ಸಂಜಯ್ ದತ್ ಜೊತೆಗೆ ಅಮಿತ್ ಸಾಧ್, ಸಮೀರಾ ರೆಡ್ಡಿ, ನಮಾಶಿ ಚಕ್ರವರ್ತಿ, ನೀತು ಚಂದ್ರ ಮತ್ತು ತ್ರಿದಾ ಚೌಧರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಜಯ್ ದತ್ ಮತ್ತು ನಿಖಿಲ್ ನಂದಾ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾವು ಮೇ 8ರಂದು ತೆರೆಕಾಣಲಿದೆ. ಆರ್ಎಸ್ಎಸ್ ಬ್ಯಾನ್ ಆಗಿದ್ದು, ಬಾಬ್ರಿ ಮಸೀದಿ ಧ್ವಂಸ ಆಗಿದ್ದು ಸೇರಿದಂತೆ ಹಲವು ವಿವಾದಿತ ವಿಷಯಗಳ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗುವುದು.
ಸದ್ಯ ಸಂಜಯ್ ದತ್ ಅವರು ‘ಧುರಂಧರ್: ದಿ ರಿವೇಂಜ್’ ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇದರಲ್ಲಿ ಅವರು ಪಾಕಿಸ್ತಾನಿ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ದಾಖಲೆ ಬರೆಯುತ್ತಿದೆ. ಇದಲ್ಲದೇ, ‘ರಾಜಾ ಶಿವಾಜಿ’ ಮತ್ತು ‘ಕೆಡಿ’ ಸಿನಿಮಾಗಳಲ್ಲೂ ಸಂಜಯ್ ದತ್ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಬೆಂಗಳೂರು, ಏಪ್ರಿಲ್ 02: ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ಮಂತ್ರಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ಗೆ (Mantri Developers and Builders)ಸೇರಿದ 8 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದಾರೆ. ದೆಹಲಿಯಿಂದ ಆಗಮಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿವಿಧ ಸ್ಥಳಗಳಲ್ಲಿ ಬೆಳಗ್ಗೆಯಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದಾಳಿಗೆ ಕಾರಣವೇನು?
ಅಕ್ರಮ ಹಣ ವರ್ಗಾವಣೆ ಮತ್ತು ದೆಹಲಿಯಲ್ಲಿ ಫ್ಲ್ಯಾಟ್ ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಫ್ಲ್ಯಾಟ್ ನೀಡದೆ ವಂಚಿಸಿರುವ ಆರೋಪ ಕೇಳಿಬಂದಿದೆ. ಮಂತ್ರಿ ಡೆವಲಪರ್ಸ್ ಬಹುತೇಕ ನಗದು ವರ್ಗಾವಣೆ ಮಾಡಿಸಿಕೊಂಡಿದೆ. ಹೀಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.
ದಕ್ಷಿಣ ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಬಿಲ್ಡರ್ ಸಂಸ್ಥೆ ಮಂತ್ರಿ ಡೆವಲಪರ್ಸ್ ಮೇಲೆ ಇದೀಗ ಮತ್ತೆ ಇ.ಡಿ ದಾಳಿ ಮಾಡಿದೆ. ದೆಹಲಿಯಿಂದ ಆಗಮಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 8 ಕಡೆಗಳಲ್ಲಿ ಶೋಧ ನಡೆಸಿದ್ದಾರೆ. ಮಂತ್ರಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಮೇಲೆ ಇ.ಡಿ ದಾಳಿ ಮಾಡುತ್ತಿರುವುದು ಇದೇ ಮೊದಲೇನಲ್ಲ ಈ ಹಿಂದೆ 2022 ಮತ್ತು 23ರಲ್ಲಿ ಸೇರಿದಂತೆ ಇತ್ತೀಚೆಗೆ ಕೂಡ ಸಂಸ್ಥೆ ಮೇಲೆ ಇ.ಡಿ ಕ್ರಮಕೈಗೊಂಡಿತ್ತು.
300 ಕೋಟಿ ರೂ ಆಸ್ತಿ ಜಪ್ತಿ
ಮಂತ್ರಿ ಡೆವಲಪರ್ಸ್ 1999ರಲ್ಲಿ ಸ್ಥಾಪನೆ ಆಗಿದ್ದು, ಬೆಂಗಳೂರು, ಚೆನೈ, ಹೈದರಾಬಾದ್ ಮತ್ತು ಪುಣೆಯಲ್ಲಿ ಸಂಸ್ಥೆ ತನ್ನ ಶಾಖೆಗಳನ್ನು ಹೊಂದಿದೆ. ಈ ಹಿಂದೆ ಅಂದರೆ 2023ರಲ್ಲಿ ಪ್ರಕರಣ ಸಂಬಂಧ ಮಂತ್ರಿ ಡೆವಲಪರ್ಸ್ನ ಸುಮಾರು 300 ಕೋಟಿ ರೂ ಆಸ್ತಿಯನ್ನ ಜಪ್ತಿ ಮಾಡಿದ್ದ ಇ.ಡಿ, ಗ್ರಾಹಕರಿಗೆ ಅಪಾರ್ಟ್ಮೆಂಟ್ಗೆಂದು ಹಣ ಪಡೆದು ವಂಚನೆ ಆರೋಪ ಎದುರಿಸುತ್ತಿದೆ.
ಈ ಹಿನ್ನಲೆ ಗ್ರಾಹಕರ ಹಣವನ್ನು ಹೊರದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದ ಆರೋಪವಿದೆ. ಇದೇ ಆರೋಪ ಹಿನ್ನಲೆ 2022ರಲ್ಲಿ ದಾಳಿ ಮಾಡಿದ್ದ ಇ.ಡಿ, ಇದೇ ಪ್ರಕರಣ ಸಂಬಂಧ 2023ರಲ್ಲಿ ಮಂತ್ರಿ ಡೆವಲಪರ್ಸ್ನ ಸುಮಾರು 300 ಕೋಟಿ ರೂ ಸ್ಥಿರಾಸ್ತಿ ಜಪ್ತಿ ಮಾಡಿತ್ತು. ಈಗ ಮತ್ತೆ ಅಕ್ರಮ ಹಣ ವರ್ಗಾವಣೆ ಆರೋಪ ಹಿನ್ನಲೆ ಇಡಿ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ.
ಬೆಂಗಳೂರು, (ಏಪ್ರಿಲ್ 02): ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ (Lokayukta AdGP Chandrashekhar) ಅವರಿಗೆ ಮತ್ತು ಅವರ ಕುಟುಂಬಕ್ಕೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ (hd kumaraswamy) ಬೆದರಿಕೆ ಹಾಕಿರುವ ಪ್ರಕರಣ ರಾಜಿ ಸಂಧಾನ ಮಾತುಕತೆ ಹಂತಕ್ಕೆ ಬಂದಿದೆ. ಹೌದು.. ಹೈಕೋರ್ಟ್ ಸಲಹೆಯಂತೆ ಆರೋಪಿ ಎಚ್.ಡಿ.ಕುಮಾರಸ್ವಾಮಿ ಹಾಗೂ ದೂರುದಾರ ಚಂದ್ರಶೇಖರ್ ರಾಜಿ ಸಂಧಾನದ ಮಾತುಕತೆಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೈಕೋರ್ಟ್ (Karnataka High Court).ರಾಜಿ ಸಂಧಾನಕ್ಕೆ ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು ಎಂದು ಹೇಳಿದ್ದು, ಹಾಜರಾಗಬೇಕಾದ ದಿನಾಂಕ, ಸ್ಥಳವನ್ನು ತಿಳಿಸಲಾಗುವುದು ಎಂದು ಇಬ್ಬರು ಕಡೆ ವಕೀಲರಿಗೆ ಹೇಳಿ ವಿಚಾರಣೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿದೆ.
ಸುದ್ದಿಗೋಷ್ಠಿಯಲ್ಲಿ ಸಾಲು ಸಾಲು ಆರೋಪ ಮಾಡಿರುವ ಸಂಬಂಧ ಎಂ ಚಂದ್ರಶೇಖರ್ ಅವರು ಕುಮಾರಸ್ವಾಮಿ ವಿರುದ್ಧ ಬೆದರಿಕೆ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣ ರದ್ದುಕೋರಿ ಕುಮಾರಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು ಹೈಕೋರ್ಟ್ ಸಹ ಈ ಅರ್ಜಿಯನ್ನು ಹಲವು ಬಾರಿ ವಿಚಾರಣೆ ನಡೆಸಿದೆ. ಕೊನೆಗೆ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಿ ಎಂದು ಕುಮಾರಸ್ವಾಮಿ ಹಾಗೂ ಚಂದ್ರಶೇಖರ್ ಪರ ವಕೀಲರಿಗೆ ಸಲಹೆ ನೀಡಿತ್ತು. ಅದರಂತೆ ಇದೀಗ ರಾಜಿ ಸಂಧಾನ ಮಾತುಕತೆಗೆ ಇಬ್ಬರು ಕಡೆ ವಕೀಲರು ಸಮ್ಮಿತಿಸಿದ್ದಾರೆ. ಇದರಿಂದ ಕೋರ್ಟ್, ರಾಜಿ ಸಂಧಾನಕ್ಕೆ ಸೂಕ್ತ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು. ಹಾಜರಾಗಬೇಕಾದ ದಿನಾಂಕ, ಸ್ಥಳವನ್ನು ತಿಳಿಸಲಾಗುವುದು ಎಂದು ಎರಡೂ ಕಡೆ ವಕೀಲರಿಗೆ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠ ಸೂಚಿಸಿ ವಿಚಾರಣೆ ಏಪ್ರಿಲ್ 30ಕ್ಕೆ ಮುಂದೂಡಿದೆ.
ನಿಯಮ ಉಲ್ಲಂಘಿಸಿ ಸಾಯಿ ಮಿನರಲ್ಸ್ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪದ ಮೇಲೆ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಚಂದ್ರಶೇಖರ್ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದರಿಂದ ಕುಮಾರಸ್ವಾಮಿ, ನಿಖಿಲ್ ಮತ್ತು ಶಾಸಕ ಸುರೇಶ್ ಬಾಬು ಮಾಧ್ಯಮಗಳಲ್ಲಿ ಚಂದ್ರಶೇಖರ್ ಅವರ ವಿರುದ್ಧ ಕೆಲವೊಂದು ಆರೋಪ ಮಾಡಿದ್ದರು.
ಈ ಸಂಬಂಧ ಎಡಿಜಿಪಿ ಚಂದ್ರಶೇಖರ್ ಅವರು ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಸುರೇಶ್ ಬಾಬು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸರು ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 223 ಮತ್ತು 224 ಅಡಿ ಎಫ್‌ಐಆರ್ ದಾಖಲಿಸಿದ್ದರು. ಬಳಿಕ ಕುಮಾರಸ್ವಾಮಿ, ಈ ಪ್ರಕರಣವನ್ನು ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಟೆಹ್ರಾನ್, ಏಪ್ರಿಲ್ 2: ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಹೇಳಿಕೆಗಳಿಗೆ ಇರಾನ್ ಮತ್ತೊಮ್ಮೆ ತಿರುಗೇಟು ನೀಡಿದೆ. ಇರಾನ್‌ನ ನಾಯಕತ್ವ ಮತ್ತು ಮಿಲಿಟರಿಯನ್ನು ಸಂಪೂರ್ಣವಾಗಿ ತೊಡೆದುಹಾಕಲಾಗಿದೆ ಎಂದು ಅಮೆರಿಕ ಹೇಳಿತ್ತು. ಆದರೆ, ಅದಕ್ಕೆ ಪ್ರತ್ಯುತ್ತರ ನೀಡಿರುವ ಟೆಹ್ರಾನ್ ಅಮೆರಿಕ ಶಾಶ್ವತ ಅವಮಾನವನ್ನು ಎದುರಿಸುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ಶಪಥ ಮಾಡಿದೆ.
ಇರಾನ್‌ನ ನೌಕಾಪಡೆ ಮತ್ತು ವಾಯುಪಡೆಯು ತೀವ್ರವಾಗಿ ದುರ್ಬಲಗೊಂಡಿದೆ. ಅದರ ನಾಯಕತ್ವ ರಚನೆಯು ದೊಡ್ಡ ನಷ್ಟವನ್ನು ಅನುಭವಿಸಿದೆ ಎಂದು ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಈ ಪ್ರತಿಕ್ರಿಯೆ ನೀಡಿದೆ. ಇರಾನ್‌ನ ಮಿಲಿಟರಿ ಮೂಲಸೌಕರ್ಯ ಮತ್ತು ಸಾಮರ್ಥ್ಯಗಳನ್ನು ಹಾನಿಗೊಳಿಸುವ ಬಗ್ಗೆ ಅಮೆರಿಕದ ಹೇಳಿಕೆಗಳನ್ನು ಇರಾನ್ ತಿರಸ್ಕರಿಸಿದೆ.
ಡೊನಾಲ್ಡ್ ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದ ನಂತರ ಇರಾನ್ ಅವರ ಈ ಪ್ರತಿಕ್ರಿಯೆ ಬಂದಿದೆ. ಇರಾನ್‌ನ ನೌಕಾಪಡೆ ಮತ್ತು ವಾಯುಪಡೆ ದುರ್ಬಲಗೊಂಡಿದೆ ಮತ್ತು ಅದರ ನಾಯಕತ್ವ ರಚನೆಯು ಪ್ರಮುಖ ಹಿನ್ನಡೆಗಳನ್ನು ಅನುಭವಿಸಿದೆ ಎಂದು ಟ್ರಂಪ್ ಹೇಳಿದ್ದರು.
ಟ್ರಂಪ್ ಅವರ ಹೇಳಿಕೆಗಳನ್ನು ತಿರಸ್ಕರಿಸಿದ ಇರಾನ್, ಇಸ್ಲಾಮಿಕ್ ಗಣರಾಜ್ಯದ ವಿಶಾಲವಾದ ಕಾರ್ಯತಂತ್ರದ ಸಾಮರ್ಥ್ಯಗಳ ಬಗ್ಗೆ ವಾಷಿಂಗ್ಟನ್‌ಗೆ ತಿಳುವಳಿಕೆ ಇಲ್ಲ. ನಮ್ಮ ಮಿಲಿಟರಿ ಶಕ್ತಿ ಮತ್ತು ಉಪಕರಣಗಳ ಕುರಿತು ನಿಮ್ಮ ಗುಪ್ತಚರದ ಮಾಹಿತಿ ಸರಿಯಾಗಿಲ್ಲ. ನಮ್ಮ ವಿಶಾಲವಾದ ಕಾರ್ಯತಂತ್ರದ ಸಾಮರ್ಥ್ಯಗಳ ಬಗ್ಗೆ ನಿಮಗೆ ಏನೂ ತಿಳಿದಿಲ್ಲ. ನೀವು ನಮ್ಮ ಕಾರ್ಯತಂತ್ರದ ಕ್ಷಿಪಣಿ ಉತ್ಪಾದನಾ ತಾಣಗಳು, ದೀರ್ಘ-ಶ್ರೇಣಿಯ ದಾಳಿ ಮತ್ತು ನಿಖರತೆಯ ಡ್ರೋನ್‌ಗಳು, ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಯುದ್ಧ ಅಥವಾ ವಿಶೇಷ ಉಪಕರಣಗಳನ್ನು ನಾಶಪಡಿಸಿದ್ದೀರಿ ಎಂದು ಭಾವಿಸಬೇಡಿ” ಎಂದು ಇರಾನ್ ಹೇಳಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್‌ನ ಅನುಭವಿ ನಟ ಸಂಜಯ್ ದತ್ (Sanjay Dutt) ಅವರಿಗೆ ಈಗ ಯಶಸ್ಸಿನ ಸುಗ್ಗಿಯ ಕಾಲ. ಇತ್ತೀಚೆಗಷ್ಟೇ ತೆರೆಕಂಡ ‘ಧುರಂಧರ್’ ಮತ್ತು ‘ಧುರಂಧರ್ 2’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಸಿ ಅಭೂತಪೂರ್ವ ಯಶಸ್ಸು ಸಾಧಿಸಿವೆ. ಈ ಗೆಲುವಿನ ಬೆನ್ನಲ್ಲೇ ಸಂಜಯ್ ದತ್ ಈಗ ‘ರಾಜ ಶಿವಾಜಿ’ (Raja Shivaji) ಐತಿಹಾಸಿಕ ಚಿತ್ರದ ಮೂಲಕ ಮತ್ತೊಂದು ಬ್ಲಾಕ್‌ಬಸ್ಟರ್ ನೀಡಲು ಸಜ್ಜಾಗಿದ್ದಾರೆ. ಅಲ್ಲದೇ, ‘ಆಖ್ರಿ ಸವಾಲ್’ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ.
ಮರಾಠ ಸಾಮ್ರಾಜ್ಯದ ಕಥೆಯಿರುವ ‘ರಾಜ ಶಿವಾಜಿ’ ಸಿನಿಮಾದಲ್ಲಿ ಸಂಜಯ್ ದತ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾಗೆ ರಿತೇಶ್ ದೇಶ್‌ಮುಖ್ ಅವರು ಹೀರೋ. ಸಂಜಯ್ ದತ್ ಅವರು ಅಫ್ಜಲ್ ಖಾನ್ನ ಪಾತ್ರವನ್ನು ಮಾಡಿದ್ದಾರೆ. ಹಾಗಾಗಿ ನಿರೀಕ್ಷೆ ಜಾಸ್ತಿ ಇದೆ.
‘ರಾಜ ಶಿವಾಜಿ’ ಟೀಸರ್ ಬಿಡುಗಡೆ ಆದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಸಂಜಯ್ ದತ್ ಸಲುವಾಗಿಯೇ ಈ ಸಿನಿಮಾ ನೋಡಬೇಕು ಎಂಬ ಅಪ್ಪಟ ಫ್ಯಾನ್ಸ್ ಕೂಡ ಇದ್ದಾರೆ. ಮೇ 1ರಂದು ಭರ್ಜರಿಯಾಗಿ ಸಿನಿಮಾ ತೆರೆಕಾಣಲಿದೆ.
‘ರಾಜ ಶಿವಾಜಿ’ ಟೀಸರ್:
ಇದರ ಜೊತೆಗೆ ಅವರು ‘ಆಖ್ರಿ ಸವಾಲ್’ ಚಿತ್ರದಲ್ಲೂ ಸಂಜತ್ ದತ್ ನಟಿಸಿದ್ದಾರೆ. ಇದರ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಈಗ ಟೀಸರ್ ಕೂಡ ಗಮನ ಸೆಳೆಯುತ್ತಿದೆ. ಆರ್‌ಎಸ್‌ಎಸ್‌ನ 100 ವರ್ಷಗಳ ಪಯಣದ ಕಥೆ ಹೊಂದಿರುವ ಈ ಚಿತ್ರವು ಮೇ 8ರಂದು ಬಿಡುಗಡೆಯಾಗಲಿದೆ. ಸತತ ಹಿಟ್‌ಗಳ ಮೂಲಕ ಸಂಜಯ್ ದತ್ ಅವರು 2026ರ ಸಾಲಿನಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ನಟನಾಗಿ ಹೊರಹೊಮ್ಮುತ್ತಿದ್ದಾರೆ.
ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಸಂಜಯ್ ದತ್ ಅವರಿಗೆ ಸಖತ್ ಬೇಡಿಕೆ ಇದೆ. ಕನ್ನಡದ ‘ಕೆಡಿ ದಿ ಡೆವಿಲ್’ ಸಿನಿಮಾದಲ್ಲಿ ಕೂಡ ಸಂಜಯ್ ದತ್ ಅವರು ನಟಿಸಿದ್ದಾರೆ. ಹಾಡುಗಳು ಮೂಲಕ ಸದ್ದು ಮಾಡಿರುವ ಈ ಸಿನಿಮಾ ಕೂಡ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಚಿತ್ರವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 3 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಕಂಪ್ಯೂಟೇಷನಲ್ ಥಿಂಕಿಂಗ್ ಅನ್ನು ಒಳಗೊಂಡ ಹೊಸ ಪಠ್ಯಕ್ರಮವನ್ನು ಪರಿಚಯಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಉಪಕ್ರಮವನ್ನು ಅನಾವರಣಗೊಳಿಸಿದ್ದಾರೆ. ಶಾಲಾ ಪರಿಸರ ವ್ಯವಸ್ಥೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಶಿಕ್ಷಣವನ್ನು ಔಪಚಾರಿಕವಾಗಿ ಪರಿಚಯಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ.
ಈ ಹೊಸ ಪಠ್ಯಕ್ರಮವು ವಿದ್ಯಾರ್ಥಿಗಳಿಗೆ ಎಐ ಮತ್ತು ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ಜ್ಞಾನವನ್ನು ನೀಡುವ ಗುರಿ ಹೊಂದಿದೆ. ಇದು ಸುಸಜ್ಜಿತ ಎಐ ಮಾಡ್ಯೂಲ್‌ಗಳು, ಶಿಕ್ಷಕರಿಗೆ ಸಮಗ್ರ ಕೈಪಿಡಿಗಳು ಮತ್ತು ವಿದ್ಯಾರ್ಥಿ ಮೌಲ್ಯಮಾಪನ ಚೌಕಟ್ಟುಗಳನ್ನು ಒಳಗೊಂಡಿದೆ. ನ್ಯಾಷನಲ್ ಎಜುಕೇಷನ್ ಪಾಲಿಸಿ 2020ರ (NEP 2020) ಮಾರ್ಗಸೂಚಿ ಪ್ರಕಾರ, 6ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ತಾರ್ಕಿಕ ಚಿಂತನೆ ಮತ್ತು ಕೋಡಿಂಗ್ ಕೌಶಲ್ಯಗಳನ್ನು ಕಲಿಸಲು ಒತ್ತು ನೀಡಲಾಗುತ್ತಿದೆ.